Subscribe to Updates
Get the latest creative news from FooBar about art, design and business.
- ಮಧುಗಿರಿ: ದಲಿತರ ಸಮಾಧಿ ರಕ್ಷಣೆಗೆ ಆಗ್ರಹ
- ತುಮಕೂರು: ಕಾರ್ಮಿಕನ ಮೇಲೆ ಲಾರಿ ಹರಿದು ಸಾವು
- ಓಟಿಪಿ ಪಡೆದು ಮಹಿಳೆಯ ಖಾತೆಯಿಂದ 41 ಸಾವಿರ ಹಣ ದೋಚಿದ ಸೈಬರ್ ಕಳ್ಳರು!
- ರೈತರ ಸಮಸ್ಯೆಗಳ ಕುರಿತು ಸಿಎಂಗೆ ಮನವಿ: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಿರ್ಧಾರ
- ಮಧುಗಿರಿ: ಮೇ ನಲ್ಲಿ 2 ತಿಂಗಳ ಪಡಿತರ ವಿತರಣೆ
- ಸಿದ್ದರಾಮಯ್ಯ ಸರ್ಕಾರಕ್ಕೆ 3 ವರ್ಷ: ಮೇ 19ರಂದು ತುಮಕೂರಿನಲ್ಲಿ ಸಾಧನಾ ಸಮಾವೇಶ
- ಕೆರೆಯ ಮಣ್ಣೆತ್ತಲು ರೈತರಿಗೆ ಅಡ್ಡಿಪಡಿಸುವಂತಿಲ್ಲ: ಜಿಲ್ಲಾಧಿಕಾರಿಗೆ ವಿ.ಸೋಮಣ್ಣ ಸೂಚನೆ
- ಗುರು ಶಿಷ್ಯರು: ಈ ದಿನದ ಕಥೆ
Author: admin
ತುಮಕೂರು: ವ್ಯಕ್ತಿ ಒಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತುಮಕೂರಿನ ಶಿರಾಗೇಟ್ ಎಚ್.ಎಂ.ಎಸ್ ಶಾಲೆ ಬಳಿ ನಡೆದಿದೆ. ಗ್ಯಾಸ್ ವಿಜಯ್ ಮೃತ ವ್ಯಕ್ತಿಯಾಗಿದ್ದಾರೆ. ಕೌಟುಂಬಿಕ ಕಲಹದಿಂದ ವ್ಯಕ್ತಿ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತುಮಕೂರಿನ ಅರಳಿಮರಪಾಳ್ಯದ ನಿವಾಸಿಯಾಗಿದ್ದಾರೆ. ಆಟೋ ಚಾಲಕನಾಗಿದ್ದ ವಿಜಯ್ ಶವದ ಪಕ್ಕ ವಿಷದ ಬಾಟಲು ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ತುಮಕೂರು ನಗರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ ಅಲ್ಲದೆ ಈ ಸಂಬಂಧಪಟ್ಟ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂತ್ಯಸಂಸ್ಕಾರ ನಡೆಸಲು ದಲಿತರಿಗೆ ಸೂಕ್ತವಾದ ಸ್ಮಶಾನದ ವ್ಯವಸ್ಥೆ ಒದಗಿಸಬೇಕು ಎಂದು ಒತ್ತಾಯಿಸಿ ಹೆಚ್.ಡಿ.ಕೋಟೆ ಪಟ್ಟಣದ ಆಡಳಿತ ಸೌಧದ ಮುಂಭಾಗದಲ್ಲಿ ನಡೆಸಿದ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು. ಹೆಚ್.ಡಿ.ಕೋಟೆ ತಾಲ್ಲೂಕಿನ ಆನೇಕ ಗ್ರಾಮಗಳಲ್ಲಿ ಸ್ಮಶಾನವಿಲ್ಲದೆ ಜನರು, ಸತ್ತ ವ್ಯಕ್ತಿಯ ಶವ ಸಂಸ್ಕಾರಮಾಡಲು ಪರದಾಡುತ್ತಿದ್ದಾರೆ. ದಲಿತರಿಗೆ ಸರಿಯಾದ ರೀತಿಯಲ್ಲಿ ಸ್ಮಶಾನವನ್ನು ಒದಗಿಸಿಕೊಡಬೇಕೆಂದು ತಾಲ್ಲೂಕು ಆಡಳಿತಕ್ಕೆ ಪ್ರತಿಭಟನಾಕಾರರು ಮನವಿ ಮಾಡಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಕೋಟೆ ಬೆಟ್ಟಯ್ಯ, ನಾವು ಈ ಭೂಮಿಯ ಮೇಲೆ ಹುಟ್ಟಿದಾಗಿಂದ ಇದುವರೆಗೂ ಒಂದಲ್ಲ ಒಂದು ರೀತಿಯಲ್ಲಿ ಬದುಕಲು ಹೋರಾಟ ನಡೆಸುತ್ತಾ ಬಂದಿರುತ್ತೇವೆ, ನಾವು ಬದುಕನ್ನು ನಡೆಸಲು ನಮಗೆ ದೊರಕ ಬೇಕಾದ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ಮಾಡಿದ್ದೇವೆ ಆದರೆ ಇಂದು ಸತ್ತಮೇಲೆ ನಮ್ಮನ್ನು ಊಳಲು ಜಾಗಕೊಡಿ ಎಂದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಬೆಟ್ಟಯ್ಯಕೋಟೆ, ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್.ಪಿ. ಮಂಜುನಾಥ್, ರೈತಮುಖಂಡ ಮಹದೇವನಾಯಕ, ಅಕ್ಬರ್ ಪಾಷ, ಮಲಾರ…
ಕೊರಟಗೆರೆ: ಇಡೀ ವಿಶ್ವದಲ್ಲೇ ತನ್ನದೇ ಆದ ವೈಶಿಷ್ಟ್ಯತೆಗಳಿಂದ ಹೆಗ್ಗುರುತು ಹೊಂದಿರುವ ಬೆಂಗಳೂರನ್ನು ನಾಡಪ್ರಭು ಕೆಂಪೇಗೌಡ ಅವರು ನಿರ್ಮಿಸಿದ್ದು ಯಾವುದೇ ಸ್ವಾರ್ಥಪರತೆ, ಜಾತಿ ಮೋಹವಿಲ್ಲದೇ ಬಳಪೇಟೆ ಕಬ್ಬನ್ ಪೇಟೆ ಚಿಕ್ಕಪೇಟೆ ಎಂಬುದಾಗಿ ಸ್ಥಾಪಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಬೆಂಗಳೂರಿನಲ್ಲಿ ತನಗಾಗಿ ಯಾವುದನ್ನು ಸ್ವಾರ್ಥಕ್ಕಾಗಿ ಬಳಸಲಿಲ್ಲವೆಂದು ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ ಅವರು ತಿಳಿಸಿದರು. ತಾಲೂಕಿನ ಹೊಳವನಲ್ಲಿ ಹೋಬಳಿ ವ್ಯಾಪ್ತಿಯ ಮಧ್ಯ ವೆಂಕಟಪುರ ಗ್ರಾಮದಲ್ಲಿ ಅಸ್ತಿತ್ವಕ್ಕೆ ಬಂದ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಯುವ ಪಡೆಯ ನೂತನ ಸಂಘಟನೆ ನಾಮ ಫಲಕ ಅನಾವರಣಗೊಳಿಸಿ ಮಾತನಾಡಿದ ಅವರು ಒಕ್ಕಲಿಗ ಸಮುದಾಯದವರು ಸ್ವಾರ್ಥ ಪರರಲ್ಲ ವಿಶಾಲವಾದ ಮನಸ್ಸುಳ್ಳ ದಾನಿಗಳಾಗಿದ್ದು ಭೂಮಿಯನ್ನ ಹದಗೊಳಿಸಿ ಉತ್ತು ಹೊತ್ತು ಕಷ್ಟಪಟ್ಟು ಬೆಳೆದು ನಾಡು ಕಟ್ಟುತ್ತಿದ್ದೇವೆ ಎಂದು ತಿಳಿಸಿದರು. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಇಂದು ಯಾವುದಕ್ಕೂ ಕಡಿಮೆ ಇಲ್ಲದೆ ಅತ್ಯುತ್ತಮವಾಗಿ ಇಡೀ ಜಗತ್ತೇ ಬೆರಗುಗೊಳಿಸುವಂತಹ ಸಾಧನೆ ಮಾಡಿದ್ದು ಇಂದಿಗೂ ಕೂಡ ಬೆಂಗಳೂರಿನಲ್ಲಿ ವಿಶ್ವದ ಮೂಲೆ ಮೂಲೆಯ ದೇಶದ ಜನರು ಬಂದು ನೆಲಸಿ…
ಭಾರತದ ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು ತಮ್ಮ ಕುಟುಂಬದೊಂದಿಗೆ ಸಲ್ಮಾನಿಯಾ ಕಾನು ಗಾರ್ಡನ್ ನಲ್ಲಿರುವ ಗುರುದೇವ ಸೋಶಿಯಲ್ ಸೊಸೈಟಿಗೆ ಭೇಟಿ ನೀಡಿ ಬಹಾರ್‌ನ ಮೂರು ಶ್ರೀ ನಾರಾಯಣೀಯ ಚಳವಳಿಗಳು ಜಂಟಿಯಾಗಿ ಆಯೋಜಿಸಿದ್ದ 169 ನೇ ಗುರು ಜಯಂತಿ ಆಚರಣೆಯಲ್ಲಿ ಭಾಗವಹಿಸಿದರು. ಸೊಸೈಟಿ ಅಧ್ಯಕ್ಷ ಶ್ರೀ ಸನೀಶ ಕೂರಮುಲ್ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀ. ಬಿನುರಾಜ್ ಅವರನ್ನೂ ಬರಮಾಡಿಕೊಂಡು ಆಶೀರ್ವಚನ ನೀಡಿ ಮಾತನಾಡಿ, ಇಂದಿನ ಕಾಲದಲ್ಲಿ ಗುರುದೇವರ ವಿಚಾರಗಳು ಬಹಳ ಮುಖ್ಯ. ನಂತರ ನಡೆದ ಸಮಾರಂಭದಲ್ಲಿ ಶಿವಗಿರಿ ಮಠದ ಸ್ವಾಮಿಗಳ ಕುಟುಂಬಸ್ಥರು ಹಾಗೂ ಮಕ್ಕಳು ಹಾಗೂ ಖ್ಯಾತ ಉದ್ಯಮಿ ಹಾಗೂ ಬಿಕೆಜಿ ಹೋಲ್ಡಿಂಗ್ ಅಧ್ಯಕ್ಷ ಶ್ರೀ. ಕೆ.ಜಿ ಬಾಬುರಾಜ್ ರವರ ಉಪಸ್ಥಿತಿಯಲ್ಲಿ ಖ್ಯಾತ ಚಿತ್ರನಟಿ ಶ್ರೀಮತಿ ನವ್ಯಾ ನಾಯರ್ ಅವರು ಗುರುದೇವ ಸೋಶಿಯಲ್ ಸೊಸೈಟಿಯ ಒಂದು ವರ್ಷದ ರಜತ ಮಹೋತ್ಸವ ಆಚರಣೆಯ ಪೋಸ್ಟರ್ ಬಿಡುಗಡೆ ಸಮಾರಂಭವನ್ನು ನೆರವೇರಿಸಿದರು. ಸಮಾರಂಭದ ಉಪಾಧ್ಯಕ್ಷರಾದ ಶ್ರೀ.ಸತೀಶ್ ಕುಮಾರ್ ಧನ್ಯವಾದವಿತ್ತರು ಹಾಗೂ ಆಡಳಿತ ಮಂಡಳಿಯ ಇತರ…
ರಾಜಸ್ಥಾನದ ಭಿಲ್ವಾರಾದಲ್ಲಿ ಮಹಿಳೆಯೊಬ್ಬರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ದೂರು, ಸುಳ್ಳು ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಮಹಿಳೆಯ ಒಪ್ಪಿಗೆ ಮೇರೆಗೆ ಇಬ್ಬರು ವ್ಯಕ್ತಿಗಳು ಶಾರೀರಿಕ ಸಂಬಂಧದಲ್ಲಿ ತೊಡಗಿರುವುದು ಪತ್ತೆಯಾಗಿದೆ. 25ರ ಹರೆಯದ ಯುವಕ ಯುವಕನ ಜತೆ ವಾಗ್ವಾದಕ್ಕಿಳಿದು ಚಿತ್ರಹಿಂಸೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ನಡೆದುಕೊಂಡು ಹೋಗುತ್ತಿದ್ದಾಗ ಮೂವರು ವ್ಯಕ್ತಿಗಳು ತನ್ನನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿ ರಸ್ತೆಯಲ್ಲಿ ವಿವಸ್ತ್ರವಾಗಿ ಬಿಟ್ಟಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ಆರೋಪಿಗಳು ತನಗೆ ಥಳಿಸಿದ್ದು, ಮಾನಸಿಕ ಅಸ್ವಸ್ಥ ಎಂದು ಭಾವಿಸಿ ಯಾರೂ ಸಹಾಯ ಮಾಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ವಿವಸ್ತ್ರವಾಗಿ ರಸ್ತೆಯಲ್ಲಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂಧಿತ ಯುವಕ ಯುವತಿಯರನ್ನು ವಿಚಾರಣೆಗೊಳಪಡಿಸಿದಾಗ ನಕಲಿ ದೌರ್ಜನ್ಯದ ಕಥೆ ಹೊರಬಿದ್ದಿದೆ. ಮೊಬೈಲ್ ಫೋನ್ ನಲ್ಲಿನ ಕರೆ ರೆಕಾರ್ಡಿಂಗ್ ನಿಂದ, ಮಹಿಳೆ ಶನಿವಾರ ಸಂಜೆ ಅವರೊಂದಿಗೆ ಮಾತನಾಡಿ ಹಣಕ್ಕಾಗಿ ಭೇಟಿಯಾಗಲು ಒಪ್ಪಿಕೊಂಡಿದ್ದಾರೆ ಎಂದು ಕಂಡುಬಂದಿದೆ. ಮಹಿಳೆಯ ಒಪ್ಪಿಗೆಯೊಂದಿಗೆ ಇಬ್ಬರು ಪುರುಷರು ದೈಹಿಕ ಸಂಪರ್ಕದಲ್ಲಿ…
ಕೋಲ್ಕತ್ತಾದ ಸರ್ಕಾರಿ ಭೂಮಿಯಲ್ಲಿ ಗಣೇಶ ಪೂಜೆಗೆ ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಅವರ ಪೀಠವು, ಬದುಕುವ ಹಕ್ಕು ಧಾರ್ಮಿಕ ಹಬ್ಬಗಳನ್ನು ಆಚರಿಸುವ ಹಕ್ಕನ್ನು ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟಿದೆ. ಆರ್ಟಿಕಲ್ 21 ರ ಅಡಿಯಲ್ಲಿ ಅನುಮತಿ ಇದೆ. ಹಿಂದೂಗಳ ಹಬ್ಬವಾದ ದುರ್ಗಾ ಪೂಜೆಯನ್ನು ಹೇಳಿದ ಭೂಮಿಯಲ್ಲಿ ನಡೆಸಬಹುದಾದರೆ, ಇತರ ಧರ್ಮ ಅಥವಾ ಅದೇ ಧರ್ಮದ ಆಚರಣೆಯನ್ನು ತಡೆಯುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಗಣೇಶ ಪೂಜೆ ಇದಕ್ಕಿಂತ ಹೇಗೆ ಭಿನ್ನ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಸರ್ಕಾರಿ ಕಾರ್ಯಕ್ರಮಗಳಿಗೆ ಅಥವಾ ದುರ್ಗಾಪೂಜೆಗೆ ಮಾತ್ರ ಮೈದಾನ ಬಿಡಬಹುದು ಎಂಬುದು ಪ್ರಾಧಿಕಾರದ ನಿಲುವಾಗಿತ್ತು.ಅಸನ್ಸೋಲ್ ದುರ್ಗಾಪುರ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಜಮೀನಿನಲ್ಲಿ ಗಣೇಶ ಪೂಜೆಗೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಸರ್ಕಾರದ ಕಾರ್ಯಕ್ರಮಗಳನ್ನು ದುರ್ಗಾ ಪೂಜೆಯೊಂದಿಗೆ ಹೋಲಿಸುವುದೇ ದೊಡ್ಡ ಅಸಂಬದ್ಧತೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ದುರ್ಗಾಪೂಜೆಗೆ ಸಾಟಿಯಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ಕಾರ್ಯಕ್ರಮಗಳ ಜತೆಗೆ ದುರ್ಗಾಪೂಜೆಗೂ ಈ ಮೈದಾನದಲ್ಲಿ ಅನುಮತಿ ನೀಡಲಾಗುತ್ತಿದ್ದು, ಇತರೆ…
ಕರ್ತವ್ಯಲೋಪ, ದುರ್ನಡತೆಗೆ ತೋರಿದ ಹಿನ್ನೆಲೆ ಕಗ್ಗಲಿಪುರ ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಕುಮಾರ್ ಸಸ್ಪೆಂಡ್ ಆಗಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿ DGP ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ. ವಿಜಯ್ ಕುಮಾರ್ ಅಧಿಕಾರ ದುರ್ಬಳಕೆ ಮಾಡಿ ಉದ್ಧಟತನ ತೋರುತ್ತಿದ್ದರು. ಇವರ ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗಿತ್ತು, ದೂರು ಹಿನ್ನೆಲೆ ವಿಚಾರಣೆಗೆ ಆದೇಶಿಸಲಾಗಿತ್ತು. ವಿಚಾರಣೆಯಲ್ಲಿ ಕರ್ತವ್ಯಲೋಪ, ಅಶಿಸ್ತು ಸಾಬೀತಾಗಿದ್ದು, ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ಮೈತ್ರಿ ಪಕ್ಷಗಳ ವೈಯಕ್ತಿಕ ವಿಚಾರ. ಅವರು ಏನೇ ತೀರ್ಮಾನ ಮಾಡಿ ಮೈತ್ರಿ ಮಾಡಿಕೊಂಡರೂ ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದು ಸಂಸದ ಡಿ. ಕೆ. ಸುರೇಶ್ ಹೇಳಿದರು. ನಮ್ಮ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಆಡಳಿತದಲ್ಲಿದೆ. ದೇಶದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಜಾತ್ಯತೀತ ತತ್ವದ ಮೇಲೆ ಆಡಳಿತ ಮಾಡುತ್ತಿದೆ ಎಂದರು. ಯಾರು ಹೊಂದಾಣಿಕೆ ಮಾಡಿಕೊಂಡರೂ ನಮ್ಮ ಸಿದ್ಧಾಂತದ ಮೇಲೆ ನಾವು ಹೋರಾಟ ಮಾಡುತ್ತೇವೆ. ನಮ್ಮ ಒಕ್ಕೂಟ ವ್ಯವಸ್ಥೆ ಬಲಪಡಿಸಲು ಹೋರಾಟ ಮಾಡುತ್ತೇವೆ ಎಂದರು.
ಬಿಜೆಪಿ ನಾಯಕರು ನನ್ನ ಮೇಲೆ ನಂಬಿಕೆ, ಗೌರವ, ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ. ಹೀಗಾಗಿಯೇ, ನಾನು ದೆಹಲಿಗೆ ಹೋದಾಗ ನನ್ನನ್ನು ಬಂದು ಭೇಟಿಯಾಗಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಮಾತುಕತೆ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ತಿಳಿಸಿದ್ದಾರೆ. ಕಾರ್ಯಕರ್ತರ ಸಭೆಯಲ್ಲಿ ಮೈತ್ರಿಯ ಬಗ್ಗೆ ಮಾತುಕತೆ ಆಡಿರುವ ಅವರು, ಬಿಜೆಪಿ ಹೈಕಮಾಂಡ್ ನಾಯಕರು ನನಗೆ ಗೌರವ ಕೊಟ್ಟಿದ್ದಾರೆ. ಅದನ್ನು ನಾನು ಉಳಿಸಿಕೊಳ್ಳಬೇಕು. ಹೀಗಾಗಿ, ಮೈತ್ರಿ ಎಂದಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ನಾನೇ ಟೊಂಕ ಕಟ್ಟಿ ನಿಲ್ಲುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನನಗೆ ಎದ್ದು ನಿಂತು ನಿಲ್ಲಲು ಆಗದೇ ಹೋದ್ರೂ ವೀಲ್ ಚೇರ್ ನಲ್ಲಿ ಕುಳಿತು ಪ್ರಚಾರ ಮಾಡುತ್ತೇನೆ. ನನ್ನ ಪಕ್ಷವನ್ನು ಉಳಿಸಿಕೊಳ್ಳುತ್ತೇನೆ. ನನ್ನನ್ನು ನಂಬಿರುವ ಕಾರ್ಯಕರ್ತರನ್ನು ನಾನು ಕೈ ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಹೇಳಿದ್ದಾರೆ. ಕಾರ್ಯಕರ್ತರ ಸಭೆಯಲ್ಲಿ ದೇವೇಗೌಡ, ಪಕ್ಷದ ಕಾರ್ಯಕರ್ತರಿಗೆ ಈ ಮಾತನ್ನು ಹೇಳಿದ್ದಾರೆ.
ಯಡಿಯೂರಪ್ಪರಿಗೆ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಮಾತನ್ನು ಆಡದಂತೆ ಬಿಜೆಪಿ ಹೈಕಮಾಂಡ್ ನಾಯಕರು ಖಡಕ್ ಸೂಚನೆ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಯನ್ನು ನಾವೇ ನಿಗಾವಹಿಸಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮೈತ್ರಿಯ ಬಗ್ಗೆ ತುಟಿ ಬಿಚ್ಚಬೇಡಿ ಎಂದಿದ್ದಾರೆ. ಮೈತ್ರಿ ಬಗ್ಗೆ ನಾವೇ ತಿಳಿಸುತ್ತೇವೆ. ರಾಜ್ಯದಲ್ಲಿ ಮೈತ್ರಿ ನಿಶ್ಚಿತ. ಆದ್ರೆ, ಅದನ್ನು ನಿರ್ಧರಿಸುವುದು ನಾವೇ. ನೀವು ಮೈತ್ರಿ ಬಗ್ಗೆ ಮಾತನ್ನಾಡಬೇಡಿ ಎಂದು ಖಡಕ್ ಸೂಚನೆಯನ್ನು ಬಿಜೆಪಿ ಹೈಕಮಾಂಡ್ ನಾಯಕರು ರವಾನೆ ಮಾಡಿದ್ದಾರೆ.