Author: admin

ತಮಿಳು ಹಾಸ್ಯ ನಟ ಮನೋಬಾಲಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಇಂದು ಕೊನೆಯುಸಿರೆಳೆದಿದ್ದಾರೆ .ಹಾಸ್ಯಕ್ಕೆ ಹೆಸರಾದ ನಿರ್ದೇಶಕ, ನಿರ್ಮಾಪಕ ಮತ್ತು ನಟ ಮನೋಬಾಲಾ ಅವರಿಗೆ 69 ವರ್ಷ ವಯಸ್ಸಾಗಿತ್ತು. ಇವರು ಹೃದಯ ಸಂಬಂಧಿ ಕಾಯಿಲೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮನೋಬಾಲ ಅವರ ಲಿವರ್ ಗೆ ಹಾನಿಯಾಗಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ನಂತರ ಕಳೆದ ಕೆಲ ದಿನಗಳಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನದ ಸುದ್ದಿ ತಿಳಿದ ತಮಿಳು ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ. ಕುಟುಂಬಸ್ಥರು, ಚಿತ್ರರಂಗದವರು, ಅಭಿಮಾನಿಗಳು ಇವರಿಗೆ ಸಂತಾಪ ಸೂಚಿಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕರ್ನಾಟಕ ರಾಜಕೀಯವು ಲಂಚ ಮತ್ತು ಕುದುರೆ ವ್ಯಾಪಾರಕ್ಕೆ ಕುಖ್ಯಾತವಾಗಿದೆ. ಪಕ್ಷ ಭೇದವಿಲ್ಲದೆ ಬಹುತೇಕ ನಾಯಕರು ಲಕ್ಷಾಧಿಪತಿಗಳು ಅಥವಾ ಕೋಟ್ಯಾಧಿಪತಿಗಳು. ಬಡ ಅಭ್ಯರ್ಥಿ ಕೂಡ 3 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಜನಸಾಮಾನ್ಯರ ಸೇವೆ ಮಾಡಲು ಬಯಸುವ ಶ್ರೀಮಂತರಿಂದ ಕನ್ನಡ ರಾಜಕಾರಣ ಶ್ರೀಮಂತವಾಗಿದೆ. ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ವೃತ್ತಿಯನ್ನು ಕೃಷಿ ಎಂದು ನಮೂದಿಸಿದವರೂ ಸಹ ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾರೆ. ಅವರಲ್ಲಿ ಕೆಲವರನ್ನು ಭೇಟಿಯಾಗೋಣ. ಬಿಜೆಪಿಯ ಎಂ.ಟಿ.ಬಿ.ನಾಗರಾಜ್ ಅನಾರೋಗ್ಯದಿಂದ ಬಳಲುತ್ತಿರುವ ಕೋಟ್ಯಾಧಿಪತಿಗಳ ಪೈಕಿ ಅಗ್ರಗಣ್ಯರು. ಅವರ ಪತ್ನಿ ಹಾಗೂ ನಾಗರಾಜ್ ಅವರ ಆಸ್ತಿ ಕೇವಲ 2607 ಕೋಟಿ 84 ಲಕ್ಷ. ಕಾಂಗ್ರೆಸ್ ಕೂಡ ಹೇಗೆ ಕೈಬಿಡುತ್ತದೆ. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರನ್ನೇ ಕೈಬಿಟ್ಟು ಸೇಡು ತೀರಿಸಿಕೊಂಡಿದೆ. 1214 ಕೋಟಿಗಳು ಇದು 2018 ಕ್ಕಿಂತ 68 ಪ್ರತಿಶತ ಹೆಚ್ಚು. ಪ್ರಿಯಾ ಕೃಷ್ಣನ್ ಕಾಂಗ್ರೆಸ್ 1,156.83 ಕೋಟಿ, ಎನ್ ಎ ಹ್ಯಾರಿಸ್ ಕಾಂಗ್ರೆಸ್ 397.29, ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ 292.83 ಸಂಪತ್ತಿನಲ್ಲಿ ಪ್ರಮುಖರು. ಅವರ ಪತ್ನಿ ಹಾಗೂ ನಾಗರಾಜ್…

Read More

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಸೋಲಿಗೆ ನಾವೇ ಕಾರಣಕರ್ತರಾದೆವು. ಈ ಬಾರಿ ತುರುವೇಕೆರೆಯಲ್ಲಿ ಎಂ.ಟಿ. ಕೃಷ್ಣಪ್ಪನ ಗೆಲುವಿಗೆ ಜೆಡಿಎಸ್ ಕಾರ್ಯಕರ್ತರು ಶ್ರಮಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕರೆ ನೀಡಿದರು. ಗುಬ್ಬಿ ತಾಲೂಕಿನ ಚಂದ್ರಶೇಖರಪುರ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ ಟಿ ಕೃಷ್ಣಪ್ಪನವರ ಪರ ಮತಯಾಚನೆ ಕಾರ್ಯಕ್ರಮಕ್ಕೆ ಆಗಮಿಸಿ ಬಹಿರಂಗ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಹಾಗೆಯೇ ಹೆಚ್.ಡಿ. ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿ ಯಾಗುವುದು ಶತಸಿದ್ಧ ಚುನಾವಣೆ ಮುಗಿಯುವವರೆಗೂ ಎಲ್ಲಾ ಕಾರ್ಯಕರ್ತರು ಸಹ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ತಿಳಿಸಿದರು. ಮಾಜಿ ಶಾಸಕ ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ ಮಾತನಾಡಿ ಭಾರತದ ಇತಿಹಾಸದಲ್ಲಿ ಎರಡು ಭಾರಿ ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಮಾಡಿದ ಏಕೈಕ ಪಕ್ಷ ಅದು ಜೆಡಿಎಸ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ರೈತರ ಸಂಕಷ್ಟಗಳಿಗೆ ಧಾವಿಸುವ ಮೂಲಕ ರೈತಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.…

Read More

ತುರುವೇಕೆರೆ: ಜೆಡಿಎಸ್ ಪಕ್ಷದವರು ನಾನು ಪಕ್ಷದ ಪ್ರಚಾರದಲ್ಲಿ ತೊಡಗಿಕೊಂಡಾಗ ಪ್ರಚಾರ ಭಾಷಣದಲ್ಲಿ ಮಾತನಾಡಿದ ತುಣುಕುಗಳನ್ನ ಕಟ್ ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ಪಕ್ಷಕ್ಕೆ ಅಂಟಿಕೊಂಡಿಲ್ಲ, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೇನೆ, ನಾನು ಯಾವ ಪಕ್ಷದೊಂದಿಗೂ ಶಾಮಿಲಾಗಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಬೆಮೆಲ್ ಕಾಂತರಾಜು ಸ್ಪಷ್ಟಪಡಿಸಿದ್ದಾರೆ. ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಬಿಎಂಎಲ್ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕ್ಷೇತ್ರಕ್ಕೆ ಚುನಾವಣಾ ಪ್ರಚಾರಕ್ಕಾಗಿ ಎರಡನೇ ಬಾರಿ ಆಗಮಿಸಿದ ನಮ್ಮ ರಾಷ್ಟ್ರೀಯ ನಾಯಕರ ರಾಹುಲ್ ಗಾಂಧಿಯವರಿಗೆ ವಿಶೇಷವಾದ ಕೃತಜ್ಞತೆಗಳು. ನಮ್ಮ ರಾಷ್ಟ್ರೀಯ ನಾಯಕರು ತುರುವೇಕೆರೆಗೆ ಬಂದಾಗ, ನೂಕು ನುಗ್ಗಲಲ್ಲಿ ರಾಹುಲ್ ಗಾಂಧಿಯವರ ನೋಡಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಈ ಬಾರಿಯ ಚುನಾವಣಾ ಪ್ರಚಾರಕ್ಕಾಗಿ ಬರಲೇಬೇಕು ಎಂದು ನಮ್ಮ ರಾಜ್ಯದ ನಾಯಕರುಗಳ ಜೊತೆ ಸಭೆಯಲ್ಲಿ ಚರ್ಚಿಸಿದ್ದೆವು. ಹಾಗೆಯೇ ಕ್ಷೇತ್ರಕ್ಕೆ ಬಂದು ಪ್ರಚಾರ ಕಾರ್ಯವನ್ನು ಮುಗಿಸಿ ಹೋಗಿದ್ದಾರೆ ಮತ್ತೊಮ್ಮೆ ಅವರಿಗೆ ಧನ್ಯವಾದಗಳು ಎಂದರು. ದಯಮಾಡಿ ನನ್ನ ಕ್ರಮ ಸಂಖ್ಯೆ 1 ಬಿ.ಎಂ.ಎಲ್.ಕಾಂತರಾಜು ನನ್ನ ಗುರುತು ಹಸ್ತ,…

Read More

ಕೊರಟಗೆರೆ: ಕಳೆದ ಮೂರ್ನಾಲ್ಕು ತಿಂಗಳುಗಳಿಂದ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗವು ಚುನಾವಣೆ ತಯಾರಿ ನಡೆಸುತಿದ್ದಾರೆ. ಅಲ್ಲದೆ ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಆಯಾ ತಾಲೂಕು ಅಧಿಕಾರಿಗಳಿಗೆ ಆದೇಶಿಸಲಾಗಿತ್ತು. ಆದರೆ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ತುಮಕೂರು ಜಿಲ್ಲೆಯ ಚುನಾವಣಾಧಿಕಾರಿಗಳು ನಡೆದುಕೊಳ್ಳುವ ಸನ್ನಿವೇಶ ಬಯಲಾಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದ ಕೋಳಾಲ ಹೋಬಳಿಯ ಮಲುಗೋನಹಳ್ಳಿ ಮತಗಟ್ಟೆ ಅವ್ಯವಸ್ಥೆಯ ಗೂಡಾಗಿದೆ. ಈ ಗ್ರಾಮದ ಮತಗಟ್ಟೆ ಕೇಂದ್ರವಾದ ಶಾಲೆಯ ಮೇಲ್ಛಾವಣಿಯ ಮರದ ತೀರುಗಳು ಮುರಿದಿವೆ. ಈಗಲೋ ಆಗಲೋ ಬೀಳುವ ಹಂತದಲ್ಲಿದ್ದು ಅದನ್ನು ಗಮನಿಸಿದರು ಅದನ್ನು ಸರಿ ಮಾಡಿಸುವ ಗೋಜಿಗೆ ಹೋಗಿಲ್ಲ. ಇನ್ನೂ ಮಳೆ ಬಂದರೆ ಮಳೆನೀರು ಒಳಗೆ ತುಂಬಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟು ದಿನ ಗಮನಿಸಿದ ಅಧಿಕಾರಿಗಳು ಈಗ ಪ್ಲಾಸ್ಟಿಕ್ ಟಾರ್ಪಲ್ ತಂದು ಮೇಲೆ ಹೊಂದಿಸಲು ಪ್ರಯತ್ನ ಪಡುತ್ತಿದ್ದಾರೆ. ಆ ಅರ್ಧಂಬರ್ಧ ಮುರಿದಿರುವ ಮೇಲ್ಛಾವಣಿಯ ತೀರು (ಮರದ ಅಡ್ಡೆ) ಮತದಾನ ದೇ ಸಮಯದಲ್ಲಿ ಯಾರ ಮೇಲಾದರೂ ಬಿದ್ದರೆ ಯಾರು ಜವಾಬ್ದಾರರು .…

Read More

ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ತಾಲೂಕಿನ ಮಾವಿನಕಟ್ಟಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ಮಂದಿರದ ಕಳಸಾರೋಹಣ ಹಾಗೂ‌ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ‌ ಭಾಗವಹಿಸಿದರು. ದೇವಿಯ ದರ್ಶನದ ಪಡೆದ ನಂತರದಲ್ಲಿ ಅವರು ಎಲ್ಲ ಭಕ್ತರೊಂದಿಗೆ ಪ್ರಸಾದ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ದೇವಸ್ಥಾನ ಕಮಿಟಿ ವತಿಯಿಂದ ಚನ್ನರಾಜ ಹಟ್ಟಿಹೊಳಿ ಅವರನ್ನು ಸತ್ಕರಿಸಲಾಯಿತು. ಗ್ರಾಮದ ಹಿರಿಯರು, ದೇವಸ್ಥಾನದ ಟ್ರಸ್ಟ್ ಕಮಿಟಿಯವರು, ನಾಗೇಶ ದೇಸಾಯಿ, ಶಂಕರಗೌಡ ಪಾಟೀಲ, ಮಹೇಶ ಸುಗೆಣ್ಣವರ ಹಾಗೂ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ವಿಜಯನಗರ: ಈ ಹಿಂದೆ ಶ್ರೀರಾಮಚಂದ್ರನನ್ನು ಕಾಂಗ್ರೆಸ್ ಬಂಧಿಸಿಟ್ಟಿತ್ತು. ಇದೀಗ ಹನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ವಿಜಯನಗರದಲ್ಲಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಹನುಮಂತನ ಜನ್ಮಸ್ಥಾನಕ್ಕೆ ನಾನು ಬಂದಿದ್ದೇನೆ. ನಾನು ಹನುಮಂತನಿಗೆ ಶತ ಪ್ರಣಾಮ ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗಬಲಿ ಅಂದರೆ ಹನುಮಂತನನ್ನು ಬೀಗ ಹಾಕಿ ಬಂಧಿಸಲು ಹೊರಟಿದ್ದಾರೆ. ಕಾಂಗ್ರೆಸ್‌ನವರಿಗೆ ಹಿಂದೆ ಶ್ರೀರಾಮನನ್ನು ಕಂಡರೂ ಆಗುತ್ತಿರಲಿಲ್ಲ. ಈಗ ಹನುಮಂತನ ಕಂಡರೂ ಆಗುತ್ತಿಲ್ಲ. ನಮಗೆ ಶ್ರೀರಾಮಚಂದ್ರ ಹಾಗೂ ಹನುಮಂತ ಪೂಜ್ಯರು. ಕಾಂಗ್ರೆಸ್ ಸದಾ ಶ್ರೀ ರಾಮನ ವಿಷಯದಲ್ಲಿ ರಾಜಕಾರಣ ಮಾಡುತ್ತಾ ಬಂದಿತ್ತು. ಈಗ ಜೈ ಭಜರಂಗಬಲಿ ಎನ್ನುವ ಹನುಮಾನ್ ಸೇವಕರನ್ನು ಬಂಧಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಈ ಪುಣ್ಯಭೂಮಿಗೆ ಕಾಂಗ್ರೆಸ್ ಮಾಡುತ್ತಿರುವ ಅವಮಾನ. ಇಡೀ ದೇಶದಲ್ಲಿ ಕರ್ನಾಟಕವನ್ನು ನಂಬರ್ 1 ರಾಜ್ಯವನ್ನಾಗಿ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ. ಈ ಸಂಕಲ್ಪಕ್ಕೆ ಹನುಮಂತನ ಆಶೀರ್ವಾದ ಕೇಳಲು…

Read More

ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ವಿರುದ್ಧದ ತೀರ್ಪನ್ನು ಗುಜರಾತ್ ಹೈಕೋರ್ಟ್ ಅಮಾನತುಗೊಳಿಸುವುದಿಲ್ಲ. ಪ್ರಕರಣಕ್ಕೆ ಮಧ್ಯಂತರ ತಡೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್, ಬೇಸಿಗೆ ರಜೆಯ ನಂತರ ತೀರ್ಪು ಪ್ರಕಟಿಸುವುದಾಗಿ ಸ್ಪಷ್ಟಪಡಿಸಿದೆ. ಪ್ರಕರಣದಲ್ಲಿ ಮಧ್ಯಂತರ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ಬೇಸಿಗೆ ವಿರಾಮದ ನಂತರ ಪ್ರಕರಣವನ್ನು ಪರಿಗಣಿಸಲಾಗುವುದು. ರಾಹುಲ್ ಗಾಂಧಿ ಅವರ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ನೇತೃತ್ವದ ಏಕ ಪೀಠ ವಿಚಾರಣೆ ನಡೆಸಿತು. ಪ್ರಕರಣಕ್ಕೆ ಮಧ್ಯಂತರ ತಡೆ ನಿರಾಕರಣೆಯೊಂದಿಗೆ ಲೋಕಸಭೆಯಿಂದ ರಾಹುಲ್ ಗಾಂಧಿ ಅವರ ಅನರ್ಹತೆ ಮುಂದುವರಿಯಲಿದೆ. ಬೇಸಿಗೆ ರಜೆಯ ಕಾರಣ ಮೇ 5 ರಂದು ಮುಚ್ಚುವ ನ್ಯಾಯಾಲಯ ಜೂನ್ 5 ರಂದು ತೆರೆಯಲಿದೆ. ರಾಹುಲ್ ಗಾಂಧಿ ಪರವಾಗಿ ಮನು ಅಭಿಷೇಕ್ ಸಿಂಘ್ವಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಮನು ಅಭಿಷೇಕ್ ಸಿಂಘ್ವಿ ಅವರು ಮಾನನಷ್ಟ ಪ್ರಕರಣದಲ್ಲಿ ಮಧ್ಯಂತರ ಆದೇಶಕ್ಕಾಗಿ ವಾದಿಸಿದರು, ಆದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿತು. ಪ್ರಕರಣದ ವಿಚಾರಣೆಯ ಮೂಲ ಪ್ರತಿಯನ್ನು…

Read More

ತುರುವೇಕೆರೆ: ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ, ಬೊಮ್ಮಾಯಿಯವರ ನೇತೃತ್ವದಲ್ಲಿ ನಮ್ಮ ಹೊಸ ಸರ್ಕಾರ ಬಂದೇ ಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು. ತಾಲ್ಲೂಕಿನ ಆನೆಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶಾಸಕ ಮಸಾಲ ಜಯರಾಮ್ ಜೊತೆಗೂಡಿ ರೋಡ್ ಶೋ ನಡೆಸಿ  ಬಿರುಸಿನ ಪ್ರಚಾರ ಕೈಗೊಂಡು. ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದ ಅವರು,   ನೆರೆದಿದ್ದ ಸಾವಿರಾರು ಕಾರ್ಯಕರ್ತರು  ಹಾಗೂ ಮತದಾರನ್ನುದ್ದೇಶಿಸಿ  ಮಾತನಾಡಿದರು. ಹೊಸ ಸರ್ಕಾರದಲ್ಲಿ ಜಯರಾಮಣ್ಣ ಶಾಸಕರಾಗಿ ಆರಿಸಿ ಬರುವ ವಿಶ್ವಾಸವಿದೆ.  ನೀವು ಸಂಕಲ್ಪ ಮಾಡಬೇಕು, ಕಮಲದ ಗುರುತಿಗೆ ಆಶೀರ್ವಾದ ಮಾಡುವ ಮುಖಾಂತರ ಜಯರಾಮಣ್ಣನನ್ನು ವಿಧಾನಸೌಧಕ್ಕೆ ಕಳಿಸುತ್ತೀರಿ ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದರು. ಕಳೆದ 5 ವರ್ಷಗಳಲ್ಲಿ  ಶಾಸಕರಾಗಿ 1,600 ಕೋಟಿ ರೂಗಳ ಅನುದಾನ ತಂದು ಹಳ್ಳಿಹಳ್ಳಿಗಳನ್ನು ಅಭಿವೃದ್ಧಿ ಮಾಡಿರುವ ಜಯರಾಮಣ್ಣ , ಶಾಲಾ ಕೊಠಡಿ, ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲು ಸಹಕಾರ ಕೊಟ್ಟಿದ್ದಾರೆ.  ಕೆರೆಗಳನ್ನು ತುಂಬಿಸಿರುವ ಇವರು ನಿಮ್ಮ ಮನೆಯ ಮಗನಾಗಿ ಬಂದಿದ್ದಾರೆ…

Read More

ಕೊರಟಗೆರೆ : ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವಿಭಾಗದ ರಾಜ್ಯಾಧ್ಯಕ್ಷರಾದ ಪುಷ್ಪ ಅಮರನಾಥ್ ರವರ ಆದೇಶದ ಮೇರೆಗೆ ಹಾಗೂ ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಿ.ಚಂದ್ರಶೇಖರ್ ಗೌಡರ ಅನುಮತಿ ಮೇರೆಗೆ ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ.ಜಿ.ಪರಮೇಶ್ವರ್ ರವರ ಹಾಗೂ ರಾಜ್ಯಸಭಾ ಸದಸ್ಯರಾದ ಬಿ.ಸಿ.ಚಂದ್ರಶೇಖರ್ ರವರ ಶಿಫಾರಸ್ಸಿನ ಮೇರೆಗೆ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಗುಂಡಿನಪಾಳ್ಯ ಗ್ರಾಮದ ಶಾರದಮ್ಮ ಜಯರಾಮಯ್ಯ ರವರನ್ನು ತುಮಕೂರು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಉಪಾಧ್ಯಕ್ಷೆಯನ್ನಾಗಿ ನೇಮಕ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಶಾರದಮ್ಮ ಜಯರಾಮಯ್ಯ, ನನಗೆ ನೀಡಿರುವಂತಹ ಜವಾಬ್ದಾರಿಯನ್ನು ಕಾಂಗ್ರೆಸ್ ಸಮಿತಿ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಮಾರ್ಗದರ್ಶನದಲ್ಲಿ ಹಾಗೂ ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ಥಳೀಯ ನಾಯಕರುಗಳ ಮತ್ತು ಮುಖಂಡರುಗಳ ಸಹಯೋಗದೊಂದಿಗೆ ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಮತ್ತು ಸಂಘಟನೆಯನ್ನು ಬಲವರ್ಧನೆಗೊಳಿಸುವಲ್ಲಿ ಮಹಿಳಾ ಏಳಿಗೆಗಾಗಿ ಶ್ರಮಿಸುತ್ತೇನೆ ಹಾಗೂ…

Read More