Author: admin

ತುರುವೇಕೆರೆ: ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಶಾಸಕ ಎಂ ಟಿ ಕೃಷ್ಣಪ್ಪ ಗೆಲುವಿನ ನಗೆಬೀರಿದ ಹಿನ್ನೆಲೆಯಲ್ಲಿ ಗಗನದ ಎತ್ತರಕ್ಕೆ ಏರಿದ ಬೆಂಬಲಿಗರು ಮತ್ತು ಕಾರ್ಯಕರ್ತರು ಹರ್ಷೋದ್ಘಾರ ಮಾಡಿದರು. ತುರುವೇಕೆರೆ ಕ್ಷೇತ್ರದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಮಸಾಲಾ ಜಯರಾಮ್ ವಿರುದ್ಧ ಜಯಸಾಧಿಸಿದ ಎಂ.ಟಿ.ಕೃಷ್ಣಪ್ಪ, ತುರುವೇಕೆರೆ ಪಟ್ಟಣದಲ್ಲಿ ಕಾರ್ಯಕರ್ತರ ಜಯಭೇರಿ ಬಾರಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಿಂದ ತುರುವೇಕೆರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕುಣಿಯುತ್ತ ಕುಪ್ಪಳಿಸುತ್ತ ಕಾರ್ಯಕರ್ತರು, ಡಿ.ಜೆ. ಶಬ್ದಕ್ಕೆ ಹೆಜ್ಜೆ ಹಾಕುತ್ತಾ ಸಾಗಿದರು. ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಹಾಗೂ ಕೃಷ್ಣಪ್ಪನವರ ಬೆಂಬಲಿಗರು ಜಮಾವಣೆಗೊಂಡು ಮೆರವಣಿಗೆ ನಡೆಸಿದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪಟ್ಟಣದ ದಬ್ಬೇಘಟ್ಟ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಪಡೆದಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾನೂನು ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಪ್ರವೀಣ್ ಗೌಡ ರವರ ಮುಖಂಡತ್ವದಲ್ಲಿ ಪಟಾಕಿಯನ್ನು ಸಿಡಿಸಿ ಸಿಹಿ ಹಂಚುವ ಮುಖಾಂತರ ಸಂಭ್ರಮಾಚರಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಕೆ ಪಿ ಸಿ ಸಿ ಕಾನೂನು ವಿಭಾಗದ ರಾಜ್ಯ ಉಪಾಧ್ಯಕ್ಷ ಪ್ರವೀಣ್ ಗೌಡ ರವರು ಮಾತನಾಡಿ, ಈ ದಿನ ನಮ್ಮ ರಾಜ್ಯದಲ್ಲಿ ಸಾಮಾನ್ಯ ವರ್ಗದವರು, ದೀನ ದಲಿತರು, ಕಾರ್ಮಿಕರು ರೈತರು ಸಂತಸ ಪಡುವಂತಹ ಸುದಿನವಾಗಿದೆ ಎಂದರು. ಎಲ್ಲರೂ ಈ ದಿನವನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾದಂತಹ ದಿನವಾಗಿದೆ , ನಮ್ಮ ಬಡವರ ಬಂಧು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷರು ಡಿ.ಕೆ.ಶಿವಕುಮಾರ್ ಚಾಣಾಕ್ಷರುಗಳ ನೇತೃತ್ವದಲ್ಲಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತವನ್ನು ಪಡೆದಿದ್ದು , ಸರ್ಕಾರವನ್ನು ರಚಿಸುವ ಸಂದರ್ಭವನ್ನು ನಿರ್ಮಿಸಿದ್ದಾರೆ, ದ್ವೇಷದ ರಾಜಕಾರಣವು ಹೋಗಿ ಪ್ರೀತಿಯ ರಾಜಕಾರಣವು ನಿರ್ಮಾಣವಾಗುವ ಸಮಯ ಒದಗಿ ಬಂದಿದೆ,…

Read More

ತುಮಕೂರು: ಪ್ರಪ್ರಥಮವಾಗಿ ಜಿಲ್ಲೆಯ ಮತದಾರರಿಗೆ ಕೃತಜ್ಙತೆ ಹೇಳೋಕೆ ಬಯಸ್ತೇನೆ. ರಾಜ್ಯದ ಜನರು ಸಹ ಕಾಂಗ್ರೆಸನ್ನ ಅತ್ಯದ್ಬುತವಾಗಿ ಗೆಲ್ಲಿಸಿದ್ದಾರೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಗೆ ಕೃತಜ್ಞತೆ ಅಭಿನಂದನೆ ಸಲ್ಲಿಸುತ್ತೇವೆ.  ನಾವು ನಿರೀಕ್ಷೆ ಮಾಡಿದಂತೆ ಈ ಬಾರಿ ಸರ್ಕಾರ ಮಾಡ್ತೀವಿ ಅಂತ ಹೇಳಿದ್ವಿ ಎಂದು ಹೇಳಿದರು. ಇನ್ನುಮುಂದೆ ನಮ್ಮ ವರಿಷ್ಠರು ಏನ್ ಹೇಳ್ತಾರೆ ಅದಕ್ಕೆ‌ ಬದ್ದರಾಗಿರ್ತೇವೆ. ಜಿಲ್ಲೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ಒಂದು ವಿಶ್ವಾಸವಿತ್ತು. ಏಳು ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ ಎಂದರು. ಹೈಕಮಾಂಡ್ ಯಾವ ರೀತಿಯ ಒಂದು ನಿರ್ಧಾರಕ್ಕೆ ಬರಲಿದೆ ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಧುಗಿರಿ: ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯ 40% ಸರ್ಕಾರದಿಂದ ಬೇಸತ್ತ ರಾಜ್ಯದ ಜನಸಾಮಾನ್ಯರು, ಈ ಬಾರಿಯ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಆಶೀರ್ವಾದಿಸಿದ್ದಾರೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು. ನಾನು ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡು 2013 ರಿಂದ 17ರ ಅವಧಿಯಲ್ಲಿ ಶಾಸಕನಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದು, ಎಲ್ಲರ ಕಣ್ಮುಂದೆ ಇದೆ ಆದರೆ ಕಳೆದ 2018 ರ ಚುನಾವಣೆಯಲ್ಲಿ ದುರಾದೃಷ್ಟಕರ ಕ್ಷೇತ್ರದ ಮಹಿಳೆಯರು ಅರಿಶಿಣ, ಕುಂಕುಮ, ಸೀರೆಯ ಅಮಿಷಕ್ಕೆ ಒಳಪಟ್ಟು ನನಗೆ ಕೈಕೊಟ್ಟ ಸಂದರ್ಭದಲ್ಲಿ ನಾನು ಸೋಲು ಕಂಡೆ, ಆದರೆ  2018ರ ಚುನಾವಣೆಯಲ್ಲಿ ಗೆದ್ದ ಶಾಸಕ ಕ್ಷೇತ್ರದ ಸರ್ವೋತ್ತಮುಖ ಅಭಿವೃದ್ಧಿಪಡಿಸಿಲ್ಲ, ಇದನ್ನು ಮನಗಂಡ ಕ್ಷೇತ್ರದ ಜನಸಾಮಾನ್ಯರು, ಈ ಬಾರಿ 2023ರ ಚುನಾವಣೆಯಲ್ಲಿ ನನಗೆ ಮತ್ತೊಮ್ಮೆ ಆಶೀರ್ವದಿಸಿ ಎದುರಾಳಿ ಯಾದ ಜೆ.ಡಿ.ಎಸ್ ಅಭ್ಯರ್ಥಿ ಎಂ ವಿ ವೀರಭದ್ರಯ್ಯ ವಿರುದ್ಧ 32,859 ಮತಗಳಿಂದ ಲೀಡ್ ಕೊಟ್ಟು ನನ್ನನ್ನು ಜಯಶೀಲರನ್ನಾಗಿ ಮಾಡಿದ್ದಾರೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರ…

Read More

ಜೆಡಿಎಸ್ – ಚಿಕ್ಕನಾಯಕನಹಳ್ಳಿ – ಸುರೇಶ್ ಬಾಬು ( Margin – 10042 Margin) – ತುರುವೇಕೆರೆ – ಎಂ.ಟಿ.ಕೃಷ್ಣಪ್ಪ  (Margin -9923) ಬಿಜೆಪಿ – ತುಮಕೂರು ಸಿಟಿ – ಜಿ.ಬಿ.ಜ್ಯೋತಿ ಗಣೇಶ್ (Margin – 3044) -ತುಮಕೂರು ಗ್ರಾಮಾಂತರ – ಬಿ. ಸುರೇಶ್ ಗೌಡ (Margin – 4594) ಕಾಂಗ್ರೆಸ್ – ತಿಪಟೂರು – ಕೆ.ಷಡಕ್ಷರಿ (Margin – 16585) – ಕುಣಿಗಲ್- ಡಾ.ಹೆಚ್.ಡಿ.ರಂಗನಾಥ್  (Margin – 26573) – ಕೊರಟಗೆರೆ – ಡಾ.ಜಿ.ಪರಮೇಶ್ವರ್  (Margin – 12440) – ಗುಬ್ಬಿ- ಎಸ್.ಆರ್.ಶ್ರೀನಿವಾಸ್  (Vasu) (Margin – 8541) – ಸಿರಾ – ಟಿ.ಬಿ.ಜಯಚಂದ್ರ  (Margin – 26633) – ಪಾವಗಡ – ಹೆಚ್.ವಿ.ವೆಂಕಟೇಶ್ (Margin – 10881) – ಮಧುಗಿರಿ- ಕ್ಯಾತಸಂದ್ರ ಎನ್. ರಾಜಣ್ಣ  (Margin – 32859)

Read More

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ ಗೌಡ ಭರ್ಜರಿ ಗೆಲುವು. ತುಮಕೂರು ನಗರದಲ್ಲಿ ಬಿಜೆಪಿ ಜಯಭೇರಿ. ಸತತ ಎರಡನೇ ಬಾರಿ ಬಿಜೆಪಿಯ ಜ್ಯೋತಿ ಗಣೇಶ್ ಗೆಲುವು. 3500 ಮತಗಳ ಅಂತರದಲ್ಲಿ ಗೆಲುವು. ಕೊರಟಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಪರಮೇಶ್ವರ್ ಗೆಲುವು.  ಜೆಡಿಎಸ್ ಅಭ್ಯರ್ಥಿ ಸುಧಾಕರ್ ಲಾಲ್ ವಿರುದ್ಧ ಗೆಲುವು. ಶಿರಾದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಗೆಲುವು, 7 ನೇ ಬಾರಿ ಗೆದ್ದು ಬೀಗಿದ ಜಯಚಂದ್ರ.  20 ಸಾವಿರ ಮತಗಳ ಅಂತರಿಂದ ಜಯಭೇರಿ. ತುರುವೇಕೆರೆಯಲ್ಲಿ ಜೆಡಿಎಡ್ ಮುನ್ನಡೆ -7718:  ಜೆಡಿಎಸ್ ಎಮ್.ಟಿ.ಕೃಷ್ಣಪ್ಪ-48474‌, ಬಿಜೆಪಿ ಮಸಾಲಾ ಜಯರಾಮ್-40756 ಮಧುಗಿರಿ: 2023ರ ಮಧುಗಿರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ 12ನೇ ಸುತ್ತು ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯಾದ ಕೆ ಎನ್ ರಾಜಣ್ಣ ರವರು ಸುಮಾರು 35,100 ಮತಗಳಿಂದ ಮುಂದಿರುವುದು ಕಾಣಬಹುದು, 40 ರಿಂದ 45 ಸಾವಿರ ಲೀಡ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಕೆ ರಾಜಣ್ಣರವರ ಅಭಿಮಾನಿಗಳು ಸಂಭ್ರಮದಿಂದ ಘೋಷಣೆಗಳನ್ನು…

Read More

ಸಿಎಂ ಬೊಮ್ಮಾಯಿ ಅವರು ಇಂದು ಸಂಜೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿದೆ. ಹಾವೇರಿಯಿಂದ ಬೆಂಗಳೂರಿನತ್ತ ಹೊರಡುತ್ತಿರುವ ಬೊಮ್ಮಾಯಿ ಅವರು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲಟ್ ಅವರಿಗೆ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ. ಸದ್ಯ ಬಿಜೆಪಿ 67 ಕ್ಷೇತ್ರಗಳಲ್ಲಿ ಮುನ್ನಡೆಯಲಿದ್ದು, 129 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿವೆ. ಇನ್ನೂ ಜೆಡಿಎಸ್ 21 ಹಾಗೂ 7 ಕ್ಷೇತ್ರಗಳಲ್ಲಿ ಪಕ್ಷೇತರರು ಮುನ್ನಡೆ ಸಾಧಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೊರಟಗೆರೆ 8 ನೇ ಸುತ್ತು ಕಾಂಗ್ರೆಸ್-36451 ಜೆಡಿಎಸ್-28557 ಬಿಜೆಪಿ-11428 ಕಾಂಗ್ರೆಸ್ ಜಿ.ಪರಮೇಶ್ವರ 7894 ಮುನ್ನಡೆ ಚಿಕ್ಕನಾಯಕನಹಳ್ಳಿ. ಕಾಂಗ್ರೆಸ್ ಅಭ್ಯರ್ಥಿ ಕಿರಣ್ ಕುಮಾರ್ ಮುನ್ನಡೆ. 208 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ. ಕಾಂಗ್ರೆಸ್ – 33827 ಜೆಡಿಎಸ್ – 33619 ಬಿಜೆಪಿ – 31169 ಮಧುಗಿರಿ ಹಾಗೂ ಶಿರಾದಲ್ಲಿ ಕಾಂಗ್ರೆಸ್ ಮುನ್ನಡೆ. ಕಾರ್ಯಕರ್ತರಿಂದ ಸಂಭ್ರಮಾಚರಣೆ. ಪಟಾಕಿ ಸಿಡಿಸಿ ಸಂಭ್ರಮಾಚರಣೆ.‌ ತುಮಕೂರು ನಗರ12ನೇ ಸುತ್ತು ಜೆಡಿಎಸ್281ಮತಗಳ ಮುನ್ನಡೆ ಜೆಡಿಎಸ್-34510 ಬಿಜೆಪಿ-33091 ಕಾಂಗ್ರೆಸ್-34229 ತುಮಕೂರು ಗ್ರಾಮಾಂತರ 12ನೇ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ. ಬಿಜೆಪಿ 65241 ಜೆಡಿಎಸ್ 59553 ಬಿಜೆಪಿ ಸುರೇಶ್ ಗೌಡ 5688 ಮತಗಳ ಮುನ್ನಡೆ. ತುಮಕೂರು ಗ್ರಾಮಾಂತರ ಜೆಡಿಎಸ್-59553 ಬಿಜೆಪಿ-65241 5688 ಮತಗಳ ಅಂತರ ಬಿಜೆಪಿ ಮುನ್ನಡೆ ಗುಬ್ಬಿ 7ನೇ ರೌಂಡ್ 2439 ಮತಗಳಿಂದ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ 26358 ಬಿಜೆಪಿ 23919 ಜೆಡಿಎಸ್ 20980 ಚಿಕ್ಕನಾಯಕನಹಳ್ಳಿ 208 ಮತಗಳಿಂದ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್…

Read More

ರಾಜ್ಯದಲ್ಲಿ ಕಾಂಗ್ರೆಸ್​ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೆ ಎಂದು ಎಐಸಿಸಿ ಅಧ್ಯಕ್ಷ ಖರ್ಗೆ ನಿವಾಸದ ಬಳಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ​ ಮೊದಲು ಐದು ಭರವಸೆಗಳನ್ನು ಈಡೇರಿಸಲಿದೆ. ಯಾವುದೇ ಗೊಂದಲವಿಲ್ಲದೆ ಶಾಂತಿಯುತವಾಗಿ ಮತದಾನ ಆಗಿದೆ. ಮೋದಿ, ಬಿಜೆಪಿಯವರು ಗೊಂದಲಕ್ಕೊಳಗಾಗಿದ್ದಾರೆ. ಚುನಾವಣೋತ್ತರ ಸಮೀಕ್ಷೆ ವರದಿ ಸರಿಯಾಗಿದೆ ಎಂದು ಭಾವಿಸಿದ್ದೇನೆ. ಬಿಜೆಪಿ ಸೋಲನ್ನು ಒಪ್ಪಿಕೊಂಡಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ, ಕನ್ನಡಿಗರೇ ನಮಗೆ ಕೇಂದ್ರಬಿಂದು ಎಂದು ಸುರ್ಜೇವಾಲ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕನಕಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ ಹಿನ್ನೆಡೆ ಸಾಧಿಸಿದ್ದು, 9 ಸಾವಿರ ಮತಗಳ ಅಂತರಿಂದ ಕಾಂಗ್ರೆಸ್​ ಅಭ್ಯರ್ಥಿ ಡಿ.ಕೆ ಶಿವಕುಮಾರ್​ ಅವರು ಮುನ್ನಡೆಯಲ್ಲಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರಿಗೆ 4 ಸಾವಿರ ಮತಗಳ ಹಿನ್ನಡೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More