Subscribe to Updates
Get the latest creative news from FooBar about art, design and business.
- ಆರೋಗ್ಯ ಶಿಬಿರ | ಹಾರ್ಟ್ ಸಂಸ್ಥೆಯ ಕಾರ್ಯ ಪ್ರಶಂಸನಿಯ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್
- ವಿಜೃಂಭಣೆಯಿಂದ ನಡೆದ ದುಂಡಿ ಮಾರಮ್ಮ ದೇವಿ ಜಾತ್ರಾ ವಾರ್ಷಿಕೋತ್ಸವ
- ರಾಜ್ಯದಲ್ಲಿ ಎನ್ ಡಿಎಗೆ 2028ನೇ ಚುನಾವಣೆಯಲ್ಲಿ ಬಿಹಾರ ಮಾದರಿಯ ಗೆಲುವು: ಕೆ.ಎಂ.ಕೃಷ್ಣನಾಯಕ
- ನವೆಂಬರ್ 22ರಂದು ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ: ಡಾ.ಕೆ.ಬಿ.ಲಿಂಗೇಗೌಡ
- ಕಲ್ಪೋತ್ಸವ: ಗಮನ ಸೆಳೆದ ಜಂಬೂ ಸವಾರಿ, ಕಲಾತಂಡಗಳ ಮೆರುಗು
- ರೈತ ಹೋರಾಟಗಾರ ಸಿ.ಅಜ್ಜಪ್ಪ ನಿಧನ
- ವಿಕಲಚೇತನ ಸಾಧಕರಿಂದ ಅರ್ಜಿ ಆಹ್ವಾನ
- ಬೀದರ್ | ಪ್ರತಿ ಟನ್ ಕಬ್ಬಿಗೆ 2,950ರೂ. ನಿಗದಿ: ಪ್ರತಿಭಟನೆ ಕೈ ಬಿಟ್ಟ ರೈತರು
Author: admin
ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ದಾವಣಗೆರೆ, ಶಿವಮೊಗ್ಗ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಾಸನ, ಕೊಡಗು, ಶಿವಮೊಗ್ಗ, ದಾವಣಗೆರೆಯಲ್ಲಿ ಮಳೆಯಾಗಲಿದ್ದು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಉಳಿದೆಡೆ ಒಣಹವೆ ಮುಂದುವರೆಯಲಿದೆ. ಕಲಬುರಗಿಯಲ್ಲಿ 39.4 ಡಿಗ್ರಿ ಸೆಲ್ಸಿಯಸ್ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಶುಭ್ರ ಆಕಾಶವಿರಲಿದೆ. ಎಚ್ಎಎಲ್ನಲ್ಲಿ 32.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 34.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 32.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ಬಾಂಗ್ಲಾ ವಿರುದ್ಧದ ಐಪಿಎಲ್ ರೋಚಕ ಪಂದ್ಯದಲ್ಲಿ ಲಕ್ನೋಗೆ ಕೊನೆಯ ಎಸೆತದಲ್ಲಿ ಗೆಲುವು. ಕೊಹ್ಲಿ, ಡು ಪ್ಲೆಸಿಸ್ ಮತ್ತು ಮ್ಯಾಕ್ಸ್‌ವೆಲ್ ಅವರ ನೆರವಿನಿಂದ ಬೆಂಗಳೂರು 212 ರನ್ ಗಳಿಸಿತು ಆದರೆ ಲಕ್ನೋದ ಎರಡನೇ ಇನ್ನಿಂಗ್ಸ್‌ನಲ್ಲಿ ವಿಫಲವಾಯಿತು. ಕೊನೆಯ ಹತ್ತು ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ ಲಕ್ನೋ ಒಂದು ವಿಕೆಟ್‌ನಿಂದ ಗೆದ್ದಿತು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆಸ್ ಗೆಲುವಿನಿಂದ ಇಂದಿನ 4ನೇ ಅತಿ ಹೆಚ್ಚು ರನ್ ಗಳಿಸಿತು. ಮೊದಲ ನಾಲ್ಕು ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಂದ ಬೆಂಗಳೂರು ಉತ್ತಮ ಆರಂಭ ಪಡೆಯಿತು. ಬೆಂಗಳೂರು ಜೆರ್ಸಿಯಲ್ಲಿ ಪದಾರ್ಪಣೆ ಮಾಡಿದ ವೇಯ್ನ್ ಪಾರ್ನೆಲ್ ಮಿಂಚುತ್ತಿದ್ದಂತೆಯೇ ಲಕ್ನೋ ಪವರ್ ಪ್ಲೇನಲ್ಲಿ ಛಿದ್ರವಾಯಿತು. ಲಕ್ನೋ ಮೊದಲ ಆರು ಓವರ್‌ಗಳಲ್ಲಿ ಕೇವಲ 37 ರನ್ ಗಳಿಸಿತು. ಕೈಲ್ ಮೈಯರ್ಸ್ (0), ದೀಪಕ್ ಹೂಡಾ (10 ಎಸೆತಗಳಲ್ಲಿ 9) ಮತ್ತು ಕೃನಾಲ್ ಪಾಂಡ್ಯ (0) ಪವರ್‌ಪ್ಲೇಯಲ್ಲಿ ಸೋತರು. ನಂತರ ಸ್ಟೊಯಿನಿಸ್ ಮೈದಾನಕ್ಕೆ ಬಂದಾಗ ಪಂದ್ಯದ ದಿಕ್ಕು ಬದಲಾಯಿತು. ಬ್ಯಾಟ್ಸ್‌ಮನ್ 30 ಎಸೆತಗಳಲ್ಲಿ 65 ರನ್ ಗಳಿಸಿದರು.…
ಹಲ್ದ್ವಾನಿ ಉಪ ಜೈಲಿನಲ್ಲಿರುವ 44ಕ್ಕೂ ಕೈದಿಗಳಲ್ಲಿ HIV ಸೋಂಕು ಪತ್ತೆಯಾಗಿದ್ದು ಅದರಲ್ಲಿ ಮಹಿಳಾ ಕೈದಿಯೂ ಇದ್ದಾರೆ. ಹೆಚ್ಚಿನ ಸೋಂಕಿತ ಕೈದಿಗಳನ್ನು ಎನ್ಡಿಪಿಎಸ್ ಕಾಯ್ದೆಯಡಿ ಇರಿಸಲಾಗಿದೆ. ಸುಶೀಲಾ ತಿವಾರಿ ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ದ್ವಾನಿ ಉಪ ಜೈಲಿನಲ್ಲಿ 1673 ಕೈದಿಗಳಿದ್ದಾರೆ. 1629 ಪುರುಷ ಕೈದಿ ಹಾಗೂ 70 ಮಹಿಳಾ ಕೈದಿಗಳಿದ್ದಾರೆ. ಕಾಲಕಾಲಕ್ಕೆ ಕೈದಿಗಳು ಮತ್ತು ಕೈದಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಮತ್ತು ಸಂಬಂಧಿತ ಕಾಯಿಲೆಗಳಿಗೆ ಔಷಧಿಗಳನ್ನು ನೀಡಲಾಗುತ್ತದೆ. ಇತ್ತೀಚೆಗೆ ಉಪ ಕಾರಾಗೃಹದಲ್ಲಿ ಆರೋಗ್ಯ ತಪಾಸಣೆ ಶಿಬಿರದಲ್ಲಿ 55 ಕೈದಿಗಳಲ್ಲಿ ಎಚ್‌ಐವಿ ಇರುವುದು ದೃಢಪಟ್ಟಿದೆ. ಇದು ಜೈಲು ಆಡಳಿತದಲ್ಲಿ ತಲ್ಲಣ ಮೂಡಿಸಿದೆ. ತನಿಖೆಯಲ್ಲಿ ಮುಂಚೂಣಿಗೆ ಬಂದ ಸೋಂಕಿತರಲ್ಲಿ 2019 ರಿಂದ ಇಲ್ಲಿಯವರೆಗಿನ ಕೈದಿಗಳಿದ್ದಾರೆ. ಈ ಸೋಂಕಿತರಲ್ಲಿ ಹಲವರು ಕಳೆದ ಹಲವಾರು ವರ್ಷಗಳಿಂದ ಬಳಲುತ್ತಿದ್ದಾರೆ ಮತ್ತು ನಿರಂತರ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಮತ್ತು ಕೆಲವು ಕೈದಿಗಳು ಹೊಸಬರಾಗಿದ್ದಾರೆ. ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನೇಕ ದೀರ್ಘಕಾಲದ ಸೋಂಕಿತರಿದ್ದಾರೆ. ಸೋಂಕಿತರನ್ನು ಮುಂದಿನ ಬ್ಯಾರಕ್‌ನಲ್ಲಿ ಇರಿಸಲಾಗಿದೆ…
ಉದ್ಯೋಗ ನೀಡುವುದಾಗಿ ಆನ್‌ಲೈನ್‌ನಲ್ಲಿ ಹಲವು ವಂಚನೆಗಳು ನಡೆಯುತ್ತಿವೆ. ಅನೇಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ನಕಲಿ ಉದ್ಯೋಗಗಳನ್ನು ನೀಡುವ ಪೋಸ್ಟ್‌ಗಳನ್ನು ಕಾಣಬಹುದು. ಮತ್ತು ಕೆಲಸದ ಸ್ಥಳಗಳಲ್ಲಿ ವಜಾಗಳ ಪ್ರಾರಂಭದೊಂದಿಗೆ ಉದ್ಯೋಗಾಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. ದೆಹಲಿ ಮೂಲದ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಉದ್ಯೋಗ ಜಾಹೀರಾತು ಕ್ಲಿಕ್ ಮಾಡಿದ ನಂತರ ArlineJobAllIndia’ ಐಡಿಯಿಂದ ನನ್ನನ್ನು ಸಂಪರ್ಕಿಸಿ ಮಾಹಿತಿ ನೀಡಲು ಹೇಳಿದರು ನಂತರ ಅವರು ವಿವರಗಳನ್ನು ನಮೂನೆಯಲ್ಲಿ ನೊಂದಾಯಿಸಿದ ಬಳಿಕ ರಾಹುಲ್‌ನಿಂದ ಕರೆ ಬಂದಿದ್ದು, ಮೊದಲು ನೋಂದಣಿ ಶುಲ್ಕವಾಗಿ 750 ರೂ. ಪಾವತಿಸುವಂತೆ ವಂಚಕ ಮಹಿಳೆಗೆ ತಿಳಿಸಿದ್ದಾನೆ. ಆ ಬಳಿಕ ಮಹಿಳೆಯಿಂದ ಗೇಟ್‌ಪಾಸ್ ಶುಲ್ಕ, ವಿಮೆ, ಭದ್ರತೆಯ ಹಣ ಹೀಗೆ 8.6 ಲಕ್ಷಕ್ಕೂ ಹೆಚ್ಚು ಹಣ ಸುಲಿಗೆ ಮಾಡಲಾಗಿತ್ತು. ಕರೆ ಮಾಡಿದ ರಾಹುಲ್ ಎಂಬಾತ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಮಹಿಳೆಗೆ ಅನುಮಾನ ಬಂದಿದೆ. ನಂತರ ಪೊಲೀಸರಿಗೆ ದೂರು ನೀಡಿದ್ದರು. ದೆಹಲಿ ಪೊಲೀಸರು ಫೋನ್ ನಂಬರ್ ಬಳಸಿ ಸ್ಥಳವನ್ನು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಹರಿಯಾಣದ ಹಿಸಾರ್ ನಿಂದ…
ಅಮೇರಿಕಾದ ಲೂಯಿಸ್ವಿಲ್ಲೆಯಲ್ಲಿರುವ ಓಲ್ಡ್ ನ್ಯಾಷನಲ್ ಬ್ಯಾಂಕ್ ಕಟ್ಟಡದಲ್ಲಿ ಸೋಮವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಐದು ಜನರು ಸಾವನ್ನಪ್ಪಿದರು. ಎಂಟು ಮಂದಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಪ್ರದೇಶಕ್ಕೆ ಬರದಂತೆ ಪೊಲೀಸರು ಜನರಿಗೆ ಸೂಚಿಸಿದರು. ಹಿಂಸಾಚಾರಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಘಟನೆ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಗಾಯಗೊಂಡ ಎಂಟು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ತುರುವೇಕೆರೆ: ದಯಮಾಡಿ ಅರ್ಥ ಮಾಡಿಕೊಳ್ಳಿ, ಜೆಡಿಎಸ್ ಪಕ್ಷದ ಸಂಘಟನೆಯ ವಿಚಾರದಲ್ಲಿ ಏನನ್ನು ಮಾತನಾಡುವುದಿಲ್ಲ ಅದರ ಅವಶ್ಯಕತೆಯೂ ಇಲ್ಲ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ತಮ್ಮ ತಮ್ಮ ಗ್ರಾಮಗಳಲ್ಲಿ ಮಟ್ಟದಲ್ಲಿ ಮತದಾರರನ್ನು ಹಿಡಿತದಲ್ಲಿ ಬಿಗಿ ಮಾಡಿಕೊಳ್ಳಿ ಪ್ರಚಾರವನ್ನು ತಮ್ಮ ತಮ್ಮ ಗ್ರಾಮಗಳಲ್ಲೇ ಮಾಡಿ ಯಾರು ಬೇರೆ ಊರುಗಳಿಗೆ ಹೋಗಿ ಪ್ರಚಾರ ಮಾಡುವುದ ಅವಶ್ಯಕತೆಯೂ ಇಲ್ಲ ಮತದಾನದ ದಿನದಂದು ಮತದಾನದ ಕಡೆಯ ಗಳಿಗೆವರೆಗೂ ಎಚ್ಚರದಿಂದ ಮತದಾನ ಮಾಡಿಸಿ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ತುರುವೇಕೆರೆ ಪಟ್ಟಣದ ಚೌದ್ರಿ ಕನ್ವೆನ್ಷನ್ ಹಾಲ್ನಲ್ಲಿ ಏರ್ಪಡಿಸಿದ್ದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮಗೆ ಏನು ಸವಲತ್ತು ಸೌಕರ್ಯಗಳು ಬೇಕು ಕೇಳಿ ನಾವು ಮಾಡಲು ಸಿದ್ಧನಿದ್ದೇನೆ. ಅದರ ಬಗ್ಗೆ ಯಾವುದೇ ಚಿಂತೆಯನ್ನು ಮಾಡಬೇಡಿ, ಬೇರೆ ಪಕ್ಷದವರು ಏನೇನು ಮಾಡುತ್ತಾರೋ ಅದನ್ನು ನಮ್ಮ ಪಕ್ಷದಿಂದ ಮಾಡುತ್ತೇವೆ. ಈ ಬಾರಿ ತುರುವೇಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲ್ಲದಿದ್ದರೆ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಅವರು ಕಾರ್ಯಕರ್ತರನ್ನು ಎಚ್ಚರಿಸಿದರು. ಕಳೆದ…
ಕೊರಟಗೆರೆ: ಬಿಜೆಪಿ ಬೆಂಬಲಿತ ಎಸ್.ಟಿ ಸಮುದಾಯದ ವತಿಯಿಂದ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ 11ರಂದು ಬೆಳಗ್ಗೆ 11 ಗಂಟೆಗೆ ಸಮಾವೇಶ ಆಯೋಜಿಸಲಾಗಿದೆ. ಸಮುದಾಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್ ಮನವಿ ಮಾಡಿದರು. ಪಟ್ಟಣದ ಪಾಂಚಜನ್ಯ ಬಿಜೆಪಿ ಕಛೇರಿಯಲ್ಲಿ ಎಸ್.ಟಿ ಸಮುದಾಯದ ಮುಖಂಡರಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಮ್ಮ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಪಕ್ಷದ ನರಸಿಂಹ ನಾಯಕ್, ಹೇಮಾಲತಾ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಆಗಮಿಸಲಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ೧೦ವರ್ಷಗಳ ಜನಪರ ಕೆಲಸಗಳನ್ನು ಜನತೆ ಮನವರಿಕೆ ಮಾಡಿ ಈ ಬಾರಿ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಬೆಂಬಲಿಸುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದರು. ಎಸ್.ಟಿ ಮೋರ್ಚ ಅಧ್ಯಕ್ಷ ಗೋಪಾಲಕೃಷ್ಣ ಎ.ಪಿ ಮಾತನಾಡಿ ನಮ್ಮ ಶ್ರೀ ರಾಮುಲು ರವರ ನಾಯಕ ಸಮುದಾಯ ಅಭಿವೃದ್ಧಿಗಾಗಿ ಸದಾ ದುಡಿಯುತ್ತಿದ್ದಾರೆ.…
ಕೊರಟಗೆರೆ : ಪರಮೇಶ್ವರ್ ಗೆ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳೋಕೆ ಅಧಿಕಾರ ಬೇಕಿದೆ. ಸ್ನೇಹಜೀವಿ ಸುಧಾಕರಲಾಲ್‍ಗೆ ಜನಸೇವೆ ಮಾಡಲು ಅಧಿಕಾರ ಬೇಕಿದೆ. ಕೊರಟಗೆರೆ ಜನರೇ ಕಾಂಗ್ರೇಸ್-ಬಿಜೆಪಿಗೆ ಮತ ಹಾಕಿದ್ರೇ ನಿಮ್ಮ ಕೆಲಸಕ್ಕೆ ಬೆಂಗಳೂರು ಮತ್ತು ತುಮಕೂರು ನಗರಕ್ಕೆ ಹೋಗ್ಬೇಕು. ಜೆಡಿಎಸ್ ಪಕ್ಷಕ್ಕೆ ಮತ ಹಾಕಿದ್ರೇ ನಿಮ್ಮ ಮನೆ ಬಾಗಿಲಿಗೆ ಲಾಲ್ ಬರ್ತಾರೇ ಎಂದು ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಡಿಮಡು ರಂಗಶಾಮಯ್ಯ ಎಂದು ತಿಳಿಸಿದರು. ಕೊರಟಗೆರೆ ಪಟ್ಟಣದ ಜಾಮೀಯಾ ಸಮುದಾಯ ಭವನದ ಆವರಣದಲ್ಲಿ ಜಾತ್ಯತೀತಾ ಜನತಾದಳ ಪಕ್ಷದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದುಳಿದ ವರ್ಗಗಳ ಜೆಡಿಎಸ್ ರಾಜ್ಯಾಧ್ಯಕ್ಷ ಜಯರಾಂ ಮಾತನಾಡಿ ಹಿಂದುಳಿದ ವರ್ಗದ ಪರವಾಗಿ ಹೋರಾಟ ಮಾಡುವ ನಾಯಕ ನಮ್ಮ ದೇವೇಗೌಡರು ಮಾತ್ರ. ಪಂಚರತ್ನ ಯೋಜನೆಯು ಮಾಜಿ ಸಿಎಂ ಕುಮಾರಸ್ವಾಮಿಯ ಕರ್ನಾಟಕ ಸಮಗ್ರ ಅಭಿವೃದ್ದಿಯ ಕನಸು. ಕೊರಟಗೆರೆ ಕ್ಷೇತ್ರದ ಲಾಲ್ 25ವರ್ಷದ ಜನಸೇವೆಯೇ ಅವರ ಗೆಲುವಿಗೆ ಆಧಾರಸ್ತಂಭ. ಆರೋಗ್ಯ ಸೇವೆ ಪಡೆದಿರುವ…
ಮಧುಗಿರಿ: ಬಡವನಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಜಲ್ದಿ ಉತ್ಸವ ಬಹಳ ಅದ್ದೂರಿಯಾಗಿ ನೆರವೇರಿತು. ಈ ಜಲಧಿ ಉತ್ಸವದಲ್ಲಿ ಭೂತನ ಸೇವೆ ಹಾಗೂ ಬಾಣ ಹೋರುವ ಪೂಜ ಕಾರ್ಯಕ್ರಮ ನೆರವೇರಿತು. ಸಾವಿರಾರು ಭಕ್ತಾದಿಗಳು ಶ್ರೀ ಲಕ್ಷ್ಮಿ ರಂಗನಾಥನ ಸ್ವಾಮಿ ಆಶೀರ್ವಾದ ಪಡೆದರು. ವಿಶೇಷವೇನೆಂದರೆ ತಣ್ಣೀರು ಮಾಡಿ ಸ್ನಾನ ಮತ್ತು ಸುತ್ತಮುತ್ತಲಿನಿಂದ ಬಂದಂತಹ ಭಕ್ತಾದಿಗಳು, ಆಹಾರ ಊಟದ ವ್ಯವಸ್ಥೆ ಮಜ್ಜಿಗೆ ಪಾನಕ ಹೆಸರು ಬೆಳೆ ಇನ್ನು ಮುಂತಾದವು ಭಕ್ತಾದಿಗಳಿಗೆ ಸಹಕರಿಸಿದರು. ರಂಗನಾಥ್ ಹೇಮಂತ್ ರವರಿಂದ ಭೂತನ ಸೇವೆಗೆ ಮಣೆವು ವ್ಯವಸ್ಥೆ ಮಾಡಿದರು. ಈ ಉತ್ಸವಕ್ಕೆ ಆರ್.ರಾಜೇಂದ್ರ ರವರು ಶಾಸಕರಾದ ವೀರಭದ್ರಯ್ಯನವರು ಭೇಟಿ ನೀಡಿದರು. ದೇವಸ್ಥಾನದ ಅರ್ಚಕರು ಕೈವಾಡದವರು ಸಂಘ ದವರು ಯಜಮಾನರು ಭಕ್ತಾದಿಗಳು ಭಾಗವಹಿಸಿದ್ದರು. ವರದಿ: ದೊಡ್ಡೇರಿ ಮಹಾಲಿಂಗಯ್ಯ
ವಿಟಮಿನ್ ಬಿ: ಆರೋಗ್ಯವಂತರಾಗಿರಲು ದೇಹಕ್ಕೆ ವಿಟಮಿನ್ ಬಿ ತುಂಬ ಮುಖ್ಯವಾಗಿದೆ. ದೇಹದಲ್ಲಿ ವಿಟಮಿನ್ ಬಿ ಕೊರತೆ ಉಂಟಾದಾಗ ದೇಹದಲ್ಲಿ ದೌರ್ಬಲ್ಯ, ಆಯಾಸ, ಆಲಸ್ಯ, ಮೈಕೈ ನೋವಿನಂತಹ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿಟಮಿನ್ ಬಿ ಕೊರತೆಯನ್ನು ನೀಗಿಸಲು ಮೊಟ್ಟೆ, ಮಾಂಸಾಹಾರ ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿವೆ. ಆದರೆ, ಕೆಲವು ಸಸ್ಯಾಹಾರಗಳಿಂದಲೂ ಸಹ ಸಮಸ್ಯೆಗೆ ಸುಲಭ ಪರಿಹಾರವನ್ನು ಪಡೆಯಬಹುದು. ಅಂತಹ ಆಹಾರಗಳು ಯಾವುವು ಎಂದು ತಿಳಿದುಕೊಳ್ಳೋಣ. ವಿಟಮಿನ್ ಬಿ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಮೂಲಕ, ಹೊಸ ರಕ್ತ ಕಣಗಳನ್ನು ರಚಿಸುವ ಮೂಲಕ ಮತ್ತು ಆರೋಗ್ಯಕರ ಚರ್ಮದ ಕೋಶಗಳು, ಮೆದುಳಿನ ಕೋಶಗಳು ಮತ್ತು ಇತರ ದೇಹದ ಅಂಗಾಂಶಗಳನ್ನು ನಿರ್ವಹಿಸುವ ಮೂಲಕ ಅವು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತವೆ. ವಿಟಮಿನ್ ಬಿ ಕೊರತೆ ನೀಗಿಸುವ ಸಸ್ಯಾಹಾರಗಳು:ಹಸಿರು ಸೊಪ್ಪು ತರಕಾರಿಗಳು ,ಅದರಲ್ಲೂ ಮುಖ್ಯವಾಗಿ ಪಾಲಕ್ ಸೊಪ್ಪು, ಮೆಂತೆ ಸೊಪ್ಪು ಎಲೆಕೋಸಿನಂತರ ತರಕಾರಿಗಳಲ್ಲಿಯೂ ಕಬ್ಬಿಣದಂಶದ ಜೊತೆಗೆ, ವಿಟಮಿನ್ ಬಿ ಹೇರಳವಾಗಿ ಇದರಲ್ಲಿ ಕಂಡುಬರುತ್ತದೆ. ದ್ವಿದಳ ಧಾನ್ಯಗಳು: ಕಪ್ಪು ಉದ್ದಿನ ಕಾಳು,…