Author: admin

ಮುಂಬೈ: ಮಹಾರಾಷ್ಟ್ರದ ಹಿರಿಯ ರಾಜಕಾರಣಿ, ಎನ್‌ಸಿಪಿ ರಾಷ್ಟ್ರೀಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಘೋಷಿಸಿದ್ದಾರೆ. ಪವಾರ್ ಅವರು ದೇಶದ ಪ್ರಮುಖ ವಿರೋಧ ಪಕ್ಷದ ನಾಯಕರಲ್ಲಿ ಒಬ್ಬರು. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ರಚಿಸಲು ಶಿವಸೇನಾ, ಕಾಂಗ್ರೆಸ್ ಮತ್ತು ಎನ್‌ಸಿಪಿ ನಡುವೆ ಮೈತ್ರಿಯನ್ನು ಒಟ್ಟುಗೂಡಿಸುವಲ್ಲಿ ದೊಡ್ಡ ಪಾತ್ರ ಹೊಂದಿದ್ದರು. ಉದ್ಧವ್‌ ಠಾಕ್ರೆ ಸರ್ಕಾರದಿಂದ ಬೇರ್ಪಟ್ಟ ನಂತರ ಏಕನಾಥ್‌ ಶಿಂಧೆ ಅವರು ಪಕ್ಷದ ತಂಡದೊಂದಿಗೆ ಬಿಜೆಪಿ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ್ದರು. ಇದಾದ ಬಳಿಕ, ಈಚೆಗೆ ಎನ್‌ಸಿಪಿಯ ಅಜಿತ್‌ ಪವಾರ್‌ ಅವರು ತಮ್ಮ ಚಿಕ್ಕಪ್ಪ ಶರದ್‌ ಪವಾರ್‌ ಅವರನ್ನು ತೊರೆದು ಬಿಜೆಪಿಯೊಂದಿಗೆ ಕೈಜೋಡಿಸಿ ಮುಂದಿನ ಸಿಎಂ ಆಗುತ್ತಾರೆಯೇ ಎಂಬ ಊಹಾಪೋಹದ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಶರದ್‌ ಪವಾರ್‌ ಅವರು ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಈ ರಾಜಕೀಯ ಬೆಳವಣಿಗೆ ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಪತ್ನಿ ಗೀತಾ ಜೊತೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ನಟ ಶಿವರಾಜ್ ಕುಮಾರ್, ಯಾವುದೇ ಕಾರಣಕ್ಕೂ ಸಕ್ರೀಯ ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಪತ್ನಿ ಗೀತಾ ಅವರದ್ದು ರಾಜಕಾರಣಿ ಕುಟುಂಬ. ಹಾಗಾಗಿ ಅವರೊಂದಿಗೆ ಪ್ರಚಾರದಲ್ಲಿ ಪಾಲ್ಗೊಂಡಿರುವೆ. ಆಪ್ತರಿಗಾಗಿ ಪ್ರಚಾರ ಮಾಡುವೆ. ಅದರ ಹೊರತಾಗಿ ಅಧಿಕೃತವಾಗಿ ಯಾವುದೇ ಪಕ್ಷವನ್ನು ಸೇರಲಾರೆ ಮತ್ತು ಚುನಾವಣೆಗೂ ನಿಲ್ಲಲಾರೆ ಎಂದಿದ್ದಾರೆ ಶಿವರಾಜ್ ಕುಮಾರ್. ಡಾ.ರಾಜ್ ಕುಟುಂಬಕ್ಕೂ ರಾಜಕಾರಣಿಗಳಿಗೂ ನಂಟಿದ್ದರೂ ನೇರವಾಗಿ ಯಾವತ್ತೂ ಅವರು ರಾಜಕಾರಣಿಗಳೊಂದಿಗೆ ಮತ್ತು ಪಕ್ಷದೊಂದಿಗೆ ಗುರುತಿಸಿಕೊಂಡವರಲ್ಲ. ಸ್ವತಃ ರಾಜ್ ಕುಮಾರ್ ಅವರಿಗೆ ಚುನಾವಣೆಗೆ ನಿಲ್ಲುವಂತೆ ಒತ್ತಡವಿದ್ದರೂ, ಅವರು ಒಪ್ಪಿಕೊಳ್ಳಲಿಲ್ಲ. ಯಾವುದೇ ಪಕ್ಷದ ಪರವಾಗಿಯೂ ಪ್ರಚಾರ ಮಾಡಿದವರಲ್ಲ. ಅದೇ ಮಾರ್ಗದಲ್ಲೇ ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ನಡೆದುಕೊಂಡು ಬಂದವರು. ಆದರೆ, ಗೀತಾ ಅವರನ್ನು ಮದುವೆಯಾದ ನಂತರ ಶಿವಣ್ಣ ಚುನಾವಣೆ ಪ್ರಚಾರಕ್ಕೆ ಇಳಿದಿದ್ದಾರೆ. ದೊಡ್ಮನೆ ಸೊಸೆಯಾಗಿ ಬಂಗಾರಪ್ಪನವರ ಪುತ್ರಿ ಗೀತಾ  ಬಂದ ನಂತರ, ಸಹೋದರನ ಪರವಾಗಿ ಅವರು ಪ್ರಚಾರಕ್ಕೆ ಹೋದರು. ಸ್ವತಃ ಗೀತಾ ಅವರೇ…

Read More

ಬೆಂಗಳೂರು: ಡಿಕೆ ಶಿವಕುಮಾರ್ ಕೋಲಾರದ ಮುಳುಬಾಗಿಲಿಗೆ ಪ್ರಯಾಣಿಸುವ ವೇಳೆ ಅವಘಡವೊಂದು ಸಂಭವಿಸಿದೆ. ಡಿಕೆ ಶಿವಕುಮಾರ್ ಮುಳುಬಾಗಿಲಿಗೆ ತೆರಳಲು ಹೆಚ್​ಎಎಲ್​ ಏರ್​ಪೋರ್ಟ್​​ಗೆ ಬಂದಿದ್ದರು. ಆದ್ರೆ ಹೆಲಿಕಾಪ್ಟರ್ ಕೊಂಚ ದೂರ ಸಾಗಿ ತುರ್ತು ಭೂಸ್ಪರ್ಶವಾಗಿದೆ. ಏಕೆಂದರೆ ಹಾರಾಟ ವೇಳೆ ಹೆಲಿಕಾಪ್ಟರ್​ ಮುಂಭಾಗದ ವಿಂಡೋ​ ಗಾಜು ಪುಡಿಪುಡಿಯಾಗಿದೆ. ಬೆಂಗಳೂರಿನ ಹೆಚ್​ಎಎಲ್​ನಿಂದ ಮುಳಬಾಗಿಲಿಗೆ ತೆರಳಲು ಹೆಲಿಕಾಪ್ಟರ್ ಹತ್ತಿದ್ದಾರೆ. ಕೊಂಚ ದೂರ ಸಾಗುತ್ತಿದ್ದಂತೆ ಹೆಲಿಕಾಪ್ಟರ್​ಗೆ ರಣಹದ್ದು ಬಡಿದಿದೆ. ಇದರಿಂದ ಹೆಲಿಕಾಪ್ಟರ್​ ವಿಂಡೋ ಗ್ಲಾಸ್​ ಪುಡಿಪುಡಿಯಾಗಿದ್ದು ತಕ್ಷಣ ಎಚ್ಚೆತ್ತ ಪೈಲೆಟ್ ತುರ್ತು ಭೂಸ್ಪರ್ಶ ಮಾಡಿದ್ದಾರೆ. ರಣಹದ್ದು ಬಡಿಯುತ್ತಿದ್ದಂತೆ ಡಿಕೆ ಶಿವಕುಮಾರ್ ಕೆಲ ಸಮಯ ಗಾಬರಿಯಾಗಿದ್ದಾರೆ. ಸದ್ಯ ಯಾವುದೇ ಹಾನಿಯಾಗಿಲ್ಲ. ಹೆಲಿಕಾಪ್ಟರ್ ಸಿಬ್ಬಂದಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಟಿವಿ9 ಪ್ರತಿನಿಧಿ, ಕ್ಯಾಮರಾಮೆನ್ ಎಲ್ಲರೂ ಕೂಡ ಸುರಕ್ಷಿತರಾಗಿದ್ದಾರೆ. ಹೆಚ್​ಎಎಲ್​ ಏರ್​ಪೋರ್ಟ್​​ಗೆ ಹಿಂದಿರುಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy  

Read More

Google Play Store ನಿಂದ 3,500 ಸಾಲದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುತ್ತದೆ Google ನೀತಿಗಳನ್ನು ಅನುಸರಿಸದಿರುವ ಸಾಲದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಾಗಿದೆ. ಈ ಆಪ್‌ಗಳು ಬಳಕೆದಾರರ ಅನುಮತಿಯಿಲ್ಲದೆ ಸಂಪರ್ಕಗಳು ಮತ್ತು ಫೋಟೋಗಳನ್ನು ಸೋರಿಕೆ ಮಾಡುತ್ತಿವೆ ಎಂದು ಗೂಗಲ್ ಕಂಡುಹಿಡಿದಿದೆ. ಫೋಟೋಗಳು ಮತ್ತು ಸಂಪರ್ಕಗಳಂತಹ ಬಳಕೆದಾರರ ಸೂಕ್ಷ್ಮ ಡೇಟಾಗೆ ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳನ್ನು ಪ್ರವೇಶಿಸದಂತೆ ಮಾಡಲು Google ತನ್ನ ಸಾಲ ನೀತಿಯನ್ನು ನವೀಕರಿಸಿದೆ. ನಕಲಿ ಸಾಲದ ಆ್ಯಪ್‌ ಗಳ ಮೂಲಕ ಹಣ ಸುಲಿಗೆ ಮಾಡುತ್ತಿದ್ದ 14 ಜನರನ್ನು ಮುಂಬೈ ಸೈಬರ್ ಪೊಲೀಸರು ಬಂಧಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ವಂಚಕರು ಹಲವು ಮಂದಿಯಿಂದ ಕದ್ದ 350 ಕೋಟಿ ರೂ.ಗಳನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿ ವಿದೇಶಕ್ಕೆ ಕಳ್ಳಸಾಗಣೆ ಮಾಡಿದ್ದಾರೆ. 2021 ಮತ್ತು ಮಾರ್ಚ್ 31, 2023 ರ ನಡುವೆ ಮುಂಬೈ ಪೊಲೀಸರು 176 ನಕಲಿ ಸಾಲ ವಂಚನೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪ್ರಕರಣಗಳಲ್ಲಿ 70 ಮಂದಿಯನ್ನು ಬಂಧಿಸಲಾಗಿದೆ. ಭಾರತದಲ್ಲಿ ಇಂತಹ ವಂಚನೆಗಳನ್ನು ಎದುರಿಸಲು ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳಿಗೆ ಹೊಸ…

Read More

ಎಲೆಕ್ಟ್ರಾನಿಕ್ ಸಿಗರೇಟ್ ಬಳಕೆಯನ್ನು ನಿಯಂತ್ರಿಸಲು ಆಸ್ಟ್ರೇಲಿಯಾ ಕ್ರಮ ಕೈಗೊಳ್ಳುತ್ತದೆ. ಹದಿಹರೆಯದವರಲ್ಲಿ ಇ-ಸಿಗರೇಟ್ ಬಳಕೆಯಲ್ಲಿ ಗಮನಾರ್ಹ ಹೆಚ್ಚಳದ ಹಿನ್ನೆಲೆಯಲ್ಲಿ ಈ ನಿರ್ಧಾರವು ಬಂದಿದೆ. ಮುಂದಿನ ಪೀಳಿಗೆ ತಂಬಾಕು ಸೇವನೆಯ ವ್ಯಸನಿಗಳಾಗಿದ್ದು, ಇವು ಹದಿಹರೆಯದವರನ್ನೇ ಗುರಿಯಾಗಿಸುತ್ತಿವೆ ಎಂಬುದು ಅಧಿಕಾರಿಗಳ ಕ್ರಮದ ಗಮನಸೆಳೆಯುತ್ತಿದೆ. ಆಸ್ಟ್ರೇಲಿಯಾವು ಒಂದು ದಶಕದಲ್ಲಿ ದೇಶದ ಅತಿದೊಡ್ಡ ಧೂಮಪಾನ ವಿರೋಧಿ ಸುಧಾರಣೆಗಳನ್ನು ಜಾರಿಗೆ ತರುತ್ತಿದೆ. ಬಿಸಾಡಬಹುದಾದ ವ್ಯಾಪ್‌ಗಳನ್ನು ನಿಷೇಧಿಸುವುದು ಮತ್ತು ಅವುಗಳ ಆಮದನ್ನು ನಿಲ್ಲಿಸುವುದು ನಿರ್ಧಾರವಾಗಿದೆ. ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸುವ ಪ್ರಯತ್ನಗಳಲ್ಲಿ ಆಸ್ಟ್ರೇಲಿಯಾ ಮುಂಚೂಣಿಯಲ್ಲಿದೆ. 2012 ರಲ್ಲಿ, ಆಸ್ಟ್ರೇಲಿಯವು ಸಿಗರೇಟ್‌ ಗಳಿಗೆ ಸರಳ ಪ್ಯಾಕೇಜಿಂಗ್ ಕಾನೂನನ್ನು ಜಾರಿಗೆ ತಂದ ಮೊದಲ ದೇಶವಾಯಿತು. ದೇಶವು ಇ-ಸಿಗರೇಟ್‌ ಗಳ ವಿರುದ್ಧ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಘೋಷಿಸುತ್ತಿದೆ. ಇದರ ಭಾಗವಾಗಿ ಏಕ-ಬಳಕೆಯ ಬಿಸಾಡಬಹುದಾದ ವೇಪ್‌ ಗಳನ್ನು ನಿಷೇಧಿಸಲು ಆಸ್ಟ್ರೇಲಿಯಾ ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆಗಳು ಸೇರಿದಂತೆ ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಪಿಂಗ್ ಅನ್ನು ವ್ಯಾಪಕವಾಗಿ ಬಳಸುತ್ತಾರೆ. ಇ-ಸಿಗರೇಟ್‌ ಗಳು ವ್ಯಾಪಕವಾಗಿ ಹರಡಿವೆ ಎಂದು ಆಸ್ಟ್ರೇಲಿಯಾದ ಆರೋಗ್ಯ ಸಚಿವ ಮಾರ್ಕ್ ಬಟ್ಲರ್…

Read More

ಇಂಡಿಯಾ ಟುಡೇ-ಸಿ ವೋಟರ್ ಸಮೀಕ್ಷೆ ಕರ್ನಾಟಕದಲ್ಲಿ ಬಿಜೆಪಿಗೆ ಸೋಲುಣಿಸಿದೆ. 74-86 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಸಮೀಕ್ಷೆಯ ಫಲಿತಾಂಶಗಳ ಪ್ರಕಾರ ಕಾಂಗ್ರೆಸ್ 107-119 ಸ್ಥಾನಗಳನ್ನು ಗೆಲ್ಲಲಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಆಡಳಿತಾರೂಢ ಬಿಜೆಪಿಗೆ ಸಮೀಕ್ಷೆಗಳು ತಲೆನೋವಾಗಿವೆ. ಚುನಾವಣೆಯಲ್ಲಿ ಬಹುಮತ ಗಳಿಸುವ ಮೂಲಕ ಸರ್ಕಾರ ರಚಿಸುವ ಬಿಜೆಪಿಯ ಪ್ರಯತ್ನವನ್ನು ಅಭಿಪ್ರಾಯ ಸಮೀಕ್ಷಾ ವರದಿ ಮಸುಕುಗೊಳಿಸುತ್ತಿದೆ ಎಂದು ಗಮನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಎದುರು ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸುತ್ತಿವೆ. ಎಬಿಪಿ-ಸಿ ಮತದಾರರ ಅಭಿಪ್ರಾಯ ಸಮೀಕ್ಷೆಯು ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ. ಸಮೀಕ್ಷೆ ಪ್ರಕಾರ ದಕ್ಷಿಣ ಭಾರತದ ಏಕೈಕ ಆಡಳಿತ ರಾಜ್ಯವಾದ ಕರ್ನಾಟಕದಲ್ಲಿ ಬಿಜೆಪಿಗೆ ನಿರೀಕ್ಷಿತ ಗೆಲುವು ಸಿಕ್ಕಿಲ್ಲ. 224 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಕಾಂಗ್ರೆಸ್ 107 ರಿಂದ 119 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಬಿಜೆಪಿಯ ಸಾಧನೆ 74-86 ಸ್ಥಾನಗಳಿಗೆ ಸೀಮಿತವಾಗಲಿದೆ. ಜೆಡಿಎಸ್ 23-35 ಸ್ಥಾನಗಳನ್ನು…

Read More

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಮಯದಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದರೇ, ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇದೀಗ ನಗರದ ಡಿಜೆ ಹಳ್ಳಿಯ ಕೆಲ ಮಸೀದಿ ಬಳಿ ನಿಂತು ಕಾಂಗ್ರೆಸ್, ಎಸ್ಡಿ‌ಪಿಐ, ಬಿಎಸ್ಬಿ, ಎಎಪಿ ಪಕ್ಷಗಳ ಕಾರ್ಯಕರ್ತರು ಪಕ್ಷದ ಪರ ಪ್ರಚಾರ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ. ಕಳೆದ ತಿಂಗಳು ಶುಕ್ರವಾರ ಏಪ್ರಿಲ್ 28 ರಂದು ಡಿಜೆ ಹಳ್ಳಿಯ ಟಿಪ್ಪು ಸರ್ಕಲ್ ಬಳಿಯ ಮೆಕ್ಕಾ ಮಸೀದಿ ಬಳಿ ನಮಾಜ್ ಸಮಯದಲ್ಲಿ ಎಸ್ಡಿಪಿಐ, ಕಾಂಗ್ರೆಸ್, ಬಿಎಸ್ಪಿ ಕಾರ್ಯಕರ್ತರು ಪ್ರಚಾರ ಮಾಡಿದ್ದಾರೆ. ಅದೇ ದಿನ ಹುಸೇನಿಯಾ ಮಸೀದಿ ಬಳಿ ಎಎಪಿ, ಎಸ್ಡಿಪಿಐ, ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ಮಾಡಿದ್ದಾರೆ. ಮಸೀದಿ ಒಳಗೆ ಹೋಗುವವರಿಗೆ, ಹೊರಗೆ ಬರುವವರಿಗೆ ತಮ್ಮ ಪಕ್ಷದ ಪರ ಮತಯಾಚನೆ ಮಾಡಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನೀತಿ ಸಂಹಿತೆ ಅಡಿಯಲ್ಲಿ ಅನೇಕ ನಿಬಂಧನೆಗಳಿದ್ದು ಅದರಲ್ಲಿ ಧಾರ್ಮಿಕ…

Read More

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ರಾಹುಲ್‌ ಗಾಂಧಿ ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸ್ ಭದ್ರಕೋಟೆ ದಾವಣಗೆರೆ ಜಿಲ್ಲೆಯ ಹರಿಹರ ನಗರದ ಗಾಂಧಿ ಮೈದಾನದಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲೆಯ 7 ಕ್ಷೇತ್ರಗಳ ಅಭ್ಯರ್ಥಿಗಳು ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ರಾಹುಲ್ ಗಾಂಧಿ ರೋಡ್ ಶೋ ನಡೆಸಲಿದ್ದಾರೆ. ಹೆಚ್.ಡಿ.ತಮ್ಮಯ್ಯ ಪರ ಮತಯಾಚನೆ ಮಾಡಲಿದ್ದಾರೆ. ಕೆಇಬಿ ಸರ್ಕಲ್ ನಿಂದ ಅಜಾದ್ ಪಾರ್ಕ್ ಸರ್ಕಲ್ ವೆರೆಗೂ ರೋಡ್ ಶೋ ನಡೆಸಿ ಆಜಾದ್ ಪಾರ್ಕ್ ನಲ್ಲಿ ಬಹಿರಂಗ ಭಾಷಣ ಮಾಡಲಿದ್ದಾರೆ. ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ  ನಡೆಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್ ಪರ ಮತಯಾಚನೆ ಮಾಡಲಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಇಂದು ಚಾಮರಾಜನಗರ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಪ್ರಚಾರ ನಡೆಸಲಿದ್ದಾರೆ. ಹನೂರು, ಕೊಳ್ಳೇಗಾಲ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆ ಮಾಡಲಿದ್ದಾರೆ. ಹನೂರಿನ ಆರ್.ಎಸ್.ದೊಡ್ಡಿ ಬಳಿಯ ಮೈದಾನದಲ್ಲಿ ಬಿಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಹನೂರು ಬಿಜೆಪಿ ಅಭ್ಯರ್ಥಿ ಪ್ರೀತನ್ ನಾಗಪ್ಪ ಪರ ಮತಯಾಚನೆ ಮಾಡಲಿದ್ದಾರೆ. ಬಳಿಕ ಕೊಳ್ಳೇಗಾಲ ಕ್ಷೇತ್ರದ ಸಂತೇಮರಹಳ್ಳಿಯಲ್ಲಿ ಕೊಳ್ಳೇಗಾಲ ಅಭ್ಯರ್ಥಿ ಎನ್.ಮಹೇಶ್ ಪರ ಮತಯಾಚಿಸಲಿದ್ದಾರೆ. ಹಾಗೂ ಸಿದ್ದರಾಮಯ್ಯ ಮಣಿಸಲು ಕೇಂದ್ರ ಸಚಿವ ಅಮಿತ್ ಶಾ ರಣತಂತ್ರ ಹೆಣೆದಿದ್ದು ಬೆಳಗ್ಗೆ 11 ಗಂಟೆಗೆ ವರುಣ ಕ್ಷೇತ್ರದ ಹೊಸಕೋಟೆ ಬಳಿ ಸಮಾವೇಶ ನಡೆಸಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಭಾಗಿಯಾಗಲಿದ್ದಾರೆ. ಬೆಂಗಳೂರಿನಲ್ಲಿ ಅಮಿತ್ ಶಾ ರೋಡ್ ಶೋ ನಡೆಸಲಿದ್ದು ಆಡುಗೋಡಿ ಸಿಗ್ನಲ್‌ನಿಂದ ಆರಂಭವಾಗಿ ಹೊಸೂರು ರಸ್ತೆಯ ಟೋಟಲ್ ಮಾಲ್‌ವರೆಗೂ ಅಮಿತ್ ಶಾ ರೋಡ್‌ ಶೋ ನಡೆಸಲಿದ್ದಾರೆ. ರೋಡ್‌ ಶೋ ನಡೆಯುವ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ. ಸುಗಮ ಸಂಚಾರಕ್ಕೆ ವಾಹನಗಳ ಮಾರ್ಗ ಬದಲಾಯಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಬೆಳಗಾವಿ: ದಕ್ಷಿಣ ಭಾಗದಲ್ಲಿ ಮತಪ್ರಚಾರ ಜೋರಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಪ್ರಭಾವತಿ ಮಾಸ್ತಮರಡಿ ಮಜಗಾವಿಯಲ್ಲಿ ಇಂದು ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸ್ಥಳೀಯರನ್ನು ಉದ್ದೇಶಿಸಿ ಮತ ನೀಡುವಂತೆ ಮನವಿ ಮಾಡಿದರು. ಭಾಗವಹಿಸಿದ್ದ ಹಿರಿಯರು, ಯುವಕರೆಲ್ಲರೂ ಹಾಲಿ ಸರ್ಕಾರದ ದುರಾಡಳಿತದಿಂದ ಬೇಸತ್ತಿದ್ದು, ಮೊದಲಿನಂತೆ ಜನಪರ ಕಾಂಗ್ರೆಸ್ ಸರ್ಕಾರವನ್ನು ಬಯಸುತ್ತಿದ್ದಾರೆ. ಎಲ್ಲೇ ಹೋದರೂ ಜನರು ಕುಡಿಯುವ ನೀರು, ಚರಂಡಿ ಅವ್ಯವಸ್ಥೆ, ಬೆಲೆ ಏರಿಕೆ ಮುಂತಾದವುಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಕಾಂಗ್ರೆಸ್ ಸರ್ಕಾರ ಮಾತ್ರ ಅದನ್ನು ಪರಿಹರಿಸಬಹುದು, ಹಾಗಾಗಿ ಈ ಬಾರಿ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡುವ ನಿರ್ಧಾರ ಮಾಡಿರುವುದಾಗಿ ತಿಳಿಸಿದರು. ಕಾಂಗ್ರೆಸ್‌ನ ಜನಪರ ಆಡಳಿತ, 5 ಗ್ಯಾರಂಟಿಗಳು, ಬೆಳಗಾವಿ ದಕ್ಷಿಣಕ್ಕೆ ಯೋಜನೆ ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More