Author: admin

ಭಾರತ ಮತ್ತು ಚೀನಾ ನಡುವೆ ಬಲವಾದ ಸಂಬಂಧವನ್ನು ರಷ್ಯಾ ಬಯಸುತ್ತದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿದ್ದಾರೆ. ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ಒಆರ್‌ಎಫ್) ಅಧ್ಯಕ್ಷ ಸಂಜಯ್ ಜೋಶಿ ಮಾತನಾಡಿ, ಭಾರತ ಮತ್ತು ಚೀನಾದೊಂದಿಗೆ ರಷ್ಯಾ ವಿಶೇಷ ಸವಲತ್ತು ಸಹಭಾಗಿತ್ವವನ್ನು ಹೊಂದಿದೆ ಎಂದು ಲಾವ್ರೊವ್ ಹೇಳಿದರು. ಪಾಶ್ಚಿಮಾತ್ಯ ದೇಶಗಳು, ಅದರಲ್ಲೂ ವಿಶೇಷವಾಗಿ ಅಮೆರಿಕ, ಭಾರತ-ಚೀನಾ ಗಡಿ ಸಮಸ್ಯೆಯನ್ನು ಉಭಯ ದೇಶಗಳ ನಡುವಿನ ಅನುಮಾನ ಮತ್ತು ಗೊಂದಲಗಳಿಗೆ ಇಂಧನವಾಗಿ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬ್ರಿಟನ್‌ನಲ್ಲಿ ಕಿಂಗ್ ಚಾರ್ಲ್ಸ್‌ನ ಪಟ್ಟಾಭಿಷೇಕ ಸಮಾರಂಭದ ಮೊದಲು ಬ್ರಿಟನ್‌ನ ಐತಿಹಾಸಿಕ ಸಿಂಹಾಸನವನ್ನು ಅಲಂಕರಿಸಲಾಗಿದೆ. ಸಿಂಹಾಸನವನ್ನು ಹೆನ್ರಿ VIII, ಚಾರ್ಲ್ಸ್ I, ರಾಣಿ ವಿಕ್ಟೋರಿಯಾ ಮತ್ತು ಇತರರು ಬಳಸಿದರು. ಈ ಸಿಂಹಾಸನವನ್ನು ಬ್ರಿಟಿಷ್ ರಾಜಮನೆತನವು 700 ವರ್ಷಗಳಿಂದ ಬಳಸುತ್ತಿದೆ ಎಂದು ಹೇಳಲಾಗಿದೆ. ಓಕ್‌ನಿಂದ ಮಾಡಲ್ಪಟ್ಟ ಈ ಸಿಂಹಾಸನವನ್ನು ಐತಿಹಾಸಿಕ ಸಮಾರಂಭದಲ್ಲಿ ಬಳಸಲಾಗುವ ಅತ್ಯಂತ ಹಳೆಯ ಮರದ ತುಂಡು ಎಂದು ಪರಿಗಣಿಸಲಾಗಿದೆ. ಸಿಂಹಾಸನವನ್ನು 1300 ರಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. 39 ಆಡಳಿತಗಾರರು ಸಿಂಹಾಸನವನ್ನು ಬಳಸಿದ್ದಾರೆಂದು ಹೇಳಲಾಗಿದೆ. ಕಿಂಗ್ ಎಡ್ವರ್ಡ್ ಸ್ಟೋನ್ ಆಫ್ ಡೆಸ್ಟಿನಿ ಎಂದು ಕರೆಯಲ್ಪಡುವ ಆಭರಣದಿಂದ ಸುತ್ತುವರಿದ ಸಿಂಹಾಸನವನ್ನು ನಿರ್ಮಿಸಲು ಆದೇಶಿಸುತ್ತಾನೆ. 1399 ರಿಂದ, ಈ ಭವ್ಯವಾದ ಸಿಂಹಾಸನವನ್ನು ಪಟ್ಟಾಭಿಷೇಕ ಸಮಾರಂಭಗಳಿಗೆ ಬಳಸಲಾಗುತ್ತಿತ್ತುಎಂದು ಹೇಳಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಖಾಸಗಿ ಶಾಲೆಗಳ NOC, ನವೀಕರಣ ಪತ್ರ, ನೋಂದಣಿ ಸೇರಿದಂತೆ ಎಲ್ಲಾ ಪ್ರಕ್ರಿಯೆಗೆ ತಡವಾಗುತ್ತಿತ್ತು. ಹೀಗಾಗಿ ಈ ವ್ಯವಸ್ಥೆಯನ್ನ ಸರಳೀಕೃತ ಮಾಡಿದ್ದೇವೆ. ಈಗ ಎಲ್ಲವನ್ನು ಆನ್ ಲೈನ್ ಸೇವೆಯ‌ ಮೂಲಕ ಕೊಡಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಖಾಸಗಿ ಶಾಲೆಗಳು NOC, ನವೀಕರಣ ಪತ್ರ, ನೋಂದಣಿ ಸೇರಿದಂತೆ ಎಲ್ಲಾ ಪ್ರಕ್ರಿಯೆಗೆ ತಡವಾಗುತ್ತಿತ್ತು. ಅದ್ದರಿಂದ ಎಲ್ಲವನ್ನು ಆನ್ ಲೈನ್ ಸೇವೆಯ‌ ಮೂಲಕ ಕೊಡಲಾಗ್ತಿದೆ. ಪ್ರತಿಯೊಂದು ಪ್ರಕ್ರಿಯೆ ಮೊದಲು 8 ಹಂತದಲ್ಲಿ ಇತ್ತು. ಈಗ 4 ಹಂತಕ್ಕೆ ಇಳಿಸಿದ್ದೇವೆ. ಮೊದಲು 27 ದಿನ ಸಮಯ ಆಗುತ್ತಿತ್ತು. ಈಗ 17 ದಿನಕ್ಕೆ ಪ್ರಕ್ರಿಯೆ ಮುಗಿಸುತ್ತಿದ್ದೇವೆ. ಎಲ್ಲವೂ ಆನ್ ಲೈನ್ ವ್ಯವಸ್ಥೆ ಮಾಡಿದ್ದೇವೆ. ಅರ್ಜಿಯ ಮಾಹಿತಿ ಬಗ್ಗೆ ಮೆಸೇಜ್ ಮೂಲಕ ಅರ್ಜಿದಾರನಿಗೆ ರವಾನೆ ಮಾಡಲಾಗುತ್ತದೆ. ಡಿಜಿಟಲ್ ಸಹಿ ಮೂಲಕ ಎಲ್ಲಾ ಮಾನ್ಯತೆ ಕೊಡುವ ಪ್ರಕ್ರಿಯೆ ಮಾಡುತ್ತಿದ್ದೇವೆ. ಹೊಸ ಶಾಲಾ ನೋಂದಣಿ, ಮಾನ್ಯತೆ…

Read More

ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನಿರ್ದೇಶಕರು ಹಾಗೂ ಕೆಲ ಸಿಬ್ಬಂದಿಯಿಂದ ನಡೆದಿದೆ ಎನ್ನಲಾದ ಸುಮಾರು 40 ಕೋಟಿ ರೂ.ಗಳ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಅರಣ್ಯ ವಿಜಿಲೆನ್ಸ್ ತಂಡದಿಂದ ತನಿಖೆ ನಡೆಸಲು ಅರಣ್ಯ ಪಡೆಯ ಮುಖ್ಯಸ್ಥರೂ ಆಗಿರುವ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ( ಪಿಸಿಸಿಎಫ್) ಆರ್ ಕೆ.ಸಿಂಗ್ ಆದೇಶಿಸಿದ್ದಾರೆ. ಕಟ್ಟಡ ನಿರ್ಮಾಣ, ಹಲವು ಕಾಮಗಾರಿಗಳಲ್ಲಿ ನಿಯಮ ಪಾಲಿಸದೇ ಭ್ರಷ್ಟಾಚಾರ ಎಸಗಲಾಗಿದೆ ಎನ್ನುವ ಕುರಿತು ರೈತಸಂಘ ಸೇರಿದಂತೆ ಬೇರೆ ಸಂಘಟನೆಗಳಿಂದಲೂ ದೂರು ಬಂದಿರುವ ಹಿನ್ನೆಲೆಯಲ್ಲಿ ಪಿಸಿಸಿಎಫ್ ಅವರು ಈ ಆದೇಶವನ್ನು ಮಾಡಿದ್ದು, ವಿಜಿಲೆನ್ಸ್ ತಂಡ ತನಿಖೆ ಆರಂಭಿಸಿದೆ. ಈಗಾಗಲೇ ಬಂಡೀಪುರದ ಸಿಬ್ಬಂದಿ ನಾಗೇಂದ್ರ ಎನ್ನುವವರ ವಿರುದ್ದ ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ವಿಜಿಲೆನ್ಸ್ ತಂಡವು ಈಗಾಗಲೇ ತನಿಖೆ ನಡೆಸಿ ಕ್ರಮಕ್ಕೆ ಶಿಫಾರಸ್ಸು ಮಾಡಿದೆ. ಅಲ್ಲದೇ ಬಂಡೀಪುರ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ವಿರುದ್ದವೂ ಆರೋಪ ಕೇಳಿ ಬಂದಿರುವುದರಿಂದ ಅವರ ವಿರುದ್ದವೂ ತನಿಖೆ ನಡೆಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ…

Read More

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿಯನ್ನ ರಾಜ್ಯ ಸರ್ಕಾರ ಮತ್ತೆ 15 ದಿನಗಳಿಗೆ ವಿಸ್ತರಿಸಿ ಆದೇಶಿಸಿದೆ. ಟ್ರಾಫಿಕ್ ಫೈನ್ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರು ದಂಡ ಪಾವತಿಸಲು ಶೇ. 50ರ ರಿಯಾಯಿತಿ ನೀಡಿದ್ದ ಸರ್ಕಾರ ಇದೀಗ ಮತ್ತೆ ಶೇ.50 ರಷ್ಟು ರಿಯಾಯಿತಿಯಲ್ಲಿ ಟ್ರಾಫಿಕ್ ಫೈನ್ ಕಟ್ಟಲು 15 ದಿನಗಳವರೆಗೆ ಕಾಲಾವಕಾಶ ನೀಡಿದೆ. 11-02-2023ರ ಒಳಗಾಗಿ ಅನ್ವಯವಾಗುವ ಪ್ರಕರಣಗಳಿಗೆ ಮಾತ್ರ ಒಂದು ಬಾರಿಯ ಕ್ರಮವಾಗಿ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ​ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ 50ರ ರಿಯಾಯಿತಿ ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಹಿಂದೆ ಫೆಬ್ರವರಿ 11ರ ವರೆಗೆ 15 ದಿನಗಳ ಕಾಲ ಶೇ 50ರ ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಅವಕಾಶ ನೀಡಲಾಗಿತ್ತು. ಈ ಹಿಂದೆ 15 ದಿನಗಳ ಕಾಲ ಶೇ 50ರ ರಿಯಾಯಿತಿಯಲ್ಲಿ ದಂಡ ಪಾವತಿಗೆ ಅವಕಾಶ ನೀಡಿದ್ದ ವೇಳೆ ಸವಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೋಟ್ಯಂತರ ರೂಪಾಯಿ ದಂಡ ಸಂಗ್ರಹವಾಗಿತ್ತು.…

Read More

ಮಾರ್ಚ್ 12 ಅಥವಾ 14 ರಂದು ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಹಾಸನ ಜಿಲ್ಲೆ ರಾಜಕಾರಣ ವಿಚಾರದಲ್ಲಿ ಮಧ್ಯಪ್ರವೇಶಿಸಲ್ಲ ಹಾಸನ ಜಿಲ್ಲೆಯನ್ನ ಹೆಚ್.ಡಿ ರೇವಣ್ಣ ಅವರಿಗೆ ಬಿಟ್ಟಿದ್ದೇನೆ. ಪಕ್ಷಕ್ಕಾಗಿ ದುಡಿದವರನ್ನ ನಾನು ಎಂದೂ ಕೈಬಿಟ್ಟಿಲ್ಲ. ತಾಳ್ಮೆ ಅನ್ನೋದು ಇಲ್ಲಿ ಮುಖ್ಯ ಎಂದರು. ಪಂಚರತ್ನ ರಥಯಾತ್ರೆ ಬಗ್ಗೆ ಲಗುವಾಗಿ ಮಾನಾಡಿದ್ದಾರೆ. ಜೆಡಿಎಸ್ ರಾಜ್ಯದ ಜನತೆಯ ಭಾವನೆಗೆ ಸ್ಪಂದಿಸುವಂತಹ ಪಕ್ಷ. ಜನತಾ ದಳ ಬಂದಾಗ ಅಭಿವೃದ್ದಿ ಅನ್ನೋದು ಆರಂಭವಾಯಿತು ಹೆಚ್.ಡಿ ರೇವಣ್ಣ ಪಿಡಬ್ಲ್ಯುಡಿ ಮಂತ್ರಿ ಆಗಿದ್ದಾಗ ರಸ್ತೆಗಳು ಅಭಿವೃದ್ಧಿಯಾದವು. ದೇವೆಗೌಡರು ಅಧಿಕಾರದಲ್ಲಿದ್ದಾಗ ಬಡ್ಡಿಮನ್ನಾ ಮಾಡಿದರು. ನಾನು ಅಧಿಕಾರಕ್ಕೆ ಬಂದಾಗ ರೈತರ ಸಾಲಮನ್ನಾ ಮಾಡಿದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಅದರ ಸಂಸ್ಥಾಪಕ ಅಧ್ಯಕ್ಷರು ಮತ್ತು ಕರ್ನಾಟಕದ ಖ್ಯಾತ ಸ್ತ್ರೀವಾದಿ ವಿಮರ್ಶಕರು ಹಾಗೂ ಲೇಖಕರೂ ಆದ ಡಾ. ವಿಜಯಾ ದಬ್ಬೆ ಅವರ ಹೆಸರಿನಲ್ಲಿ ಸ್ಥಾಪಿಸಿರುವ ‘ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ‘ ಗೆ 2019 ರಿಂದ 2022ರ ಅವಧಿಯಲ್ಲಿ ಮಹಿಳೆಯರಿಂದ ಪ್ರಕಟವಾದ ‘ವಿಮರ್ಶೆ ಮತ್ತು ಸಂಶೋಧನಾ ಕೃತಿಗಳನ್ನು’ ಆಹ್ವಾನಿಸಿದೆ. ಈ ಅವಧಿಯಲ್ಲಿ ಪ್ರಕಟವಾಗಿ ಮೊದಲ ಮುದ್ರಣವನ್ನು ಕಂಡಿರುವ ಕೃತಿಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. ಯಾವುದೇ ಪದವಿಗಾಗಿ ಸಲ್ಲಿಸಿದ ನಿಬಂಧ, ಮಹಾ ಪ್ರಬಂಧಗಳನ್ನು ಮತ್ತು ನಿಗದಿತ ಯೋಜನೆಗಾಗಿ ಅನುದಾನ ಪಡೆದು ಸಿದ್ಧಪಡಿಸಿದ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸುವುದಿಲ್ಲ. ಆಸಕ್ತ ಪ್ರಕಾಶಕರು ಅಥವಾ ಲೇಖಕರು ಕೃತಿಯ ಮೂರು ಪ್ರತಿಗಳನ್ನು ಕೊನೆಯಲ್ಲಿ ನೀಡಿರುವ ವಿಳಾಸಕ್ಕೆ ಏಪ್ರಿಲ್ 15 ರ ಒಳಗೆ ಕಳುಹಿಸಿ ಕೊಡಲು ಕೋರಿದೆ . ‘ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಯು 25,000 ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, ಪ್ರಶಸ್ತಿಯನ್ನು 2023ರ ಜೂನ್ 1ರಂದು ಮೈಸೂರಿನಲ್ಲಿ ಪ್ರದಾನ ಮಾಡಲಾಗುವುದು.…

Read More

ಖಾನಾಪುರ ವಿಧಾನಸಭಾ ಕ್ಷೇತ್ರ ಬಹಳ ವಿಶಿಷ್ಟ ಮತ್ತು ವಿಭಿನ್ನವಾದ ಕ್ಷೇತ್ರ ಇಲ್ಲಿ ರಾಜಕೀಯನೇ ಬೇರೆಇಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳ ಮೇಲೆ ಆಗಲಿ ಮತಗಳನ್ನು ಕೇಳುವುದಿಲ್ಲ, ಇಲ್ಲಿ ಭಾಷೆ ಮತ್ತು ಮರಾಠಿ ಮಾನುಸ ವಿಶೇಷದ ಆದಾರದ ಮೇಲೆ ರಾಜಕಾರಣ, ಮತ ರಾಜಕಾರಣ, ನಡೆಯುತ್ತದೆ. ಮತದಾರರ ಸಂಖ್ಯೆ ಸಾಮಾನ್ಯ 2,16000 ಅಂದಾಜಿಸಲಾಗಿದೆ ಒಟ್ಟು 255 ಭೂತಗಳನ್ನು ಈ ಕ್ಷೇತ್ರ ಹೊಂದಿದೆ.ಯಾವ ಸಮುದಾಯಗಳ ಮತದಾರರು ಹೆಚ್ಚು ಪ್ರಾಬಲ್ಯಒಂದು ಲಕ್ಷ ,ಆಸ ಪಾಸ ಮತದಾರರ ಸಂಖ್ಯೆಯನ್ನು ಹೊಂದಿದ ಮರಾಠ ಸಮುದಾಯ ಲಿಂಗಾಯತ್ ಸಮುದಾಯ 15000 ರಿಂದ 18000 ವರೆಗೆ, ಜೈನ್ 5000, ಎಸ್ ಸಿ ಎಸ್ ಟಿ 30,000, ಕ್ರಿಶ್ಚಿಯನ್ ಸಮುದಾಯ 4000, ಮುಸ್ಲಿಂ 18 ರಿಂದ 20 ಸಾವಿರ ಇತರರು 30,000 ವರೆಗೆ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಇಲ್ಲಿ ಖಾನಾಪುರ್ ಮತಕ್ಷೇತ್ರ ರಾಷ್ಟ್ರೀಯ ಪಕ್ಷಗಳು ಕಾಂಗ್ರೆಸ್ ಮತ್ತು ಬಿಜೆಪಿ ತೆಕ್ಕೆಗೆ ಈ ಕ್ಷೇತ್ರ ಬಂದರೆ ಉಳಿದ ಎಲ್ಲಾ ಸಮಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಜಯ…

Read More

ಪಾವಗಡ: ತಾಲೂಕಿನ ಪೋತಗಾನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ದಳವಾಯಿ ಹಳ್ಳಿ ಗ್ರಾಮಕ್ಕೆ ಇಂದು ಹೆಚ್.ವಿ.ವೆಂಕಟೇಶ್ ರವರು ಭೇಟಿ ನೀಡಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಗ್ರಾಮದ ಮಹಿಳೆಯರಿಗೆ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ತಿಳಿಸಿ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಗೃಹಲಕ್ಷ್ಮಿ, ಗೃಹ ಜ್ಯೋತಿ ಮತ್ತು ಅನ್ನ ಭಾಗ್ಯ ಯೋಜನೆಗಳನ್ನು ಜಾರಿಗೊಳಿಸುವ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳನ್ನು ವಿತರಣೆ ಮಾಡಲಾಯಿತು. ಬಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಮಹಿಳಾ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುತ್ತೇವೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು. ಈ ಭಾಗದ ಅನೇಕ ಮುಖಂಡ, ಕಾರ್ಯಕರ್ತರು, ಸಾರ್ವಜನಿಕರು ಈ ವೇಳೆ ಉಪಸ್ಥಿತರಿದ್ದರು. ವರದಿ: ರಾಮಪ್ಪ. ಸಿ.ಕೆ.ಪುರ. ಪಾವಗಡ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು: ತಂದೆಯೇ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ನಡೆಸಿ, ಪ್ರಾಣ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ತಂದೆಗೆ ಸಾಯುವವರೆಗೂ ಜೈಲು ಶಿಕ್ಷೆ ವಿಧಿಸಿ ಎಫ್ ಟಿ ಎಸ್ ಸಿ 1 ಜಿಲ್ಲಾ ಸತ್ರ ನ್ಯಾಯಾಲಯ  (ವಿಶೇಷ ಮಕ್ಕಳ ಸ್ನೇಹಿ ನ್ಯಾಯಾಲಯ) ತೀರ್ಪು ನೀಡಿದೆ. ಸಿರಾ ತಾಲೂಕಿನ ಕಸಬಾ ಹೋಬಳಿ, ಮುದಿಗೆರೆ ಗ್ರಾಮದಲ್ಲಿ 22—02—2022ರಂದು ರಾತ್ರಿ 10 ಗಂಟೆಗೆ ತಂದೆ ಬಸವರಾಜು ಮಲಗಿದ್ದ ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಎಬ್ಬಿಸಿ ಬೆದರಿಸಿ ಅತ್ಯಾಚಾರ ನಡೆಸಿದ್ದ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಸಾಯಿಸಿ ಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿದ್ದ. ತಂದೆಯ ದುಷ್ಕೃತ್ಯವನ್ನು ಬಾಲಕಿ ತನ್ನ ಚಿಕ್ಕಮ್ಮನಿಗೆ ತಿಳಿಸಿದ್ದು, ಈ ವೇಳೆ ಆಕೆಯ ಚಿಕ್ಕಮ್ಮ ಜಾಗೃತಗೊಂಡು, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಶಿರಾದಲ್ಲಿ ಸಹಾಯಕ ಮಕ್ಕಳ ರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ವೇಳೆ ಅಧಿಕಾರಿಗಳ ತಕ್ಷಣವೇ ತಂದೆ ಬಸವರಾಜು ವಿರುದ್ಧ ದೂರು ನೀಡಿದ್ದಾರೆ. ಅಂತೆಯೇ ಆರೋಪಿಯ ವಿರುದ್ಧ ಕಲಂ 04, …

Read More