Author: admin

ತುಮಕೂರಿನ ವಿಪ್ರೋ ಎಂಟರ್ ಪ್ರೈಸಸ್ ಪ್ರೈ.ಲಿ. ಮತ್ತು ಗುಬ್ಬಿಯ ಮಡಿಲು ಸೇವಾ ಟ್ರಸ್ಟ್ (ರಿ) ಇದರ ಸಹಯೋಗದೊಂದಿಗೆ ಉಚಿತ ಕಣ್ಣು ತಪಾಸಣಾ ಶಿಬಿರವು ಏಪ್ರಿಲ್ 25ರಂದು  ತುಮಕೂರು ತಾಲೂಕಿನ ಗೂಳೂರು ಪಂಚಾಯತ್ ಆವರಣದಲ್ಲಿ ನಡೆಯಲಿದೆ. ಬೆಳಗ್ಗೆ 10:30ರಿಂದ ಆರಂಭವಾಗಲಿರುವ ಶಿಬಿರವು ಮಧ್ಯಾಹ್ನ 2:30ರವರೆಗೆ ನಡೆಯಲಿದೆ.  ಕಾರ್ಯಕ್ರಮವನ್ನು ವಿಪ್ರೋ ಎಂಟರ್ ಪ್ರೈಸಸ್ ಪ್ರೈ.ಲಿ ವೈಸ್ ಪ್ರೆಸಿಡೆಂಟ್ ವಿಶ್ವನಾಥ್ ಕಾರ್ಕಡ ಉದ್ಘಾಟಿಸಲಿದ್ದಾರೆ. ಮಡಿಲು ಸೇವಾ ಟ್ರಸ್ಟ್ ನ ಮುಖ್ಯಸ್ಥರಾದ ಸಿ.ಕೆ.ಮುರಳೀಧರನ್ ಹಾಗೂ ಮಡಿಲು ಸೇವಾ ಟ್ರಸ್ಟ್ ನ ಟ್ರಸ್ಟಿ ಅಬ್ರಹಾಂ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಗೂಳೂರು ಪಂಚಾಯತ್ ನ ಪಿಡಿಓ ಡಿ.ಶಂಶೀರ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

 ಮಂಜುಸ್ವಾಮಿ ಎಂ.ಎನ್., ಕೊರಟಗೆರೆ ಕೊರಟಗೆರೆ: ಲೋಕಸಭಾ ಚುನಾವಣೆಗೆ ನಾನು ನಿಲ್ಲೋದಿಲ್ಲ ಅಂತಾ ಹೇಳ್ದೆ.. ಆದರೆ ಕಾಂಗ್ರೆಸ್ ಪಕ್ಷದವ್ರು ನನಗೇ ತುಮಕೂರು ಜಿಲ್ಲೆಗೆ ಕರೆತಂದು ಸೋಲಿಸಿ ಅವಮಾನ ಮಾಡಿದ್ರು.. ನನ್ನನ್ನು ಸೋಲಿಸಿ ಅವಮಾನ ಮಾಡಿದ ನೋವು ಇನ್ನೂ ಕಾಡ್ತಿದೆ.. ನಮ್ಮೆಲ್ಲರ ಆತ್ಮೀಯ ಸುಧಾಕರಲಾಲ್ ಗೆಲ್ಲಿಸಿ, ನನ್ನ ಕಣ್ಣೀರು ಒರೆಸಬೇಕಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಾರ್ಯಕರ್ತರಿಗೆ ಕರೆ ನೀಡಿದರು. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕೇಂದ್ರದ ಗ್ರಾಮದಲ್ಲಿ ಜೆಡಿಎಸ್ ಪಕ್ಷದಿಂದ ಸೋಮವಾರ ಏರ್ಪಡಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ನಾನು 1994ರಲ್ಲಿ ಸಿಎಂ ಆಗಿದ್ದಾಗ 11ಕ್ಷೇತ್ರದಲ್ಲಿ 9 ಕ್ಷೇತ್ರ ಗೆಲ್ಲಿಸಿದ ತುಮಕೂರು ಜಿಲ್ಲೆಯ ಪುಣ್ಯಾತ್ಮರು ನೀವು. ಕಾಂಗ್ರೆಸ್ ನಾಯಕರು ನನಗೇ ಅವಮಾನ ಮಾಡಿದ ನೋವು ಇನ್ನೂ ನನ್ನನ್ನು ಕಾಡ್ತಿದೆ. ಸುಧಾಕರಲಾಲ್ ಬಡಕುಟುಂಬದ ಓಬ್ಬ ಸಾಮಾನ್ಯ ಜೆಡಿಎಸ್ ಕಾರ್ಯಕರ್ತ. 25 ವರ್ಷದಿಂದ ಕೊರಟಗೆರೆ ಕ್ಷೇತ್ರದಲ್ಲಿ ಬಡಜನರ ಸೇವೆ ಮಾಡ್ತಿದ್ದಾನೆ. ನೀವು ಸಾಮಾನ್ಯ ಕಾರ್ಯಕರ್ತನನ್ನ ಬೆಳೆಸಿದ್ದಿರಾ, 2023ಕ್ಕೆ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿ. ಕುಮಾರಸ್ವಾಮಿ…

Read More

ಮೈಸೂರು: ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೈಸೂರಿಗೆ ಆಗಮಿಸಿದ್ದಾರೆ. ಈ ವೇಳೆ ಕೃಷ್ಣರಾಜೇಂದ್ರ ಕ್ಷೇತ್ರದ ಟಿಕೆಟ್ ವಂಚಿತರಾಗಿರುವ ಎಸ್‌ಎ ರಾಮದಾಸ್ ಅವರನ್ನು ಅಮಿತ್ ಶಾ ಬಾಚಿ ತಬ್ಬಿ, ಬೆನ್ನು ತಟ್ಟಿದ್ದಾರೆ. ಅಮಿತ್ ಶಾ ಆಗಮಿಸುತ್ತಲೇ ಅವರ ಕಾಲಿಗೆ ನಮಸ್ಕರಿಸಿ ರಾಮದಾಸ್ ಸ್ವಾಗತಿಸಿದರು. ಈ ವೇಳೆ ಅಮಿತ್ ಶಾ ಅವರನ್ನು ಬಾಚಿ ತಬ್ಬಿ, ಬೆನ್ನು ತಟ್ಟಿದ್ದಾರೆ. ಈ ಬಗ್ಗೆ ತಿಳಿಸಿರುವ ರಾಮದಾಸ್, ನಾನು ಆರೋಗ್ಯದ ಸಮಸ್ಯೆಯ ಹಿನ್ನೆಲೆ ಆಸ್ಪತ್ರೆಯಲ್ಲಿದ್ದೆ. ರಾಷ್ಟ್ರೀಯ ನಾಯಕರು ಬಂದಾಗ ನಾನು ಸ್ವಾಗತ ಕೋರುವುದು ನನ್ನ ಜವಾಬ್ದಾರಿ. ಏರ್‌ಪೋರ್ಟ್‌ನಲ್ಲಿ ಇಳಿದಾಗ ಅಮಿತ್ ಶಾ ಅವರು ಬಹಳ ಆತ್ಮೀಯವಾಗಿ ಅಪ್ಪುಗೆ ನೀಡಿ ಮಾತನಾಡಿಸಿದರು. ರಾಮದಾಸ್ ಜಿ ಬಹುತ್ ಅಚ್ಚಾ ನಿರ್ಲಿಯಾ ಅಂತಾ ತಬ್ಬಿ ನಗು ಸೂಸಿದರು. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಮದಾಸ್ ಸಂತಸ ವ್ಯಕ್ತಪಡಿಸಿದರು ನಾನು ಯಾವತ್ತೂ ಭರವಸೆ ಬೇಕು ಎಂದು ಕೇಳಿದವನಲ್ಲ. ಇದು ಇವತ್ತಿನ ಸಂಬಂಧ ಅಲ್ಲ. 25…

Read More

ಹುಬ್ಬಳ್ಳಿ: ಶೆಟ್ಟರ್ ನಮ್ಮ ತಂಡದಿಂದ ಹೊರಗೆ ಹೋಗಿದ್ದರಿಂದ ನಮಗೆ ಯಾವುದೇ ನಷ್ಟವಿಲ್ಲ. ನಾವು ಅವರಿಗೆ ನಿವೃತ್ತಿ ಹೊಂದಲು ಹೇಳಿದ್ದೆವು. ಆದರೆ ಈ ಸಲ ಕಪ್ ನಮ್ದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್‌ಗೆ ಟಾಂಗ್ ನೀಡಿದ್ದಾರೆ. ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂಬ ವಿಚಾರದ ಕುರಿತು ಹುಬ್ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂಡದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಮುಂಬೈ ಕರ್ನಾಟಕ ಭಾಗದಲ್ಲಿ ನಮ್ಮ ಸ್ಟ್ರೈಕ್ ರೇಟ್ ಜಾಸ್ತಿಯಿದೆ. ಅದು ಮತ್ತೆ ಮುಂದುವರೆಯಲಿದೆ. ತಂಡದ ಹಳೇ ಕ್ರೀಡಾಪಟುಗಳು ನಿವೃತ್ತಿ ಹೊಂದುತ್ತಾರೆ. ಹೊಸ ಕ್ರೀಡಾಪಟುಗಳು ಉತ್ಸಾಹದಿಂದ ಆಡಿ ನಮ್ಮನ್ನು ಗೆಲ್ಲಿಸುತ್ತಾರೆ. ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿರುವುದರಿಂದ ನಮಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಲ್ಪನೆ ಮತ್ತು ಸ್ವಪ್ನ ಕಾಣಲು ಎಲ್ಲರಿಗೂ ಹಕ್ಕಿದೆ. ಅವರೂ ಕಾಣಲಿ ಬಿಡಿ. ಆದರೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್‌ನಿಂದ ನಾವು ಗೆಲ್ಲುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಸೆಂಟ್ರಲ್ ಟಿಕೆಟ್ ನಿರ್ಣಯ ಅಮಿತ್…

Read More

ಮೈಸೂರು: ಖಂಡಿತಾ ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ನಾನು ಸಿಎಂ ಆಗಬೇಕೆಂದು ಕ್ಷೇತ್ರದಲ್ಲಿ ಮಾತ್ರ ಕೂಗು ಕೇಳಿಬರುತ್ತಿದೆ. ರಾಜ್ಯದೆಲ್ಲೆಡೆ ಈ ಕೂಗು ಕೇಳಿದಾಗ ಸಿಎಂ ಮಾಡುವಂತೆ ಕೇಳುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಜಿಲ್ಲೆಯಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್​, ಜೆಡಿಎಸ್ ಮೈತ್ರಿ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಇದು ರಾಜಕೀಯ ವ್ಯಭಿಚಾರನಾ ಎಂದು ಪ್ರಶ್ನಿಸಿದರು. ಇದನ್ನು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು. ಇದರ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದು ಕಿಡಿಕಾರಿದರು. ಲಿಂಗಾಯತ ಡ್ಯಾಂ ಒಡೆದಿರುವ ಹೇಳಿಕೆ ವಿಚಾರವಾಗಿ ಮಾತನಾಡಿ ಅವರು, ಇದು ಕಾಂಗ್ರೆಸ್‌ಗೆ ರಾಜಕೀಯ ವೃತ್ತಿ. ಅವರದ್ದು ಬರೀ ಒಡೆಯುವ ಕೆಲಸ. ಹಿಂದೆ ವೀರಶೈವ ಲಿಂಗಾಯತ ಹೆಸರಲ್ಲಿ ಒಡೆದು ಅದನ್ನು ಅನುಭವಿಸಿದ್ದರು. ನಾವು ಲಿಂಗಾಯತರ ಡ್ಯಾಂನ್ನು ಗಟ್ಟಿ ಮಾಡಿದ್ದೇವೆ. ಬೇರೆ ಬೇರೆ ಸಮುದಾಯದವನ್ನು ಸೇರಿಸಿಕೊಂಡು ಡ್ಯಾಂ ಗಟ್ಟಿ‌ ಮಾಡಿದ್ದೇವೆ. ಹಿಂದುತ್ವದ ಡ್ಯಾಂನ್ನು ಗಟ್ಟಿ ಮಾಡಿ ಎತ್ತರಿಸಿದ್ದೇವೆ. ಚುನಾವಣೆಯಲ್ಲಿ ಮುಳುಗಿದಾಗ…

Read More

ದಾವಣಗೆರೆ: ಬಿಜೆಪಿಗೆ ವೀರಶೈವ ಮತಗಳು ಕೈಬಿಡುತ್ತವೆ ಎಂಬ ಆತಂಕ ಇಲ್ಲ, ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಈ ವರ್ಷ ಅದರ ಸರಾಸರಿ ಹೆಚ್ಚಾಗುತ್ತೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು ಸವದಿ ಶೆಟ್ಟರ್ ಹೋಗಿರುವುದರಿಂದ ಲಿಂಗಾಯತ ಮತದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದರು. ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹೇಳಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ, ಅವರ ಹೇಳಿಕೆ ನಾವು ಅಲ್ಲಗಳೆದಿಲ್ಲ. ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಬಂದಷ್ಟು ಬಿಜೆಪಿಗೆ ಲಾಭವೇ ಅಗುತ್ತೆ ಎಂದರು. ರಾಹುಲ್ ಗಾಂಧಿ ನಿನ್ನೆ ಕೂಡಲಸಂಗಮಕ್ಕೆ ಹೋಗಿದ್ದು ತೋರಿಕೆಗಾಗಿ ವಿಭೂತಿ ಹಚ್ಚಿದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ವ್ಯಂಗ್ಯವಾಡಿದರು. ಈ ಬಾರಿ 19 ರಿಂದ 30 ವರ್ಷದ ಯುವಕರು ಬಿಜೆಪಿ ಪಕ್ಷದ ಪರವಾಗಿದ್ದಾರೆ. ಹೊಸ ಬದಲಾವಣೆ ಬಯಸಿ ಯುವಕರು ಬಿಜೆಪಿ ಕಡೆ ಬರುತ್ತಿದ್ದಾರೆ ಎಂದು ಹೇಳಿದರು. ಇನ್ನು ಡಿಕೆಶಿ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿಯವರು ಬಿಜೆಪಿಯವರ ಭಾವನೆಗಳ ಜೊತೆ ಆಟ ಆಡುತ್ತಿದ್ದಾರೆ…

Read More

ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿರುವ ಹಿಂಗಾನಾ ಎಂಐಡಿಸಿ ಕಂಪನಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದಾಗ ಮೂವರು ಕಾರ್ಮಿಕರು ಸಜೀಹದಹನವಾಗಿದ್ದಾರೆ ಎಂದು ವರದಿಯಾಗಿದೆ. ಇನ್ನೂ 10 ರಿಂದ 12 ಕಾರ್ಮಿಕರು ಒಳಗೆ ಸಿಲುಕಿರುವ ಆತಂಕ ಉಂಟಾಗಿದೆ.ಈ ಕಂಪನಿಯಲ್ಲಿ ಬೆಂಕಿಯಿಂದ ಮೂವರು ಕಾರ್ಮಿಕರ ದುರಾದೃಷ್ಟಕರ ಸಾವಿನ ಬಗ್ಗೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತುಂಬಾ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ವಿಷಯದ  ಬಗ್ಗೆ ಮಾತನಾಡಲು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನಾಗ್ಪುರದ ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ಸೂಚಿಸಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡವರಿಗೆ ತಕ್ಷಣ ಉತ್ತಮ ಚಿಕಿತ್ಸೆ ನೀಡಬೇಕು ಎಂದು ದೇವೇಂದ್ರ ಫಡ್ನವೀಸ್ ಸೂಚನೆ ನೀಡಿದ್ದಾರೆ.ಕೂಡಲೆ ತಹಶೀಲ್ದಾರ್​ ಆ ಸ್ಥಳಕ್ಕೆ ಆಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಗೆಲುವು ಸಾಧಿಸಿ ಸರ್ಕಾರ ರಚಿಸಲು ಶತಾಯ ಗತಾಯವಾಗಿ ಪ್ರಯತ್ನಿಸುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಶಕ್ತಿ ತುಂಬಲು ಹೈಕಮಾಂಡ್ ನಾಯಕರು ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಮೈಸೂರು ಜಿಲ್ಲಾ ಪ್ರವಾಸಕ್ಕೂ ಮುಹೂರ್ತ ಫಿಕ್ಸ್‌ ಆಗಿದೆ. ಹೌದು, ಏಪ್ರಿಲ್‌ 25ರಂದು ಪ್ರಿಯಾಂಕಾ ಗಾಂಧಿ ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಸಾರ್ವಜನಿಕ‌ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಟಿ.ನರಸೀಪುರ ಕ್ಷೇತ್ರದ ಹೆಳವರಹುಂಡಿಯಲ್ಲಿ ಮಧ್ಯಾಹ್ನ 12ರಿಂದ 1 ಗಂಟೆವರೆಗೆ ನಡೆಯುವ ಸಾರ್ವಜನಿಕ‌ ಸಭೆಯಲ್ಲಿ ಪಾಲ್ಗೊಂಡ ನಂತರ ಪ್ರಿಯಾಂಕಾ ಗಾಂಧಿ, ಮಧ್ಯಾಹ್ನ 2.30ಕ್ಕೆ ಹನೂರು ಕ್ಷೇತ್ರಕ್ಕೆ ತೆರಳಲಿದ್ದಾರೆ. ಅಲ್ಲಿ ಗೌರಿಶಂಕರ್ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಿರುವ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 3ರಿಂದ ಸಂಜೆ 4 ಗಂಟೆವರೆಗೆ ಮಹಿಳೆಯರ ಜೊತೆ ಸಂವಾದ ನಡೆಸಲಿದ್ದಾರೆ. ಸಂವಾದ ಕಾರ್ಯಕ್ರಮದ ಬಳಿಕ ಪ್ರಿಯಾಂಕಾ ಗಾಂಧಿ ಅವರು 4.15ಕ್ಕೆ ಕೆ.ಆರ್.ನಗರಕ್ಕೆ ತೆರಳಲಿದ್ದಾರೆ. ಸಂಜೆ 5.30ರಿಂದ 6.30ರವರೆಗೆ ಅಲ್ಲಿ ನಡೆಯುವ ರೋಡ್‌ಶೋನಲ್ಲಿ ಭಾಗಿಯಾಗಲಿದ್ದಾರೆ. ತೋಪಮ್ಮನ ದೇವಸ್ಥಾನದಿಂದ…

Read More

ಮಂಗಳೂರು: ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ನವ ವಿವಾಹಿತೆ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೊಪ್ಪದಕೋಡಿ ಗ್ರಾಮದಲ್ಲಿ ನಡೆದಿದೆ. ಕೌಶಲ್ಯ(27) ಮೃತ ಮಹಿಳೆ  ಬೆಳ್ತಂಗಡಿ ತಾಲೂಕಿನ ಕೊಪ್ಪದಕೋಡಿ ನಿವಾಸಿಯಾಗಿದ್ದು, ಕಳೆದ 15 ವರ್ಷಗಳಿಂದ ಸುಕೇಶ್​ ಎಂಬುವರನ್ನು ಪ್ರೀತಿಸುತ್ತಿದ್ದರು. 5 ತಿಂಗಳ ಹಿಂದೆ ಪ್ರೇಮಿಗಳು ಮದುವೆಯಾಗಿದ್ದರು. ಮದುವೆ ನಂತರ ಪತಿ ಸುಕೇಶ್​ ಅವರಿಗೆ ಅಕ್ರಮ ಸಂಬಂಧ ಇರುವ ವಿಚಾರ ಕೌಶಲ್ಯ ಅವರಿಗೆ ತಿಳಿದಿತ್ತು. ಇದನ್ನು ಸಾಕ್ಷಿ ಸಮೇತೆ ಕೌಶಲ್ಯ ಪತ್ತೆಹಚ್ಚಿದ್ದರು. ಪತಿಯ ಈ ಅಕ್ರಮ ಸಂಬಂಧದಿಂದ ಬೇಸತ್ತ ಕೌಶಲ್ಯ 3 ದಿನಗಳ ಹಿಂದೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೆ ಅವರನ್ನು ಖಾಸಗಿ ಆಸ್ಪೆತ್ರಗೆ ದಾಖಲಿಸಲಾಗಿತ್ತು. ಆದರೆ ಇಂದು (ಏ.24) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್…

Read More

ದೆಹಲಿ: ಅಪಾರ್ಟ್​ಮೆಂಟ್​ನಲ್ಲಿ ಇಬ್ಬರು ಮುಸುಕುಧಾರಿಗಳು ಮನಬಂದಂತೆ ಗುಂಡಿನದಾಳಿ ನಡೆಸಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ . ಆಘಾತಕಾರಿ ಘಟನೆಯೊಂದರಲ್ಲಿ, ಇಬ್ಬರು ಮುಸುಕುಧಾರಿಗಳು ಆಗ್ನೇಯ ದೆಹಲಿಯ ಸಿದ್ಧಾರ್ಥ್ ನಗರದಲ್ಲಿನ ಅಪಾರ್ಟ್‌ಮೆಂಟ್‌ನ ಬಾಗಿಲುಗಳಿಗೆ ಭಾನುವಾರ ಗುಂಡು ಹಾರಿಸಿದ್ದಾರೆ. ಮೊದಲ ಮಹಡಿಯ ಅಪಾರ್ಟ್‌ಮೆಂಟ್‌ನ ಬಾಗಿಲಿಗೆ ಎರಡು ಬಾರಿ ಗುಂಡು ಹಾರಿಸಿದ ಆರೋಪಿಗಳು ನೆಲ ಅಂತಸ್ತಿನ ಕಡೆಗೆ ಪರಾರಿಯಾಗಿದ್ದರು. ಮುಸುಕುಧಾರಿಗಳು ಪರಾರಿಯಾಗುವ ಮೊದಲು ನೆಲ ಮಹಡಿಯಲ್ಲಿರುವ ಮತ್ತೊಂದು ಅಪಾರ್ಟ್‌ಮೆಂಟ್‌ನ ಕಿಟಕಿಯ ಮೇಲೆ ಮೂರು ಗುಂಡುಗಳನ್ನು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More