Author: admin

ಎಚ್.ಡಿ.ಕೋಟೆ:  ಚಿಕ್ಕದೇವಮ್ಮ ಜಾತ್ರೆಯಲ್ಲಿ ಪ್ರಾಣಿಬಲಿ ತಡೆ ಸಂಪೂರ್ಣ ಯಶಸ್ವಿಯಾಗಿದ್ದು,  ಶತ-ಶತಮಾನಗಳ ಮೌಢ್ಯ-ಅಂಧ ಸಂಪ್ರದಾಯಕ್ಕೆ ಅಂತಿಮ ವಿದಾಯ, ಭಾರತೀಯ ಧಾರ್ಮಿಕ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲುಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ, ಪಶು ಪ್ರಾಣಿ ಬಲಿ ನಿರ್ಮೂಲನಾ ಜಾಗೃತಿ ಮಹಾಸಂಘ  ಮತ್ತು  ಬಸವ ಧರ್ಮ ಜ್ಞಾನಪೀಠದ ಅಧ್ಯಕ್ಷರಾದ ದಯಾನಂದ ಸ್ವಾಮೀಜಿ ತಿಳಿಸಿದರು. ಪಟ್ಟಣದ ತಾಲ್ಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕದೇವಮ್ಮ ಬೆಟ್ಟದ ದೇವಾಲಯದ ಪರಿಸರ, ಪಾದಗಟ್ಟೆ ಹಾಗೂ ಹಾಲುಗಡ ಪರಿಸರದಲ್ಲಿ, ಕಪಿಲಾನದಿ ತೀರದಲ್ಲಿ ಪ್ರಾಣಿಬಲಿ ತಡೆ ಸಂಪೂರ್ಣ ಯಶಸ್ವಿಯಾಗಿದೆ ಎಂದರು. ಇಟ್ನ ಗ್ರಾಮದ ಕಪಿಲಾ ನದಿ ತೀರದಲ್ಲಿ ಸಾವಿರಾರು ಭಕ್ತಾಧಿಗಳಿಗೆ ಶುದ್ಧ ಸಸ್ಯಾಹಾರ ಹಾಗೂ ಸಿಹಿ ಊಟದ-ಅನ್ನ ದಾಸೋಹ ನೆರವೇರಿಸಲಾಯಿತು. ಸಾಗರೆ ಮಾರಮ್ಮದೇವಿ (ತ್ರಿಪುರಸುಂದರಿ ಲಲಿತಾದೇವಿ) ಜಾತ್ರೆಯಲ್ಲಿಯೂ ಪ್ರಾಣಿಬಲಿ ತಡೆ ಬಹುತೇಕ ಯಶಸ್ವಿ ಕುರಿತು ಮತ್ತು ಪ್ರಾಣಿಬಲಿ ತಡೆ ಯಶಸ್ವಿಯಾಗಿದೆ ಎಂದರು. ಇದೇ 7, 8ರ ಏಪ್ರಿಲ್ 2022 ರಂದು ನಡೆಯಲಿರುವ ತೆರಣಿಮುಂಟಿ ಮಾಂಕಾಳಮ್ಮದೇವಿ ಹಬ್ಬ-ಜಾತ್ರೆಯಲ್ಲಿ ಪ್ರಾಣಿಬಲಿ ತಡೆಯಲು ಸರ್ಕಾರ …

Read More

ತುಮಕೂರು: ಡಾ.ಜಿ.ಪರಮೇಶ್ವರ್ ರವರ ಸವ್ಯಸಾಚಿ ಗೌರವ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಮಾಜಿ ಶಾಸಕ ರಫೀಕ್ ಅಹ್ಮದ್ ಅವರು ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿದರು. ಆಹ್ವಾನ ನೀಡಿದ ಬಳಿಕ ಮಾತನಾಡಿದ ರಫೀಕ್ ಅಹ್ಮದ್, ಕರ್ನಾಟಕದ ಮಾಜಿ ಮಂತ್ರಿಗಳು ಹಾಗೂ ಹಿರಿಯರಾದ ಡಾ. ಜಿ.ಪರಮೇಶ್ವರ್ ಅವರ ಸವ್ಯಸಾಚಿ ಗೌರವ ಗ್ರಂಥ ಬಿಡುಗಡೆ ಸಮಾರಂಭ ಇದೇ ಏಪ್ರಿಲ್ 10ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣ ಅಗಲಕೋಟೆ ತುಮಕೂರು ನಗರದಲ್ಲಿ ಅವರ ಅಭಿಮಾನಿಗಳು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಎಲ್ಲ ನಾಯಕರು ಭಾಗವಹಿಸುವಂತೆ ಅವರು ಮನವಿ ಮಾಡಿದರು. ಡಾ.ಜಿ.ಪರಮೇಶ್ವರ್ ಅವರಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ಕೊಟ್ಟು ಮುಂದಿನ ದಿನಗಳಲ್ಲಿ ಅವರಿಗೆ ರಾಜಕೀಯದಲ್ಲಿ ಹಾಗೂ ಸಮಾಜದಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡುವಂತಹ ಸ್ಪೂರ್ತಿಯನ್ನು ಅವರಿಗೆ ಕೊಡೋಣ ಎಂದು ಮನವಿ ಮಾಡಿಕೊಂಡರು. ವರದಿ: ಎ.ಎನ್. ಪೀರ್, ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ಮಾಯಸಂದ್ರ:  ಮಾರ್ಚ್ 29 ರಿಂದ 31ರವರೆಗೆ ಬಿಜಾಪುರದಲ್ಲಿ ನಡೆದ ಪೈಕಾ ಕ್ರೀಡಾಕೂಟದಲ್ಲಿ ಹ್ಯಾಂಡ್ಬಾಲ್ ಪಂದ್ಯದಲ್ಲಿ ಆದಿಚುಂಚನಗಿರಿ ಮಠದ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಮಾಯಸಂದ್ರ TB ಕ್ರಾಸ್’ನಾ SBG ವಿದ್ಯಾಲಯವು ಭರ್ಜರಿ ಜಯಭೇರಿ ಬಾರಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದೆ. ಶಾಲೆಯ ದೈಹಿಕ ತರಬೇತುದಾರಾದ CP ಉದಯ್ ಕುಮಾರ್, ಗಿರಿಧರ್ ಕೆ.ಎಸ್. ಮತ್ತು ಶಂಕರ್ ಎಂ.ಎಸ್.ರವರ ಸಾರಥ್ಯದಲ್ಲಿ ಪಳಗುತ್ತಿರುವ ವಿದ್ಯಾರ್ಥಿಗಳು , ಭಾಗವಹಿಸಿದ ಕ್ರೀಡಾಕೂಟಗಳಲೆಲ್ಲಾ ಜಯಭೇರಿ ಬಾರಿಸುತ್ತಿದ್ದಾರೆ. SBG ಮಕ್ಕಳ ಈ ಸಾಧನೆ ಕಂಡು ಶ್ರೀ ಶ್ರೀ ಪ್ರಸನ್ನ ಸ್ವಾಮೀಜಿ ಅವರು , ಆಡಳಿತಾಧಿಕಾರಿಗಳಾದ ರಾಜಣ್ಣ,  ಮುಖ್ಯ ಶಿಕ್ಷಕರಾದಂತಹ ಗಿರೀಶ್ ಮತ್ತು ಎಲ್ಲಾ ಶಿಕ್ಷಕ ಬಳಗ ಶುಭಕೋರಿದ್ದಾರೆ. ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತುಮಕೂರು: ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಸ್ನೇಹಕೂಟ ವತಿಯಿಂದ ಗರ್ಭಿಣಿಯರಿಗೆ ಹಾಗೂ ವಿಕಲಚೇತನರಿಗೆ ಎರಡು ಆಟೋಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಡಾ. ರಫೀಕ್ ಅಹ್ಮದ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಗೋಕುಲ ಬಡಾವಣೆಯ ಗಂಗರಾಜು ಹಾಗೂ ನಗರಸಭೆ ಅಧ್ಯಕ್ಷ ರಾಜುರವರ ಸಂಗಡಿಗರ ಸಹಾಯದಿಂದ ಇವತ್ತು 2 ಆಟೋಗಳಲ್ಲಿ ಚಾಲಕರಾದ ಶಿವಕುಮಾರ್ ಮತ್ತು ನಾರಾಯಣ್ ರವರು ಉಚಿತವಾಗಿ ಗರ್ಭಿಣಿಯರಿಗೆ ಹಾಗೂ ವಿಕಲಚೇತನರಿಗೆ ಉಚಿತ ಸೇವೆಯನ್ನು ಕೊಡಲು ಮುಂದೆ ಬಂದಿದ್ದಾರೆ. ಈ ಸೇವೆಯನ್ನು ಇವತ್ತಿನಿಂದ ಪ್ರಾರಂಭ ಮಾಡಿದ್ದಾರೆ ಎಂದು ತಿಳಿಸಿದರು. ಈ ಇಬ್ಬರು ಆಟೋ ಚಾಲಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈಗಿನ ಕಾಲದಲ್ಲಿ ಈ ರೀತಿಯ ಸೇವೆ ಮಾಡುತ್ತಿರುವುದು ಬಹಳ ಕಡಿಮೆ ಅದರಲ್ಲೂ, ಇಬ್ಬರು ಆಟೋ ಚಾಲಕರು ಸಮಾಜ ಸೇವೆಗೆ ಮುಂದೆ ಬಂದಿದ್ದಾರೆ. ಇಂತಹ ಸೇವೆ ಗರ್ಭಿಣಿಯರಿಗೆ ಮತ್ತು ವಿಕಲಚೇತನರಿಗೆ ಬಹಳ ಅವಶ್ಯಕವಾಗಿದೆ ಎಂದು ಹೇಳಿದರು. ಉಚಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಅವರು…

Read More

ತುಮಕೂರು : ತುಮಕೂರಿನಲ್ಲಿ ಮತ್ತೊಂದು ಖಾಸಗಿ ಬಸ್ ಅಪಘಾತವಾಗಿದ್ದು, ಟ್ಯಾಂಕರ್ ಲಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ 5ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.  ಇಂದು ಬೆಳಗಿನ ಜಾವ 3:50ರ ಸುಮಾರಿಗೆ ತುಮಕೂರು ಹೊರವಲಯದ ಅಂತರಸನಹಳ್ಳಿ ರಾಷ್ಟ್ರೀಯ ಹೆದ್ದಾರಿ 48ರ ಬಳಿಯ ರಂಗಪುರಬಳಿ  ಘಟನೆ ಸಂಭವಿಸಿದೆ. ಹಿಂಬದಿಯಿಂದ ಬಂದು ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ 5ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  ಖಾಸಗಿ ಬಸ್ ಸೊರಬದಿಂದ ಬೆಂಗಳೂರು ಕಡೆ ತೆರಳುತ್ತಿತ್ತು. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.  ವರದಿ: ಎ.ಎನ್. ಪೀರ್ , ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಕೋವಿಡ್‌ನಿಂದಾಗಿ ಬೆಂಗಳೂರಿನಲ್ಲಿ ಒಂದೇ ಒಂದು ಸಾವು ಸಂಭವಿಸಿಲ್ಲ ಮತ್ತು ಕಳೆದ 24 ಗಂಟೆಗಳಲ್ಲಿ ರಾಜ್ಯದ 28 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.  ವಾಣಿಜ್ಯ ಚಟುವಟಿಕೆಗಳು, ಪಬ್‌ಗಳು, ಬಾರ್‌ ಮತ್ತು ಮನರಂಜನಾ ಕೇಂದ್ರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ನಿಯಮವನ್ನು ಕೂಡ ಸರ್ಕಾರ ಹಿಂಪಡೆದಿದೆ. ಹೀಗಾಗಿ ಜನರು ಬೇಸಿಗೆ ರಜೆಯನ್ನು ಯಾವುದೇ ಭಯವಿಲ್ಲದೆ ಕಳೆಯಬಹುದಾಗಿದೆ.  ಕೋವಿಡ್ ಮೂರನೇ ಅಲೆ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಕಳೆದ ಶುಕ್ರವಾರ ಸೋಂಕಿನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. ಅಲ್ಲದೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ 49 ಕೋವಿಡ್ ಪ್ರಕರಣಗಳು ಮಾತ್ರ ವರದಿಯಾಗಿವೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…

Read More

ಶಿವಮೊಗ್ಗ: ಇಲ್ಲಿನ ಕೆಎಸ್‌ ಆರ್‌ ಟಿಸಿ ಬಸ್‌ ನಿಲ್ದಾಣದ ಬಳಿ ಶನಿವಾರ ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕುಶನ್‌ ಚಂದು (29) ಕೊಲೆಯಾದವರು. ಕುಶನ್‌ ಚಂದು ಹಾಗೂ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಪರಶುರಾಮ ಮಧ್ಯೆ ಕೆಲ ವಿಚಾರಗಳಿಗೆ ದ್ವೇಷ ಬೆಳೆದಿತ್ತು. ಇದೇ ಕಾರಣಕ್ಕೆ ಕೊಲೆ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತುಮಕೂರು: ರಂಜಾನ್ ತಿಂಗಳಲ್ಲಿ ಸಂಜೆ ಇಫ್ತಿಯಾರ್ ಸಮಯದಲ್ಲಿ ಎಲ್ಲ ಜನಾಂಗದವರು ಮಸೀದಿಯ ಮುಂದೆ ಅಂಗಡಿ-ಮುಂಗಟ್ಟುಗಳನ್ನು ಇಟ್ಟು  ವ್ಯಾಪಾರ ಮಾಡುತ್ತಾರೆ. ಅವರಿಗೆಲ್ಲರಿಗೂ ಮಸೀದಿಯ ಮುಂದೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ತಾಜುದ್ದೀನ್ ಶರೀಫ್ ಮನವಿ ಮಾಡಿದ್ದಾರೆ. ಈ ಸಂದೇಶ ನೀಡುವುದೆಂದರೆ ಪ್ರವಾದಿ ಮೊಹಮ್ಮದ್ ರವರು ಹೇಳುವುದೇನೆಂದರೆ ದ್ವೇಷದ ಉತ್ತರ ದ್ವೇಷದಿಂದಲ್ಲ ಪ್ರೀತಿಯಿಂದ ನೀಡಬೇಕು ಎಂದು ಹೇಳಿದ್ದಾರೆ.  ನಾವು ಎಲ್ಲ ಜನಾಂಗದವರಿಗೂ ಮಸೀದಿ ಹಾಗೂ ದರ್ಗಾ ಮುಂದೆ ವ್ಯಾಪಾರ ಮಾಡುತ್ತಿದ್ದಾರೆ ಅದೇ ರೀತಿ ವ್ಯಾಪಾರ ಮುಂಗಟ್ಟುಗಳು ನಡೆಸಿಕೊಂಡು ಹೋಗಬೇಕು ಎಂದು ಎಲ್ಲರೂ ಇದಕ್ಕೆ ಸ್ವಾಗತ ಮಾಡಿದ್ದಾರೆ. ಯಾವುದೇ ರೀತಿಯ ಅಡಚಣೆ ಉಂಟು ಮಾಡಬಾರದು ಎಂದು ನಮ್ಮ ಮುಸ್ಲಿಂ ಸಮುದಾಯ ಹಾಗೂ ಮುಸ್ಲಿಂ ಯುವಕರಲ್ಲಿ ಮತ್ತು ಪ್ರೆಸಿಡೆಂಟ್ ಸೆಕ್ರೆಟರಿ ಯವರಲ್ಲಿ ಮನವಿ ಮಾಡಿದ್ದೇವೆ ಎಂದರು.  ಜಾಮಿಯಾ ಮಸೀದಿಯ ಮುಫ್ತಿ ಅಂಸರಿ ಸಾಬ್ ರವರು ಈ ಸಂದೇಶವನ್ನು ನೀಡುತ್ತಾರೆ ಎಂದರು.  ವರದಿ: ಎ.ಎನ್. ಪೀರ್, ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಬೆಂಗಳೂರು: ಯುಗಾದಿ ಸಿಹಿ-ಕಹಿಗಳ ಹಬ್ಬ, ಆದರೆ ಬಿಜೆಪಿ ಸರ್ಕಾರ ಜನರಿಗೆ ಬರೀ ಕಹಿಯನ್ನೇ ನೀಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ಬಿಜೆಪಿಯನ್ನು ತರಾಟೆಗೆತ್ತಿಕೊಂಡಿದ್ದಾರೆ. ಕೇಂದ್ರ ರಸಗೊಬ್ಬರ ಬೆಲೆಯನ್ನು ಎದ್ವಾತದ್ವಾ ಏರಿಕೆ ಮಾಡಿದೆ. ಬಿಜೆಪಿಯವರು ವೈಫಲ್ಯಗಳನ್ನು ಮುಚ್ಚಿ ಹಾಕಲು ಹಿಜಾಬ್, ಕಾಶ್ಮೀರಿ ಫೈಲ್ಸ್, ಹಲಾಲ್, ಮುಸ್ಲಿಂ ವರ್ತಕರಿಗೆ ವ್ಯಾಪಾರ ನಿರ್ಬಂಧದಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂದು  ಹೇಳಿದರು. ನಮ್ಮಲ್ಲೂ ಹಬ್ಬಗಳಲ್ಲಿ ಕುರಿ ಕಡಿದಾಗ ರಕ್ತ ಹೊರ ಹೋಗಲು ಬಿಡಲ್ವ? ಹಲಾಲ್ ಸಾವಿರಾರು ವರ್ಷಗಳಿಂದ ನಡೆದು ಬಂದ ಪದ್ಧತಿ, ಅವರ ಪದ್ಧತಿ ಅವರು ಅನುಸರಿಸಲಿ, ನಮ್ಮ ಪದ್ಧತಿ ನಾವು ಅನುಸರಿಸೋಣ. ಮನುಷ್ಯನ ಬದುಕಿಗೆ, ಜೀವನ ನಿರ್ವಹಣೆಗೆ ಸಂಬಂಧವಿಲ್ಲದ ವಿಷಯಗಳನ್ನು ಎತ್ತಿ ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಇದರಿಂದ ಶಾಂತಿ, ಸುವ್ಯವಸ್ಥೆಗೆ ಧಕ್ಕೆಯಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ. ಇದನ್ನು ಸದನದಲ್ಲೂ ಪ್ರಸ್ತಾಪ ಮಾಡಿದ್ದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ಹುಬ್ಬಳ್ಳಿ: ಮುಂಬರುವ ವಿಧಾನ‌ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುವುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಎಲ್ಲ ಮುಖಂಡರೊಂದಿಗೆ ಮಾತುಕತೆ ನಡೆದಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಹಾಗೂ ಜೆಡಿಎಸ್ ಮುಖಂಡ ಎಚ್​.ಡಿ. ಕುಮಾರಸ್ವಾಮಿ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.  ಚುನಾವಣೆ ಘೋಷಣೆಯಾದ ಕೂಡಲೇ ಬಿಜೆಪಿಗೆ ಸೇರ್ಪಡೆ ಆಗುವುದು ನಿರ್ಧಾರವಾಗಲಿದೆ ಎಂದೂ ಅವರು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More