Author: admin

ಉತ್ತರ ಕಾಶ್ಮೀರದ ಸೇನಾ ಶಿಬಿರದಲ್ಲಿ ಗುರುವಾರ ಸಂಭವಿಸಿದ ಆಕಸ್ಮಿಕ ಸ್ಫೋಟದಲ್ಲಿ ಓರ್ವ ಸೇನಾಧಿಕಾರಿ ಸಾವನ್ನಪ್ಪಿದ್ದು, ಕನಿಷ್ಠ ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಕಾಶ್ಮೀರದ ಸೇನಾ ಶಿಬಿರದಲ್ಲಿ ಗುರುವಾರ ಸಂಭವಿಸಿದ ಆಕಸ್ಮಿಕ ಸ್ಫೋಟದಲ್ಲಿ ಓರ್ವ ಸೇನಾಧಿಕಾರಿ ಸಾವನ್ನಪ್ಪಿದ್ದು, ಕನಿಷ್ಠ ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ 10.30ರ ಸುಮಾರಿಗೆ ಕುಪ್ವಾರದ ಗಡಿ ಜಿಲ್ಲೆಯ ಕ್ಯಾಂಪ್‌ ನೊಳಗೆ ಗ್ರೆನೇಡ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಪ್ಯಾರಾಟ್ರೂಪರ್ ಶಾಮ್ ಸಿಂಗ್ ಶ್ರೀನಗರದ ಸೇನಾ ಮೂಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸೈನಿಕರು ಕಾರ್ಯಾಚರಣೆಗೆ ತಯಾರಿ ನಡೆಸುತ್ತಿದ್ದಾಗ ಗ್ರೆನೇಡ್ ಸ್ಫೋಟಗೊಂಡಿದೆ ಎಂದು ಅವರು ಹೇಳಿದರು. “ಸೈನಿಕರ ಗುಂಪು ಕಾರ್ಯಾಚರಣೆಗಾಗಿ ಹೊರಡುವ ಮೊದಲು ಕಿಟ್ಟಿಂಗ್ ಮಾಡುತ್ತಿದೆ. ಅವರು ಕಾರ್ಯಾಚರಣೆಯ ಸಮಯದಲ್ಲಿ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಜೋಡಿಸುತ್ತಿದ್ದರು, ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ.

Read More

ತುಮಕೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹಾಗೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಪತಿ ಪತ್ನಿ ಇಬ್ಬರೂ ಕೂಡ ನೇಣು ಬಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ  ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ  ನಡೆದಿದೆ. ರೊಪ್ಪ ಗ್ರಾಮದಲ್ಲಿ ವಾಸವಿದ್ದ ಮನು (26) ಹಾಗೂ ಪವಿತ್ರ (24) ಮೃತ ದುರ್ದೈವಿಗಳು. ಮನು, ಪವಿತ್ರ ತಾವು ವಾಸವಿದ್ದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಪವಿತ್ರಾಳ ವೇಲಿನಲ್ಲೇ ಬಿಗಿದುಕೊಂಡು ಪತಿ-ಪತ್ನಿ ಅಸುನೀಗಿದ್ದಾರೆ. ದಂಪತಿ ಆತ್ಮಹತ್ಯೆಗೆ  ಕುಟುಂಬದಲ್ಲಿ ಹಾರ್ದಿಕ ಸಂಕಷ್ಟದಿಂದ ಬಳಲುತ್ತಿದ್ದರು ಎಂಬುದು ಪೊಲೀಸರ  ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಮೂರು ವರ್ಷದ ಹಿಂದೆ ಮನು ಹಾಗೂ ಪವಿತ್ರ ಮದುವೆಯಾಗಿದ್ದರು. ಎಂದಿನಂತೆ ಮನೆಯಿಂದ ಹೊರಬಾರದೆ ಇದ್ದಾಗ ಸ್ಥಳೀಯ ಅನುಮಾನಿಸಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.  ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹವನ್ನು ಕೆಳಗಿಸಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ತುಮಕೂರು: ಬಡ್ಡಿ ಹಣ ನೀಡುವ ವಿಚಾರಕ್ಕೆ ಶುರುವಾದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತ್ತೂರು ಗ್ರಾಮದಲ್ಲಿ  ನಡೆದಿದೆ. ಅಮೃತ್ತೂರು ಗ್ರಾಮದ ಅಬ್ದುಲ್ ಖಲೀಲ್ (55) ಮೃತ ದುರ್ದೈವಿಯಾಗಿದ್ದಾನೆ. ಅಬ್ದುಲ್ ಖಲೀಲ್ ಮಗಳ ಮದುವೆಗಾಗಿ ಅದೇ ಗ್ರಾಮದ ಕೋಳಿ ಅಂಗಡಿ ವ್ಯಾಪಾರಿ ತೌಸೀಪ್ ಪಾಷ ಎಂಬಾತನಿಂದ 50,000 ರೂ. ಸಾಲ ಪಡೆದಿದ್ದರು. 50,000 ರೂ. ಸಾಲಕ್ಕೆ ಅಬ್ದುಲ್ ಖಲೀಲ್ ಪ್ರತಿ ತಿಂಗಳು 5 ಸಾವಿರ ಬಡ್ಡಿ ಕಟ್ಟುತ್ತಿದ್ದರು. ಆದರೆ ಈ ತಿಂಗಳು ಬಡ್ಡಿ ಹಣ ನೀಡಲು ತಡವಾಗಿದ್ದಕ್ಕೆ ಅಬ್ದುಲ್ ಖಲೀಲ್ ಹಾಗೂ ತೌಸೀಪ್ ಷಾಷ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು ತೌಸಿಪ್ ಪಾಷಾ ಕುಟುಂಬಸ್ಥರು ಅಬ್ದುಲ್ ಖಲೀಲ್ ಮೇಲೆ ಹಲ್ಲೆ ಮಾಡಿದ್ದಾರೆ. ಕೋಳಿ ಕತ್ತರಿಸುವ ಮಚ್ಚಿನಿಂದಲೇ ಹಲ್ಲೆ ನಡೆಸಿದ್ದಾರೆ ಎಂದು ಅಬ್ದುಲ್ ಖಲೀಲ್ ಕುಟುಂಬಸ್ಥರು ಆರೋಪಿಸಿದ್ದಾರೆ. ಗಲಾಟೆಯಲ್ಲಿ ತೀವ್ರ ಗಾಯಗೊಂಡಿದ್ದ ಅಬ್ದುಲ್ ಖಲೀಲ್ ನನ್ನು ಕೂಡಲೇ ಬೆಂಗಳೂರಿನ ನಿಮಾನ್ಸ್ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ…

Read More

ಗ್ಯಾಂಗ್ಟಾಕ್: ಆರು ಸೈನಿಕರು ಸೇರಿದಂತೆ ಕನಿಷ್ಠ 21 ಜೀವಗಳ ದುರಂತ ನಷ್ಟಕ್ಕೆ ಕಾರಣವಾದ ದುರಂತದ ಪ್ರವಾಹದ ನಂತರ ಸಿಕ್ಕಿಂ ಇನ್ನೂ ಹೆಣಗಾಡುತ್ತಿದೆ. ಹೆಚ್ಚುವರಿಯಾಗಿ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಶುಕ್ರವಾರದ ಇತ್ತೀಚಿನ ನವೀಕರಣದ ಪ್ರಕಾರ, 16 ಸೈನಿಕರು ಸೇರಿದಂತೆ 100 ಕ್ಕೂ ಹೆಚ್ಚು ವ್ಯಕ್ತಿಗಳು ಇನ್ನೂ ಪತ್ತೆಯಾಗಿಲ್ಲ. ಬುಧವಾರ ಬೆಳಗಿನ ಜಾವ ಸಂಭವಿಸಿದ ದುರಂತದ ನಂತರ ತೀಸ್ತಾ ನದಿಯ ಜಲಾನಯನ ಪ್ರದೇಶದ ಕೆಳಭಾಗದ ಉತ್ತರ ಬಂಗಾಳದ ಕಡೆಗೆ ಹರಿಯುವ ನೀರಿನಲ್ಲಿ ಮುಳುಗಿದವರಿಗಾಗಿ ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡಗಳು ಶೋಧ ಕಾರ್ಯವನ್ನು ಮುಂದುವರೆಸಿವೆ. ಬುರ್ಡಾಂಗ್ ಪ್ರದೇಶದಿಂದ ಕಾಣೆಯಾಗಿದ್ದ 23 ಸೇನಾ ಸಿಬ್ಬಂದಿಗಳಲ್ಲಿ, ಏಳು ಮಂದಿಯ ಮೃತದೇಹಗಳನ್ನು ಕೆಳಗಿರುವ ವಿವಿಧ ಪ್ರದೇಶಗಳಿಂದ ವಶಪಡಿಸಿಕೊಳ್ಳಲಾಗಿದ್ದು ಒಬ್ಬರನ್ನು ರಕ್ಷಿಸಲಾಗಿದೆ ಮತ್ತು 15 ನಾಪತ್ತೆಯಾದ ಜವಾನರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಸಿಕ್ಕಿಂ ಮುಖ್ಯಮಂತ್ರಿ ಪಿ ಎಸ್ ತಮಾಂಗ್ ಹೇಳಿದ್ದಾರೆ. ಪ್ರಸ್ತುತ, 3,000 ಕ್ಕೂ ಹೆಚ್ಚು ಪ್ರವಾಸಿಗರು ಸಿಕ್ಕಿಂನ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಪ್ರತಿಕ್ರಿಯೆಯಾಗಿ, 2,500 ಜನರನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ…

Read More

ಜಾತಿ ಗಣತಿ ವರದಿ ಎಂದೇ ಕರೆಯಲಾಗುತ್ತಿರುವ ಕಾಂತರಾಜ್ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕೆಂಬ ಆಗ್ರಹ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದ ಅತ್ಯಂತ ಹಿಂದುಳಿದ ಸಮುದಾಯಗಳು(ಎಂಬಿಸಿ) ಮತ್ತು ಆದಿವಾಸಿಗಳು ಸಹ ಒಳ ಮೀಸಲಾತಿಯ ಭರವಸೆಯೊಂದಿಗೆ ಜಾತಿ ಗಣತಿ ವರದಿಗಾಗಿ ಕಾಯುತ್ತಿದ್ದಾರೆ. 2015ರಲ್ಲಿ ಸಿದ್ದರಾಮಯ್ಯ ಸರ್ಕಾರದ ಮೊದಲ ಅವಧಿಯಲ್ಲಿ ಸಿದ್ಧವಾಗಿದ್ದ ಜಾತಿ ಗಣತಿ ವರದಿಗೆ ಸದಸ್ಯ ಕಾರ್ಯದರ್ಶಿ ಅಂಕಿತ ಹಾಕದ ಕಾರಣ ಇನ್ನೂ ಬಿಡುಗಡೆ ಮಾಡಿಲ್ಲ.

Read More

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಟಾಲಿವುಡ್ ನಟಿ  ಅನಸೂಯಾ  38ವರ್ಷದಲ್ಲಿಯೂ ಇಷ್ಟೊಂದು ಕ್ಯೂಟ್ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು. ಕ್ಯೂಟ್ ಆಗಿ ಫೋಟೋಗೆ ಪೋಸ್ ನೀಡಿ ತನ್ನ ಅದ್ಬುತ ಸೌಂದರ್ಯವನ್ನು ತೋರಿಸುವ ಮೂಲಕ ನೆಟ್ಟಿಗರ ಕಣ್ಮನ ಸೆಳೆಯುತ್ತಿದ್ದಾರೆ ಅನಸೂಯಾ. ಅನಸೂಯಾ ಅವರು ತೆಲುಗು ಉದ್ಯಮದಲ್ಲಿ ಪ್ರಮುಖ ನಟಿಯಾಗಿದ್ದಾರೆ. ಇವರು ಮೂಲತಃ ಆಂಧ್ರಪ್ರದೇಶದವರಾಗಿದ್ದು, 13 ವರ್ಷಗಳ ಹಿಂದೆ ಸುಶಾಂಕ್ ಭಾರದ್ವಾಜ್ ಅವರನ್ನು ಮದುವೆಯಾದ ಅನಸೂಯಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಗಂಡನ ಹೆಸರು ಸುಶಾಂಕ್ ಭಾರದ್ವಾಜ್. ಇಬ್ಬರು ಮಕ್ಕಳ ತಾಯಿಯಾದರೂ ತನ್ನ ಆಕರ್ಷಕ ಸೌಂದರ್ಯದಿಂದ ಹೆಸರುವಾಸಿಯಾಗಿದ್ದಾರೆ.  ನಟಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ಶೇರ್ ಮಾಡುತ್ತಲೇ ಇರುತ್ತಾರೆ. ಇವರ ಆಕರ್ಷಕ ಬ್ಯೂಟಿ ಫೋಟೋಸ್ ಗಳಿಂದ ಅಭಿಮಾನಿಗಳು ಫಿದಾ ಆಗಿದ್ದಾರೆ.

Read More

ಆಗ್ರಾದ ಕೋಚಿಂಗ್ ಸೆಂಟರ್​ ನ ಶಿಕ್ಷಕರೊಬ್ಬರ ಮೇಲೆ ಇಬ್ಬರು ವಿದ್ಯಾರ್ಥಿಗಳು ಗುಂಡು ಹಾರಿಸಿರುವ ಘಟನೆ ನಡೆದಿದೆ. ಅಲ್ಲೇ ಇದ್ದ ಜನರು ಶಿಕ್ಷಕರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದಾದ ನಂತರ ಆರೋಪಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಬೆದರಿಕೆ ಹಾಕುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದು ಗುಂಡು ಹಾರಿಸಿದ್ದೇವೆ ಅಷ್ಟೆ, ಇನ್ನೂ 39 ಬಾಕಿ ಇದೆ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ. ವಿಡಿಯೋವನ್ನು ಗಮನಿಸಿದ ಆಗ್ರಾ ಪೊಲೀಸರು ಆರೋಪಿ ವಿದ್ಯಾರ್ಥಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆಗ್ರಾದ ಖಂಡೌಲಿ ತಹಸಿಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಶಿಕ್ಷಕರಾಗಿ ಪಾಠ ಭೋಧಿಸಿದ ಬಳಿಕ, ಶಾಲೆಯನ್ನು ಮುಗಿಸಿ ಅವರು ಕೋಚಿಂಗ್ ಸೆಂಟರ್ ​ನಲ್ಲಿ ತರಗತಿ ನಡೆಸುತ್ತಾರೆ. ಇದಕ್ಕಾಗಿ ಖಂದೌಲಿಯಲ್ಲಿಯೇ ಸ್ವಂತ ಕೋಚಿಂಗ್ ಸೆಂಟರ್ ತೆರೆದಿದ್ದಾರೆ. ಬೈಕ್ ನಲ್ಲಿ ಬಂದ ಇಬ್ಬರು ಹಳೆ ವಿದ್ಯಾರ್ಥಿಗಳು, ಶಿಕ್ಷಕರನ್ನು ಹೊರಗೆ ಕರೆದು ಬಂದೂಕು ತೆಗೆದು ಶಿಕ್ಷಕರ ಕಾಲಿಗೆ ಗುಂಡು ಹಾರಿಸಿದ. ಗುಂಡಿನ ಶಬ್ದ ಕೇಳಿ ಅಕ್ಕಪಕ್ಕದವರು ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಮಾಹಿತಿ…

Read More

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2023 ಆರಂಭವಾಗಿದೆ. ಇಂದಿನಿಂದ ದಸರಾ ಯುವ ಸಂಭ್ರಮ ಕಾರ್ಯಕ್ರಮ ಪ್ರಾರಂವಾಗಲಿದೆ. ಸಂಜೆ 5 ಗಂಟೆಗೆ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಉದ್ಘಾಟನೆ ನಡೆಯಲಿದೆ. ಅಕ್ಟೋಬರ್ 6 ರಿಂದ ಅಕ್ಟೋಬರ್ 16ರವರೆಗೆ ಯುವ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಸಚಿವ ಡಾ. ಹೆಚ್ಸಿ ಮಹದೇವಪ್ಪ, ನಟರಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಉದ್ಘಾಟನೆ ಮಾಡಲಿದ್ದಾರೆ. ಪ್ರತಿದಿನ ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.

Read More

ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು ‘ಗರ್ಭ’ ಎಂಬ ಕನ್ನಡ ನಾಟಕವನ್ನು ತುಂಬಾ ಮನೋಜ್ಞವಾಗಿ ಮತ್ತು ಭಾವನಾತ್ಮಕವಾಗಿ ಅಭಿನಯಿಸಿ ಪ್ರದರ್ಶಿಸಿದರು. ರಂಗ ಚಂದಿರ ಮತ್ತು ಸಮೃದ್ಧಿ ರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳು ಜೆ. ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ರಂಗಪತಾಕೆ-2023ರ ಅಡಿ ನಾಟಕ ಪ್ರದರ್ಶಿಸಲಾಯಿತು. ‘ಸರೋಗಸಿ’ ವಿಧಾನದಲ್ಲಿ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆಯುವ ಕತೆಯುಳ್ಳ ‘ಗರ್ಭ’ ಎಂಬ ನಾಟಕವನ್ನು ವಿದ್ಯಾರ್ಥಿಗಳು ಉತ್ತಮವಾಗಿ ಪ್ರದರ್ಶಿಸಿದರು.

Read More

ಬೆಂಗಳೂರು: ವಿವಿ ಪುರಂ ಟೆಂಪಲ್ ಸ್ಟ್ರೀಟ್ ಬಳಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಿಗರೇಟ್ ಸೇದುತ್ತ ನಿಂತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ವಿದ್ಯಾರ್ಥಿಗಳ ಫೋಟೋ ತೆಗೆದು ವಿವಿ ಪುರಂ ಪೊಲೀಸರಿಗೆ ಟ್ಯಾಗ್ ಮಾಡಿ ಕಳುಹಿಸಿ, ಕ್ರಮಕ್ಕೆ ಮನವಿ ಮಾಡಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಪೊಲೀಸರು ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಇದಕ್ಕೆ ಕ್ಯಾರೇ ಅನ್ನದ ವಿದ್ಯಾರ್ಥಿಗಳು ಮಾತ್ರ ಸಾರ್ವಜನಿಕ ಸ್ಥಳಗಳಲ್ಲೇ ಸಿಗರೇಟ್ ಸೇವನೆ ಮಾಡಿದ್ದಾರೆ.

Read More