Subscribe to Updates
Get the latest creative news from FooBar about art, design and business.
- ಆರೋಗ್ಯ ಶಿಬಿರ | ಹಾರ್ಟ್ ಸಂಸ್ಥೆಯ ಕಾರ್ಯ ಪ್ರಶಂಸನಿಯ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್
- ವಿಜೃಂಭಣೆಯಿಂದ ನಡೆದ ದುಂಡಿ ಮಾರಮ್ಮ ದೇವಿ ಜಾತ್ರಾ ವಾರ್ಷಿಕೋತ್ಸವ
- ರಾಜ್ಯದಲ್ಲಿ ಎನ್ ಡಿಎಗೆ 2028ನೇ ಚುನಾವಣೆಯಲ್ಲಿ ಬಿಹಾರ ಮಾದರಿಯ ಗೆಲುವು: ಕೆ.ಎಂ.ಕೃಷ್ಣನಾಯಕ
- ನವೆಂಬರ್ 22ರಂದು ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ: ಡಾ.ಕೆ.ಬಿ.ಲಿಂಗೇಗೌಡ
- ಕಲ್ಪೋತ್ಸವ: ಗಮನ ಸೆಳೆದ ಜಂಬೂ ಸವಾರಿ, ಕಲಾತಂಡಗಳ ಮೆರುಗು
- ರೈತ ಹೋರಾಟಗಾರ ಸಿ.ಅಜ್ಜಪ್ಪ ನಿಧನ
- ವಿಕಲಚೇತನ ಸಾಧಕರಿಂದ ಅರ್ಜಿ ಆಹ್ವಾನ
- ಬೀದರ್ | ಪ್ರತಿ ಟನ್ ಕಬ್ಬಿಗೆ 2,950ರೂ. ನಿಗದಿ: ಪ್ರತಿಭಟನೆ ಕೈ ಬಿಟ್ಟ ರೈತರು
Author: admin
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ದಿಂದ ದಿನಾಂಕ 17-03-2022ಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಕಿರಿಯ ಅಭಿಯಂತರರ ಹುದ್ದೆಗಳಿಗೆ ಸಂಭಂಧಿಸಿದಂತೆ ನೇಮಕಾತಿಯನ್ನು ಏಪ್ರಿಲ್ 26 ಮತ್ತು 27 ರಂದು ಮೂಲದಾಖಲೆಗಳ ಪರಿಶೀಲನೆಯನ್ನು ಲೋಕಸೇವಾ ಆಯೋಗದ ಕೇಂದ್ರ ಕಚೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ವಿಷಯಗಳಿಗೆ ಸಂಬಂಧಿಸಿದ ಅರ್ಹ ಅಭ್ಯರ್ಥಿಗಳಿಗೆ ಈಗಾಗಲೇ ಸೂಚನಾ ಪತ್ರಗಳನ್ನು ಅಂಚೆ ಮೂಲಕ ಕಳುಹಿಸಲಾಗಿದೆ. ಹಾಗೂ ವೇಳಾಪಟ್ಟಿಯನ್ನು ಒಳಗೊಂಡ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಆಯೋಗದ ವೆಬ್‍ಸೈಟ್ https://kpsc.kar.nic.in/Lists ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿ ಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಸುರಳ್ಕರ್ ವಿಕಾಸ್ ಕಿಶೋರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ನವದೆಹಲಿ: ಕೋರ್ಸ್‌ಗಳ ಬೋಧನೆ ಇಂಗ್ಲಿಷ್‌ನಲ್ಲಿದ್ದರು ಕೂಡ ಅದನ್ನು ಮಾತೃಭಾಷೆ ಭಾಷೆಗಳಲ್ಲಿಯೇ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಎಲ್ಲ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದೆ. ಮಾತೃಭಾಷೆ ಭಾಷೆಗಳಲ್ಲಿ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆ ನಡೆಸಲು, ಪಠ್ಯಪುಸ್ತಕಗಳ ರಚನೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮಹತ್ವದ ಪಾತ್ರ ವನ್ನು ವಹಿಸುತ್ತವೆ ಎಂದು ಯುಜಿಸಿಯ ಮುಖ್ಯಸ್ಥ ಜಗದೀಶ ಕುಮಾರ್ ಅವರು ಹೇಳಿದ್ದಾರೆ. ಅವರ ಹೇಳಿಕೆಯನ್ನು ಉಲ್ಲೇಖಿಸಿ, ಯುಜಿಸಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಮಾತೃಭಾಷೆ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ರಚಿಸುವ ಪ್ರಯತ್ನಗಳಿಗೆ ಸಾಮರ್ಥ್ಯ ತುಂಬುವುದು ಅಗತ್ಯವಾಗಿದೆ. ಇತರ ಭಾಷೆಗಳಲ್ಲಿರುವ ಉತ್ತಮ ಗುಣಮಟ್ಟವನ್ನು ಪಠ್ಯಪುಸ್ತಕಗಳ ಅನುವಾದಕ್ಕೆ ಯುಜಿಸಿ ಪ್ರೋತ್ಸಾಹವನ್ನು ನೀಡುತ್ತದೆ ಎಂದು ಪ್ರಕಟಣೆಯಲ್ಲಿ ಯುಜಿಸಿಯ ಮುಖ್ಯಸ್ಥ ಜಗದೀಶ ಕುಮಾರ್ ಅವರು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ತುರುವೇಕೆರೆ: ಅಪಘಾತದಲ್ಲಿ ಗಾಯಗೊಂಡು ರಸ್ತೆ ಬದಿಯಲ್ಲಿ ನರಳಾಡುತ್ತಿದ್ದ ಗಾಯಾಳುವನ್ನು ತುರುವೇಕೆರೆ ಶಾಸಕ ಮಸಾಲ ಜಯರಾಮ್ ಅವರ ಪುತ್ರ ತೇಜು ಜಯರಾಮ್ ಅವರು ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತೇಜು ಜಯರಾಮ್ ರವರು, ಬೆಂಗಳೂರಿನಿಂದ ತುರುವೇಕೆರೆ ಪಟ್ಟಣಕ್ಕೆ ಆಗಮಿಸುವ ವೇಳೆಯಲ್ಲಿ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳು ರಸ್ತೆಯ ಬದಿಯಲ್ಲಿ ಬಿದ್ದು ನರಳಾಡುತ್ತಿರುವುದನ್ನು ಕಂಡಿದ್ದಾರೆ. ತಕ್ಷಣವೇ ತಮ್ಮ ಸಹೋದರನ ಕಾರಿನಲ್ಲಿ ಗಾಯಾಳುವನ್ನು ಶ್ರೀ ಆದಿಚುಂಚನಗಿರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳಿಸಿಕೊಟ್ಟು ಮಾನವಿಯತೆಯನ್ನು ಮೆರೆದಿದ್ದಾರೆ. ತೇಜು ಜಯರಾಮ್ ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ತಂದೆಯ ಹಾಗೆಯೇ ಹೃದಯವಂತ ಮಗ ಎಂದು ಅಭಿಪ್ರಾಯಪಟ್ಟರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುಮಕೂರು: ತುಮಕೂರಿನ ಸಿದ್ದಗಂಗಾ ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಮನೋಜ್ ಕುಮಾರ್ ಎಂಬುವರನ್ನು ನೇಮಕ ಮಾಡಲಾಗುತ್ತಿದೆ. ಶ್ರೀ ಸಿದ್ದಗಂಗಾ ಮಠದ ಪರಂಪರೆಯಲ್ಲಿ ಉತ್ತರ ಅಧಿಕಾರಿಗಳನ್ನು ಈವರೆಗೂ ನೇಮಕ ಮಾಡದೆ ಇರುವುದನ್ನು ಗಮನಿಸಿರುವ ಶ್ರೀ ಸಿದ್ದಲಿಂಗ ಸ್ವಾಮೀಜಿ ಈ ಕ್ರಮಕ್ಕೆ ಮುಂದಾಗಿದ್ದಾರೆ. ಅಲ್ಲದೆ ಈ ಕುರಿತಂತೆ, ಸಿದ್ದಗಂಗಾ ವಿದ್ಯಾ ಸಂಸ್ಥೆ ಆಡಳಿತ ಅಧಿಕಾರಿ ಟಿ.ಕೆ.ನಂಜುಂಡಪ್ಪ ಮಠದ ಸದಸ್ಯರಿಗೆ ಕಳುಹಿಸಿರುವ ಪತ್ರ ಒಂದರಲ್ಲಿ ಉಲ್ಲೇಖಿಸಿದ್ದಾರೆ. ನಿರಂಜನ ಪಟ್ಟಾಧಿಕಾರಿ ಹಾಗೂ ಉತ್ತರ ಅಧಿಕಾರಿ ಆಗಿ ನೇಮಕ ಮಾಡಲಾಗುತ್ತಿದೆ. ಏಪ್ರಿಲ್ 23 ರಂದು ಅಕ್ಷಯ ತೃತೀಯ ದಿನದಂದು ಬಸವ ಜಯಂತಿಯು ಕೂಡ ಇರುವುದರಿಂದ ಅಂದೆ ಉತ್ತರಾಧಿಕಾರಿ ನೇಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಮೈಲನ ಹಳ್ಳಿಯ ಷಡಕ್ಷರಯ್ಯ ಮತ್ತು ವಿರೂಪಾಕ್ಷಮ್ಮ ರವರ ಪುತ್ರರಾಗಿದ್ದಾರೆ ಮನೋಜ್ ಕುಮಾರ್ ಬಿ ಈ ಡಿ, ಎಂ ಎಸ್ ಸಿ, ಸಿಎಂಎ, ಹಾಗೂ ವಿದ್ವತ್ ಪೂರ್ಣಗೊಳಿಸಿ ಸಿದ್ದಗಂಗಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದ. ಇವರನ್ನು ಬಸವ…
ತುಮಕೂರು/ಕೊರಟಗೆರೆ : ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದು ಕೊರಟಗೆರೆ ನಾಮಪತ್ರ ಸಲ್ಲಿಸಲು ತಾಲ್ಲೂಕು ಕಚೇರಿ ಒಳಭಾಗ ಹೋಗುತ್ತಿದ್ದ ವೇಳೆ ನೆರೆದಿದ್ದ ಜನರ ಗುಂಪಿನಿಂದ ಕಲ್ಲು ತೂರಿ ಬಂದ ಹಿನ್ನೆಲೆ ಗೇಟ್ ಒಳನಿಂತಿದ್ದ ಮಹಿಳಾ ಪೇದೆಗೆ ಕಲ್ಲು ಬಿದ್ದಿದೆ. ಇದರಿಂದಾಗಿ ತೀವ್ರ ಗಾಯಗೊಂಡ ಮಹಿಳಾಪೇದೆ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಆಕೆಯನ್ನ ಆರೈಕೆ ಮಾಡಿ ಪೊಲೀಸ್ ಜೀಪಿನಲ್ಲಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ಇಂದು ಕೋರಟಗೆರೆ ಪಟ್ಟಣದಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳೊಂದಿಗೆ ಪರಮೇಶ್ವರ್. ತಾಲೂಕು ಕಚೇರಿಯತ್ತ ಹೆಜ್ಜೆ ಹಾಕುತ್ತಿದ್ದರು ಈ ಸಂದರ್ಭದಲ್ಲಿ ಗೇಟ್ ಒಳಭಾಗಕ್ಕೆ ಪರಮೇಶ್ವರ್ ತೆರಳಿದ ಬಳಿಕ ಕಲ್ಲೆಸೆತ ನಡೆದಿದೆ ಸಾವಿರಾರು ಸಂಖ್ಯೆಯಲ್ಲಿದ್ದ ಜನರು ಯಾರು ಕಲ್ಲು ಎಸೆದಿದ್ದಾರೆ ಎಂಬುದು ಮಾತ್ರ ತಿಳಿಯದಾಗಿದೆ. ಅದೃಷ್ಟವಶಾತ್ ಪರಮೇಶ್ವರ ಅವರು ಹಾಗೂ ಅವರ ಜೊತೆಯಲ್ಲಿದ್ದ ಸಿ ನಾಮಪತ್ರ ಸಲ್ಲಿಸಲು ಹೋಗುತ್ತಿದ್ದವರಿಗೆ ಕಲ್ಲೇಟು ಬಿದ್ದಿಲ್ಲ. ಇನ್ನು ಈ ಘಟನೆಯಿಂದ ಸ್ಥಳದಲ್ಲಿ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ ಎಂದು ವಿಶ್ಲೇಷಣೆ…
ನವದೆಹಲಿ: ಗ್ರಾಮೀಣ ಮಹಿಳೆಯರನ್ನು ಸ್ವಸಹಾಯ ಗುಂಪುಗಳಿಗೆ ತರಲು ಸರ್ಕಾರವು ‘ಸಂಘಟನ್ ಸೇ ಸಮೃದ್ಧಿ’ ಯೋಜನೆಯನ್ನು ಪ್ರಾರಂಭಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರು ‘ಸಂಘಟನ್ ಸೇ ಸಮೃದ್ಧಿ’ ಅಭಿಯಾನಕ್ಕೆ ಇಂದು ಚಾಲನೆಯನ್ನು ನೀಡಿದರು. ಇದು ಎಲ್ಲಾ ಅರ್ಹ ಗ್ರಾಮೀಣ ಮಹಿಳೆಯರನ್ನು ಸ್ವಸಹಾಯ ಗುಂಪುಗಳಿಗೆ ತರುವ ಮೂಲಕ ಬಡತನದಲ್ಲಿರುವ ಗ್ರಾಮೀಣ ಕುಟುಂಬಗಳನ್ನು ಸಬಲಗೊಳಿಸುತ್ತದೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈಗಿರುವ 10 ಕೋಟಿ ಮಹಿಳೆಯರನ್ನು ಸ್ವಸಹಾಯ ಸಂಘಗಳ ವ್ಯಾಪ್ತಿಗೆ ತರುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ. ಮೇ 2014ರಲ್ಲಿ ಕೇವಲ 2.35 ಕೋಟಿ ಇದ್ದ ಸದಸ್ಯರ ಸಂಖ್ಯೆ ಈಗ 9 ಕೋಟಿ ದಾಟಿದೆ. ಸ್ವಸಹಾಯ ಸಂಘಗಳಿಗೆ ಸಂಬಂಧಿಸಿದ ಪ್ರತಿಯೊಬ್ಬ ಮಹಿಳೆಯು ವರ್ಷಕ್ಕೆ ಒಂದು ಲಕ್ಷ ರೂಪಾಯಿಗಳನ್ನು ಗಳಿಸಬೇಕು ಎಂಬ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ದಿನದಿಂದ ದಿನಕ್ಕೆ ಬಿಸಿ ಗಾಳಿಯ ತೀವ್ರತೆ ಹೆಚ್ಚಾಗುತ್ತಿದ್ದು, ಅಧಿಕ ತಾಪಮಾನ ಜನತೆಯನ್ನು ತುಂಬಾ ಬಾಧಿಸುತ್ತಿದೆ. ತೆಲಂಗಾಣದ ಅದಿಲಾಬಾದ್‌ನ ಜಂಟಿ ಜಿಲ್ಲೆಯಲ್ಲಿ ಬಿಸಿಲಿನ ತಾಪಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇಂದು ಉಟ್ನೂರು ಮಂಡಲದ ಪುಲಿಮಡುಗಿನಲ್ಲಿ ಒಬ್ಬರು ಮತ್ತು ಕೊಮಾರಂಭಿಂ ಜಿಲ್ಲೆಯ ಕಗಜನಗರದಲ್ಲಿ ಇಬ್ರಾಹಿಂ ಎಂಬ ಹಣ್ಣಿನ ವ್ಯಾಪಾರಿ ರಣಬಿಸಿಲಿನಿಂದ ಸಾವನ್ನಪ್ಪಿದ್ದಾರೆ. ಜನರು ಈಗ ತುಂಬಾ ಭಯಭೀತರಾಗಿದ್ದಾರೆ. ಬಿಸಿ ವಾತಾವರಣದಲ್ಲಿ ಮನೆಯಿಂದ ಹೊರಗೆ ಬರುವ ಜನರು ಬೇಗನೆ ಸುಸ್ತಾಗುತ್ತಿದ್ದಾರೆ. ಶಾಖದ ಋಣಾತ್ಮಕ ಪರಿಣಾಮವನ್ನು ತಪ್ಪಿಸಲು, ವಿಶೇಷವಾಗಿ ದಿನದಲ್ಲಿ ಸಾಧ್ಯವಾದಷ್ಟು ನೀರನ್ನು ಕುಡಿಯಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಬಹುತೇಕ ನೀರಿನ ಮೂಲಗಳು ಬತ್ತಿ ಹೋಗಿರುವುದರಿಂದ ಹಸು, ಎತ್ತುಗಳಿಗೆ ಕುಡಿಯಲು ನೀರು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ತೆಲಂಗಾಣದಲ್ಲಿ ಬಿಸಿಗಾಳಿ ಬೀಸುತ್ತಿರುವ ಕಾರಣದಿಂದ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಜನರು ಹೊರಗೆ ಹೋಗದಂತೆ ತೆಲಂಗಾಣ ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ.ಜಿ.ಶ್ರೀನಿವಾಸ ರಾವ್ ಎಚ್ಚರಿಕೆ ಕೊಟ್ಟಿದ್ದಾರೆ. ಕೂಲಿ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸಂಚಾರ…
ಬಿಜೆಪಿಯ ಬೂಟಾಟಿಕೆಯನ್ನು ಅರ್ಥಮಾಡಿಕೊಂಡವರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ ಎಂದು ಮಾಜಿ ಗೃಹ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಅವರು ಅನೇಕ ಭರವಸೆಗಳನ್ನು ನೀಡಿದರು. ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ, ಘೋಷಣೆಗಳು ಅಧಿಕಾರಕ್ಕಾಗಿ ಮಾತ್ರ ಎಂಬುದನ್ನು ಮೊದಲು ಅರಿತುಕೊಂಡವರು ಬಿಜೆಪಿಯಲ್ಲಿದ್ದವರು. ಹಾಗಾಗಿಯೇ ಕಾಂಗ್ರೆಸ್‌ನತ್ತ ಜನ ಸೇರುತ್ತಿದ್ದಾರೆ. ಕೆ.ಜೆ.ಜಾರ್ಜ್, ಬಿಜೆಪಿ ಯಾವಾಗಲೂ ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದು, ಅದು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದಕ್ಕೆ ಕರ್ನಾಟಕವೇ ಸಾಕ್ಷಿ ಎಂದು ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ನಿನ್ನೆಯಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್‌ಗೆ ಪಕ್ಷ ಸೇರಿದ ಕೆಲವೇ ಗಂಟೆಗಳಲ್ಲಿ ಬಿ ಫಾರಂ ನೀಡಲಾಗಿತ್ತು. ಅದರಂತೆ 4ನೇ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಶೆಟ್ಟರ್‌ಗೆ ಟಿಕೆಟ್ ನೀಡಿದೆ. ಲಿಂಗಸೂಗುರು ಕ್ಷೇತ್ರದಿಂದ ಹಾಲಿ ಶಾಸಕ ದುರ್ಗಪ್ಪ ಎಸ್ ಹುಲಗೇರಿ, ಚಿಕ್ಕಮಗಳೂರು – ಹೆಚ್.ಡಿ ತಮ್ಮಯ್ಯ, ಶ್ರವಣಬೆಳಗೊಳ – ಎಂ.ಎ ಗೋಪಾಲಸ್ವಾಮಿ, ಹರಿಹರ – ನಂದಗವಿ ಶ್ರೀನಿವಾಸ್, ಶಿಗ್ಗಾಂವಿ – ಯೂಸುಫ್ ಸವಣೂರು, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ದೀಪಕ್ ಚಿಂಚೋರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅಲ್ಲದೇ ಇನ್ನೂ 8 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಬಾಕಿ ಉಳಿಸಿಕೊಂಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಆರೋಗ್ಯ ಮತ್ತು ದೇಹದ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವವರಿಗೆ ಬೇಯಿಸಿದ ಮೊಟ್ಟೆಗಳು ನೆಚ್ಚಿನ ಉಪಹಾರವಾಗಿದೆ. ಬೇಯಿಸಿದ ಮೊಟ್ಟೆಗಳನ್ನು ಬಜ್ಜಿ, ಮೇಲೋಗರಗಳು ಮತ್ತು ಅನ್ನದೊಂದಿಗೆ ಹೆಚ್ಚಾಗಿ ಮನೆಯಲ್ಲಿ ಬೇಯಿಸಲಾಗುತ್ತದೆ. ಆದರೆ ಗಟ್ಟಿಯಾಗಿ ಬೇಯಿಸಿದ ಮೊಟ್ಟೆಗಳು ಎಷ್ಟು ದಿನ ತಾಜಾವಾಗಿರುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಬೇಯಿಸಿದ ಮೊಟ್ಟೆಗಳು 10 ದಿನಗಳವರೆಗೆ ಹಾಗೇ ಇರುತ್ತವೆ ಎಂಬ ಹೇಳಿಕೆಗಳಿವೆ. ಇದರಲ್ಲಿ ಏನಾದರೂ ಸತ್ಯವಿದೆಯೇ? ತಜ್ಞರು ಏನು ಹೇಳುತ್ತಾರೆಂದು ಪರಿಶೀಲಿಸೋಣ. ಫ್ರಿಡ್ಜ್ ನಲ್ಲಿಟ್ಟರೆ ಗಟ್ಟಿಯಾಗಿ ಬೇಯಿಸಿದ ಮೊಟ್ಟೆಯನ್ನು ಸರಿಯಾಗಿ ಶೈತ್ಯೀಕರಣಗೊಳಿಸಿದರೆ ಏಳು ದಿನಗಳವರೆಗೆ ಇರುತ್ತದೆ ಎಂದು ಅಮೇರಿಕನ್ ಎಗ್ ಬೋರ್ಡ್ ಹೇಳುತ್ತದೆ. ಬೇಯಿಸಿದ ಮೊಟ್ಟೆಗಳನ್ನು ಚೆನ್ನಾಗಿ ಬಿಸಿ ಮಾಡಿದ ನಂತರ ಫ್ರಿಜ್‌ನಲ್ಲಿ ಇಡಬೇಕು. ಮೊಟ್ಟೆಯ ಚಿಪ್ಪನ್ನು ಮುರಿಯಬೇಡಿ ಎನ್ನುತ್ತಾರೆ. ಫ್ರಿಡ್ಜ್‌ನಲ್ಲಿ ತಂಪಾಗಿ ಇಡುವುದು ಸಹ ಮುಖ್ಯವಾಗಿದೆ. ಆದರೆ ಮೊಟ್ಟೆಗಳನ್ನು ಫ್ರೀಜ್ ಮಾಡುವ ಅಗತ್ಯವಿಲ್ಲ. ಇದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಫ್ರಿಜ್‌ನಿಂದ ಹೊರಗಿದ್ದರೆ, ಅಡುಗೆ ಮಾಡಿದ ಕೆಲವೇ ಗಂಟೆಗಳಲ್ಲಿ ಮೊಟ್ಟೆಗಳನ್ನು ಬಳಸಬಹುದು. ಮೊಟ್ಟೆಗಳನ್ನು ಹೆಚ್ಚು ಕಾಲ ಸಂಗ್ರಹಿಸುವುದು…