Author: admin

ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಮರೇನಾಯಕನಹಳ್ಳಿ ಗ್ರಾಮ ವಾಸಿಯಾದ ರಮೇಶ್ ಎಂ ಎನ್ ಬಿನ್ ನಂಜುಂಡಪ್ಪ ಎನ್ನುವ ಪ್ರಗತಿಪರ ರೈತನ ಜಮೀನಿಗೆ ಬೆಂಕಿ ಬಿದ್ದು ಅಪಾರ ಹಾನಿಯಾಗಿರುವ ಘಟನೆ ಮಂಗಳವಾರ ನಡೆದಿದೆ. ಮರೇನಾಯಕನಹಳ್ಳಿ ಗ್ರಾಮದ ಸರ್ವೆ ನಂಬರ್ 7 ರಲ್ಲಿ ತೆಂಗಿನ ತೋಟವಿದ್ದು ತೋಟದಲ್ಲಿದ್ದ ಗುಡಿಸಲಿನಲ್ಲಿ ವ್ಯವಸಾಯಕ್ಕಾಗಿ ಬಳಸುತ್ತಿದ್ದ ಪರಿಕರಗಳಾದ ಮೋಟಾರ್ ಸ್ಟಾರ್ಟರ್ ಪೈಪ್ ಕೇಬಲ್ ಏರ್ ಕಂಪ್ರೆಸರ್ ಕೇಬಲ್ ಪೈಪ್ ಪವರ್ ಸ್ಟ್ರೈಯರ್ ಮತ್ತು ಇತ್ಯಾದಿ ಬೆಲೆ ಬಾಳುವ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಹೋಗಿರುವುದು ಕಾಣಬಹುದಾಗಿದೆ.. ರೈತ ರಮೇಶ್ ಮಾತನಾಡಿ ಮರೇನಾಯಕನಹಳ್ಳಿ ಗ್ರಾಮದ ಸರ್ವೆ ನಂಬರ್ 7 ರಲ್ಲಿ ನಾನು  ಜಮೀನು ಹೊಂದಿದ್ದು ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಯ ಸುಮಾರಿನಲ್ಲಿ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಮೂರು ಸ್ಟಾರ್ಟರ್, ಮೋಟಾರ್ ಗಳು, ಒಂದು 5 ಎಚ್ ಪಿ ಮೋಟಾರ್, ಒಂದು ಏರ್ ಕಂಪ್ರೆಸರ್, ಎರಡು ಪವರ್ ಸ್ಪೇಯರ್,30 ಮೀಟರ್ ನಷ್ಟು ಕೇಬಲ್ ಬೆಂಕಿಯಿಂದ ಸುಟ್ಟು ಹೋಗಿರುತ್ತವೆ ಇದಕ್ಕೆ ಸಂಬಂಧ…

Read More

ಔರಾದ: ಬೀದರ್ ಜಿಲ್ಲೆಯ ಔರಾದ ತಾಲೂಕಿನ ಎಕಲಾರ ಗ್ರಾಮ ಪಂಚಾಯತ್ ಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದೇ ನಿರ್ಲಕ್ಷ್ಯವಹಿಸುತ್ತಿದ್ದು, ಇದರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2 ದಿನಗಳಿಂದ ಇಲ್ಲಿನ ಕೊಲ್ಲೂರು ಗ್ರಾಮದ ಯುವಕರು ಪಂಚಾಯತ್ ಗೆ ಭೇಟಿ ನೀಡಿದರೂ ಇಲ್ಲಿ ಯಾವುದೇ ಅಧಿಕಾರಿಗಳು ಕೂಡ ಕಂಡು ಬರುತ್ತಿಲ್ಲ. ಸಮಯ ಮಧ್ಯಾಹ್ನ 12:28 ಕಳೆದರೂ ಯಾವುದೇ ಅಧಿಕಾರಿಗಳು ಕೂಡ ಪಂಚಾಯತ್ ಗೆ ಆಗಮಿಸುತ್ತಿಲ್ಲ ಎಂದು ಯುವಕ ಕೊಲ್ಲೂರು ಗ್ರಾಮದ ಸಂದೀಪ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಗೆ ಪಂಚಾಯತ್ ಅಧಿಕಾರಿಗಳು ಯಾವುದೇ ಸಹಕಾರ ನೀಡುತ್ತಿಲ್ಲ, ಸ್ವಚ್ಛ ಭಾರತದ ಕಸವಿಲೇವಾರಿಯ ವಾಹನ ಕೂಡ ಪಂಚಾಯತ್ ಆವರಣದಲ್ಲಿದ್ದು, ಇದು ಕಾರ್ಯಾಚರಿಸದೇ ನಿಂತಿದ್ದು, ತುಕ್ಕು ಹಿಡಿಯಲು ಸಿದ್ಧವಾಗಿದೆ ಎಂದು ಆರೋಪಿಸಿದ್ದಾರೆ. ವರದಿ: ಅರವಿಂದ ಮಲ್ಲಿಗೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್…

Read More

ಬೆಂಗಳೂರು: ಮನೆಗೆ ನುಗ್ಗಿದ ಕಳ್ಳರು ಒಬ್ಬಂಟಿಯಾಗಿದ್ದ ವಿದ್ಯಾರ್ಥಿನಿಗೆ ಚಾಕು ತೋರಿಸಿ ಬೆದರಿಸಿ ಮನೆಯನ್ನು ದರೋಡೆ ಮಾಡಿದ ಘಟನೆ ಬೆಂಗಳೂರು-ಆನೇಕಲ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನಡೆದಿದೆ. ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿರುವ ಆರ್.ಕೀರ್ತನಾ ಅವರಿಗೆ ಚಾಕು ತೋರಿಸಿ ಬೆದರಿಸಿರುವ ದರೋಡೆಕೋರರು, ನಂತರ ಮನೆಯಲ್ಲಿದ್ದ ಚಿನ್ನಾಭರಣ, ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಲಕ್ಷ್ಮಿನಗರ ಲೇಔಟ್ನಲ್ಲಿ ವಿದ್ಯಾರ್ಥಿನಿ ಮಾತ್ರವೇ ಇದ್ದ ಸಂದರ್ಭದಲ್ಲಿ ದರೋಡೆಕೋರರು ನುಗ್ಗಿದ್ದಾರೆ. ಈ ವೇಳೆ ಮನೆ ಬಳಿಗೆ ಬಂದ ಕೆಲ ವ್ಯಕ್ತಿಗಳು ಸ್ಥಳೀಯ ವ್ಯಕ್ತಿಯೊಬ್ಬನನ್ನು ಹುಡುಕುತ್ತಿರವುದಾಗಿ ಹೇಳಿದ್ದಾರೆ. ವ್ಯಕ್ತಿಗಳೊಂದಿಗೆ ಮಾತನಾಡಿದ ಕೀರ್ತನಾ ಅವರು ಅನುಮಾನಗೊಂಡು ಬಾಗಿಲು ಹಾಕಲು ಮುಂದಾಗಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಒಳನುಗ್ಗಿರುವ ದುಷ್ಕರ್ಮಿಗಳು ಆಕೆಯ ಕೈಕಾಲು ಕಟ್ಟಿ, ಬಾಯಿಯನ್ನು ಮುಚ್ಚಿದ್ದಾರೆ. ನಂತರ ಮನೆಯಲ್ಲಿದ್ದ ಚಿನ್ನ, ಬೆಳ್ಳಿಯ ವಸ್ತುಗಳನ್ನು ದೋಚಿದ್ದಾರೆ. ನಂತರ ಯುವತಿಯನ್ನು ಶೌಚಾಲಯದ ಒಳಗೆ ತಳ್ಳಿ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಪರಾರಿಯಾಗಿದ್ದಾರೆ. ಸ್ವಲ್ಪ ಸಮಯದ ಬಳಿಕ ಕೈಕಾಲುಗಳಿಗೆ ಹಾಕಲಾದ ಕಟ್ಟುಗಳನ್ನು ಬಿಚ್ಚುವಲ್ಲಿ ಯಶಸ್ವಿಯಾದ ವಿದ್ಯಾರ್ಥಿನಿ ಕೂಗಾಡಿದ್ದು, ಈ ವೇಳೆ ಸ್ಥಳೀಯರು ರಕ್ಷಣೆಗೆ…

Read More

ಹೈದರಾಬಾದ್: ನನ್ನ ತಂದೆಯಿಂದಲೆ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿದ್ದೇ ಎಂಬ ಹೇಳಿಕೆ ಬಗ್ಗೆ ನನಗೆ ಯಾವುದೇ ನಾಚಿಕೆಯಾಗಿಲ್ಲ ಎಂದು ಬಿಜೆಪಿ ನಾಯಕಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಹೇಳಿದ್ದಾರೆ. ಈ ಹಿಂದೆಯೂ ಖುಷ್ಬೂ ತಮ್ಮ ತಂದೆಯಿಂದಲೇ ಲೈಂಗಿಕ ಕಿರುಕುಳ ಎದುರಿಸಿದ್ದ ಬಗ್ಗೆ ಹೇಳಿಕೆ ನೀಡಿದ್ದರು. ಇದೀಗ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಖುಷ್ಬು ಅವರು, ತಂದೆಯ ನೀಚ ಕಾರ್ಯದ ಬಗ್ಗೆ ಹೇಳಿಕೆ ನೀಡಿರುವುದರಿಂದ ಮುಜುಗರವಿಲ್ಲ ಎಂದು ಹೇಳಿದ್ದಾರೆ. ನಾನು ಆಶ್ಚರ್ಯಕರವಾದ ಹೇಳಿಕೆಯನ್ನು ನೀಡಿಲ್ಲ, ಆ ಹೇಳಿಕೆ ನನ್ನಿಂದ ಹೊರಬಂದ ಪ್ರಾಮಾಣಿಕತೆ ಎಂದು ನಾನು ಭಾವಿಸುತ್ತೇನೆ. ಈ ರೀತಿ ನಾನು ಹೇಳಿದ್ದಕ್ಕೆ ನಾಚಿಕೆಪಡುವುದಿಲ್ಲ ಏಕೆಂದರೆ ಇದು ನನಗೆ ಸಂಭವಿಸಿದೆ ಮತ್ತು ಅಪರಾಧಿಯು ತನ್ನ ಬಳಿ ಇರುವುದಕ್ಕೆ ನಾಚಿಕೆಪಡಬೇಕು ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More

ಚಿಕ್ಕಮಗಳೂರು: ಪುರಸಭೆ ಕಂದಾಯ ಅಧಿಕಾರಿ, ಗುಮಾಸ್ತ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಕಂದಾಯ ಅಧಿಕಾರಿ ಯೋಗೀಶ್, ಗುಮಾಸ್ತ ತಮ್ಮಯ್ಯ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ. ಜಮೀನಿನ ಪೌತಿ ಖಾತೆ ಮಾಡಿಕೊಡಲು 8 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು, ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ಪುರಸಭೆ ಕಚೇರಿ ಒಳಗೆಯೇ ಲೋಕಾಯುಕ್ತ ಬಲೆಗೆ ಅಧಿಕಾರಿ, ಸಿಬ್ಬಂದಿ ಬಿದ್ದಿದ್ದಾರೆ. ಲೋಲಾಯುಕ್ತ ಡಿ.ವೈ.ಎಸ್ಪಿ. ತಿರುಮಲೇಶ್, ಪಿ.ಎಸ್.ಐ. ಅನಿಲ್ ರಾಥೋಡ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳೆಯರ ದಿನ ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ. 1910ರ ಆಗಸ್ಟ್ ನಲ್ಲಿ ಡೆನ್ಮಾರ್ಕ್ನ ಕೋಪೆನ್ ಹೇಗನ್ ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು. ಮಹಿಳಾ ಸಮಾನತೆಯ ವಿಚಾರದಲ್ಲಿ ವಿಶ್ವದಾದ್ಯಂತ ತಾರತಮ್ಯ ನಡೆಯುತ್ತಿದೆ. ಪುರುಷನಷ್ಟೇ ಸಾಮರ್ಥ್ಯವನ್ನು ಮಹಿಳೆಯರು ಹೊಂದಿದ್ದರೂ, ಅವರನ್ನು ಕೀಳಾಗಿ ಕಾಣುವ ದುಷ್ಟ ಸಂಸ್ಕೃತಿ ನಮ್ಮ ದೇಶದಲ್ಲಿ ಇತ್ತು ಮತ್ತು ಈಗಲೂ ಅದು ಸಂಪೂರ್ಣವಾಗಿ ಕೊನೆಗೊಂಡಿಲ್ಲ. ಮನುಸ್ಮೃತಿಯ ದುಷ್ಟ…

Read More

ತಾವು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಹಬ್ಬಿದ್ಧ ವದಂತಿಗೆ ಸಚಿವ ನಾರಾಯಣಗೌಡ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ನಾರಾಯಣಗೌಡ, ನಾನು ಬಿಜೆಪಿಯಲ್ಲೇ ಇದ್ದೇನೆ ಇಲ್ಲೇ ಇರುತ್ತೇನೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ನಿನ್ನೆ ನಡೆದ ಗಲಾಟೆಗೂ ನನಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಅವರನ್ನೇ ಕೇಳಿಕೊಳ್ಳಿ. ನಮ್ಮ ಪಕ್ಷ ಮತ್ತು ಪ್ರಧಾನಿ ಮೋದಿ ಬಗ್ಗೆ ಕೇಳಿ ಹೇಳುತ್ತೇನೆ ಎಂದರು. ಸಚಿವ ನಾರಾಯಣಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹರಡಿತ್ತು. ಇನ್ನು ನಾರಾಯಣಗೌಡರು ಕಾಂಗ್ರೆಸ್ ಸೇರ್ಪಡೆಗೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಲೋಕಾಯುಕ್ತ ದಾಳಿ ವೇಳೆ ಪುತ್ರನ ಮನೆಯಲ್ಲಿ 8 ಕೋಟಿ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಜುಗರ ತಪ್ಪಿಸಿಕೊಳ್ಳಲು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನ ಪಕ್ಷದಿಂದ ಉಚ್ಚಾಟನೆ ಮಾಡಿದೆ ಎನ್ನಲಾಗಿದೆ. ಈ ಕುರಿತು ಸ್ವತಃ ಮಾಡಾಳ್ ವಿರೂಪಾಕ್ಷಪ್ಪ ಅವರೇ ಪ್ರತಿಕ್ರಿಯೆ ನೀಡಿದ್ದು, ನನ್ನನ್ನ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ದಾರೆ. ಈ ಶಿಸ್ತು ಕ್ರಮವನ್ನ ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

BSNL 1198 Plan: ಟೆಲಿಕಾಂ ಕಂಪನಿ BSNL ಗ್ರಾಹಕರಿಗೆ ಅನೇಕ ಅತ್ಯುತ್ತಮ ಮತ್ತು ಬಜೆಟ್ ಯೋಜನೆಗಳನ್ನು ಹೊಂದಿದೆ. ಅದೇ ಸಮಯದಲ್ಲಿ ಬಿಎಸ್‌ಎನ್‌ಎಲ್ ಮತ್ತೊಮ್ಮೆ ತನ್ನ ಕಡಿಮೆ ಬೆಲೆಯ ಯೋಜನೆಯನ್ನು ಉತ್ತಮ ಪ್ರಯೋಜನಗಳೊಂದಿಗೆ ಹೆಚ್ಚಿನ ಡೇಟಾವನ್ನು ನೀಡುವ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. BSNL ತಮ್ಮ ಗ್ರಾಹಕರನ್ನು ಆಕರ್ಷಿಸಲು ಟೆಲಿಕಾಂ ಕಂಪನಿಗಳು ನಿರಂತರವಾಗಿ ಹೊಸ ಯೋಜನೆಗಳನ್ನು ನೀಡುತ್ತಲೇ ಇರುತ್ತವೆ. ಆದರೆ ಇಂದು ನಾವು ಅಂತಹ ಯೋಜನೆಯ ಬಗ್ಗೆ ನಿಮಗೆ ತಿಳಿಸಲಿದ್ದೇವೆ ಇದನ್ನು ಅಳವಡಿಸಿಕೊಳ್ಳುವ ಮೂಲಕ ನೀವು ವರ್ಷಪೂರ್ತಿ ರೀಚಾರ್ಜ್ ಅನ್ನು ತೊಡೆದುಹಾಕಬಹುದು. ಇದರೊಂದಿಗೆ ಈ ಯೋಜನೆಯಲ್ಲಿ ನಿಮ್ಮ ಮಾಸಿಕ ವೆಚ್ಚವು ಕೇವಲ 100 ರೂ ಆಗಿರುತ್ತದೆ. ಮತ್ತು ನೀವು ಅನಿಯಮಿತ ಕರೆ ಮತ್ತು ಇತರ ಪ್ರಯೋಜನಗಳ ಲಾಭವನ್ನು ಪಡೆಯಬಹುದು. ನಾವು ಮಾತನಾಡುತ್ತಿರುವ ಯೋಜನೆಯು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಅಂದರೆ BSNL ನ ಯೋಜನೆಯಾಗಿದೆ. ಇದರಲ್ಲಿ ನೀವು 12 ತಿಂಗಳ ಅಂದರೆ 365 ದಿನಗಳ ಮಾನ್ಯತೆಯನ್ನು ಪಡೆಯುತ್ತೀರಿ. ಇದರೊಂದಿಗೆ ಡೇಟಾ ಮತ್ತು ಎಸ್ಎಂಎಸ್ ನ…

Read More

ದಾವಣಗೆರೆ: ನಾನು ಸರಳ ಸಜ್ಜನ ರಾಜಕಾರಣಿ, ಲೋಕಾಯುಕ್ತಕ್ಕೆ ಸೂಕ್ತ ದಾಖಲೆ ಕೊಟ್ಟು ಹಣ ವಾಪಸ್ ಪಡೆದೇ ಪಡೆಯುತ್ತೇನೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ. ಕೋರ್ಟ್ ನಿರೀಕ್ಷಣಾ ಜಾಮೀನು ಪಡೆದು ಚನ್ನಗಿರಿಯ ನಿವಾಸಕ್ಕೆ ವಾಪಸ್ ಬರುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ, ನಾನು ಯಾವುದೇ ತಪ್ಪು ಮಾಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ. ಅದಕ್ಕಾಗಿ ಕೋರ್ಟ್ ನನಗೆ ಜಾಮೀನು ಕೊಟ್ಟಿದೆ ಎಂದು ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More