Author: admin

ಚಿಕ್ಕೋಡಿ: ನನಗೆ 1 ಲಕ್ಷ 20 ಸಾವಿರ ಮತಗಳು ನನಗೆ ಬರುವ ನಿರೀಕ್ಷೆ ಇದೆ. 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ನಾನು ಗೆಲ್ಲುತ್ತೇನೆ ಎಂದು ಅಥಣಿ ಕೈ ಅಭ್ಯರ್ಥಿ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ. ಅಥಣಿ ಸ್ವಗೃಹದಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸೇರಿದ ಮೇಲೆ ಈ ಬಾರಿ ಉತ್ಸಾಹ ಹುಮ್ಮಸ್ಸಿನಿಂದ ಚುನಾವಣೆ ಎದುರಿಸಿದ್ದೇನೆ. ಕಾಂಗ್ರೆಸ್ ವೋಟ್ ಬ್ಯಾಂಕ್ ಜೊತೆಗೆ ಬಿಜೆಪಿ ತೊರೆದು ನನ್ನ ಬೆಂಬಲಿಗರು ಬಂದಿದ್ದಾರೆ ಎಂದರು. ಎಕ್ಸಿಟ್ ಪೋಲ್‍ ಗಳಲ್ಲಿ ಕಾಂಗ್ರೆಸ್ ಮುನ್ನೆಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ 35 ವರ್ಷಗಳಿಂದ ಸತತವಾಗಿ ಒಂದೇ ಸರ್ಕಾರ ಎರಡು ಬಾರಿ ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿ ಪಕ್ಷದಲ್ಲಿ ಪ್ರಾಮಾಣಿಕರು ನಿಷ್ಠಾವಂತರಿಗೆ ನಿರ್ಲಕ್ಷ್ಯ ಆಗಿದೆ. ವ್ಯಾಪಾರೀಕರಣದಿಂದ ಬಿಜೆಪಿ ಪಕ್ಷಕ್ಕೆ ಬಹಳ ದೊಡ್ಡ ಹಾನಿಯಾಗಿದೆ. ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ. 5 ಗ್ಯಾರಂಟಿ ಯೋಜನೆಗಳಿಂದ ಬಡವರು, ಕಾರ್ಮಿಕರಿಗೆ ಬಹಳಷ್ಟು ಆಶಾ ಕಿರಣ ಮೂಡಿದೆ. ಬಡವರು ಕಾರ್ಮಿಕರು ಹಾಗೂ ಮಧ್ಯಮ…

Read More

ಶಿವಮೊಗ್ಗ: ರಾಜ್ಯದಲ್ಲಿ ಸಮೀಕ್ಷೆಗಳು ಏನೇ ಹೇಳಲಿ, 115 ಸ್ಥಾನ ಪಡೆದು ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಮಾಜಿ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯ ಶಿಕಾರಿಪುರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ವಿಶ್ವಾಸ ನನಗೆ ಇದೆ. ಮತದಾನದ ನಂತರ ರಾಜ್ಯದ ಉದ್ದಗಲಕ್ಕೂ ನಮ್ಮ ಎಲ್ಲಾ ಮುಖಂಡರೊಂದಿಗೆ ನಾನು ಮಾತನಾಡಿದ್ದೇನೆ. ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿದ್ದೇನೆ. ಆ ಆಧಾರದ ಮೇಲೆ ಸರ್ಕಾರ ರಚನೆ ಮಾಡುವ ವಿಶ್ವಾಸ ಇದೆ ಎಂದರು. ನಾನು ಪ್ರಚಾರಕ್ಕೆ ಹೋದಂತಹ ವೇಳೆ ಸಿಕ್ಕಂತಹ ಜನ ಬೆಂಬಲ ಎಸ್‌ಸಿ, ಎಸ್‌ಟಿಗೆ ಕೊಟ್ಟಂತಹ ಮೀಸಲಾತಿ ಗಮನಿಸಿದಾಗ ಈ ಸಮೀಕ್ಷೆಗಳಿಗೆ ಆಧಾರ ಇರುವುದಿಲ್ಲ. ನಿಶ್ಚಿತವಾಗಿ 115ಕ್ಕೂ ಹೆಚ್ಚು ಸ್ಥಾನ ಪಡೆದು ಸ್ವಂತ ಶಕ್ತಿ ಮೇಲೆ ಸರ್ಕಾರ ರಚನೆ ಮಾಡುತ್ತೇವೆ. ಕಾಂಗ್ರೆಸ್‌ನವರು ಏನೇ ಹೇಳಲಿ ಅದಕ್ಕೆ ನಾನು ಟೀಕೆ ಮಾಡುವುದಿಲ್ಲ. ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ಕೊಟ್ಟಿರುವುದು ನಿಜ. ಒಂದೆರೆಡು ಸಮೀಕ್ಷೆಗಳು ನಮ್ಮ ಪರವಾಗಿಯೂ ಇವೆ ಎಂದು ಹೇಳಿದರು. ಈ…

Read More

ತುರುವೇಕೆರೆ: ತಾಲೂಕಿನ ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೋಳಘಟ್ಟ ಗ್ರಾಮದ ದಲಿತ ಕಾಲೋನಿಯು, 20 ವರ್ಷಕ್ಕೂ ಹೆಚ್ಚು ದಿನದಿಂದ ಮೂಲಸೌಕರ್ಯದಿಂದ ವಂಚಿತವಾಗಿಯೇ ಉಳಿದಿದೆ. ಈ ದಲಿತ ಕಾಲೋನಿಯಲ್ಲಿ ಸುಮಾರು 35ಕ್ಕೂ ಹೆಚ್ಚು ಮನೆಗಳಿದ್ದು, ಈ ಮನೆಗಳಿಗೆ ಅಚ್ಚುಕಟ್ಟಾದ ಚರಂಡಿ ವ್ಯವಸ್ಥೆ ಇಲ್ಲದೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿ ವ್ಯವಸ್ಥೆಯಿಂದ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಲ್ಲುತ್ತಿದೆ ನಿಂತ ನೀರು, ರೋಗಕಾರಕ ಸೊಳ್ಳೆಗಳ ಆವಾಸಸ್ಥಾನವಾಗಿ ಗ್ರಾಮಸ್ಥರುಗಳು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಇದಕ್ಕೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ,  ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ದಲಿತರ ಕಾಲೋನಿಗೆ ಭೇಟಿಕೊಟ್ಟು ಕೇವಲ ಆಶ್ವಾಸನೆಯನ್ನು ಕೊಟ್ಟು ಹಿಂದಿರುಗುತ್ತಿದ್ದಾರೆ. ಆದರೆ ಯಾವುದೇ ಅಭಿವೃದ್ಧಿಯನ್ನು ಕೂಡ ಇಲ್ಲಿ ಮಾಡಿಲ್ಲ. ದಲಿತರನ್ನು ಮೂಲ ಸೌಕರ್ಯದಿಂದ ದೂರ ತಳ್ಳುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಇದೀಗ ಕೇಳಿ ಬಂದಿದೆ. ಇಲ್ಲಿ ಗಮನಿಸಬಹುದಾದ ವಿಷಯ ಏನೆಂದರೆ, ಈ ಜಾಗದಲ್ಲಿ ದಲಿತರು ಬಹಳ ವರ್ಷದಿಂದ ಇಲ್ಲಿಯೇ…

Read More

ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಘೋಷಿಸಿರುವ ‘ಜನಸಂಘರ್ಷ್ ಯಾತ್ರೆ’ ಇಂದು ಆರಂಭವಾಗಿದೆ. ಐದು ದಿನಗಳ ಪ್ರಯಾಣವು ಅಜ್ಮೀರ್‌ನಿಂದ ಪ್ರಾರಂಭವಾಗುತ್ತದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಪೇಪರ್ ಸೋರಿಕೆಯಂತಹ ಸಮಸ್ಯೆಗಳನ್ನು ಎತ್ತಲು “ಜನಸಂಘರ್ಷ್ ಯಾತ್ರೆ” 125 ಕಿ.ಮೀ.ಸಚಿನ್ ಪೈಲಟ್ ಗುರುವಾರ ಬೆಳಗ್ಗೆ ರೈಲಿನಲ್ಲಿ ಜೈಪುರದಿಂದ ಹೊರಡಲಿದ್ದಾರೆ. ರೈಲಿನಲ್ಲಿ ಯುವಕರೊಂದಿಗೆ ಮಾತನಾಡುತ್ತಾ ಅಜ್ಮೀರ್ ತಲುಪಿ. ಅಶೋಕ್ ಉದ್ಯಾನದ ಬಳಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಜೈಪುರಕ್ಕೆ ಕಾಲ್ನಡಿಗೆಯಲ್ಲಿ ತೆರಳಲಿದ್ದಾರೆ. ಪೈಲಟ್ ಮನೆಯಲ್ಲಿ ಜನಸಂಘರ್ಷ ಪಾದಯಾತ್ರೆಗೆ ಮುಖಂಡರು ಸಿದ್ಧತೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಪೈಲಟ್‌ನ ಪ್ರಯಾಣವು ಕಾಂಗ್ರೆಸ್‌ನಲ್ಲಿನ ಒಡಕನ್ನು ಬಹಿರಂಗಗೊಳಿಸಿದೆ. ಪೈಲಟ್ ಶಿಬಿರ ಇದನ್ನು ಭ್ರಷ್ಟಾಚಾರದ ವಿರುದ್ಧದ ಪ್ರಯಾಣ ಎಂದು ಕರೆದರೆ, ಗೆಲೋಟ್ ಶಿಬಿರವು ಅದನ್ನು ಅಶಿಸ್ತು ಎಂದು ಬಣ್ಣಿಸಿದೆ. ರಾಹುಲ್ ಗಾಂಧಿಯಿಂದ ಹಿಡಿದು ಪ್ರಿಯಾಂಕಾ ಗಾಂಧಿ ಮತ್ತು ಸೋನಿಯಾ ಗಾಂಧಿವರೆಗೆ ಎರಡು ಗುಂಪುಗಳನ್ನು ಸಮನ್ವಯಗೊಳಿಸಲು ಹಲವು ಬಾರಿ ಪ್ರಯತ್ನಗಳು…

Read More

ಚಿಕ್ಕಮಗಳೂರು:  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅನಾರೋಗ್ಯದಿಂದ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬುಧವಾರ ಮಧ್ಯರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿ.ಟಿ ರವಿ ಅವರಿಗೆ ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡಿತ್ತು. ಕಳೆದ 15 ದಿನಗಳಿಂದಲೂ ಆಸ್ಪತ್ರೆ ಸೇರಿದ್ದ ಅವರು, ಲಿಂಗಾಯತ ಸಮಾವೇಶಕ್ಕೂ ಗೈರಾಗಿ, ವೀಡಿಯೋ ಮೂಲಕ ಮತಯಾಚನೆ ಮಾಡಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಚಿಕಿತ್ಸೆಗಾಗಿ ಮತ್ತೆ ಆಸ್ಪತ್ರೆ ಸೇರಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಹೊರಟ್ಟಿದ್ದು ,ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಅವರ ಪತ್ನಿ ಜಿಲ್ ಬಿಡೆನ್ ಅವರು ಜೂನ್ 22 ರಂದು ಶ್ವೇತಭವನದಲ್ಲಿ ನರೇಂದ್ರ ಮೋದಿ ಅವರಿಗೆ ಔತಣಕೂಟವನ್ನು ಏರ್ಪಡಿಸಲಿದ್ದಾರೆ ಎಂದು ಶ್ವೇತಭವನದ ಹೇಳಿಕೆಯ ಮೂಲಕ ಪ್ರಕಟಿಸಲಾಗಿದೆ. ಬಿಡೆನ್ ಅವರ ಆಹ್ವಾನದ ಮೇರೆಗೆ ಮೋದಿ ಅಧಿಕೃತ ಭೇಟಿಗಾಗಿ ಅಮೆರಿಕಕ್ಕೆ ಬರುತ್ತಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಮೋದಿಯವರ ಅಮೆರಿಕ ಭೇಟಿಯನ್ನು ದೃಢಪಡಿಸಿದೆ. ಭಾರತದೊಂದಿಗಿನ ಬಾಂಧವ್ಯವನ್ನು ಬಲಪಡಿಸುವುದು ಮತ್ತು ಭಾರತದ ರಕ್ಷಣಾ ಕ್ಷೇತ್ರ ಸೇರಿದಂತೆ ರಷ್ಯಾದ ನಿರಂತರ ಪಾಲ್ಗೊಳ್ಳುವಿಕೆಗೆ ಪರ್ಯಾಯವನ್ನು ಒದಗಿಸುವುದು ಯುಎಸ್ ನ ಕ್ರಮವಾಗಿದೆ. ತಂತ್ರಜ್ಞಾನ, ಕೈಗಾರಿಕೆ ಮತ್ತು ವ್ಯಾಪಾರದಂತಹ ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಕುರಿತು ಮೋದಿ-ಬಿಡೆನ್ ಸಭೆಯಲ್ಲಿ ಚರ್ಚಿಸಲಾಗುವುದು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ರಾಜಸ್ಥಾನ ಕಾಂಗ್ರೆಸ್‌ನಲ್ಲಿನ ಆಂತರಿಕ ಕಲಹವನ್ನು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ. ಮುಖ್ಯಮಂತ್ರಿಗೆ ಸ್ವಂತ ಶಾಸಕರ ಮೇಲೆ ನಂಬಿಕೆ ಇಲ್ಲ, ಶಾಸಕರಿಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಇದು ಯಾವ ರೀತಿಯ ಸರ್ಕಾರ ಎಂದು ಪ್ರಧಾನಿ ಪ್ರಶ್ನಿಸಿದರು. ರಾಜಸ್ಥಾನದ ಮೌಂಟ್ ಅಬುದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ರಾಜ್ಯ ಕಾಂಗ್ರೆಸ್‌ನಲ್ಲಿನ ಆಂತರಿಕ ಕಚ್ಚಾಟವನ್ನು ಲೇವಡಿ ಮಾಡಿದರು. ರಾಜಸ್ಥಾನ ಸರ್ಕಾರದಲ್ಲಿ ಎಲ್ಲರೂ ಪರಸ್ಪರ ನಿಂದಿಸಲು ಪೈಪೋಟಿಯಲ್ಲಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಯೇ ದೊಡ್ಡ ಬಿಕ್ಕಟ್ಟು. ಐದು ವರ್ಷಗಳಿಂದ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇದೇ ವೇಳೆ ರಾಜಸ್ಥಾನದ ಅಭಿವೃದ್ಧಿಯನ್ನು ಯಾರು ನೋಡಿಕೊಳ್ಳುತ್ತಾರೆ? ಎಂದು ಮೋದಿ ಪ್ರಶ್ನಿಸಿದರು. ಕಾಂಗ್ರೆಸ್ ಆಡಳಿತದಲ್ಲಿ ಇಂದು ರಾಜಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗಂಭೀರ ಅಪರಾಧಗಳು ಅಪರೂಪವಾಗಿ ಕೇಳಿಬರುತ್ತಿದ್ದ ರಾಜಸ್ಥಾನದಲ್ಲಿ ಇಂದು ಅಪರಾಧಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ವೋಟ್ ಬ್ಯಾಂಕ್‌ಗಳ ದಾಸ್ಯದಲ್ಲಿರುವ ಕಾಂಗ್ರೆಸ್‌ಗೆ ಕ್ರಮ ಕೈಗೊಳ್ಳಲು ಭಯವಾಗುತ್ತಿದೆ. ಬುಡಕಟ್ಟು ಸಮುದಾಯವು ವರ್ಷಗಳಿಂದ ಕಾಂಗ್ರೆಸ್ ಅನ್ನು ನಂಬಿದೆ, ಆದರೆ ಅವರಿಗೆ ಏನು…

Read More

ಪೂರ್ವ ಉಕ್ರೇನ್‌ನ ಚಾಸಿವ್ ಯಾರ್ ಬಳಿ ರಾಕೆಟ್ ದಾಳಿಯಲ್ಲಿ ಫ್ರೆಂಚ್ ಪತ್ರಕರ್ತರೊಬ್ಬರು ಸಾವನ್ನಪ್ಪಿದ್ದಾರೆ. ಎಎಫ್‌ಪಿಯ ಉಕ್ರೇನ್ ವಿಡಿಯೋ ಸಂಯೋಜಕ ಅರ್ಮಾನ್ ಸೋಲ್ಡಿನ್ (32) ಸಾವನ್ನಪ್ಪಿದ್ದಾರೆ. ರಷ್ಯಾ-ಉಕ್ರೇನ್ ಘರ್ಷಣೆಯ ಕೇಂದ್ರ ಬಿಂದುವಾಗಿರುವ ಬಖ್‌ಮುತ್ ಬಳಿಯ ಪಟ್ಟಣದಲ್ಲಿ ಮಂಗಳವಾರ ಸಂಜೆ 4:30ಕ್ಕೆ ಈ ದಾಳಿ ನಡೆದಿದೆ. ಗ್ರಾಡ್ ರಾಕೆಟ್ ದಾಳಿಯು ಉಕ್ರೇನಿಯನ್ ಸೈನಿಕರ ಜೊತೆಯಲ್ಲಿದ್ದ AFP ತಂಡದ ಮೇಲೆ ಆಗಿತ್ತು. ಸೋಲ್ಡಿನ್ ಅವರು ನಿಂತಿದ್ದ ಸ್ಥಳದ ಬಳಿ ರಾಕೆಟ್‌ನಿಂದ ಕೊಲ್ಲಲ್ಪಟ್ಟರು. ತಂಡದ ಉಳಿದ ಆಟಗಾರರು ಯಾವುದೇ ಹಾನಿಗೊಳಗಾಗಲಿಲ್ಲ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೋಲ್ಡ್ ಅವರಿಗೆ ಗೌರವ ಸಲ್ಲಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೀದರ್: ಒಂದು ಏಜೆನ್ಸಿ ಮೊತ್ತೊಂದು ಏಜೆನ್ಸಿಗಳ ನಡುವೆ ಪಕ್ಷಗಳ ಸೀಟುಗಳಿಸುವ ಅಂತರ ದೊಡ್ಡದಿದೆ ಹೀಗಾಗಿ ಇಂತಹ ಎಕ್ಸಿಟ್ ಪೋಲ್‍ ಗಳ ಬಗ್ಗೆ ನನಗೆ ಸಂಪೂರ್ಣವಾದ ನಂಬಿಕೆ ಇಲ್ಲ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ ಹೇಳಿದ್ದಾರೆ. ಬೀದರ್ ನಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದಲ್ಲಿ ಸ್ಪಷ್ಟವಾಗಿ ಬಿಜೆಪಿ ಪೂರ್ಣ ಬಹುಮತದ ಸರ್ಕಾರ ಬರುತ್ತೆ. ಯಾಕೆಂದರೆ ಕರ್ನಾಟಕದ ಮತದಾರರು ಬಿಜೆಪಿಗೆ ಆರ್ಶೀವಾದ ಮಾಡಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು. ನಾನು ಅನೇಕ ಎಕ್ಸಿಟ್ ಪೋಲ್‍ಗಳು ನೋಡಿದ್ದೇನೆ. 2014 ಹಾಗೂ 2019 ರಲ್ಲಿ ನಾನು ಸೋಲುತ್ತೆನೆ ಎಂದು ಎಕ್ಸಿಟ್ ಪೋಲ್ ಬಂದಿತ್ತು. ಆದರೆ ನಾನು ಗೆಲುವು ಸಾಧಿಸಿದ್ದೆ ಎಂದರು. ರಾಜ್ಯದಲ್ಲಿ ಪ್ರಧಾನಿ ಮಂತ್ರಿಗಳ, ಅಮಿತ್ ಶಾ, ನಡ್ಡಾ ಮಾಡಿದ ರೋಡ್ ಶೋ ಹಾಗೂ ಬಹಿರಂಗ ಸಮಾವೇಶಗಳು ಮತಗಳಾಗಿ ಪರಿವರ್ತನೆಯಾಗಿದೆ ಎಂದರು. ಕಾಂಗ್ರೆಸ್ ಕೇವಲ ಗ್ಯಾರೆಂಟಿ ಕಾರ್ಡ್ ಮೇಲೆ ಮತ ಕೇಳಿದ್ದು ಗ್ಯಾರಂಟಿ ಕಾರ್ಡ್‍ಗಳು ಜನರ ಮನಸ್ಸಿಗೆ ತಟ್ಟಿಲ್ಲಾ ಜೊತೆಗೆ ಕಾಂಗ್ರೆಸ್‍ನ ತುಷ್ಠೀಕರಣ ರಾಜಕಾರಣವನ್ನು…

Read More

ಮೈಸೂರು: ನಾನು ಜನರ ನಾಡಿಮಿಡಿತ ಅರ್ಥಮಾಡಿಕೊಂಡಿರುವುದು ಸರಿಯಿದೆ. ನಾನೇನು ಫಲಿತಾಂಶದ ನಿರೀಕ್ಷೆ ಮಾಡಿದ್ದೆನೋ ಅದೇ ಫಲಿತಾಂಶ ಬರಲಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು. ಕರಾವಳಿ ಭಾಗದಲ್ಲಿ ಈ ಬಾರಿ ನಮ್ಮ ಸೀಟು ಹೆಚ್ಚಾಗಲಿದೆ. ಬಜರಂಗದಳ ವಿಚಾರ ಒಂದು ವಿವಾದದ ವಿಚಾರವೇ ಅಲ್ಲ. ನಾವು ನಮ್ಮ ಪ್ರಣಾಳಿಕೆಯಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ಬಿಜೆಪಿಯವರು ಅದನ್ನು ಅಪಪ್ರಚಾರ ಮಾಡಿದರು ಎಂದು ವಾಗ್ದಾಳಿ ಮಾಡಿದರು. ಈ ಬಾರಿ ಕಾಂಗ್ರೆಸ್ಗೆ ಬಹುಮತ ಬರಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ನಿವಾಸದಲ್ಲಿ ಮಾತನಾಡಿದ ಅವರು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 130ರಿಂದ 150 ಸ್ಥಾನ ಗೆಲ್ಲುತ್ತೆ. ಕರಾವಳಿ ಭಾಗದಲ್ಲೂ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More