Author: admin

ದೆಹಲಿಯಲ್ಲಿ ಮಾರ್ಚ್ 1 ರಿಂದ 4 ರವರೆಗೆ ನಡೆಯಲಿರುವ ಜಿ20 ಶೃಂಗಸಭೆಯ ಅಂಗವಾಗಿ ಸುಂದರೀಕರಣಕ್ಕಾಗಿ ಇರಿಸಲಾಗಿದ್ದ ಹೂವಿನ ಕುಂಡಗಳನ್ನು ಗಾಂಧಿನಗರ ಮೂಲದ ಮನಮೋಹನ್  ಕದ್ದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಸ್ಥಳದಿಂದ ಪರಾರಿಯಾಗಲು ಬಳಸಿದ್ದ ಐಷಾರಾಮಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೆಹಲಿ-ಗುರುಗ್ರಾಮ್ ಎಕ್ಸ್ ಪ್ರೆಸ್ ವೇನಲ್ಲಿರುವ ಆಂಬಿಯೆನ್ಸ್ ಮಾಲ್ ಎದುರು ಸೋಮವಾರ ಈ ಘಟನೆ ನಡೆದಿದೆ. ಐಷಾರಾಮಿ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಹೂವಿನ ಕುಂಡಗಳನ್ನು ಕದಿಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ವೈರಲ್ ಆಗಿತ್ತು. ವೈರಲ್ ಟ್ವೀಟ್ ಅನ್ನು ಗಮನಿಸಿದ ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಯಾದವ್ ಅವರು ಈ ಬಗ್ಗೆ ತನಿಖೆ ನಡೆಸುವಂತೆ ಗುರುಗ್ರಾಮ್ ಪೊಲೀಸರಿಗೆ ಸೂಚಿಸಿದ್ದಾರೆ. ಬಂಧಿತ ಗಾಂಧಿನಗರ ಮೂಲದ ಮನಮೋಹನ್ ನನ್ನು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ಇನ್ನೋರ್ವ ಆರೋಪಿಗಾಗಿ ಶೋಧ ಮುಂದುವರಿದಿದ್ದು, ಆರೋಪಿಗಳು ಕದ್ದ ಹೂಕುಂಡಗಳು ಹಾಗೂ ಅಕ್ರಮ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…

Read More

ಮೇಘಾಲಯದಲ್ಲಿ ತೃಣಮೂಲ ಕಾಂಗ್ರೆಸ್ ಮುನ್ನಡೆ. ಟಿಎಂಸಿ 13 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.ಟಿಎಂಸಿಯನ್ನು ಬಂಗಾಳಿ ಪಕ್ಷ ಎಂದು ಕರೆಯುವ ಕುರಿತು ಎನ್‌ಪಿಪಿಯ ಕಾನ್ರಾಡ್ ಸಂಗ್ಮಾ ಮತ್ತು ಟಿಎಂಸಿಯ ಮುಕುಲ್ ಸಂಗ್ಮಾ ನಡುವೆ ಮಾತಿನ ಚಕಮಕಿ ನಡೆದಿದೆ. ಬಿಜೆಪಿ ಕೂಡ ‘ಬಂಗಾಳಿ’ ಪಕ್ಷ ಎಂದು ಕರೆದು ಸ್ಥಳೀಯರಲ್ಲಿ ಟಿಎಂಸಿ ವಿರುದ್ಧ ಭಯ ಹುಟ್ಟಿಸಲು ಯತ್ನಿಸಿತ್ತು. ಆದರೆ ಈ ಎಲ್ಲಾ ಪ್ರಯತ್ನಗಳು ವಿಫಲವಾಗಿರುವುದನ್ನು ಪ್ರಸ್ತುತ ಚುನಾವಣಾ ಚಿತ್ರಣ ತೋರಿಸುತ್ತದೆ. ರಾಜ್ಯದ ಮೇಘಾಲಯದಲ್ಲಿ ಎನ್‌ಪಿಪಿ ಉಲ್ಬಣಗೊಳ್ಳುತ್ತಲೇ ಇದೆ. ಮೇಘಾಲಯದಲ್ಲಿ ಎನ್‌ಪಿಪಿ 26, ಬಿಜೆಪಿ 12 ಮತ್ತು ಕಾಂಗ್ರೆಸ್ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್‌ಪಿಪಿಯ ಕಾನ್ರಾಡ್ ಸಂಗ್ಮಾ ಅವರು ಫಲಿತಾಂಶಕ್ಕೂ ಮುನ್ನವೇ ಸರ್ಕಾರ ರಚನೆಯ ಮಾತುಕತೆ ಆರಂಭಿಸಿದ್ದಾರೆ. ನಿನ್ನೆ ಮೇಘಾಲಯ ಮುಖ್ಯಮಂತ್ರಿ ಅಸ್ಸಾಂ ತಲುಪಿ ಬಿಜೆಪಿ ನಾಯಕ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಸಭೆ ನಡೆಸಿದರು. ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಬರುವುದಿಲ್ಲ ಎಂಬ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಈ…

Read More

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಭಾರತಕ್ಕೆ ಭೇಟಿ ನೀಡಿದ್ದು ನೆಟಿಜನ್‌ಗಳು ಕುತೂಹಲದಿಂದ ವೀಕ್ಷಿಸುತ್ತಿರುವ ಘಟನೆಯಾಗಿದೆ. ದೇಶದ ಹಲವು ಪ್ರಮುಖರನ್ನು ಬಿಲ್ ಗೇಟ್ಸ್ ಭೇಟಿ ಮಾಡಿರುವ ಸುದ್ದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಬಿಲ್ ಗೇಟ್ಸ್ ಇರುವ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ವೈರಲ್ ಆಗಿವೆ. ಭಾರತೀಯ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಮತ್ತು ಬಿಲ್ ಗೇಟ್ಸ್ ನಡುವಿನ ಸಭೆಯ ಚಿತ್ರಗಳು ಸಹ ಹೊರಬಿದ್ದಿವೆ. ಈ ಚಿತ್ರದಲ್ಲಿ ನೆಟ್ಟಿಗರನ್ನು ಬೆಚ್ಚಿ ಬೀಳಿಸುವ ಕುತೂಹಲಕಾರಿ ಸಂಗತಿಯೊಂದು ಬಹಿರಂಗವಾಗಿದೆ. ಆನಂದ್ ಮತ್ತು ಬಿಲ್ ಗೇಟ್ಸ್ ಹಳೆಯ ಸಹಪಾಠಿಗಳು! ಆನಂದ್ ಮತ್ತು ಬಿಲ್ ಗೇಟ್ಸ್ ಮಂಗಳವಾರ ಭೇಟಿಯಾದರು. ಬಿಲ್ ಗೇಟ್ಸ್ ತಮ್ಮ ಪುಸ್ತಕವನ್ನು ಆನಂದ್ ಅವರಿಗೆ ಉಡುಗೊರೆಯಾಗಿ ನೀಡಿದರು. ಆನಂದ್ ಅವರಿಗೆ ನಮಸ್ಕಾರಗಳು, ಪುಸ್ತಕದ ಮೊದಲ ಪುಟದಲ್ಲಿ ನನ್ನ ಸಹಪಾಠಿ ಎಂದು ಬರೆಯಲಾಗಿತ್ತು. ಆನಂದ್ ಈ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಾಗ, ಅವರು ಸಹಪಾಠಿಗಳೇ ಎಂದು ಹಲವರು ಆಶ್ಚರ್ಯ ಪಡುವ ಕಾಮೆಂಟ್‌ಗಳೊಂದಿಗೆ ಬಂದರು.…

Read More

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಜಾಧ್ವನಿಯಾತ್ರೆ ಇಂದು ಬೆಳಗಾವಿ ಖಾನಾಪುರ ತಾಲೂಕಿನ ಪ್ರವೇಶ ಮಾಡಿದ ಖಾನಾಪುರ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅದ್ದೂರಿಯಾಗಿ ಸ್ವಾಗತ ಮಾಡಿದರು. ಇದೇ ಸಂದರ್ಭದಲ್ಲಿ ಖಾನಾಪುರ್ ಬಸವೇಶ್ವರ ವೃತ್ತದಲೇ ಬಸವಣ್ಣನವರ ಮೂರ್ತಿಗೆ ಒಂದಿಸಿ ಡಾ. ಅಂಬೇಡ್ಕರ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ನಮನ ಸಲ್ಲಿಸಿ ಯಾತ್ರೆಯನ್ನು ಪ್ರಾರಂಭ ಮಾಡಿದರು. ಇದೇ ಮಾರ್ಗವಾಗಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಜನ ಸಂಕಲ್ಪ ಯಾತ್ರೆ ಸಾಗಿದ್ರೂ ಕೂಡ ಮಹಾಪುರುಷರ ಗಳಿಗೆ ಹಾಗೂ ಸ್ವತಂತ್ರ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಗಲಿ, ಛತ್ರಪತಿ ಶಿವಾಜಿ ಮಹಾರಾಜರ ಅವರನ್ನು ಸ್ಮರಣೆ ಹಾಗೂ ವಂದಿಸದೆ ಅವರ ಎಷ್ಟರ ಮಟ್ಟಿಗೆ ದೇಶ ಪ್ರೇಮ ಇದೆ ಎನ್ನುವುದು ಅಲ್ಲಿಗಿದ್ದ ಜನರು ಮಾತನಾಡುತ್ತಿದ್ದರು. ಖಾನಾಪುರ ಮಾರ್ಗವಾಗಿ ನಂದಗಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಮಧಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಸಮಾಧಿ ದರ್ಶನ ಪಡೆದರು. ಈ ಸಂದರ್ಭದಲ್ಲಿಕಾಂಗ್ರೆಸ್ ನ  ಮುಖಂಡರುಗಳಾದ ಹಾಗೂ ಕೆ ಪಿ ಸಿ ಸಿ ಕಾರ್ಯಧ್ಯಕ್ಷರಾದ…

Read More

ಬೆಳಗಾವಿ ತಾಲ್ಲೂಕಿನ ಪಂಥಬಾಳೇಕುಂದ್ರಿಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಸಿದ್ಧರಾಮಯ್ಯ, ದೇಶದಲ್ಲಿ ದಿನೇ ದಿನೇ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳವಾಗುತ್ತಿದೆ. ಇವತ್ತು ಕೂಡ 50 ರೂ ಹೆಚ್ಚಳ ಮಾಡಿದ್ದಾರೆ. ಮಜ್ಜಿಗೆ ಪೆನ್ಸಿಲ್ ಮೇಲೂ ಟ್ಯಾಕ್ಸ್ ಹಾಕಿದ್ದಾರೆ. ಹೆಣ್ಣು ಮಕ್ಕಳು ಬೆಲೆ ಏರಿಕೆಯಿಂದ ಹೈರಾಣಾಗಿದ್ದಾರೆ ಎಂದು ಕಿಡಿಕಾರಿದರು. ರೈತರಗೆ 6 ಸಾವಿರ ಕೊಟ್ಟಿದ್ದೇವೆ ಎಂದಿದ್ದಾರೆ. ರೈತರ ರಕ್ತ ಹೀರಿ ಸುಲಿಗೆ ಮಾಡಿದ್ದೀರಿ. ರೈತರ ರಕ್ತ ಹೀರಿ ಸುಲಿಗೆ ಮಾಡಿ ಹಣ ನೀಡುತ್ತಿದ್ದೀರಿ. ಮಿಸ್ಟರ್ ಮೋದಿ ಯಾಕೆ ಸುಳ್ಳು ಹೇಳ್ತಿರಾ..? ಎಂದು ವಾಗ್ದಾಳಿ ನಡೆಸಿದರು. ದೇಶದಲ್ಲಿ ಮತ್ತೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು ಗೃಹಬಳಕೆಯ ಗ್ಯಾಸ್ ಬೆಲೆ 50 ರೂ., ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 350 ರೂ. ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸಿದ್ಧರಾಮಯ್ಯ ಗುಡುಗಿದ್ದಾರೆ. ಮುರುಳಿ ಮನೋಹರ್ ಜೋಶಿ, ಅಡ್ವಾಣಿ ಅವರನ್ನ ಸೈಡ್ಲೈನ್ ಮಾಡಿದ್ದು ಯಾರು..? ಬಿಎಸ್ ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದು ಮೋದಿ…

Read More

ಕೋಲಾರದಲ್ಲಿ ಸಿದ್ಧರಾಮಯ್ಯ ಗೆದ್ದರೆ ಅವರು ಹೇಳಿದಂತೆ ನಾನು ಕೇಳುತ್ತೇನೆ ಎಂದು ಶಾಸಕ ಕೆಎಸ್​​ ಈಶ್ವರಪ್ಪ ಸವಾಲು ಹಾಕಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಸಿದ್ಧರಾಮಯ್ಯ ಒಮ್ಮೆ ಕೋಲಾರದಿಂದ ಸ್ಪರ್ಧಿಸುತ್ತೇನೆ ಎನ್ನುತ್ತಾರೆ. ಮತ್ತೊಮ್ಮೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳುತ್ತಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅವರಿಗೆ ಏನು ರೋಗ? ಎಂದು ಲೇವಡಿ ಮಾಡಿದರು. ಕೋಲಾರ ಕ್ಷೇತ್ರದ ದಲಿತರು ಸಿದ್ದರಾಮಯ್ಯರನ್ನು ಸೋಲಿಸಲು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಕಪಾಳಕ್ಕೆ ಹೊಡೆದು ಸೋಲಿಸಲು ಕಾಯುತ್ತಿದ್ದಾರೆ. ಜಿ ಪರಮೇಶ್ವರ್, ಮುನಿಯಪ್ಪ ಅವರನ್ನು ಸೋಲಿಸಿದ್ದನ್ನು ದಲಿತರು ಮರೆತಿಲ್ಲ ಎಂದು ಟಾಂಗ್ ನೀಡಿದರು. ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ಬೇಡ, ಕಾಂಗ್ರೆಸ್ಸಿಗರೇ ಸಾಕು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ​​ಗೆ ಜನ ಉತ್ತರ ಕೊಡುವ ಕಾಲ ಬಂದಿದೆ ಎಂದು ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ಬಾಗಲಕೋಟೆ: ಪ್ರಜೆಗಳ ಹಿತಾಸಕ್ತಿ ಕಾಪಾಡುವಲ್ಲಿ ಮತ್ತು ಸಾಮಾಜಿಕ ಕೊಡುಗೆ ನೀಡುವಲ್ಲಿ ವೀರಶೈವ ರಾಜಮನೆತನಗಳ ಕೊಡುಗೆ ಅಪಾರವಾದದ್ದು. ಇದರಲ್ಲಿ ಹಂಡೆ ಅರಸು ಮನೆತನವು ಮೊದಲ ಸಾಲಿನಲ್ಲಿದೆ ಎಂದು ಶಾಸಕು ಹಾಗೂ ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ಹೇಳಿದರು. ಬಸವೇಶ್ವರ ಶಾಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಕನ್ನಡ ಸ್ನಾತಕೋತ್ತರ ವಿಭಾಗ, ಬಿವಿವಿಎಸ್ ಸಂಶೋಧನಾ ಕೇಂದ್ರ ಹಾಗೂ ಕಲಬುರ್ಗಿ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡ ಹಂಡೆ ಅರಸರ ಸಾಂಸ್ಕೃತಿಕ ಕೊಡುಗೆಗಳು ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು ಗ್ರಂಥಗಳ ಬಿಡುಗಡೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಇತರ ಧರ್ಮಿಯ ರಾಜರಂತೆ ದಬ್ಬಾಳಿಕೆ ಮತ್ತು ಹಿಂಸೆಗಳನ್ನು ಪ್ರೋತ್ಸಾಹಿಸಿದೆ ಧಾರ್ಮಿಕ ನೆಲಗಟ್ಟಿನ ಮೇಲೆ ಆದರ್ಶ ಆಡಳಿತ ನೀಡಿರುವುದು ವೀರಶೈವ ರಾಜಮನೆತನಗಳು. ಇದಕ್ಕೆ ಮೈಸೂರು ಮತ್ತು ಸುರಪೂರ ರಾಜಾಡಳಿತವೆ ಸಾಕ್ಷಿಯಾಗಿದೆ ಎಂದರು. ಹಂಡೆ ಅರಸರ ಕೊಡುಗೆ ಅಪಾರವಾಗಿದ್ದು ಅವುಗಳನ್ನು ತಿಳಿದುಕೊಳ್ಳುವುದ ಅವಶ್ಯಕವಾಗಿದೆ. ಕರ್ನಾಟಕ ಇತಿಹಾಸದಲ್ಲಿ ತಮ್ಮದೆಯಾದ ಕೊಡುಗೆಕೊಟ್ಟ ಅರಸು ಮನೆತನಗಳ ಮೇಲೆ…

Read More

ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಮೊದಲಿಗೆ ಅಂಚೆ ಮತಗಳನ್ನು ಎಣಿಕೆ ಮಾಡಲಾಯಿತು. ಮೊದಲ ಫಲಿತಾಂಶಗಳು ಲಭ್ಯವಾದಾಗ ತ್ರಿಪುರಾದಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಬುಡಕಟ್ಟು ಪಕ್ಷ ತಿಪ್ರಾ ಮೋಟಾ ಮತ್ತು ಬಿಜೆಪಿ ರಾಜ್ಯದಲ್ಲಿ ಮುನ್ನಡೆ ಸಾಧಿಸಿವೆ. ತ್ರಿಪುರಿಯಲ್ಲಿ ಪ್ರಸ್ತುತ ಬಿಜೆಪಿ-31, ಎಡ ಕಾಂಗ್ರೆಸ್-2, ತಿಪ್ರಮೋಟಾ 5, ಇತರರು 00 ಮುನ್ನಡೆ ಸಾಧಿಸಿದ್ದಾರೆ. ಪೋಸ್ಟರ್ ಮತಪತ್ರಗಳನ್ನು ಎಣಿಸಿದಾಗ  ಮೇಘಾಲಯದಲ್ಲಿ ಎನ್‌ಪಿಪಿ (12) ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ತ್ರಿಪುರಾದ 60 ಕ್ಷೇತ್ರಗಳು, ಮೇಘಾಲಯ ಮತ್ತು ನಾಗಾಲ್ಯಾಂಡ್‌ನ 59 ಕ್ಷೇತ್ರಗಳ ಮತ ಎಣಿಕೆ ಮಾಡಲಾಯಿತು. ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ (ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ) ಅಂಚೆ ಮತಗಳಲ್ಲಿ 10, ಎನ್‌ಡಿಎಫ್ 1, ಕಾಂಗ್ರೆಸ್ 0 ಮತ್ತು ಇತರರು 0 ಮುನ್ನಡೆ ಸಾಧಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

“ತಮ್ಮ ಸಾಮರ್ಥ್ಯ ಮೀರಿ ದುಡಿಯುವ ಜೀವಿಗಳ ಸಾಲಿನಲ್ಲಿ ಆಟೋ ಚಾಲಕರು ಮುಂಚೂಣಿಯಲ್ಲಿರುತ್ತಾರೆ. ಚಾಲಕರ ಈ ಜನಪರ ಸೇವೆಗೆ ಹೃದಯಸ್ಪರ್ಶಿ” ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಶ್ರೀ ಹಿಂಡಲಗಾ ಗಣಪತಿ ಆಟೋ ಸ್ಟ್ಯಾಂಡ್ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಳೆ, ಗಾಳಿ, ಬಿಸಿಲು, ಚಳಿ ಎನ್ನದೇ ಹಗಲಿರುಳು ಶ್ರಮಿಸುವ ಆಟೋ ಚಾಲಕರ ಸೇವೆ ನಿಜಕ್ಕೂ ಅದ್ಭುತ. ಆಟೋ ಚಾಲಕರ ಹಿತರಕ್ಷಣೆಗೆ ನನ್ನಿಂದಾದ ನೆರವು ನೀಡಲು ಸದಾ ಬದ್ಧವಾಗಿದ್ದೇನೆ” ಎಂದು ಅವರು ಹೇಳಿದರು. ಈ ಸಮಯದಲ್ಲಿ ಸ್ಥಳೀಯ ಆಟೋ ಚಾಲಕರು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೀದರ್: ಔರಾದ ತಾಲೂಕಿನ ಕೊಲ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಬಳಿ ಮೂರು ಶೌಚಾಲಯಗಳನ್ನು ಕಟ್ಟಿಸಲಾಗಿದ್ದು, ಆದರೆ ಇಲ್ಲಿ ಪ್ರಮುಖವಾಗಿ ಬೇಕಾಗಿರುವ ನೀರಿನ ವ್ಯವಸ್ಥೆಯನ್ನೇ ಮಾಡಲಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಗುತ್ತಿಗೆದಾರರು ಕೇವಲ ಶೌಚಾಲಯ ಕಟ್ಟಿಸಲು ಮಾತ್ರವೇ ಉತ್ಸಾಹ ತೋರಿಸುತ್ತಿದ್ದಾರೆ. ಒಂದೇ ಪ್ರದೇಶದಲ್ಲಿ ಮೂರು ಶೌಚಾಲಯಗಳನ್ನು ಕಟ್ಟಿಸಲಾಗಿದೆ. ಆದರೆ ಇಲ್ಲಿ ನೀರಿನ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ತೀವ್ರವಾಗಿ ಪರದಾಡುತ್ತಿದ್ದಾರೆ. ಗುತ್ತಿಗೆದಾರರು ಅವ್ಯವಹಾರ ಮಾಡುವ ಉದ್ದೇಶದಿಂದ ಕೇವಲ ಶೌಚಾಲಯ ಕಟ್ಟಲು ಮುಂದಾಗಿದ್ದಾರೆ ಎಂದು ಆರೋಪಿಸಿರುವ ಇಲ್ಲಿನ ನಾಗರಿಕರು ನಮಗೆ ಮೊದಲು ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ವರದಿ: ಅರವಿಂದ ಮಲ್ಲಿಗೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More