Subscribe to Updates
Get the latest creative news from FooBar about art, design and business.
- ಆರೋಗ್ಯ ಶಿಬಿರ | ಹಾರ್ಟ್ ಸಂಸ್ಥೆಯ ಕಾರ್ಯ ಪ್ರಶಂಸನಿಯ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್
- ವಿಜೃಂಭಣೆಯಿಂದ ನಡೆದ ದುಂಡಿ ಮಾರಮ್ಮ ದೇವಿ ಜಾತ್ರಾ ವಾರ್ಷಿಕೋತ್ಸವ
- ರಾಜ್ಯದಲ್ಲಿ ಎನ್ ಡಿಎಗೆ 2028ನೇ ಚುನಾವಣೆಯಲ್ಲಿ ಬಿಹಾರ ಮಾದರಿಯ ಗೆಲುವು: ಕೆ.ಎಂ.ಕೃಷ್ಣನಾಯಕ
- ನವೆಂಬರ್ 22ರಂದು ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ: ಡಾ.ಕೆ.ಬಿ.ಲಿಂಗೇಗೌಡ
- ಕಲ್ಪೋತ್ಸವ: ಗಮನ ಸೆಳೆದ ಜಂಬೂ ಸವಾರಿ, ಕಲಾತಂಡಗಳ ಮೆರುಗು
- ರೈತ ಹೋರಾಟಗಾರ ಸಿ.ಅಜ್ಜಪ್ಪ ನಿಧನ
- ವಿಕಲಚೇತನ ಸಾಧಕರಿಂದ ಅರ್ಜಿ ಆಹ್ವಾನ
- ಬೀದರ್ | ಪ್ರತಿ ಟನ್ ಕಬ್ಬಿಗೆ 2,950ರೂ. ನಿಗದಿ: ಪ್ರತಿಭಟನೆ ಕೈ ಬಿಟ್ಟ ರೈತರು
Author: admin
ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು ರಾಜ್ಯಗಳಿಗೆ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಶುಕ್ರವಾರ ಇದರ ಬಗ್ಗೆ ಸಭೆ ನಡೆಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅಗತ್ಯ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ಧಾರೆ ಎಂದು ತಿಳಿದು ಬಂದಿದೆ. ಕೋವಿಡ್ ಗುಣಲಕ್ಷಣ ಹೊಂದಿರುವವರ ಮೇಲೆ ತೀವ್ರ ನಿಗಾ ವಹಿಸಬೇಕು. ಅಗತ್ಯ ವಿದ್ದಲ್ಲಿ ಈ ಹಿಂದೆ ಕೋವಿಡ್ ಸಂಭವಿಸಿದ ಸಮಯದಲ್ಲಿ ಅನುಸರಿಸಿದ್ದ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಸಲಹೆ ನೀಡಿದ್ದಾರೆ. ಏಪ್ರಿಲ್ 8 ಮತ್ತು9ರಂದು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ. ಏಪ್ರಿಲ್ 10 ಮತ್ತು 11ರಂದು ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆಗಾಗಿ ಮಾಕ್ ಡ್ರಿಲ್ ನಡೆಸಿ ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಆದೇಶಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ತುಮಕೂರು: ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಹಾಗೂ ಉತ್ತಮ ವಿದ್ಯಾರ್ಹತೆ ಹೊಂದಿರುವ ಹಾಗೂ ಒಮ್ಮೆ ತುಮಕೂರು ನಗರ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ತಮ್ಮ ಅಳಿಯ ರಫೀಕ್ ಅಹಮದ್ ಗೆ ಟಿಕೆಟ್ ನೀಡುವಂತೆ ಶಿಫಾರಸು ಮಾಡಿದ್ದರೂ ಸಹ ಮಾಜಿ ಉಪ ಮುಖ್ಯಮಂತ್ರಿ ಹಿರಿಯ ಕಾಂಗ್ರೆಸ್ ಮುಖಂಡರು ಟಿಕೆಟ್ ನೀಡದೇ ವಂಚನೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಶಫಿ ಅಹಮದ್ ಆರೋಪಿಸಿದ್ದಾರೆ. ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರಿಂದ ಮನನೊಂದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಚುನಾವಣೆಯನ್ನು ಎದುರಿಸಲು ಶಕ್ತಿ ಇಲ್ಲದಂತಹ ವ್ಯಕ್ತಿಯಾಗಿರುವ ಇಕ್ಬಾಲ್ ಅಹಮದ್ ಎಂಬವರಿಗೆ ಟಿಕೆಟ್ ನೀಡಿದ್ದು, ಈ ಹಿಂದೆ ಅನೇಕ ಬಾರಿ ಡಾ.ಜಿ.ಪರಮೇಶ್ವರ್ ಅವರ ಗಮನಕ್ಕೆ ತಂದಿದ್ದ ವೇಳೆ ಟಿಕೆಟ್ ನೀಡುವ ಸಂಬಂಧ ಸಾಕಷ್ಟು ಭರವಸೆ ನೀಡಿದ್ದ ಅವರು ಟಿಕೆಟ್ ಸಿಗದಂತೆ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೂ ಕೂಡ ಈ ಕುರಿತಂತೆ ಮನವಿ…
ತೀರ್ಥಹಳ್ಳಿ – ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟ್ ಮೂಲಕ ಸಂಚರಿಸುವ ವಾಹನ ಸವಾರರಿಗೆ ಸಂಚಾರ ನಿರ್ಬಂಧ ಆದೇಶವನ್ನು ಏಪ್ರಿಲ್ 15ರ ವರೆಗೆ ವಿಸ್ತರಿಸಲಾಗಿದೆ. ಘಾಟ್ ನಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿರುವ ಕಾರಣ ಈ ಮೊದಲು ಏಪ್ರಿಲ್ 5 ರ ವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.ನಂತರ ಕಾಮಗಾರಿ ವ್ಯತ್ಯಯವಾಗಿರುವುದರಿಂದ ನಿರ್ಬಂಧ ಆದೇಶವನ್ನು ಈಗ ಏ.15 ರ ವರೆಗೆ ವಿಸ್ತರಿಸಲಾಗಿದೆ. ಆದ್ದರಿಂದ ವಾಹನ ಸವಾರರು ಬೇರೆ ಮಾರ್ಗದ ಮೂಲಕ ಸಂಚರಿಸಬಹುದಾಗಿದೆ. ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆ ಹೋಗುವ ಲಘು ವಾಹನಗಳು ತೀರ್ಥಹಳ್ಳಿ – ಹಾಲಾಡಿ – ಬಸ್ರೂರು ಕುಂದಾಪುರ ರಸ್ತೆಯ ಮೂಲಕ, ತೀರ್ಥಹಳ್ಳಿ – ಹೆಬ್ರಿ – ಉಡುಪಿ – ಕುಂದಾಪುರ ರಸ್ತೆಯ ಮೂಲಕ ಸಂಚರಿಸಬಹುದಾಗಿ ಸೂಚಿಸಲಾಗಿದೆ. ಹಾಗೆಯೇ ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆಗೆ ಹೋಗುವ ಭಾರಿ ವಾಹನಗಳು ತೀರ್ಥಹಳ್ಳಿ – ಕಾನುಗೋಡು – ನಗರ – ಕೊಲ್ಲೂರು – ಕುಂದಾಪುರ ಮಾರ್ಗವಾಗಿ ಸಂಚರಿಸಲು ಅನುಮತಿ ನೀಡಲಾಗಿದೆ , ತೀರ್ಥಹಳ್ಳಿ -…
ಉಪನಗರ ರೈಲು ಯೋಜನೆಗಾಗಿ ಬೆಂಗಳೂರಿನಲ್ಲಿ 1200 ಮರಗಳನ್ನು ಶೀಘ್ರದಲ್ಲೇ ಕಡಿಯಲಾಗುವುದು. 2018 ರಿಂದ 2021 ರವರೆಗೆ ಕರ್ನಾಟಕದಾದ್ಯಂತ ರಸ್ತೆಗಳು ಮತ್ತು ಹೆದ್ದಾರಿಗಳ ನಿರ್ಮಾಣಕ್ಕಾಗಿ 1 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದೆ ಎಂದು ರಾಜ್ಯ ಲೋಕೋಪಯೋಗಿ ಇಲಾಖೆ (PWD) ಪ್ರಕಟಿಸಿದೆ. ಹೊಸ ಬೆಂಗಳೂರು-ಮೈಸೂರು ಹೆದ್ದಾರಿ (NH 275) ಅಭಿವೃದ್ಧಿಗಾಗಿ 11,078 ಮರಗಳನ್ನು ಕಡಿಯಲಾಗಿದೆ. 2019 ರಲ್ಲಿ, ನಮ್ಮ ಮೆಟ್ರೋದ ಎರಡನೇ ಹಂತದಲ್ಲಿ – ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ 1,253 ಮರಗಳನ್ನು ಕತ್ತರಿಸಲಾಯಿತು. ರೈಲು ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಪರವಾಗಿ ಆದೇಶ ಹೊರಡಿಸಿರುವುದರಿಂದ ಈ ವರ್ಷ ಬೆಂಗಳೂರಿನಲ್ಲಿ ಹೆಚ್ಚಿನ ಮರಗಳನ್ನು ಕಡಿಯಬೇಕಾಗುತ್ತದೆ. ಫೆಬ್ರವರಿಯಲ್ಲಿ ರೈಲು ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆಆರ್‌ಐಡಿಇ) ಬೈಯಪ್ಪನಹಳ್ಳಿ ಮತ್ತು ಲೊಟೆಗೊಲ್ಲಹಳ್ಳಿ ನಡುವೆ 1,234 ಮರಗಳನ್ನು ಕಡಿಯಲು ಅನುಮತಿ ನೀಡಿತ್ತು. ಜನವರಿಯಲ್ಲಿ, ನೈಋತ್ಯ ರೈಲ್ವೆಯು ಯಶವಂತಪುರ ರೈಲು ನಿಲ್ದಾಣದಲ್ಲಿ 216 ಮೀಟರ್ ಅಗಲದ ಕಾನ್ಕೋರ್ಸ್, ಮಾಲ್ ಮತ್ತು ವಿಶೇಷ ಪ್ರವೇಶ ಮತ್ತು ನಿರ್ಗಮನ ಬಿಂದುಗಳನ್ನು ನಿರ್ಮಿಸಲು 141 ಮರಗಳನ್ನು…
“ಶುಭ ಶುಕ್ರವಾರ ಅಥವಾ ಗುಡ್ ಫ್ರೈಡೇ ಎಂಬುದು ಯೇಸು ಕ್ರಿಸ್ತ ಶಿಲುಬೆಯ ಮೇಲೆ ಮರಣ ಹೊಂದಿದ ದಿನ. ಇದು ಸಾಮಾನ್ಯವಾಗಿ ಕ್ರೈಸ್ತರಿಗೆ ಸೂತಕದ ದಿನವಾಗಬೇಕಿತ್ತು; ಆದರೆ “ಶುಭ”ವಾಗಿರುವುದು ಏಕೆ?” ಈ ಕುರಿತು ಸರಳವಾಗಿ ತಿಳಿಸುವುದು ಈ ಲೇಖನದ ಉದ್ದೇಶ. ಕ್ರಿಸ್ತ ಜೀವಿಸಿದ್ದು ಇಸ್ರಯೇಲ್ ರೋಮ್ ಸಾಮ್ರಾಜ್ಯದ ವಸಹಾತುವಾಗಿದ್ದ ಕಾಲಘಟ್ಟದಲ್ಲಿ. ಜನರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಶೋಷಿಸುತ್ತಿದ್ದ ರೋಮ್ ಚಕ್ರಾಧಿಪತ್ಯ ಒಂದೆಡೆಯಾದರೆ, ತಮ್ಮದೇ ಜನರನ್ನು ಕಠಿಣ ಧಾರ್ಮಿಕ ಕಾನೂನು ಆಚರಣೆಗಳ ಮೂಲಕ ಹಿಂಸಿಸುತ್ತಿದ್ದ ಯೆಹೂದ್ಯ ಪುರೋಹಿತ ವರ್ಗ ಮತ್ತೊಂದೆಡೆ. ಇವರಿಬ್ಬರ ನಡುವೆ ಸಾಮಾನ್ಯ ಜನ ನಲುಗಿ ಹೋಗಿದ್ದರು. ತಮ್ಮನ್ನು ಈ ಎಲ್ಲಾ ಸಂಕೋಲೆಗಳಿಂದ ಬಿಡಿಸುವ “ಮೆಸ್ಸಾಯ” (ಉದ್ಧಾರಕ) ನ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದರು. ಆಗ ಬಂದ ಯೇಸು ಕ್ರಿಸ್ತರು ಯೆಹೂದ್ಯ ಪುರೋಹಿತರ ಧಾರ್ಮಿಕ ಡಂಭಾಚಾರ, ಜನರನ್ನು ಮಾನಸಿಕವಾಗಿ ಹಿಂಸಿಸುವ ಕಟು ಆಚರಣೆಗಳನ್ನು ಖಂಡಿಸಿ, ದೇವರು ಮನುಷ್ಯರ ಹೃದಯದಲ್ಲಿದ್ದಾನೆ, ನಿಮ್ಮಂತೆಯೇ ಪರರನ್ನು ಪ್ರೀತಿಸಿದರೆ ಅದು ದೇವರನ್ನೇ ಪ್ರೀತಿಸಿದಂತೆ ಎಂಬ ಮಾನವತೆಯ ಸಂದೇಶವನ್ನು ಸಾರಿದರು. ಯೆಹೂದ್ಯ ಸಮಾಜ…
ಡಿಸೆಂಬರ್ 22, 2003 ರ ಮೊದಲು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಕೊಡುಗೆ ಪಿಂಚಣಿ ಯೋಜನೆಯ ಅಧಿಸೂಚನೆಯ ನಂತರ ಉದ್ಯೋಗಕ್ಕೆ ಸೇರಿದ ನೌಕರರು ಹಳೆಯ ಪಿಂಚಣಿ ಯೋಜನೆಯ ಸದಸ್ಯರಾಗಲು ಅವಕಾಶವಿದೆ. ಈ ವರ್ಗಕ್ಕೆ ಒಳಪಡುವ ಕೇಂದ್ರ ನೌಕರರು ಹಳೆಯ ಪಿಂಚಣಿ ಯೋಜನೆಗೆ ಬದಲಾಯಿಸಲು ಕೇಂದ್ರ ಸರ್ಕಾರ ಆಗಸ್ಟ್ 31 ರವರೆಗೆ ಕಾಲಾವಕಾಶ ನೀಡಿದೆ. ಕೇಂದ್ರ ಸೇನಾ ಸಿಬ್ಬಂದಿ ಕೂಡ ಹಳೆಯ ಪಿಂಚಣಿ ಯೋಜನೆಗೆ ಬದಲಾಯಿಸಬಹುದು. 2003ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಿವೃತ್ತಿ ವೇತನದ ಅರ್ಧದಷ್ಟು ಹಣವನ್ನು ಪಿಂಚಣಿಯಾಗಿ ಪಡೆಯುವ ಹಳೆಯ ಪಿಂಚಣಿ ಯೋಜನೆ ಕೊನೆಗೊಂಡಿತ್ತು. ಹೊಸ ಪಿಂಚಣಿ ಯೋಜನೆಯನ್ನು ಆಕರ್ಷಕಗೊಳಿಸಲು ಕೇಂದ್ರ ಸರ್ಕಾರ ಸಮಿತಿಯನ್ನೂ ನೇಮಿಸಿದೆ. ಸಮಿತಿಯು ಹಣಕಾಸು ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಾಲ್ಕು ಸದಸ್ಯರನ್ನು ಒಳಗೊಂಡಿರುತ್ತದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್…
ನಾಣ್ಯಗಳಂತಹ ವಸ್ತುಗಳನ್ನು ಅರಿವಿಲ್ಲದೆ ನುಂಗುವ ಘಟನೆಗಳನ್ನು ನೀವು ಕೇಳಿರಬಹುದು. ಆದರೆ ಇದೀಗ ಯುವತಿಯೊಬ್ಬಳು ಮೊಬೈಲ್ ನುಂಗಿರುವ ಅಸಾಮಾನ್ಯ ಪ್ರಕರಣ ಮಧ್ಯಪ್ರದೇಶದಿಂದ ಹೊರ ಬಿದ್ದಿದೆ. 2 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ, ಅಂತಿಮವಾಗಿ ಫೋನ್ ಅನ್ನು ಯುವತಿಯ ಹೊಟ್ಟೆಯಿಂದ ತೆಗೆಯಲಾಯಿತು. 18 ವರ್ಷದ ಯುವತಿ ತನ್ನ ಸಹೋದರನೊಂದಿಗೆ ಜಗಳವಾಡಿದ ನಂತರ ತನ್ನ ಮೊಬೈಲ್ ಫೋನ್ ಅನ್ನು ನುಂಗಿದ್ದಾಳೆ. ಫೋನ್ ನುಂಗಿದ ತಕ್ಷಣ ಯುವತಿಗೆ ವಿಪರೀತ ನೋವು ಶುರುವಾಯಿತು. ಕೂಡಲೇ ಸಂಬಂಧಿಕರು ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರಿಸ್ಥಿತಿ ಹದಗೆಟ್ಟಾಗ ಅವರನ್ನು ಗ್ವಾಲಿಯರ್‌ಗೆ ಕಳುಹಿಸಲಾಯಿತು. ಮೊಬೈಲ್ ಫೋನ್ ಪತ್ತೆ ಮಾಡಲು ಯುವತಿಯನ್ನು ಅಲ್ಟ್ರಾಸೌಂಡ್ ಮತ್ತು ಇತರ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಗ್ವಾಲಿಯರ್‌ನ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಎಚ್‌ಒಡಿ ಡಾ.ಪ್ರಶಾಂತ್ ಶ್ರೀವಾಸ್ತವ ನೇತೃತ್ವದ ವೈದ್ಯರ ತಂಡ ಆಪರೇಷನ್ ಮಾಡಿ ಆಕೆಯ ಹೊಟ್ಟೆಯಿಂದ ಮೊಬೈಲ್ ಹೊರತೆಗೆದಿದ್ದಾರೆ. ಈಗ ಅವಳ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ಗಂಟಲಿನ ಮೂಲಕ ಇಷ್ಟು ದೊಡ್ಡ ವಸ್ತು ಹೊಟ್ಟೆ ಸೇರಿರುವುದು ಇದೇ ಮೊದಲು ಎಂದು ಡಾ.…
ಯಾದಗಿರಿ: ಬಿಜೆಪಿ ಶಾಸಕ ರಾಜುಗೌಡ ಸ್ವಗ್ರಾಮ ಯಾದಗಿರಿಯ ಕೊಡೇಕಲ್‌ನಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟಿದೆ. ಈ ಹಿನ್ನೆಲೆ ಕೊಡೇಕಲ್, ಹುಣಸಗಿ ಹಾಗೂ ಸುರಪುರದಲ್ಲಿ ಖಾಕಿ ಪಡೆ ಸುತ್ತುವರಿದಿದೆ. ಗಲಾಟೆ ನಿಯಂತ್ರಣಕ್ಕಾಗಿ 2 ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿ ಈಗಾಗಲೇ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಆದೇಶ ನೀಡಿದ್ದು, ಸುರಪುರ ವಿಧಾನಸಭಾ ಕ್ಷೇತ್ರದಾದ್ಯಂತ ಸೆಕ್ಷನ್ 144 ಕಲಂ ಜಾರಿಯಾಗಿದೆ. ಸಂಘರ್ಷ ಹಿನ್ನೆಲೆ ಗುರುವಾರ ರಾತ್ರಿ ಕೊಡೇಕಲ್‌ಗೆ ಆಗಮಿಸಿರುವ ಕಲಬುರಗಿ ಈಶಾನ್ಯ ವಲಯ ಐಜಿಪಿ ಅನುಪಮ ಅಗರವಾಲ್ ಹಾಗೂ ಯಾದಗಿರಿ ಎಸ್‌ಪಿ ಡಾ. ಸಿಬಿ ವೇದಮೂರ್ತಿ ಗ್ರಾಮದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದ್ದಾರೆ. ನಿಷೇಧಾಜ್ಞೆ ಜಾರಿ ಹಿನ್ನೆಲೆ ಇಡೀ ಸುರಪುರ ವಿಧಾನಸಭಾ ಕ್ಷೇತ್ರದಾದ್ಯಂತ ಖಾಕಿ ಸರ್ಪಗಾವಲಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ 3 ಕೆಎಸ್‌ಆರ್‌ಪಿ ತುಕಡಿ, 1 ಪ್ಯಾರಾ ಮಿಲಿಟರಿ ಫೋರ್ಸ್ ಕಂಪನಿ, 2 ಡಿಎಸ್‌ಪಿ, 5 ಸಿಪಿಐ, 10 ಸಿಪಿಐ 100 ಕಾನ್ಸ್ಟೇಬಲ್ ನಿಯೋಜನೆ ಮಾಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ಬೀದರ್: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಮಹಾರಾಷ್ಟ್ರ ಹಾಗೂ ಬೀದರ್ ಗಡಿ ಚೆಕ್ ಪೊಸ್ಟ್ ನಲ್ಲಿ ತಪಾಸಣೆ ವೇಳೆ 142 ಕೆ.ಜಿ ಬೆಳ್ಳಿಯ ಕಾಲು ಚೈನುಗಳು ಸೇರಿ 1 ಕೋಟಿ 5 ಲಕ್ಷ ಬೆಲೆ ಬಾಳುವ ಬೆಳ್ಳಿಯ ಆಭರಣಗಳ ಜೊತೆಗೆ ಕಾರು ಕೂಡ ಜಪ್ತಿ ಮಾಡಲಾಗಿದೆ. ಒಟ್ಟು 8 ಬ್ಯಾಗ್ ಗಳಲ್ಲಿ 142 ಕೆಜಿ ಬೆಳ್ಳಿಯ ಆಭರಣಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಗಜಾನನ ಎಂಬವರಿಗೆ ಸೇರಿದ ಕಾರಿನಲ್ಲಿ ಅಪಾರ ಪ್ರಮಾಣದ ಬೆಳ್ಳಿಯ ಕಾಲು ಚೈನುಗಳು ಪತ್ತೆಯಾಗಿವೆ. ಕಾರಿನ ಮಾಲೀಕರು ನಿಖರವಾದ ದಾಖಲೆಗಳು ನೀಡದ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ತಂದಿರುವ ಶಂಕೆ ವ್ಯಕ್ತವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಬೆಳಗಾವಿ: ಕಿತ್ತೂರು ಕ್ಷೇತ್ರ ದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೆ ಅಸಮಾಧಾನ ಭುಗಿಲೆದಿದ್ದು, ಕಿತ್ತೂರು ಕ್ಷೇತ್ರಕ್ಕೆ ಬಾಬಾಸಾಹೇಬ್ ಪಾಟೀಲ್‍ಗೆ ಟಿಕೆಟ್ ಹಂಚಿಕೆಗೆ ಕ್ಷೇತ್ರದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಲಾಬಿಗೆ ಮಣಿದು ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಟಿಕೆಟ್ ಹಂಚಿಕೆ ಬೆನ್ನಲ್ಲೆ ಕಾಂಗ್ರೆಸ್ ಮುಖಂಡ, ಸತೀಶ್ ಜಾರಕಿಹೊಳಿ ಆಪ್ತ ಹಬೀಬ್ ಶಿಲೇದಾರ್ ಅಸಮಾಧಾನ ಹೊರಹಾಕಿದ್ದು, ಹೈಕಮಾಂಡ್ ಮಾಡಿದ ಎಡುವಟ್ಟು ಕ್ಷೇತ್ರದಲ್ಲಿ ಸೋಲು ಅನುಭವಿಸುತ್ತದೆ ಎಂದು ಹೇಳಿದ್ದಾರೆ. ಕಿತ್ತೂರು ಕ್ಷೇತ್ರದಲ್ಲಿ ಬಂಡಾಯದ ಮುನ್ಸೂಚನೆಯನ್ನು ನೀಡಿರುವ ಮುಖಂಡ ಶಿಲೇದಾರ್ , ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್, ವಿನಯ ಕುಲಕರ್ಣಿ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡ ಬಾಬಾಸಾಹೇಬ್ ಪಾಟೀಲ್‍ಗೆ ಬಂಡಾಯದ ಭೀತಿ ಎದುರಾಗಿದ್ದು ಕಿತ್ತೂರಲ್ಲಿ ಡಿ.ಬಿ ಇನಾಮದಾರ್ ಸೊಸೆ ಲಕ್ಷ್ಮಿ ಇನಾಮದಾರ್, ಹಬೀಬ್ ಶಿಲೇದಾರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು.ಟಿಕೆಟ್ ಕೈ ತಪ್ಪಿದಕ್ಕೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ಕಣಕ್ಕಿಳಿಯಲು ಲಕ್ಷ್ಮಿ, ಹಬೀಬ್ ನಿರ್ಧಾರ ಮಾಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…