Subscribe to Updates
Get the latest creative news from FooBar about art, design and business.
- ಔರಾದ: ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ಇಬ್ಬರು ವಿದ್ಯಾರ್ಥಿನಿಯರು ವಿಭಾಗಮಟ್ಟಕ್ಕೆ ಆಯ್ಕೆ
- ಕೊಳ್ಳುರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
- ರಾಜ್ಯ ಸರ್ಕಾರ ಗ್ರಾಮೀಣ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸುವಂತೆ ಸಿದ್ದರಬೆಟ್ಟ ಶ್ರೀಗಳಿಂದ ಒತ್ತಾಯ
- ಯುವಜನತೆಯಲ್ಲಿ ಕನ್ನಡ ಪ್ರೇಮ ಹೆಚ್ಚಾಗಬೇಕು: ಡಾ.ಗೋವಿಂದರಾಯ ಎಂ.
- ಮೊಬೈಲ್ ಗೀಳಿನಿಂದಾಗಿ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗಿದೆ: ಗ್ರಂಥಪಾಲಕ ಎಚ್. ನಾಗರಾಜ
- ಮನೆಗೆ ಬಿದ್ದ ಬೆಂಕಿ: 3 ಲಕ್ಷ ರೂ. ಹಣ ಸಹಿತ ಚಿನ್ನಾಭರಣ ಹಲವು ವಸ್ತುಗಳು ಸುಟ್ಟುಕರಕಲು
- ಮಧುಗಿರಿ ಪಟ್ಟಣದ ಅವ್ಯವಸ್ಥೆ ಕಂಡು ಉಪ ಲೋಕಾಯುಕ್ತ ಬಿ.ವೀರಪ್ಪ ಕಿಡಿ
- ಮೆಕ್ಕೆಜೋಳ, ಹೆಸರುಕಾಳು ಬೆಳೆಗಾರರ ನೆರವಿಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ
Author: admin
ಸಿದ್ದರಾಮಯ್ಯ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ಹೈಕಮಾಂಡ್ ಸ್ಪಷ್ಟಪಡಿಸಿದ ಬೆನ್ನಲ್ಲೇ ಲಿಂಗಾಯತ–ಒಕ್ಕಲಿಗ ಸಮುದಾಯಗಳು ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಒಲವು ತೋರಿವೆ. ಕನ್ನಡ ರಾಜಕಾರಣದ ಮೇಲೆ ನಿರ್ಣಾಯಕ ಪ್ರಭಾವ ಬೀರಿರುವ ಈ ಗುಂಪುಗಳು ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸುವುದಾಗಿ ಕಾಂಗ್ರೆಸ್ ಗೆ ಮಾಹಿತಿ ನೀಡಿವೆ. ಡಿಕೆ ಶಿವಕುಮಾರ್ ಅವರನ್ನು ಬೆಂಬಲಿಸಿ ಸಮುದಾಯದ ಮುಖಂಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಡಿಕೆ ಶಿವಕುಮಾರ್ ಕೂಡ ಸಿದ್ದರಾಮಯ್ಯ ವಿರುದ್ಧ ಲಿಂಗಾಯತರು ಎಂದು ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯಗೆ ಒಂದು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದ್ದು ಈಗ ಅವರ ಸರದಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ ಶಾಸಕರಾಗಿ ಮುಂದುವರಿಯುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇಂದು ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಹಂಚಿಕೆ ವಿಚಾರದಲ್ಲಿ ಸೋನಿಯಾ ಗಾಂಧಿ ಅವರು ನಿರ್ಣಾಯಕ ಮಧ್ಯಸ್ಥಿಕೆ ವಹಿಸುವ ನಿರೀಕ್ಷೆಯಿದೆ. ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿದೆ ಎಂದು ಅಂದಾಜಿಸಿದಾಗ ಸೋನಿಯಾ ಗಾಂಧಿ ಮಧ್ಯಪ್ರವೇಶಿಸಿ ಸಿದ್ದರಾಮಯ್ಯ ಅವರಿಗೆ…
ಆರ್ಥಿಕ ಅಪರಾಧಗಳನ್ನು ಮಾಡುವವರಿಗೆ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವ ಹೊಸ ಕೋಡ್ ಈಗ ಜಾರಿಗೆ ಬರಲಿದೆ. ಇದು ಕೇಂದ್ರೀಯ ತನಿಖಾ ಸಂಸ್ಥೆಯು ರಾಷ್ಟ್ರೀಯ ಆರ್ಥಿಕ ಅಪರಾಧಗಳ ದಾಖಲೆಗಳಲ್ಲಿ ಹಣಕಾಸಿನ ಅಪರಾಧಗಳ ಬಗ್ಗೆ ಮಾಹಿತಿಯನ್ನು ನಮೂದಿಸಿದ ನಂತರ ರಚಿಸಲಾದ ಆಲ್ಫಾ-ಸಂಖ್ಯೆಯ ಸಂಕೇತವಾಗಿದೆ. ಇದನ್ನು ‘ವಿಶಿಷ್ಟ ಆರ್ಥಿಕ ಅಪರಾಧಿ ಕೋಡ್’ ಎಂದು ಕರೆಯಲಾಗುತ್ತದೆ. ಹೊಸ ಕ್ರಮವು ಆರ್ಥಿಕ ಅಪರಾಧವನ್ನು ತನಿಖೆ ಮಾಡುವ ಮೊದಲು ಏಜೆನ್ಸಿಯೊಂದು ಚಾರ್ಜ್ ಶೀಟ್ ಸಲ್ಲಿಸುವವರೆಗೆ ಕಾಯುವ ಪ್ರಸ್ತುತ ಅಭ್ಯಾಸವನ್ನು ಕೊನೆಗೊಳಿಸುತ್ತದೆ. ಆರ್ಥಿಕ ಅಪರಾಧಿಗಳ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಹೊಸ ಕೋಡ್‌ನೊಂದಿಗೆ ಲಿಂಕ್ ಮಾಡುವ ಮೂಲಕ, ಅವರು ಯಾವುದೇ ಹೊಸ ಅಪರಾಧವನ್ನು ಮಾಡಿದರೆ ತಕ್ಷಣವೇ ಬಹು-ಏಜೆನ್ಸಿ ತನಿಖೆಯನ್ನು ಪ್ರಾರಂಭಿಸಬಹುದು. ಒಬ್ಬ ವ್ಯಕ್ತಿಯು ಆರ್ಥಿಕ ಅಪರಾಧವನ್ನು ಎಸಗಿದ್ದರೆ ಏಜೆನ್ಸಿಯು ನೀಡುವ ವಿಶಿಷ್ಟ ಆರ್ಥಿಕ ಅಪರಾಧಿ ಕೋಡ್ ಅನ್ನು ಆಧಾರ್‌ಗೆ ಮತ್ತು ಅಪರಾಧಿ ಕಂಪನಿಯಾಗಿದ್ದರೆ ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಬಹುದು. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಉದ್ಯಮಿ…
ಕೇರಳದ ಸ್ಟೋರಿಯನ್ನು ತಮಿಳುನಾಡಿನಲ್ಲಿ ನಿಷೇಧಿಸಿಲ್ಲ: ತಮಿಳುನಾಡು ಸರ್ಕಾರ ಕೇರಳದ ಸ್ಟೋರಿಯನ್ನು ತಮಿಳುನಾಡಿನಲ್ಲಿ ನಿಷೇಧಿಸಿಲ್ಲ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿತ್ತು. ಆದರೆ ನಕರಾತ್ಮಕ ಪ್ರತಿಕ್ರಿಯೆಗಳ ಹಿನ್ನೆಲೆಯಲ್ಲಿ ಪ್ರದರ್ಶನವನ್ನು ನಿಲ್ಲಿಸಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ದಿ ಕೇರಳ ಸ್ಟೋರಿ ಮೇ 5 ರಂದು ಬಿಡುಗಡೆಯಾಯಿತು. ಇದುವರೆಗಿನ ಅಂದಾಜಿನ ಪ್ರಕಾರ ಚಿತ್ರ ಒಂಬತ್ತು ದಿನಗಳಲ್ಲಿ 100 ಕೋಟಿ ಕ್ಲಬ್ ಪ್ರವೇಶಿಸಿದೆ ಎಂದು ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಮೊದಲ ವಾರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಚಿತ್ರ,ಎರಡನೇ ವಾರದಲ್ಲಿ ಶುಕ್ರವಾರ 12.35 ಕೋಟಿ ಹಾಗೂ ಶನಿವಾರ 19.50 ಕೋಟಿ ರೂ. ಇದು ಭಾರತೀಯ ಬಾಕ್ಸ್ ಆಫೀಸ್ ಅಂಕಿ ಅಂಶವಾಗಿದೆ. ಕೇರಳ ಸ್ಟೋರಿ ಒಟ್ಟು 112.99 ಕೋಟಿ ಕಲೆಕ್ಷನ್ ಮಾಡಿದೆ. ಸುದೀಪ್ತೋ ಸೇನ್ ನಿರ್ದೇಶನದ ಈ ಚಿತ್ರ ಮೊದಲ ದಿನವೇ 7.5 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಈ ಕಲೆಕ್ಷನ್ ಜೊತೆಗೆ ಈ ಚಿತ್ರಕ್ಕೆ ಭಾರೀ ವಿರೋಧ ಕೂಡ…
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಕಸಬಾ ಹೋಬಳಿ ಹುಲೀಕುಂಟೆ ಗ್ರಾಮದ ಅಲೆಮಾರಿಗಳು ಸರ್ಕಾರಿ ಸವಲತ್ತುಗಳಿಂದ ವಂಚಿತವಾಗಿದ್ದು, ಈ ಬಗ್ಗೆ ತಾಲೂಕು ಆಡಳಿತ ಸಮಾಜ ಇಲಾಖೆ ಕಂಡೂ ಕಾಣದಂತೆ ಕಣ್ಣು ಮುಚ್ಚಿಕುಳಿತಿದೆ. ಇಲ್ಲಿ ವಾಸಿಸುತ್ತಿರುವ 25 ಕುಟುಂಬಗಳ ಪೈಕಿ 12ರಿಂದ 15 ಜನಕ್ಕೆ ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಬರುತ್ತಿಲ್ಲ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಮೊದಲಾದ ಅಗತ್ಯ ದಾಖಲೆಗಳನ್ನು ಕೂಡ ನೀಡಲಾಗಿಲ್ಲ. ಕೊರಟಗೆರೆ ತಾಲೂಕು ಆಡಳಿತವು ಅಲೆಮಾರಿ ಸಮುದಾಯಗಳನ್ನು ನಿರ್ಲಕ್ಷ್ಯಿಸಿದ್ದು, ಅಲೆಮಾರಿ ಸಮುದಾಯಗಳ ಹಿತ ಕಾಯಬೇಕಾಗಿದ್ದ ಸಮಾಜ ಕಲ್ಯಾಣ ಇಲಾಖೆ ನಿದ್ದೆಗೆ ಜಾರಿದೆ. ಗ್ರಾಮದಲ್ಲಿ ಅಲೆಮಾರಿಗಳಿಗೆ ಇದುವರೆವಿಗೂ ವೃದ್ದಾಪ್ಯ ವೇತನ, ಅಂಗವಿಕಲ ವೇತನ ಸೌಲಭ್ಯ ಮನೆಗೆ ತಲುಪಿಸಲು ಸಂಬಂಧಪಟ್ಟವರು ಸಂಪೂರ್ಣ ವಿಫಲವಾಗಿದ್ದಾರೆ. ಈ ಹಿಂದಿನ ಕೊರಟಗೆರೆ ತಹಶೀಲ್ದಾರ್ ನಹೀದಾ ಜಂ ಜಂರವರು ಈ ಜನರಿರುವ ಸ್ಥಳಕ್ಕೆ ಸಂಬಂಧಿಸಿದ ನೌಕರರನ್ನು ಕಳುಹಿಸಿ ಸ್ಥಳದಲ್ಲೇ ಬಹುತೇಕ ಮೂಲ ದಾಖಲೆಗಳಾದ ಆಧಾರ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಮಾಡಿಸಿ ಕೊಟ್ಟಿದ್ದು, ಈ ಮಧ್ಯೆ…
ಪಾವಗಡ: ಟೈಯರ್ ಪಂಕ್ಚರ್ ಆದ ಪರಿಣಾಮ ಬಸ್ಸೊಂದು ಅಪಘಾತಕ್ಕೀಡಾದ ಘಟನೆ ಪಾವಗಡ ತಾಲೂಕಿನ ಬಳ್ಳಿ ಬಟ್ಟಲು ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ್ದು, ತುಮಕೂರು ಮತ್ತು ಚಿತ್ರದುರ್ಗ ಮಾರ್ಗವಾಗಿ ಸಂಚರಿಸುವ ಬಸ್ ಅಪಘಾತಕ್ಕೀಡಾಗಿರುವ ಬಸ್ ಆಗಿದೆ. ಮಂಗಳವಾರ ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆ, ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳು ಹೊರತುಪಡಿಸಿ ಯಾವುದೇ ರೀತಿಯ ಗಂಭೀರ ಗಾಯಗಳಾಗಿಲ್ಲ. ಬಸ್ ನ ಮುಂಭಾಗದ ಟೈರ್ ಪಂಚರ್ ಆದ ಪರಿಣಾಮ, ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಹಳ್ಳಕ್ಕೆ ಇಳಿದಿದ್ದು, ಬಸ್ ನ ಮುಂಭಾಗ ಪುಡಿಪುಡಿಯಾಗಿದೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವರದಿ: ನಂದೀಶ್ ನಾಯ್ಕ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುಮಕೂರು: ಸಿಎಂ ಆಯ್ಕೆಯಲ್ಲಿ ಯಾವುದೇ ಕಗ್ಗಂಟು ಇಲ್ಲ, ಯಾವ ಗಂಟು ಇಲ್ಲ ಎಲ್ಲಾ ಸರಾಗವಾಗಿದೆ. 18 ಕ್ಕೆ ಪ್ರಮಾಣ ವಚನ ಆಗಬಹುದು. ನನಗೆ ವಿಶ್ವಾಸ ಇದೆ, ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಒಲವು ಕೂಡ ಅವರ(ಸಿದ್ದರಾಮಯ್ಯ) ಪರವಾಗಿದೆ. ಹೈಕಮಾಂಡ್ ಎಲ್ಲರನ್ನ ಕರೆಸಿ ವಿಶ್ವಾಸ ತೆಗೆದುಕೊಂಡು ಸಮಾನಕರವಾದ ಘಟ್ಟ ತರಬೇಕೆಂಬ ಪ್ರಯತ್ನ ಅಷ್ಟೇ ಎಂದು ಹೇಳಿದ್ದಾರೆ. ಶಿವಕುಮಾರ್ ಕೂಡ ಸಹಕಾರ ಕೊಡ್ತಾರೆಂಬ ವಿಶ್ವಾಸ ಇದೆ. ಸಿಎಂ ವಿಚಾರ ಇಂದು ಪೈನಲ್ ಆಗಲೇಬೇಕು ಎಂದರು. ಸಚಿವ ಸಂಪುಟ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಚಿವ ಸಂಪುಟ ಸ್ವಲ್ಪ ತಡವಾಗಬಹುದು. ಸದ್ಯಕ್ಕೆ ಸಿದ್ದರಾಮಯ್ಯ ಒಬ್ಬರೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದರು. ಮೊದಲ ದಿನವೇ ಕ್ಯಾಬಿನೆಟ್ ಮಾಡ್ತಾರೆ. 10 ಕೆಜಿ ಅಕ್ಕಿ ಘೋಷಣೆ ಮಾಡ್ತಾರೆ. ಅನ್ನಭಾಗ್ಯ ಯೋಜನೆ ಜಾರಿಗೆ ತರೋದೆ ಮೊದಲ ತೀರ್ಮಾನ. ನಾನು ಸಚಿವ ಆಗಲೇಬೇಕು. ಸಹಕಾರ ಸಚಿವ ಸ್ಥಾನವೇ…
ಬೆಂಗಳೂರು: ಹಲಸೂರಿನ ಗೇಟ್ ಸಂಚಾರಿ ಎಎಸ್ ಐ ಮಲಗಿದ್ದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಆನಂದ್ ಕುಮಾರ್ ಮೃತ ಎಎಸ್ ಐ. ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡಿ ಮನೆಗೆ ತೆರಳಿದ್ದ ಆನಂದ್ ಕುಮಾರ್ ಕಳೆದ ರಾತ್ರಿ ಮಲಗಿದ್ದವರು ಅಲ್ಲಿಯೇ ಸಾವನ್ನಪ್ಪಿದ್ದಾರೆ. ನಾಗರಬಾವಿ ಬಳಿಯ ಮನೆಯಲ್ಲಿ ಆನಂದ್ ಕುಮಾರ್ ಮಲಗಿದ್ದ ಸ್ಥಿತಿಯಲ್ಲಿಯೇ ಸಾವನ್ನಪ್ಪಿದ್ದಾರೆ. ಬಳಿಕ ವೈದ್ಯರು ಆನಂದ್ ಕುಮಾರ್ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಿಕ್ಕಬಳ್ಳಾಪುರ: ಎಸ್.ಎಂ ಕೃಷ್ಣ ಅವರ ನಂತರ ರಾಜ್ಯದಲ್ಲಿ ಒಕ್ಕಲಿಗರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ. ಹಾಗಾಗಿ ಒಕ್ಕಲಿಗರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಉತ್ತಮ ಎಂದು ಮಾಜಿ ಸಚಿವ ಡಾ.ಕೆ ಸುಧಾಕರ್ ಹೇಳಿದ್ದು, ಪರೋಕ್ಷವಾಗಿ ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ. ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಂತರ ರಾಜ್ಯದಲ್ಲಿ ಒಕ್ಕಲಿಗರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ. ಹಾಗಾಗಿ ಒಕ್ಕಲಿಗರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಉತ್ತಮ ಎಂದು ವೈಯಕ್ತಿಕವಾಗಿ ಹೇಳಿದ್ದೇನೆ. ಆದ್ರೆ ಅದು ಕಾಂಗ್ರೆಸ್ ಗೆ ಬಿಟ್ಟ ವಿಚಾರ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಉಡುಪಿ: ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಕೇರಳ ಸ್ಟೋರಿ ಚಿತ್ರದ ಪ್ರಚಾರ ಕಾರ್ಯ ನಡೆದಿದೆ. ರಾಷ್ಟ್ರಾದ್ಯಂತ ಭಾರೀ ಚರ್ಚೆ ಎಬ್ಬಿಸಿರುವ ಚಲನಚಿತ್ರದಲ್ಲಿ ಲವ್ ಜಿಹಾದ್ ಕುರಿತು ಬೆಳಕು ಚೆಲ್ಲಲಾಗಿದೆ. ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಕೇರಳದ ಭಕ್ತರೇ ಹೆಚ್ಚು. ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರಬೇಕೆಂದರೆ ಕೇರಳ ಸ್ಟೋರಿ ಚಿತ್ರ ನೋಡಿ ಎಂಬ ಬೋರ್ಡ್ ಕೊಲ್ಲೂರಿಗೆ ಬರುವ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಆಂಗ್ಲ ಭಾಷೆಯಲ್ಲಿ ಬೋರ್ಡ್ ಇದೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಾದ ವಿನೋದ್ ಕೊಲ್ಲೂರು, ವಿಜಯ ಬಳೆಗಾರ್, ಸಂತೋಷ್ ಭಟ್, ಪ್ರಕಾಶ್ ಹಳ್ಳಿ ಬೇರು, ಹರೀಶ್ ಶೆಟ್ಟಿ ನೇತೃತ್ವದಲ್ಲಿ ದೇವಾಲಯದ ದ್ವಾರ ಹಾಗೂ ಆವರಣದ ಎರಡು ಕಡೆ ಬ್ಯಾನರ್ ಅಳವಡಿಸಿದ್ದಾರೆ. ಬ್ಯಾನರ್ ಅಳವಡಿಕೆಗೆ ಪಂಚಾಯತ್ ಪರವಾನಿಗೆ ಕೂಡಾ ಮಾಡಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು: ಕೆರೆಯ ಬಳಿ ಆಟ ಆಡುತ್ತಿದ್ದ ಸಂದರ್ಭ ಆಯತಪ್ಪಿ ನೀರಿಗೆ ಬಿದ್ದು 4 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ. ಆನೇಕಲ್ ತಾಲೂಕಿನ ಗಟ್ಟಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಶಕ್ತಿ (4) ಮೃತ ಬಾಲಕ. ಬಾಲಕನ ಪೋಷಕರು ಮಾಗಡಿ ರಸ್ತೆಯ ಅಗ್ರಹಾರ ಮೂಲದವರಾಗಿದ್ದಾರೆ. ಬಾಲಕ ಪರಪ್ಪನ ಅಗ್ರಹಾರ ಸಮೀಪದ ನಾಗನಾಥಪುರಕ್ಕೆ ತನ್ನ ಅಜ್ಜಿ ಮನೆಗೆಂದು ಬಂದಿದ್ದು, ಕೆರೆ ಬಳಿ ಆಟವಾಡುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಘಟನೆ ನಡೆದ ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದು, ಸುಮಾರು 24 ಗಂಟೆಗಳ ಕಾಲ ಬಾಲಕನಿಗಾಗಿ ಕಾರ್ಯಾಚರಣೆನಡೆಸಿ ಬಾಲಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡುವ ಸಂದರ್ಭ ಪೋಷಕರು ಅಡ್ಡಿಪಡಿಸಿದ್ದಾರೆ. ಕೊನೆಗೆ ಅವರ ಮನವೊಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…