Subscribe to Updates
Get the latest creative news from FooBar about art, design and business.
- ಆರೋಗ್ಯ ಶಿಬಿರ | ಹಾರ್ಟ್ ಸಂಸ್ಥೆಯ ಕಾರ್ಯ ಪ್ರಶಂಸನಿಯ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್
- ವಿಜೃಂಭಣೆಯಿಂದ ನಡೆದ ದುಂಡಿ ಮಾರಮ್ಮ ದೇವಿ ಜಾತ್ರಾ ವಾರ್ಷಿಕೋತ್ಸವ
- ರಾಜ್ಯದಲ್ಲಿ ಎನ್ ಡಿಎಗೆ 2028ನೇ ಚುನಾವಣೆಯಲ್ಲಿ ಬಿಹಾರ ಮಾದರಿಯ ಗೆಲುವು: ಕೆ.ಎಂ.ಕೃಷ್ಣನಾಯಕ
- ನವೆಂಬರ್ 22ರಂದು ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ: ಡಾ.ಕೆ.ಬಿ.ಲಿಂಗೇಗೌಡ
- ಕಲ್ಪೋತ್ಸವ: ಗಮನ ಸೆಳೆದ ಜಂಬೂ ಸವಾರಿ, ಕಲಾತಂಡಗಳ ಮೆರುಗು
- ರೈತ ಹೋರಾಟಗಾರ ಸಿ.ಅಜ್ಜಪ್ಪ ನಿಧನ
- ವಿಕಲಚೇತನ ಸಾಧಕರಿಂದ ಅರ್ಜಿ ಆಹ್ವಾನ
- ಬೀದರ್ | ಪ್ರತಿ ಟನ್ ಕಬ್ಬಿಗೆ 2,950ರೂ. ನಿಗದಿ: ಪ್ರತಿಭಟನೆ ಕೈ ಬಿಟ್ಟ ರೈತರು
Author: admin
ತುರುವೇಕೆರೆ: ಪಟ್ಟಣದ ತಾಲೂಕು ಕಚೇರಿಯಲ್ಲಿ ಆರ್ ಪಿ ಐ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಹಟ್ಟಪ್ಪ ಅಲಿಯಾಸ್ ನಾಗರಾಜು ಇತ್ತೀಚೆಗೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ತುರುವೇಕೆರೆ ಪಟ್ಟಣದ ಗ್ರಾಮ ದೇವತೆ ಉಡುಸಲಮ್ಮ ದೇವಿಗೆ ತಮ್ಮ ನೂರಾರು ಬೆಂಬಲಿಗರೊಂದಿಗೆ ಸೇರಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬಳಿಕ ಮೆರವಣಿಗೆಯ ಮೂಲಕ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿರುವ ಚುನಾವಣಾ ಕೊಠಡಿಗೆ ತೆರಳಿ ಚುನಾವಣಾ ಅಧಿಕಾರಿಗಳಾದ ಮಂಜುನಾಥ್ ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳಾದ ವೈ ಎಂ ರೇಣು ಕುಮಾರ್ ರವರಿಗೆ ನಾಮಪತ್ರವನ್ನು ಅಧಿಕೃತವಾಗಿ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದ ಅಧ್ಯಕ್ಷರಾದ ಎನ್.ಮೂರ್ತಿಯವರು ನನ್ನನ್ನು , ತುರುವೇಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ, ಬಿ.ಫಾರಂ ನೀಡಿದ್ದಾರೆ, ನಾನು ಯಾವುದೇ ಜಾತಿ ಮತ ಭೇದವಿಲ್ಲದೆ ತಾಲೂಕಿನಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳನ್ನು , ಜನರ ನೋವು ನಲಿವುಗಳಲ್ಲಿ ಭಾಗಿಯಾಗಿ ಕಷ್ಟಗಳನ್ನು ಅರಿತಿದ್ದೇನೆ ಎಂದರು. ನಾವು ಜಿಲ್ಲೆಯ 11 ತಾಲೂಕುಗಳಲ್ಲೂ ಪಕ್ಷ ಸಂಘಟನೆಯನ್ನು ಮಾಡಿದ್ದೇವೆ, ಸಾರ್ವಜನಿಕರಿಗೆ ಸರ್ಕಾರದಿಂದ…
ಪಾವಗಡ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ನಾಮಪತ್ರ ಸಲ್ಲಿಸಿದರು. ಈ ವೇಳೆ ಪಾವಗಡ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಕೇಸರಿ ಶಾಲು.ಮತ್ತು ಕೇಸರಿ ಟೋಪಿಗಳು ರಾರಾಜಿದವು. ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ್, ಭ್ರಷ್ಟಾಚಾರ ರಹಿತ ತಾಲೂಕು ಮಾಡಲು ಈ ಬಾರಿ ಬಿಜೆಪಿ ಪಕ್ಷಕ್ಕೆ ಮತ ಹಾಕಿ, ಒಂದು ಬಾರಿ ಅಧಿಕಾರ ಕೊಟ್ಟು ನೋಡಿ ವಾರಕ್ಕೊಮ್ಮೆ ನಿಮ್ಮ ಗ್ರಾಮಗಳಿಗೆ ಭೇಟಿ ನೀಡಿ ನಿಮ್ಮ ಸಮಸ್ಯೆ ಬಗ್ಗೆ ಪರಿಹರಿಸಿಕೊಡುತ್ತೇನೆ ಎಂದು ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಮತ್ತು ಮೋದಿಜಿಯವರು ನೀಡುತ್ತಿರುವ ಉತ್ತಮ ಆಡಳಿತದ ಮೆಚ್ಚಿ ಈ ಭಾಗದಲ್ಲಿ ಕೆಲಸ ಮಾಡಲು ಒಂದು ಅವಕಾಶ ಕಲ್ಪಿಸಿಕೊಡಿ, ನಿಮ್ಮ ಮನೆ ಮಗನ ರೀತಿಯಲ್ಲಿ ಕೆಲಸ ಮಾಡಿಕೊಂಡುತ್ತೇನೆ ಎಂದರು. ಪಾವಗಡ ಎಪಿಎಂಸಿ ಆವರಣದಿಂದ ತಾಲ್ಲೂಕು ಕಚೇರಿಯ ಉದ್ದಕ್ಕೂ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ನಾಮಪತ್ರ ಸಲ್ಲಿಸಿ ನಂತರ ಬಹಿರಂಗ ಸಭೆಯಲ್ಲಿ ಸಾರ್ವಜನಿಕರಲ್ಲಿ ಮತಯಾಚನೆ ಮಾಡಿದರು. ಜಿಲ್ಲಾ ಬಿಜೆಪಿ…
ತುರುವೇಕೆರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನ ವರಿಷ್ಠರಾದ, ಹೆಚ್.ಡಿ.ಕುಮಾರಸ್ವಾಮಿ, ಅವರು ರಾಜ್ಯದ ಮುಖ್ಯಮಂತ್ರಿ ಆದರೆ ನನಗೂ ಸಚಿವ ಸ್ಥಾನ ಸಿಗುವ ಅವಕಾಶ ಇದ್ದು, ಮತದಾರ ಪ್ರಭುಗಳಾದ ನೀವು ಆಶೀರ್ವಾದ ಮಾಡಿ, ನನ್ನನ್ನು 20 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ ರವರು ಮತದಾರರಲ್ಲಿ ವಿನಂತಿಸಿಕೊಂಡರು. ಪಟ್ಟಣದಿಂದ ಸುಮಾರು ಎರಡು ಕಿಲೋಮೀಟರ್ ಅಂತರದಲ್ಲಿರುವ ಹಾವಾಳ ಗ್ರಾಮದಿಂದ ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ 20,000ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಪಟ್ಟಣಕ್ಕೆ ಆಗಮಿಸಿದ ಎಂ.ಟಿ.ಕೃಷ್ಣಪ್ಪನವರು ತಿಪಟೂರು ವೃತ್ತದಲ್ಲಿ ಕಾರ್ಮಿಕರ್ತರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಕುಮಾರಣ್ಣನವರ ಸರ್ಕಾರವು, ರಚನೆಯಾದ ಕೆಲವೇ ದಿನಗಳಲ್ಲಿ ತುರುವೇಕೆರೆಯನ್ನು ಜಿಲ್ಲಾ ಮುಖ್ಯ ಕೇಂದ್ರವನ್ನಾಗಿಸುವೆ, ಅದರ ಜೊತೆಗೆ ಸಿ ಎಸ್ ಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ , ತಮ್ಮಗಳ ಸೇವೆ ಮಾಡಿ ಋಣವನ್ನು ತೀರಿಸುವೆ , ನನ್ನ ಅವಧಿಯಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪದವಿ ಕಾಲೇಜುಗಳು , ಪಾಲಿಟೆಕ್ನಿಕ್ ಕಾಲೇಜು , ವೈದ್ಯಕೀಯ ಸೇವೆಗಾಗಿ…
ಮಾರ್ಚ್ ತಿಂಗಳಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿತ್ತು.ಆದರೆ ನಾಳೆ (21/04/2013) ದ್ವಿತೀಯ ಪಿಯುಸಿ ಪರೀಕ್ಷೆ ಸುಮಾರು 11 ಗಂಟೆಗೆ ವೆಬ್ ಸೈಟ್ ನಲ್ಲಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಇದರ ಬಗ್ಗೆ ಅಧಿಕೃತವಾಗಿ ಇದರ ಬಗ್ಗೆ ಆದೇಶ ಹೊರಡಿಸಿದೆ. ಈ ಕುರಿತು ನಾಳೆ 10 ಗಂಟೆಗೆ ಸುದ್ದಿಗೋಷ್ಟಿಯಲ್ಲಿ ಪ್ರಕಟವಾಗಲಿದೆ. ನಂತರ 11 ಗಂಟೆಗೆ ಫಲಿತಾಂಶಕ್ಕಾಗಿ ನೀವು ಈ www.karresults.nic.in ವೆಬ್ಸೈಟ್ಗೆ ಭೇಟಿ ನೀಡಬಹುದು. ರಾಜ್ಯದ 5,716 ಪಿಯು ಕಾಲೇಜುಗಳಿಂದ ಒಟ್ಟು 7,26,195 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ನೋಂದಾಯಿಸಿದ್ದು, ಈ ಪೈಕಿ 3,63,698 ಬಾಲಕರು ಮತ್ತು 3,62.497 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದರು. ಈ ಹಿಂದೆ ಮೌಲ್ಯಮಾಪನದ ಸಮಯದಲ್ಲಿ KSEABಯ ಮೂಲಗಳ ಪ್ರಕಾರ, ಹಿಂದಿನ ಯೋಜನೆಯು ಮೌಲ್ಯಮಾಪನ ಕಾರ್ಯವನ್ನು 10 ರಿಂದ 12 ದಿನಗಳಲ್ಲಿ ಪೂರ್ಣಗೊಳಿಸಿ ಏಪ್ರಿಲ್ ಅಂತ್ಯದ ವೇಳೆಗೆ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ ಎಂದು ತಿಳಿಸಲಾಗಿತ್ತು. ಅದರೆ ನಾಳೆ (21/04/2013) ರಂದು ದ್ವಿತೀಯ ಪಿಯುಸಿ ಪರೀಕ್ಷೆಯ…
ಕೊರಟಗೆರೆ: ನಮ್ಮ ಪಕ್ಷ ಸಿದ್ಧಾಂತದಂತೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ, ಕ್ಷೇತ್ರದ ಜನತೆ ಈ ಬಾರಿ ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸುವಂತೆ ಅಭ್ಯರ್ಥಿ ನಿವೃತ್ತ ತಹಶೀಲ್ದಾರ್ ಹನುಮಂತರಾಯಪ್ಪ ಮನವಿ ಮಾಡಿದರು. ಪಟ್ಟಣದ ಎ.ಎ.ಪಿ ಕಚೇರಿಯಿಂದ ಕಾರ್ಯಕರ್ತರೊಂದಿಗೆ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ತಾಲ್ಲೂಕು ಕಛೇರಿ ತಲುಪಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿ ಅವರು, ಮಾತನಾಡಿದರು. ನಮ್ಮ ಪಕ್ಷ ದೇಶದಲ್ಲಿ ಇಗಾಲೇ ಚಾಪು ಮೂಡಿಸಿದ್ದು, ದೆಹಲಿ ಹಾಗೂ ಪಂಜಾಬ್ ನಲ್ಲಿ ನಮ್ಮ ಎ.ಎ.ಪಿ ಪಕ್ಷದ ಜನಪರ ಅಭಿವೃದ್ಧಿ ಕೆಲಸಗಳು ನಮ್ಮ ಜನತೆಗೆ ತಿಳಿದಿದೆ. ನಾನು ಕೊರಟಗೆರೆ ಕ್ಷೇತ್ರದ ಮನೆಮಗ, ನನಗೆ ಈ ಬಾರಿ ಬೆಂಬಲಿಸಿ ನಿಮ್ಮ ಮನೆ ಮಗನಿಗೆ ಮತನೀಡಿ ಕ್ಷೇತ್ರದಲ್ಲಿ ನಿಮ್ಮೆಲ್ಲರ ಸೇವೆ ಮಾಡಲು ಸಹಕರಿಸಿ ಎಂದು ಮನವಿ ಮಾಡುತ್ತೇನೆ ಎಂದರು. ಎಎಪಿ ಪಕ್ಷದ ಜಿಲ್ಲಾಧ್ಯಕ್ಷ ಪ್ರೇಮ್ ಕುಮಾರ್ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಮನುಷ್ಯನಿಗೆ ಅಗತ್ಯವಾಗಿಬೇಕಾಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮೊದಲ ಆದ್ಯತೆಯನ್ನು ಇವುಗಳಿಗೆ ನೀಡುತ್ತೇವೆ.…
ನವದೆಹಲಿ: ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್ಫೋನ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಬಯಸುತ್ತಿರುವ ಐಫೋನ್ ತಯಾರಕರಾದ, ಆಯಪಲ್ ಕಂಪನಿಯ ಸಿಇಒ ಟಿಮ್ ಕುಕ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಕುಕ್ ಅವರು ಏಳು ವರ್ಷಗಳ ನಂತರ ಭಾರತಕ್ಕೆ ಆಗಮಿಸಿದ್ದು, ಮಂಗಳವಾರ ಮುಂಬೈನಲ್ಲಿ ದೇಶದ ಮೊದಲ ಆಯಪಲ್ ರಿಟೇಲ್ ಮಳಿಗೆಯನ್ನು ಉದ್ಘಾಟಿಸಿದ್ದು, ನಂತರ ಗುರುವಾರ ದೆಹಲಿಯಲ್ಲಿ ಮತ್ತೊಂದು ಮಳಿಗೆಗೆ ಚಾಲನೆ ನೀಡಲಿದ್ದಾರೆ. ಇಂದು ದೆಹಲಿಯಲ್ಲಿ ಪ್ರಧಾನಿ ಮೋದಿ ಯನ್ನು ಭೇಟಿ ಮಾಡಿದ ಬಳಿಕ ಟಿಮ್ ಕುಕ್, “ನನಗೆ ಆತ್ಮೀಯ ಸ್ವಾಗತ ನೀಡಿದ ಪ್ರಧಾನಿ ಮೋದಿಗೆ ಧನ್ಯವಾದಗಳು ಎಂದರು. ಶಿಕ್ಷಣ ದಿಂದ ಹಿಡಿದು ಉತ್ಪಾದನೆ ಮತ್ತು ಪರಿಸರದವರೆಗೆ ತಂತ್ರಜ್ಞಾನವು ಭಾರತದ ಭವಿಷ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುವ ನಿಮ್ಮ ದೃಷ್ಟಿಕೋನವನ್ನು ನಾವು ಹಂಚಿಕೊಳ್ಳುತ್ತೇವೆ ಎಂದರು. ನಾವು ದೇಶಾದ್ಯಂತ ಹೂಡಿಕೆ ಮಾಡಲು ಸಿದ್ಧರಾಗಿದ್ದೇವೆ” ಎಂದು ಮೋದಿಯವರಿಗೆ ಹೇಳುತ್ತಿರುವ ಮಾತನ್ನು ಟ್ವೀಟ್ ಮಾಡಿದ್ದಾರೆ. ಕುಕ್ ಅವರು 2016 ರಲ್ಲಿ ಭಾರತಕ್ಕೆ…
ನೇಪಾಳದಲ್ಲಿರುವ ಮೌಂಟ್ ಅನ್ನಪೂರ್ಣದ ಕ್ಯಾಂಪ್ ನಿಂದ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ರಾಜಸ್ಥಾನದ ಕಿಶನ್ಘರ್ ನ ನಿವಾಸಿಯಾಗಿರುವ ಅನುರಾಗ್ ಮಲು (34) ಎಂಬುವವರು ಸೋಮವಾರದಂದು ಮೌಂಟ್ ಅನ್ನಪೂರ್ಣ ವ ನ್ನು ಇಳಿಯುತ್ತಿದ್ದಾಗ ಅವರು 6000 ಮೀಟರ್ ಎತ್ತರದಿಂದ ಕೆಳಗೆ ಉರುಳಿಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಗುರುವಾರದಂದು ಪತ್ತೆಯಾಗಿದ್ದಾರೆ ಮಲು ಅವರ ಸಹೋದರ ಅವರ ಹತ್ತಿರ ಮಾತನಾಡಿದ್ದು, ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಅವರನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ಮೌಂಟ್ ಅನ್ನಪೂರ್ಣ ಜಗತ್ತಿನಲ್ಲಿ 10 ನೇ ಅತಿ ಎತ್ತರದ ಪರ್ವತವಾಗಿದೆ. “ಪರ್ವತಾರೋಹಿ ಅನುರಾಗ್ ಮಲು ಜೀವಂತವಾಗಿ ಪತ್ತೆಯಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅವರು ಜೀವಂತವಾಗಿದ್ದಾರೆ” ಎಂದು ಅನುರಾಗ್ ಅವರ ಸಹೋದರ ಸುಧೀರ್ ಅವರು ಮಾಹಿತಿ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA…
ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಉತ್ತರ ಭಾರತದಲ್ಲಿ ಎಲೆಕ್ಟ್ರಿಕ್ ಬ್ಯಾಟರಿ ಸ್ಮಾರ್ಟ್-ಚಾಲಿತ ಸ್ವಾಪಿಂಗ್ ಸ್ಟೇಷನ್‌ಗಳಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿರುವ ಬಗ್ಗೆ ವರದಿಯಗಿದೆ. ಯುವರ್‌ಸ್ಟೋರಿಯ ವಿಸ್ತೃತ ವರದಿಯ ಪ್ರಕಾರ ಈ ವಾರದ ಆರಂಭದಲ್ಲಿ ನವದೆಹಲಿಯ ಜನಕ್‌ಪುರಿ ಪ್ರದೇಶದಲ್ಲಿ ಇವಿ ಸ್ಟಾರ್ಟ್‌ಅಪ್‌ಗೆ ಸೇರಿದ ಬ್ಯಾಟರಿ ವಿನಿಮಯ ಕೇಂದ್ರವು ಹೆಚ್ಚುತ್ತಿರುವ ಬಿಸಿಲ ತಾಪಮಾನದಿಂದ ಬೆಂಕಿಗೆ ಆಹುತಿಯಾಗಿದೆ ಎಂದು ದಿ ಕೆನ್ ವರದಿ ಮಾಡಿದೆ. ತಾಪಮಾನವು ಹೆಚ್ಚಾಗುತ್ತಿದ್ದಂತೆ ಇವಿಗಳು ಮತ್ತು ಬ್ಯಾಟರಿಗಳು ಬೆಂಕಿ ಹತ್ತಿಕೊಳ್ಳಬಹುದು ಎಂಬ ಭಯವು ಜನರಲ್ಲಿ ಹೆಚ್ಚಾಗುತ್ತಿದೆ. ಶಾರ್ಟ್ ಸರ್ಕ್ಯೂಟ್ ಎರಡು ಬ್ಯಾಟರಿ ಪ್ಯಾಕ್‌ಗಳು ಹೆಚ್ಚು ಬಿಸಿಯಾದಗ ಇಂತಹ ಅವಘಡಗಳು ಸಂಭವಿಸಬಹುದು ಎಂದು EV ಸ್ಟಾರ್ಟ್‌ಅಪ್ ಹೇಳಿಕೆಯಲ್ಲಿ ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ವಿಶ್ವಶಾಂತಿ ಫೌಂಡೇಶನ್ ಡಿಜಿಟಲ್ ಇಂಡಿಯಾದ ಕನಸಿನ ಕಡೆಗೆ ಭಾರತದ ಗ್ರಾಮೀಣ ವಿದ್ಯಾರ್ಥಿಗಳನ್ನು ಸಶಕ್ತಗೊಳಿಸಲು ಭಾರತೀಯ ಸೇನೆಯೊಂದಿಗೆ ಕೈಜೋಡಿಸುತ್ತದೆ. ರಾಜಸ್ಥಾನದಲ್ಲಿ ಐಟಿ ಶಿಕ್ಷಣವನ್ನು ಉತ್ತೇಜಿಸಲು ಪಾಕಿಸ್ತಾನದ ಗಡಿಯಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಹಳ್ಳಿಗಳ ಶಾಲೆಗಳಿಗೆ ನೂರು ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು. ಭಾರತೀಯ ಸೇನೆಯ ಸಹಯೋಗದಲ್ಲಿ ಇವೈಜಿಡಿಎಸ್ ಆಯೋಜಿಸಿರುವ ‘ಹಮ್ದರ್ದಿ ಯೋಜನೆ’ಯ ಭಾಗವಾಗಿ ಲ್ಯಾಪ್‌ಟಾಪ್‌ಗಳನ್ನು ಒದಗಿಸಲಾಗಿದೆ. ಭಾರತೀಯ ಸೇನೆಯ ನೈಋತ್ಯ ಕಮಾಂಡ್ ಈ ಉಪಕ್ರಮವನ್ನು ಬಹಳ ಹೆಮ್ಮೆ ಮತ್ತು ಸಂತೋಷದಿಂದ ಸ್ವಾಗತಿಸಿತು. ಸೇನೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಭವ್ಯ ಸಮಾರಂಭದಲ್ಲಿ ವಿತರಣೆಯನ್ನು ಮಾಡಲಾಯಿತು. ತಾಂತ್ರಿಕ ಶಿಕ್ಷಣವನ್ನು ಸಮಾಜದ ತಳಹಂತಕ್ಕೆ ತಲುಪಿಸುವ ಇಂತಹ ಮಹತ್ತರ ಯೋಜನೆಗಳಿಗೆ ವಿಶ್ವಶಾಂತಿ ಫೌಂಡೇಶನ್‌ನೊಂದಿಗೆ ನಿರಂತರ ಸಹಕಾರ ನೀಡುವುದಾಗಿ ಸೇನೆ ತಿಳಿಸಿದೆ. ವಿಶ್ವಶಾಂತಿ ಫೌಂಡೇಶನ್ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಲವು ಜನೋಪಕಾರಿ ಮತ್ತು ಶೈಕ್ಷಣಿಕ ಯೋಜನೆಗಳನ್ನು ವರ್ಷಗಳಿಂದ ಅನುಷ್ಠಾನಗೊಳಿಸುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…
ಇಂದು ದೆಹಲಿಯಲ್ಲಿ ಜಾಗತಿಕ ಬೌದ್ಧ ಶೃಂಗಸಭೆ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ. ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನಿನ್ನೆ ದೆಹಲಿಗೆ ಆಗಮಿಸಿದ್ದಾರೆ. ವಿಶ್ವದ ವಿವಿಧ ಭಾಗಗಳ ಬೌದ್ಧ ಸನ್ಯಾಸಿಗಳು ಮತ್ತು ವಿದ್ವಾಂಸರೊಂದಿಗೆ, 30 ದೇಶಗಳ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಭಾರತ ಮೊದಲ ಬಾರಿಗೆ ಇಂತಹ ಶೃಂಗಸಭೆಗೆ ಸಾಕ್ಷಿಯಾಗಿದೆ. ದೆಹಲಿಯ ಅಶೋಕ ಹೋಟೆಲ್‌ನಲ್ಲಿ ಶೃಂಗಸಭೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA