Subscribe to Updates
Get the latest creative news from FooBar about art, design and business.
- ತೋವಿನಕೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಸೈಟ್ ಹಂಚಿಕೆಯಲ್ಲಿ ಅಕ್ರಮ: ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ
- ತುಮಕೂರು ಜಿಲ್ಲೆಯಲ್ಲಿ 19.39 ಲಕ್ಷ ಮತದಾರರಿಗೆ ಎಸ್ ಐಆರ್ ಅರ್ಜಿ ವಿತರಣೆ ಪ್ರಕ್ರಿಯೆ
- ‘ಮತ್ಸ್ಯವಾಹಿನಿ’ ಇ–ತ್ರಿಚಕ್ರ ವಾಹನಕ್ಕಾಗಿ ಅರ್ಜಿ ಆಹ್ವಾನ
- ಮಧ್ಯಾಹ್ನದ ಊಟದ ರುಚಿ ಹೆಚ್ಚಿಸಲು ಇಲ್ಲಿವೆ 6 ಸುಲಭ ಚಟ್ನಿ ರೆಸಿಪಿಗಳು!
- ಮಹಿಳೆಯರ ಸುರಕ್ಷತೆಗೆ ಕಾನೂನು ಅರಿವು ಅಗತ್ಯ: ಶಶಿಧರ ಹೆಚ್.ಜಿ.
- ಎಸ್ ಐಆರ್ ಪ್ರಕ್ರಿಯೆ ನಿರ್ಲಕ್ಷಿಸದೇ ಗಂಭೀರವಾಗಿ ಪರಿಗಣಿಸಿ: ಬಿಜೆಪಿ ಮುಖಂಡ ಸ್ಫೂರ್ತಿ ಚಿದಾನಂದ್ ಮನವಿ
- ತುಮಕೂರು: ಜುಲೈ 10 ರಿಂದ 3 ದಿನಗಳ ಕಾಲ ‘ಬಿಲ್ಡ್ ಟೆಕ್-2026’ ಬೃಹತ್ ವಸ್ತು ಪ್ರದರ್ಶನ
- ವಕೀಲರ ಮೇಲಿನ ಹಲ್ಲೆ ಖಂಡಿಸಿ ನ್ಯಾಯಾಲಯದ ಬಳಿ ಪ್ರತಿಭಟನೆ: ಕಲಾಪದಿಂದ ಹೊರಗುಳಿದ ವಕೀಲರು
Author: admin
ವೈಯಕ್ತಿಕವಾಗಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ನನ್ನ ಸಹಮತ ಇಲ್ಲ. ‘ಹೈಕಮಾಂಡ್ ಅಂದ್ರೆ ನಮಗೆ ಬಿ.ಎಸ್.ಯಡಿಯೂರಪ್ಪ’. ನಾನು ಹೇಳುವವರೆಗೂ ಏನೂ ಮಾಡಬೇಡಿ ಎಂದು ಅವರು ಹೇಳಿದ್ದಾರೆ. ಅದಕ್ಕಾಗಿ ನಾನು ಒಂದು ತಿಂಗಳಿಂದ ಎಲ್ಲೂ ಏನನ್ನೂ ಮಾತನಾಡಿಲ್ಲ ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ನಿರಾಕರಿಸಿ ಬೆಂಗಳೂರಿನ ಹೈಕೋರ್ಟ್ ಆದೇಶ ಹೊರಡಿಸಿದೆ. ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಚ್. ಬಿ. ಪ್ರಭಾಕರ್ ಶಾಸ್ತ್ರಿ ಮತ್ತು ಅನಿಲ್ ಕೆ. ಕಟ್ಟಿ ಅವರಿದ್ದ ವಿಭಾಗೀಯ ಪೀಠ ಅರ್ಜಿ ತಿರಸ್ಕರಿಸಿ ಆದೇಶಿಸಿದೆ. ಮೇಲ್ಮನವಿ ಸಲ್ಲಿಸಿರುವ ಆರೋಪಿಗಳು ಪ್ರಕರಣದಲ್ಲಿ ಸಕ್ರಿಯ ಪಾತ್ರ ವಹಿಸುವುದನ್ನು ತೋರಿಸಲು ಸೂಕ್ತ ಸಾಕ್ಷ್ಯಧಾರಗಳು ಲಭ್ಯವಿದೆ. ದಾಳಿ ವೇಳೆ ಸ್ಥಳದಲ್ಲಿ ಮೂರು ಆರೋಪಿಗಳು ಹಾಜರಿರಲಿಲ್ಲ.
ಮಧ್ಯಪ್ರದೇಶ: ಕೇಂದ್ರ ಸರ್ಕಾರ ಮಹಿಳೆಯರನ್ನು ತಮಾಷೆಯಾಗಿ ಪರಿಗಣಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು. ಗುರುವಾರ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮೋಹನ್ ಖೇಡಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಜಾರಿಗೆ ತರಲು ಸಾಧ್ಯವಾಗದಿದ್ದರೆ, ಈ ಹಂತದಲ್ಲಿ ಏಕೆ ಮಂಡಿಸಲಾಗಿದೆ? ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ತಂದಿದೆ. ನಾವೆಲ್ಲರೂ ಸಹ ಅದನ್ನು ಬೆಂಬಲಿಸಿದ್ದೇವೆ. ಆದರೆ ಅದಕ್ಕೂ ಮೊದಲು ಜನಗಣತಿ ನಡೆಸಲಾಗುವುದು, ಕಾಯ್ದೆಯನ್ನು 10 ವರ್ಷಗಳವರೆಗೆ ಜಾರಿಗೆ ತರುವುದಿಲ್ಲ ಎಂದು ಸರ್ಕಾರ ಹೇಳಿದೆ. ಹಾಗಾದರೆ ಈ ಘೋಷಣೆಯ ಅರ್ಥವೇನು? ಎಂದು ಅವರು ಪ್ರಶ್ನಿಸಿದರು.
ಅಲಹಾಬಾದ್ ಹೈಕೋರ್ಟ್ ಹಿಂದೂ ವಿವಾಹ ಕಾಯ್ದೆಯಡಿ, ಹಿಂದೂ ವಿವಾಹಗಳಲ್ಲಿ ಸಪ್ತಪದಿ ನಡೆಸದ ಹೊರತು ಮದುವೆಯನ್ನು ಮಾನ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಸಪ್ತಪದಿ 7 ಬಾರಿ ಅಗ್ನಿ ಪ್ರದಕ್ಷಿಣೆ ಮಾಡುವುದಾಗಿದೆ. ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಅವರು ಈ ಆದೇಶ ನೀಡಿದ್ದಾರೆ. ವಿಚ್ಛೇದನ ನೀಡದೆ ಬೇರೊಬ್ಬ ವ್ಯಕ್ತಿಯನ್ನು ಎರಡನೇ ಮದುವೆಯಾಗಿರುವ ಪತ್ನಿ ವಿರುದ್ಧ, ಮೊದಲ ಪತಿ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮದುವೆಯ ಸಮಯದಲ್ಲಿ ತಾನು ಬೆಂಕಿಗೆ ಪ್ರದಕ್ಷಿಣೆ ಹಾಕಲಿಲ್ಲ ಮತ್ತು ಮೊದಲ ಮದುವೆಗೆ ಮಾನ್ಯತೆ ಇಲ್ಲ ಎಂದು ಮಹಿಳೆಯ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿತು. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7 ರ ಪ್ರಕಾರ, ಸಪ್ತಪದಿ ಸೇರಿದಂತೆ ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡರೆ ಮಾತ್ರ ವಿವಾಹವನ್ನು ನೆರವೇರಿಸಬಹುದು ಎಂದು ನ್ಯಾಯಾಲಯವು ಗಮನಿಸಿದೆ. ಮಹಿಳೆಯ ವಿರುದ್ಧ ಮೊದಲ ಪತಿ ನೀಡಿದ ದೂರಿನ ಮೇರೆಗೆ ನ್ಯಾಯಾಲಯವು ಪೊಲೀಸ್ ಕ್ರಮವನ್ನು ರದ್ದುಗೊಳಿಸಿದೆ. ಸ್ಮೃತಿ ಸಿಂಗ್ ಅವರು ಸತ್ಯಂ ಸಿಂಗ್ ಅವರನ್ನು 2017 ರಲ್ಲಿ ವಿವಾಹವಾದರು. ಆದರೆ ಇಬ್ಬರ…
ಬೆಂಗಳೂರು: ಗ್ಯಾರಂಟಿ ಯೋಜನೆ ಬಳಿಕ ವ್ಯಾಪಾರ ವಹಿವಾಟು ಗರಿಗೆದರಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿ ಎಂದಿದ್ದಾರೆ. ಮಂದಗತಿಯಲ್ಲಿ ಸಾಗುತ್ತಿದ್ದ ರಾಜ್ಯದ ವ್ಯಾಪಾರ ವಹಿವಾಟು ನಮ್ಮ ಗ್ಯಾರಂಟಿ ಯೋಜನೆಗಳ ಜಾರಿ ನಂತರ ಗರಿಗೆದರಿದೆ. ಈ ಕಾರಣಕ್ಕಾಗಿ ಸೆಪ್ಟೆಂಬರ್ ತಿಂಗಳ ಸರಕು ಮತ್ತು ಸೇವಾ ತೆರಿಗೆ ( ಜಿ.ಎಸ್.ಟಿ ) ಸಂಗ್ರಹದಲ್ಲಿ ಭಾರೀ ಹೆಚ್ಚಳವಾಗಿದ್ದು, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ಸಂಗ್ರಹಕ್ಕಿಂತ ಶೇ. 20 ಪ್ರಗತಿ ಕಂಡಿದೆ. ಸೆಪ್ಟೆಂಬರ್ ನಲ್ಲಿ ರೂ. 11,693 ಕೋಟಿ ಜಿಎಸ್ ಟಿ ಸಂಗ್ರಹವಾಗಿದ್ದು, ಇದು ರಾಜ್ಯದ ಆರ್ಥಿಕ ಬೆಳವಣಿಗೆಯ ದಿಕ್ಸೂಚಿ ಎಂದು ಭಾವಿಸಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಈ ಹಿಂದೆ ಹಲವು ಬಾರಿ ಹೇಳಿದಂತೆ, ”ಬಡವರ ಜೀಬಿಗೆ ಹಣ ಹಾಕಿದರೆ ಅವರಲ್ಲಿ ಕೊಳ್ಳುವ ಸಾಮರ್ಥ್ಯ ಬರುತ್ತದೆ, ಇದರಿಂದ ವ್ಯಾಪಾರ ವಹಿವಾಟು ಹೆಚ್ಚಾಗುತ್ತದೆ” ಎಂದು. ಕಳೆದ ತಿಂಗಳ ಜಿಎಸ್‌ಟಿ ಸಂಗ್ರಹ ನನ್ನ ಮಾತನ್ನು ಸಾಬೀತು ಮಾಡಿದೆ ಎಂದಿದ್ದಾರೆ.
ಬೆಂಗಳೂರು: ವಿಶ್ವಪಾರಂಪರಿಕ ತಾಣವಾದ ಹಂಪಿಯ ಸುತ್ತಲಿನ ಗ್ರಾಮಗಳ ಕುರಿತು ನ್ಯಾಯಾಲಯ ಆದೇಶ ನೀಡಿರುವಂತೆ ಹೋಮ್ ಸ್ಟೇಗಳನ್ನು ತಕ್ಷಣಕ್ಕೆ ನಿಲ್ಲಿಸಬೇಕು. ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಮುಂದಿನ ಕ್ರಮಕ್ಕೆ ತೀರ್ಮಾನ ತೆಗೆದುಕೊಳ್ಳುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಯ ಗ್ರಾಮಗಳ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರ ನೇತೃತ್ವದ ನಿಯೋಗವು ಇಂದು ಅವರನ್ನು ಭೇಟಿಯಾಗಿ ಚರ್ಚಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ವಿಶ್ವಪಾರಂಪರಿಕ ತಾಣವಾದ ಹಂಪಿಯಲ್ಲಿ ಮಾದಕವಸ್ತುಗಳ ಬಳಕೆ, ವೇಶ್ಯಾವಾಟಿಕೆಗಳಂಥ ಕಾನೂನು ಬಾಹಿರ ಚಟುವಟಿಕೆಗಳನ್ನು ಗುರುತಿಸುವಂತೆ ನ್ಯಾಯಾಲಯ ಸೂಚಿಸಿದ್ದು, ಇದನ್ನು ಗುರುತಿಸಿ ನಿಲ್ಲಿಸುವ ಕೆಲಸವಾಗಬೇಕು ಮತ್ತು ಗ್ರಾಮಸ್ಥರಿಗೆ ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯಗಳನ್ನು ಸ್ಥಗಿತಗೊಳಿಸಬಾರದು ಎಂದು ಅವರು ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು. ಹಂಪಿ ಪ್ರದೇಶದ 29 ಗ್ರಾಮಗಳಲ್ಲಿ 10 ಸಾವಿರ ಜನರಿದ್ದಾರೆ. 2009 ರಲ್ಲಿ ನಾಲ್ಕು ಸ್ವಾಮೀಜಿಗಳು ದಾವೆ ಹೂಡಿದ್ದು, ಅನಧಿಕೃತ ಚಟುವಟಿಕೆಗಳನ್ನು ಗುರುತಿಸುವ ಕೆಲಸ ಪ್ರಾಧಿಕಾರದ್ದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅದರ…
ಕೆಂಗೇರಿ ಠಾಣೆ ವ್ಯಾಪ್ತಿಯ ಜ್ಞಾನಭಾರತಿ ಲೇಔಟ್ ನಲ್ಲಿ ಹೊಸದಾಗಿ ನಿರ್ಮಾಣ ಮಾಡುತ್ತಿರವ ಮನೆಗೆ ಅಳವಡಿಸಿದ್ದ ಎಲೆಕ್ಟ್ರಿಕ್ ವೈರ್ ಕಳ್ಳತನವಾಗಿತ್ತು.ಕಳೆದ ಸೆ. 20 ರ ಬೆಳಗ್ಗೆ ಸುಮಾರು 6 ಗಂಟೆಗೆ ಕಳ್ಳತನವಾದ ಬಗ್ಗೆ ದೂರು ದಾಖಲಾಗಿತ್ತು. ದೂರಿನಾಧಾರದ ಮೇಲೆ ಕಾರ್ಯಪ್ರವೃತ್ತರಾದ ಪೊಲೀಸರು ಸೆ.29ರಂದು ತಮಿಳುನಾಡು ಮೂಲದ ಆರೋಪಿ ವೈರಮುಗಲನನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿ ನೀಡಿದ ಮಾಹಿತಿ ಮೇರೆಗೆ ಸಮಾರು ಒಟ್ಟು 6,00,000/-ರೂ ಬೆಲೆ ಬಾಳುವ ವಿವಿಧ ಬಣ್ಣಗಳ ಒಟ್ಟು 93 ಬಂಡಲ್ ಎಲೆಕ್ಟ್ರಿಕ್ ವೈರ್ ಗಳು ಮತ್ತು 01 ಚಕ್ರ ವಾಹನವನ್ನು ವಶಪಡಿಸಿಕೊಳ್ಳವಲ್ಲಿ ಯಶಸ್ವಿಯಾಗಿರುತ್ತಾರೆ.
ಬೆಂಗಳೂರು: ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ನಾಲ್ಕು ವರ್ಷಗಳಿಂದ ಭೂಗತವಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ನನ್ನು ಬಂಧಿಸಲಾಗಿದೆ. ಪಂಜಾಬ್ ಮೂಲದ ನಟೋರಿಯಸ್ ಹ್ಯಾಕರ್ ರಾಜೇಂದ್ರ ಸಿಂಗ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. ಶ್ರೀಕಿಗೂ ಮುನ್ನವೇ ಹ್ಯಾಕಿಂಗ್ ನಲ್ಲಿ ಈತ ಕೈಚಳಕ ತೋರಿ ಭೂಗತವಾಗಿದ್ದ. ಸಿಐಡಿ ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದಲ್ಲಿ ಹ್ಯಾಕರ್ ರಾಜೇಂದ್ರ ಸಿಂಗ್ ನನ್ನು ಬಂಧಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುತ್ತಿದ್ದ. ಈತನಿಗಾಗಿ ನಾಲ್ಕು ವರ್ಷಗಳಿಂದ ಕೇಂದ್ರ ತನಿಖಾ ಸಂಸ್ಥೆಗಳು ಹುಡುಕಾಟ ನಡೆಸಿದ್ದವು. ಸಿಸಿಬಿ ಅಧಿಕಾರಿಗಳು ಶ್ರೀಕಿಯಿಂದ ಸುಮಾರು 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆಯಲ್ಲಿ ಪಂಜಾಬ್ ನ ರಾಜೇಂದ್ರ ಸಿಂಗ್ ಹೆಸರು ಕೇಳಿಬಂದಿತ್ತು. ರಾಜೇಂದ್ರ ಸಿಂಗ್ ಬಂಧನಕ್ಕೆ ಬಲೆ ಬೀಸಲಾಗಿತ್ತು. ಈತನನ್ನು ಪಂಜಾಬ್ ನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ. ರಾಜೇಂದ್ರ ಸಿಂಗ್ ವಿಚಾರಣೆ ಬಳಿಕ ಮತ್ತಷ್ಟು ಸತ್ಯ ಹೊರಬೀಳುವ ಸಾಧ್ಯತೆ ಇದೆ.
ಬೆಂಗಳೂರು: ವೃಕ್ಷಮಾತೆ ಸಾಲುಮರದ ತಿಮ್ಮಕ್ಕನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಮಂಗಳವಾರ ರಾತ್ರಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಪೋಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ವೃಕ್ಷ ಮಾತೆಯವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಜಾರಿ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆದಿದ್ದರು. ನಂತರ ದತ್ತು ಪುತ್ರ ಬಳ್ಳೂರು ಗ್ರಾಮದ ಉಮೇಶ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಸೆ.26 ರಂದು ಉಸಿರಾಟದಲ್ಲಿ ಏರು ಪೇರಾಗಿದ್ದರಿಂದ ಬೇಲೂರಿನ ಸರ್ಕಾರಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ಸೋಮವಾರ ರಾತ್ರಿ ಉಸಿರಾಟದಲ್ಲಿ ತೀವ್ರ ಏರುಪೇರಾಗಿದ್ದರಿಂದ ಮಂಗಳವಾರ ಬೆಂಗಳೂರಿಗೆ ತೆರಳಿದ್ದರು.
ಬೆಂಗಳೂರು: ಬೆಂಗಳೂರಿನ ಯಲಹಂಕ ಉಪನಗರ 3 ನೇ ಹಂತದಲ್ಲಿ ಕಿರಾತಕ ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಆಕೆಯ ಕುತ್ತಿಗೆಗೆ ಸೀರೆ ಕಟ್ಟಿ ಫ್ಯಾನಿಗೆ ನೇತಾಕಿದ ಘಟನೆ ಬೆಳಕಿಗೆ ಬಂದಿದೆ. ವರದಕ್ಷಿಣೆ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಸಂತೋಷ್ ಪತ್ನಿ ರೇಖಾಳನ್ನು ಕೊಲೆ ಮಾಡಿದ ಬಳಿಕ ಸೀರೆಯಿಂದ ಫ್ಯಾನಿಗೆ ನೇಣು ಹಾಕಿ, ಆತ್ಮಹತ್ಯೆ ಅಂತಾ ಬಿಂಬಿಸಿದ್ದ. ಸದ್ಯ ಪತಿ ಸಂತೋಷ್ ನನ್ನು ಯಲಹಂಕ ನ್ಯೂ ಟೌನ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರೇಖಾ ಕೊಲೆಯಾದ ಮೃತ ದುರ್ದೈವಿ. ಆರೋಪಿ ಪತಿ ಸಂತೋಷ್.