Subscribe to Updates
Get the latest creative news from FooBar about art, design and business.
- ಡಿ.14ರಂದು ಬಂಜಾರ ಭವನ ಅದ್ಧೂರಿ ಉದ್ಘಾಟನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮನ
- ಮನೆಯ ಬಾಗಿಲು ಒಡೆದು ಕಳ್ಳರ ಕೈಚಳಕ: ನಗನಗದು ದೋಚಿ ಪರಾರಿ
- ಸರಗೂರು | ಶ್ರೀ ಹನುಮ ಜಯಂತ್ಯೋತ್ಸವ ಮೆರವಣಿಗೆ: ಕರಪತ್ರ ಬಿಡುಗಡೆ
- ಜ್ಞಾನ ಮತ್ತು ಸಮುದಾಯದ ಪ್ರಗತಿಗೆ ಗ್ರಂಥಾಲಯಗಳು ಮೂಲಾಧಾರ: ಬಿಡುಗಲು ಶಿವಣ್ಣ
- ಹುಲಿ ಕಾಣಿಸಿಕೊಂಡರೂ ಕೂಂಬಿಂಗ್ ಕಾರ್ಯಾಚರಣೆ ಇಲ್ಲ: ರೊಚ್ಚಿಗೆದ್ದ ರೈತರಿಂದ ರಸ್ತೆ ತಡೆದು ಪ್ರತಿಭಟನೆ
- ಶೀಲ ಶಂಕಿಸಿ ಪತ್ನಿ, 5 ವರ್ಷದ ಮಗನ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ
- ತುಮಕೂರು | ಬೀದಿ ನಾಯಿಗಳ ಮಾಹಿತಿ ನೀಡಲು ಪಾಲಿಕೆ ಸೂಚನೆ
- ಕೃಷಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Author: admin
ಬೆಂಗಳೂರು : ಸರಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ರಾಜ್ಯಾದ್ಯಂತ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದದ ಪೂರ್ವದ್ವಾರ(ಗ್ರ್ಯಾಂಡ್‍ಸ್ಟೇಪ್ಸ್)ದ ಬಳಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಹ ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆ ಜಾರಿಗೊಳಿಸುವುದರ ಮೂಲಕ ಮಹಿಳಾ ಸಬಲೀಕರಣದತ್ತ ಸರಕಾರ ದಿಟ್ಟ ಹೆಜ್ಜೆ ಇರಿಸಿದೆ. ಸಾಮಾಜಿಕ,ಆರ್ಥಿಕವಾಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶತಶತಮಾನಗಳಿಂದ ಅವಕಾಶವಂಚಿತರಾಗಿದ್ದ ಮಹಿಳೆಯರಿಗೆ ಈ ಮೂಲಕ ಶಕ್ತಿ ತುಂಬುವ ಮತ್ತು ಅವರ ಕನಸುಗಳಿಗೆ ಪ್ರೋತ್ಸಾಹಿಸುವ ಕೆಲಸವನ್ನು ಸರಕಾರ ಮಾಡಿದೆ. ವಿನೂತನ ‘ಶಕ್ತಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಕ್ತಿ ಇಲ್ಲದ ಅಶಕ್ತ ಜನರಿಗೆ ಶಕ್ತಿ ಕೊಡಬೇಕು ಎನ್ನುವುದು ನಮ್ಮ ಸರಕಾರದ ಧ್ಯೇಯ; ಶತಶತಮಾನಗಳಿಂದ ಮಹಿಳೆಯರು ಅವಕಾಶವಂಚಿತರಾಗಿದ್ದಾರೆ. ಯಾವುದೇ ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಲು ಪುರುಷರಷ್ಟೇ ಮಹಿಳೆಯರು ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಈ…
ತುಮಕೂರು: ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆಗಿರುವ ಪಿಎಸ್ ಐ ಹಗರಣ ಬಗ್ಗೆ ಕಾನೂನು ತಜ್ಞ ರ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ಎಂದು ಗೃಹ ಸಚಿವ ಡಾ ಪರಮೇಶ್ವರ್ ಹೇಳಿದ್ದಾರೆ. ತುಮಕೂರಿನಲ್ಲಿ ಶಕ್ತಿ ಯೋಜನೆ ಅಧಿಕೃತವಾಗಿ ಚಾಲನೆ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಸಾಧಕ ಬಾಧಕಗಳನ್ನು ಚರ್ಚೆ ಮಾಡಿಯೇ ಯೋಜನೆ ಜಾರಿಗೆ ಮಾಡಲಾಗಿದೆ. ಯಾವ ರೀತಿ ಖರ್ಚು ಭರಿಸಬೇಕು ಎಂಬುವುದನ್ನು ಚರ್ಚಿಸಿ ಅನುಷ್ಠಾನ ಮಾಡಲು ಹೊರಟಿದ್ದಿವಿ ಎಂದರು. ಯಾರಿಗೂ ಆತಂಕ ಅನುಮಾನ ಬೇಡ. ರಾಜ್ಯದ ಯೋಜನೆ ಕಾರ್ಯಕ್ರಮ ಗಳು ಹಾಗೇ ಮುಂದುವರೆಸುತ್ತೇವೆ. ಸರ್ಕಾರದಲ್ಲಿ ದುಂದು ವೆಚ್ಚ ಅಥವಾ ಪೋಲಾಗುತ್ತಿದ್ದ ಹಣ ಉಳಿತಾಯ ಮಾಡಿ, ಆ ಹಣದಿಂದ ಈ ಯೋಜನೆಗೆ ಖರ್ಚು ಮಾಡಿತಿವಿ ಎಂದರು. ಜನತೆಗೆ ಯಾವುದೇ ಅನುಮಾನ ಬೇಡ. ಮಹಿಳೆಯರಿಗೆ ಸಬಲಿಕರಣ ಆಗಬೇಕೆನ್ನುವುದು ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶ. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕಾರ್ಯಕ್ರಮ ಮಾಡಿದಿವಿ ಎಂದರು. ಸ್ತ್ರೀ ಸಂಘ ಮಾಡಿದಿವಿ…
ತುಮಕೂರು: ಡಾ.ಜಿ.ಪರಮೇಶ್ವರ್ ಅವರು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ “ಶಕ್ತಿ” ಯೋಜನೆಗೆ ತುಮಕೂರಿನ ಸರ್ಕಾರಿ ಬಸ್ ನಿಲ್ದಾಣ ಬಳಿ ಚಾಲನೆ ನೀಡಿದರು. ಮಹಿಳಾ ಪ್ರಯಾಣಿಕರಿಗೆ ತಾವೇ ಟಿಕೆಟ್ ನೀಡುವ ಮೂಲಕ ಶಕ್ತಿ ಯೋಜನೆಗೆ ಚಾಲನೆ ನೀಡಿದ ಪರಮೇಶ್ವರ್ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಸಾಧಕ ಬಾಧಕಗಳನ್ನು ಚರ್ಚೆ ಮಾಡಿಯೇ ಯೋಜನೆ ಜಾರಿಗೆ ಮಾಡಲಾಗಿದೆ. ಯಾವ ರೀತಿ ಖರ್ಚು ಭರಿಸಬೇಕು ಎಂಬುವುದನ್ನು ಚರ್ಚಿಸಿ ಅನುಷ್ಠಾನ ಮಾಡಲು ಹೊರಟಿದ್ದೀವಿ. ಯಾರಿಗೂ ಆತಂಕ ಅನುಮಾನ ಬೇಡ. ರಾಜ್ಯದ ಯೋಜನೆ ಕಾರ್ಯಕ್ರಮ ಗಳು ಹಾಗೇ ಮುಂದುವರೆಸುತ್ತೇವೆ. ಸರ್ಕಾರದಲ್ಲಿ ದುಂದು ವೆಚ್ಚ ಅಥವಾ ಪೋಲಾಗುತ್ತಿದ್ದ ಹಣ ಉಳಿತಾಯ ಮಾಡಿ, ಆ ಹಣದಿಂದ ಈ ಯೋಜನೆಗೆ ಖರ್ಚು ಮಾಡ್ತೀವಿ. ಜನತೆಗೆ ಯಾವುದೇ ಅನುಮಾನ ಬೇಡ ಎಂದರು. ಮಹಿಳೆಯರಿಗೆ ಸಬಲಿಕರಣ ಆಗಬೇಕೆನ್ನುವುದು ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶ. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕಾರ್ಯಕ್ರಮ ಮಾಡಿದ್ದೀವಿ. ಸ್ತ್ರೀ ಸಂಘ ಮಾಡಿದಿವಿ ಅದು ಇಂದು ಕೂಡ ಮುಂದುವರೆದಿದೆ. ಉಚಿತ ಪ್ರಯಾಣ…
ತುರುವೇಕೆರೆ: ಶಾಸಕರಾದ ಎಂ.ಟಿ. ಕೃಷ್ಣಪ್ಪನವರ 73ನೇ ಹುಟ್ಟುಹಬ್ಬವನ್ನು ಇಂದು ತಾಲೂಕಿನ ಗುತ್ತಿಗೆದಾರರು ಮತ್ತು ಕಾರ್ಯಕರ್ತರು ಬಹಳ ಅದ್ದೂರಿಯಾಗಿ ಆಚರಿಸಿದರು. ನೂತನ ಶಾಸಕರಾದ ಎಂ.ಟಿ.ಕೃಷ್ಣಪ್ಪನವರು ತನ್ನ ಹುಟ್ಟೂರಾದ ಮುತ್ಸಂದ್ರ ಗ್ರಾಮಕ್ಕೆ ತಮ್ಮ ಪರಿವಾರ ಸಮೇತರಾಗಿ ತೆರಳಿ ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿ, ನಂತರ ಪಟ್ಟಣದ ಅಧಿದೇವತೆಗಳಾದ ಉಡಸಲಮ್ಮ ದೇವಿ ಹಾಗೂ ಬೇಟರಾಯಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ದರ್ಶನವನ್ನು ಪಡೆದು, ತಮ್ಮ ಸ್ವಗೃಹದ ಪಕ್ಕದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಗುತ್ತಿಗೆದಾರರ ಸಂಘದ ವತಿಯಿಂದ ಮಾಡಿಸಿದ್ದ ಬೃಹತ್ ಗಾತ್ರದ ಕೇಕನ್ನು ಕತ್ತರಿಸಿದರು ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ತಿನಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಮ್ಮ ನೆಚ್ಚಿನ ಶಾಸಕರಿಗೆ ಶಾಲು, ಹಾರಗಳನ್ನು ಹಾಕಿ ಸನ್ಮಾನಿಸಿ, ನೆನಪಿನ ಕಾಣಿಕೆಗಳನ್ನು ನೀಡಿ, ಹುಟ್ಟು ಹಬ್ಬದ ಶುಭಾಶಯಗಳು ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ನಾನು ತುರುವೇಕೆರೆ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದಿದ್ದೇನೆ. ಕಳೆದ ಒಂದು ಬಾರಿ ಬಹಳ ಕಡಿಮೆ ಅಂತರದಿಂದ ಪರಾಜಿತನಾಗಿದ್ದೆ, ಆದರೆ ಈ ಬಾರಿ ನನಗೆ…
ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆತ್ಮಹತ್ಯೆಯನ್ನು ನಿಷೇಧಿಸಿದ್ದಾರೆ. ಆತ್ಮಹತ್ಯೆಯನ್ನು ದೇಶದ್ರೋಹದ ಅಪರಾಧ ಎಂದು ಘೋಷಿಸಿ ಕಿಮ್ ರಹಸ್ಯ ಆದೇಶ ಹೊರಡಿಸಿದ್ದಾರೆ ಎಂದು ವಿದೇಶಿ ಮಾಧ್ಯಮ ವರದಿ ಮಾಡಿದೆ. ದೇಶವು ತೀವ್ರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ. ಅವರಲ್ಲಿ ಹೆಚ್ಚಿನವರು ಆರ್ಥಿಕ ಮುಗ್ಗಟ್ಟು ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾದ ನಂತರ ಉತ್ತರ ಕೊರಿಯಾ ಇಂತಹ ನಿರ್ಧಾರಕ್ಕೆ ಬಂದಿದೆ. ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯಲ್ಲಿ ಶೇ.40ರಷ್ಟು ಹೆಚ್ಚಳವಾಗಿದೆ ಎಂದು ವರದಿಗಳು ಸೂಚಿಸುತ್ತವೆ. ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಜನರು ಅನುಭವಿಸುತ್ತಿರುವ ಕಷ್ಟಗಳು ಮತ್ತು ಕಷ್ಟಗಳು ದೇಶೀಯ ಮಟ್ಟದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಹಸಿವಿನಿಂದ ಸಾವನ್ನಪ್ಪಿದವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ಚೊಂಗ್ ಜಿನ್ ಸಿಟಿ ಮತ್ತು ಜಿಯೊಂಗ್ ಸಾಂಗ್ ಕೌಂಟಿ ಮಾತ್ರ ಈ ವರ್ಷ 35 ಆತ್ಮಹತ್ಯೆಗಳನ್ನು ವರದಿ ಮಾಡಿದೆ. ಈ ಪ್ರಸ್ತುತ ಆತ್ಮಹತ್ಯೆ ದೊಡ್ಡ ರೀತಿಯಲ್ಲಿ ಸಾಮಾಜಿಕ ಹಾನಿಯನ್ನು ಉಂಟುಮಾಡುತ್ತದೆ. ಹಾಗಾಗಿ…
ಸಾರಿಗೆ ಸಂಪರ್ಕವು ಉತ್ಪಾದಕ ಚಟುವಟಿಕೆಗಳನ್ನು ,ಸ್ವಾವಲಂಬನೆಯನ್ನು ವೃದ್ಧಿಸಬಲ್ಲವು ಎಂಬ ಉದಾಹರಣೆಗಳು ಇತಿಹಾಸದುದ್ದಕ್ಕೂ ಕಾಣಸಿಗುತ್ತವೆ. ಕರುನಾಡಿನ ಮಹಿಳೆಯರನ್ನು ಈ ನಿಟ್ಟಿನಲ್ಲಿ ಮುನ್ನಡೆಸುವ ಹಾದಿಯಲ್ಲಿ ಹೊಸ ಆಶಾಕಿರಣವೊಂದು ಉದಯಿಸಿದೆ. ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮುಂಭಾಗದಲ್ಲಿ ಇಂದು ಕರ್ನಾಟಕ ರಾಜ್ಯದಾದ್ಯಂತ ಮಹಿಳೆಯರು ಸರ್ಕಾರದ ನಗರ ಸಾರಿಗೆ,ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸುವ “ಶಕ್ತಿ” ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿ,ರಾಜ್ಯದ ಇತಿಹಾಸದಲ್ಲಿಯೇ ಮಹತ್ವದ ಘಟ್ಟವೊಂದನ್ನು ದಾಖಲಿಸಿದರು. ಚುನಾವಣೆ ಸಂದರ್ಭದಲ್ಲಿ ತಾವು ಘೋಷಿಸಿದ್ದ ಗ್ಯಾರಂಟಿಗಳನ್ನು ಜಾರಿಗೊಳಿಸಲು ,ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೇರಿದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ತಾತ್ವಿಕ ಒಪ್ಪಿಗೆ ಪಡೆದು ಘೋಷಣೆ ಮಾಡಿದ್ದ ಮುಖ್ಯಮಂತ್ರಿಯವರು ,ಇದೀಗ ಘೋಷಣೆಯಾದ 21 ದಿನಗಳ ಅಲ್ಪಾವಧಿಯಲ್ಲಿಯೇ ಅನುಷ್ಠಾನ ಮಾಡಿರುವುದು. ಉಚಿತ ಪ್ರಯಾಣದ ತಮ್ಮ ಪ್ರಮಾಣವನ್ಮು ಸಾಕಾರಗೊಳಿಸಿದ್ದಾರೆ. ಪ್ರಗತಿಯ ಚಲನೆಗೆ ಸ್ತ್ರೀ ಶಕ್ತಿಯ ಆಯಾಮವನ್ನು ಇನ್ನಷ್ಟು ಗಟ್ಟಿಯಾಗಿ ಜೋಡಿಸುವ ಕನಸು ಇದಾಗಿದೆ.ಪುರುಷರಷ್ಟೇ ಸಮಾನವಾಗಿ ಮಹಿಳೆಯರೂ ಕೂಡ ನಾಡಿನ ಸರ್ವಾಂಗೀಣ ಅಭಿವೃದ್ಧಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂಬುದು ಸರ್ಕಾರದ ಮಹತ್ವಾಕಾಂಕ್ಷೆ.ದೇಶದಲ್ಲಿ ಶೇ.24 ರಷ್ಟು…
ನಗರದ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಹೊರ ರಾಜ್ಯಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಿದ್ದ9 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ‘ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲದ ಬಗ್ಗೆ ಮಾಹಿತಿ ಬಂದಿತ್ತು. ಮೂರು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ 9 ಆರೋಪಿಗಳನ್ನು ಬಂಧಿಸಲಾಗಿದೆ. ದೆಹಲಿ, ಮುಂಬೈ, ಪಶ್ಚಿಮ ಬಂಗಾಳ, ಮಧ್ಯಪ್ರದೇಶದ 26 ಯುವತಿಯರನ್ನು ರಕ್ಷಿಸಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು. ಮಧ್ಯವರ್ತಿಗಳ ಮೂಲಕ ಹೊರ ರಾಜ್ಯಗಳಿಂದ ಯುವತಿಯರನ್ನು ನಗರಕ್ಕೆ ಕರೆಸಲಾಗಿತ್ತು.ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ಯುವತಿಯರನ್ನು ಇರಿಸಲಾಗಿತ್ತು.ಮೊಬೈಲ್ ಮೂಲಕ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಅವರಿಂದ ಹಣ ಪಡೆದು ಹೇಳಿದ ಸ್ಥಳಕ್ಕೆ ಯುವತಿಯರನ್ನು ಕಳುಹಿಸುತ್ತಿದ್ದರು ಎಂದು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
ಕಾಂಗ್ರೆಸ್ ಸರ್ಕಾರ ಜಾರಿಗೊಳಿಸುತ್ತಿರುವ ಐದು ಗ್ಯಾರಂಟಿಗಳು ಬೊಕ್ಕಸಕ್ಕೆ ಹೊರೆಯಾಗುವುದಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಿ. ಕೆ.ಚಂದ್ರಶೇಖರ್, ಅರ್ಥಶಾಸ್ತ್ರಜ್ಞ ಆರ್.ಎಸ್.ದೇಶಪಾಂಡೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕ ವಿ.ಎಸ್. ಪ್ರಕಾಶ್ ಪ್ರತಿಪಾದಿಸಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಈ ಗ್ಯಾರಂಟಿಗಳು ಜನರ ಜೀವನೋಪಾಯವನ್ನು ಕಂಡುಕೊಳ್ಳುವ ಪ್ರಮುಖ ಮಾರ್ಗಗಳಾಗಿವೆ. ಸಮಾಜದ ಅತ್ಯಂತ ಬಡ ಸಮುದಾಯಗಳಿಗೆ ತಮ್ಮಅಗತ್ಯಗಳನ್ನು ಪೂರೈಸಿಕೊಳ್ಳಲು ಬೇಕಾದ ನೆರವನ್ನು ಈ ಗ್ಯಾರಂಟಿಗಳು ನೀಡಲಿವೆ. ಘನತೆಯಿಂದ ಬದುಕುವ ಹಕ್ಕನ್ನು ಸಂವಿಧಾನ ನೀಡಿದ್ದು, ಅದರ ಆಶಯದಲ್ಲೇ ಈ ಯೋಜನೆಗಳು ರೂಪುಗೊಂಡಿವೆ ಎಂದು ಅವರು ಹೇಳಿದ್ದಾರೆ. 2023-24ರ ಬಜೆಟ್ ಪ್ರಕಾರ ಕರ್ನಾಟಕ ಸರ್ಕಾರಕ್ಕೆ ಬರುವ ಆದಾಯ 72. 25 ಲಕ್ಷ ಕೋಟಿಯಷ್ಟಿದೆ. ಎಲ್ಲ ಯೋಜನೆಗಳಿಗೆ ಕ 50, 500 ಕೋಟಿಯಷ್ಟು ವೆಚ್ಚವಾಗಬಹುದು ಎಂಬ ಅಂದಾಜಿದೆ.ಬೃಹತ್ ಆದಾಯ ಇರುವ ರಾಜ್ಯಕ್ಕೆ ಇದು ಹೊರೆಯಾಗುವುದಿಲ್ಲ ಎಂದು ಅವರು ವಿವರಿಸಿದ್ದಾರೆ. ಗೃಹಜ್ಯೋತಿ ಯೋಜನೆಯಲ್ಲಿ ಎಲ್ಲ ಮನೆಗಳಿಗೆ ತಿಂಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. ಕರ್ನಾಟಕ…
ಅಮೆರಿಕದ ಕಾನ್ಸಾಸ್ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ ಬಲಿಯಾದವರಲ್ಲಿ ಒಬ್ಬ ಪೊಲೀಸ್ ಅಧಿಕಾರಿಯೂ ಸೇರಿದ್ದಾರೆ. ಮಾರ್ಸೆಲ್ ಟಿ ನೆಲ್ಸನ್ (42) ಮತ್ತು ಕ್ರಿಸ್ಟನ್ ಫೇರ್‌ಚೈಲ್ಡ್ (42) ಮೃತಪಟ್ಟವರು. ಪೂರ್ವ ಕಾನ್ಸಾಸ್ ಸಿಟಿಯ ಮೆಕ್ ಡೊನಾಲ್ಡ್ ರೆಸ್ಟೋರೆಂಟ್ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ಘಟನಾ ಸ್ಥಳದಿಂದ ಗನ್ ವಶಪಡಿಸಿಕೊಳ್ಳಲಾಗಿದೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಸ್ವೀಡನ್ ನಲ್ಲೂ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ 15 ವರ್ಷದ ಯುವಕ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ದಾಳಿಗೆ ಕಾರಣ ಸ್ಪಷ್ಟವಾಗಿಲ್ಲ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
ಹೈದರಾಬಾದ್‌ನ ಅಂಬರ್ ಪೇಟ್ ಪ್ರದೇಶದ ನಿವಾಸಿ 16 ವರ್ಷದ ಯುವಕ ಆಟವಾಡಲು ತನ್ನ ತಾಯಿಯ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಿದ್ದಾನೆ. ಇದರಿಂದ ಮಹಿಳೆಗೆ ಸುಮಾರು 36 ಲಕ್ಷ ರೂಪಾಯಿ ನಷ್ಟವಾಗಿದೆ. ಹೈದರಾಬಾದ್ ಪೊಲೀಸ್‌ನ ಸೈಬರ್ ಕ್ರೈಮ್ ವಿಂಗ್ ನೀಡಿದ ಮಾಹಿತಿಯ ಪ್ರಕಾರ, ಹುಡುಗ ಮೊದಲು ತನ್ನ ಅಜ್ಜನ ಮೊಬೈಲ್ ಫೋನ್‌ನಲ್ಲಿ ಉಚಿತ ಫೈರ್ ಗೇಮಿಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡನು, ಇದು ಉಚಿತ ಆಟವಾಗಿದೆ. ಆದರೆ ಮಗು ಆಟದ ಚಟಕ್ಕೆ ಬಿದ್ದಾಗ ಹಣ ಖರ್ಚು ಮಾಡತೊಡಗಿತು. ಮೊದಲು ತನ್ನ ತಾಯಿಯ ಖಾತೆಯಿಂದ 1500 ರೂ., ನಂತರ 10,000 ರೂ.ಗಳನ್ನು ಆಟವಾಡಲು ಖರ್ಚು ಮಾಡಿದ್ದಾನೆ. ಕಾಲಕ್ರಮೇಣ ಆತ ಆಟಕ್ಕೆ ದಾಸನಾದ. ಪಾವತಿಸುವ ಮೂಲಕ ಆಟವನ್ನು ಉತ್ತಮಗೊಳಿಸಿದೆ. ಹುಡುಗನಿಗೆ ಆಟದ ಚಟದಿಂದಾಗಿ ಕುಟುಂಬ ಸದಸ್ಯರಿಗೆ ಗೊತ್ತಾಗದಂತೆ ಅಪಾರ ಹಣ ಖರ್ಚು ಮಾಡಿದ್ದಾನೆ ಎಂದು ಐಎಎನ್ ಎಸ್ ವರದಿ ಮಾಡಿದೆ. ಉಚಿತ ಫೈರ್ ಗೇಮ್‌ನಲ್ಲಿ 1.45 ಲಕ್ಷದಿಂದ 2 ಲಕ್ಷದವರೆಗೆ. ಮಗುವಿನ ತಾಯಿ ಸ್ವಲ್ಪ ಹಣವನ್ನು…