Author: admin

ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಲಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸೋಮವಾರ ಚಿಕ್ಕಹಟ್ಟಿಹೊಳಿ ಮನೆಯ ಆರಾಧ್ಯದೈವ ಶ್ರೀ ವೀರಭದ್ರ ದೇವರ ಸನ್ನಿಧಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರು. ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಕುಟುಂಬದ ಇತರ ಸದಸ್ಯರೊಂದಿಗೆ ತೆರಳಿದ ಅವರು, ನಾಮಪತ್ರಕ್ಕೆ ಸಂಬಂಧಿಸಿದ ಕಾಗದಪತ್ರಗಳಿಗೂ ಪೂಜೆ ಮಾಡಿಸಿ, ದೇವರ ಎದುರು ಹಸ್ತಾಕ್ಷರ ಹಾಕಿದರು. ಯಾವುದೇ ಒಳ್ಳೆಯ ಕೆಲಸ ಮಾಡುವ ಮುನ್ನ ನಾವು ಮನೆ ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವುದು ವಾಡಿಕೆ. ಹಾಗಾಗಿ ಇಂದು ಮನೆಯ ಆರಾಧ್ಯದೈವ ಶ್ರೀ ವೀರಭದ್ರ ದೇವರ ಸನ್ನಿಧಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದ್ದೇನೆ. ದೇವರ ಆಶೀರ್ವಾದ ಪಡೆದಿದ್ದೇನೆ. ಮಂಗಳವಾರ ಬೆಂಬಲಿಗರ ಸಾಕ್ಷಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು. ಮಂಗಳವಾರ ಬೆಳಗ್ಗೆ ಹಿಂಡಲಗಾ ಗಣಪತಿ ಹಾಗೂ ಸುಳೇಬಾವಿಯ ಮಹಾಲಕ್ಷ್ಮೀ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಪಾರ ಪ್ರಮಾಣದ ಬೆಂಬಲಿಗರೊಂದಿಗೆ ತೆರಳಿ…

Read More

ತಿಪಟೂರು: ಬಂಡಾಯ ಜೆಡಿಎಸ್ ಅಭ್ಯರ್ಥಿಯಾಗಿ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಬಂಡೆ ರವಿ ನಾಮಪತ್ರ ಸಲ್ಲಿಸಿದರು. ಸಾವಿರಾರು ಜನ ಅಭಿಮಾನಿಗಳೊಂದಿಗೆ ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಂಡೆರವಿ, ಸಾವಿರಾರು ಜನ ಅಭಿಮಾನಿಗಳ ಜೈಕಾರ ಹರ್ಷೋದ್ಘಾರದ ನಡುವೆ ಕೋಡಿಸರ್ಕಲ್ ಬಿ.ಹೆಚ್. ರಸ್ತೆ ಮೂಲಕ ಸಾಗಿ ತಾಲ್ಲೂಕು ಆಡಳಿತ ಭವನದಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಜನತಾ ಪರಿವಾರದ ಅಭಿಮಾನಿಯಾಗಿದ್ದು, ತಿಪಟೂರು ವಿಧಾನಸಭಾ ಕ್ಷೇತ್ರ ನನ್ನ ಕರ್ಮಭೂಮಿಯಾಗಿದೆ ಜೆಡಿಎಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಕಡೇ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ ಕಾರಣ ಅಭಿಮಾನಿಗಳು ಹಾಗೂ  ಜೆಡಿಎಸ್ ಕಾರ್ಯಕರ್ತರ  ಒತ್ತಾಸೆಯಂತೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿರುವುದಾಗಿ ತಿಳಿಸಿದರು. ಈ ಬಾರಿ ಚುನಾವಣೆಯಲ್ಲಿ ಜನ ನನ್ನ ಕೈ ಹಿಡಿಯುವ ವಿಶ್ವಾಸವಿದೆ ಎಂದು ಇದೇ ವೇಳೆ ಅವರು ವಿಶ್ವಾಸ ವ್ಯಕ್ತಪಡಿಸಿದರು. ವರದಿ: ಆನಂದ್, ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…

Read More

ಕೊರಟಗೆರೆ : ಪಟ್ಟಣದ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 132 ನೇ ಜಯಂತಿಯನ್ನು ಮುಖಂಡರ ನೇತೃತ್ವದಲ್ಲಿ ಆಚರಿಸಲಾಯಿತು. ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪಕ್ಷದ ಆಮ್ ಆದ್ಮಿ ಪಕ್ಷದ ಸಂಭಾವ್ಯ ಅಭ್ಯರ್ಥಿಯಾದ ಹನುಮಂತರಾಯಪ್ಪ ಮಾತನಾಡಿ ವಿಶ್ವ ನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿಯನ್ನು ದೇಶಾದ್ಯಂತ ಅತಿ ವಿಜೃಂಭಣೆಯಾಗಿ ಆಚರಿಸಲಾಗುತ್ತಿದೆ.  ಸಂವಿಧಾನದಲ್ಲಿ ಬಡವರಿಗೆ ಮತ್ತು ಶ್ರೀಮಂತರಿಗೆ ಸಮಾನ ನ್ಯಾಯವನ್ನು ನೀಡಿದ್ದು ನಮ್ಮ ದೇಶದ ಸಂವಿಧಾನವು ಪವಿತ್ರವಾದ ಸಂವಿಧಾನವಾಗಿದ್ದು ಅದನ್ನು ಆನೆ ಗಾತ್ರದ ಸಂವಿಧಾನವೆಂದು ಕರೆಯುತ್ತಾರೆ. ಈ ಪುಸ್ತಕದಲ್ಲಿ ಎಲ್ಲಾ ಜನಾಂಗದ ಸಮುದಾಯದವರ ಅನುಕೂಲಕ್ಕಾಗಿ ಮತ್ತು ಅವರ ಹಕ್ಕುಗಳನ್ನು ಪಡೆಯುವುದಕ್ಕಾಗಿ ಸಮಾನತೆಯನ್ನು ಕಾಪಾಡಲು ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು ಸಂವಿಧಾನದ ಪುಸ್ತಕವನ್ನು ರಚಿಸಿದ್ದಾರೆ. ಈ ದಿನವನ್ನು ದೇಶಾದ್ಯಂತ ಸಮಾನತೆಯ ದಿನವೆಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹನುಮಂತರಾಯಪ್ಪ,ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಮಂಜುಳ…

Read More

ಬೇಸಿಗೆಯ ಬಿಸಿ ಹೆಚ್ಚಾದಂತೆ ಮಾನವ ಸೇರಿದಂತೆ ಪ್ರಾಣಿ, ಮತ್ತು ಪಕ್ಷಿಗಳು ಬಾಯಾರಿಕೆಯಿಂದ ಬಳಲುತ್ತಿದ್ದಾರೆ. ಮನುಷ್ಯರು ಬೇರೆಯವರೊಂದಿಗೆ ಬೇಡಿಯಾದರೂ ನೀರು ಕುಡಿದು ಬಾಯಾರಿಕೆ ನೀಗಿಸಿಕೊಳ್ಳಬಹುದು ಆದ್ರೆ, ಕಾಡು ಪ್ರಾಣಿಗಳು ಬಾಯಾರಿಕೆಯಿಂದ ಭೀಕರವಾಗಿ ಬಳಲುತ್ತಿರುತ್ತವೆ. ಇದೀಗ ಬಾಯಾರಿಕೆಯಿಂದ ಬಳಲುತ್ತಿದ್ದ ತೋಳಕ್ಕೆ ವ್ಯಕ್ತಿಯೊಬ್ಬ ಬಾಟಲಿಯ ಮೂಲಕ ನೀರುಣಿಸಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ತುಂಬಾ ವೈರಲ್‌ ಆಗುತ್ತಿದೆ. ಕಾಡು ಪ್ರಾಣಿಗಳು ಹಾಗೂ ಮಾನವರ ನಡುವೆ ಆಗಾಗ ಸಂಘರ್ಷ ಏರ್ಪಡುತ್ತಿರುತ್ತವೆ. ಇದೀಗ ಅಂತಹುದೆ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಮರುಭೂಮಿಯಲ್ಲಿ ಬಾಯಾರಿದ ತೋಳಕ್ಕೆ ವ್ಯಕ್ತಿಯೊಬ್ಬ ನೀರು ಕುಡಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ವೀಡಿಯೊವನ್ನು Pier Pets ಎಂಬ ಟ್ಟಿಟರ್‌ ಖಾತೆ ಹಂಚಿಕೊಂಡಿದೆ. ವ್ಯಕ್ತಿಯೊಬ್ಬ ಬಾಟಲಿಯಿಂದ ನೀರನ್ನು ತೋಳದ ಬಾಯಿಗೆ  ಹಾಕುತ್ತಿರುವುದನ್ನು ಕಾಣಬಹುದು. ತೋಳ ಮನುಷ್ಯನನ್ನು ಕಂಡರೆ ಓಡುತ್ತದೆ. ಇಲ್ಲವೆ ಪ್ರಾಣ ರಕ್ಷಣೆಗೆ ದಾಳಿ ಮಾಡುತ್ತದೆ. ಆದ್ರೆ ಇಲ್ಲಿ ಮಾನವನನ್ನು ನಂಬಿ ತನ್ನ  ದಾಹವನ್ನು ನೀಗಿಸಿಕೊಂಡಿದ್ದು ತುಂಬಾ ವಿಶೇಷವಾಗಿದೆ ಎಂದು ಹೇಳಬಹುದು. ನಮ್ಮತುಮಕೂರು.ಕಾಂನ ಕ್ಷಣ…

Read More

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಹೆಚ್ಚು ತಿನ್ನಲು ಬಯಸುತ್ತೇವೆ.  ಆದರೆ ಇದು ಶೇಕಡಾ 90 ರಷ್ಟು ನೀರನ್ನು ಹೊಂದಿರುತ್ತದೆ ಮತ್ತು ಬೇಸಿಗೆಯ ಶಾಖ ಹೀರಿಕೊಳ್ಳಲು ಕಲ್ಲಂಗಡಿ ಹಣ್ಣು ಸೂಕ್ತವಾಗಿದೆ. ಅಷ್ಟೇ ಅಲ್ಲದೇ ತ್ವರಿತ ಶಕ್ತಿಯನ್ನು ನೀಡುತ್ತದೆ ಎಂದು ತಿಳಿದುಕೊಂಡಿದ್ದೇವೆ. ಆದರೆ ಕಲ್ಲಂಗಡಿ ಖರೀದಿಸುವುದು ಹೇಗೆ? ಕಣ್ಣಿಗೆ ಸುಂದರವಾಗಿ ಕಾಣುವುದನ್ನು ಆಯ್ಕೆ ಮಾಡುತ್ತೇವೆ. ಮನೆಗೆ ಬಂದು ಕತ್ತರಿಸಿದ ನಂತರ, ನಾವು ಮೋಸ ಹೋಗುತ್ತೇವೆ ಹಾಗಾಗಿ ಖರೀದಿಸುವ ಮುನ್ನ ಮುನ್ನೆಚ್ಚರಿಕೆಗಳೇನು? ಎಂದು ತಿಳಿದುಕೊಳ್ಳೋಣ. ಖರೀದಿಸುವ ಸಂದರ್ಭದಲ್ಲಿ ಉತ್ತಮ ಕಲ್ಲಂಗಡಿ ಹಣ್ಣು ಎಂದು ಗುರುತಿಸುವುದು ಹೇಗೆ? ಗಾತ್ರದಲ್ಲಿ ಚಿಕ್ಕದಾಗಿರುವ ಕಲ್ಲಂಗಡಿ ಹಣ್ಣುಗಳು ಸಿಹಿ ಮತ್ತು ಕೆಂಪು ಬಣ್ಣದ್ದಾಗಿರುತ್ತವೆ.ಕಲ್ಲಂಗಡಿಯನ್ನು ಹಿಡಿದಾಗ ಅದು ಭಾರವಾಗಿರಬೇಕು.ಸಂಪೂರ್ಣವಾಗಿ ಮಾಗಿದ ಕಲ್ಲಂಗಡಿಗಳು ಗಾಢ ಹಸಿರು ಬಣ್ಣದಲ್ಲಿರುತ್ತವೆ.ಕಲ್ಲಂಗಡಿ ಹಣ್ಣುಗಳಲ್ಲಿ ಹಳದಿ ಕಲೆಗಳು ಹೆಚ್ಚಾದಷ್ಟೂ ಅದು ಹೆಚ್ಚು ಕೆಂಪು ಮತ್ತು ಸಿಹಿಯಾಗಿರುತ್ತದೆ.ಮಾಗಿದ ಕಲ್ಲಂಗಡಿ  ಹಣ್ಣುಗಳನ್ನು ಮೂಗಿನ ಬಳಿ ಇಟ್ಟರೆ, ಅದು ಸಿಹಿ ವಾಸನೆ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಕಲ್ಲಂಗಡಿ ಹಣ್ಣುಗಳು ಕೆಂಪು ಬಣ್ಣಕ್ಕೆ ತಿರುಗಲು ಚುಚ್ಚುಮದ್ದನ್ನು ನೀಡಲಾಗುತ್ತದೆ.…

Read More

ಉತ್ತರಾಖಂಡ್: ಹುಲಿ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಪೌರಿ ಗರ್ವಾಲ್ ಜಿಲ್ಲೆಯ ರಿಖಾ ನಿಖಾಲ್ ಮತ್ತು ಧುಮಾಕೋಟ್ ತಹಸಿಲ್ ನ ಹತ್ತಾರು ಹಳ್ಳಿಗಳಲ್ಲಿ ಬೆಳಗ್ಗೆ 6ಗಂಟೆಯಿಂದ ರಾತ್ರಿ 7ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸ ಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಏಪ್ರಿಲ್ 17 ಮತ್ತು 18ರಂದು ರಿಖಾನಿಖಾಲ್ ಮತ್ತು ಧುಮಾಕೋಟ್ ನ ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲು ಪೌರಿ ಜಿಲ್ಲಾಧಿಕಾರಿ ಆಶೀಷ್ ಚೌಹಾಣ್ ಆದೇಶ ಜಾರಿಗೊಳಿಸಿದ್ದಾರೆ. ಉತ್ತರಾಖಂಡ್ ನ ಪೌರಿ ಗರ್ವಾಲ್ ನ ನೈನಿದಂಡಾ ಪ್ರದೇಶದಲ್ಲಿ ಹುಲಿಯ ದಾಳಿಗೆ ಮೃತಗೊಂಡವರು ಶಾಲೆಯ ನಿವೃತ್ತ ಶಿಕ್ಷಕರು ಎಂದು ಗುರುತಿಸಲಾಗಿದೆ. ಅವರು ಸಾವನ್ನಪ್ಪಿದ ನಂತರ ಈ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆಶೀಷ್ ಚೌಹಾಣ್ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

19 ವರ್ಷದ ನಂದಿನಿ ಗುಪ್ತಾ ತಮ್ಮ ಬುದ್ಧಿವಂತಿಕೆ ಮತ್ತು ಸೌಂದರ್ಯಕ್ಕಾಗಿ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮಣಿಪುರದ ಇಂಫಾಲ್ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ರಾಜಸ್ಥಾನದ ಕೋಟಾ ಮೂಲದ ನಂದಿನಿ ಮಿಸ್ ಇಂಡಿಯಾ ಆಗಿ ಆಯ್ಕೆಯಾದರು. ನಂದಿನಿ ಗುಪ್ತಾ ಚಿಕ್ಕಂದಿನಿಂದಲೂ ವಿಷಯಗಳನ್ನು ಯೋಜಿಸಿ ಜನರನ್ನು ರಂಜಿಸುವಲ್ಲಿ ನಿಪುಣರಾಗಿದ್ದರು ಎಂದು ಸಂಬಂಧಿಕರು ಹೇಳುತ್ತಾರೆ. ನಂದಿನಿ ರಾಜಸ್ಥಾನದ ಸೇಂಟ್ ಪಾಲ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಲಾಲಾ ಲಜಪತ್ ರಾಯ್ ಕಾಲೇಜಿನಲ್ಲಿ ವ್ಯವಹಾರ ನಿರ್ವಹಣೆಯಲ್ಲಿ ಪದವಿ ಪಡೆದರು. ಜೀವನದಲ್ಲಿ ಹಿನ್ನಡೆಗಳು ವ್ಯಕ್ತಿತ್ವವನ್ನು ಬೆಳೆಸುತ್ತವೆ ಎನ್ನುತ್ತಾರೆ ನಂದಿನಿ. ಮುಂದೆ ಜೀವನದಲ್ಲಿ ಎದುರಾಗಬಹುದಾದ ಕಷ್ಟಗಳು, ನಿರಾಸೆಗಳು ಮತ್ತು ನಿರ್ಲಕ್ಷ್ಯಗಳನ್ನು ನಿವಾರಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದು ನಂದಿನಿ ಮಿಸ್ ಇಂಡಿಯಾ ವೇದಿಕೆಯಲ್ಲಿ ಹೇಳಿದರು. ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ 30 ಸ್ಪರ್ಧಿಗಳು ಭಾಗವಹಿಸಿದ್ದರು. ದೆಹಲಿ ಸೇರಿದಂತೆ 29 ರಾಜ್ಯಗಳ ಸ್ಪರ್ಧಿಗಳು ಪ್ರತಿನಿಧಿಸಿದ್ದರು. ಅಲ್ಲದೆ ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಯೂ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ಭಾಗವಾಗಿದ್ದರು. ಫ್ಯಾಶನ್ ಸೆಲೆಬ್ರಿಟಿಗಳಾದ…

Read More

ಅಲಪ್ಪುಳದಲ್ಲಿ ರೈಲು ಚಲಿಸಲು ಪ್ರಾರಂಭಿಸಿದಾಗ ಹತ್ತಲು ಪ್ರಯತ್ನಿಸುತ್ತಿದ್ದ ಮಹಿಳೆಯ ರಕ್ಷಣೆಗೆ ರೈಲ್ವೆ ಪೋರ್ಟರ್ ಬಂದರು. ಅಲಪ್ಪುಳ ರೈಲು ನಿಲ್ದಾಣದಿಂದ ತಿರುವನಂತಪುರಕ್ಕೆ ಬೆಳಗ್ಗೆ 6.30ರ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ಹತ್ತುತ್ತಿದ್ದ ಮಹಿಳೆಯನ್ನು ಪೋರ್ಟರ್ ಶಮೀರ್ ರಕ್ಷಿಸಿದರು. ರೈಲು ಬರುವ ಮುನ್ನವೇ ಐವರ ಕುಟುಂಬ ರೈಲು ನಿಲ್ದಾಣ ತಲುಪಿತ್ತು. ರೈಲು ನಿಂತಾಗ, ಅವರು ಹತ್ತಲು ಕೋಚ್ ಅನ್ನು ಹುಡುಕುತ್ತಿದ್ದರು. ರೈಲು ಚಲಿಸಲು ಪ್ರಾರಂಭಿಸಿದಾಗ,  ಅವರು ಹತ್ತಲು ಪ್ರಯತ್ನಿಸಿದರು. ಸಿಕ್ಕಿಬಿದ್ದರೆ ರೈಲಿನ ಕೆಳಗೆ ಬೀಳುತ್ತಾರೆ. ಇದನ್ನು ಕಂಡ ಹಮಾಲಿ ಶಮೀರ್ ಓಡಿ ಬಂದು ಅವರನ್ನು ರಕ್ಷಿಸಿದ್ದಾರೆ. ಇಬ್ಬರೂ ಪ್ಲಾಟ್‌ಫಾರ್ಮ್ ಮೇಲೆ ಬಿದ್ದಿದ್ದರೂ ಯಾವುದೇ ಗಾಯಗಳಾಗಿಲ್ಲ. ತಾಯಿ ಹತ್ತದ ಕಾರಣ ಮಗಳೂ ರೈಲಿನಿಂದ ಜಿಗಿದಿದ್ದಾಳೆ. ಹಿರಿಯ ಮಹಿಳೆಯ ಪತಿ ಅದೇ ರೈಲಿನಲ್ಲಿ ತಿರುವನಂತಪುರಕ್ಕೆ ಪ್ರಯಾಣ ಮುಂದುವರಿಸಿದರು. ತಾಯಿ, ಮಗಳು, ಮಗಳ ಗಂಡ ಮತ್ತು ಚಿಕ್ಕ ಮಗು ಟ್ಯಾಕ್ಸಿ ಕರೆದು ತಿರುವನಂತಪುರಕ್ಕೆ ಹೋದರು. ಕುಟುಂಬದವರು ತಮಿಳು ಮಾತನಾಡುವವರು. ಸಕಾಲದಲ್ಲಿ ರಕ್ಷಕನಾಗಿ ಹೊರಹೊಮ್ಮಿದ ಶಮೀರ್ ಅವರನ್ನು ಎಲ್ಲರೂ ಅಭಿನಂದಿಸಿದರು. ನಮ್ಮತುಮಕೂರು.ಕಾಂನ ಕ್ಷಣ…

Read More

ಪ್ರಯಾಗ್ ರಾಜ್‌ನಲ್ಲಿ ಮಾಜಿ ಸಂಸದ ಮತ್ತು ದರೋಡೆಕೋರ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಗುಂಡಿಕ್ಕಿ ಕೊಂದಿರುವ ಬಗ್ಗೆ ಎಐಎಂಎಂ ನಾಯಕ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿದ್ದಾರೆ. ಇದು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ದೊಡ್ಡ ವೈಫಲ್ಯವಾಗಿದೆ. ಅಲ್ಲದೆ ಯೋಗಿ ರಾಜೀನಾಮೆ ನೀಡಬೇಕು ಎಂದು ಆರೋಪಿಸಿದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವುದು ಬಂದೂಕಿನ ಮೂಲಕವೇ ಹೊರತು, 2017ರಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ ಇದು ನಡೆಯುತ್ತಿದೆ ಎಂದು ಓವೈಸಿ ಆರೋಪಿಸಿದರು. ಘಟನೆಯ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆ ಅಗತ್ಯವಿದೆ ಎಂದು ಓವೈಸಿ ಸುದ್ದಿಗಾರರಿಗೆ ತಿಳಿಸಿದರು. ಈ ಘಟನೆ ಕಾನೂನು ಸುವ್ಯವಸ್ಥೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇದಾದ ನಂತರ ದೇಶದ ಸಂವಿಧಾನ ಮತ್ತು ಕಾನೂನು ಸುವ್ಯವಸ್ಥೆ ಮೇಲೆ ಸಾರ್ವಜನಿಕರಿಗೆ ನಂಬಿಕೆ ಮೂಡುತ್ತದೆಯೇ? ಉತ್ತರ ಪ್ರದೇಶದ ಮುಖ್ಯಮಂತ್ರಿ ರಾಜೀನಾಮೆಗೆ ನಾವು ಒತ್ತಾಯಿಸುತ್ತೇವೆ. ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಬೇಕು ಮತ್ತು ಘಟನೆಯ ತನಿಖೆಗೆ ತಂಡವನ್ನು…

Read More

ಪುಲ್ವಾಮಾ ದಾಳಿಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸೇನಾ ಮುಖ್ಯಸ್ಥ ಜನರಲ್ ಶಂಕರ್ ರಾಯ್ ಚೌಧರಿ ಹೇಳಿದ್ದಾರೆ. ಈ ಘಟನೆಗೆ ನರೇಂದ್ರ ಮೋದಿ ಸರಕಾರವೇ ಪ್ರಮುಖ ಹೊಣೆ. ಗುಪ್ತಚರ ವೈಫಲ್ಯಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನೂ ದೂಷಿಸಿದರು. ಪಾಕಿಸ್ತಾನದ ಗಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೇನಾ ವಾಹನಗಳು ಸಂಚರಿಸಲು ಅವಕಾಶವಿರಲಿಲ್ಲ. ಸೈನಿಕರು ವಿಮಾನದಲ್ಲಿ ಪ್ರಯಾಣಿಸಿದ್ದರೆ ಘಟನೆಯನ್ನು ತಪ್ಪಿಸಬಹುದಿತ್ತು. ನಡೆದದ್ದು ದೊಡ್ಡ ಹಿನ್ನಡೆ. ಗುಪ್ತಚರ ವೈಫಲ್ಯಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನೂ ದೂಷಿಸಿದರು. ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರ ಬಹಿರಂಗಪಡಿಸುವಿಕೆಯ ಹಿನ್ನೆಲೆಯಲ್ಲಿ ಪ್ರತಿಕ್ರಿಯೆಯಾಗಿದೆ. ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಕೇಂದ್ರ ಗೃಹ ಸಚಿವಾಲಯ ಭದ್ರತಾ ಲೋಪವನ್ನು ಅನುಭವಿಸಿದೆ ಎಂದು ಸತ್ಯಪಾಲ್ ಮಲಿಕ್ ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಈ ವಿಷಯದ ಬಗ್ಗೆ ಮೌನವಾಗಿರುವಂತೆ ಕೇಳಿಕೊಂಡರು ಎಂದು ಸತ್ಯಪಾಲ್ ಮಲಿಕ್ ಬಹಿರಂಗಪಡಿಸಿದ್ದಾರೆ. ದಿ ವೈರ್‌ಗೆ ನೀಡಿದ ಸಂದರ್ಶನದಲ್ಲಿ ಇದನ್ನು ಹೇಳಲಾಗಿದೆ. ಫೆಬ್ರವರಿ 14, 2019 ರಂದು ನಡೆದ ಪುಲ್ವಾಮಾ ದಾಳಿಯಲ್ಲಿ…

Read More