Subscribe to Updates
Get the latest creative news from FooBar about art, design and business.
- ಆರೋಗ್ಯ ಶಿಬಿರ | ಹಾರ್ಟ್ ಸಂಸ್ಥೆಯ ಕಾರ್ಯ ಪ್ರಶಂಸನಿಯ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್
- ವಿಜೃಂಭಣೆಯಿಂದ ನಡೆದ ದುಂಡಿ ಮಾರಮ್ಮ ದೇವಿ ಜಾತ್ರಾ ವಾರ್ಷಿಕೋತ್ಸವ
- ರಾಜ್ಯದಲ್ಲಿ ಎನ್ ಡಿಎಗೆ 2028ನೇ ಚುನಾವಣೆಯಲ್ಲಿ ಬಿಹಾರ ಮಾದರಿಯ ಗೆಲುವು: ಕೆ.ಎಂ.ಕೃಷ್ಣನಾಯಕ
- ನವೆಂಬರ್ 22ರಂದು ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ: ಡಾ.ಕೆ.ಬಿ.ಲಿಂಗೇಗೌಡ
- ಕಲ್ಪೋತ್ಸವ: ಗಮನ ಸೆಳೆದ ಜಂಬೂ ಸವಾರಿ, ಕಲಾತಂಡಗಳ ಮೆರುಗು
- ರೈತ ಹೋರಾಟಗಾರ ಸಿ.ಅಜ್ಜಪ್ಪ ನಿಧನ
- ವಿಕಲಚೇತನ ಸಾಧಕರಿಂದ ಅರ್ಜಿ ಆಹ್ವಾನ
- ಬೀದರ್ | ಪ್ರತಿ ಟನ್ ಕಬ್ಬಿಗೆ 2,950ರೂ. ನಿಗದಿ: ಪ್ರತಿಭಟನೆ ಕೈ ಬಿಟ್ಟ ರೈತರು
Author: admin
ತುರುವೇಕೆರೆ: ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಮಸಾಲ ಜಯರಾಮ್ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ತುರುವೇಕೆರೆ ಪಟ್ಟಣದ ತಾಲೂಕು ಕಚೇರಿಯಲ್ಲಿರುವ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ, ಚುನಾವಣಾ ಅಧಿಕಾರಿ ಕೆ.ಎಸ್.ಮಂಜುನಾಥ್ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ವೈ.ಎಂ.ರೇಣು ಕುಮಾರ್ ರವರಿಗೆ ಶಾಸಕ ಮಸಾಲ ಜಯರಾಮ್ ನಾಮಪತ್ರ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯ ದಿನಾಂಕ ಪ್ರಕಟವಾದ ದಿನದಿಂದಲೂ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದೇನೆ, ಹೆಚ್ಚಿನ ಕಾರ್ಯಕರ್ತರು, ಮುಖಂಡರು ಬಿಜೆಪಿ ಪಕ್ಷದ ಕಡೆ ಒಲವು ತೋರಿಸಿದ್ದಾರೆ. ಅನ್ಯ ಪಕ್ಷಗಳನ್ನು ತೊರೆದು ನಮ್ಮ ಪಕ್ಷದ ಕಡೆ ಮುಖ ಮಾಡಿದ್ದಾರೆ, ಅವರೆಲ್ಲರಿಗೂ ಸ್ವಾಗತವನ್ನು ಕೋರುತ್ತೇನೆ, ನಾನು ಶಾಸಕನಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತುಕೊಟ್ಟು ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು. ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಮತದಾರ ಪ್ರಭುಗಳು ಈ ಬಾರಿಯ ಚುನಾವಣೆಯಲ್ಲಿ 20,000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲು ಮತದಾರರು ಆಶೀರ್ವಾದಿಸಲಿದ್ದಾರೆ ಎಂದು ಅವರು ವಿಶ್ವಾಸ…
ಕೊರಟಗೆರೆ: ಕಾಂಗ್ರೆಸ್ ಗೆ ವಲಸೆ ಬರೋರ ಸಂಖ್ಯೆ ಹೆಚ್ಚಾಗಿರೋದು ಶುಭ ಸೂಚನೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅನ್ನೋ ಸೂಚನೆ ಇರೋದರಿಂದ ಬರ್ತಾ ಇದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ಕೊರಟಗೆರೆಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ರು, ಸವದಿ ಅಂತಹ ಹಿರಿಯ ನಾಯಕರು ಬಂದಿರೋದು ಪಕ್ಷ ಅಧಿಕಾರಕ್ಕೆ ಬರುತ್ತೆ ಅನ್ನೋ ಮುನ್ಸೂಚನೆ ಇದೆ. ಇನ್ನೂ ಕೂಡ ತುಂಬಾ ಜನ ಕಾಂಗ್ರೆಸ್ ಗೆ ಬರುವವರಿದ್ದಾರೆ ಎಂದರು. ರಾಮದಾಸ್ ಕೂಡಾ ಬಿಜೆಪಿ ತೊರೆದು ಕಾಂಗ್ರೆಸ್ ಬಂದರೆ ಆಶ್ಚರ್ಯ ಪಡಬೇಕಿಲ್ಲ. ತುಮಕೂರು ಜಿಲ್ಲೆಯ ಬೇರೆ ಬೇರೆ ಪಕ್ಷದ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಕೂಡಾ ಕೊರಟಗೆರೆ ಕ್ಷೇತ್ರದ ಪ್ರಚಾರಕ್ಕೆ ಬರ್ತಾರೆ, ಈಗ ತಾನೇ ಅವರಿಗೆ ಪೋನ್ ನಲ್ಲೂ ಮಾತನಾಡಿ ಶುಭ ಹಾರೈಸಿದ್ದೇನೆ. ಅವರು ಕೂಡಾ ನನಗೆ ಶುಭವಾಗಲಿ ಎಂದು ಹೇಳಿದ್ದಾರೆ. ದಲಿತ ಸಿಎಂ ಕುರಿತು ನಾನು ಪ್ರತಿಕ್ರಿಯೆ ಮಾಡಲು ಹೋಗಲ್ಲ. ನಮಗೆ ಬೇಕಾಗಿರೋದು ಕಾಂಗ್ರೇಸ್ ಅಧಿಕಾರಕ್ಕೆ ಬರೋದು.…
ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸ್ಪರ್ಧೆ ಮಾಡುತ್ತಿರುವ ಅಭ್ಯರ್ಥಿಗಳ ಬಳಿ ತಮ್ಮ ಗ್ರಾಮಗಳಿಗೆ ಆಗಬೇಕಾದ ರಸ್ತೆ, ನೀರು, ವಿದ್ಯುತ್, ಶಾಲೆಗಳು, ದೇವಾಲಯಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲು ಜನರಲ್ಲಿ ಅರಿವು ಮೂಡಿಸಲು ತಿಳುವಳಿಕೆ ನೀಡಲು ನಾನು ಬಂದಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಹೇಳಿದರು. ತುರುವೇಕೆರೆ ತಾಲೂಕಿನ ಚಾಕುವಳ್ಳಿ ಪಾಳ್ಯ ಗ್ರಾಮಕ್ಕೆ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೆಮೆಲ್ ಕಾಂತರಾಜು ಪರ ಪ್ರಚಾರ ಹಾಗೂ ಮತಯಾಚನೆ ಮಾಡಲು ಆಗಮಿಸಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮಗಳಲ್ಲಿ ವಾಚನಾಲಯಗಳಾಗಬೇಕು, ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಪ್ರತಿ ಸರ್ಕಾರಿ ಶಾಲೆಗಳಿಗೆ ಅಗತ್ಯ ಶೌಚಾಲಯ ದೊರೆಯುವಂತಾಗಬೇಕಾಗಿದೆ. ಅದಕ್ಕಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಯೋಜನೆ ರೂಪಗೊಳ್ಳಬೇಕಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಅಭ್ಯರ್ಥಿಯಾದ ಬೆಮೆಲ್ ಕಾಂತರಾಜುರವರು ನಮ್ಮ ಜೊತೆಯಲ್ಲಿದ್ದರೆ, ಅನುಕೂಲ ಮಾಡಿಕೊಡುತ್ತೇನೆ ಎಂದು ವಾಗ್ದಾನ ನೀಡಿದ್ದಾರೆ. ಆದುದರಿಂದ ಅವರ ಕೈ ಬಲಪಡಿಸಲು ನಾನು ಬಂದಿದ್ದೇನೆ. ಹಾಗೆಯೇ ಅವರು ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಬೇಕು, ಅವರ ಸಮಸ್ಯೆಗಳಿಗೆ…
ಮಧುಗಿರಿ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ರಾಜ್ಯದಲ್ಲಿ ಮುಖ್ಯ ಮಂತ್ರಿ ಆಗಿದ್ದಾಗ ಮಾಡಿದ ಅಭಿವೃದ್ಧಿ ಹಾಗೂ ಪ್ರಸ್ತುತ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತು ಜನತೆಯ ಅನುಕೂಲಕ್ಕಾಗಿ ರೂಪಿಸಿರುವ ಪಂಚರತ್ನ ಯೋಜನೆಯೇ ಜೆ.ಡಿ.ಎಸ್.ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆಯೆಂದು ಮಧುಗಿರಿ ವಿಧಾನ ಸಭಾಕ್ಷೇತ್ರದ ಜೆ.ಡಿ.ಎಸ್.ಅಭ್ಯರ್ಥಿ ಎಂ.ವಿ.ವೀರಭದ್ರಯ್ಯ ಹೇಳಿದರು. ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, 2018ರಲ್ಲಿ ಪ್ರಕೃತಿ ಕೈ ಕೊಡ್ತು, ಭೀಕರವಾದ ಬರಗಾಲ ಕುಡಿಯೋ ನೀರಿಗೂ ಹಾಹಾಕಾರ , ದನ ಕರುಗಳ ಮೇವಿಗೂ ಸಹ ಹಾಹಾಕಾರ ಸೃಷ್ಟಿಯಾದ ಸಂದರ್ಭದಲ್ಲಿ ಕುಮಾರಸ್ವಾಮಿಯವರು 6 ಕೋಟಿ 80 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿ, ಆಂಧ್ರಪ್ರದೇಶದಿಂದ ದನ ಕರುಗಳಿಗೆ ಮೇವುತರಿಸಿದ್ದರು ಎಂದರು. ಯಾವುದಾದರೂ ಕ್ಷೇತ್ರದಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ 300 ಬೋರ್ವೆಲ್ ಕೊರೆಸಿ ನೀರಿಗೆ ಅನುಕೂಲ ಮಾಡಿದ್ದು, ಅಂದರೆ ಅದು ಮಧುಗಿರಿ ಕ್ಷೇತ್ರ. ಇದು ಒಂದು ಇತಿಹಾಸ ಎಂದು ಹೇಳಬಹುದು. ಈಗಿರುವ ಬಿಜೆಪಿ ಸರ್ಕಾರ, ಕ್ಷೇತ್ರಕ್ಕೆ ಅನುದಾನ ಕೊಡಲು ತಾರತಮ್ಯ ಮಾಡಿತು. ಆದರೂ ನಾನು ಕ್ಷೇತ್ರಕ್ಕೆ 1,147 ಕೋಟಿ ಅನುದಾನವನ್ನು…
ಅಕ್ಷಯ ತೃತೀಯಕ್ಕೆ ಇನ್ನು ಬಹಳ ದಿನವಿಲ್ಲ. ಪ್ರತಿ ವರ್ಷ ಆಚರಿಸಲಾಗುವ ಅಕ್ಷಯ ತೃತೀಯ ಭಾರತದ ಆಭರಣ ಉದ್ಯಮದ ದೊಡ್ಡ ಆಚರಣೆಗಳಲ್ಲಿ ಒಂದಾಗಿದೆ. ಅಕ್ಷಯ ತೃತೀಯದಲ್ಲಿ ಚಿನ್ನವನ್ನು ಖರೀದಿಸುವುದು ಸಮೃದ್ಧಿಯನ್ನು ತರುತ್ತದೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ವಿಶೇಷವಾಗಿ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಸಮಯದಲ್ಲಿ. ಈ ವರ್ಷದ ಅಕ್ಷಯ ತೃತೀಯ ಏಪ್ರಿಲ್ 22 ರಂದು ಬರುತ್ತದೆ. ಅಕ್ಷಯ ತೃತೀಯದಂದು ತಾವೇ ಚಿನ್ನ ಖರೀದಿಸುವ ಆಸೆಯಿಂದ ಹೊರಡುವ ಅನೇಕರು ಸರಿಯಾದ ತಿಳುವಳಿಕೆ ಇಲ್ಲದ ಕಾರಣ ಸಂಕಷ್ಟಕ್ಕೆ ಸಿಲುಕುತ್ತಾರೆ. ಹಾಗಾದರೆ, ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸುವಾಗ ಏನನ್ನು ನೋಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳೋಣ. ಹಾಲ್ಮಾರ್ಕ್ ಚೆಕ್ ಚಿನ್ನವನ್ನು ಖರೀದಿಸುವಾಗ ಮೊದಲು ನೋಡುವುದು ಅದರ ವಿಶಿಷ್ಟ ಲಕ್ಷಣವಾಗಿದೆ. ಭಾರತದಲ್ಲಿ ಕಾನೂನಿನ ಪ್ರಕಾರ ಹಾಲ್‌ಮಾರ್ಕ್ ಮಾಡಿದ ಚಿನ್ನವನ್ನು ಮಾತ್ರ ಮಾರಾಟ ಮಾಡಬಹುದು. ಹಾಲ್‌ಮಾರ್ಕ್‌ಗಳು ಚಿನ್ನದ ಗುಣಮಟ್ಟ ಮತ್ತು ಶುದ್ಧತೆಯನ್ನು ಖಚಿತಪಡಿಸುತ್ತವೆ. ಕ್ಯಾರೆಟ್ ಪಾವತಿಯ ವಿಶಿಷ್ಟ ಘಟಕವಾಗಿದೆ. ಶುದ್ಧ ಚಿನ್ನ 24 ಕ್ಯಾರಟ್ ಆಗಿದೆ. ನೂರು ಪ್ರತಿಶತ ಚಿನ್ನವನ್ನು 24 ಕ್ಯಾರಟ್…
ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಏಕ ನಾಗರಿಕ ಸಂಹಿತೆಯ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಹಂತಹಂತವಾಗಿ ಅನುಷ್ಠಾನಕ್ಕೆ ಕಾನೂನಿನ ಸಾಮರ್ಥ್ಯದ ಪರಿಶೀಲನೆ ಆರಂಭವಾಗಿದೆ. ಕಾರ್ಯಕಾರಿ ಸಂಹಿತೆಯ ಅನುಷ್ಠಾನಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಲು ಸಮಿತಿಯನ್ನು ಘೋಷಿಸಲು ಚರ್ಚೆಗಳು ಪ್ರಾರಂಭವಾಗಿವೆ. ಏಕರೂಪ ನಾಗರಿಕ ಸಂಹಿತೆಯನ್ನು ಶಾಸನದ ಮೂಲಕ ಜಾರಿಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ನ ಸಾಲಿಸಿಟರ್ ಜನರಲ್ ಘೋಷಿಸಿದ್ದರು. ಇದೊಂದು ನಿರಂತರ ಪ್ರಕ್ರಿಯೆ.21ನೇ ಕಾನೂನು ಆಯೋಗವು ಏಕವ್ಯಕ್ತಿ ಕಾಯ್ದೆಯ ಅನುಷ್ಠಾನದ ವಿವಿಧ ಅಂಶಗಳನ್ನು ಸಹ ಪರಿಶೀಲಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ನವದೆಹಲಿ : ಇಂದು ಏಪ್ರಿಲ್ 19 ರಂದು ಬೆಳಿಗ್ಗೆ 7 ಗಂಟೆಗೆ ನಿರುಪಯುಕ್ತ ಉಪಗ್ರಹವೊಂದು ಬಾಹ್ಯಾಕಾಶದಿಂದ ಭೂಮಿಯ ಮೇಲೆ ಬೀಳಲಿದೆ ಎಂದು ನಾಸಾ ಎಚ್ಚರಿಕೆ ನೀಡಿದೆ. ಈ ಉಪಗ್ರಹವನ್ನು 21 ವರ್ಷಗಳ ಹಿಂದೆ ಫೆಬ್ರವರಿ 2002ರಂದು ಉಡಾವಣೆ ಮಾಡಿತು ಇದರ ಹೆಸರು RHESSI ಸ್ಪೇಸ್‌ಕ್ರಾಫ್ಟ್. ಇದು ಪತನದ ಸಮಯ ಮತ್ತು ಮಾರ್ಗವನ್ನು ನಿಖರವಾಗಿ ಹೇಳಲು ವಿಜ್ಞಾನಿಗಳಿಗೆ ಸಾಧ್ಯವಾಗಲಿಲ್ಲ ಅದರಂತೆ ಬೆಳಿಗ್ಗೆ ಏಳು ಗಂಟೆಯಿಂದ 16 ಗಂಟೆಗಳ ಮೊದಲು ಅಥವಾ 16 ಗಂಟೆಗಳ ನಂತರ ಯಾವುದೇ ಸಮಯದಲ್ಲಿ ಭೂಮಿಯ ಮೇಲೆ ಬೀಳಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸಮುದ್ರದಲ್ಲಿ ಬಿದ್ದರೆ ತೊಂದರೆ ಆಗುವುದಿಲ್ಲ. ಆದರೆ 273 ಕೆಜಿ ತೂಕವಿರುವ ಈ ಉಪಗ್ರಹ ವಸತಿ ಪ್ರದೇಶದಲ್ಲಿ ಬಿದ್ದರೆ, ಸಾಕಷ್ಟು ತೊಂದರೆ ಉಂಟಾಗಬಹುದು. ಹಾಗು ಈ ಉಪಗ್ರಹದ ಹೆಚ್ಚಿನ ಭಾಗವು ವಾತಾವರಣಕ್ಕೆ ಬರುವಾಗ ಸುಟ್ಟು ಹೋಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಎಚ್ಚರ, ಭೂಮಿಗೆ ಅಪ್ಪಳಿಸಲಿದೆ 273 ಕೆಜಿ ತೂಕದ ಬೃಹತ್ ‘ಉಪಗ್ರಹ’, ಆಪತ್ತು ತಪ್ಪಿದ್ದಲ್ಲ ಎಂದು ನಾಸಾ…
ಐಎನ್‌ಎಕ್ಸ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ತಿರುಗೇಟು ನೀಡಿದ್ದಾರೆ. ಕಾರ್ತಿ ಅವರ 11.04 ಕೋಟಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಜಪ್ತಿಯಲ್ಲಿ ಕರ್ನಾಟಕದ ಕೋಟಕ್ ಜಿಲ್ಲೆಯ ಆಸ್ತಿಗಳು ಸೇರಿವೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪಿ ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ಮಾಧ್ಯಮ ಸಂಸ್ಥೆಯಲ್ಲಿ ವಿದೇಶಿ ಹೂಡಿಕೆಯನ್ನು ಅಕ್ರಮವಾಗಿ ಸ್ವೀಕರಿಸಿದ್ದರು ಎಂದು ಪ್ರಕರಣದಲ್ಲಿ ಆರೋಪಿಸಲಾಗಿದೆ. ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರು ತಮಿಳುನಾಡಿನ ಶಿವಗಂಗಾ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದರಾಗಿದ್ದಾರೆ. ಐಎನ್‌ಎಕ್ಸ್ ಪ್ರಕರಣದಲ್ಲಿ ಸಿಬಿಐ ಮತ್ತು ಇಡಿ ಕಾರ್ತಿಯನ್ನು ಬಂಧಿಸಿವೆ. 2007ರಲ್ಲಿ ಪಿ ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ಐಎನ್‌ಎಕ್ಸ್ ಮೀಡಿಯಾ ಎಂಬ ಕಂಪನಿ ನಿಯಮಗಳನ್ನು ಉಲ್ಲಂಘಿಸಿ 305 ಕೋಟಿ ರೂಪಾಯಿ ವಿದೇಶಿ ಹೂಡಿಕೆಯನ್ನು ಸ್ವೀಕರಿಸಿತ್ತು. ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯ ನಿಯಮಗಳ ಪ್ರಕಾರ ಕಂಪನಿಯು 4.62 ಕೋಟಿ ರೂಪಾಯಿ ವಿದೇಶಿ ಹೂಡಿಕೆಯನ್ನು ಸ್ವೀಕರಿಸಲು ಅರ್ಹವಾಗಿತ್ತು…
ಮಹಾರಾಷ್ಟ್ರದ ಥಾಣೆಯಲ್ಲಿರುವ ಸಿನಿ ವಂಡರ್ ಮಾಲ್ ಬಳಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಥಾಣೆಯ ಓರಿಯನ್ ಬಿಸಿನೆಸ್ ಪಾರ್ಕ್‌ನ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಪ್ರಯತ್ನ ನಡೆಸಿದೆ. ರಾತ್ರಿ 8.37ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಗೊತ್ತಾಗಿದೆ. ಬೆಂಕಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ಎಲ್ಲ ಕಾರುಗಳು ಸುಟ್ಟು ಕರಕಲಾಗಿವೆ. ಸಿಎನ್‌ಜಿ ಕಾರ್ ಕೂಡ ಬೆಂಕಿಯಲ್ಲಿ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ. ಬೆಂಕಿ ಕಾಣಿಸಿಕೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಅವಿನಾಶ್ ಸಾವಂತ್, ಯಾವುದೇ ಗಾಯಗಳ ವರದಿಯಾಗಿಲ್ಲ ಎಂದು ಹೇಳಿದ್ದಾರೆ. ಮಾಲ್‌ನಿಂದ ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು ಬೆಂಕಿ ನಂದಿಸುವ ಪ್ರಯತ್ನ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…
ನಮ್ಮತುಮಕೂರು ಎಕ್ಸ್ ಕ್ಲೂಸಿವ್ ರಿಪೋರ್ಟ್: ತುರುವೇಕೆರೆ: ತುರುವೇಕೆರೆ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ, ಕರ್ನಾಟಕ ಹೈಕೋರ್ಟ್ ವಕೀಲರಾದ ರಮೇಶ್ ನಾಯಕ್ ಎಲ್. ಅವರು ತಮಗೆ ಪಕ್ಷದಿಂದ ನೀಡಲಾಗಿದ್ದ ಎಂಎಲ್ ಎ ಟಿಕೆಟ್ ನ್ನು ವಾಪಸ್ ಮಾಡಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿರುವ ಅವರು, ನಮ್ಮ ಹೆಮ್ಮೆಯ “ತುಮಕೂರು” ಜಿಲ್ಲೆಯ ವಿಶ್ವವಿಖ್ಯಾತ ಸಿದ್ದಗಂಗಾ ಮಠದಂತಹ ಶ್ರೀಮಂತ ಧಾರ್ಮಿಕ—ಶೈಕ್ಷಣಿಕ ಪರಿಸರದಲ್ಲಿ ಬೆಳೆದು ಬಂದಿರುವ ನಾನು ಮತ್ತು ನಮ್ಮ ಕುಟುಂಬ ಎಂತಹ ಕಠಿಣಾತಿ ಕಠಿಣ ಸಂದರ್ಭದಲ್ಲೂ ಸತ್ಯ ನ್ಯಾಯ—ಧರ್ಮದ ಹಾದಿ ಬಿಟ್ಟು ನಡೆದಿಲ್ಲ ಹಾಗೂ ಭ್ರಷ್ಟಾಚಾರದ ಜೊತೆಗೆ ರಾಜಿಯಾಗಿಲ್ಲ. ಆಮ್ ಆದ್ಮಿ ಪಾರ್ಟಿಯ 2023 ಕರ್ನಾಟಕ ವಿಧಾನ ಸಭಾ ಚುನಾವಣೆಗೆ ತುರುವೇಕೆರೆ ವಿಧಾನ ಸಭಾ ಕ್ಷೇತ್ರದಿಂದ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದಕ್ಕೆ ಪಕ್ಷಕ್ಕೆ ಋಣಿಯಾಗಿದ್ದೇನೆ. ಆದರೆ, ಅಷ್ಟೇ ವಿನಮ್ರತೆಯಿಂದ ನನ್ನ ಉಮೇದುವಾರಿಕೆಯನ್ನು ಹಿಂದಿರುಗಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಟಿಕೆಟ್ ವಾಪಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ನಾಯಕ್ ಎಲ್.…