nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅದ್ದೂರಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ: ಈ ಬಾರಿ ಬಾಗಿಲು ಮುಚ್ಚುವಾಗ ತಡವಾಗಿದ್ದೇಕೆ?

    November 11, 2026

    ದೀಪಾವಳಿಯ ಆಕಾಶ ಬುಟ್ಟಿ ಬಿದ್ದು 7 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ: ರೈತನ ಬಾಳಲ್ಲಿ ಕತ್ತಲು!

    November 11, 2026

    ಪಡಿತರ ಚೀಟಿ ಮರು ಇ-ಕೆವೈಸಿ ಗಡುವು ವಿಸ್ತರಣೆ: ನವೆಂಬರ್ 30ರೊಳಗೆ ಪೂರ್ಣಗೊಳಿಸದಿದ್ದರೆ ರದ್ದಾಗಲಿವೆ ಸೌಲಭ್ಯಗಳು!

    November 11, 2026
    Facebook Twitter Instagram
    ಟ್ರೆಂಡಿಂಗ್
    • ಅದ್ದೂರಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ: ಈ ಬಾರಿ ಬಾಗಿಲು ಮುಚ್ಚುವಾಗ ತಡವಾಗಿದ್ದೇಕೆ?
    • ದೀಪಾವಳಿಯ ಆಕಾಶ ಬುಟ್ಟಿ ಬಿದ್ದು 7 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ: ರೈತನ ಬಾಳಲ್ಲಿ ಕತ್ತಲು!
    • ಪಡಿತರ ಚೀಟಿ ಮರು ಇ-ಕೆವೈಸಿ ಗಡುವು ವಿಸ್ತರಣೆ: ನವೆಂಬರ್ 30ರೊಳಗೆ ಪೂರ್ಣಗೊಳಿಸದಿದ್ದರೆ ರದ್ದಾಗಲಿವೆ ಸೌಲಭ್ಯಗಳು!
    • ಟಿವಿ ನೋಡುತ್ತಿರುವಾಗಲೇ ಮನೆಗೆ ನುಗ್ಗಿತು ಚಿರತೆ!: 6 ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆ ಸೆರೆ
    • ಅಂಗವಿಕಲನಂತೆ ನಟಿಸುತ್ತೀಯಾ?: ಭಿಕ್ಷುಕನಿಗೆ ಹಲ್ಲೆ ನಡೆಸಿ, ಪೊಲೀಸರಿಗೆ ಒಪ್ಪಿಸಿದ ಗುಂಪು!
    • ವಿಧವಾ ವೇತನ: ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ!
    • Gmail ಸ್ಟೋರೇಜ್ ಫುಲ್ ಆಗಿದೆಯೇ? ಉಚಿತ 15 GB ಜಾಗ ಖಾಲಿ ಮಾಡಲು ಇಲ್ಲಿವೆ 4 ಸರಳ ವಿಧಾನಗಳು!
    • ಅನ್ನಾ  ಜೊತೆಗಿನ ವೈವಾಹಿಕ ಸಂಬಂಧಕ್ಕೆ ಅಂತ್ಯ ಹಾಡಿದ ಪವನ್ ಕಲ್ಯಾಣ್ : 4ನೇ ಮದುವೆ ಆಗ್ತಾರಾ? ಜ್ಯೋತಿಷಿಗಳ ಭವಿಷ್ಯ ಏನು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಧುಗಿರಿ ಪಟ್ಟಣದ ಅವ್ಯವಸ್ಥೆ ಕಂಡು ಉಪ ಲೋಕಾಯುಕ್ತ ಬಿ.ವೀರಪ್ಪ ಕಿಡಿ
    ಮಧುಗಿರಿ November 22, 2025

    ಮಧುಗಿರಿ ಪಟ್ಟಣದ ಅವ್ಯವಸ್ಥೆ ಕಂಡು ಉಪ ಲೋಕಾಯುಕ್ತ ಬಿ.ವೀರಪ್ಪ ಕಿಡಿ

    By adminNovember 22, 2025No Comments2 Mins Read
    b veerappa

    ಮಧುಗಿರಿ: ಉಪ ಲೋಕಾಯುಕ್ತ ಬಿ.ವೀರಪ್ಪ ಶುಕ್ರವಾರ ಪಟ್ಟಣಕ್ಕೆ ಭೇಟಿ ನೀಡಿ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದರು.

    ಪಟ್ಟಣದ ಖಾಸಗಿ ಬಸ್‌ ನಿಲ್ದಾಣದಲ್ಲಿ ಚರಂಡಿ ಒಳಗೆ ಹೂಳು ತುಂಬಿಕೊಂಡಿದೆ. ಅದನ್ನು ಸ್ವಚ್ಛಗೊಳಿಸದೆ ಮೇಲ್ಬಾಗದಲ್ಲಿ ಬೀಚಿಂಗ್ ಪೌಡರ್ ಹಾಕಲಾಗಿದೆ. ನಿತ್ಯ ಇದೇ ರೀತಿ ಬೀಚಿಂಗ್ ಪೌಡರ್ ಸಿಂಪಡಿಸುತ್ತೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ಬಂದು ಹೋಗುವ ಸ್ಥಳದಲ್ಲಿ ನಾಗರಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ಏಕೆ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಇನ್ನೊಂದು ತಿಂಗಳಲ್ಲಿ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

    ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರೂ, ನಿಯಂತ್ರಣಕ್ಕೆ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದಾಗ, ಪುರಸಭೆ ಮುಖ್ಯಾಧಿಕಾರಿ ಸುರೇಶ್ ಅವರಿಂದ ಸರಿಯಾದ ಉತ್ತರ ಬಾರದ ಕಾರಣ ‘ನಿನ್ನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುತ್ತೇನೆ’ ಎಂದರು.

    ಬಸ್‌ ನಿಲ್ದಾಣಕ್ಕೆ ಬಂದ ಉಪ ಲೋಕಾಯುಕ್ತರು, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ತುಮಕೂರು ಕಾಲೇಜಿಗೆ ತೆರಳಲು ಬಸ್‌ ಗಳ ಸಮಸ್ಯೆ ಇದೆ ಎಂದಾಗ, ತಕ್ಷಣ ಬಸ್ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳನ್ನು ತುಮಕೂರಿಗೆ ಕಳುಹಿಸಿಕೊಟ್ಟರು.

    ಕೆಎಸ್‌ ಆರ್‌ ಟಿಸಿ ಡಿಪೊ ವ್ಯವಸ್ಥಾಪಕರಿಗೆ ಮಕ್ಕಳಿಗೆ ತೊಂದರೆಯಾಗದಂತೆ ಬಸ್ ಕಲ್ಪಿಸಬೇಕು ಎಂದು ಸೂಚಿಸಿದರು.  ಎಆರ್‌ ಟಿಒ ಕಚೇರಿಗೆ ಭೇಟಿ ನೀಡಿಪರಿಶೀಲನೆ ನಡೆಸಿ  ಮಾಹಿತಿ ಪಡೆದರು.  ಇದೇ ವೇಳೆ  ಸೂಕ್ತ ಮಾಹಿತಿನೀಡದ ಎಆರ್‌ ಟಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಆರ್‌ ಟಿಒ ವೀರಣ್ಣ ಹಾಗೂ ಕೆಲವು ಅಧಿಕಾರಿಗಳ ಮೊಬೈಲ್, ಯುಪಿಐ ಆ್ಯಪ್‌ ಗಳನ್ನು ಪರಿಶೀಲಿಸಿದರು.

    ಎಪಿಎಂಸಿ ಆವರಣದಲ್ಲಿ ರೈತರಿಗೆ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಮಾಡಬೇಕು. ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಪಿಎಂಸಿ ಅಧಿಕಾರಿಗೆ ಸೂಚಿಸಿದರು.

    ಪಟ್ಟಣದ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ಸಮಸ್ಯೆ ಆಲಿಸಿದರು.  ಲೋಕಾಯುಕ್ತ ಸಂಸ್ಥೆಯ ಉಪನಿಬಂಧಕ ಎನ್.ಅರವಿಂದ್, ಎಸ್.ಪಿ.ಲಕ್ಷ್ಮೀನಾರಾಯಣ, ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಜಿ.ಪಂ.ಡಿಎಸ್‌ 2 ಸಂಜೀವಪ್ಪ, ಉಪವಿಭಾಗಾಧಿಕಾರಿ ಗೊಟೋರು ಶಿವಪ್ಪ, ತಹಶೀಲ್ದಾರ್ ಶ್ರೀನಿವಾಸ್, ಡಿವೈಎಸ್‌ಪಿ ಮಂಜುನಾಥ್‌, ತಾ.ಪಂ.ಇಒ ಲಕ್ಷ್ಮಣ್ ಹಾಜರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಮಧುಗಿರಿ: ಪಟ್ಟಣದಲ್ಲಿ ಹೊಸ ಬಾರ್‌ ಗಳಿಗೆ ಅನುಮತಿ ಬೇಡ: ಡಾ. ಕೆ.ಎಸ್. ಪಾಂಡುರಂಗಾರೆಡ್ಡಿ

    November 7, 2026

    ನಾವು ಹಳ್ಳಿಗುಗ್ಗುಗಳೇ ಏನಿವಾಗ? :  ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಜೆಡಿಎಸ್ ಕಾರ್ಯಕರ್ತರ ಪ್ರಶ್ನೆ

    November 7, 2026

    ಶಾಲೆ ಬಳಿ ರಸ್ತೆ ಉಬ್ಬು ತೆರವು: ಮಕ್ಕಳ ಸುರಕ್ಷತೆಗೆ ಆತಂಕ,  ಮರು ಅಳವಡಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆ

    November 7, 2026

    Leave A Reply Cancel Reply

    Our Picks

    Gmail ಸ್ಟೋರೇಜ್ ಫುಲ್ ಆಗಿದೆಯೇ? ಉಚಿತ 15 GB ಜಾಗ ಖಾಲಿ ಮಾಡಲು ಇಲ್ಲಿವೆ 4 ಸರಳ ವಿಧಾನಗಳು!

    November 11, 2026

    ಅನ್ನಾ  ಜೊತೆಗಿನ ವೈವಾಹಿಕ ಸಂಬಂಧಕ್ಕೆ ಅಂತ್ಯ ಹಾಡಿದ ಪವನ್ ಕಲ್ಯಾಣ್ : 4ನೇ ಮದುವೆ ಆಗ್ತಾರಾ? ಜ್ಯೋತಿಷಿಗಳ ಭವಿಷ್ಯ ಏನು?

    November 11, 2026

    ರೈಲು ಬೋಗಿಗಳ ಆಯಸ್ಸು ಮುಗಿದ ಬಳಿಕ ಏನಾಗುತ್ತೆ? ರೈಲ್ವೆಯ ಈ ಮರುಬಳಕೆ ತಂತ್ರ ಗೊತ್ತೇ?

    November 10, 2026

    ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?

    November 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಅದ್ದೂರಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ: ಈ ಬಾರಿ ಬಾಗಿಲು ಮುಚ್ಚುವಾಗ ತಡವಾಗಿದ್ದೇಕೆ?

    November 11, 2026

    ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ಹಾಸನದ ವಿಶ್ವಪ್ರಸಿದ್ಧ ಹಾಸನಾಂಬಾ ದೇವಿಯ ಗರ್ಭಗುಡಿ ಬಾಗಿಲನ್ನು ಇಂದು (ನವೆಂಬರ್…

    ದೀಪಾವಳಿಯ ಆಕಾಶ ಬುಟ್ಟಿ ಬಿದ್ದು 7 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ: ರೈತನ ಬಾಳಲ್ಲಿ ಕತ್ತಲು!

    November 11, 2026

    ಪಡಿತರ ಚೀಟಿ ಮರು ಇ-ಕೆವೈಸಿ ಗಡುವು ವಿಸ್ತರಣೆ: ನವೆಂಬರ್ 30ರೊಳಗೆ ಪೂರ್ಣಗೊಳಿಸದಿದ್ದರೆ ರದ್ದಾಗಲಿವೆ ಸೌಲಭ್ಯಗಳು!

    November 11, 2026

    ಟಿವಿ ನೋಡುತ್ತಿರುವಾಗಲೇ ಮನೆಗೆ ನುಗ್ಗಿತು ಚಿರತೆ!: 6 ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆ ಸೆರೆ

    November 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.