Subscribe to Updates
Get the latest creative news from FooBar about art, design and business.
- ಔರಾದ: ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ಇಬ್ಬರು ವಿದ್ಯಾರ್ಥಿನಿಯರು ವಿಭಾಗಮಟ್ಟಕ್ಕೆ ಆಯ್ಕೆ
- ಕೊಳ್ಳುರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
- ರಾಜ್ಯ ಸರ್ಕಾರ ಗ್ರಾಮೀಣ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸುವಂತೆ ಸಿದ್ದರಬೆಟ್ಟ ಶ್ರೀಗಳಿಂದ ಒತ್ತಾಯ
- ಯುವಜನತೆಯಲ್ಲಿ ಕನ್ನಡ ಪ್ರೇಮ ಹೆಚ್ಚಾಗಬೇಕು: ಡಾ.ಗೋವಿಂದರಾಯ ಎಂ.
- ಮೊಬೈಲ್ ಗೀಳಿನಿಂದಾಗಿ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗಿದೆ: ಗ್ರಂಥಪಾಲಕ ಎಚ್. ನಾಗರಾಜ
- ಮನೆಗೆ ಬಿದ್ದ ಬೆಂಕಿ: 3 ಲಕ್ಷ ರೂ. ಹಣ ಸಹಿತ ಚಿನ್ನಾಭರಣ ಹಲವು ವಸ್ತುಗಳು ಸುಟ್ಟುಕರಕಲು
- ಮಧುಗಿರಿ ಪಟ್ಟಣದ ಅವ್ಯವಸ್ಥೆ ಕಂಡು ಉಪ ಲೋಕಾಯುಕ್ತ ಬಿ.ವೀರಪ್ಪ ಕಿಡಿ
- ಮೆಕ್ಕೆಜೋಳ, ಹೆಸರುಕಾಳು ಬೆಳೆಗಾರರ ನೆರವಿಗೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ
Author: admin
ನಿಖಿಲ್ ಕುಮಾರಸ್ವಾಮಿ ಈ ಬಾರಿ ರಾಮನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆದರೆ ಕಾಂಗ್ರೆಸ್ನ ಇಕ್ಬಾಲ್ ಅನ್ಸಾರಿ ವಿರುದ್ಧ ಅವರು ಸೋಲನುಭವಿಸಿದ್ದಾರೆ. ಇದೀಗ ಫೇಸ್ಬುಕ್ ಮೂಲಕ ಸಂದೇಶವೊಂದನ್ನು ಪ್ರಕಟಿಸಿದ್ದಾರೆ. ತಮ್ಮ ಸೋಲಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ತಂದೆ ಕುಮಾರಸ್ವಾಮಿ ಹಾಗೂ ತಾತ ಮಾಜಿ ಪ್ರಧಾನಿ ದೇವೇಗೌಡರಿಂದ ಕಲಿತ ಪಾಠವನ್ನು ಸ್ಮರಿಸಿಕೊಂಡಿದ್ದಾರೆ. ”ನನ್ನನ್ನು ಅತ್ಯಂತ ಪ್ರೀತಿಯಿಂದ ಬೆಂಬಲಿಸಿ ಆಶೀರ್ವದಿಸಿದ ರಾಮನಗರ ವಿಧಾನಸಭೆ ಕ್ಷೇತ್ರದ ಮಹಾಜನತೆಗೆ ನನ್ನ ಶಿರಸಾಷ್ಟಾಂಗ ನಮನಗಳು. ಈ ಒಂದು ಸೋಲು ನಿಮ್ಮ ಸೇವೆ ಮಾಡಬೇಕು ಎನ್ನುವ ನನ್ನ ಅದಮ್ಯ ಸಂಕಲ್ಪಕ್ಕೆ ತಡೆ ಒಡ್ಡಲಾರದು. ನಾನೆಂದೂ ನಿಮ್ಮ ಜತೆಯಲ್ಲೇ ಇರುತ್ತೇನೆ, ನಿಮಗಾಗಿ ಜೀವಿಸುತ್ತೇನೆ. ಸೋಲನ್ನು ಸಮಚಿತ್ತದಿಂದ ಸ್ವಿಕರಿಸಿ ಮುನ್ನಡೆಯುತ್ತೇನೆ. ಅದು ನಾನು ನನ್ನ ಪೂಜ್ಯ ತಾತನವರಾದ ಶ್ರೀ ಹೆಚ್.ಡಿ.ದೇವೇಗೌಡ ಸಾಹೇಬರಿಂದ, ತಂದೆ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಕಲಿತ ಪಾಠ” ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ಕಾಂಗ್ರೆಸ್ ಕರ್ನಾಟಕ ಕುರುಕ್ಷೇತ್ರ ಗೆದ್ದಾಗಿದೆ. ಪ್ರಚಂಡ ಬಹುಮತ ಪಡೆದಿರೋ ಕಾಂಗ್ರೆಸ್ನಲ್ಲಿ ಇದೀಗ ಸಿಎಂ ಕುರ್ಚಿ ಫೈಟ್ ತೀವ್ರಗೊಂಡಿದೆ. ಕೆಪಿಸಿಸಿ ಸಾರಥಿ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದಿದ್ದಾರೆ. ಚುನಾವಣೆಗೂ ಮುನ್ನ ಒಗ್ಗಟ್ಟಿನ ಮಂತ್ರ ಜಪಿಸಿದ ಉಭಯ ನಾಯಕರು ಈಗ ಸಿಎಂ ಕುರ್ಚಿಗೆ ಪಟ್ಟು ಬಿಗಿಗೊಳಿಸಿದ್ದಾರೆ. ಸಿಎಂ ಹುದ್ದೆಯ ಪೈಪೋಟಿ ನಡುವೆಯೂ ಕಾಂಗ್ರೆಸ್ ನಾಯಕರು ಡಿ.ಕೆ.ಶಿವಕುಮಾರ್ ಅವರಿಗೆ ಕೇಕ್ ತಿನ್ನಿಸಿ ಹುಟ್ಟುಹಬ್ಬದ ಶಭಾಶಯ ಕೋರಿದರು. ಸಿಎಂ ಹುದ್ದೆಗೆ ಪೈಪೋಟಿ ಇದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೇಕ್ ತಿನ್ನಿಸಿ, ಶುಭಾಶಯ ತಿಳಿಸಿದರು. ರಾಜ್ಯದ ಮೂಲೆಮೂಲೆಗಳಿಂದ ಕಾರ್ಯಕರ್ತರು, ಮುಖಂಡರು ಹುಟ್ಟುಹಬ್ಬದ ಶುಭಾಶಯ ಹೇಳುತ್ತಿರುವ ಹಿನ್ನೆಲೆ ಟ್ವಿಟ್ ಮೂಲಕ ಧನ್ಯವಾದ ತಿಳಿಸಿದ ಡಿ.ಕೆ.ಶಿವಕುಮಾರ ಅವರು, ನನ್ನ ಜೀವನ ಕರ್ನಾಟಕದ ಜನರ ಸೇವೆಗೆ ಮುಡಿಪಾಗಿದೆ. ನನ್ನ ಹುಟ್ಟುಹಬ್ಬದ ಮುನ್ನಾದಿನದಂದು, ಕರ್ನಾಟಕದ ಜನರು ನನಗೆ ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆಯನ್ನು ನೀಡಿದ್ದಾರೆ ನನ್ನ ಕಾಂಗ್ರೆಸ್ ಕುಟುಂಬಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ನಮ್ಮತುಮಕೂರು.ಕಾಂನ…
ಇಂದು ಮಧ್ಯಾಹ್ನ 1 ಗಂಟೆಗೆ ಕೈ ನಾಯಕರು ದೆಹಲಿಗೆ ತೆರಳುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯಾಹ್ನ 1 ಗಂಟೆ ಬಳಿಕ ದೆಹಲಿಗೆ ತೆರಳಿದ್ದಾರೆ. ಬಹುತೇಕ ಅಧಿಕಾರ ಹಂಚಿಕೆ ಸೂತ್ರಕ್ಕೆ ಹೈಕಮಾಂಡ್ ಮೊರೆ ಹೋಗುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಅಧಿಕಾರ ಹಂಚಿಕೆ ಸೂತ್ರ ಪಾಲನೆಗೆ ಹೆಚ್ಚಿನ ಒತ್ತು ಕೊಡುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಇಬ್ಬರನ್ನೂ ಕೂರಿಸಿಕೊಂಡು ಮಲ್ಲಿಕಾರ್ಜುನ ಖರ್ಗೆ ಮಾತುಕತೆ ನಡೆಸಲಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುಮಕೂರಿನ ಸಿದ್ದಗಂಗಾ ಮಠಕ್ಕೆ ಭಾನುವಾರ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದರು. ಗದ್ದುಗೆಗೆ ನಮಸ್ಕರಿಸಿದ ನಂತರ ಶ್ರೀ ಸಿದ್ದಲಿಂಗ ಸ್ವಾಮೀಜಿಯಿಂದ ಆಶೀರ್ವಾದ ಪಡೆದರು. ಡಿ.ಕೆ.ಶಿವಕುಮಾರ್ ಗೆ ಜೊತೆ ಜಿಲ್ಲಾ ಕಾಂಗ್ರೆಸ್‌ನ ಮುಖಂಡರು ಹಾಜರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು: ಕಾಂಗ್ರೆಸ್ ಇಡೀ ದೇಶದಲ್ಲಿ ಸೋತಿದೆ. ಇದು ಮೋದಿಯವರ ಸೋಲಲ್ಲ. ಮೋದಿಯವರು ಕೇವಲ ಇಲ್ಲಿ ಪ್ರಚಾರಕ್ಕೆ ಬಂದಿದ್ದರು ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಬಿಜೆಪಿ ಕಚೇರಿಯಲ್ಲಿ ಪ್ರಮುಖರು ಎಲ್ಲರು ಸೇರಿ, ಬಹಳ ದೀರ್ಘವಾಗಿ ಫಲಿತಾಂಶದ ಬಗ್ಗೆ ಚರ್ಚೆ ಮಾಡಿದ್ದೇವೆ. ಪಲಿತಾಂಶದ ಬಗ್ಗೆ ಬೇರೆ ಬೇರೆ ಕಡೆಯಿಂದ ಇನ್ನಷ್ಟು ಮಾಹಿತಿ ತರಿಸಿಕೊಂಡು ಚರ್ಚೆ ಮಾಡುತ್ತೇವೆ. ಒಟ್ಟಾರೆ ಪಲಿತಾಂಶದ ಬಗ್ಗೆ ಹಾಗೂ ವಿಧಾನಸಭೆ ಕ್ಷೇತ್ರವಾರು ಪರಾಮರ್ಶೆ ಮಾಡಬೇಕಿದೆ ಎಂದರು. ನಮ್ಮ ಬಿಜೆಪಿ ಅಧ್ಯಕ್ಷರು ಇನ್ನು ಮೂರು ನಾಲ್ಕು ದಿನಗಳೊಳಗೆ ಚುನಾಯಿತ ಪ್ರತಿನಿಧಿಗಳ ಸಭೆ ಕರೆಯುತ್ತಿದ್ದಾರೆ. ಮರುದಿನ ಎಲ್ಲಾ ಅಭ್ಯರ್ಥಿಗಳ ಸಭೆ ಕರೆದು ಚರ್ಚೆ ಮಾಡಲಿದ್ದು, ಅಲ್ಲಿ ಕೂಲಂಕುಷವಾಗಿ ಚರ್ಚೆ ಮಾಡಿ, ಯಾವ ರೀತಿ ಒಗ್ಗಟ್ಡಾಗಿ ಪಕ್ಷ ಬಲವರ್ಧನೆ ಮಾಡಬೇಕೆಂದು ಚರ್ಚೆ ಮಾಡುತ್ತೇವೆ. ನಮಗೆ ಪಕ್ಷ ಸಂಘಟನೆಗೆ ವಿಶ್ರಮ ಇರುವುದಿಲ್ಲ. ಲೋಕಸಭೆ ಚುನಾವಣೆಗೆ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು. ಬಿಜೆಪಿಯ ಸೋಲು ಮೋದಿಯ ಸೋಲು…
ತುಮಕೂರು: ಯಡಿಯೂರಪ್ಪ ಪಕ್ಷದ ಪ್ರಶ್ನಾತೀತ ನಾಯಕರು, ನಾನಾಗಲಿ ಯಡಿಯೂರಪ್ಪನವರಾಗರಾಗಲಿ ಕೆಲವೊಮ್ಮೆ ಅನಿವಾರ್ಯ ಅಲ್ಲ. ವ್ಯಕ್ತಿಗಿಂತ ಪಕ್ಷಮುಖ್ಯ, ನಾವ್ಯಾರು ಪಕ್ಷಕ್ಕೆ ಅನಿವಾರ್ಯ ಅಲ್ಲ ಎಂದು ಮಾಜಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ತಿಪಟೂರು ತಾಲೂಕಿನ ನೋಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಭೇಟಿ ನೀಡಿದ ವೇಳೆ ಮಾತನಾಡಿ, ನಾನು ನೋಣವಿನಕೆರೆ ಮಠದ ಭಕ್ತ. ಅದಕ್ಕೆ ಬಂದು ಪೂಜೆ ಮಾಡಿದ್ದೇನೆ. ಡಿಕೆಶಿ ಕೂಡ ಒಬ್ಬ ಭಕ್ತ ಅವರೂ ಪೂಜೆ ಮಾಡಿದ್ದಾರೆ ಎಂದರು. ಅವರ ಭೇಟಿಗೂ ನನ್ನ ಭೇಟಿಗೂ ಯಾವುದೇ ಸಂಬಂಧ ಇಲ್ಲ. ನಾನು ಚುನಾವಣೆಯಲ್ಲಿ ಸೋತಿದ್ದೇನೆ. ಜನರ ತೀರ್ಪುನ್ನು ಸ್ವೀಕರಿಸಿದ್ದೇನೆ ಎಂದರು. ಸೋಲಿಗೆ ಕಾರಣ ಇನ್ನೇನು ಇಲ್ಲ, ಕಳೆದ ಬಾರಿ ಕಾಂಗ್ರೆಸ್ ಸೋತಿತ್ತು. ಸಿಎಂ ಆಗಿದ್ದರೂ ಸಿದ್ದರಾಮಯ್ಯ ಸೋತಿದ್ದರು ಇದೆಲ್ಲಾ ನಡೆಯುತ್ತಾ ಇರುತ್ತದೆ ಎಂದರು. ಇಂದಿರಾಗಾಂಧಿ, ರಾಜೀವ್ ಗಾಂಧಿ, ವಾಜಪೇಯಿ ಇವರ್ಯಾರು ಇಲ್ಲ. ಆದರೂ ಪಕ್ಷಗಳಿಲ್ವಾ..! ಯಡಿಯೂರಪ್ಪ ಇಳಿಸಿದಕ್ಕೆ ಲಿಂಗಾಯತರು ಬಿಜೆಪಿಯನ್ನ ಸೋಲಿಸಿದರು ಅನ್ನೋದು ಸರಿಯಲ್ಲ ಎಂದರು. ಲಿಂಗಾಯತರನ್ನೆ ಯಾಕೆ ಟಾರ್ಗೆಟ್ ಮಾಡ್ತೀರ.…
ತುಮಕೂರು: ಕಾಂಗ್ರೆಸ್ ಸಿಎಂ ಫೈಟ್ ಆರಂಭಗೊಂಡಿದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನಡುವೆ ಜಿ.ಪರಮೇಶ್ವರ ಹೆಸರು ಮುನ್ನೆಲೆಗೆ ಬಂದಿದೆ. ಇದೇ ವೇಳೆ ತುಮಕೂರು ಜಿಲ್ಲೆಗೆ ಸಿಎಂ ಸ್ಥಾನ ಕೊಡಬೇಕು ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಆಗ್ರಹಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಡಾ.ಜಿ.ಪರಮೇಶ್ವರ ಹಿರಿಯ ನಾಯಕರು. ಅವರಿಗೆ ಸಿಎಂ ಸ್ಥಾನ ಕೊಡಬೇಕು ಅನ್ನೋದು ಜನರ ಅಪೇಕ್ಷೆಯಂತೆ ನಮ್ಮ ಆಗ್ರಹವೂ ಕೂಡ. ಆದರೆ ಎಲ್ಲಾ ನಿರ್ಧಾರವನ್ನು ಹೈ ಕಮಾಂಡ್ ಮಾಡುತ್ತೆ. ನಮ್ದು ಅದೇ ಆಗ್ರಹ. ಸಿನಿಯರ್ ನಾಯಕರು, ಅವರಿಗೆ ಕೊಟ್ಟರೆ ಸಂತೋಷ ಎಂದು ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ಜೆಡಿಎಸ್ ಪರಿಸ್ಥಿತಿ ಕೆಟ್ಟದಾಗಿದೆ. ಅಧಿಕಾರಕ್ಕೆ ಬರದೇ ಇದ್ದರೆ ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ರು. ಈಗ ಪಕ್ಷ ವಿಸರ್ಜನೆ ಮಾಡಿ ತೋರಿಸಲಿ. ಮಂಡ್ಯ ಪರಿಸ್ಥಿತಿ ನೋಡಿದರೆ…ಜನರ ತೀರ್ಮಾನ ಗೊತ್ತಾಗುತ್ತದೆ. ಬರೀ ಬ್ಲಾಕ್ ಮೇಲ್ ಮಾಡೇ ಅವರು ಈ ಸ್ಥಿತಿಗೆ ಬಂದರು. ರಾಮನಗರದಲ್ಲಿನಿಖಿಲ್ ಗೆ ಸೋಲಾಗಿದೆ. ಅಲ್ಲೇ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ, ಮತ್ತೇ ನನ್ನ ಸೋಲಿಸಲು ಹೊರಟಿದ್ರು. ರಾಮನಗರದ ಜನತೆ ತಕ್ಕ ಪಾಠ…
ತಮಗೆಲ್ಲ ಗೊತ್ತಿದೆ, ಈ ಮಠ ನನಗೆ ಪುಣ್ಯ ದೈವ ಕ್ಷೇತ್ರ. ನನಗೆ ಪ್ರತಿಯೊಂದು ಸಂಧರ್ಭದಲ್ಲಿ ಕೂಡ ಗಂಗಾಧರ ಅಜ್ಜ, ಇಲ್ಲಿಯ ಸ್ವಾಮೀಜಿ ನನಗೆ ಮಾರ್ಗದರ್ಶನ ಮಾಡಿದ್ದಾರೆ. ನಾನು ಅಧಿಕಾರ ತೆಗೆದುಕೊಂಡಾಗಿನಿಂದಲೂ, ಯಾರಿಗೆ ಟಿಕೆಟ್ ಕೊಡ್ಬೇಕು, ಯಾರಿಗೆ ಕೊಡ್ಬಾರ್ದು ಅನ್ನೋದನ್ನ ಇಲ್ಲೇ ಮಾರ್ಗದರ್ಶನ ಪಡೆದು ನಿರ್ಧಾರ ಮಾಡಿದ್ದೇನೆ. ನನಗೆ ಸಂಪೂರ್ಣವಾದ ಮಾರ್ಗದರ್ಶನ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ತಿಪಟೂರು ತಾಲೂಕಿನಲ್ಲಿರುವ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ಕಮ್ ಟ್ಯಾಕ್ಸ್, ಐಟಿ ರೇಡ್ ಆದಾಗಲೂ ನಾನು ಅಜ್ಜಯ್ಯನ ಮಾರ್ಗದರ್ಶನ ಪಡೆದಿದ್ದೆ. ಹೆಲಿಕಾಪ್ಟರ್ ದುರಂತ ಆದ ನಂತರ ಕೂಡ ನನ್ನ ಮಗಳು ಇಲ್ಲಿಗೆ ಬಂದು ಹೋದಳು. ನನಗೆ ಮಾನಸಿಕವಾಗಿ ಧೈರ್ಯ ಕೊಟ್ಟವರು ಅಜ್ಜಯ್ಯನವ್ರು. ನಾನು 134 ಸೀಟು ಕೇಳ್ಕೊಂಡಿದ್ದೆ. ಯಾರ ಹಂಗಿನಲ್ಲೂ ನಾವು ಅಧಿಕಾರ ಮಾಡ್ಬಾರ್ದು ಅಂತಾ ಬೇಡ್ಕೊಂಡಿದ್ದೆ. ನಾನು ಅಧಿಕಾರ ಹಿಡಿದಾಗಲೇ, ಹೆಣ್ಣು ಮಕ್ಕಳ ಬಗ್ಗೆ ಹೆಚ್ಚು ಚಿಂತನೆ ಮಾಡ್ಬೇಕು ಅನ್ನೋ ಮಾರ್ಗದರ್ಶನ ಬಂದಿತ್ತು.…
ತುರುವೇಕೆರೆ : ಮೊನ್ನೆ ನಡೆದಂತ ವಿಧಾನಸಭಾ ಚುನಾವಣೆಯಲ್ಲಿ ತುರುವೇಕೆರೆ ಕ್ಷೇತ್ರದ ಮತದಾರರು ನನ್ನನ್ನು 10,000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಶೀಲನನ್ನಾಗಿ ಮಾಡಿದ್ದಾರೆ. ಕ್ಷೇತ್ರದ ಎಲ್ಲಾ ಮತಬಾಂಧವರಿಗೆ ಹಾಗೂ ಕಾರ್ಯಕರ್ತರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪನವರು ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಡನೆ ಮಾತಾಡಿದ ಅವರು, ಒಂದು ಕಡೆ ಹಣಬಲ ಇನ್ನೊಂದು ಕಡೆ ಸ್ವಾಭಿಮಾನ ಹಾಗೂ ಜನಬಲ ನನಗೆ ನನ್ನೊಟ್ಟಿಗೆ ಇದ್ದವರೇ ತೊಂದರೆ ಮಾಡಿ ದ್ರೋಹವೆಸಗಿ ಆರ್ಥಿಕ ಪರಿಸ್ಥಿತಿ ಮಾಡಿ ಅಡ್ಡಿಪಡಿಸಿದಾಗ, ಕಾರ್ಯಕರ್ತರುಗಳು ನನ್ನ ಕೈ ಹಿಡಿದು ಬೂತ್ ಮಟ್ಟದ ಖರ್ಚಿಗೂ ಸಹ ವೆಚ್ಚವನ್ನೇ ಕೇಳದೆ ಅವರೇ ಸ್ವಂತ ಹಣದಿಂದ ಚುನಾವಣೆಯನ್ನು ಮಾಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ದರಿಂದ ಈ ಚುನಾವಣೆಯನ್ನು ನಮ್ಮ ಕಾರ್ಯಕರ್ತರಿಗೆ ಅರ್ಪಣೆ ಮಾಡುತ್ತಿದ್ದೇನೆ. ಈ ಚುನಾವಣೆ ಕೇವಲ ನನ್ನ ಚುನಾವಣೆ ಅಲ್ಲ ಇದು ಕಾರ್ಯಕರ್ತರ ಚುನಾವಣೆಯಾಗಿದೆ. ಎಲ್ಲಾ ಕಾರ್ಯಕರ್ತರಗಳು ಒಗ್ಗೂಡಿ ನನ್ನನ್ನು ಗೆಲ್ಲಿಸಿದ್ದೀರಾ ಬಿಜೆಪಿಯವರು ಹಣ, ಸೀರೆ, ಮದ್ಯ ಎಲ್ಲವನ್ನು ಹಂಚಿದರೂ ಸಹ ಆಸೆ…
ಆನಂದ್, ತಿಪಟೂರು ತಿಪಟೂರು: ತೀರ್ವ ಕುತೂಹಲ ಕೆರಳಿಸಿದ್ದ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ಕಾಂಗ್ರೆಸ್ ನ ಕೆ.ಷಡಕ್ಷರಿ 17662 ಮತಗಳ ಅಂತರದಿಂದ ಜಯಗಳಿಸಿದ್ದು ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಈ ಬಾರಿಯ ವಿಧಾನಸಭಾ ಚುನಾವಣಾ ಕಣದಲ್ಲಿ ತಿಪಟೂರು ಕ್ಷೇತ್ರದಿಂದ ಒಟ್ಟು 12 ಜನರು ಅಭ್ಯರ್ಥಿಗಳೂ ಇದ್ದರು ಇವರಲ್ಲಿ ಕೆ.ಷಡಕ್ಷರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ 71415 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಶಿಕ್ಷಣ ಸಚಿವ ನಾಗೇಶ್ ವಿರುದ್ದ 17662 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ. ಚುನಾವಣೆ ಪ್ರಾರಂಭವಾದಾಗಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಜೋರಾಗಿಯೇ ಸಾಗುತ್ತಿತ್ತು. ಚುನಾವಣೆಗೆ ಕೆಲವೇ ದಿನಗಳಿರುವ ಸಂದರ್ಭದಲ್ಲಿ ನೀಲಕಂಠಸ್ವಾಮಿ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರ ಪುತ್ತಳಿ ಸ್ಥಾಪನೆ ವಿಚಾರವಾಗಿ ನಡೆದ ಸಂಭಾಷಣೆಯ ಸಂಪೂರ್ಣ ಲಾಭ ಮತ್ತು ಕಳೆದ ಬಾರಿ ಶೋಭಾ ಕರಂದ್ಲಾಜೆ ಭಾಷಣ ಮಾಡುವಾಗ ಬಿ.ಸಿ.ನಾಗೇಶ್ ಯಡಿಯೂರಪ್ಪನವರ ಬಲದಿಂದ ಗೆದ್ದು ಅನಂತಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಮತಚಲಾಯಿಸಿದ್ದರು ಎಂಬ ವಿಡಿಯೋ ಲಿಂಗಾಯತರನ್ನು ಕೆರಳಿಸಿತ್ತು. ಇದರ…