nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ: ಸಾರ್ವಜನಿಕರ ಗೋಳು, ಜಿಲ್ಲಾಡಳಿತ, ಪಾಲಿಕೆಯ ಜಾಣ ಕುರುಡು!

    October 24, 2026

    ಕೆಪಿಎಸ್‌ ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಸಮ್ಮತಿ

    October 24, 2026

    ಸ್ಟಿಂಗ್ ಆಪರೇಷನ್ — ಕೆಪಿಎಸ್‌ಸಿ ಹಗರಣ | ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

    October 24, 2026
    Facebook Twitter Instagram
    ಟ್ರೆಂಡಿಂಗ್
    • ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ: ಸಾರ್ವಜನಿಕರ ಗೋಳು, ಜಿಲ್ಲಾಡಳಿತ, ಪಾಲಿಕೆಯ ಜಾಣ ಕುರುಡು!
    • ಕೆಪಿಎಸ್‌ ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಸಮ್ಮತಿ
    • ಸ್ಟಿಂಗ್ ಆಪರೇಷನ್ — ಕೆಪಿಎಸ್‌ಸಿ ಹಗರಣ | ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ
    • ಶ್ರವಣೂರಿನಲ್ಲಿ 2ನೇ ವರ್ಷದ ಉಚಿತ ಕಣ್ಣಿನ ತಪಾಸಣೆ — ಶಸ್ತ್ರಚಿಕಿತ್ಸಾ ಶಿಬಿರ
    • ಬಳತ (ಬಿ) ಗ್ರಾಮ ಪಂಚಾಯತ್ನಲ್ಲಿ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ: ‘ವಿಬಿ–ಜಿ ರಾಮ್ ಜಿ’ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕರೆ
    • ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ
    • ನಂದಿಧ್ವಜ ಕಂಬ ಮುರಿತದಿಂದ ಮಾವುತನ ಪತ್ನಿ ಸಾವು ತನಕ! ಈ ಬಾರಿಯ ಮೈಸೂರು ದಸರಾದಲ್ಲಿ ನಡೆದಿದ್ದೇನು?
    • ಪ್ರಧಾನಿ ಮೋದಿ ಯಾವ ಮೊಬೈಲ್ ಬಳಸುತ್ತಾರೆ? ರಹಸ್ಯ ಫೋನ್‌ ಹಿಂದಿನ ಸತ್ಯವೇನು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಈ ಬಾರಿ ಒಂದು ವಾರಕ್ಕಿಂತ ಮುನ್ನವೇ ಕಬ್ಬು ಅರೆಯುವಿಕೆ ಶುರು: ಅ. 25ರಿಂದಲೇ ಆರಂಭ- ಸಚಿವ ಶಿವಾನಂದ ಪಾಟೀಲ್‌ 
    ರಾಜ್ಯ ಸುದ್ದಿ October 18, 2023

    ಈ ಬಾರಿ ಒಂದು ವಾರಕ್ಕಿಂತ ಮುನ್ನವೇ ಕಬ್ಬು ಅರೆಯುವಿಕೆ ಶುರು: ಅ. 25ರಿಂದಲೇ ಆರಂಭ- ಸಚಿವ ಶಿವಾನಂದ ಪಾಟೀಲ್‌ 

    By adminOctober 18, 2023No Comments3 Mins Read
    shivananda pateel
    • ಬರ ಹಿನ್ನೆಲೆ; ಕಬ್ಬು ಇಳುವರಿ ಕಡಿಮೆ ಸಾಧ್ಯತೆ
    • ಸಕ್ಕರೆ ಉತ್ಪಾದನೆ ಕಡಿಮೆಯಾಗುವ ಸಂಭವ
    • ರೈತರಿಗೆ ಒಂದು ರೂಪಾಯಿಯೂ ಬಾಕಿ ಇಲ್ಲ
    • ಸದ್ಯಕ್ಕೆ ಕಾರ್ಖಾನೆಗಳ ಅಂತರ ನಿಗದಿ ಇಲ್ಲ
    • ವಿದ್ಯುನ್ಮಾನ ಮಾಪನ ಯಂತ್ರ ಕಡ್ಡಾಯ

     

    ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಒಂದು ವಾರ ಮುಂಚಿತವಾಗಿ ಕಬ್ಬು ಅರೆಯುವಿಕೆ ಶುರುವಾಗಲಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ತಿಳಿಸಿದರು.

    ನವೆಂಬರ್‌ ಒಂದರಿಂದ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಅರೆಯುವಿಕೆ ಆರಂಭವಾಗಬೇಕಿತ್ತು. ಆದರೆ, ಬರದ ಹಿನ್ನೆಲೆಯಲ್ಲಿ ಒಂದು ವಾರ ಅಂದರೆ ಇದೇ ತಿಂಗಳ 25ರಿಂದ ಕಬ್ಬು ಅರೆಯುವಿಕೆ ಆರಂಭವಾಗಲಿದೆ ಎಂದು ಹೇಳಿದರು.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಬರಗಾಲ ಎದುರಾಗಿದೆ. ರೈತರು ಕಂಗಲಾಗಿದ್ದಾರೆ. ಬಹಳಷ್ಟು ಕಡೆ ಕಬ್ಬು ಒಣಗುತ್ತಿದೆ. ಹಂಗಾಮಿಗೆ ಬೇಗನೆ ಕಬ್ಬು ಅರೆಯುವಿಕೆ ಶುರು ಮಾಡುವಂತೆ ಬೆಳಗಾರರು ಮನವಿ ಮಾಡಿದ್ದಾರೆ. ಹೀಗಾಗಿ ಒಂದು ವಾರಕ್ಕೆ ಮುನ್ನ ಕಬ್ಬು ಅರೆಯುವಿಕೆಯನ್ನು ಆರಂಭಿಸುವಂತೆ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಲಾಗಿದೆ ಎಂದರು.

    ಮುಖ್ಯಮಂತ್ರಿಗಳ ಆದೇಶದನ್ವಯ ಜಾರಿ:

    ಪ್ರತಿ ಬಾರಿ ತಮಗೆ ಇಷ್ಟ ಬಂದಂತೆ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆಯನ್ನು ಶುರು ಮಾಡುತ್ತಿದ್ದವು. ಈ ಬಾರಿ ನವೆಂಬರ್ 1 ರಿಂದ ಏಕಕಾಲದಲ್ಲಿ ಕಬ್ಬು ಅರೆಯುವಿಕೆಯನ್ನು ಆರಂಭಿಸುವಂತೆ ನಿರ್ದೇಶಿಸಲಾಗಿತ್ತು. ಸದ್ಯ ಎಲ್ಲೆಡೆ ಬರ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ 25ರ ನಂತರ ಶುರು ಮಾಡುವಂತೆ ಸೂಚಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯವರು ಆದೇಶ ನೀಡಿದ್ದು, ಅದರನ್ವಯ ನವೆಂಬರ್‌ 1ರಿಂದ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲೂ ಏಕಕಾಲಕ್ಕೆ ಕಬ್ಬು ಅರೆಯುವುದನ್ನು ಶುರುವಾಗಲಿದೆ ಎಂದು ಹೇಳಿದರು.

    ಬರ ಹಿನ್ನೆಲೆ; ಇಳುವರಿ ಕಡಿಮೆ ಸಾಧ್ಯತೆ

    ಕಬ್ಬು ಎಂದಿನಂತೆ ಸುಮಾರು 11ರಿಂದ 12 ತಿಂಗಳಿಗೆ ಕಟಾವಿಗೆ ಬರುತ್ತದೆ. ಮಳೆ ಚೆನ್ನಾಗಿ ಆಗಿ, ನವೆಂಬರ್ ನಲ್ಲಿ ಕಬ್ಬು ಕಟಾವು ಮಾಡಿದ್ದರೆ ಇಳುವರಿಯೂ ಜಾಸ್ತಿ ಇರುತ್ತಿತ್ತು. ಆದರೆ, ಮಳೆ ಕೊರತೆಯಿಂದ ಅಕ್ಟೋಬರ್ ನಲ್ಲೇ ಕಬ್ಬು ಕಟಾವು ಮಾಡುವುದರಿಂದ ಸ್ವಲ್ಪ ಇಳುವರಿ ಕಡಿಮೆಯಾಗಲಿದೆ ಎಂದರು.

    ರಾಜ್ಯದಲ್ಲಿ ಈ ಬಾರಿ 3.50 ರಿಂದ 4.50 ಲಕ್ಷ ಹೆಕ್ಟೇರ್ ನಲ್ಲಿ 11-12 ತಿಂಗಳು ತುಂಬಿದ ಕಬ್ಬು ಇದೆ. ಶೇ 9.5ರಷ್ಟು ಇಳುವರಿ ಇರುತ್ತಿತ್ತು. ಈ ಬಾರಿ ಸುಮಾರು 1 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಕಟಾವಿಗೆ ಬಂದಿಲ್ಲ.

    ಕಳೆದ ಬಾರಿ 74 ಕಾರ್ಖಾನೆಗಳಲ್ಲಿ ಕಬ್ಬು ಅರೆಯುವಿಕೆಯನ್ನು ಮಾಡಲಾಗಿತ್ತು. ಈ ಬಾರಿ 75 ರಿಂದ 78 ಕಾರ್ಖಾನೆಯಲ್ಲಿ ಕಬ್ಬನ್ನು ಅರೆಯಬಹುದು. ಇದರಿಂದ 1800 ಮೆಗಾವಾಟ್ ಕೋಜನ್ ಉತ್ಪಾದನೆಯಾಗಲಿದ್ದು, ಪರಿಣಾಮ ಸದ್ಯ ಇರುವ ಲೋಡ್ ಶೆಡ್ಡಿಂಗ್ ತಡೆಗೂ ಸಹಕಾರಿ ಆಗಲಿದೆ ಎಂದು ಹೇಳಿದರು.

    ಒಂದು ರೂಪಾಯಿಯೂ ಬಾಕಿ ಇಲ್ಲ

    ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಎಫ್ಆರ್ ಪಿಗಿಂತ ಜಾಸ್ತಿ ಹಣವನ್ನೇ ಕೊಡಿಸಲಾಗಿದೆ. ಈ ಮೊದಲು 19.74 ಸಾವಿರ ಕೋಟಿ ರೂಪಾಯಿ ಇದ್ದು, ಈಗ 20 ಸಾವಿರ ಕೋಟಿ ರೂಪಾಯಿ  ರೈತರಿಗೆ ಕೊಡಿಸಲಾಗಿದೆ. ಬುಳವಾಡ ಬಸವೇಶ್ವರ ಸಕ್ಕರೆ ಕಾರ್ಖಾನೆಯಿಂದ ರೂ. 28 ಕೋಟಿ ಬಾಕಿ ಇತ್ತು. ಕಾರ್ಖಾನೆಯ ಉಪಕರಣ ಜಪ್ತಿ ಮಾಡಿ ಹಣವನ್ನು ರೈತರಿಗೆ ಕೊಡಿಸಲಾಗಿದೆ. ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಒಂದು ರೂಪಾಯಿ ಬಾಕಿ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

    ಸಕ್ಕರೆ ಉತ್ಪಾದನೆ ಕಡಿಮೆಯಾಗುವ ಸಂಭವ

    ಎಥೆನಾಲ್ ಲಾಭಾಂಶವನ್ನು ರೈತರಿಗೆ ಕೊಡುವ ಬಗ್ಗೆ ಸಕ್ಕರೆ ನಿಯಂತ್ರಣ ಮಂಡಳಿ ಮುಂದೆ ತಂದು ನಿರ್ಧಾರ ಮಾಡಲಾಗುವುದು. ಕಳೆದ ಬಾರಿ ಎಥೆನಾಲ್ ಗೆ 35 ಸಾವಿರ ಕೋಟಿ ಲೀಟರ್ ಗೆ ಹೋಗಿತ್ತು. ಈ ಬಾರಿ ಸಕ್ಕರೆ ಉತ್ಪಾದನೆಯೂ ಕಡಿಮೆ ಆಗಬಹುದು, ಮಾರುಕಟ್ಟೆಯಲ್ಲಿ ಬೇಡಿಕೆಯಷ್ಟು ಸಕ್ಕರೆ ಬಾರದೇ ಇರಬಹುದು. ರಾಜ್ಯದಲ್ಲಿ ಎಥೆನಾಲ್ ಲಾಭವನ್ನು ಈ ವರ್ಷವೇ ರೈತರಿಗೆ ಕೊಡಿಸಲಾಗುವುದು ಎಂದು ಹೇಳಿದರು.

    ಕಾರ್ಖಾನೆಗಳ ಅಂತರ ನಿಗದಿ

    ಹಿಂದಿನ ಸರ್ಕಾರ ಸಕ್ಕರೆ ಕಾರ್ಖಾನೆಗಳ ನಡುವೆ 15 ಕಿ.ಮೀ ಅಂತರವನ್ನು ಮಾಡಿದ್ದರು. ನಾವೀಗ  25 ಕಿ.ಮೀ ಅಂತರ ಇರಬೇಕೆಂದು ಹೇಳುತ್ತವೆ ಅಷ್ಟೇ. ನೆರೆಯ ಮಹಾರಾಷ್ಟ್ರದಲ್ಲಿ ಈಗ 25 ಕಿ.ಮೀ ಅಂತರ ಇದೆ.  ಕಬ್ಬು ಬೆಳೆ ತುಂಬಾ ಕಡಿಮೆ ಇದೆ. ಮುಖ್ಯವಾಗಿ 125 ದಿನ ಕಬ್ಬು ಅರೆಯುವಿಕೆ ನಡೆಸಿದರೆ ಮಾತ್ರ ಕಾರ್ಖಾನೆಗೆ ಪ್ರಯೋಜನ. ಇದನ್ನು 90 ದಿನಕ್ಕೆ ಸೀಮಿತಗೊಳಿಸಬಹುದು. ಹಾಗಾಗಿ ಅಂತರ ನಿಗದಿಪಡಿಸುವ ವಿಚಾರ ಕೈಬಿಡಲಾಗಿದೆ ಎಂದು ಸಚಿವರು ಹೇಳಿದರು.

    ವಿದ್ಯುನ್ಮಾನ ಮಾಪನ ಯಂತ್ರ ಕಡ್ಡಾಯ

    ಕಬ್ಬು ಬೆಳೆಗಾರರಿಗೆ ತೂಕ, ಇನ್ನಿತರೆಯಲ್ಲಿ ಮೋಸ ಆಗುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ತಪಾಸಣೆಗೆ ಕಾರ್ಯಪಡೆ (ಸ್ಕ್ವಾಡ್ ) ರಚನೆ ಮಾಡಲಾಗುತ್ತಿದೆ. ಮಾಪನ ಇಲಾಖೆ, ನಮ್ಮ ಇಲಾಖೆ ಸೇರಿ ತಪಾಸಣೆ ನಡೆಸುತ್ತೇವೆ. ರೈತರು ಬರಹ ರೂಪದಲ್ಲಿ ದೂರು ಕೊಟ್ಟರೆ ಪರಿಶೀಲಿಸುತ್ತೇವೆ. ವಿದ್ಯುನ್ಮಾನ ಮಾಪನ ಯಂತ್ರ ಕಡ್ಡಾಯ ಮಾಡಲಾಗುವುದು ಎಂದರು.

    ಮುಂಚೆನೇ ಕ್ರಷಿಂಗ್ ಶುರು ಮಾಡಿದ ಶಾಸಕರೊಬ್ಬರ ಕಾರ್ಖಾನೆ ನಿಲ್ಲಿಸಿದೆ. ಕೆಆರ್‌ಪಿ ಶುಗರ್ಸ್ ಅವರು ಬೇರೆ ಏರಿಯಾದ ಕಬ್ಬು ನುರಿಸಿದ್ದರು. ಬಸವೇಶ್ವರ ಶುಗರ್ ಕಾರ್ಖಾನೆಗೆ ಗೋದಾಮು ಇರಲಿಲ್ಲ. ಕಬ್ಬು, ಸಕ್ಕರೆ ಎಲ್ಲಿಗೆ ಸಾಗಿಸುತ್ತಿದ್ದ ಅಂತ ಗೊತ್ತೇ ಇರಲಿಲ್ಲ. ಈಗ ಗೋದಾಮು ಕಟ್ಟಿಸಿದ್ದಾರೆ. 7 ವರ್ಷದಿಂದ ಕಾರ್ಖಾನೆ ನಡೆಸುತ್ತಿದ್ದರು. 3.50 ಸಾವಿರ ಟನ್ ಗೆ ಪರವಾನಗಿ ಇತ್ತು. 7 ಸಾವಿರ ಟನ್ ಕ್ರಷಿಂಗ್ ಮಾಡುತ್ತಿದ್ದರು. ಈ ಸಂಬಂಧ ನೋಟಿಸ್ ನೀಡಲಾಗಿದ್ದು ತನಿಖೆ ನಡೆದಿದೆ ಎಂದರು.

    ಸಕ್ಕರೆ ನಿರ್ವಹಣೆ, ನಿಯಂತ್ರಣಕ್ಕೆ ವಿಧೇಯಕವನ್ನು ಮಹಾರಾಷ್ಟ್ರ ಮಾದರಿಯಲ್ಲಿ ತರಲು ಚಿಂತನೆ ಇದೆ. ಅಲ್ಲಿ 198 ಕಾರ್ಖಾನೆ ಇದೆ. ಇಳುವರಿ, ಎಥೆನಾಲ್ ಎಲ್ಲವೂ ಜಾಸ್ತಿ ಇದೆ ಎಂದರು.

    ಮೈಶುಗರ್‌ ಕಾರ್ಖಾನೆ

    ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯ ಅವ್ಯವಹಾರ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಲೋಕಾಯುಕ್ತ ತನಿಖೆ ಆಗಿದೆ. ಅದರ ಆಧಾರದ ಮೇಲೆ ಮೇಲ್ಮನವಿ ಹೋಗಬೇಕು. 1 ಕೋಟಿ ರೂಪಾಯಿ ತುಂಬಬೇಕು. 2 ಲಕ್ಷ ಟನ್ ಕ್ರಷಿಂಗ್ ಆಗಿದೆ. ಶೇ. 7.50 ರಷ್ಟು ರಿಕವರಿ ಆಗಿದೆ ಎಂದು ಹೇಳಿದರು.

    ರಫ್ತಿಗೆ ಅವಕಾಶ ಕೊಟ್ಟರೆ ಒಳ್ಳೆಯದು

    ಸದ್ಯ ಸಕ್ಕರೆ ಮೇಲೆ ಶೇ 5ರಷ್ಟು ಜಿಎಸ್ಟಿ ಇದೆ. ಅದರಿಂದ ನಮಗೆ ಶೇ 2.5 ಸಿಗಲಿದೆ. ದೇಶದಲ್ಲಿಗ ರಫ್ತು ರದ್ದಾಗಿರುವುದರಿಂದ ಸಕ್ಕರೆ ದರ ಕಡಿಮೆ ಇದೆ. ರಫ್ತಿಗೆ ಅವಕಾಶ ಸಿಕ್ಕರೆ ರೈತರಿಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಸಚಿವರು ಹೇಳಿದರು.

    admin
    • Website

    Related Posts

    ಕೆಪಿಎಸ್‌ ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಸಮ್ಮತಿ

    October 24, 2026

    ಸ್ಟಿಂಗ್ ಆಪರೇಷನ್ — ಕೆಪಿಎಸ್‌ಸಿ ಹಗರಣ | ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

    October 24, 2026

    ನಂದಿಧ್ವಜ ಕಂಬ ಮುರಿತದಿಂದ ಮಾವುತನ ಪತ್ನಿ ಸಾವು ತನಕ! ಈ ಬಾರಿಯ ಮೈಸೂರು ದಸರಾದಲ್ಲಿ ನಡೆದಿದ್ದೇನು?

    October 24, 2026

    Comments are closed.

    Our Picks

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ

    October 24, 2026

    ಪ್ರಧಾನಿ ಮೋದಿ ಯಾವ ಮೊಬೈಲ್ ಬಳಸುತ್ತಾರೆ? ರಹಸ್ಯ ಫೋನ್‌ ಹಿಂದಿನ ಸತ್ಯವೇನು?

    October 24, 2026

    ವಾಟ್ಸಾಪ್ ಬಳಕೆದಾರರೇ ಎಚ್ಚರ! 2027ರಿಂದ ಹೊಸ ನಿಯಮ, ಫೋನ್‌ ನಲ್ಲಿ ಸಿಮ್ ಇಲ್ಲದಿದ್ದರೆ ಆ್ಯಪ್ ಬಳಕೆಗೆ ತೊಂದರೆ

    October 24, 2026

    ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ₹15,000 ಸಿಗುತ್ತಾ? ಕೇಂದ್ರದ ಉದ್ಯೋಗ ಯೋಜನೆಯ ಅರ್ಹತೆಗಳೇನು?

    October 21, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ: ಸಾರ್ವಜನಿಕರ ಗೋಳು, ಜಿಲ್ಲಾಡಳಿತ, ಪಾಲಿಕೆಯ ಜಾಣ ಕುರುಡು!

    October 24, 2026

     ನಟರಾಜು ಜಿ. ಎಲ್., ನಮ್ಮ ತುಮಕೂರು ಡಿಜಿಟಲ್ ಸುದ್ದಿ ಮಾಧ್ಯಮ ಹಬ್ಬಗಳು ಬರುತ್ತವೆ, ಸಂಭ್ರಮ-ಸಡಗರವನ್ನು ಹೊತ್ತು ತರುತ್ತವೆ. ಜನ ಪರಸ್ಪರ…

    ಕೆಪಿಎಸ್‌ ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಸಮ್ಮತಿ

    October 24, 2026

    ಸ್ಟಿಂಗ್ ಆಪರೇಷನ್ — ಕೆಪಿಎಸ್‌ಸಿ ಹಗರಣ | ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

    October 24, 2026

    ಶ್ರವಣೂರಿನಲ್ಲಿ 2ನೇ ವರ್ಷದ ಉಚಿತ ಕಣ್ಣಿನ ತಪಾಸಣೆ — ಶಸ್ತ್ರಚಿಕಿತ್ಸಾ ಶಿಬಿರ

    October 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.