Author: admin

ತೆಲಂಗಾಣ ಶಾಸಕ ಮತ್ತು ಅಮಾನತುಗೊಂಡ ಬಿಜೆಪಿ ನಾಯಕ ಟಿ ರಾಜಾ ಸಿಂಗ್ ಅವರು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತಿಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಓವೈಸಿ ಅತಿ ದೊಡ್ಡ ಹಸುಗಳ್ಳ ಎಂದು ಟೀಕೆ. ದೇಶಾದ್ಯಂತ ಗೋಹತ್ಯೆ ನಿಷೇಧವನ್ನು ತರುವಂತೆ ಕೇಂದ್ರ ಸರ್ಕಾರವನ್ನು ರಾಜಾ ಕೇಳಿಕೊಂಡರು. ರಾಜಾ ಅವರ ಟೀಕೆ ಕೊನೆಯ ದಿನವಾಗಿತ್ತು. ಇದರ ವಿಡಿಯೋ ಕೂಡ ಹೊರ ಬಂದಿದೆ. ಓವೈಸಿ ಅವರ ಕ್ಷೇತ್ರದಲ್ಲಿ ಅಕ್ರಮ ಕಸಾಯಿಖಾನೆಗಳಿದ್ದು, ಅಲ್ಲಿ ಗೋವು ಮತ್ತು ಗೂಳಿಗಳನ್ನು ಕೊಂದು ಮಾಂಸವನ್ನು ರಫ್ತು ಮಾಡಲಾಗಿದೆ. ಓವೈಸಿ ಗೋಪಾಲಕರನ್ನು ದೇಶಪ್ರೇಮಿಗಳು ಎಂದು ಕರೆದಿದ್ದಾರೆಯೇ ಎಂದೂ ಸಿಂಗ್ ಪ್ರಶ್ನಿಸಿದ್ದಾರೆ. ವಿವಾದಾತ್ಮಕ ವಿಡಿಯೋದಲ್ಲಿ ರಾಜಾ ರಾಜಸ್ಥಾನದ ಮುಖ್ಯಮಂತ್ರಿಯನ್ನೂ ಟೀಕಿಸಿದ್ದಾರೆ. ಗೋಹತ್ಯೆ/ಗೋಸಂರಕ್ಷಣೆ ವಿಚಾರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ರಾಜಕೀಯ ಮಾಡುತ್ತಿದ್ದಾರೆ ಎಂದು ರಾಜಾ ಆರೋಪಿಸಿದ್ದಾರೆ. ಗೋಸಂರಕ್ಷಣಾ ಗುಂಪುಗಳ ಬಗ್ಗೆ ಬಿಜೆಪಿ ಸರ್ಕಾರ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಓವೈಸಿ ಈ ಹಿಂದೆ ಟೀಕಿಸಿದ್ದರು. ಕೇಸರಿ ಪಕ್ಷದ ಗುರಿಗಳನ್ನು ಸಾಧಿಸಲು ಗೋರಕ್ಷಕರು…

Read More

ಬೆಳಗಾವಿ: , ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಬುಧವಾರ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪಂತಬಾಳೆಕುದ್ರಿಯಲ್ಲಿ ಸಮಾವೇಶ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಶಿಂಧೋಳಿಯಿಂದ ಮೆರವಣಿಗೆ ನಡೆಯಲಿದೆ. 5 ಸಾವಿರ ಬೈಕ್ ಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಅಲ್ಲಿಂದ ಪಂತಬಾಳೆಕುಂದ್ರಿಯ ವೈರ್ ಲೆಸ್ ಮೈದಾನಕ್ಕೆ ತೆರಳಿ ಅಲ್ಲಿ ಸಮಾವೇಶ ನಡೆಸಲಾಗುವುದು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ವಿನಯ ಕುಲಕರ್ಣಿ, ಜಮೀರ್ ಅಹ್ಮದ್ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಳ್ಳಲಿದ್ದಾರೆ. ಮೈದಾನದಲ್ಲಿ 25 ಸಾವಿರ ಖುರ್ಚಿಗಳನ್ನು ಹಾಕಲಾಗಿದ್ದು, ಸಮಾವೇಶದಲ್ಲಿ 30 ಸಾವಿರಕ್ಕಿಂತ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ ಮನವಿ ಮಾಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಮೈಸೂರು ನಗರ ಪೊಲೀಸ್ ಉಪ ಆಯುಕ್ತ ಹಾಗೂ ಆಯುಕ್ತರಾಗಿ ಕೆಲಸ ಮಾಡಿದ್ದ ಪೊಲೀಸ್ ಮಹಾನಿರೀಕ್ಷಕ( ಐಜಿಪಿ) ಕೆ.ಟಿ.ಬಾಲಕೃಷ್ಣ ಮಂಗಳವಾರ ಸೇವೆಯಿಂದ ನಿವೃತ್ತರಾದರು. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಕುಶಾವರ ಗ್ರಾಮದವರಾದ ಕೆ.ಟಿ.ಬಾಲಕೃಷ್ಣ ಇಲ್ಲಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಐದು ವರ್ಷ ಅಧ್ಯಾಪಕರಾಗಿದ್ದರು. ೧೯೯೭ರಲ್ಲಿ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಡಿವೈಎಸ್ಪಿಯಾಗಿ ವೃತ್ತಿ ಜೀವನವನ್ನು ಆರಂಭಿಸಿದ್ದರು. ಮೊದಲು ಚನ್ನಪಟ್ಟಣದಲ್ಲಿ ನಂತರ ಮಂಡ್ಯ ಡಿವೈಎಸ್ಪಿಯಾಗಿದ್ದರು. ಬಳಿಕ ಬಡ್ತಿ ಪಡೆದು ಚಾಮರಾಜನಗರ ಜಿಲ್ಲಾ ಹೆಚ್ಚುವರಿ ಎಸ್ಪಿ, ಮೈಸೂರು ನಗರ ಸಂಚಾರ ಹಾಗೂ ಅಪರಾಧ ಡಿಸಿಪಿ, ನಂತರ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದರು. ಐಪಿಎಸ್‌ಗೆ ಬಡ್ತಿ ಪಡೆದ ನಂತರ ಕಾರವಾರ, ಗದಗ, ಉಡುಪಿ, ಇನ್‌ಟಲಿಜೆನ್ಸ್ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಡಿಐಜಿಯಾಗಿ ಬಡ್ತಿ ಪಡೆದ ಬಳಿಕ ಮೈಸೂರು ನಗರ ಪೊಲೀಸ್ ಆಯುಕ್ತರಾಗಿದ್ದರು. ಮಂಡ್ಯ, ಚಾಮರಾಜನಗರ, ಮೈಸೂರಿನಲ್ಲಿ ಸೇವೆ ಸಲ್ಲಿಸುವಾಗ ೯ ವರ್ಷ ದಸರಾ ಚಟುವಟಿಕೆಯಲ್ಲಿ ಪಾಲ್ಗೊಂಡ ಅನುಭವ ಅವರದ್ದು. ಮೂರು ವರ್ಷದಿಂದ ಅಗ್ನಿ ಶಾಮಕ ಇಲಾಖೆ ಡಿಐಜಿಯಾಗಿ,…

Read More

7ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಇಂದು ಸರ್ಕಾರಿ ನೌರಕರು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಇಂದು ನಡೆಯಬೇಕಿದ್ದ ಎಸ್ ಎಸ್ ಎಲ್ ಸಿ ಪೂರ್ವಭಾವಿ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ಸರ್ಕಾರಿ ನೌಕರರ ಪ್ರತಿಭಟನೆಗೆ ಪ್ರೌಢ ಶಾಲಾ ಶಿಕ್ಷಕರ ಸಂಘವೂ ಬೆಂಬಲಿಸಿದ್ದು 80 ಸಾವಿರ ಪ್ರೌಢ ಶಾಲಾ ಶಿಕ್ಷಕರು ಗೈರಾಗುವ ಮೂಲಕ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಈ ಹಿನ್ನೆಯಲ್ಲಿ ಇಂದು ನಡೆಯಬೇಕಿದ್ದ ಹಿಂದಿ ಪೂರ್ವಭಾವಿ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ಮಾರ್ಚ್ 6 ರಂದು ಹಿಂದಿ ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

7ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರ ಮುಷ್ಕರ ಪರಿಣಾ ರಾಜ್ಯದ ಜನರ ಮೇಲೆ ಬೀರಿದ್ದು, ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುತ್ತಿದ್ದರೆ ಇತ್ತ ಇಂದು ನಡೆಯಬೇಕಿದ್ದ ಹಲವು ಪರೀಕ್ಷೆಗಳು ಮುಂದೂಡಿಕೆಯಾಗಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಚರ್ಚಿಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಎಸ್ ಷಡಾಕ್ಷರಿ, ಸಿಎಂ ಬೊಮ್ಮಾಯಿ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಹೇಳಿದ್ದಾರೆ. ಸರ್ಕಾರದ ಮಟ್ಟದಲ್ಲೂ ಚರ್ಚೆ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಕಾಲಾವಕಾಶ ಕೇಳಿದ್ದಾರೆ. ಸರ್ಕಾರ ಬೇಡಿಕೆ ಈಡೇರಿಸುತ್ತೆ ಎಂಬ ಭರವಸೆ ಇದೆ ಎಂದರು. ಮುಷ್ಕರ ಕೈಬಿಡಲ್ಲ. 11 ಗಂಟೆಯೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಜನರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶ ಅಲ್ಲ.ಸಿಎಂ ಏನು ಹೇಳ್ತಾರೆ ಅನ್ನೋದು ನೋಡಿ ನಮ್ಮ ತೀರ್ಮಾನವಾಗಲಿದೆ. ಇನ್ನೂ 2 ಗಂಟೆಯಲ್ಲಿ ಎಲ್ಲ ನಿರ್ಧಾರ ಆಗುತ್ತೆ ಎಂದು ಸಿ.ಎಸ್ ಷಡಾಕ್ಷರಿ ತಿಳಿಸಿದರು. ಬಿಬಿಎಂಪಿ ಅಧಿಕಾರಿಳು ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್…

Read More

ನವದೆಹಲಿ: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಇಂದು ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ದರವನ್ನು 50ರೂ ಹೆಚ್ಚಳ ಮಾಡಲಾಗಿದೆ. ಅಲ್ಲದೇ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 350.50 ರೂ ಹೆಚ್ಚಳ ಮಾಡಲಾಗಿದೆ ಎಂದು ಎಎನ್ಐ ವರದಿ ಮಾಡಿದೆ. ಈ ಮೂಲಕ ಸಿಲಿಂಡರ್ ಬೆಲೆ ಏರಿಕೆಯಿಂದ ಜನರಿಗೆ ಬಿಗ್ ಶಾಕ್ ನೀಡಲಾಗಿದೆ.14.2 ಕೆಜಿ ದೇಶೀಯ ದ್ರವೀಕೃತ ಪೆಟ್ರೋಲಿಯಂ ಅನಿಲ (Domestic liquefied petroleum gas – LPG) ಸಿಲಿಂಡರ್ ಬೆಲೆಯನ್ನು ( cylinder Price ) ಇಂದಿನಿಂದ ಜಾರಿಗೆ ಬರುವಂತೆ 50 ರೂ.ಗೆ ಹೆಚ್ಚಿಳಮಾಡಲಾಗಿದೆ. ಇತ್ತೀಚಿನ ಪರಿಷ್ಕರಣೆಯೊಂದಿಗೆ, ದೇಶೀಯ ಸಿಲಿಂಡರ್  domestic cylinder ) ಬೆಲೆ ದೆಹಲಿಯಲ್ಲಿ ಇಂದಿನಿಂದ ಪ್ರತಿ ಸಿಲಿಂಡರ್ ಗೆ 1103 ರೂ.ಗೆ ಏರಲಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ತ್ರಿಶ್ಶೂರ್ ಕಲ್ಲೇತುಮ್ಕರ ಇರಿಂಚದಪ್ಪಿಲ್ಲಿ ಶ್ರೀ ಶ್ರೀ ಕೃಷ್ಣ ದೇವಸ್ಥಾನ ತಿಟಂಪೆಟಿ ಯಂತ್ರ ಆನೆ . ‘ಇರಿನ್ಯಾಡಪಿಲ್ಲಿ ರಾಮನ್’ ಎಂಬ ಆನೆ ತೀರಿಹೋಗಿತ್ತು.ರೊಬೊಟಿಕ್ ಆನೆ ಕೇರಳದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ ಕೊಂಬು ಇರುವ ಹಬ್ಬಕ್ಕೆ ಮೆರುಗು ನೀಡಿದೆ. ಇರಿನಾಡಪಿಲ್ಲಿ ರಾಮನ ಎತ್ತರ ಹತ್ತೂವರೆ ಅಡಿ. 800 ಕೆಜಿ ತೂಕ. ನಾಲ್ಕು ಜನರನ್ನು ಹೊರಗೆ ಕರೆದೊಯ್ಯಬಹುದು. ನಿರ್ಮಾಣ ವೆಚ್ಚ 5 ಲಕ್ಷ ರೂ. ದುಬೈ ಉತ್ಸವಕ್ಕೆ ಯಾಂತ್ರಿಕ ಆನೆಗಳನ್ನು ತಯಾರಿಸಿದ ಹೀ ಆರ್ಟ್ಸ್ ಕ್ರಿಯೇಷನ್ಸ್ ಗೆ ಚಾಲಕುಡಿ ಪೋಟದ ಶಿಲ್ಪಿಗಳಾದ ಪಿ.ಪ್ರಶಾಂತ್, ಕೆ.ಎಂ.ಗಿನೇಶ್, ಎಂ.ಆರ್.ರಾಬಿನ್ ಮತ್ತು ಸ್ಯಾಂಟೋ ಜೋಸ್ ಅವರು 2 ತಿಂಗಳಲ್ಲಿ ಆನೆಯನ್ನು ತಯಾರಿಸಿದ್ದಾರೆ. ಆನೆಯ ತಲೆ, ಕಣ್ಣು, ಬಾಯಿ, ಕಿವಿ ಮತ್ತು ಬಾಲ ಎಲ್ಲವೂ ವಿದ್ಯುತ್‌ನಲ್ಲಿ ಕೆಲಸ ಮಾಡುತ್ತವೆ. ಇವುಗಳನ್ನು ಯಾವಾಗಲೂ ಚಲಿಸುವಂತೆ ಮಾಡಲಾಗುತ್ತದೆ. ರೋಬೋಟಿಕ್ ಆನೆಯು ಐದು ಮೋಟಾರ್‌ಗಳಿಂದ ಚಾಲಿತವಾಗಿದೆ. ಟ್ರಂಕ್ ಮಾತ್ರ ಕಂಟ್ರೋಲ್ ಆಗುವಂತೆ ನಿರ್ಮಾಣವಾಗಿದೆ. ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಎಂಬ…

Read More

ಕನಿಷ್ಠ ಒಂದು ಎಲ್‌ಐಸಿ ಪಾಲಿಸಿ ಇಲ್ಲದವರೂ ಕಡಿಮೆ ಇರುತ್ತಾರೆ. ಆದರೆ ಇದು ಪಾಲಿಸಿ ಗ್ರಾಹಕರನ್ನು ಕಡಿತಗೊಳಿಸುವ ನಗದು ಪಾವತಿಯಾಗಿದೆ. ಪ್ರೀಮಿಯಂ ಪಾವತಿಸಲು ನೀವು ಬ್ಯಾಂಕ್, ಎಲ್ಐಸಿ ಕಚೇರಿ ಅಥವಾ ಎಲ್ಐಸಿ ಏಜೆಂಟ್ ಅನ್ನು ಅವಲಂಬಿಸಬೇಕಾಗಿರುವುದು ಮುಖ್ಯ ಸವಾಲು. ಆದರೆ ಡಿಜಿಟಲ್ ಯುಗದ ಭಾಗವಾಗಿ ಎಲ್ಐಸಿ ತನ್ನನ್ನು ತಾನು ಆಧುನೀಕರಿಸಿಕೊಂಡಿದೆ. UPI ಮೂಲಕ ಗ್ರಾಹಕರು ಸುಲಭವಾಗಿ ಪಾವತಿಸಲು ಪಾಲಿಸಿ ಪ್ರೀಮಿಯಂ ಸಿದ್ಧವಾಗಿದೆ. Paytm, Phone Pay, Google Pay ನಂತಹ ಅನುಮೋದಿತ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಗ್ರಾಹಕರು ಮನೆಯಲ್ಲಿಯೇ LIC ಪಾಲಿಸಿ ಪ್ರೀಮಿಯಂ ಅನ್ನು ಪಾವತಿಸಬಹುದು. ಈ ಆಯ್ಕೆಯು ಬಹಳ ಹಿಂದಿನಿಂದಲೂ ಇದೆಯಾದರೂ, ಅನೇಕರಿಗೆ ಇದರ ಬಗ್ಗೆ ತಿಳಿದಿಲ್ಲ. ಹೆಚ್ಚಿನ ಜನರು ಇನ್ನೂ ಪಾಲಿಸಿ ಪಾವತಿಗಾಗಿ ಬ್ಯಾಂಕ್‌ಗಳು ಮತ್ತು ಎಲ್‌ಐಸಿ ಏಜೆಂಟ್‌ಗಳನ್ನು ಅವಲಂಬಿಸಿದ್ದಾರೆ. ಪ್ರೀಮಿಯಂ ಪಾವತಿಗಾಗಿ UPI ಅನ್ನು ಬಳಸುವುದು LIC ಅನ್ನು ಯಾವುದೇ ಇತರ ಪಾವತಿಯಂತೆ ಸುಲಭಗೊಳಿಸುತ್ತದೆ. ಪಾವತಿ ಅಪ್ಲಿಕೇಶನ್ ತೆರೆಯಿರಿ ಮತ್ತು ‘ಬಿಲ್‌ಗಳು ಮತ್ತು ರೀಚಾರ್ಜ್‌ಗಳು’ ಆಯ್ಕೆಯ ಮೇಲೆ ಕ್ಲಿಕ್…

Read More

ಖಿದ್ಮಾ ಫೌಂಡೆಶನ್ ಕರ್ನಾಟಕ ನೀಡುವ ಖಿದ್ಮಾ ಕಾವ್ಯ ಪ್ರಶಸ್ತಿಗೆ ಪ್ರೊ ಫರ್ಹಾನಾಜ಼್ ಆಯ್ಕೆ ಆಗಿದ್ದಾರೆ. ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೆಲಮಂಗಲ ಇಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಸಾಹಿತ್ಯ ಕ್ಷೇತ್ರ ದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಹಲವು ಪುಸ್ತಕ ಬರೆದಿದ್ದಾರೆ ಅಲ್ಲದೆ ಹಲವು ಪತ್ರಿಕೆ ಗಳಲ್ಲಿ ಇವರ ಲೇಖನ ಗಳು ಪ್ರಕಟ ಗೊಂಡು ಜನರ ಮೆಚ್ಚುಗೆಯನ್ನು ಪಡೆದಿವೆ.ಅಲ್ಲದೆ ಸಾಮಾಜಿಕ ಜಾಗೃತಿ ಚಟುವಟಿಕೆ ಗಳಲ್ಲಿ ಇವರು ಸಕ್ರಿಯ ರಾಗಿದ್ದಾರೆ. ಇವರ ಸಾಹಿತ್ಯ ಸೇವೆ ಪರಿಗಣಿಸಿ ಖಿದ್ಮಾ ಫೌಂಡೆಶನ್ ಕರ್ನಾಟಕ ತನ್ನ 4 ನೇ ವರ್ಷದ ವಾರ್ಷಿಕೊತ್ಸವ ಪ್ರಯುಕ್ತ ಮಾರ್ಚ್ 5 ರನ್ದು ಧಾರವಾಡ ದಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ಇವರಿಗೆ ಖಿದ್ಮಾ ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ವರದಿ : ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಕೊರಟಗೆರೆ:- ಬಿಜೆಪಿ ಪ್ರಬಲ ಆಕಾಂಕ್ಷಿತ ಅಭ್ಯರ್ಥಿ ಮುನಿಯಪ್ಪನವರು ಕ್ಷೇತ್ರದ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಾ.5 ರಂದು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ ಎಂದು ಬಿಜೆಪಿ ಯುವ ಮುಖಂಡ ಚೇತನ್ ಮುನಿಯಪ್ಪ ತಿಳಿಸಿದರು. ಪಟ್ಟಣದ ಕನಕದಾಸ ವೃತ್ತದ ಬಳಿ ಇರುವ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಾನ್ವಿತ ಯುವಕ-ಯುವತಿಯರು ಸಾಕಷ್ಟು ಇದ್ದು, ಉನ್ನತ ಹಂತದ ಶಿಕ್ಷಣ ಪಡೆದರು ಒಂದು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಉಳಿದಿದ್ದಾರೆ, ಅಂತಹವರಿಗಾಗಿ ಮಾರ್ಚ್ 05 ರ ಭಾನುವಾರದಂದು ಉದ್ಯೋಗ ಮೇಳ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಉದ್ಯೋಗ ಮೇಳದಲ್ಲಿ ರಾಜ್ಯಾದ್ಯಾಂತ ಹೆಸರಾಂತ 50ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿವೆ ಎಂದು ಹೇಳಿದರು. ಉದ್ಯೋಗ ಮೇಳದಲ್ಲಿ ಭಾಗವಹಿಸುವಂತಹ ಯುವಕ-ಯುವತಿಯರು ಆಧಾರ್ ಕಾರ್ಡ್, ಬಯೋಡಟಾ, ಪೋಟೊ, ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ತಪ್ಪದೇ ತನ್ನಿ, ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ಉದ್ಯೋಗ ಪತ್ರ ವಿತರಿಸಲಾಗುವುದು ಎಂದರು. ಈ ಕಾರ್ಯಕ್ರಮಕ್ಕೆ ಯುವಕರ ಕಣ್ಮಣಿ ಬಿಜೆಪಿ ಪಕ್ಷದ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರರವರು, ಆಂದ್ರಪ್ರದೇಶದ…

Read More