Subscribe to Updates
Get the latest creative news from FooBar about art, design and business.
- ತುಮಕೂರು | ನವೆಂಬರ್ 21—22ರಂದು ವಿಜ್ಞಾನ ವಸ್ತು ಪ್ರದರ್ಶನ
- ಸಾಲಬಾಧೆ: ರೈತ ಸಾವಿಗೆ ಶರಣು
- ನವೆಂಬರ್ 22: ತಲ್ಲಣಿಸದಿರು ಮನವೆ ಕಾರ್ಯಕ್ರಮ
- ವೈ.ಎನ್.ಹೊಸಕೋಟೆಯಲ್ಲಿ ಸಾಂಪ್ರದಾಯಿಕ ಗೋವಿನ ಹಬ್ಬ
- ವಿಜೃಂಭಣೆಯಿಂದ ನೆರವೇರಿದ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ
- ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾಹಿತಿಗಳು ಸರ್ಕಾರದ ಆಶ್ರಯ ಪಡೆಯುವುದನ್ನು ನಿಲ್ಲಿಸಬೇಕು: ಬಂಜಗೆರೆ ಜಯಪ್ರಕಾಶ್
- ದುಪ್ಪಟ್ಟು ಹಣ ಲಾಭ ಗಳಿಸುವ ಆಮಿಷಕ್ಕೆ ಬಲಿಯಾಗಿ 14 ಲಕ್ಷ ರೂ. ಕಳೆದುಕೊಂಡ ಹೊಟೇಲ್ ಸಿಬ್ಬಂದಿ!
Author: admin
ಪಾವಗಡ: ತಾಲೂಕಿನಲ್ಲಿ ಇರುವಂತಹ ಎಲ್ಲಾ ಸರ್ಕಾರಿ ನೌಕರರು ಮಾರ್ಚ್ 1ನೇ ತಾರೀಕಿನಂದು ಕರ್ತವ್ಯಕ್ಕೆ ಹಾಜರಾಗದೆ ತಮ್ಮ ಮನೆಗಳಲ್ಲಿ ಇದು 7ನೇ ವೇತನ ಆಯೋಗವನ್ನು ಜಾರಿ ಗೊಳಿಸಬೇಕು ಎಂದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಪಾವಗಡ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಾ.ಜಿ. ಕಿರಣ್ ತಿಳಿಸಿದರು. ಪಾವಗಡ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೋನಾ ಸಮಯದಲ್ಲಿ ಕರ್ನಾಟಕ ಸರ್ಕಾರದ ಸರ್ಕಾರಿ ನೌಕರರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಗಲಿರುಳು ಸೇವೆ ಮಾಡಿರುತ್ತೇವೆ. 5 ವರ್ಷಗಳು ಮುಗಿದ ನಂತರವೂ ಸಹ ಏಳನೇ ವೇತನ ಆಯೋಗವನ್ನು ಜಾರಿ ಮಾಡದೆ ಸರ್ಕಾರ ನಿರ್ಲಕ್ಷಿಸಿದೆ. ಇದಲ್ಲದೆ ಎನ್ ಪಿಎಸ್ ಸಹ ರದ್ದುಗೊಳಿಸಿ ಒಪಿಎಸ್ ಜಾರಿ ಮಾಡಬೇಕು ಎಂದು ಇದೇ ವೇಳೆ ಗಟ್ಟಿ ಧ್ವನಿಯಲ್ಲಿ ಪಾವಗಡ ತಾಲೂಕಿನ ಸರ್ಕಾರಿ ನೌಕರರು ಗುಡುಗಿದ್ದಾರೆ ಎಂದರು. ಇನ್ನು ಸರ್ಕಾರ ಈ ಒಂದು ಬೇಡಿಕೆಗಳನ್ನು ಫೆಬ್ರವರಿ 27ರ ಒಳಗಾಗಿ ಈಡೇರಿಸದಿದ್ದರೆ. ಮಾರ್ಚ್ ಒಂದನೇ ತಾರೀಖಿನಿಂದ ತಾಲೂಕಿನಲ್ಲಿ ಇರುವ ಎಲ್ಲಾ ಸರ್ಕಾರಿ ಶಾಲೆಗಳು,…
ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋದಿಯಾರವರ ಬಂಧನ ಖಂಡಿಸಿ ಬೆಂಗಳೂರಿನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಎದುರು ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ವೇಳೆ ಮಾತನಾಡಿದ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ದೆಹಲಿಯ ಆಮ್ ಆದ್ಮಿ ಪಾರ್ಟಿ ಪಕ್ಷವನ್ನು ವಿಭಜಿಸಿ ಬಿಜೆಪಿಯಲ್ಲಿ ವಿಲೀನಗೊಳಿಸಲು ಬಿಜೆಪಿ ನಾಯಕರು ಪ್ರಯತ್ನಿಸಿದರು. ಆದರೆ ಆಮ್ ಆದ್ಮಿ ಪಾರ್ಟಿ ನಾಯಕರಲ್ಲಿರುವ ಬದ್ಧತೆಯಿಂದಾಗಿ ಈ ಪ್ರಯತ್ನ ವಿಫಲವಾಯಿತು. ಇದರಿಂದ ಹತಾಶೆಗೊಂಡ ಬಿಜೆಪಿಯು ಬೆದರಿಕೆ ತಂತ್ರವಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಎಎಪಿ ನಾಯಕರಿಗೆ ಕಿರುಕುಳ ನೀಡುತ್ತಿದೆ. ದೆಹಲಿಯ ಅಬಕಾರಿ ನೀತಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ನೂತನ ಅಬಕಾರಿ ನೀತಿಯನ್ನು ದೆಹಲಿಯಲ್ಲಿ ಇನ್ನೂ ಜಾರಿಗೆ ತಂದಿಲ್ಲ ಹಾಗೂ ಹಲವು ರಾಜ್ಯಗಳಲ್ಲಿ ಇದೇ ನೀತಿ ಜಾರಿಯಲ್ಲಿದೆ. ಆದರೂ ಸಿಸೋದಿಯಾರವರನ್ನು ಕೇಂದ್ರ ಸರ್ಕಾರ ಟಾರ್ಗೆಟ್ ಮಾಡುತ್ತಿರುವುದು ಖಂಡನೀಯ” ಎಂದು ಹೇಳಿದರು. “ಸುಮಾರು ಒಂದು ವರ್ಷದಿಂದ ಕೇಂದ್ರ ಸರ್ಕಾರದ ತನಿಖಾಧಿಕಾರಿಗಳು ಸಿಸೋದಿಯಾರವರನ್ನು ಗುರಿಯಾಗಿಸಿಕೊಂಡು ದಾಳಿ…
ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಶ್ರೀ ಚೌಡೇಶ್ವರಿ ಶಿಕ್ಷಣ ಸಂಸ್ಥೆಯು 20 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದು, ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಟಿ.ಉಮೇಶ್ ತಿಳಿಸಿದರು. ಶಾಲೆಯಲ್ಲಿ ಹಮ್ಮಿಕೊಂಡಿದ್ದ 20ನೇ ವಾರ್ಷಿಕೋತ್ಸವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಗೆ ಮೂಲಭೂತ ಶಿಕ್ಷಣ ಅತ್ಯಗತ್ಯ. ಪ್ರಾಥಮಿಕ ಹಂತದಲ್ಲಿ ಕಲಿತ ಕಲಿಕೆಯು ಇಡೀ ಜೀವಮಾನದ ಕಲಿಕೆಯ ಮೇಲೆ ಗಾಢ ಪ್ರಭಾವ ಬೀರುತ್ತದೆ. ಹಾಗಾಗಿ ಮೊದಲ ಹಂತದ ಕಲಿಕೆಗೆ ನಮ್ಮ ಶಾಲೆಯಲ್ಲಿ ಹೆಚ್ಚು ಒತ್ತು ನೀಡುತ್ತಿದ್ದೇವೆ. ಇದರ ಫಲವಾಗಿ ವಿದ್ಯಾರ್ಥಿಗಳು ಮುಂದಿನ ಹಂತಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು. ಪ್ರತಿಭಾ ಕಾರಂಜಿ, ಸ್ಪರ್ಧಾಟಗಳು ಮತ್ತು ಪಠ್ಯ ಚಟುವಟಿಕೆಗಳಲ್ಲಿ ಎಲ್ಲಾ ಶಾಲೆಗಳಿಗೆ ಸ್ಪರ್ಧೆಗಳಲ್ಲಿ ಸವಾಲು ಒಡ್ಡುವ ರೀತಿಯಲ್ಲಿ ಪ್ರಗತಿ ಕಾಣುತ್ತಿರುವುದು ಹೆಮ್ಮ ಎನಿಸುತ್ತಿದೆ ಎಂದರು. ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಲೆಗಳನ್ನು ಮತ್ತು ನೃತ್ಯಗಳನ್ನು ಪ್ರದರ್ಶಿಸಿದರು. ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ರಾಮಚಂದ್ರಪ್ಪ,…
ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳ್ ನ ಕುವೆಂಪು ನಗರದ.ಎಸ್.ಕೆ.ಐ.ಹಿರಿಯ ಪ್ರಾಥಮಿಕ(ಆಂಗ್ಲ ಮಾಧ್ಯಮ) ಶಾಲೆಯಲ್ಲಿ ‘ಹೊಂಗನಸು’ ಎಂಬ ಶೀರ್ಷಿಕೆ ಅಡಿ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.’ ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ನಾಗೇಶ್ವರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಅಚ್ಚುವ ಮೂಲಕ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಮಾಜ ಸೇವಕರಾದ ಆರ್.ಟಿ.ಓ.ಮಲ್ಲಿಕಾರ್ಜುನ್, ಜೀವನದಲ್ಲಿ ಯಾವುದೇ ಸಾಧನೆ ಮಾಡಬೇಕಾದರೆ, ಕನಸು ಕಾಣಬೇಕು, ಕನಸ್ಸು ಕಂಡರೆ ಮಾತ್ರ ನನಸಾಗವುದು. ಮಕ್ಕಳ ಪ್ರತಿಭೆ ಕಾಣಬೇಕೆಂದರೆ ಇಂತಹ ಸುಂದರ ಸಂಜೆಯಂತಹ ಸಮಾರಂಭಗಳು ನಡೆಯಬೇಕೆಂದರು. ಶಾಲೆಯ ಮುಖ್ಯ ಶಿಕ್ಷಕಿಯಾದ ಆಯಿಶಾ ಪಾತಿಮಾ ಆವರು ಶಾಲೆಯ ವಾರ್ಷಿಕ ವರದಿ ಓದಿದರು. ಈ ಸಮಯದಲ್ಲಿ ಐದನೇಯ ತರಗತಿಯಲ್ಲಿ ನವೋದಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನವೋದಯ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತ್ತು. ಈ ಸಮಯದಲ್ಲಿ ಪುಟ್ಟಾಣಿ ಮಕ್ಕಳಿಂದ ನಮ್ಮ ನಾಡಿನ ಹಿರಿಮೆಯಾದ ದೇಶ ಭಕ್ತಿ ಗೀತೆ, ರೈತ ಗೀತೆ, ಭಕ್ತಿ ಗೀತೆ, ನಾಡಗೀತೆ ಹಾಗೂ ಚಲನಚಿತ್ರಗಳಿಗೆ ಬಣ್ಣ ಬಣ್ಣದ ಉಡುಪುಗಳನ್ನು ತೊಟ್ಟು ಮಕ್ಕಳು ಕುಣಿದ್ದು…
ಹಾಸನ: ಜಿಲ್ಲೆ ಹೊಳೆನರಸೀಪುರದ ತಾಲ್ಲೂಕು ಪಂಚಾಯಿತಿಯಲ್ಲಿ ಇಂದು ವಿಕಲಚೇತನರಿಗೆ 5% ಅನಿರ್ಭಂಧಿತ ಅನುದಾನದ ಅಡಿಯಲ್ಲಿ 23 ತ್ರಿ ಚಕ್ರ ಬೈಕ್ ವಿತರಣೆ ಮಾಡಲಾಯಿತು. ಹೊಳೆನರಸೀಪುರ ಶಾಸಕರಾದ ಎಚ್.ಡಿ.ರೇವಣ್ಣನವರ ಅದ್ಯಕ್ಷತೆಯಲ್ಲಿ ಹಾಸನ ಜಿಲ್ಲಾ ಪಂಚಾಯಿತಿಯ ಸದಸ್ಯರಾದ ಭವಾನಿ ರೇವಣ್ಣನವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಹೊಳೆನರಸೀಪುರ ಕೃಷಿ ಇಲಾಖೆಯ ಆವರಣದಲ್ಲಿ ಎಚ್.ಡಿ.ರೇವಣ್ಣ ನವರು ವಿಶೇಷ ಚೇತನರಿಗೆ ಬೈಕ್ ವಿತರಣೆ ಮಾಡಿದರು. ವಿಶೇಷ ಚೇತನರ ಕಲ್ಯಾಣ ಅಧಿಕಾರಿಗಳಾದ ಅನುಪಮಾ ಅವರು ಅಂಗವಿಕಲರಿಗೆ ರಸ್ತೆಯ ನಿಯಮಾವಳಿ ಬಗ್ಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯ E O ಆದ ಗೋಪಾಲ್ ರವರು ಹಾಗೂ ವಿವಿಧೋದ್ದೇಶ ಪುನರ್ ವಸತಿ ಕಾರ್ಯಕರ್ತರು ಕೆ.ಬಿ.ಹರೀಶ್.ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ವರದಿ: ಮಂಜು ಶ್ರವಣೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50s
ಕೃಷ್ಣರಾಜಪೇಟೆ: ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆಯಾಗಿ ವಳಗೆರೆಮೆಣಸ ಗ್ರಾಮದ ಜಯಂತಿ ಅವಿರೋಧವಾಗಿ ಆಯ್ಕೆಯಾದರು. ಇದೇ ವೇಳೆ ಕಾರ್ಯಕರ್ತರು ಸಂಭ್ರಮಾಚರಿಸಿದರು. ಈ ಹಿಂದಿನ ಅಧ್ಯಕ್ಷರಾದ ಸಾವಿತ್ರಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜಯಂತಿ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರವನ್ನು ಸಲ್ಲಿಸದ ಕಾರಣದಿಂದಾಗಿ ಚುನಾವಣಾಧಿಕಾರಿಗಳಾದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ನೂತನ ಅಧ್ಯಕ್ಷರ ಆಯ್ಕೆಯು ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು. ಸಂಭ್ರಮಾಚರಣೆಯಲ್ಲಿ ಮುಖಂಡರಾದ ಮಹದೇವೇಗೌಡ, ನಾಗೇಶ್, ಉಪಾಧ್ಯಕ್ಷ ಕುಮಾರ್, ಸದಸ್ಯರಾದ ಆರ್.ಶ್ರೀನಿವಾಸ್, ಫಯಾಜುಲ್ಲಾಖಾನ್, ರಮೇಶ್, ಸಾವಿತ್ರಮ್ಮ, ಪ್ರೇಮಚಂದ್ರಶೇಖರ್, ನೇತ್ರಾವತಿ, ರಮಾನಂದ, ಹರಿರಾಯನಹಳ್ಳಿ ದಿವೀಕುಮಾರ್, ಚನ್ನೇಗೌಡ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ದೇವೇಗೌಡ ಮತ್ತಿತರರು ಉಪಸ್ಥಿತರಿದ್ದರು. ವರದಿ: ಮಂಜು ಶ್ರವಣೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50s
ಯುಎನ್ ಸಭೆಯಲ್ಲಿ ಭಾಗವಹಿಸುತ್ತಿರುವ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಶ್’ನ ಪ್ರತಿನಿಧಿ. ವಿಶ್ವಸಂಸ್ಥೆಯ ಸಭೆಯಲ್ಲಿ ಮಾತನಾಡಿದ ಪ್ರತಿನಿಧಿ ವಿಜಯಪ್ರದಾ, ನಿತ್ಯಾನಂದನಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಸ್ವಯಂಘೋಷಿತ ದೇವಮಾನವ ಮತ್ತು ಅತ್ಯಾಚಾರ ಆರೋಪಿ ನಿತ್ಯಾನಂದ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ದ ಸ್ಥಾಪಕ ಮತ್ತು ಸಾರ್ವಭೌಮ ಎಂದು ಹೇಳಿದರು. ಫೆಬ್ರವರಿ 22 ರಂದು ನಡೆದ ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯ ಸಭೆಯಲ್ಲಿ, ಮಾ ವಿಜಯಪ್ರದಾ ನಿತ್ಯಾನಂದ ಅವರು ‘ಯುನೈಟೆಡ್ ನೇಷನ್ಸ್ ಆಫ್ ಕೈಲಾಸ’ ಎಂಬ ಕಾಲ್ಪನಿಕ ದೇಶವನ್ನು ಪ್ರತಿನಿಧಿಸಿದರು. ನಿತ್ಯಾನಂದನ ಆಶ್ರಮದಿಂದ ಮಗುವಿನ ನಾಪತ್ತೆ ಪ್ರಕರಣದ ಪೊಲೀಸ್ ತನಿಖೆಯ ನಡುವೆ ನಿತ್ಯಾನಂದ ಗುಜರಾತ್ ಮೂಲಕ ಹಾದು ಹೋಗುತ್ತಿದ್ದ. ಬಳಿಕ ಅಜ್ಞಾತ ಸ್ಥಳದಲ್ಲಿ ನಿತ್ಯಾನಂದ ‘ಕೈಲಾಸ’ ಎಂಬ ರಾಜ್ಯವನ್ನು ನಿರ್ಮಿಸಿದ ಎಂಬ ಮಾಹಿತಿ ಹೊರಬಿದ್ದಿದೆ. ನಿತ್ಯಾನಂದನ ಕಾಲ್ಪನಿಕ ದೇಶಕ್ಕೆ ವಿಶ್ವಸಂಸ್ಥೆಯಲ್ಲಿ ಸದಸ್ಯತ್ವ ನೀಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಕೈಲಾಸಂ ಅನ್ನು ಹಿಂದೂ ಧರ್ಮದ ಮೊದಲ ದೇಶ ಎಂದು ಪರಿಚಯಿಸುವ ಮೂಲಕ ಅದನ್ನು ಪ್ರತಿನಿಧಿಸಲು ಬಂದ ವಿಜಯಪ್ರದಾ…
ಗುಜರಾತ್‌ನ ವಲ್ಸಾದ್ ಜಿಲ್ಲೆಯ ಪೆಟ್ರೋಕೆಮಿಕಲ್ ಕಂಪನಿಯಲ್ಲಿ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.ಸರಿಗಮ್ ಜಿಐಡಿಸಿಯ ಪೆಟ್ರೋಕೆಮಿಕಲ್ ಕಂಪನಿಯಲ್ಲಿ ಸ್ಫೋಟದ ನಂತರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸತ್ತವರನ್ನು ಇನ್ನೂ ಗುರುತಿಸಲಾಗಿಲ್ಲ ಮತ್ತು ಸ್ಫೋಟದ ಕಾರಣ ತಿಳಿದುಬಂದಿಲ್ಲ. ”- ವಲ್ಸಾದ್ ಎಸ್ಪಿ ವಿಜಯ್ ಸಿಂಗ್ ಗುರ್ಜರ್ ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50s
ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ತೃಣಮೂಲ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಖಾತೆಯನ್ನು ಮಂಗಳವಾರ ಹ್ಯಾಕ್ ಮಾಡಲಾಗಿದೆ. ಹ್ಯಾಕರ್‌ಗಳು ಪಾರ್ಟಿ ಅಕೌಂಟ್‌ನ ಡಿಸ್‌ಪ್ಲೇ ಇಮೇಜ್ ಅನ್ನು ಬದಲಾಯಿಸಿದ್ದಾರೆ ಮತ್ತು ಅದನ್ನು ‘ಯುಗಾ ಲ್ಯಾಬ್ಸ್’ ಎಂದು ಮರುನಾಮಕರಣ ಮಾಡಿದ್ದಾರೆ. ಸಮಸ್ಯೆ ಬಗೆಹರಿಸಲು ಪ್ರಯತ್ನ ಆರಂಭಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹ್ಯಾಕಿಂಗ್ ಆದರೂ, ಖಾತೆಯಿಂದ ಯಾವುದೇ ಪೋಸ್ಟ್ ಕಾಣಿಸಿಕೊಂಡಿಲ್ಲ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ವರದಿಗಳ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ ಎಂಬುದು ಗಮನಾರ್ಹ. ಯುಗಾ ಲ್ಯಾಬ್ಸ್ ಯುಎಸ್ ಮೂಲದ ಬ್ಲಾಕ್‌ಚೈನ್ ತಂತ್ರಜ್ಞಾನ ಕಂಪನಿಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50s
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಎನ್‌ಕೌಂಟರ್. ಮಂಗಳವಾರ ಬೆಳಗ್ಗೆ ಪದಗಂಪುರ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದಿದೆ. ಓರ್ವ ಉಗ್ರನನ್ನು ಸೇನೆ ಹತ್ಯೆ ಮಾಡಿಲಾಗಿದೆ. ಎನ್‌ಕೌಂಟರ್‌ನಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದು, ಮೂಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರದೇಶದಲ್ಲಿ ಇನ್ನಷ್ಟು ಉಗ್ರರು ಅಡಗಿರುವ ಸುಳಿವು ಸಿಕ್ಕಿದೆ. ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಘರ್ಷಣೆ ಮುಂದುವರಿದಿದೆ. ಈ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ತಂಡವು ಪ್ರದೇಶವನ್ನು ಸುತ್ತುವರೆದಿದೆ. ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿದ್ದರಿಂದ, ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಸೇನೆಗೆ ಭಯೋತ್ಪಾದಕನ ಶವ ಪತ್ತೆಯಾಗಿಲ್ಲ ಎಂದು ಟೈಮ್ಸ್ ನೌ ವರದಿ ಮಾಡಿದೆ. ಕಾಶ್ಮೀರಿ ಪಂಡಿತ್ ಗಾರ್ಡ್ ಸಂಜಯ್ ಶರ್ಮಾ ಅವರನ್ನು ಪುಲ್ವಾಮಾದ ಅಚಾನ್‌ನಲ್ಲಿರುವ ಅವರ ಮನೆಯ ಬಳಿ ಭಯೋತ್ಪಾದಕರು ಗುಂಡಿಕ್ಕಿ ಕೊಂದ ಎರಡು ದಿನಗಳ ನಂತರ ಎನ್‌ಕೌಂಟರ್ ವರದಿಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ…