Author: admin

ಗುಂಡ್ಲುಪೇಟೆ: ಪಾರ್ವತಮ್ಮ‌ ರಾಜ್ ಕುಮಾರ್ ಸೋದರಳಿಯ, ಎಸ್.ಎ.ಶ್ರೀನಿವಾಸ್ ಪುತ್ರ ಧೀರಜ್ ಕುಮಾರ್ ಅವರಿಗೆ ಅಪಘಾತವಾಗಿದ್ದು, ಪರಿಣಾಮವಾಗಿ ಅವರ ಕಾಲಿಗೆ ಗಂಭೀರವಾದ ಏಟು ತಗಲಿದೆ. ಗುಂಡ್ಲುಪೇಟೆ ತಾಲೂಕಿನ‌ ಚಿಕ್ಕಹುಂಡಿ ಗೇಟ್ ಬಳಿ ಶನಿವಾರ ಈ ಘಟನೆ ನಡೆದಿದೆ. ಊಟಿಗೆ ಸೋಲೋ‌ ಟ್ರಿಪ್ ತೆರಳಿದ್ದ ಧೀರಜ್ ಕುಮಾರ್ ಹಿಂತಿರುಗುವಾಗ ಟಿಪ್ಪರ್ ವೊಂದು ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ತುರುವೇಕೆರೆ: ತಾಲೂಕು ಕುರುಬ ಸಮಾಜದ ತಾಲೂಕು ಅಧ್ಯಕ್ಷ ಹಾಗೂ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸಿ.ಎಸ್.ಪುರ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ   ಕೆ ಹೊಸಹಳ್ಳಿ ನಾಗೇಶ್ ರವರು (49) ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ  ಹಾಗೂ ತಾಯಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು  ಸ್ವಗ್ರಾಮ ಕೆ.ಹೊಸಹಳ್ಳಿಯಲ್ಲಿ  ಸೋಮವಾರ ಮಧ್ಯಾಹ್ನ 12 ಗಂಟೆಗೆ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ತುಮಕೂರು: ತುಮಕೂರು ಜಿಲ್ಲೆ  ಪಾವಗಡ ತಾಲ್ಲೂಕಿನ ದೇವನಪಾಳ್ಯ ಗ್ರಾಮದಲ್ಲಿ ಅಡಿಕೆ ಸಸಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ. ನಾಗಣ್ಣ ಎಂಬುವರಿಗೆ ಸೇರಿದ ಅಡಿಕೆ ಸಸಿಗಳಿಗೆ ಬೆಂಕಿ ಹಚ್ಚಲಾಗಿದೆ. ಸುಮಾರು ಐವತ್ತು ಸಾವಿರ ಅಡಿಕೆ ಸಸಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಅಂದಾಜು ಎರಡು ಲಕ್ಷ ರೂಪಾಯಿನಷ್ಟು ನಷ್ಟವಾಗಿದೆ. ಕಳೆದ ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಹೊಸ ಪೀಳಿಗೆಯವರಿಗೆ ಸಾಧಕರ ಪರಿಚಯ ಮಾಡಲು ಕನ್ನಡ ಸಾಹಿತ್ಯ ಪರಿಷತ್‌ನಿಂದ ಕನ್ನಡದ ಹೆಸರು ಮತ್ತು ಸಹಿ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಡಾ. ಮಹೇಶ ಜೋಶಿ ಅವರು, ಮಹಾತ್ಮ ಗಾಂಧಿ ರಸ್ತೆ ಈಗ ಎಂ. ಜಿ. ರಸ್ತೆಯಾಗಿದೆ, ಕೃಷ್ಣ ರಾಜ ಒಡೆಯರ ಹೆಸರಿನಲ್ಲಿ ಇರುವ ರಸ್ತೆ ಕೆ. ಆರ್. ರಸ್ತೆಯಾಗಿದೆ. ನರಸಿಂಹ ರಾಜ ಒಡೆಯರ್ ಅವರ ಹೆಸರಿನಲ್ಲಿ ರೂಪಿತವಾದ ಬಡಾವಣೆ ಎನ್. ಆರ್. ಕಾಲೋನಿಯಾಗಿದೆ. ಹೀಗೆ ಹತ್ತಾರು ಉದಾಹರಣೆಗಳನ್ನು ನೀಡಬಹುದು. ಕನ್ನಡ ಬರಹಗಾರರಲ್ಲಿ ಡಿ. ವಿ. ಗುಂಡಪ್ಪ ಅವರ ಹೆಸರನ್ನು ಡಿ. ವಿ. ಜಿ ಎಂದು ಬರೆಯುವ ಪದ್ಧತಿ ಜನಜನಿತವಾಗಿದ್ದು, ಅವರ ಮೂಲ ಹೆಸರೇ ಮರೆಯಾಗುವ ಅಪಾಯವಿದೆ ಎಂದು ತಿಳಿಸಿದ್ದಾರೆ. ಅದೇ ರೀತಿ ಎಚ್. ಎಸ್. ವಿ (ಎಚ್. ಎಸ್. ವೆಂಕಟೇಶ ಮೂರ್ತಿ), ಬಿ. ಆರ್. ಎಲ್ (ಬಿ. ಆರ್. ಲಕ್ಷ್ಮಣ ರಾವ್)…

Read More

ನಗರದಲ್ಲಿ ಎರಡು ಕಡೆ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ಎಲೆಕ್ನಿಕ್ ಹಾಗೂ ರಾಸಾಯನಿಕ ವಸ್ತುಗಳು ಹಾನಿಗೀಡಾಗಿವೆ. ಸಿಟಿ ಮಾರ್ಕೆಟ್: ಬಿವಿಕೆ ಅಯ್ಯಂಗಾರ್ ರಸ್ತೆಯ ರಾಮಮಂದಿರ ಬಳಿ ಇರುವ ವಿಕಾಸ್ ಎಲೆಕ್ನಿಕಲ್ಸ್ ಅಂಗಡಿಯಲ್ಲಿ ಇಂದು ಬೆಳಗ್ಗೆ 7. 30ರ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಒಂದು ಅಗ್ನಿಶಾಮಕ ವಾಹನದೊಂದಿಗೆ ತಕ್ಷಣ ಆಗಮಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾಟ್‌ರ್ಸಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಅಂಗಡಿಯಲ್ಲಿ ಸಂಗ್ರಹಿಸಿಡಲಾಗಿದ್ದ ಎಲೆಕ್ನಿಕಲ್ ವಸ್ತುಗಳು ಬೆಂಕಿಗೀಡಾಗಿವೆ. ಸುಮಾರು ಏಳು ಅಂತಸ್ತಿನ ಕಟ್ಟಡದಲ್ಲಿ ಈ ಎಲೆಕ್ನಿಕಲ್ ಅಂಗಡಿಯಿದ್ದು, ಸ್ಥಳೀಯರ ಮುನ್ನೆಚ್ಚರಿಕೆ ಕ್ರಮದಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಪುಟ್ಟೇನಹಳ್ಳಿ: ಇಲ್ಲಿನ ದೊರೆಸಾನಿ ಪಾಳ್ಯದಲ್ಲಿರುವ ಕೆಮಿಕಲ್ ಹಾಗೂ ರಟ್‌ಗಳನ್ನು ಸಂಗ್ರಹಿಸಿಡಲಾಗಿದ್ದ ಗೋದಾಮಿನಲ್ಲಿ ಇಂದು ಬೆಳಗ್ಗೆ 8. 30ರ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.…

Read More

ಎಲ್ಲಾ ವರ್ಗದವರಿಗೂ ಅನುಕೂಲವಾಗುವ ಉದ್ದೇಶದಿಂದ ಬೆಂಗಳೂರಿನ ಮೊದಲ ಕಮ್ಯುನಿಟಿ ಮಾಲ್ “ಗ್ಲೋಬಲ್ ಡಿವಿನಿಟಿ” ಶನಿವಾರ ಅನಾವರಗೊಂಡಿದೆ.ಮೈಸೂರು ರಸ್ತೆಯಲ್ಲಿರುವ ಈ ವಿಶ್ವದರ್ಜೆಯ ಮಾಲ್ ಅನ್ನು ಖ್ಯಾತ ಚಿತ್ರನಟ ಕಿಚ್ಚ ಸುದೀಪ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ಡಿಸಿಎಂ ಡಿ. ಕೆ. ಶಿವಕುಮಾರ್, ಸಂಸದರಾದ ಡಿ. ಕೆ. ಸುರೇಶ್ ಅವರು ಉದ್ಘಾಟನೆ ಮಾಡಿದರು. ಪ್ರತಿಷ್ಠಿತ ಕಂಪನಿಗಳ ಮಳಿಗೆಯಿಂದ ಬಟ್ಟೆ, ದಿನಸಿ, ಡಿಜಿಟಲ್ ಮಳಿಗೆ, ಪಿವಿಆರ್ ಸಿನಿಮಾ, ಫುಡ್ ಕೋರ್ಟ್ ಹಾಗೂ ಪ್ಲೇ ಝೇನ್ ಸೇರಿದಂತೆ ಎಲ್ಲಾ ವರ್ಗದವರಿಗೂ ಸಲ್ಲುವ ಮಾಲ್ ಇದಾಗಿದೆ. ಡಿಸಿಎಂ ಡಿ. ಕೆ. ಶಿವಕುಮಾರ್ ಮಾತನಾಡಿ, ”ಬೆಂಗಳೂರಿನಲ್ಲಿ ಅನೇಕ ಮಾಲ್ ಇವೆ. ಇದು ಮೊದಲ ಕಮ್ಯುನಿಟಿ ಮಾಲ್. ಇಲ್ಲಿ ಮನರಂಜನೆ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಇಲ್ಲಿ 7 ಸಿನಿಮಾ ಸ್ಕಿನ್ ಇವೆ. ಜನಸಾಮಾನ್ಯರಿಗೆ ಅನುಕೂಲ ಆಗಲೂ ಈ ಮಾಲ್ ಆರಂಭಿಸಲಾಗಿದೆ. ನಿಮ್ಮ ಆಶೀರ್ವಾದ ಸಹಕಾರ ನಮ್ಮ ಜತೆಗಿರಲಿ. ನನಗೆ ವೈಯಕ್ತಿಕ ಜೀವನ ಹಾಗೂ ರಾಜಕೀಯವಾಗಿ ಸಹಕಾರ ನೀಡಿರುವ ಎಲ್ಲರಿಗೂ…

Read More

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಪತ್ನಿಗೆ ಚಾಕು ಇರಿದು ಎಸ್ಕೆಪ್ ಆಗಿದ್ದ ಆರೋಪಿಯನ್ನು ಬಾಣಸವಾಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಜೂ. 21ರ ಸಂಜೆ ಬಾಣಸವಾಡಿಯ ಸೇಂಟ್ ಜೋಸೆಫ್ ಚರ್ಚ್ ಬಳಿ ಈ ಘಟನೆ ನಡೆದಿತ್ತು. ನಿಖಿತಾ ಹಾಗೂ ದಿವಾಕರ್ 9 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಅತಿಯಾದ ಮದ್ಯಪಾನದ ಚಟ ಹೊಂದಿದ್ದ ದಿವಾಕರನಿಂದ ದೂರವಾಗಿದ್ದ ನಿಖಿತಾ ಲಿಂಗರಾಜಪುರದಲ್ಲಿ ಪ್ರತ್ಯೇಕವಾಗಿ ವಾಸವಿದ್ದಳು. ಇತ್ತೀಚೆಗೆ ಪುನರ್‌ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಬಂದಿದ್ದ ದಿವಾಕರ್ ತನ್ನ ಚಿಕ್ಕಪ್ಪನ ಮಗ ಪ್ರತೀಬ್ ಮನೆಯ ಸಮೀಪದಲ್ಲಿ ವಾಸವಿದ್ದ. ಪತ್ನಿ ಸರಿ ಇಲ್ಲವೆಂದು ಅನುಮಾನ ಹೊಂದಿದ್ದ ದಿವಾಕರ್ ಆಕೆಯ ಹತ್ಯೆಗೆ ಸಂಚು ರೂಪಿಸಿದ್ದ. ಅದರಂತೆ ಜೂನ್ 21ರಂದು ಮಾತನಾಡಬೇಕು ಎಂದು ಲಿಂಗಾರಾಜಪುರದ ಆಕೆಯ ಮನೆಯಿಂದ ಕರೆದೊಯ್ಯಲು ದಿವಾಕರ್ ಹಾಗೂ ಪ್ರತೀಭ್ ಬಂದಿದ್ದರು. ಪ್ರತೀಬ್ ಬೈಕ್ ಚಾಲನೆ ಮಾಡುತ್ತಿದ್ದರೆ, ದಿವಾಕರ್ ಮಧ್ಯೆ ಕುಳಿತಿದ್ದ. ನಿಖಿತಾಳನ್ನು ಕೊನೆಯಲ್ಲಿ ಕೂರಿಸಿ ಕರೆದೊಯ್ದಿದ್ದ ಆರೋಪಿಗಳು, ಮಾರ್ಗ ಮಧ್ಯೆ ತಿರುವಿನಲ್ಲಿ ಆಕೆಯನ್ನು ಬೈಕ್‌ನಿಂದ ಬೀಳಿಸಿದ್ದರು. ಬಳಿಕ ದಿವಾಕರ್, ನಿಖಿತಾಳ…

Read More

ಡಿಸೆಂಬರ್ ವೇಳೆಗೆ ಬಿಬಿಎಂಪಿ ಚುನಾವಣೆ ನಡೆಯಲಿದೆ. 243 ವಾರ್ಡಗಳಿಗೂ ಚುನಾವಣೆ ಮಾಡುತ್ತೇವೆ. ನಾವು ರಾಜಕಾರಣ ಮಾಡುವುದಿಲ್ಲ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಬಸವನಗುಡಿ, ಬುಲ್ ಟೆಂಪಲ್ ರಸ್ತೆಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಮುನ್ನ ಬಿಬಿಎಂಪಿ ಚುನಾವಣೆ ಆಗಲಿದೆ. ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮೇಯರ್ ಇಟ್ಟುಕೊಂಡೇ ಲೋಕಸಭೆ ಚುನಾವಣೆಗೆ ಹೋಗುತ್ತೇವೆ ಎಂದು ಹೇಳಿದರು. ಚುನಾವಣೆ ಬೇಗ ಆಗಬೇಕೆಂದು ನಮ್ಮ ಪಕ್ಷದವರೇ ಕೇಸ್ ಹಾಕಿದ್ದು, ಬಿಜೆಪಿಯವರು ಡಿಲಿಮಿಟೇಷನ್ ಮನಸೋಇಚ್ಛೆ ಮಾಡಿದ್ದಾರೆ. ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿದ್ದೇವೆ. ವಾರ್ಡ್ ವಿಂಗಡಣೆ ವಿಚಾರ ಅಧಿಕಾರಿಗಳ ನಿರ್ಧಾರಕ್ಕೆ ಬಿಟ್ಟಿದ್ದೇವೆ. ನಾವು ಇದಕ್ಕೆ ಕೈ ಹಾಕುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ನಾವು ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಪ್ರಾದೇಶಿಕ ವಿಂಗಡಣೆ ಮಾಡಿದ್ವಿ ಯಾರು ಸಹ ಕೋರ್ಟ್ ಗೆ ಹೋಗಿರಲಿಲ್ಲ. ಈಗ ಬಿಜೆಪಿ ಅವರು ರಾಜಕೀಯವಾಗಿ ವಾರ್ಡ್ ಪುನರ್ ವಿಂಗಡನೆ ಮಾಡಿದ್ರು. ಹಾಗಾಗಿ ಇವಾಗ ಹೊಸದಾಗಿ…

Read More

ಮುಟ್ಟಿನ ಶಿಕ್ಷಣದ ಕೊರತೆಯಿಂದ ಸರಾಸರಿ ಐವರು ಹೆಣ್ಣು ಮಕ್ಕಳಲ್ಲಿ ಒಬ್ಬರು ಶಾಲೆ ತೊರೆಯುತ್ತಿದ್ದಾರೆ. ಶೇ 70ರಷ್ಟು ಹುಡುಗಿಯರಿಗೆ ಮೊದಲ ಬಾರಿ ಋತುಚಕ್ರವಾದಾಗ ಅದರ ಅರಿವೇ ಇರುವುದಿಲ್ಲ’ ಎಂದು ನಟಿ ರೂಪಾಲಿ ಗಂಗೂಲಿ ಕಳವಳ ವ್ಯಕ್ತಪಡಿಸಿದರು. ಅಮೃತ ವಿಶ್ವ ವಿದ್ಯಾಪೀಠ ಹಾಗೂ ಜೆಂಡರ್ ಇಕ್ವಾಲಿಟಿ ವರ್ಕಿಂಗ್ ಗ್ರೂಪ್ ಆಫ್ ಸಿ 20 ಜಂಟಿಯಾಗಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆ’ಯ ಸಮೀಕ್ಷಾ ವರದಿ ಬಿಡುಗಡೆ ಮಾಡಿ, ಮಾತನಾಡಿದರು. ‘ಹಲವರು ಮುಟ್ಟಿನ ವಿಷಯದಲ್ಲಿ ಭಯ ಪಡುತ್ತಾರೆ. ಹೆಣ್ಣು ಮಕ್ಕಳ ತಾಯಂದಿರಿಗೂ ಅರಿವಿನ ಕೊರತೆಯಿದೆ. ಇದರಿಂದಾಗಿ ಸೂಕ್ತ ಮಾರ್ಗದರ್ಶನ ಅವರಿಗೆ ಸಿಗುತ್ತಿಲ್ಲ. ಹಲವರು ಮುಟ್ಟಿನ ತೊಂದರೆಗಳನ್ನು ಹೇಳಿಕೊಳ್ಳದೆ ಮುಚ್ಚಿಡುತ್ತಾರೆ. ಇದು ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗುವಂತೆ ಮಾಡುತ್ತದೆ. ಆದ್ದರಿಂದ ಮುಟ್ಟಿನ ನೈರ್ಮಲ್ಯ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು. ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕಿ ಬಿ. ಬಿ. ಕಾವೇರಿ, ‘ಮುಟ್ಟಿನ ಆರೋಗ್ಯ ಹಾಗೂ ನೈರ್ಮಲ್ಯದ…

Read More

ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಸರ್ಕಾರದ ವೈಫಲ್ಯದ ವಿರುದ್ಧ ವಿಧಾನಮಂಡಲ ಅಧಿವೇಶನದ ಆರಂಭದ ದಿನದಿಂದಲೇ ಪ್ರತಿಭಟನೆ ನಡೆಸುತ್ತೇವೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ. ಎಸ್. ಯಡಿಯೂರಪ್ಪ ಹೇಳಿದರು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂಬತ್ತು ವರ್ಷಗಳನ್ನು ಪೂರೈಸಿರುವ ಪ್ರಯುಕ್ತ ಶನಿವಾರ ನಡೆದ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಸಂಜೆ ನಡೆದ ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲೂ ಇದೇ ಮಾತು ಹೇಳಿದರು. ಕಾಂಗ್ರೆಸ್ ನೀಡಿದ್ದ ‘ಗ್ಯಾರಂಟಿ’ ಭರವಸೆಗಳೇ ನಮ್ಮ ಸೋಲಿಗೆ ಕಾರಣ. ಅವರು ಅಧಿಕಾರದ ಮದದಿಂದ ಏನೇನೋ ಭರವಸೆಗಳನ್ನು ಕೊಟ್ಟು, ಈಗ ನರೇಂದ್ರ ಮೋದಿಯವರತ್ತ ಕೈ ತೋರಿಸುತ್ತಿದ್ದಾರೆ. ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಬೇಕು. ಐದೂ ಗ್ಯಾರಂಟಿಗಳನ್ನು ಚಾಚೂ ತಪ್ಪದೆ ಅನುಷ್ಠಾನಕ್ಕೆ ತರಲಿ. ಇಲ್ಲವಾದರೆ ಅಧಿಕಾರ ಬಿಟ್ಟು ತೊಲಗಲಿ’ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…

Read More