Subscribe to Updates
Get the latest creative news from FooBar about art, design and business.
- ಆರೋಗ್ಯ ಶಿಬಿರ | ಹಾರ್ಟ್ ಸಂಸ್ಥೆಯ ಕಾರ್ಯ ಪ್ರಶಂಸನಿಯ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್
- ವಿಜೃಂಭಣೆಯಿಂದ ನಡೆದ ದುಂಡಿ ಮಾರಮ್ಮ ದೇವಿ ಜಾತ್ರಾ ವಾರ್ಷಿಕೋತ್ಸವ
- ರಾಜ್ಯದಲ್ಲಿ ಎನ್ ಡಿಎಗೆ 2028ನೇ ಚುನಾವಣೆಯಲ್ಲಿ ಬಿಹಾರ ಮಾದರಿಯ ಗೆಲುವು: ಕೆ.ಎಂ.ಕೃಷ್ಣನಾಯಕ
- ನವೆಂಬರ್ 22ರಂದು ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ: ಡಾ.ಕೆ.ಬಿ.ಲಿಂಗೇಗೌಡ
- ಕಲ್ಪೋತ್ಸವ: ಗಮನ ಸೆಳೆದ ಜಂಬೂ ಸವಾರಿ, ಕಲಾತಂಡಗಳ ಮೆರುಗು
- ರೈತ ಹೋರಾಟಗಾರ ಸಿ.ಅಜ್ಜಪ್ಪ ನಿಧನ
- ವಿಕಲಚೇತನ ಸಾಧಕರಿಂದ ಅರ್ಜಿ ಆಹ್ವಾನ
- ಬೀದರ್ | ಪ್ರತಿ ಟನ್ ಕಬ್ಬಿಗೆ 2,950ರೂ. ನಿಗದಿ: ಪ್ರತಿಭಟನೆ ಕೈ ಬಿಟ್ಟ ರೈತರು
Author: admin
ಪೆರ್ನಾಜೆ: ಶ್ವೇತಾಂಬಿಕಾ ಪಿ. ಅವರಿಗೆ ‘ಅ ಸ್ಟಡಿ ಒನ್ ದ ಇಫೆಕ್ಟಿವ್ನೆಸ್ ಓಫ್ ಪ್ಲಾಂಟ್ ಎಕ್ಸಟ್ರಾಕ್ಟಸ್ ಆಸ್ ಕೊರೋಸಿವ್ ಇನ್ಹಿಬಿಟರ್ಸ್ ಓನ್ ಮೈಲ್ಡ್ ಸ್ಟೀಲ್ ಆಂಡ್ ಅಲುಮಿನಿಯಂ’ ಎಂಬ ಪ್ರಬಂಧಕ್ಕಾಗಿ ರಸಾಯನಶಾಸ್ತ್ರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್ ಡಿ ಪದವಿ ನೀಡಿದೆ. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಶ್ವೇತಾಂಬಿಕಾ ಪಿ. ಅವರು ಡಾ.ಎಂ.ಆರ್. ಮದ್ದಾನಿ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ವಿಜಯಲಕ್ಷ್ಮಿ ಆರ್.ಭಟ್ ಹಾಗೂ ರಾಘವೇಂದ್ರ ಭಟ್ ಪೆರ್ನಾಜೆ ಅವರ ಪುತ್ರಿಯಾಗಿದ್ದಾರೆ. ನವೀನ್ ಕುಮಾರ್ ಕೆ. ಅವರ ಪತ್ನಿಯಾಗಿದ್ದಾರೆ. ವರದಿ: ಕುಮಾರ್ ಪೆರ್ನಾಜೆ, ಪುತ್ತೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುರುವೇಕೆರೆ: ಹೇಮಾವತಿ ಇಲಾಖೆಯಿಂದ ತುರುವೇಕೆರೆ ಕಲ್ಲೂರು ಕ್ರಾಸ್ ಮಾರ್ಗ ಮಧ್ಯೆ ಇರುವ ಕಲ್ಲೂರ್ ಕ್ರಾಸ್ ಮುಖ್ಯ ರಸ್ತೆಯಿಂದ ಪುರದಪಾಳ್ಯ ಪುರ, ಸಂಪರ್ಕ ರಸ್ತೆಯಾಗಿದ್ದು ಪುರದ ಪಾಳ್ಯದವರೆಗೆ ಸುಮಾರು ಎಂಟುನೂರು ಮೀಟರ್ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಕಾರಿಯು ಕಳಪೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಡಾಂಬರನ್ನು ಹಪ್ಪಳದ ರೀತಿಯಲ್ಲಿ ಹೆತ್ತಬಹುದಾಗಿದ್ದು, ಡಾಂಬರೀಕರಣ ಮಾಡುವ ಮೊದಲು ಜಲ್ಲಿಯ ಮೇಲೆ ಸಿಂಪಡಿಸಬೇಕಾದ ಆಯಿಲ್ ಅನ್ನು ಸಿಂಪಡಿಸದೆ ಡಾಂಬರೀಕರಣ ಮಾಡುತ್ತಿದ್ದಾರೆ. ರಸ್ತೆಯ ಅಗಲವನ್ನು ಕಿರಿದು ಮಾಡಿರುದ್ದಾರೆ ಮತ್ತು ಡಾಂಬರನ್ನು ಹಾಕಬೇಕಾದ ದಪ್ಪವನ್ನು ಕೂಡ ಕಡಿಮೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರುಗಳು ಸಹಾಯಕ ಎಂಜಿನಿಯರ್ ಅವರನ್ನು ಗ್ರಾಮಸ್ಥರು ಪ್ರಶ್ನಿಸಿದಾಗ, ನೀವೇನು ಇಂಜಿನಿಯರ? ಇಂಜಿನಿಯರ್ ನಾನು ಇದರ ಕ್ವಾಲಿಟಿ ಏನು ಎಂಬುದು ನನಗೆ ಗೊತ್ತಿದೆ ಎಂದು ದರ್ಪದ ಮಾತುಗಳನ್ನಾಡಿದ್ದಾರೆ. ಗುತ್ತಿಗೆದಾರನ ಬಳಿ ಪ್ರಶ್ನಿಸಿದರೆ, ನೀವು ಇಂಜಿನಿಯರ್ ಜೊತೆಗೆ ಮಾತನಾಡಿಕೊಳ್ಳಿ ಎಂದು ಹೇಳಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ತುರುವೇಕೆರೆ…
ಭಾರತೀಯ ಜನತಾ ಪಕ್ಷ ಮೊದಲನೇ ಪಟ್ಟಿ ಬಿಡುಗಡೆಯಾದ ನಂತರ ಆಕ್ರೋಶ ಭುಗಿಲೆದ್ದಿದೆ. ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ್ ಬೇನಕೆ ಅವರ ಟಿಕೆಟ್ ಕೈ ತಪ್ಪಿರುವುದರಿಂದಾಗಿ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಇಂದು ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಭಾರತೀಯ ಜನತಾ ಪಕ್ಷದ ನಾಯಕರುಗಳ ಹಾಗೂ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಅನಿಲ್ ಬೆನಕೆ ಅವರಿಗೆ ಅನ್ಯಾಯ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪಕ್ಷದ ನಾಯಕರಿಗೆ ದಿಕ್ಕಾರ ಕೂಗಿದರು. ನಂತರ ಸಂಸದ ಮಂಗಳ ಸುರೇಶ್ ಅಂಗಡಿ ಅವರ ಕಾಲ್ನಡಿಗೆ ಮೂಲಕ ನಿವಾಸಕ್ಕೆ ಬಂದು ಕೆಲ ಹೊತ್ತು ಧರಣಿ ನಡೆಸಿದರು. ಸಂಸದೆ ಮಂಗಳಾಅಂಗಡಿ ಕಾರ್ಯಕರ್ತರನ್ನು ಸಮಾಧಾನ ಮಾಡುವಲ್ಲಿ ವಿಫಲರಾದರು. ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ಅಧ್ಯಕ್ಷರಾದ ನಳಿನ್ ಕಟೀಲ್ ಅವರ ಜೊತೆ ದೂರವಾಣಿ ಮುಖಾಂತರ ಮಾತನಾಡ ಬೇಕೆಂದು ಒತ್ತಾಯಿಸಿದರು. ಅವರ ಒತ್ತಾಯದವರಿಗೆ ರಾಜ್ಯಧ್ಯಕ್ಷರಿಗೆ ಹಾಗೂ ಮಾಜಿ ಮುಖ್ಯಮಂತ್ರಿಗಳಿಗೆ ದೂರವಾಣಿ ಕರೆ ಮಾಡಿದರು ಕೂಡ ದೂರವಾಣಿ ಸ್ವಿಚ್ ಆಫ್…
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಹಲವು ರಾಜ್ಯದ ಮಾದರಿಗಳನ್ನು ಕರ್ನಾಟಕದ ಮುಂದಿಟ್ಟು ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಕಮಲ ಪಡೆ 52 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ಇತ್ತಕಡೆ ಹೊಸಬರ ಪಾದಾರ್ಪಣೆಯಾಗುತ್ತಿದ್ದಂತೆ ಹಲವು ಮಾಜಿ ಅಭ್ಯರ್ಥಿಗಳು ಕಣ್ಣೀರಿಟ್ಟರೆ ಇನ್ನು ಹಲವರು ಬಂಡಾಯದ ಮುನ್ಸುಚನೆಯ ಮಾತಗಳನ್ನಾಡಿದ್ದಾರೆ ಇದರ ಮದ್ಯೆಯೆ ಕಾಂಗ್ರೆಸ್ ಇನ್ನು ಹಲವು ಕ್ಷೇತ್ರಗಳ ಅಭ್ಯರ್ಥಿಗಳನ್ನು ಮೂರನೇ ಪಟ್ಟಿಯಲ್ಲಿ ಬಿಡುಗಡೆ ಮಾಡಲಿದ್ದು ಬಿಜೆಪಿಯ ಹಲವರು ಕಾಂಗ್ರೆಸ್ ಕಡೆಗೆ ಜಾರಿದರೆ ಎಂಬ ತಲೆನೋವು ಕೂಡ ಬಿಜೆಪಿಗೆ ಶುರುವಾಗಿದೆ. ಮೊದಲ ಪಟ್ಟಿ ಬಿಡುಗಡೆಯಾದ ಕೆಲವ ಗಂಟೆಗಳಲ್ಲಿ ಬಂಡಾಯದ ಬೀತಿ: ಮಂಗಳವಾರ ರಾತ್ರಿ ಬಿಜೆಪಿ ಮೊದಲ ಪಟ್ಟಿ ದೆಹಲಿಯಲ್ಲಿ ಬಿಡುಗಡೆಯಾಗುತ್ತಿದ್ದಂತೆ ಕರ್ನಾಟಕದಲ್ಲಿ ಬಂಡಾಯದ ಬೀತಿ ಶುರುವಾಗಿದೆ. ಕಳೆದ ಚುನಾವಣೆಗಳಲ್ಲಿ ಬೆರಳೆಣಿಕೆಯಷ್ಟು ಮತಗಳ ಅಂತರದಲ್ಲಿ ಸೋತಿದ್ದ 52 ಕ್ಷೇತ್ರಗಲ್ಲಿ ಮಾಜಿಗಳನ್ನು ಪಕ್ಕಕ್ಕಿಟ್ಟು ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿದ್ದಂತೆಯೇ ಅಥಣಿ ಕ್ಷೇತ್ರದ ಲಕ್ಷ್ಮಣ್ ಸವದಿ, ಬೆಳಗಾವಿ ಉತ್ತರದ ಅನಿಲ ಬೆನಕೆ ಸೇರಿದಂತೆ ಹಲವರು ಟಿಕೆಟ್ ಸಿಗದಿದ್ದರೆ ಬಿಜೆಪಿಗೆ ಗುಡ್…
ಬೀರೂರು: ಬೋರ್‌ವೆಲ್ ಲಾರಿಯೊಂದು ಕಾರ್ ಮೇಲೆ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೀರೂರು ಕೋರನಹಳ್ಳಿ ಸಮೀಪದಲ್ಲಿ ನಡೆದಿದೆ. ಮಧ್ಯಾಹ್ನ ಬೀರೂರು ಪಟ್ಟಣದ ಬಸಪ್ಪ ಬಡಾವಣೆ ನಿವಾಸಿ ದರ್ಶನ್ ಎಂಬುವವರು ಅಜ್ಜಂಪುರ ತಾಲ್ಲೂಕು ಸೊಕ್ಕೆ ಗ್ರಾಮದಲ್ಲಿರುವ ಮಧ್ಯಾಹ್ನ ತೋಟಕ್ಕೆ ಹೊರಟಿದ್ದರು ಎನ್ನಲಾಗಿದೆ. ಬೀರೂರಿನಿಂದ ಹೊರಟವರು ಕೋರನಹಳ್ಳಿ ಗ್ರಾಮದ ಹುಣಸಘಟ್ಟ ಮಾರ್ಗದಲ್ಲಿ ಚಲಿಸುತ್ತಿರುವಾಗ ರಸ್ತೆಯ ಮಧ್ಯದಲ್ಲಿ ಸೇತುವೆ ಇದ್ದು ಎದುರಿನಿಂದ ಲಾರಿ ಬರುವುದು ಅವರಿಗೆ ಕಾಣಿಸಿತ್ತು. ಸೇತುವೆ ಮೇಲೆ ಕೇವಲ ಒಂದು ವಾಹನ ಮಾತ್ರ ಚಲಿಸುವಷ್ಟು ಸ್ಥಳಾವಕಾಶ ಇದ್ದುದರಿಂದ ಲಾರಿಗೆ ಜಾಗಕೊಟ್ಟು ಸೇತುವೆಗಿಂತ ಹಿಂದೆಯೇ ಕಾರು ನಿಲ್ಲಿದ್ದರು. ಎದುರಿನಿಂದ ಬಂದ ಲಾರಿ ತಿರುವು ತೆಗೆದುಕೊಳ್ಳುವ ಸಮಯದಲ್ಲಿ ಆಯ ತಪ್ಪಿ ಕಾರಿನ ಮೇಲೆ ಉರುಳಿ ಬಿದ್ದ ಸಮಯದಲ್ಲಿ ಲಾರಿಯಲ್ಲಿದ್ದ ಕಬ್ಬಿಣದ ಪೈಪ್ ಗಳು ಕಾರಿನ ಮೇಲೆ ಬಿದ್ದಿದ್ದರಿಂದ ದರ್ಶನ್ ಸ್ಥಳದಲ್ಲಿಯೇ ಮೃತಪಟ್ಟರು. ಬೋರ್‌ಲಾರಿ ಅಪಾರ ತೂಕ ಇರುವುದರಿಂದ ಬೀರೂರು ಪೊಲೀಸರು ಕ್ರೇನ್ ಮತ್ತು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿದರೂ ದೇಹ ಹೊರತೆಗೆಯಲು…
ಚಿಕ್ಕಮಗಳೂರು: ಶೇ.೭೦ ರಷ್ಟು ಪ್ರಾಮಾಣಿಕ ಎಂದು ಹೇಳಿಕೊಂಡಿರುವ ಕಾಂಗ್ರೆಸ್ ಮುಖಂಡ ಎಚ್.ಡಿ.ತಮ್ಮಯ್ಯ ತಾನೊಬ್ಬ ಅಪ್ರಾಮಾಣಿಕ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಡಿ.ಸುಧೀರ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವರು ಕಾಂಗ್ರೆಸ್ ನಲ್ಲಿ ಟಿಕೆಟ್ ಕೈತಪ್ಪಿ ಹೋಗುತ್ತಿದೆ ಎಂಬ ಭಯದಲ್ಲಿ ಕಾಂಗ್ರೆಸ್ಸಿಗರ ಮೇಲಿನ ಸಿಟ್ಟನ್ನು ಸಿ.ಟಿ.ರವಿ ಅವರ ಮೇಲೆ ತೋರಿಸುವ ಭರದಲ್ಲಿ ತಾನೊಬ್ಬ ಅಪ್ರಾಮಾಣಿಕ ಎಂದು ಹೇಳುವ ಮೂಲಕ ಆರಂಭದಿಂದಲೂ ನನಗೆ ಅಧಿಕಾರ ಕೊಟ್ಟ ಪಕ್ಷಗಳಿಗೆ ವಂಚನೆ ಮಾಡುತ್ತಾ ಬಂದಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಚಂಡಿಘಡ: ಪಂಜಾಬ್‌ನ ಭಠಿಂಡದಲ್ಲಿರುವ ʼಭಠಿಂಡ ಮಿಲಿಟರಿ ಸ್ಟೇಷನ್ʼನಲ್ಲಿ ಇಂದು ಸಂಭವಿಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ. ಇದು ಭಯೋತ್ಪಾದಕರ ದಾಳಿಯೇ ಎನ್ನುವುದು ಇನ್ನೂ ಸ್ಪಷ್ಟವಾಗಿ ಕಂಡುಬಂದಿಲ್ಲ . ಆದರೆ ಪಂಜಾಬ್ ಪೋಲಿಸರು ಇದು ಭಯೋತ್ಪಾದಕ ದಾಳಿ ಅಲ್ಲ ಎಂದು ಹೇಳಿದ್ದಾರೆ. ಇಂದು ಬೆಳಿಗ್ಗೆ 4.35ರ ವೇಳೆಗ ಗುಂಡಿನ ದಾಳಿ ನಡೆದಿದೆ .ಗುಂಡಿನ ದಾಳಿ ಭಯೋತ್ಪಾದನೆ ಕೃತ್ಯದಂತೆ ಕಾಣಿಸುತ್ತಿಲ್ಲ. ಯಾರೋ ಹತಾಶ ಮನಸ್ಥಿತಿಯವರು ಎಸಗಿದ ಕೃತ್ಯವಾಗಿರುವ ಶಂಕೆಯಿದೆ ಎಂದು ಪಂಜಾಬ್ ಎಸ್‌ಎಸ್‌ಪಿ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಮಾತನಾಡಿ, ಚುನಾವಣಾ ಆಯೋಗವು ಸಿಪಿಐ ಕೊಡುಗೆಗಳನ್ನು ಪರಿಗಣಿಸಬೇಕಿತ್ತು. ಇತಿಹಾಸವನ್ನು ಲೆಕ್ಕಿಸದೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷ ಇನ್ನಷ್ಟು ಶಕ್ತಿಯುತವಾಗಿ ಕೆಲಸ ಮಾಡಲಿದೆ. ಇದು ಕೆಲವು ನಿಯಮಗಳ ಆಧಾರದ ಮೇಲೆ ನಿರ್ಧಾರವಾಗಿದೆ ಎಂದು ಡಿ ರಾಜಾ ಹೇಳಿದರು. ಸಿಪಿಐ ರಾಷ್ಟ್ರೀಯ ಪಕ್ಷದ ಮಾನ್ಯತೆ ಕಳೆದುಕೊಂಡಿರುವ ವಿಚಾರವಾಗಿ ಡಿ ರಾಜಾ ಪ್ರತಿಕ್ರಿಯಿಸಿದರು. ಸಿಪಿಐ ರಾಷ್ಟ್ರೀಯ ಪಕ್ಷದ ಮಾನ್ಯತೆ ಕಳೆದುಕೊಂಡಿರುವುದು ಕೇವಲ ತಾಂತ್ರಿಕತೆ ಎಂದು ಸಂಸದ ಬಿನೊಯ್ ವಿಶ್ವಂ ಹೇಳಿದ್ದರು. ಜನರು ಸಿಪಿಐ ಜೊತೆಗಿದ್ದಾರೆ. ಸಿಪಿಐ ಜನರ ಪಕ್ಷ. ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕಳೆದುಕೊಂಡಿರುವುದು ಸಿಪಿಐಗೆ ದೊಡ್ಡ ಹೊಡೆತ ಎಂಬುದು ತಪ್ಪು ಕಲ್ಪನೆ. ಲೋಪದೋಷಗಳಿದ್ದರೆ ಪರಿಹರಿಸಿಕೊಂಡು ಮುನ್ನಡೆಯುತ್ತೇನೆ ಎಂದು ಬಿನೋಯ್ ವಿಶ್ವಂ ಕಳೆದ ದಿನ ಹೇಳಿದ್ದರು. ಸಿಪಿಐ ಅಲ್ಲದೆ, ಎನ್‌ಸಿಪಿ ಮತ್ತು ತೃಣಮೂಲ ಕಾಂಗ್ರೆಸ್ ಕೂಡ ರಾಷ್ಟ್ರೀಯ ಸ್ಥಾನಮಾನವನ್ನು ಕಳೆದುಕೊಂಡಿವೆ. ಚುನಾವಣಾ ಆಯೋಗದ ನಿರ್ಧಾರವು 2014 ಮತ್ತು 2019 ರಲ್ಲಿನ ಸ್ಥಾನಗಳ ಸಂಖ್ಯೆ ಮತ್ತು ಶೇಕಡಾವಾರು…
ವಿಮಾನಗಳಲ್ಲಿ ಪ್ರಯಾಣಿಕರ ಅನುಚಿತ ವರ್ತನೆಯ ಬಗ್ಗೆ ಡಿಜಿಸಿಎ ವಿಮಾನಯಾನ ಸಂಸ್ಥೆಗಳಿಗೆ ಪತ್ರ ಬರೆದಿದೆ. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಿಜಿಸಿಎ ನಿರ್ದೇಶನ ನೀಡಿದೆ. ವಿಮಾನದಲ್ಲಿ ಸಮಸ್ಯೆಗಳನ್ನು ಉಂಟುಮಾಡುವ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಲು ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಅಗತ್ಯತೆಗಳ (ಸಿಎಆರ್) ಅಡಿಯಲ್ಲಿ ನಿಬಂಧನೆಗಳಿವೆ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಧೂಮಪಾನ, ಮದ್ಯಪಾನ, ಅನುಚಿತ ವರ್ತನೆ, ಪ್ರಯಾಣಿಕರ ನಡುವೆ ವಾಗ್ವಾದಗಳು ಮತ್ತು ಪ್ರಯಾಣದ ಸಮಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ ಎಂದು ಡಿಜಿಸಿಎ ಹೇಳಿದೆ. ವಿಮಾನದೊಳಗೆ ಶಿಸ್ತು ಕಾಯ್ದುಕೊಳ್ಳಬೇಕು ಮತ್ತು ಪೈಲಟ್‌ಗಳು ಇದನ್ನು ನೋಡಿಕೊಳ್ಳಬೇಕು ಎಂದು ಡಿಜಿಸಿಎ ಕೇಳಿದೆ. ಪ್ರಯಾಣಿಕರ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಡಿಜಿಸಿಎ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದೆ. ಕಳೆದ ದಿನ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಈ ಪತ್ರ ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಬಳಿಕ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಮದುರ್ಗ, ಜಯನಗರ, ಬೆಳಗಾವಿ ಉತ್ತರದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ. ಮೊದಲ ಪಟ್ಟಿಯಿಂದ 20 ಹಾಲಿ ಶಾಸಕರನ್ನು ಹೊರಗಿಟ್ಟಿದ್ದು, 52 ಹೊಸಬರಿಗೆ ಅವಕಾಶ ನೀಡಲಾಗಿದ್ದು, ಇದು ಪ್ರತಿಭಟನೆಗೂ ಕಾರಣವಾಗಿತ್ತು. 2019ರ ಆಪರೇಷನ್ ತಾಮರ ಮೂಲಕ ಬಿಜೆಪಿಗೆ ಬಂದ ಬಹುತೇಕರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆಶ್ಲೀಲ ವಿಡಿಯೋ ವಿವಾದದಲ್ಲಿ ಸಿಲುಕಿದ್ದ ರಮೇಶ್ ಜಾರಕಿ ಹೋಳಿಗೆ ಸೀಟು ಕೊಟ್ಟಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಕೆ.ಎಸ್.ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ, ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ನಿನ್ನೆ ಸಂಜೆ ಬಿಜೆಪಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 189 ಅಭ್ಯರ್ಥಿಗಳ…