Author: admin

ತುರುವೇಕೆರೆ: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯು ಮುಂಬರುವ  ಮೇ 10ರಂದು ನಡೆಯಲಿದ್ದು, ಸಾರ್ವಜನಿಕರು ನಿರ್ಭಯವಾಗಿ ತಮ್ಮ ಮತವನ್ನು ಚಲಾಯಿಸಬೇಕೆಂದು ತುರುವೇಕೆರೆ ವಿಧಾನಸಭಾ ಕ್ಷೇತ್ರ 130ರ ಚುನಾವಣಾಧಿಕಾರಿಗಳಾದ ಎಂ.ಎನ್.ಮಂಜುನಾಥ್ ಮನವಿ ಮಾಡಿದರು. ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ತಡ ದಿನವಾದ ಬುಧವಾರ ಸಂಜೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ವತಿಯಿಂದ  “ಮತದಾನ ಜಾಗೃತಿ ಜಾಥಾ” (ಮೇಣದ ದೀಪ ಹಚ್ಚಿ ಹೆಜ್ಜೆ ಇಡುವ ಮೂಲಕ) ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಶೇಕಡ 100%ರಷ್ಟು ಮತದಾನ ಮಾಡಿಸುವ ಸಲುವಾಗಿ  ಮತದಾರರಿಗೆ ನಮ್ಮ ಮತದ ಹಕ್ಕಿನ ಪ್ರಾಮುಖ್ಯತೆಯನ್ನು ತಿಳಿಸಬೇಕೆಂಬ ಉದ್ಧೇಶದಿಂದ, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಮತದಾನದ ಅರಿವನ್ನು ಮೂಡಿಸಲು ಹಲವಾರು ಇಲಾಖೆಗಳ ಸಹಯೋಗದೊಂದಿಗೆ ಸಾರ್ವಜನಿಕವಾಗಿ ಪ್ರಚಾರಪಡಿಸುತ್ತಾ, ಒಂದೊಳ್ಳೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಸಂಬಂಧ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ, ನಿರ್ಭಯವಾಗಿ ಮತ್ತು ನಿರ್ಭೀತವಾಗಿ ತಮ್ಮ ಮತವನ್ನು ಚಲಾಯಿಸಿ, ಮತದಾನವು ಪವಿತ್ರವಾಗಿದ್ದು, ತಮ್ಮ ಹಕ್ಕು ಮತ್ತು  ತಮ್ಮ ಮತವನ್ನು ಮಾರಿಕೊಳ್ಳಬೇಡಿ, ತಮಗೆ ಸೂಕ್ತ ಅಭ್ಯರ್ಥಿಯನ್ನು…

Read More

ಅನೇಕ ಮಕ್ಕಳು ಪ್ರತಿ ಸಣ್ಣ ವಿಷಯಕ್ಕೂ ಕೋಪಗೊಳ್ಳುತ್ತಾರೆ. ಅವರು ತಮ್ಮ ತಂದೆ-ತಾಯಿ ಮತ್ತು ಕುಟುಂಬ ಸದಸ್ಯರ ಮೇಲೆ ಸುಮ್ಮನೆ ಕೋಪಗೋಳ್ಳುತ್ತಾರೆ. ಇದು ಅವರ ದೈಹಿಕ ಅಥವಾ ಮಾನಸಿಕ ಸಮಸ್ಯೆಯ ಕಾರಣದಿಂದಾಗಿರಬಹುದು. ಅನೇಕ ಬಾರಿ ಪೋಷಕರು ತಮ್ಮ ಮಕ್ಕಳ ಹಠಮಾರಿತನ ನಿರ್ಲಕ್ಷಿಸುತ್ತಾರೆ. ಆದ್ರೆ, ಪೋಷಕರಾಗಿ ಅದನ್ನ ನಿರ್ಲಕ್ಷಿಸುವುದು ಸರಿಯಲ್ಲ. ಏಕೆಂದರೆ ಇದು ಮಗುವಿನ ಆರೋಗ್ಯದ ಮೇಲೆ ಹಾಗೂ ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮೊದಲು ಅವರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಅದರಂತೆ ಮಕ್ಕಳ ಕೋಪವನ್ನ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಇದರ ಬಗ್ಗೆ ಗುರ್ಗಾಂವ್‌ನ ಆರ್ಟೆಮಿಲ್ ಆಸ್ಪತ್ರೆಯ ಶಿಶುವೈದ್ಯ ಡಾ.ರಾಜೀವ್ ಛಾಬ್ರಾ ಇದನ್ನ ವಿವರವಾಗಿ ವಿವರಿಸುತ್ತಾರೆ. ಮಕ್ಕಳಲ್ಲಿ ಕೋಪಕ್ಕೆ ಕಾರಣಗಳು.! ಮಕ್ಕಳು ತಮ್ಮ ಹೆತ್ತವರನ್ನ ಒಪ್ಪುವಂತೆ ಮಾಡಲು ಅನೇಕ ರೀತಿಯಲ್ಲಿ ಹಟ ಮಾಡುತ್ತಾರೆ. ಅದೇ ಸಮಯದಲ್ಲಿ, ಅವರು ಕೋಪಗೊಳ್ಳುತ್ತಾರೆ.  ಅದೇ ಸಮಯದಲ್ಲಿ ಅವರು ಶಾಲೆಗೆ ಹೋಗದಿರುವುದು, ಹೊಸ ಆಟಿಕೆಗಳನ್ನ ಖರೀದಿಸುವುದು ಅಥವಾ ಸ್ನೇಹಿತರೊಂದಿಗೆ ಆಟವಾಡಲು ಹೋಗುವುದು ಮುಂತಾದ ಬೇಡಿಕೆಗಳನ್ನ…

Read More

ಸಿಎಂ ಬಸವರಾಜ ಬೊಮ್ಮಾಯಿ ಅವರು ಕಷ್ಟಕಾಲದಲ್ಲಿ ನನ್ನ ಜೊತೆ ನಿಂತಿದ್ದರು. ಅದಕ್ಕಾಗಿ ನಾನು ಈಗ ಸಿಎಂ ಬಸವರಾ ಬೊಮ್ಮಾಯಿ ಅವರ ಪರ ನಿಂತಿದ್ದೇನೆ. ಅವರಿಗೆ ಬೆಂಬಲ ಕೊಡುತ್ತೇನೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ನಟ ಸುದೀಪ್, ನನಗೆ ಪಕ್ಷ ಮುಖ್ಯವಲ್ಲ ವ್ಯಕ್ತಿಗತ ಸಂಬಂಧ ಮುಖ್ಯ ಯಾವುದೇ ಪಕ್ಷದ ಪರ ನಾನು ನಿಂತಿಲ್ಲ. ಹಿಂದೆ ಅಂಬರೀಶ್ ಪರವೂ ನಾನು ಪ್ರಚಾರ ಮಾಡಿದ್ದೆ. ಕಷ್ಟ ಕಾಲದಲ್ಲಿ ನನ್ನ ಜೊತೆ ಕೆಲವರು ಇದ್ದರು. ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನ ಪರ ನಿಂತಿದ್ದರು. ಕಷ್ಟದ ಸಮಯದಲ್ಲಿ ಸಿಎಂ ಬೊಮ್ಮಾಯಿ ಸಪೋರ್ಟ್​ ಮಾಡಿದ್ದಾರೆ. ಸಿಎಂ ಬೊಮ್ಮಾಯಿರನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಸಿಎಂ ಬೊಮ್ಮಾಯಿಗೆ ನಾನು ಬೆಂಬಲ ಕೊಡಲು ಇಷ್ಟಪಡುತ್ತೇನೆ ಎಂದು ​ ಹೇಳಿದರು. ಸಿಎಂ ಬಸವರಾಜ ಬೊಮ್ಮಾಯಿ ಯಾವ ಪಕ್ಷದಲ್ಲಿದ್ದರೂ ಬೆಂಬಲ ನೀಡುತ್ತಿದ್ದೆ. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವುದು ಸಾಕಷ್ಟು…

Read More

ಬಿಜೆಪಿ ನಾಯಕರಿಗೆ ಈ ಬಾರಿ ಗೆಲುವು ಕಷ್ಟ ಅನ್ನೋದು ಗೊತ್ತಾಗಿದೆ. ಹೀಗಾಗಿ ಸಿನಿಮಾ ಸ್ಟಾರ್ ಗಳನ್ನ ಕರೆಸಿ ಪ್ರಚಾರ ಮಾಡಿಸಲು ಮುಂದಾಗಿದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ನಟ ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರ.ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಟರ ಮುಖ ತೋರಿಸಿ ಮತ ಪಡೆಯಲು ಬಿಜೆಪಿ ಹೊರಟಿದೆ. ನಮಗೆ ನಮ್ಮ ಕಾರ್ಯಕರ್ತರು ನನ್ನ ಜನರೇ ಸ್ಟಾರ್ ಪ್ರಚಾರಕರು. ಸಿನಿಮಾ ನಟರ ಬಗ್ಗೆ ನಾನು ಲಘುವಾಗಿ ಮಾತನಾಡಲು ಹೋಗಲ್ಲ. ಒಂದು ಪಕ್ಷದ ಪರ ಪ್ರಚಾರ ಮಾಡಿ ಆ ಮೇಲೆ ಸುಮ್ಮನಾಗುತ್ತಾರೆ. ಸಿನಿಮಾ ನಟರು ಪ್ರಚಾರ ಮಾಡಿದ ಕೆಲವು ಕಡೆ ಸೋಲು ಆಗಿದೆ ಎಂದರು. ಸ್ಟಾರ್ ಗಳಿಂದ ನಿಖಿಲ್ ಸೋತಿದ್ದಾರೆ ಅಂತಿದ್ದಾರೆ. ಆದರೆ ಅದು ಸುಳ್ಳು. ನಿಖಿಲ್ ಸೋತಿದ್ದು ಬಿಜೆಪಿ ಕಾಂಗ್ರೆಸ್, ರೈತ ಸಂಘದ ಒಳ ಒಪ್ಪಂದದಿಂದ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಇಂದು, ಪ್ರಪಂಚದಾದ್ಯಂತದ ಕ್ರೈಸ್ತರು ಕ್ರಿಸ್ತನ ಕೊನೆಯ ಭೋಜನದ ನೆನಪಿಗಾಗಿ ಈಸ್ಟರ್ ಗುರುವಾರವನ್ನು ಆಚರಿಸುತ್ತಾರೆ. ವಿನಯಕ್ಕೆ ನಿದರ್ಶನವಾದ ಕ್ರಿಸ್ತನು ತನ್ನ ಶಿಷ್ಯರ ಪಾದಗಳನ್ನು ತೊಳೆದ ತ್ಯಾಗದ ನೆನಪಿಗಾಗಿ ಇಂದು ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ಕಾಲು ತೊಳೆಯುವ ಸೇವೆ ನಡೆಯಲಿದೆ. ಕೊನೆಯ ಭೋಜನದ ನೆನಪಿಗಾಗಿ ಚರ್ಚ್‌ಗಳು ಮತ್ತು ಮನೆಗಳಲ್ಲಿ ಸಂಜೆ ಬ್ರೆಡ್-ಬ್ರೇಕಿಂಗ್ ಸಮಾರಂಭವಿರುತ್ತದೆ. ಚರ್ಚ್ ಮುಖಂಡರು ವಿವಿಧ ದೇವಾಲಯಗಳಲ್ಲಿ ಸಮಾರಂಭಗಳ ಅಧ್ಯಕ್ಷತೆ ವಹಿಸುವರು. ಯೇಸು ಕ್ರಿಸ್ತ ತನ್ನ ಶಿಷ್ಯರ ಪಾದಗಳನ್ನು ತೊಳೆದು ಪ್ರಭು ಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ, ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು, “ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ, ” ಎಂದರು. ಅಂತೆಯೇ ಭೋಜನದ ಕೊನೆಯಲ್ಲಿ ಪಾನಪಾತ್ರೆಯನ್ನು ತೆಗೆದುಕೊಂಡು, ” ಈ ಪಾತ್ರ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ, ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ, ” ಎಂದರು. ಇಂದೇ ನೀವು ಈ ರೊಟ್ಟಿಯನ್ನು ಭುಜಿಸಿ…

Read More

ರಾಷ್ಟ್ರ ರಾಜಧಾನಿಯಲ್ಲಿ ಹದಿನಾರರ ಹರೆಯದ ಹುಡುಗಿಯೊಬ್ಬಳು ಕಿರುಕುಳಕ್ಕೊಳಗಾದಳು. ವಾಯುವ್ಯ ದೆಹಲಿಯ ಅಶೋಕ್ ವಿಹಾರ್‌ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಕಳ್ಳತನದ ವೇಳೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬುದು ದೂರು. ಸದ್ಯ ಪೊಲೀಸರು ಅತ್ಯಾಚಾರ ಮತ್ತು ದರೋಡೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಶೋಕ್ ವಿಹಾರ್‌ನಲ್ಲಿರುವ ಎಂಸಿಡಿ ಶಾಲಾ ಸಂಕೀರ್ಣದೊಳಗೆ ಈ ಕಿರುಕುಳ ನಡೆದಿದೆ. ಸಂತ್ರಸ್ತೆಯ ಪೋಷಕರು ಶಾಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಕಾಲ ಶಾಲೆಯನ್ನು ಮುಚ್ಚಲಾಗಿತ್ತು ಆದರೆ ಅವರು ಸಂಕೀರ್ಣದೊಳಗೆ ಉಳಿದುಕೊಂಡಿದ್ದರು. ಮಂಗಳವಾರ ದಂಪತಿ ಕೆಲಸದ ನಿಮಿತ್ತ ಬೇರೆಡೆ ಹೋಗಿದ್ದರು. ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಇದ್ದರು.ಬೆಳಗ್ಗೆ 11.30ರ ಸುಮಾರಿಗೆ ಅಪ್ರಾಪ್ತ ಬಾಲಕನೊಬ್ಬ ಮನೆಗೆ ನುಗ್ಗಿದ್ದಾನೆ. ದರೋಡೆ ಯತ್ನದ ಸಂದರ್ಭದಲ್ಲಿ, ಅವನು ಅಪ್ರಾಪ್ತ ಬಾಲಕಿ ಮತ್ತು ಆಕೆಯ 18 ವರ್ಷದ ಸಹೋದರಿಯನ್ನು  ಭೇಟಿಯಾದನು. ಈ ಸಂದರ್ಭದ ಲಾಭ ಪಡೆದ ಬಾಲಕ ಬಾಲಕಿಯರಿಗೆ ಚಾಕುವಿನಿಂದ ಬೆದರಿಸಿ 16 ವರ್ಷದ ಬಾಲಕಿಯನ್ನು ಕಟ್ಟಡದ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ…

Read More

ಮನೆಯಲ್ಲಿ ಮಾಡಿದ ಚಿಕನ್ ತಿನ್ನಲು ಬಿಡಲಿಲ್ಲ ಎಂಬ ಜಗಳದ ನಂತರ ತಂದೆ ತನ್ನ ಮಗನನ್ನು ಕೊಂದಿದ್ದಾನೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗೇರಿಯಲ್ಲಿ ಈ ಘಟನೆ ನಡೆದಿದೆ. 32 ವರ್ಷದ ಶಿವರಾಮ್ ಮಂಗಳವಾರ ಕೆಲಸ ಮುಗಿಸಿ ಮನೆಗೆ ಮರಳಿದ್ದಾರೆ. ಅಂದು ಶಿವರಾಂ ಬರುವ ಮೊದಲೇ ಮಾಡಿದ ಚಿಕನ್ ಕರಿ ತಿಂದು ಮುಗಿಸಿದ್ದರು. ಶಿವರಾಂ ಅವರಿಗೆ ಚಿಕನ್ ಕರಿ ಬಡಿಸದಿದ್ದಕ್ಕೆ ಮಾತಿನ ಚಕಮಕಿ ಆರಂಭವಾಯಿತು. ಆಗ ತಂದೆ ಮರದ ತುಂಡಿನಿಂದ ಮಗನ ತಲೆಗೆ ಹೊಡೆದಿದ್ದಾನೆ. ಆಗ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ. ಈ  ಘಟನೆಗೆ  ಸಂಭಧಿಸಿದಂತೆ  ಸುಬ್ರಹ್ಮಣ್ಯ ಪೊಲೀಸರು ಶಿವರಾಂ ತಂದೆಯನ್ನು ಬಂಧಿಸಿದ್ದಾರೆ. ಶಿವರಾಮ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ  ಎಂಬ ಮಾಹಿತಿ ಲಭ್ಯವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಪ್ರಿಯಕರನನ್ನು ನಂಬಿ ಮದುವೆಯಾಗಲು ಕೆನಡಾದಿಂದ ಭಾರತಕ್ಕೆ ಬಂದಿದ್ದ ಯುವತಿ ಹತ್ಯೆಯಾಗಿದ್ದಾಳೆ. ಕಳೆದ ವರ್ಷ ಜೂನ್‌ನಲ್ಲಿ 23 ವರ್ಷದ ನೀಲಂ ಎಂಬಾಕೆಯನ್ನು ಆಕೆಯ ಗೆಳೆಯ ಸುನಿಲ್ ಗುಂಡಿಟ್ಟು ಕೊಂದಿದ್ದು, ನಂತರ ಆಕೆಯನ್ನು ತನ್ನ ಹೊಲದಲ್ಲಿ ಹೂತು ಹಾಕಿದ್ದ. ಆಕೆಯ ಅಸ್ಥಿಪಂಜರದ ಅವಶೇಷಗಳು ಮಂಗಳವಾರ ಭಿವಾನಿಯಲ್ಲಿ ಪೊಲೀಸರಿಗೆ ಪತ್ತೆಯಾಗಿವೆ. ನೀಲಂ ಅವರನ್ನು ಅಪಹರಿಸಿ ಕೊಂದಿರುವುದಾಗಿ ಸುನೀಲ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಅಪರಾಧವನ್ನು ಮರೆಮಾಚಲು ಆಕೆಯ ತಲೆಗೆ ಎರಡು ಬಾರಿ ಗುಂಡು ಹಾರಿಸಿ ನಂತರ ಶವವನ್ನು ತನ್ನ ಹೊಲದಲ್ಲಿ ಹೂತು ಹಾಕಿದ್ದಾನೆ ಎಂದು ಪೊಲೀಸ್ ಅಧಿಕಾರಿ ರವೀಂದ್ರ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಬೆಳಗಾವಿ: ಮಹಾರಾಷ್ಟ್ರ ಗಡಿಯ ಕೊಗನೋಳಿ ಚೆಕ್ ಪೋಸ್ಟ್ ನಲ್ಲಿ ಬಸ್ ಪ್ರಯಾಣಿಕನೋರ್ವನಿಂದ ಒಂದೂವರೆ ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಕರ್ತವ್ಯ ನಿರತ ಪೊಲೀಸರು ಮತ್ತು ಚುನಾವಣೆ ಸಿಬ್ಬಂದಿ ಖಾಸಗಿ ಬಸ್ ಒಂದರಲ್ಲಿ ಮುಂಬೈನಿಂದ ಬರುತ್ತಿದ್ದ ಪ್ರಯಾಣಿಕನಲ್ಲಿದ್ದ ಹಣವನ್ನು ವಶಕ್ಕೆ ಪಡೆದರು. ಈ ಹಣಕ್ಕೆ ಆತನ ಬಳಿ ಯಾವುದೇ ದಾಖಲೆಗಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಎಸ್ಪಿ ಸಂಜೀವ ಪಾಟೀಲ ಅವರು ಕರ್ತವ್ಯ ನಿರತ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಈ ಹಿಂದೆ 124 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಈಗ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ  ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ನಿಪ್ಪಾಣಿ ಕ್ಷೇತ್ರದಲ್ಲಿ ಕಾಕಾ ಸಾಹೇಬ್ ಪಾಟೀಲ್, ಗೋಕಾಕ್ ಕ್ಷೇತ್ರ-ಮಹಾಂತೇಶ್​ ಕಡಾಡಿ, ಬೀಳಗಿ ಕ್ಷೇತ್ರ – ಜೆ.ಟಿ.ಪಾಟೀಲ್, ಧಾರವಾಡ – ವಿನಯ್ ಕುಲಕರ್ಣಿ, ಗುರುಮಿಠಕಲ್ ಕ್ಷೇತ್ರ – ಬಾಬುರಾವ್ ಚಿಂಚನಸೂರ್, ಕಿತ್ತೂರು ಕ್ಷೇತ್ರ-ಬಾಬಾಸಾಹೇಬ್​ ಬಿ.ಪಾಟೀಲ್​ ಅವರನ್ನು ಕಾಂಗ್ರೆಸ್ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More