Subscribe to Updates
Get the latest creative news from FooBar about art, design and business.
- ಆರೋಗ್ಯ ಶಿಬಿರ | ಹಾರ್ಟ್ ಸಂಸ್ಥೆಯ ಕಾರ್ಯ ಪ್ರಶಂಸನಿಯ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್
- ವಿಜೃಂಭಣೆಯಿಂದ ನಡೆದ ದುಂಡಿ ಮಾರಮ್ಮ ದೇವಿ ಜಾತ್ರಾ ವಾರ್ಷಿಕೋತ್ಸವ
- ರಾಜ್ಯದಲ್ಲಿ ಎನ್ ಡಿಎಗೆ 2028ನೇ ಚುನಾವಣೆಯಲ್ಲಿ ಬಿಹಾರ ಮಾದರಿಯ ಗೆಲುವು: ಕೆ.ಎಂ.ಕೃಷ್ಣನಾಯಕ
- ನವೆಂಬರ್ 22ರಂದು ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ: ಡಾ.ಕೆ.ಬಿ.ಲಿಂಗೇಗೌಡ
- ಕಲ್ಪೋತ್ಸವ: ಗಮನ ಸೆಳೆದ ಜಂಬೂ ಸವಾರಿ, ಕಲಾತಂಡಗಳ ಮೆರುಗು
- ರೈತ ಹೋರಾಟಗಾರ ಸಿ.ಅಜ್ಜಪ್ಪ ನಿಧನ
- ವಿಕಲಚೇತನ ಸಾಧಕರಿಂದ ಅರ್ಜಿ ಆಹ್ವಾನ
- ಬೀದರ್ | ಪ್ರತಿ ಟನ್ ಕಬ್ಬಿಗೆ 2,950ರೂ. ನಿಗದಿ: ಪ್ರತಿಭಟನೆ ಕೈ ಬಿಟ್ಟ ರೈತರು
Author: admin
ವಿಜಯಪುರ: ಬಿಜೆಪಿ ನಿಮ್ಮನ್ನು ಸಚಿವರು, ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಇಷ್ಟೆಲ್ಲಾ ಅನುಭವಿಸಿ ಈಗ ಕಾಂಗ್ರೆಸ್‌ಗೆ ಹೋಗುತ್ತೀರಲ್ಲ ನಿಮಗೆ ಮಾನ, ಮರ್ಯಾದೆ, ಸ್ವಾಭಿಮಾನ ಇದೆಯಾ? ಎಸ್‌ಡಿಪಿಐ ಸಂಘಟನೆ ಜೊತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ನಿಮಗೆ ನಾಚಿಕೆ ಆಗುತ್ತೋ ಇಲ್ವೋ ಎಂದು ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ದಲಿತರು, ಮುಸ್ಲಿಮರು, ಮರಾಠರು, ಬ್ರಾಹ್ಮಣರಿಗೆ ಸೇರಿದಂತೆ ಎಲ್ಲಾ ಸಮುದಾಯಗಳಿಗೆ ಅನುಕೂಲ ಕಲ್ಪಿಸಿದೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮೋಸ ಮಾಡುವ ಯೋಜನೆ, ಪಿಎಫ್‌ಐನ ಸ್ವರೂಪವಾದ ಎಸ್‌ಡಿಪಿಐ ಜೊತೆಗೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದೆ. 2047ಕ್ಕೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಲು ಹುನ್ನಾರ ನಡೆದಿದೆ. 2047ಕ್ಕೆ ಭಾರತದ ಹಿಂದೂಗಳನ್ನು ಮತಾಂತರ ಮಾಡುವುದು, ನಿರ್ನಾಮ ಮಾಡುವುದು ಎಸ್‌ಡಿಪಿಐ ಕೆಲಸವಾಗಿದೆ. ಪಿಎಫ್‌ಐ ಸಂಘಟನೆಯು ಕರ್ನಾಟಕವನ್ನು ಇಸ್ಲಾಂ ರಾಜ್ಯವನ್ನಾಗಿಸುವ ಯೋಜನೆ ಹಾಕಿಕೊಂಡಿದೆ ಎಂದು ಕಿಡಿ ಕಾರಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…
ತಿಪಟೂರು : ತಿಪಟೂರು ಜೆ.ಡಿ.ಎಸ್ ನಾಯಕರುಗಳು ನನಗೆ ಜೆ.ಡಿ.ಎಸ್ ಟಿಕೆಟ್ ದೊರಕಿಸಿಕೊಡುತ್ತೇವೆ ಎಂದು ನನ್ನ ಬಳಿ ಹಣವನ್ನು ತೆಗೆದುಕೊಂಡು ನನಗೆ ಅನ್ಯಾಯ ಮಾಡಿದ್ದಾರೆ. ಅವರ ಹೆಸರುಗಳನ್ನು ಮುಂದಿನದಿನಗಳಲ್ಲಿ ತಿಳಿಸುತ್ತೇನೆ ಹಾಗೂ ಜೆ.ಡಿ.ಎಸ್ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ ಎಂದು ಜೆ.ಡಿ.ಎಸ್ ಮುಖಂಡ ಎಂ.ರವಿ (ಬಂಡೆರವಿ) ತಿಳಿಸಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಜನತೆಯ ಸೇವೆ ಮಾಡಬೇಕೆಂಬ ಉದ್ದೇಶದಿಂದ ಸಮಾಜ ಸೇವಕನಾಗಿ ಕೈಲಾಗದವರ ಧನಿಯಾಗಿ ಕೈಲಾದ ಸಮಾಜಸೇವೆಯನ್ನು ಮಾಡುತ್ತಾ ಬರುತ್ತಿದ್ದೇನೆ. ಈ ಹಿನ್ನೆಲೆಯಲ್ಲಿಯೇ ನನಗೆ ಕುಮಾರಸ್ವಾಮಿಯವರ ಪರಿಚಯವಿದ್ದು, ಈ ಬಗ್ಗೆ ತಿಳಿದ ಇಲ್ಲಿನ ಪ್ರಭಾವಿ ಜೆ.ಡಿ.ಎಸ್. ಮುಖಂಡರು ನೀವು ಜೆ.ಡಿ.ಎಸ್ ನಿಂದ ನೀವೇ ಅಭ್ಯರ್ಥಿಯಾಗಿ ಎಂದು ಹೇಳಿ 2022ರ ಯುಗಾದಿಯಲ್ಲಿ ಹಲವಾರು ಕಡೆ ಫ್ಲೆಕ್ಸ್ ಹಾಕಿಸಿದರು ಹಾಗೂ ನನ್ನಿಂದ ಹಣವನ್ನು ಪಡೆದರು. ಹೀಗೆ ಹಣ ಪಡೆದವರು ನನಗೆ ಮೋಸಮಾಡಿ ಈಗ ಜೆ.ಡಿ.ಎಸ್ ನಾಯಕನ ಹಿಂದೆ ಓಡಾಡುತ್ತಿದ್ದಾರೆ ಅವರು ಯಾರೆಂದು ಇದೇ ತಿಂಗಳ 20ರ…
ಧಾರವಾಡ: ರಾಜಕೀಯದ ನಂತರ ಜಗದೀಶ್ ಶೆಟ್ಟರ್ ಕಾರ್ಯಕರ್ತರ ಜೊತೆ ಸೇರಿ ಬಿಜೆಪಿ ಪಕ್ಷ ಇನ್ನಷ್ಟು ಬಲಪಡಿಸುವ ಕೆಲಸ ಮಾಡುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರ ರಾಜೀನಾಮೆ ಪಕ್ಷಕ್ಕೆ ಬಹಳ ದುಃಖದ ಸಂಗತಿ. ಹಾಗೆಂದು ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ. ಧಾರವಾಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬಿಜೆಪಿಯ ಹಿರಿಯ ನಾಯಕರಾಗಿದ್ದರು. ವಕೀಲರಾಗಿದ್ದ ಅವರಿಗೆ ಬಿಜೆಪಿ ಪಕ್ಷ ಕರೆದು ಟಿಕೆಟ್ ನೀಡಿ, ಶಾಸಕರನ್ನಾಗಿ ಮಾಡಿತ್ತು. ಜೊತೆಗೆ ಮುಖ್ಯಮಂತ್ರಿಯನ್ನಾಗಿಯೂ ಮಾಡಿತ್ತು. ಆದರೆ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿರುವುದರಿಂದ ನಮಗೆ ಬಹಳ ನೋವಾಗಿದೆ ಎಂದು ಹೇಳಿದರು. ಬಿಜೆಪಿ ಪಕ್ಷ ಇಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಹಿರಿಯರೊಬ್ಬರು ಮನೆ ತೊರೆದಿದ್ದಕ್ಕೆ ಬೇಜಾರಾಗಿದೆ. ಕೇಂದ್ರದಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡುತ್ತೇವೆ ಎಂದರೂ ಶೆಟ್ಟರ್ ಕೇಳಲಿಲ್ಲ. ಲಿಂಗಾಯತರನ್ನು ಸಿಎಂ ಮಾಡಿದ್ದೇ ಬಿಜೆಪಿ ಪಕ್ಷ. ಬಿಜೆಪಿ 67 ಸೀಟುಗಳನ್ನು ಲಿಂಗಾಯತರಿಗೆ ಕೊಟ್ಟಿದೆ. ಲಿಂಗಾಯತರಿಗೆ ಮಾನ್ಯತೆ ಕೊಟ್ಟಿದ್ದು ಯಾವ ಪಕ್ಷ ಎಂಬುದು ಜನರಿಗೆ…
ಬೆಳಗಾವಿ: ಜಗದೀಶ್ ಶೆಟ್ಟರ್ ಎಲ್ಲಾ ಹುದ್ದೆಗಳನ್ನು ಅನುಭವಿಸಿದ್ದರೂ ಸಹ ಬಿಜೆಪಿ ತೊರೆದಿದ್ದಾರೆ. ಅವರೇನೂ ದೊಡ್ಡ ನಾಯಕರಲ್ಲ ಎಂದು ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ನಗರದ ಧರ್ಮನಾಥ್ ಭವನದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಎಲ್.ಕೆ ಅಡ್ವಾಣಿಯಂತಹ ದೊಡ್ಡ ನಾಯಕರೇ ಬಹು ದೊಡ್ಡ ತ್ಯಾಗಗಳನ್ನು ಮಾಡಿದ್ದಾರೆ. ಆದರೆ ಎಲ್ಲಾ ಅಧಿಕಾರವನ್ನು ಅನುಭವಿಸಿ ಕೆಲವರು ಪಕ್ಷವನ್ನು ತೊರೆಯುತ್ತಿದ್ದಾರೆ. ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಹೋಗುವವರು ಹೋಗಲಿ ಪಕ್ಷ ಸ್ವಚ್ಛ ಆಗುತ್ತದೆ ಎಂದಿದ್ದಾರೆ. ಮಾಜಿ ಶಾಸಕ ಸಂಜಯ್ ಪಾಟೀಲ್ ಹಾಗೂ ಧನಂಜಯ ಜಾಧವ್ ಇಬ್ಬರೂ ಬೆಳಗಾವಿ ಗ್ರಾಮೀಣ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ ಮೂರನೇಯವರಿಗೆ ಟಿಕೆಟ್ ಸಿಕ್ಕರೂ ಸಭೆಯಲ್ಲಿ ಮನಪೂರ್ವಕವಾಗಿ ಭಾಗವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಸನ್ನಿವೇಶ ಬಿಜೆಪಿಯಲ್ಲಿ ಮಾತ್ರ ನೋಡಲು ಸಾಧ್ಯ ಎಂದು ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…
ಬೆಂಗಳೂರು: ಕೆಜೆಪಿ ಕಟ್ಟಿದ್ದು ನನ್ನ ಬದುಕಿನಲ್ಲಿ ಮಾಡಿದ ಅಕ್ಷಮ್ಯ ಅಪರಾಧ. ಈ ಕುರಿತಾಗಿ ನಾನು ಹಿಂದೆ ಜನರಿಗೆ ಕ್ಷಮೆ ಕೇಳಿದ್ದೇನೆ ಎಂದು ಬಿ.ಎಸ್ಯಡಿಯೂರಪ್ಪ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿವೃತ್ತಿಯಾಗಿ ಅಂತಾ ಜಗದೀಶ್ ಶೆಟ್ಟರ್‌ಗೆ ಯಾರೂ ಹೇಳಿಲ್ಲ. ಶೆಟ್ಟರ್ ಕುಟುಂಬಕ್ಕೆ ಟಿಕೆಟ್ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಆದರೂ ಅವರು ಬಿಜೆಪಿ ಬಿಟ್ಟಿದ್ದಾರೆ. ಜನ ಅವರನ್ನ ಕ್ಷಮಿಸಲ್ಲ. ನಾನು ಅವರೊಂದಿಗೆ ಎರಡು ಮೂರು ಸಲ ಮಾತಾಡಿದೆ. ಯಾರೇ ಪಕ್ಷ ಬಿಟ್ಟರೂ ನಮಗೆ ಸಮಸ್ಯೆ ಆಗಲ್ಲ. ಅಧಿಕಾರಕ್ಕೆ ಬಂದಾಗ ಸವದಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಇವರ ಬಣ್ಣ ಬಯಲು ಮಾಡುತ್ತೇನೆ ಎಂದು ವಾಗ್ದಾಳಿ ಮಾಡಿದರು. ನನಗೆ 80 ವರ್ಷ ಆಗಿದೆ. ನಾನಿನ್ನೂ ಗಟ್ಟಿ ಇದ್ದೇನೆ. ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ. ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬರುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲೂ ಸುತ್ತಿ ಪಕ್ಷ ಗೆಲ್ಲುವ ಕೆಲಸ ಮಾಡುತ್ತೇನೆ ಎಂದು ಹೇಳಿದರು. ನನ್ನ ಸಂಪೂರ್ಣ ಬದುಕನ್ನು ಬಿಜೆಪಿ, ದೇಶಕ್ಕೆ…
ಕೋಲಾರ: ಚುನಾವಣೆಯಲ್ಲಿ ರಾಜ್ಯವನ್ನು ರಕ್ಷಣೆ ಮಾಡುವ ಪಕ್ಷಕ್ಕೆ ಅಧಿಕಾರ ಕೊಡಿ ಎಂದು ಸಿದ್ದರಾಮಯ್ಯ ತಿಳಿಸಿದರು. ಕಾಂಗ್ರೆಸ್ ಜೈಭಾರತ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 4 ವರ್ಷಗಳಿಂದ ಬಿಜೆಪಿ ಸರ್ಕಾರ ಇದೆ. ಮೇ 10ರಂದು ಚುನಾವಣೆ ನಡೆಯಲಿದೆ. ರಾಜ್ಯದ ನೆಲ, ಜಲ, ಭಾಷೆಯನ್ನು ಯಾರು ರಕ್ಷಣೆ ಮಾಡುತ್ತಾರೆ ಅಂತ ನೀವು ವಿಚಾರ ಮಾಡಿ ಎಂದು ಹೇಳಿದರು. ಮೋದಿ 9 ವರ್ಷದಿಂದ ಅಧಿಕಾರ ಮಾಡುತ್ತಿದ್ದಾರೆ. ಈ 5 ವರ್ಷದಲ್ಲಿ ರಾಜ್ಯದಲ್ಲಿ 3 ಜನ ಸಿಎಂ ಆದರು. ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಆಗಿದ್ದರು. ಮೋದಿ ಅವರು ಬೊಮ್ಮಾಯಿ ಅವರು ಡಬಲ್ ಎಂಜಿನ್ ಸರ್ಕಾರ ಅಂತಾರೆ. ಎರಡು ಕಡೆ ಸರ್ಕಾರ ಇರುವುದರಿಂದ ರಾಜ್ಯದ ಅಭಿವೃದ್ಧಿ ವೇಗವಾಗಿ ಆಗುತ್ತದೆ ಅಂತಾರೆ. ಆದರೆ ಡಬಲ್ ಎಂಜಿನ್ ಸರ್ಕಾರ ಬಂದ ಮೇಲೆ ರಾಜ್ಯ ಕೆಟ್ಟ ಹೆಸರು ತೆಗೆದುಕೊಂಡಿದೆ ಎಂದು ಕಿಡಿಕಾರಿದರು. ರಾಜ್ಯದ ಗೌರವವನ್ನು, ಮಾನ ಮರ್ಯಾದೆಯನ್ನು ಕಾಂಗ್ರೆಸ್ ಅವರು ಹಾಳು ಮಾಡಿದ್ದಾರೆ ಎಂದು ಬಾಯಿ ತಪ್ಪಿ ಹೇಳಿದ ಅವರು,…
ಮಾಜಿ ಡಿಸಿಎಂ ಬೆಳಗಾವಿಯ ಪ್ರಭಾವಿ ಬಿಜೆಪಿ ನಾಯಕ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಮತ್ತೊಂದು ದೊಡ್ಡ ವಿಕೆಟ್ ಪತನವಾಗಿದೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ 7ನೇ ಬಾರಿ ಸ್ಪರ್ಧಿಸಲು ಟಿಕೆಟ್ ನೀಡಲಿಲ್ಲಎನ್ನುವ ಕಾರಣಕ್ಕೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಮಲ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿದ್ದು, ರಾತ್ರಿ ಇಡೀ ಕಾಂಗ್ರೆಸ್ ನಾಯಕರ ಜೊತೆ ಸಭೆ ಮಾಡಿ ಚರ್ಚಿಸಿದ್ದು, ಕೈ ಹಿಡಿಯಲು ಮುಹೂರ್ತ ಫಿಕ್ಸ್ ಆಗಿದೆ. ನಿರೀಕ್ಷೆಯಂತೆ ಶೆಟ್ಟರ್‌ಗೆ ಗಾಳ ಹಾಕಿ ಕಾದು ಕುಳಿತ್ತಿದ್ದ ಕೈ ನಾಯಕರು ಫುಲ್ ಅಲರ್ಟ್ ಆಗಿದ್ರು. ಕಾಂಗ್ರೆಸ್‌ನ ಪ್ರಭಾವಿ ವೀರಶೈವ ಲಿಂಗಾಯತ ಮುಖಂಡ ಶಾಮನೂರು ಶಿವಶಂಕರಪ್ಪರನ್ನೇ ಮುಂದೆ ಬಿಟ್ಟಿದ್ರು. ಬೆಂಗಳೂರಿನ ರಿಚ್ಮಂಡ್ಟೌನ್ನಲ್ಲಿರುವ ಶಾಮನೂರು ಶಿವಶಂಕರಪ್ಪ ಅವರ ಸ್ಕೈಗಾರ್ಡನ್ ಅಪಾರ್ಟ್ಮೆಂಟ್ನ ಫ್ಲ್ಯಾಟ್‌ನಲ್ಲಿ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಉಪಸ್ಥಿತಿಯಲ್ಲಿ ನಿನ್ನೆ…
ಕೋಲಾರ: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಒಟ್ಟಾಗಿ ಕೆಲಸ ಮಾಡುತ್ತಿದೆ. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಪೂರ್ಣ ಬಹುಮತಗಳೊಂದಿಗೆ ಅಧಿಕಾರಕ್ಕೆ ತರಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಕೋಲಾರದಲ್ಲಿ ನಡೆದ ಜೈ ಭಾರತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ 40% ಹಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೀಳಿಸಬಹುದು. ಕಳ್ಳ ಹಣದಲ್ಲಿ ಸರ್ಕಾರವನ್ನು ಬೀಳಿಸುವ ಕೆಲಸ ಮಾಡಬಹುದು. ಬಿಜೆಪಿ ಭ್ರಷ್ಟಾಚಾರಕ್ಕೆ ಅವಕಾಶ ಕೊಡಬೇಡಿ ಎಂದು ಮನವಿ ಮಾಡಿದರು. ಮೋದಿಯವರೇ ವರದಿ ಬಿಡುಗಡೆ ಮಾಡಿ. ನೀವು ವರದಿ ಬಿಡುಗಡೆ ಮಾಡಲಿಲ್ಲ ಎಂದರೆ ಅದು ಒಬಿಸಿಗೆ ಮಾಡಿದ ಅಪಮಾನ. ನೀವು ಒಬಿಸಿ ಬಗ್ಗೆ ಮಾತನಾಡಿದಿರಿ. ಅವರ ಜನಸಂಖ್ಯೆ ಎಷ್ಟಿದೆ ಎಂದು ನಮಗೆ ಗೊತ್ತಿದೆ. ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆಯ ಅನುಗುಣವಾಗಿ ಅವರಿಗೆ ಅವಕಾಶ ನೀಡಿ. ಮೊದಲು 50% ಮೀಸಲಾತಿ ಇರುವುದನ್ನು ತೆಗೆದು ಹಾಕಿ. ಆಗ ಓಬಿಸಿ ಬಗ್ಗೆ ಮಾತಾಡಬಹುದು. ಮೋದಿ ಅದಾನಿಗೆ ಸಹಾಯ…
ತಿಪಟೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತು ಶಾಲೆ ಆರ್ಯ ಬಾಲಿಕಾ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಏಪ್ರಿಲ್ 14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 133ನೇ ಜನ್ಮ ದಿನವನ್ನು ಆಚರಿಸಲಾಯಿತು. ಕ.ಸಾ.ಪ. ತಾಲೂಕು ಅಧ್ಯಕ್ಷ ಬಸವರಾಜಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರವರ ಶ್ರೇಷ್ಠ ಕೊಡುಗೆ ‘ಸಂವಿಧಾನ’ ದಿಂದಾಗಿಯೇ ಸಮಾಜದ ಎಲ್ಲ ವರ್ಗಗಳ ಜನರು ಸಮಾನ ಅವಕಾಶ, ಹಕ್ಕುಗಳನ್ನು ಪಡೆಯುವಂತಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹೆಚ್.ಎಸ್.ಮಂಜಪ್ಪ ಕಾರ್ಯದರ್ಶಿ ತಾಲೂಕು ಕ.ಸಾ.ಪ. ಇವರು ಅಂಬೇಡ್ಕರ್ ರವರ ಬಾಲ್ಯ, ವಿದ್ಯಾಭ್ಯಾಸ, ಹೋರಾಟದ ಬದುಕಿನ ಬಗ್ಗೆ ತಿಳಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಉಮಾದೇವಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಮವಸ್ತ್ರ ವಿತರಿಸಲಾಯಿತು. ಮುಮ್ತಾಜ್ ಮುಖ್ಯ ಶಿಕ್ಷಕರು ಸ್ವಾಗತಿಸಿ, ವಂದಿಸಿದರು. ವರದಿ: ಆನಂದ್, ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುರುವೇಕೆರೆ : ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಆಚರಿಸಲಾಯಿತು. ತಾಲೂಕು ದಂಡಾಧಿಕಾರಿಗಳಾದ ವೈ.ಎಂ., ರೇಣು ಕುಮಾರ್ ರವರ ನೇತೃತ್ವದಲ್ಲಿ ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಆಡಳಿತ ಸೌಧದ ಸಭಾಂಗಣದಲ್ಲಿ ಅಂಬೇಡ್ಕರ್ ರವರ ಭಾವಚಿತ್ರವನ್ನು ಇರಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ದೀಪವನ್ನು ಬೆಳಗಿಸಿ ಪುಷ್ಪಾರ್ಚನೆಯನ್ನು ಮಾಡಿ ನಮನ ಸಲ್ಲಿಸಲಾಯಿತು . ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಕುಮಾರಿ ತ್ರಿವೇಣಿ, ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಶಂಕರ್, ದಲಿತ ಮುಖಂಡರುಗಳಾದ ಬೀಚನಹಳ್ಳಿ ರಾಮಣ್ಣ , ಮಹದೇವಯ್ಯ ,ಡಾಕ್ಟರ್ ಚಂದ್ರಯ್ಯ ,ಶಿಕ್ಷಕರಾದ ಬೋರಪ್ಪ ,ಬಾಣಸಂದ್ರ ಕೃಷ್ಣ ಮಾದಿಗ , ಕುಣಿ ಕೇನಹಳ್ಳಿ ಜಗದೀಶ್ , ಸವಿತಾ ಸಮಾಜದ ಧನಂಜಯ್ , ವಾಲ್ಮೀಕಿ ಸಮಾಜದ ಮುಖಂಡರುಗಳಾದ ಶಿವಣ್ಣ ,ವಸಂತ್ ಕುಮಾರ್ ಇತರರು ಹಾಗೂ ಎಲ್ಲಾ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…