Author: admin

ತುರುವೇಕೆರೆ: ಕಾಂಗ್ರೆಸ್ ಅಭ್ಯರ್ಥಿ ಬಿ.ಎಂ.ಎಲ್.ಕಾಂತರಾಜ್ ರವರ ಕಚೇರಿಯಲ್ಲಿ  ತಾಲ್ಲೂಕಿನ ಮಣಿಚಂಡೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ನೂರಾರು ಯುವಕರು ಬೆಮೆಲ್ ಕಾಂತರಾಜುರವರ ನಾಯಕತ್ವ ಆದರ್ಶಗಳನ್ನು ಮತ್ತು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳನ್ನು ತೊರೆದು ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸ್ ಹಾಗೂ ವಕೀಲ ನಟರಾಜ್  ರವರ ನೇತೃತ್ವದಲ್ಲಿ ಕಾಂಗ್ರೆಸ್  ಪಕ್ಷ ಸೇರ್ಪಡೆ ಗೊಂಡರು. ನಂತರ ಮಾತನಾಡಿದ ಬೆಮೆಲ್ ಕಾಂತರಾಜು ನಮ್ಮ ಪಕ್ಷಕ್ಕೆ ಬಂದಿರುವ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸುವುದಾಗಿ ತಿಳಿಸಿ ಎಲ್ಲರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತೇವೆ. ನಮ್ಮ ಸರ್ಕಾರ ಬರಲೆಂದು ನೀವು ನಮ್ಮ ಜೊತೆ ಕೈಜೋಡಿಸಿದ್ದೀರಿ , ಅದಕ್ಕೆ ನನ್ನ ಕೃತಜ್ಞತೆ ತಿಳಿಸುತ್ತೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೀರೆಂದು ನಂಬಿದ್ದೇನೆ ಎಂದರು. ಇಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ನನಗೆ ವಿಶ್ವಾಸವಿದೆ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಸಹ ನನ್ನನ್ನು ಯಾವುದೇ ಸಂಕೋಚವಿಲ್ಲದೆ  ಸಂಪರ್ಕಿಸಿ ಎಂದ ಅವರು, ಸೋಮವಾರ ನಾಮಪತ್ರ ಸಲ್ಲಿಸಲಿದ್ದೇನೆ, ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರುಗಳನ್ನು ಜನಗಳನ್ನು ಸೇರಿಸಿ ನಾಮಪತ್ರ ಸಲ್ಲಿಸುವ ಕಾರ್ಯವನ್ನು ನಾನು…

Read More

ತುರುವೇಕೆರೆ: ಶಾಸಕ  ಮಸಾಲಾ ಜಯರಾಂ ರವರ ಸಮ್ಮುಖದಲ್ಲಿ ತಾಲ್ಲೂಕಿನ ಮಾಚೇನಹಳ್ಳಿ ಗ್ರಾಮದ ಯುವಕರುಗಳಾದ ಸುಜಯ್, ಮಂಜುನಾಥ್, ದೀಪು,  ಸಿದ್ದುಶ್ರೀ, ಶಂಕರ, ಪ್ರಜ್ವಲ್ ರಾಮಡಿಹಳ್ಳಿ,  ಮನು, ಮುಂತಾದ ಯುವಕರುಗಳು ಜೆಡಿಎಸ್ ತೊರೆದು ಮರಳಿ  ಬಿ.ಜೆ.ಪಿ. ಪಕ್ಷವನ್ನು ಸೇರ್ಪಡೆಗೊಂಡರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಮಸಾಲಾ ಜಯರಾಮ್,  ಈ ಗ್ರಾಮದ ಯುವಕರು ಪಕ್ಷಕ್ಕೆ ಮರಳಿ ಬಂದಿರುವುದು ನಮಗೆ ಆನೆ ಬಲ ಬಂದಂತಾಗಿದೆ, ನಾನು ಒಂದು ವರ್ಷದಿಂದ ಅವರ ಸಂಪರ್ಕದಲ್ಲಿದ್ದೆ, ಈಗ ಕಾಲ ಕೂಡಿ ಬಂದಿದೆ. ಮಾತೃ ಪಕ್ಷಕ್ಕೆ ಮರಳಿದ್ದಾರೆ ಎಂದರು. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ನಾವೆಲ್ಲಾ ಶ್ರಮ ವಹಿಸಿ ಕೆಲಸ ಮಾಡಬೇಕಿದೆ, ಅವಾಗ ಮಾತ್ರ ನಮಗೆ ಗೆಲುವು ಸಾಧ್ಯ. ನಮ್ಮ ಕಾರ್ಯಕರ್ತರಲ್ಲಿ  ಚುನಾವಣಾ ಹುರುಪು ನನಗಿಂತ ಜಾಸ್ತಿಯಿದೆ, ಕಾರ್ಯಕರ್ತರು ಬಿಜೆಪಿಗೆ ವೋಟು ಹಾಕುವಂತೆ ಜನರ ಮನವೊಲಿಸಿ  ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ  ಮಾಜಿ ಗ್ರಾ.ಪಂ.ಅಧ್ಯಕ್ಷ ಕಿರಣ್, ಮುಖಂಡರಾದ  ರಾಮಣ್ಣ, ರವಿ ಪಾಟೀಲ್, ಯುವಮೋರ್ಚಾದ ಬಸವೇಶ್, ಮನೋಹರ, ಸಿದ್ದಣ್ಣಯ್ಯ,  ರೇಣುಕ  ಸೇರಿದಂತೆ…

Read More

ಮಧುಗಿರಿ: ಅಧಿಕಾರವಿದ್ದರೂ ಕೂಡ ಜನಪರ  ಕೆಲಸಗಳು ಮಾಡದ ಇಬ್ಬರು ಮಾಜಿ  ಶಾಸಕರನ್ನು ಮನೆಗೆ ಕಳುಹಿಸಲು ಕ್ಷೇತ್ರದ ಜನತೆ ಮುಂದಾಗಬೇಕಾಗಿದೆ ಎಂದು ಸ್ಥಳೀಯ ಬಿಜೆಪಿ ಅಭ್ಯರ್ಥಿ ಎಲ್.ಸಿ. ನಾಗರಾಜ್ ಕರೆ ನೀಡಿದರು. ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರವು  ತೀರ ಬಡಪೀಡಿತ ಪ್ರದೇಶವಾಗಿದ್ದು, ಈ ಭಾಗದಲ್ಲಿ ರೈತಾಪಿ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಮಳೆಯನ್ನೆ  ಆಧರಿಸಿ ಇಲ್ಲ ಬೋರ್ವೆಲ್ ನೀರನ್ನು ಆಧರಿಸಿ  ಬೆಳೆನಟ್ಟಿ ಜೀವನ ಮಾಡುವ ಪರಿಸ್ಥಿತಿ ರೈತರಿಗೆ ಹಲವಾರು ವರ್ಷಗಳಿಂದ ಎದುರಾಗಿದೆ. 90ರ ದಶಕದ ನಂತರದಿಂದ ಇಲ್ಲಿಯವರೆಗೂ  ಮಳೆ ಕೈಕೊಟ್ಟ ಸಂದರ್ಭದಲ್ಲಿ ಭೂಮಿಯಲ್ಲಿ ವ್ಯವಸಾಯ  ಮಾಡಲು ಆಗದಿರುವ ಸಂದರ್ಭ   ವಲಸೆ ಹೋಗುವ ಪ್ರಕ್ರಿಯ ಮಧುಗಿರಿಯಲ್ಲಿ ಪ್ರಾರಂಭವಾಗಿದೆ ಎಂದು ಅವರು ಹೇಳಿದರು. ಭದ್ರಾ ಮೇಲ್ದಂಡೆ ಯೋಜನೆ ಅಡಿಯ 19 ಟಿಎಂಸಿ ನೀರು ಲಭ್ಯವಿದ್ದು ಇದನ್ನು ಬಳಸಿಕೊಂಡು ಬಯಲು ಸೀಮೆ ಭಾಗದ ಜನರಿಗಾಗಿ ಶಾಶ್ವತ ಶುದ್ಧ ನೀರು ಕೊಡುವ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರದ  ನಾಯಕರೊಂದಿಗೆ ಚರ್ಚಿಸಿ…

Read More

ಜರ್ಮನಿಯು ಪರಮಾಣು ಯುಗಕ್ಕೆ ವಿದಾಯ ಹೇಳುತ್ತದೆ. ಜರ್ಮನಿಯು ಕೊನೆಯ ಮೂರು ಕಾರ್ಯನಿರ್ವಹಣೆಯ ಪರಮಾಣು ವಿದ್ಯುತ್ ಸ್ಥಾವರಗಳಾದ ಎಮ್ಸ್ಲ್ಯಾಂಡ್, ಇಸಾರ್ 2 ಮತ್ತು ನೆಕರ್ವೆಸ್ತೈಮ್ ಅನ್ನು ಮುಚ್ಚುವ ಮೂಲಕ ಪರಮಾಣು ಯುಗಕ್ಕೆ ವಿದಾಯ ಹೇಳಿತು. ಜರ್ಮನಿಯ ಈ ಕ್ರಮವು ಅನೇಕ ಯುರೋಪಿಯನ್ ರಾಷ್ಟ್ರಗಳು ಪರಮಾಣು ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. 1970 ರಿಂದ ದೇಶದಲ್ಲಿ ಪ್ರಾರಂಭವಾದ ಪರಮಾಣು ವಿರೋಧಿ ಪ್ರತಿಭಟನೆಗಳು ಪರಮಾಣು ವಿದ್ಯುತ್ ಸ್ಥಾವರಗಳ ಸ್ಥಗಿತಕ್ಕೆ ಕಾರಣವಾಯಿತು. ಪೆನ್ಸಿಲ್ವೇನಿಯಾದ ತ್ರೀ ಮೈಲ್ ಐಲ್ಯಾಂಡ್ ಪರಮಾಣು ವಿದ್ಯುತ್ ಸ್ಥಾವರದಲ್ಲಿ 1979 ರ ಸೋರಿಕೆ ಮತ್ತು 1986 ರ ಚೆರ್ನೋಬಿಲ್ ದುರಂತವು ಈ ಪ್ರತಿಭಟನೆಗಳನ್ನು ತೀವ್ರಗೊಳಿಸಿತು. 2000 ರಲ್ಲಿ, ಜರ್ಮನಿಯು ಹಂತಗಳಲ್ಲಿ ಪರಮಾಣು ಹೋಗಲಿದೆ ಎಂದು ಘೋಷಿಸಲಾಯಿತು. ನಂತರ ಪರಮಾಣು ವಿದ್ಯುತ್ ಸ್ಥಾವರಗಳು ಸ್ಥಗಿತಗೊಳ್ಳಲು ಪ್ರಾರಂಭಿಸಿದವು. 2011 ರಲ್ಲಿ ಫುಕುಶಿಮಾ ದುರಂತವು ಇದನ್ನು ಬಲಪಡಿಸಿತು. ಜರ್ಮನಿಯಲ್ಲಿ 30 ಕ್ಕೂ ಹೆಚ್ಚು ಪರಮಾಣು ವಿದ್ಯುತ್ ಸ್ಥಾವರಗಳು ಇದ್ದವು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…

Read More

ಬ್ಲಡ್ ಪುಡಿಂಗ್ ಅಥವಾ ಟೆಟೆ ಕ್ಯಾನ್ ಬಾತುಕೋಳಿ ಮತ್ತು ಹಂದಿ ರಕ್ತ ಮತ್ತು ಬೇಯಿಸಿದ ಮಾಂಸದಿಂದ ಮಾಡಿದ ಸಾಂಪ್ರದಾಯಿಕ ವಿಯೆಟ್ನಾಮೀಸ್ ಭಕ್ಷ್ಯವಾಗಿದೆ. ರಕ್ತದ ಪುಡಿಂಗ್ ಅನ್ನು ಸೇವಿಸಿದ ನಂತರ 58 ವರ್ಷದ ಮಹಿಳೆಯೊಬ್ಬರಿಗೆ ತೀವ್ರ ತಲೆನೋವು ಉಂಟಾಗುತ್ತದೆ ಮತ್ತು ಕೆಲವೊಮ್ಮೆ ತಲೆತಿರುಗುವಿಕೆಯೊಂದಿಗೆ ಮನೆಯೊಳಗೆ ಹುಳುಗಳು ಬೀಳುತ್ತದೆ. ಆಸ್ಪತ್ರೆಗೆ ದಾಖಲಾದ ನಂತರ ಮಹಿಳೆಯ ಚರ್ಮದ ಕೆಳಗೆ ಹುಳುಗಳು ಹರಿದಾಡುತ್ತಿರುವುದು ಪತ್ತೆಯಾಗಿದೆ. ಹುಳುಗಳು ಮೆದುಳನ್ನು ತಲುಪಿದ್ದವು. 58 ವರ್ಷದ ಮಹಿಳೆಯೊಬ್ಬರು ತಿಂಗಳಿಗೊಮ್ಮೆ ರಕ್ತದ ಕಡುಬು ತಿನ್ನುತ್ತಿದ್ದರು. ಇದೇ ಹಾವಳಿಗೆ ಕಾರಣವಾಯಿತು. ಹೈದ್ರಾಬಾದ್ ಯಶೋದಾ ಆಸ್ಪತ್ರೆಯ ಹಿರಿಯ ಸಮಾಲೋಚಕ ವೈದ್ಯಾಧಿಕಾರಿ ಮಾತನಾಡಿ, ಅನೇಕರು ಈ ರೀತಿ ರಕ್ತದ ಕಡುಬು ತಿಂದು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ದಿಲೀಪ್ ಗುಡೆ ಮಾಹಿತಿ ನೀಡಿದರು. ದೇಹವನ್ನು ಪ್ರವೇಶಿಸುವ ಮತ್ತು ಅಲ್ಲಿ ಗುಣಿಸುವ ಹುಳುಗಳು ಮಾನವನ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತವೆ.ಪ್ರಸ್ತುತ, 58 ವರ್ಷದ ಮಹಿಳೆ ಚೇತರಿಸಿಕೊಂಡಿದ್ದಾರೆ ಮತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಅವರ ಮನೆಗೆ ಸ್ಥಳಾಂತರಿಸಲಾಗಿದೆ. ಔಷಧಿಗಳನ್ನು…

Read More

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಯುವತಿಯರನ್ನು ಭೇಟಿ ಮಾಡಿ ವಂಚನೆ ಮಾಡುತ್ತಿದ್ದ 26 ವರ್ಷದ ಯುವಕನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಮುಜಾಫರ್‌ಗಢ ನಿವಾಸಿ ವಿಶಾಲ್ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ವಿಶಾಲ್ ಸ್ವಂತ ಉದ್ಯಮ ಆರಂಭಿಸಿ ವಿಫಲರಾಗಿದ್ದರು. ನಂತರ ಸುಲಭವಾಗಿ ಹಣ ಸಂಪಾದಿಸಲು ಮ್ಯಾಟ್ರಿಮೋನಿ ಮೂಲಕ ವಂಚನೆ ಪ್ರಾರಂಭವಾಯಿತು. ವಿಶಾಲ್ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಮಾನವ ಸಂಪನ್ಮೂಲ ಉದ್ಯೋಗಿಯಾಗಿ ವಾರ್ಷಿಕ 50-70 ಲಕ್ಷ ರೂಪಾಯಿಗಳ ನಡುವೆ ಪ್ರೊಫೈಲ್ ಅನ್ನು ರಚಿಸಿದ್ದು,ಅದರ ಮೂಲಕ ಯುವತಿಯರನ್ನು ವಂಚಿಸುತ್ತಿದ್ದ ಎನ್ನಲಾಗಿದೆ.. ವಿಶಾಲ್ ರಿಕ್ವೆಸ್ಟ್ ಕಳುಹಿಸುವ ಹುಡುಗಿಯರೊಂದಿಗೆ ಸ್ನೇಹ ಬೆಳೆಸಿ  ಮೊಬೈಲ್ ನಂಬರ್ ಪಡೆದು ಆ ಮೂಲಕ ಯುವತಿಯರ ನಂಬಿಕೆಗಳಿಸಿ ಮೊಸ ಮಾಡುತ್ತಿದ್ದ .ತೋಟದ ಮನೆಗಳ ಚಿತ್ರಗಳನ್ನು ಶೇರ್ ಮಾಡಿ ಅದೆಲ್ಲ ತನ್ನದು ಎಂದು ಹೇಳಿ ಹುಡುಗಿಯರನ್ನು ಮೂರ್ಖರನ್ನಾಗಿಸುತ್ತಿದ್ದರು. ಇದಾದ ಬಳಿಕ ಕಡಿಮೆ ಬೆಲೆಗೆ ಐಫೋನ್ 14 ಪ್ರೊ ಮ್ಯಾಕ್ಸ್ ಸಿಗುತ್ತದೆ ಎಂದು ಮಹಿಳೆಯಿಂದ ಹಣ ವಸೂಲಿ ಮಾಡಿದ್ದಾನೆ. ಮತ್ತು ನಿಮ್ಮ ಸಂಬಂಧಿಕರಿಗೆ ಫೋನ್ ಅನ್ನು…

Read More

ಮಾಜಿ ಸಂಸದ ಹಾಗೂ ಗ್ಯಾಂಗ್ ಲೀಡರ್ ಅತೀಕ್ ಅಹ್ಮದ್ ಹತ್ಯೆಯ ಕುರಿತು ಕೇಂದ್ರ ಗೃಹ ಸಚಿವಾಲಯದಿಂದ ವರದಿ ಕೇಳಲಾಗಿತ್ತು . ಕೇಂದ್ರ ಸರ್ಕಾರವೂ ಅಗತ್ಯಬಿದ್ದರೆ ಹೆಚ್ಚಿನ ಕೇಂದ್ರ ಪಡೆಗಳನ್ನು ರಾಜ್ಯಕ್ಕೆ ಕಳುಹಿಸಬಹುದು ಎಂದು ಹೇಳಿದೆ. ಘಟನೆಯ ಹೆಸರಿನಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನಗಳನ್ನು ತಡೆಯಲು ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನ. ಗ್ಯಾಂಗ್‌ಗಳನ್ನು ಹತ್ತಿಕ್ಕಲು ಕೇಂದ್ರವು ತನ್ನೆಲ್ಲ ಬೆಂಬಲವನ್ನು ನೀಡಿತು. ಕಳೆದ ರಾತ್ರಿ ಮಾಜಿ ಸಂಸದ ಮತ್ತು ಗ್ಯಾಂಗ್ ಲೀಡರ್ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇಬ್ಬರನ್ನೂ ವೈದ್ಯಕೀಯ ಚಿಕಿತ್ಸೆಗಾಗಿ ಪ್ರಯಾಗ್‌ರಾಜ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುತ್ತಿದ್ದಾಗ ಗುಂಡು ಹಾರಿಸಲಾಗಿದೆ. ಮಾಜಿ ಸಂಸದರು ತಮ್ಮ ಪುತ್ರ ಅಸದ್ ಅಹ್ಮದ್ ಅವರ ಅಂತ್ಯಕ್ರಿಯೆಯ ಕೆಲವೇ ಗಂಟೆಗಳ ನಂತರ ಕೊಲ್ಲಲ್ಪಟ್ಟರು. ಅತೀಕ್ ಮಾಧ್ಯಮದ ಕಾರ್ಯಕರ್ತ ಎಂಬ ನೆಪದಲ್ಲಿ ಬಂದಿದ್ದರಿಂದ ಗುಂಡು ಹಾರಿಸಲಾಗಿತ್ತು. ಗುಂಡಿನ ದಾಳಿ ನಡೆಸಿದ ನಂತರ ದಾಳಿಕೋರರು ಶರಣಾಗಿದ್ದಾರೆ.ರಾಜ್ಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.…

Read More

ಕೋಲಾರ: ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು ಇಂದಿನಿಂದ 2 ದಿನಗಳ ಕಾಲ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು(ಏಪ್ರಿಲ್ 16) ಕೋಲಾರದಲ್ಲಿ ನಡೆಯಲಿರುವ ಕಾಂಗ್ರೆಸ್‌ನ ಸತ್ಯಮೇವ ಜಯತೆ, ಜೈ ಭಾರತ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ. ಕೋಲಾರ ಹೊರವಲಯದ ಟಮಕ ಬಳಿ ಸಮಾವೇಶ ಆಯೋಜನೆ ಮಾಡಲಾಗಿದೆ. ಕಾಂಗ್ರೆಸ್ ಸಮಾವೇಶಕ್ಕೆ ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರು ಈ ಸಮಾವೇಶಕ್ಕೆ ಬರುವ ಸಾಧ್ಯತೆ ಇದೆ. ರಾಹುಲ್ ಗಾಂಧಿ,‌ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ರಾಷ್ಟ್ರ ಹಾಗೂ ರಾಜ್ಯದ ಎಲ್ಲಾ ನಾಯಕರು ಭಾಗಿಯಾಗಲಿದ್ದಾರೆ. 11.30ಕ್ಕೆ ಸಮಾವೇಶ ಆರಂಭವಾಗಲಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕಾರವಾರ: ಪಕ್ಷ ಕಟ್ಟಿದವರಿಗೆ ಬಿಜೆಪಿ ಅನ್ಯಾಯ ಮಾಡಬಾರದಿತ್ತು. ಮಾಜಿ ಸಿಎಂ ಜಗದೀಶ್ ಶೆಟ್ಟರ್‌ ಗೆ ಟಿಕೆಟ್ ಕೊಡದೇ ಇರುವುದು ಸರಿಯಲ್ಲ. ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರೆ ಎಂದರೆ ನಾವು ಅವರನ್ನು ಸ್ವಾಗತಿಸುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶೆಟ್ಟರ್ ಅವರಿಗೆ ಅಧಿಕೃತವಾಗಿ ಕಾಂಗ್ರೆಸ್‌ಗೆ ಆಹ್ವಾನ ನೀಡಿದ್ದಾರೆ. ಹಳಿಯಾಳದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನಗೆ ಕ್ಷೇತ್ರವೇ ಇಲ್ಲ ಎಂದು ಈಶ್ವರಪ್ಪ ಈ ಹಿಂದೆ ಟೀಕಿಸಿದ್ದರು. ಆದರೆ ಅದೇ ಈಶ್ವರಪ್ಪ ಅವರಿಗೆ ಈಗ ಟಿಕೆಟ್ ಇಲ್ಲದಂತಾಗಿದೆ. ನನಗೆ ರಾಜ್ಯದ ಎಲ್ಲಾ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದಾರೆ ಎಂದು ಕಾಲೆಳೆದರು. ಓರ್ವ ಹಿರಿಯ ನಾಯಕ, ಮಾಜಿ ಡಿಸಿಎಂ ಈಶ್ವರಪ್ಪ ಅವರಿಗೆ ಪಕ್ಷ ಹೀಗೆ ಮಾಡಬಾರದಿತ್ತು. ಈಶ್ವರಪ್ಪ ಮಾತ್ರವಲ್ಲ, ಲಕ್ಷ್ಮಣ ಸವದಿ ಹಾಗೂ ಶೆಟ್ಟರ್ ಜೊತೆಗೆ ನಡೆದುಕೊಂಡ ರೀತಿಯೂ ಸರಿಯಲ್ಲ. ಶೆಟ್ಟರ್ ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ಮಾತನಾಡಿಲ್ಲ. ಅವರು ಪಕ್ಷಕ್ಕೆ ಬರುತ್ತಾರಾದರೆ ನಾವು ಸ್ವಾಗತ ಮಾಡುತ್ತೇವೆ. ಇನ್ನೂ ಹಲವು ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ ಎಂದು…

Read More

ಬಿಜೆಪಿ ಬಂಡಾಯ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷ ತೊರೆಯುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಆ ಪಟ್ಟಿಗೆ ಪ್ರಧಾನಿ ನರೇಂದ್ರ ಮೋದಿಯವರು ಕೈ ಮುಗಿದಿದ್ದ, ಮಾಜಿ ರೌಡಿ ಶೀಟರ್ ಫೈಟರ್ ರವಿ ಸೇರ್ಪಡೆಯಾಗಿದ್ದಾರೆ. ಅವರಿಂದು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ನಾಗಮಂಗಲ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟು ಆರು ತಿಂಗಳ ಹಿಂದೆ ಪಕ್ಷ ಸೇರಿದ್ದ ಅವರು ಸಮಾಜ ಸೇವೆ ಹೆಸರಿನಲ್ಲಿ ಕೋಟ್ಯಾಂತರ ರೂ ಖರ್ಚು ಮಾಡಿದ್ದರು. ಅಷ್ಟು ಮಾತ್ರವಲ್ಲದೇ ಇದುವರೆಗೂ ನೆಲೆಯಿಲ್ಲದ ಬಿಜೆಪಿ ಪಕ್ಷಕ್ಕೆ ಒಂದಷ್ಟು ಸದಸ್ಯತ್ವ ಮಾಡಿಸುವ ಮೂಲಕ ಹೆಸರು ತಂದು ಕೊಟ್ಟಿದ್ದರು. ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಫೈಟರ್ ರವಿಗೆ ಟಿಕೆಟ್ ಎಂಬ ಆತ್ಮವಿಶ್ವಾಸದಲ್ಲಿ ಮಾತನಾಡಿದ್ದರು. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯಗೆ ಭೇಟಿ ನೀಡಿದ ಸಂದರ್ಭದಲ್ಲಿ ಫೈಟರ್ ರವಿರವರಿಗೆ ಕೈಮುಗಿಯುವ ಮೂಲಕ ಸುದ್ದಿಯಾಗಿದ್ದರು. ಆದರೆ ಎರಡು ವಾರದ ಹಿಂದಷ್ಟೇ ಬಿಜೆಪಿ ಸೇರಿದ ಎಲ್.ಆರ್ ಶಿವರಾಮೇಗೌಡರ ಪತ್ನಿ…

Read More