Author: admin

ಮದ್ಯದ ಅಮಲಿನಲ್ಲಿ ಪಿಸ್ತೂಲ್‌ ನಿಂದ ಗುಂಡು ಹಾರಿಸಿ ಭಯವನ್ನುಂಟು ಮಾಡಿದ್ದ ಆರೋಪದಡಿ ಮಾಜಿ ಸೈನಿಕ ಪ್ರಶಾಂತ್ (39) ಅವರನ್ನು ಬಂಧಿಸಿದ್ದ ತಿಲಕ್‌ ನಗರ ಠಾಣೆ ಪೊಲೀಸರು, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಆಗಸ್ಟ್ 26ರಂದು ತಡರಾತ್ರಿ ನಡೆದಿದ್ದ ಘಟನೆ ಸಂಬಂಧ ಪಿ. ಪಿ. ಅನಿಲ್‌ ಕುಮಾರ್ ಅವರು ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಯನ್ನು ಸೆರೆ ಹಿಡಿಯಲಾಗಿತ್ತು. ಇದೀಗ, ಅವರನ್ನು ಬಿಡುಗಡೆ ಮಾಡಲಾಗಿದೆ. ಪ್ರಕರಣದ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

Read More

ಬೆಂಗಳೂರು: ಗಣೇಶ ಮೂರ್ತಿ ವಿಸರ್ಜನೆ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಸಭೆ ನಡೆಯಿತು. ಬಿಬಿಎಂಪಿ, ಪೊಲೀಸ್, ಬೆಸ್ಕಾಂ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ಲೆಕ್ಸ್ ಬ್ಯಾನರ್ ಮತ್ತು ಪ್ಲಾಸ್ಟಿಕ್ ಬಳಕೆ ಮಾಡಬಾರದು. ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಮತ್ತಿತರ ಕಡೆಗಳಲ್ಲಿ ನಿಮಜ್ಜನಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ

Read More

ಬೆಂಗಳೂರು: ಮದ್ಯ ಸೇವನೆಗೆ ಸಾಲ ಕೊಡಲಿಲ್ಲ ಎಂದು ಕಿರಿಕ್ ತೆಗೆದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಡಿಯೂರು ಬಳಿಯ ಎಂಬಿಆರ್ ಬಾರ್‌ ನಲ್ಲಿ ಆ. 28ರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸ್ವಾಗತ್ ಗೌಡ ಹಲ್ಲೆಗೊಳಗಾದ ಬಾರ್ ಕ್ಯಾಶಿಯರ್, ಪುನೀತ್ ಹಾಗೂ ಆತನ ಸಹಚರರು ಕೃತ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬನಶಂಕರಿ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.28ರ ರಾತ್ರಿ ಎಂದಿನಂತೆ ಬಾರ್ ಕ್ಲೋಸ್ ಮಾಡುವಾಗ ಬೈಕಿನಲ್ಲಿ ಮೂವರು ಆರೋಪಿಗಳು ಬಂದಿದ್ದಾರೆ. ಕ್ಲೋಸ್ ಮಾಡುತ್ತಿದ್ದ ಬಾರ್ ​ನ್ನು ತೆಗೆದು ಮದ್ಯ ನೀಡುವಂತೆ ಕೇಳಿದ್ದಾರೆ. ಇದಕ್ಕೆ ನಿರಾಕರಿಸಿದ ಸ್ವಾಗತ್ ಗೌಡ ಮೇಲೆ‌ ಹರಿಹಾಯ್ದಿದ್ದಾರೆ. ಗಾಂಜಾ ನಶೆಯಲ್ಲಿದ್ದ ಆರೋಪಿಗಳು ತಮ್ಮ ಬಳಿಯಿದ್ದ ಚಾಕುವಿನಿಂದ ಕ್ಯಾಶಿಯರ್ ಹೊಟ್ಟೆಗೆ ಇರಿದಿದ್ದಾರೆ. ಇದರಿಂದ ರಕ್ತಸ್ರಾವವಾಗಿ ಸ್ವಾಗತ್ ಕುಸಿದು ಬಿದ್ದಿದ್ದಾರೆ. ಆತನನ್ನು ಕಂಡು ಆರೋಪಿಗಳು ಪರಾರಿ ಆಗಿದ್ದಾರೆ ಎಂದು ತಿಳಿದು ಬಂದಿದೆ.

Read More

ಬೆಂಗಳೂರು: ರಾಜ್ಯಾದ್ಯಂತ ಒಂದು ವಾರ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಇಂದು ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಇಂದು ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್ ಹೇಳಿದ್ದಾರೆ. ರಾಜ್ಯದ ಉತ್ತರ ಒಳನಾಡಿನಲ್ಲೂ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆಯಾಗಿದೆ. ರಾಜ್ಯದಲ್ಲಿ ಪ್ರಸ್ತುತ ಶೇಕಡಾ 22ರಷ್ಟು ಮಳೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆ ಮಳೆಯಾಗುವ ನಿರೀಕ್ಷೆಯಿದೆ ಎಂದರು.

Read More

ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಮಳೆ ಬೀಳುವ ಮುನ್ಸೂಚನೆ ಇರುವ ಕಾರಣ ಪಾಲಿಕೆಯ ವಲಯಗಳ ಆಯುಕ್ತರು, ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರರು ಮಳೆ ಅವಘಡಗಳನ್ನು ಎದುರಿಸಲು ಸಜ್ಜಾಗಿರಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮುಖ್ಯ ಅಭಿಯಂತರರು ಭೇಟಿ ನೀಡಿ ಅಹವಾಲುಗಳಿಗೆ ಕೂಡಲೇ ಸ್ಪಂದಿಸಬೇಕು. ಅತಿವೃಷ್ಟಿ ಪ್ರದೇಶಗಳಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ನಿರ್ದೇಶಿಸಿದರು.

Read More

ಶ್ರೀ ಹರಿಕೋಟಾ: ಚಂದ್ರಯಾನ-3 ರ ಯಶಸ್ಸಿನ ನಂತರ, ದೇಶವು ಮತ್ತೊಂದು ಮಹತ್ತರ ಸಾಧನೆಗೆ ಸಜ್ಜಾಗುತ್ತಿದ್ದು, ಈ ಬಾರಿ ಇಸ್ರೋ ಸೂರ್ಯನಿತ್ತ ದೃಷ್ಟಿ ಇಟ್ಟಿದೆ. ಇಸ್ರೋದ ಸೂರ್ಯ ಮಿಷನ್ ಆಗಿರುವ ಆದಿತ್ಯ ಎಲ್-1 ಗೆ ಕ್ಷಣಗಣನೆ ಆರಂಭವಾಗಿದೆ. ಈ ಮಿಷನ್ ನಾಳೆ ಬೆಳಗ್ಗೆ 11:50ಕ್ಕೆ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಲಾಂಚ್ ಆಗಲಿದೆ. ಈ ಬಾಹ್ಯಾಕಾಶ ನೌಕೆಯನ್ನು PSLV-C57 ನಿಂದ ಉಡಾವಣೆ ಮಾಡಲಾಗುವುದು. ಆದಿತ್ಯ L1 ಅನ್ನು ಸೂರ್ಯ-ಭೂಮಿಯ ವ್ಯವಸ್ಥೆಯ ಲಾಗ್ರೇಂಜ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ. ಆದಿತ್ಯ ಎಲ್ 1 ಉಪಗ್ರಹವನ್ನು ಹೊತ್ತ ಪಿಎಸ್ಎಲ್ವಿ-ಸಿ57 ರಾಕೆಟ್ ನಭಕ್ಕೆ ಚಿಮ್ಮಿದ ಬಳಿಕ ರಾಕೆಟ್ ಉಪಗ್ರಹವನ್ನು ಕೆಳ ಮಟ್ಟದ ಭೂ ಕಕ್ಷೆಗೆ ತಲುಪಿಸಲಿದೆ. ನಂತರ ಉಪಗ್ರಹದಲ್ಲಿ ಇರುವ ಪ್ರೊಪಲ್ಶನ್ ಗಳು ಎಂಜಿನ್ ರೀತಿ ಕಾರ್ಯ ನಿರ್ವಹಿಸಿ ಉಪಗ್ರಹವನ್ನು ನಿಧಾನವಾಗಿ ಭೂಮಿಯ ಗುರುತ್ವಾಕರ್ಷಣ ವಲಯದಿಂದ ಆಚೆಗೆ ಸಾಗಿಸಲಿದೆ. ಎಲ್ 1 ಕಕ್ಷೆಯ ಬಳಿ ಉಪಗ್ರಹ ತಲುಪಿದ ನಂತರ ಅದನ್ನು ಕ್ರೂಸ್ ಹಂತಕ್ಕೆ ತಲುಪಿಸಿ…

Read More

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ತೀನ್ ಮೂರ್ತಿ ಭವನ ಆವರಣದಲ್ಲಿರುವ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆಯನ್ನು ‘ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ’ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ ಎಂದು ಕೇಂದ್ರ ಕ್ಯಾಬಿನೆಟ್ ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಭಾರತ ಸರ್ಕಾರದ ನಿಯಮಗಳು, 1961 ರ ಎರಡನೇ ಶೆಡ್ಯೂಲ್ನ ‘ಸಂಸ್ಕೃತಿ ಸಚಿವಾಲಯ ಶೀರ್ಷಿಕೆಯಡಿಯ ನಮೂದು 9 ರಲ್ಲಿ, ‘ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಲೈಬ್ರರಿ’ ಎಂಬ ಪದಕ್ಕೆ ಬದಲಾಗಿ ‘ಪ್ರಧಾನಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ’ ಎಂಬ ಪದವನ್ನು ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಎನ್ ಎಂಎಂಎಲ್ ನ ಉಪಾಧ್ಯಕ್ಷರೂ ಆಗಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧ್ಯಕ್ಷತೆಯಲ್ಲಿ ಜೂನ್ 17 ರಂದು ನಡೆದ ವಿಶೇಷ ಸಭೆಯಲ್ಲಿ ಸಂಸ್ಥೆಯ ಹೆಸರನ್ನು ಬದಲಾಯಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು.

Read More

ಮುಂಬೈ: INDIA ಮೈತ್ರಿಕೂಟಗಳು ದ್ವೇಷದ ರಾಜಕೀಯವನ್ನು ಎದುರಿಸಲು ಸನ್ನದ್ಧವಾಗಿರಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ. ಮುಂಬೈಯಲ್ಲಿಂದು ಪ್ರತಿಪಕ್ಷಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳ ಮೈತ್ರಿಕೂಟದ ಬಲವು ಸರ್ಕಾರವನ್ನು ನಿರುತ್ಸಾಹಗೊಳಿಸುತ್ತಿದೆ. ಕೇಂದ್ರ ಸರ್ಕಾರದ ಅಡಿ ಬರುವ ಸಂಸ್ಥೆಗಳ ಹೆಚ್ಚು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯಿರುವುದರಿಂದ ಮೈತ್ರಿ ಕೂಟಗಳು ದ್ವೇಷದ ರಾಜಕೀಯವನ್ನು ಎದುರಿಸಲು ಸನ್ನದ್ಧವಾಗಿರಬೇಕು ಎಂದು ಅವರು ಹೇಳಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಬಿಜೆಪಿ ಮತ್ತು ಆರ್ಎಸ್ಎಸ್ ಹರಡಿದ ಕೋಮುವಾದದ ವಿಷವು ಈಗ ಅಮಾಯಕ ರೈಲು ಪ್ರಯಾಣಿಕರ ಮೇಲೆ ಮತ್ತು ಶಾಲಾ ಮಕ್ಕಳ ಮೇಲಿನ ದ್ವೇಷದ ಅಪರಾಧಗಳಲ್ಲಿ ಕಂಡುಬರುತ್ತಿವೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರೈಲ್ವೇ ಪೊಲೀಸ್ ಪೇದೆಯೊಬ್ಬರು ರೈಲಿನಲ್ಲಿದ್ದ ಜನರನ್ನು ಮಾರಣಾಂತಿಕವಾಗಿ ಗುಂಡಿಕ್ಕಿ ಹತ್ಯೆಗೈದ ಘಟನೆಗಳು ಮತ್ತು ಮುಜಫರ್ನಗರದ ಶಾಲೆಯ ಶಿಕ್ಷಕರೊಬ್ಬರು ತಮ್ಮ ಮನೆಕೆಲಸವನ್ನು ಪೂರ್ಣಗೊಳಿಸದಿದ್ದಕ್ಕಾಗಿ ಮುಸ್ಲಿಂ ಸಹಪಾಠಿಯನ್ನು ಕಪಾಳಮೋಕ್ಷ ಮಾಡುವಂತೆ ವಿದ್ಯಾರ್ಥಿಗಳಿಗೆ ಹೇಳಿದ್ದು ಇಂಥಹ ಘಟನೆಗಳು ಕೋಮುವಾದ ವಿಷಬೀಜ ಬಿತ್ತುವುದಕ್ಕೆ ಸಾಕ್ಷಿಯಾಗಿದೆ ಎಂದರು.

Read More

ಮೈಸೂರು: ಮೈಸೂರು ದಸರಾ ಮಹೋತ್ಸವ 2023, ಅಕ್ಟೋಬರ್ 15 ರ ಬೆಳಿಗ್ಗೆ 10.15 ರಿಂದ 10.30 ಕ್ಕೆ ಸಲ್ಲುವ ಮಹೂರ್ತದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಉದ್ಘಾಟಿಸಲಿದ್ದಾರೆ. ಈ ಬಾರಿಯ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ. ಬಾರಿಯೂ ಕೂಡ 14 ಆನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಫೈನಲ್ ಮಾಡಿದ್ದಾರೆ. ಮೊದಲ ಹಂತದಲ್ಲಿ ಇಂದು 9 ಆನೆಗಳನ್ನು ಹಾಗೂ ಎರಡನೇ ಹಂತದಲ್ಲಿ ಉಳಿದ 5 ಆನೆಗಳನ್ನು ಅರಮನೆಗೆ ಆಗಮಿಸಲಾಗುತ್ತದೆ. ಅಭಿಮನ್ಯ, ವಿಜಯ, ವರಲಕ್ಷ್ಮಿ, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ಗೋಪಿ, ಪ್ರಶಾಂತ್, ಸುಗ್ರೀವ, ಕಂಜನ್, ರೋಹಿತ್, ಲಕ್ಷ್ಮಿ, ಹಿರಣ್ಯ ಸೇರಿ ಒಟ್ಟು 14 ಆನೆಗಳನ್ನು ಫೈನಲ್ ಮಾಡಲಾಗಿದೆ.

Read More

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿಯಲ್ಲಿ ಶಿಕ್ಷಕರ ಕೊರತೆಯಿಂದ ಬಡ ರೈತರ ಮಕ್ಕಳ ಶಿಕ್ಷಣಕ್ಕೆ ತೊಂದರೆ ಉಂಟಾಗಿದೆ. 99 ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಈ ಹಿನ್ನಲೆ ಸರ್ಕಾರಿ ಶಾಲೆಗಳಿಂದ ಮಕ್ಕಳು ದೂರವಾಗುತ್ತಿರುವ ಘಟನೆ ನಡೆದಿದೆ. ಸದ್ಯ ಅತಿಥಿ ಶಿಕ್ಷಕರೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಆಸರೆಯಾಗಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 8 ತಾಲೂಕುಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾಗಿದ್ದ ಸರ್ಕಾರಿ ಶಾಲೆ, ಇದೀಗ ಇದ್ದು, ಇಲ್ಲದಂತಾಗಿದೆ ಎನ್ನುವುದು ಈ ಭಾಗದ ಜನರ ಆರೋಪವಾಗಿದೆ. ಜಿಲ್ಲೆಯ ಚಿಕ್ಕೋಡಿ-8, ರಾಯಬಾಗ – 22, ಮೂಡಲಗಿ-13, ಗೋಕಾಕ್-1, ಅಥಣಿ – 30, ನಿಪ್ಪಾಣಿ–15, ಹುಕ್ಕೇರಿ, ಕಾಗವಾಡ ತಾಲೂಕಿನ ತಲಾ ಐದು ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಒಬ್ಬೊಬ್ಬರೇ ಅತಿಥಿ ಶಿಕ್ಷಕರು ಇಡೀ ಶಾಲೆಯ ಮಕ್ಕಳಿಗೆ ಪಾಠ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

Read More