Author: admin

ಡಿಜಿಟಲ್ ಯುಗದಲ್ಲಿ ಎಲ್ಲವೂ ಅಂಗೈಯಲ್ಲೇ ಸಿಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಎರಡನೇ ದರ್ಜೆಯ ಪಟ್ಟಣದಲ್ಲಿದ್ದುಕೊಂಡೇ ಉದ್ಯಮವನ್ನು ಎಲ್ಲೆಡೆಗೆ ಕೊಂಡೊಯ್ಯಬಹುದು ಎಂಬುದನ್ನು ಸಾಬೀತು ಪಡಿಸಿದ್ದಾರೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಯುವಕ ಬಸವಂತ್ ಕುಮಾರ್ ಎಂ.ಪಿ. ಮೇಧಾವಿ ಸೂಪರ್ ಫುಡ್ ಡಾಟ್ ಕಾಮ್ ವೆಬ್ ಸೈಟ್ ಮೂಲಕ ಈ ಕಾಮರ್ಸ್ ಉದ್ಯಮ ಆರಂಭಿಸಿರುವ ಬಸವಂತ್ ಕುಮಾರ್ ಅವರು ಕೊಳ್ಳೇಗಾಲದಂತಹ ಚಿಕ್ಕ ಪಟ್ಟಣದಲ್ಲಿದ್ದುಕೊಂಡೇ ತಮ್ಮ ಉದ್ಯಮವನ್ನು ದೇಶದ ಮೂಲೆ ಮೂಲೆಗೆ ಕೊಂಡೊಯ್ಯಬಹುದು ಎಂಬುದನ್ನು ನಿರೂಪಿಸುತ್ತಿದ್ದಾರೆ. ಇದರೊಂದಿಗೆ ಈ ಕಾಮರ್ಸ್ ಉದ್ಯಮದಲ್ಲಿ ಬೆಳೆಯುತ್ತಿರುವ ದೇಶದ ಟಾಪ್ 10 ಉದಯೋನ್ಮುಖ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಅನ್ನದಿಂದ ಹಿಡಿದು ಎಲ್ಲ ಆಹಾರ ಪದಾರ್ಥಗಳಿಗೂ ರಾಸಾಯನಿಕಗಳು ಸೇರುತ್ತಿವೆ. ಇದರಿಂದ ಆಹಾರದ ಗುಣಮಟ್ಟ ಕುಸಿದು ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಎದುರಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಇನ್ನೂ ಅಡುಗೆ ಎಣ್ಣೆ ವಿಷಯದಲ್ಲಿ ಪರಿಸ್ಥಿತಿ ಕೈಮೀರುವ ಹಂತ ತಲುಪಿದೆ. ಇಂತಹ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಈ ಹಿಂದೆ ನಮ್ಮ ಹಿರಿಯರು ಅನುಸರಿಸುತ್ತಿದ್ದ…

Read More

ಬೆಂಗಳೂರಿನ ರಾಜಾಜಿನಗರದ ಶಿವನಹಳ್ಳಿಯಲ್ಲಿರುವ ಶಿವಣ್ಣ ಎಂಬುವವರು ತನ್ನ ಐಶ್ವರ್ಯ ಅಪಾರ್ಟ್​ಮೆಂಟ್ ಅ​ನ್ನು ಬ್ಯಾಂಕ್​ ಒಂದರಲ್ಲಿ ಅಡವಿಟ್ಟು 15 ಕೋಟಿ ರೂ. ಸಾಲ ಪಡೆದಿದ್ದಾರೆ. ಆದರೆ ಸಾಲ ಮರುಪಾವತಿಸದ ಹಿನ್ನೆಲೆ ನ್ಯಾಯಾಲಯದ ಆದೇಶದಂತೆ ಬ್ಯಾಂಕ್​ ಸಿಬಂದ್ದಿಗಳು ಅಪಾರ್ಟ್​ಮೆಂಟ್​​ನ 29 ಫ್ಲ್ಯಾಟ್ ​ಗಳನ್ನು ಸೀಜ್​ ಮಾಡಿದ್ದಾರೆ. ಈ ಮೂಲಕ ಲೀಸ್​ ಮತ್ತು ಬಾಡಿಗೆಗೆ ಇದ್ದ ನಿವಾಸಿಗಳಿಗೆ ಬ್ಯಾಂಕ್​​​​ ಸಿಬ್ಬಂದಿ ಶಾಕ್​ ನೀಡಿದ್ದಾರೆ. ಮನೆ ತೆರವು ವೇಳೆ ಬ್ಯಾಂಕ್ ಸಿಬ್ಬಂದಿ ಹಾಗೂ ನಿವಾಸಿಗಳ ನಡುವೆ ವಾಗ್ವಾದ ಉಂಟಾಗಿದ್ದು, ಸದ್ಯ ಮನೆಗಳಲ್ಲಿದ್ದ ಸಾಮಾಗ್ರಿಗಳನ್ನ ಕೆನರಾ ಬ್ಯಾಂಕ್ ಸಿಬ್ಬಂದಿಗಳು ಹೊರ ಹಾಕಿದ್ದಾರೆ. ಇದರಿಂದಾಗಿ ಸುಮಾರು 100ಕ್ಕೂ ಹೆಚ್ಚು ಜನರು ಬೀದಿಗೆ ಬಿದ್ದಿರುವ ಪರಿಸ್ಥಿತಿ ಕಂಡು ಬಂದಿದೆ. ಅಪಾರ್ಟ್​ಮೆಂಟ್ ಅಡವಿಟ್ಟು ಮಾಲೀಕ ಲೋನ್ ಪಡೆದು ಮರುಪಾವತಿಸದ ಹಿನ್ನೆಲೆ ಅಪಾರ್ಟ್​ಮೆಂಟ್​​ನ 29 ಫ್ಲ್ಯಾಟ್ ​ಗಳನ್ನು ಬ್ಯಾಂಕ್​ ಸೀಜ್​ ಮಾಡಿದ್ದು ಇದರಿಂದಾಗಿ ಬಾಡಿಗೆ ಮತ್ತು ಲೀಸ್ ಗಿದ್ದ ನಿವಾಸಿಗಳು ಸಂಕಷ್ಟಕ್ಕೊಳಗಾಗಿರುವ ಘಟನೆ ನಡೆದಿದೆ. ಬಾಡಿಗೆ ನಿವಾಸಿಗಳು, ನಮ್ಮ ಹಣ ನಮಗೆ ವಾಪಾಸ್ ಕೊಡಿ…

Read More

ಬೆಂಗಳೂರು: ಪಂಚಮಸಾಲಿ 2ಎ ಮೀಸಲಾತಿ ಧರಣಿ ಮುಂದುವರೆದಿದ್ದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಧರಣಿ 48ನೇ ದಿನಕ್ಕೆ ಕಾಲಿಟ್ಟಿದ್ದರೂ ಸರಕಾರ ಮೌನವಹಿಸಿದ್ದು ಇದೀಗ ಮಾ.4ರಂದು ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಬಸವ ಜಯಮೃತ್ಯುಂಜಯಶ್ರೀ ಹೆದ್ದಾರಿ ತಡೆದು ಪ್ರತಿಭಟನೆ ಆಡಲು ಕರೆ ಕೊಟ್ಟಿದ್ದು ರಾಜ್ಯದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಈ ಸರ್ಕಾರದ ಅವಧಿಯಲ್ಲಿಯೇ ಮೀಸಲಾತಿ ಒಡೆಯುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಹೋರಾಟ ಆರಂಭಿಸಲಾಗಿತ್ತು. ಇದಕ್ಕೆ ಮಣಿದಿದ್ದ ಸರ್ಕಾರ ಬೆಳಗಾವಿ ಅಧಿವೇಶನದ ಕೊನೆಯ ದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಲಿಂಗಾಯತ, ಒಕ್ಕಲಿಗ ಮತ್ತು ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗವನ್ನು ಸೃಷ್ಟಿಸಿ ಮೀಸಲಾತಿ ನೀಡಲು ಮುಂದಾಗಿತ್ತು. ಆದರೆ, ಈ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ಶಿವಮೊಗ್ಗ: ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಕೋಟೆಯಾಗಿರುವ ಹಾಸನ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಆಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದ್ದು ಹೆಚ್ ಡಿ ಕುಮಾರಸ್ವಾಮಿ ಅವರು ಅಭ್ಯರ್ಥಿ ಯಾರು ಎಂದು ಸ್ಪಷ್ಟನೆ ನೀಡದೆ ನಡುಗೋಡೆಯ ಮೇಲೆ ದೀಪವಿಡುವ ಕೆಲಸ ಮಾಡಿದ್ದಾರೆ. ಹಾಸನ ಕ್ಷೇತ್ರಕ್ಕೆ ತಮ್ಮ ಅಭ್ಯರ್ಥಿ ಯಾರು ಎಂದು ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡದೇ ಜಾರಿಕೊಂಡಿದ್ದು ಯಾರಿಗೆ ಟಿಕೇಟ್ ಸಿಗಲಿದೆ ಎಂಬಗೊಂದಲ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ. ಪಕ್ಷದ ವರಿಷ್ಠರೆಲ್ಲ ಕೂತು ಒಂದು ನಿರ್ಣಯ ತೆಗೆದುಕೊಳ್ಳುತ್ತೇವೆ, ಅಭ್ಯರ್ಥಿಯ ಆಯ್ಕೆ ಪಕ್ಷದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರಬಾರದು, ಕಳೆದ ಎರಡೂವರೆ ತಿಂಗಳಿಂದ ತಾನು ಜೆಡಿಎಸ್ ಪಕ್ಷಕ್ಕೆ ಕನಿಷ್ಟ 125 ಸೀಟು ಬರುವಂತಾಗಲು ರಾಜ್ಯಾದಂತ ಓಡಾಡುತ್ತಿರಿವುದರಿಂದ ತನ್ನ ಶ್ರಮ ವ್ಯರ್ಥವಾಗಬಾರದು ಎಂದು ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು ಟಿಕೇಟ್ ಗುದ್ದಾಟ ಶುರುವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿಯು ಟಿಕೇಟ್ ಕದನ ಶುರುವಾಗಿದ್ದು ಬೆಳಗಾವಿಯಲ್ಲಿ ಟಿಕೆಟ್‍ಗಾಗಿ ಸಿದ್ದರಾಮಯ್ಯ ಮುಂದೆ ಗಲಾಟೆಯು ನಡೆದಿದೆ . ಇದೆಲ್ಲವನ್ನು ಗಮನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಿಕೆಟ್ ಸಿಗದ ನಿಷ್ಠಾವಂತ ಅಭ್ಯರ್ಥಿಗಳಿಗೆ ಬೇರೆ ಸ್ಥಾನಮಾನಗಳನ್ನು ಕೊಡುತ್ತೇವೆ ಎಂದು ಹೇಳುವುದರ ಮೂಲಕ ಆಕಾಂಕ್ಷಿಗಳನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ. ಟಿಕೆಟ್ ಸಿಗದ ನಿಷ್ಠಾವಂತರಿಗೆ ವಿಧಾನ ಪರಿಷತ್ ಸ್ಥಾನ, ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಕೊಡುತ್ತೇವೆ. ನಮ್ಮ ಪಕ್ಷದಲ್ಲಿ ಎಲ್ಲಾ ಕಡೆ ಆಕಾಂಕ್ಷಿಗಳು ಇದ್ದಾರೆ. 1,200 ಜನ ಟಿಕೆಟ್‍ಗೆ ಅರ್ಜಿ ಹಾಕಿದ್ದಾರೆ. ಟಿಕೆಟ್ ಕೇಳೋದ್ರಲ್ಲಿ ತಪ್ಪೇನೂ ಇಲ್ಲ. ಯಾರಿಗೆ ಟಿಕೆಟ್ ಕೊಡಬೇಕು ಅಂತ ಪಾರ್ಟಿ ತೀರ್ಮಾನ ಮಾಡುತ್ತೆ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಪತ್ನಿ, ಇಬ್ಬರು ಪುತ್ರಿಯರಿಗೆ ವಿಷವುಣಿಸಿ ಪತಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಗರದ ಕೋಣನಕುಂಟೆಯ ಠಾಣಾ ವ್ಯಾಪ್ತಿಯ ವಡ್ಡರಪಾಳ್ಯ ಮನೆಯೊಂದರಲ್ಲಿ ನಡೆದಿದೆ. ಪತ್ನಿ ವಿಜಯಾ(28), ಪುತ್ರಿಯರಾದ ನಿಶಾ(7), ದೀಕ್ಷಾ(5) ಮೃತ ದುರ್ದೈವಿಗಳು. ಪತಿ ನಾಗೇಂದ್ರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಊಟದಲ್ಲಿ ವಿಷವುಣಿಸಿ ಹತ್ಯೆ ಶಂಕೆ ವ್ಯಕ್ತವಾಗಿದೆ. ಇನ್ನು ಪತಿ ನಾಗೇಂದ್ರ ಕ್ಯಾನ್ಸರ್ನಿಂದ ಬಳತ್ತಿದ್ದು,ಬ್ಲೇಡ್‌ ನಿಂದ  ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗುತ್ತಿದೆ. 2014ರಲ್ಲಿ ದಂಪತಿ ಮದುವೆಯಾಗಿದ್ದರು. ನಾಗೇಂದ್ರನಿಗೆ ವಿಪರೀತ ಕುಡಿದ ಚಟ ಇತ್ತು. ಪತ್ನಿ ವಿಜಯ ಮೆಡಿಕಲ್‌ ನಲ್ಲಿ   ಕೆಲಸ ಮಾಡುತ್ತಿದ್ದರು. ವಿಜಯ ಆರ್ಥಿಕವಾಗಿ ಕುಟುಂಬಕ್ಕೆ ಆಧಾರವಾಗಿದ್ದರು. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ತಾಯಿ ಮೃತಪಟ್ಟಿದ್ದಾಳೆ ಎಂಬ ಅರಿವು ಇಲ್ಲದೆ ಬಾಲಕನೋರ್ವ ಎರಡು ದಿನಗಳ ಕಾಲ ತಾಯಿಯ ಮೃತದೇಹದ ಪಕ್ಕದಲ್ಲೇ ಸಮಯ ಕಳೆದಿರುವ ಘಟನೆ ಬೆಂಗಳೂರಿನ ಗಂಗಾ ನಗರದಲ್ಲಿ ನಡೆದಿದೆ. 40 ವರ್ಷದ ಅಣ್ಣಮ್ಮ ಮಲಗಿದ್ದ ಸ್ಥಿತಿಯಲ್ಲೇ ಮನೆಯಲ್ಲಿ ಸಾವನ್ನಪ್ಪಿದ್ದರು. ಆದರೆ ಈ ಬಗ್ಗೆ ತಿಳಿಯದ ಆಕೆಯ 11 ವರ್ಷದ ಮಗ ತಾಯಿಯ ಮೃತದೇಹದೊಂದಿಗೆ ಸಮಯ ಕಳೆದಿದ್ದಾರೆ. ಸ್ಥಳೀಯರು ನೀಡಿರುವ ಮಾಹಿತಿ ಅನ್ವಯ ಅಣ್ಣಮ್ಮ ತನ್ನ ಮಗನ ಜೊತೆ ಒಂಟಿಯಾಗಿ ವಾಸವಿದ್ದರು. ಆದರೆ ಅವರು ಕಳೆದ ಎರಡು ದಿನಗಳ ಹಿಂದೆಯೇ ಮೃತಪಟ್ಟಿದ್ದು, ಮನೆಯಿಂದ ದುರ್ವಾಸನೆ ಬಂದ ಕಾರಣ ಅಕ್ಕಪಕ್ಕದ ನಿವಾಸಿಗಳು ಮನೆಯಲ್ಲಿ ಗಮನಿಸಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ಗಂಗಾನಗರದ ಸ್ಥಳೀಯ ಸರ್ಕಾರಿ ಶಾಲೆಯೊಂದರ ಮನೆಯಲ್ಲಿ ಅಣ್ಣಮ್ಮ ಮಗನೊಂದಿಗೆ ವಾಸಿಸುತ್ತಿದ್ದರು. ಅಣ್ಣಮ್ಮ ಅವರ ಪತಿ ಕಳೆದ ಕೆಲ ವರ್ಷಗಳ ಹಿಂದೆಯಷ್ಟೇ ಸಾವನ್ನಪ್ಪಿದ್ದರು. ಮಾತನಾಡಲು ಬಾರದ ಅಣ್ಣಮ್ಮ ಕೂಲಿ ಕೆಲಸ ಮಾಡಿಕೊಂಡು ಮಗನನ್ನು ನೋಡಿಕೊಳ್ಳುತ್ತಿದ್ದರು. ಆದರೆ ಏಕಾಏಕಿ ಕಳೆದ ಎರಡು ದಿನಗಳ ಹಿಂದೆ ನಿದ್ದೆ ಮಾಡುತ್ತಿದ್ದ…

Read More

ಉಡುಪಿ: ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲೂಕಿನಲ್ಲಿ ರೈತರಿಂದ 67.94 ಎಕರೆ ಕೃಷಿ ಭೂಮಿಯನ್ನು ಸಚಿವರ ಆಪ್ತರಾದ ವಿದ್ಯಾ ಸುವರ್ಣ-ಗಜಾನಂದ ದಂಪತಿ ಖರೀದಿಸಿದ್ದಾರೆ. 4.15 ಕೋಟಿ ರೂಪಾಯಿಗೆ ಜಮೀನು ಖರೀದಿಸಲಾಗಿದೆ. ಈ ಜಮೀನಿನ ಖರೀದಿ ಪ್ರಕ್ರಿಯೆ ನಡೆಸಿದರೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ. ಜಮೀನು ಕೊಟ್ಟ ರೈತರಿಗೆ ದೊಡ್ಡ ಅನ್ಯಾಯವಾಗಲಿದೆ ಎಂದು ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ಕಾರ್ಕಳ ಶಾಸಕ, ಸಚಿವ ಸುನಿಲ್ ಕುಮಾರ್ ಹೆಸರು ಉಲ್ಲೇಖಿಸದೆಯೇ ಅವರ ವಿರುದ್ಧ ಆರೋಫ ಮಾಡಿದ್ದಾರೆ. ಜತೆಗೆ, ಈ ವಿಚಾರವಾಗಿ ಉಡುಪಿಯ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಮುತಾಲಿಕ್ ಈ ಆರೋಪ ಮಾಡಿದ್ದು ರಾಜಕೀಯವಾಗಿ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: 50 ವರ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಹೇಗೆ ಸರ್ಕಾರ ನಡೆಸಿದೆ ಎಂಬುದು ಬಟಾಬಯಲಾಗಿದೆ. ಕಾಂಗ್ರೆಸ್ ಪಕ್ಷ ದೇಶದಲ್ಲಿ ತಲೆ ತಗ್ಗಿಸುವ ಹೇಳಿಕೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ ಎಂದು ಸಚಿವ ಅಶೋಕ್ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಜನರಿಗೆ 500 ರೂ. ಕೊಟ್ಟು ಕರೆದುಕೊಂಡು ಬನ್ನಿ ಎಂಬ ವೀಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ತಲೆ ತಗ್ಗಿಸುವ ಹೇಳಿಕೆಯನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ. ನಮಗೆ ವೋಟ್ ಹಾಕಿ ಸದನಕ್ಕೆ ಕಳುಹಿಸುವವರಿಗೆ ಮಾಡಿದ ಅವಮಾನ. ಇವರು ಕಾರ್ಯಕ್ರಮಕ್ಕೆ 500 ರೂ. ಕೊಟ್ಟರೆ ವೋಟ್‌ಗೆ ಎಷ್ಟು ಹಣ ಕೊಡುತ್ತಾರೆ? ಸಾವಿರಾರು ಕೋಟಿ ರೂ. ಹಣ ಖರ್ಚು ಮಾಡಲು ಕಾಂಗ್ರೆಸ್ ಸಿದ್ದವಿದೆ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುತ್ತಾರೆ ಎಂದು ಅಮಿತ್ ಶಾ ಹೇಳಿದ್ದರು. ಅದಕ್ಕೆ ಪಕ್ಕಾ ಸಾಕ್ಷಿ ಸಿಕ್ಕಿದೆ. ಇವರು ಅಧಿಕಾರಕ್ಕೆ ಬಂದರೆ ಜನರ ತೆರಿಗೆ ಹಣ ಲೂಟಿ ಹೊಡಿಯುತ್ತಾರೆ ಎಂದು ಕಿಡಿಕಾರಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಭಾರತೀಯ ಜನತಾ ಪಕ್ಷದ ಎರಡನೇ ತಂಡ ಬೆಳಗಾವಿ ಉಸ್ತುವಾರಿ ಸಚಿವರಗಳಾದ ಗೋವಿಂದ್ ಕಾರಜೋಳ್ ಅವರ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ಬೆಳಗಾವಿ ಕರ್ನಾಟಕದ ಕಿರೀಟ ಎಂದಿದ್ದಾರೆ. ಕನ್ನಡದಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸುತ್ತ ಭಾಷಣ ಪ್ರಾರಂಭಿಸಿದ ಅವರು ಸ್ವತಂತ್ರದ ಬೆಳ್ಳಿ ಚುಕ್ಕಿಯಾದ ವೀರ ರಾಣಿ     ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪಾದಸ್ಪರ್ಶವಾಗಿದೆ ಏರ್ ಮಾರ್ಸ್ ಅಲ್ಲಿ ಕರಿಯಪ್ಪ ಅಂತ ವೀರರನ್ನು ಜನ್ಮ ನೀಡಿದ ಈ ಭೂಮಿ ತಾಯಿಗೆ ನನ್ನ ವಂದನೆಗಳು ಎಂದು ಕರ್ನಾಟಕ ಭೂಮಿಗೆ ತಮ್ಮ ನಮನಗಳನ್ನು ಸಲ್ಲಿಸಿದರು. ಭೂಮಿ ನಮಗೆ ಪ್ರೇರಣೆ ಅದರ ಸಲುವಾಗಿ ಮುಖ್ಯಮಂತ್ರಿಗಳು ಈ ಸ್ಥಳವನ್ನು ವಿಜಯ ಸಂಕಲ್ಪ ಯಾತ್ರೆಗೆ ಆಯ್ಕೆ ಮಾಡಿದ್ದಾರೆ. ಭಾರತೀಯ ಜನತಾ ಪಕ್ಷ ಎಲ್ಲರಿಗೂ ಸಮಭಾವ ಸಮಬಾಳು ಸಮಾನ ಹಕ್ಕು ಕೊಡುವ ಪಕ್ಷ ನಾವು ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ಹಾಕಿದ್ದೇವೆ ಎಂದರು. ತಮ್ಮ ಭಾಷಣ ಉದ್ದಕ್ಕೂ ಸರ್ಕಾರದ ಸಾಧನೆಗಳು ಕುರಿತು ಹೇಳಿದರಲ್ಲದೆ…

Read More