Author: admin

ದಾವಣಗೆರೆ: ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ  ಶಾಸಕ ರೇಣುಕಾಚಾರ್ಯ ಹಾಗೂ ಅವರ ಸಹೋದರ ಸೇರಿದಂತೆ   11 ಮಂದಿಯ ವಿರುದ್ಧ ಕೆಟಿಜೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.  ಎಂ.ಪಿ ರೇಣುಕಾಚಾರ್ಯ ಅವರ ಸಹೋದರ ದ್ವಾರಕೇಶ್ವರಯ್ಯ ಸೇರಿದಂತೆ 11 ಮಂದಿಯ ವಿರುದ್ಧ ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಆರೋಪದಡಿ, ದಲಿತ ಮುಖಂಡ ಹೆಗ್ಗೆರೆ ರಂಗಪ್ಪ ದಾವಣಗೆರೆಯ ಕೆಟಿಜೆ ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಐಪಿಸಿ ಸೆಕ್ಷನ್ 143, 147, 504, 506 ಮತ್ತು 149 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎಂ.ಪಿ ರೇಣುಕಾಚಾರ್ಯ ಅವರ ಸಹೋದರ ದ್ವಾರಕೇಶ್ವರಯ್ಯ ಅವರು, ಬೇಡ ಜಂಗಮ ಎಂದು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು : ಟೌನ್ ಹಾಲ್ ಸರ್ಕಲ್ ನಲ್ಲಿ ಎಲ್ಲಾ ಸಮುದಾಯದ ಮುಖಂಡರು ಮತ್ತು ಪ್ರಗತಿಪರ ಚಿಂತಕರು ಸೇರಿ ಬೇವು ಬೆಲ್ಲ ಹಾಗೂ ಒಬ್ಬಟ್ಟನ್ನು ತಿಂದು ಪರಸ್ಪರ ಸಾಮರಸ್ಯವನ್ನು ಸಾರಿದರು. ಈ ನಡುವೆ ರಾಜ್ಯದಲ್ಲಿ ಜಾತ್ರೆ ಮುಂಗಟ್ಟುಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಕೆಲವು ಕಿಡಿಗೇಡಿಗಳು ನಿರ್ಬಂಧ ಹೇರಿರುವುದು ಮತ್ತು ಹಲಾಲ್ ಕಟ್, ಜಟ್ಕಾ ಕಟ್ ಹೆಸರಿನಲ್ಲಿ ದ್ವೇಷ ವನ್ನು ಹರಡಿಸುತ್ತ  ರಾಜ್ಯದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸ್ಲಂ ಜನಾಂದೋಲನದ ರಾಜ್ಯ ಅಧ್ಯಕ್ಷರಾದ ನರಸಿಂಹಮೂರ್ತಿ,  ಜನರನ್ನು ಭಾವೋದ್ವೇಗಕ್ಕೆ ಒಳ ಪಡಿಸುವ ಕೆಲಸವನ್ನು ಸರ್ಕಾರಿ ಪ್ರಾಯೋಜಕತ್ವದಲ್ಲಿ  ಮಾಡುತ್ತಿದ್ದಾರೆ.  ಸರ್ಕಾರ ಸಂಘಪರಿವಾರಕ್ಕೆ ಬೆಂಬಲವಾಗಿ ನಿಂತಿದೆ ಎಂದರು. ಡಾ. ಅರುಂಧತಿ ಮಾತನಾಡಿ, ನಮ್ಮ ಸುತ್ತಮುತ್ತ ನಡೆಯುತ್ತಿರುವ ಸಂಗತಿಗಳನ್ನು ನೋಡಿ ನಾಚಿಕೆಯಾಗುತ್ತಿದೆ. ನಮ್ಮ ದೇಶದ ಧರ್ಮ ಆಚರಣೆಗಳನ್ನು ನಮ್ಮ ಮನೆಗಳಲ್ಲಿ ಸೀಮಿತ ಮಾಡಿಕೊಳ್ಳಬೇಕು. ಧರ್ಮಗಳು ಮನುಷ್ಯನಿಗೆ ಬೇಕು ಆಚರಣೆಗಳು ಬೇಕು ನಮ್ಮ ಧರ್ಮದ ಆಚರಣೆಗಳು ನಮ್ಮ ಮನೆಯ ಒಳಗೆ ಇದ್ದರೆ ತುಂಬಾ ಒಳ್ಳೆಯದು…

Read More

ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 12 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಶನಿವಾರ ತಡರಾತ್ರಿ ಬಂಧಿಸಿದ್ದು, ಸಮುದ್ರದ ಗಡಿ ಉಲಂಘನೆ ಆರೋಪದಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ತಮಿಳುನಾಡು ಮೀನುಗಾರಿಕೆ ಇಲಾಖೆ ಅಧಿಕಾರಿ ಈ ಮಾಹಿತಿ ನೀಡಿದ್ದಾರೆ. ರಾಮನಾಥಪುರಂ ಸಂಸದ ಕೆ.ನವಾಸ್ ಕಣಿ ಅವರು ಈ ವಿಷಯವನ್ನು ವಿದೇಶಾಂಗ ಸಚಿವಾಲಯ ಗಮನಕ್ಕೆ ತಂದು ಲಂಕಾ ದೌರ್ಜನ್ಯ ತಡೆಯಿರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾರ್ಚ್ 29 ರಿಂದ ಲಂಕಾ ನೌಕಾಪಡೆಯು ಸಮುದ್ರ ಗಡಿ ಉಲ್ಲಂಘನೆಯ ಆರೋಪದ ಮೇಲೆ ಭಾರತೀಯ ಮೀನುಗಾರರನ್ನು ಮೂರನೇ ಬಾರಿಗೆ ಬಂಧಿಸಲಾಗುತ್ತಿದೆ. ಮಂಗಳವಾರ ಮತ್ತು ಗುರುವಾರ ಒಟ್ಟು ಏಳು ಮೀನುಗಾರರನ್ನು ಬಂಧಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತುಮಕೂರು:  ರಾಜ್ಯದಲ್ಲಿ ಹಲಾಲ್ ಕಟ್ ಜಟ್ಕಾ ಕಟ್ ವಿವಾದ ನಡೆಯುತ್ತಿದ್ದರೆ, ಇತ್ತ ಹೊಸ ತೊಡಕಿಗೆ ಜನರು ಗುಡ್ಡೆ ಮಾಂಸ ಖರೀದಿಗೆ ಮುಗಿ ಬಿದ್ದಿದ್ದು, ಹೊಸ ತೊಡಕಿನ ದಿನ ಹಲಾಲ್ ಕಟ್ ವಿವಾದ ಪರಿಣಾಮ ಬೀರಲಿಲ್ಲ.  ನಗರದಲ್ಲಿ ಹಿಂದೂ ಮುಸ್ಲಿಂ ಎನ್ನುವ ಬೇಧವಿಲ್ಲದೆ, ಮಾಂಸ ಖರೀದಿಗೆ ಮುಗಿಬಿದ್ದಿದ್ದರು. ಜಗನ್ನಾಥರ, ಸಿರಾಗೇಟ್ ಸೇರಿದಂತೆ ವಿವಿಧೆಡೆ ದೊರೆಯುವ ಗುಡ್ಡೆ ಮಾಂಸ ಖರೀದಿಗೆ ಗ್ರಾಹಕರು ಹೆಚ್ಚಿನ ಒತ್ತು ನೀಡಿರುವುದು ಕಂಡು ಬಂದಿದೆ.  ನಗರದಲ್ಲಿ 700 ರೂಪಾಯಿಗೆ ಉತ್ತಮ ಗುಣಮಟ್ಟದ ಗುಡ್ಡೆ ಮಾಂಸ ಸಿಗುತ್ತಿದ್ದು, ಗ್ರಾಹಕರು ಧಾರ್ಮಿಕ ಭೇದ ಭಾವಗಳಿಲ್ಲದೇ ಮುಂಜಾನೆಯಿಂದಲೇ ಮಾಂಸ ಖರೀದಿಗೆ ಮುಗಿ ಬಿದ್ದರು.  ಕಳೆದೆರಡು ವರ್ಷಗಳಿಂದ ಕೊವಿಡ್ ನಿಂದಾಗಿ ಹಬ್ಬದ ಸಂಭ್ರಮ ಕಳೆಗುಂದಿತ್ತು. ಈ ಬಾರಿ ಯುಗಾದಿ ಆರಂಭದಲ್ಲಿಯೇ ಜಟ್ಕಾ ಕಟ್ ವಿವಾದ, ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ಜಟ್ಕಾ ಮತ್ತು ಹಲಾಲ್ ಕಟ್ ವಿವಾದ ಯಾವುದೇ ಪರಿಣಾಮ ಬೀರಿಲ್ಲ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ಬೆಂಗಳೂರು: ಫ್ಯಾಕ್ಟರಿಯಲ್ಲಿ ಯಂತ್ರಕ್ಕೆ ಸಿಲುಕಿ ಯುವತಿ ದಾರುಣವಾಗಿ ಸಾನ್ನಪ್ಪಿದ ಘಟನೆ ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ನಾಯಂಡಹಳ್ಳಿ ಸಮೀಪವಿರುವ ಝಡ್.ಎಸ್. ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಈ ಘಟನೆ ನಡೆದಿದ್ದು, ಮಾಲಿಕನ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. 28 ವರ್ಷ ವಯಸ್ಸಿನ ಶಾಜಿಯಾ ಎಂಬವರು ಮೃತಪಟ್ಟ ಯುವತಿಯಾಗಿದ್ದು,  ಘಟನೆ ಸಂಬಂಧ ಮಾಲೀಕ ಜೀಶಾಮ್ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಅಹ್ಮದಾಬಾದ್:‌ ಆಮ್‌ ಆದ್ಮಿ ಪಕ್ಷದ (AAP) ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಹಾಗೂ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಸಾಬರಮತಿ ಆಶ್ರಮಕ್ಕೆ ಶನಿವಾರ ಭೇಟಿ ನೀಡಿದ್ದಾರೆ. ಬಿಜೆಪಿ ಆಡಳಿತವಿರುವ ಗುಜರಾತ್‌ ನಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಮತ್ತು ಮಾನ್‌ ಭೇಟಿ ಮಹತ್ವ ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿಯೂ ಆಗಿರುವ ಕೇಜ್ರಿವಾಲ್‌ ಅವರು ಚುನಾವಣೆ ವೇಳೆಗೆ ತಳಮಟ್ಟದಿಂದ ಪಕ್ಷ ಸಂಘಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಮಹಾತ್ಮ ಗಾಂಧಿಯವರು ಸಾಬರಮತಿ ಆಶ್ರಮದ ಆವರಣದಲ್ಲಿ ಉಳಿದುಕೊಳ್ಳುತ್ತಿದ್ದ ಸ್ಥಳವಾದ ಹೃದಯ್ ಕುಂಜ್‌ ಮತ್ತು ಅಲ್ಲಿನ ವಸ್ತು ಸಂಗ್ರಹಾಲಯಗಳಿಗೆ ಕೇಜ್ರಿವಾಲ್‌ ಮತ್ತು ಮಾನ್ ಭೇಟಿ ನೀಡಿದರು. ಹಾಗೆಯೇ, ಗಾಂಧೀಜಿ ಅವರ ಪ್ರತಿಮೆಗೆ ನಮಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಬೆಂಗಳೂರು: ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದಂತೆ ಯುಗಾದಿ ಆಚರಿಸುವಂತೆ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ರಾಜ್ಯದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ. ಯುಗಾದಿ ಸಂಭ್ರಮದ ನಡುವೆಯೇ ರಾಜ್ಯದಲ್ಲಿ ಹಲಾಲ್ ಹಾಗೂ ಜಟ್ಕಾ ಕಟ್ ವಿವಾದ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಹಬ್ಬ ಆಚರಿಸಿ ಎಂದು ಬೊಮ್ಮಾಯಿ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಎಲ್ಲಾ ಜಿಲ್ಲಾ ಎಸ್ ಪಿ ಹಾಗೂ ಡಿಸಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಕಳೆದ 12 ದಿನಗಳಿಂದ ದೇಶದಲ್ಲಿ ಪ್ರತಿದಿನ ಪೆಟ್ರೋಲ್ ಡಿಸೇಲ್ ದರ ಏರಿಕೆಯಾಗುತ್ತಲೇ ಇದೆ. ಇಂದು ಕೂಡ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ತಲಾ 80 ಪೈಸೆಯಷ್ಟು ಏರಿಕೆಯಾಗಿದೆ. ಕಳೆದ 12 ದಿನಗಳಲ್ಲಿ ಉಭಯ ಇಂಧನಗಳ ದರ ಪ್ರತಿ ಲೀಟರ್‌ ಗೆ 7.20 ರೂ. ನಷ್ಟು ಹೆಚ್ಚಾದಂತಾಗಿದೆ. ರಾಷ್ಟ್ರ ರಾಜಧಾನಿಯಲ್ಲೀಗ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕ್ರಮವಾಗಿ 102.61 ರೂ. ಮತ್ತು 93.87 ರೂ. ಆಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಳೆದ ನಾಲ್ಕೂವರೆ ತಿಂಗಳ ಕಾಲ ಇಂಧನ ದರ ಪರಿಷ್ಕರಿಸಿರಲಿಲ್ಲ. ಮಾರ್ಚ್ 22ರಿಂದ ಪರಿಷ್ಕರಣೆ ಆರಂಭಿಸಿದ್ದವು. ಬಳಿಕ ಈವರೆಗೆ 10 ಬಾರಿ ದರ ಪರಿಷ್ಕರಿಸಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ದರ 108.13 ರೂ. ಮತ್ತು 92.03 ರೂ. ಆಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತಿಪಟೂರು: ನಫೆಡ್ ಕೇಂದ್ರದಲ್ಲಿ ರಾಗಿ ಕೇಂದ್ರ ತೆರೆದು ಅರ್ಧಂಬರ್ಧ ರೈತರಿಂದ ರಾಗಿ ಖರೀದಿ ಮಾಡಿ, ಏಕಾಏಕಿ ಖರೀದಿ ಕೇಂದ್ರವನ್ನು ಸಂದಿಗ್ದಗೊಳಿಸಿರುವುದರಿಂದ ಬೆಳೆಗಾರರಿಗೆ ಮಾಡಿದ ಮೋಸವಾಗಿದೆ ಎಂದು ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಆರೋಪಿಸಿದ್ದಾರೆ.  ನಗರದ ತಮ್ಮ ಗೃಹ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲೇ ರಾಗಿ ಕೇಂದ್ರ ತೆರೆದು ಎಲ್ಲಾ ರೈತರಿಂದ ಸಣ್ಣ ಹಿಡುವಳಿದಾರರು ಇರಬಹುದು, ದೊಡ್ಡ ಹಿಡುವಳಿದಾರರ ಆಗಿರಬಹುದು ಎಲ್ಲಾ ವರ್ಗದ ರೈತರಿಂದ ರಾಗಿಯನ್ನು ಕೊಂಡುಕೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದರು.  ಸರ್ಕಾರ ದೊಡ್ಡ ಮತ್ತು ಸಣ್ಣ ರೈತರಿಂದ ವಿಂಗಡನೆ ಮಾಡಿ ಖರೀದಿಯಲ್ಲಿ ರೈತರಿಗೆ ಮೋಸ ಮಾಡುತ್ತಿದ್ದಾರೆ ತುಮಕೂರು ಜಿಲ್ಲೆಯಲ್ಲಿ ರಾಗಿ ಬೆಳೆ ಹೆಚ್ಚು ಬೆಳೆಯುತ್ತಿದ್ದು, ತಿಪಟೂರು ವಾಣಿಜ್ಯ ಕೇಂದ್ರವಾಗಿ ಬೆಳೆದಿದ್ದು, ರೈತರ ಜೀವನಾಧಾರಿತ ರಾಗಿ ಬೆಳೆ ಜೀವನಾಧಾರಕ್ಕೆ ಸಹಕಾರಿಯಾಗಿದೆ. ರಾಗಿ ತಂದು ಕೇಂದ್ರಕ್ಕೆ ಹಾಕಿದ್ದ ಖಾಲಿ ಚೀಲ ವನ್ನು ಸಹ ರೈತರಿಗೆ ಕೊಡದೆ ರೈತರಿಗೆ ಬಹಳ ಅನ್ಯಾಯ ಮಾಡುತ್ತಿದ್ದಾರೆ. ಎಲ್ಲಾ ರೈತರಿಂದ…

Read More

ಹಿರಿಯೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಆದೇಶದ ಮೇರೆಗೆ ಹಿರಿಯೂರಿನಲ್ಲಿ ಎಪ್ರಿಲ್ 5ರ ಗುರುವಾರದಂದು ಡಾ.ಬಾಬುಜಗಜೀವನ್ ರಾಮ್ ರವರ ಜಯಂತೋತ್ಸವ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಕಾರ್ಯಕ್ರಮವನ್ನು ನಮ್ಮ ಹಿರಿಯೂರು ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು  ಸಮಾಜ ಕಲ್ಯಾಣ ಇಲಾಖೆ  ಮಾಜಿ  ಸಚಿವ  ಡಿ.ಸುಧಾಕರ್ ಹೇಳಿದರು. ಹಿರಿಯೂರು ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ. ಡಾ.ಬಾಬುಜಗಜೀವನ್ ರಾಮ್ ರವರ ಜಯಂತೋತ್ಸವ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಡಿ.ಸುಧಾಕರ್  ಮಾತನಾಡಿದರು. ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಕಾರ್ಯಕ್ರಮವನ್ನು ಕೊಟ್ಟರೂ ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಾರೆ ಎಂಬ ಅಪಾರ ನಂಬಿಕೆಯಿಂದ ನಮ್ಮ ತಾಲ್ಲೂಕಿನಲ್ಲಿ ಡಾ.ಬಾಬುಜಗಜೀವನ್ ರಾಮ್ ರವರ ಜಯಂತೋತ್ಸವ ನಡೆಸಲು ಡಿ.ಕೆ.ಶಿವಕುಮಾರ್ ರವರು ಆದೇಶ ಮಾಡಿದ್ದಾರೆ ಎಂದು ಅವರು ತಿಳಿಸಿದರು. ಅಧ್ಯಕ್ಷರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಬೇಕಿದೆ ಎಂದು ಡಿ.ಸುಧಾಕರ್ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಕರೆ ನೀಡಿದರು. ಈ…

Read More