ತುಮಕೂರು: ರಂಜಾನ್ ತಿಂಗಳಲ್ಲಿ ಸಂಜೆ ಇಫ್ತಿಯಾರ್ ಸಮಯದಲ್ಲಿ ಎಲ್ಲ ಜನಾಂಗದವರು ಮಸೀದಿಯ ಮುಂದೆ ಅಂಗಡಿ–ಮುಂಗಟ್ಟುಗಳನ್ನು ಇಟ್ಟು ವ್ಯಾಪಾರ ಮಾಡುತ್ತಾರೆ. ಅವರಿಗೆಲ್ಲರಿಗೂ ಮಸೀದಿಯ ಮುಂದೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ತಾಜುದ್ದೀನ್ ಶರೀಫ್ ಮನವಿ ಮಾಡಿದ್ದಾರೆ.
ಈ ಸಂದೇಶ ನೀಡುವುದೆಂದರೆ ಪ್ರವಾದಿ ಮೊಹಮ್ಮದ್ ರವರು ಹೇಳುವುದೇನೆಂದರೆ ದ್ವೇಷದ ಉತ್ತರ ದ್ವೇಷದಿಂದಲ್ಲ ಪ್ರೀತಿಯಿಂದ ನೀಡಬೇಕು ಎಂದು ಹೇಳಿದ್ದಾರೆ.
ನಾವು ಎಲ್ಲ ಜನಾಂಗದವರಿಗೂ ಮಸೀದಿ ಹಾಗೂ ದರ್ಗಾ ಮುಂದೆ ವ್ಯಾಪಾರ ಮಾಡುತ್ತಿದ್ದಾರೆ ಅದೇ ರೀತಿ ವ್ಯಾಪಾರ ಮುಂಗಟ್ಟುಗಳು ನಡೆಸಿಕೊಂಡು ಹೋಗಬೇಕು ಎಂದು ಎಲ್ಲರೂ ಇದಕ್ಕೆ ಸ್ವಾಗತ ಮಾಡಿದ್ದಾರೆ. ಯಾವುದೇ ರೀತಿಯ ಅಡಚಣೆ ಉಂಟು ಮಾಡಬಾರದು ಎಂದು ನಮ್ಮ ಮುಸ್ಲಿಂ ಸಮುದಾಯ ಹಾಗೂ ಮುಸ್ಲಿಂ ಯುವಕರಲ್ಲಿ ಮತ್ತು ಪ್ರೆಸಿಡೆಂಟ್ ಸೆಕ್ರೆಟರಿ ಯವರಲ್ಲಿ ಮನವಿ ಮಾಡಿದ್ದೇವೆ ಎಂದರು.
ಜಾಮಿಯಾ ಮಸೀದಿಯ ಮುಫ್ತಿ ಅಂಸರಿ ಸಾಬ್ ರವರು ಈ ಸಂದೇಶವನ್ನು ನೀಡುತ್ತಾರೆ ಎಂದರು.
ವರದಿ: ಎ.ಎನ್. ಪೀರ್, ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5