Author: admin

ತುರುವೇಕೆರೆ: ತಾಲ್ಲೂಕಿನಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನವರನ್ನು ನೋಡಿ ಹೆಚ್ಚಿನ ಮತಗಳನ್ನು ವೀರಶೈವರು ನೀಡಿದ್ದಾರೆಯೇ ಹೊರತು ಶಾಸಕರ ಮುಖವನ್ನು ನೋಡಿ ಅಲ್ಲ ಎಂದು ಮಾಜಿ ಬಿ.ಜೆ.ಪಿ ಅಧ್ಯಕ್ಷ ಹೆಡಗೀಹಳ್ಳಿ ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಪ್ರವಾಸಿಮಂದಿರದಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಕೆಲವರು ಹೇಳಿಕೆ ನೀಡಿ ಎಲ್ಲ ವೀರಶೈವರ ಬೆಂಬಲ ಬಿ.ಜೆ.ಪಿ. ಗೆ ಇದೆಯೆಂದು ತಿಳಿಸಿರುವುದು ಸತ್ಯಕ್ಕೆ ದೂರವಾದ ವಿಚಾರ. ಇವರುಗಳು ಸ್ವಾರ್ಥಕ್ಕಾಗಿ ಸಮಾಜವನ್ನು ಹಾಳುಮಾಡುವ ಹುನ್ನಾರವಾಗಿದ್ದು ವೀರಶೈವರು ಕೇವಲ ಒಂದೇ ಪಕ್ಷಕ್ಕೆ ಸೀಮಿತರಾದವರಲ್ಲ ಸಮಾಜದ ಹಲವಾರು ಮುಖಂಡರುಗಳು ಬಿ.ಜೆ.ಪಿ. ಪಕ್ಷದಲ್ಲಿ ಕಡೆಗಣಿಸಿದ್ದರಿಂದ ಬೇಸತ್ತು ಪಕ್ಷ ತೊರೆಯುವ ನಿರ್ದಾರ ಮಾಡಿದ್ದಾರೆ. ಅದರಲ್ಲಿ ನಾನೂ ಒಬ್ಬ ಈಗಾಗಿ ನಾನು ಜೆ.ಡಿ.ಎಸ್. ಸೇರಿದ್ದೇನೆ ಇನ್ನು ಹಲಾವಾರು ಮುಖಂಡರುಗಳು ನಮ್ಮನ್ನು ಹಿಂಬಾಲಿಸಲಿದ್ದಾರೆ ಇದಕ್ಕೆ ಇಲ್ಲಿ ಸೇರಿರುವ ಸಮಾಜದ ನೂರಾರು ಮುಖಂಡರೇ ಸಾಕ್ಷಿ ಎಂದು ಹೇಳಿದರು. ನಾನು ಯಾವುದೇ ಕಾರಣಕ್ಕೂ ಆಸೆ ಆಮಿಷಕ್ಕೆ ಒಳಗಾಗಿ ಪಕ್ಷವನ್ನು ತೊರೆದಿಲ್ಲ, ಅಲ್ಲಿ ಕಾರ್ಯಕರ್ತರಿಗೆ ಆದಂತಹ ಅನ್ಯಾಯವನ್ನು…

Read More

ತುರುವೇಕೆರೆ: ನನಗೆ ಕ್ಷೇತ್ರದ ಜನತೆಯ ಜೊತೆ ಒಡನಾಟವಿದ್ದು, ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇನೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನನಗೆ ನಿಮ್ಮ ಸೇವೆಯನ್ನು ಮಾಡುವ ಅವಕಾಶ ಸಿಗುತ್ತದೆ ಎಂಬ ಆಶಯವನ್ನು ಕೆ. ಆರ್. ಎಸ್. ಪಕ್ಷದ ಸಂಭಾವ್ಯ ಅಭ್ಯರ್ಥಿ ರಾಮ್ ಪ್ರಸಾದ್ ವ್ಯಕ್ತಪಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಸತತ ಎರಡು ವರ್ಷಗಳಿಂದ ಜಿಲ್ಲಾಧ್ಯಕ್ಷರ ನಿರ್ದೇಶನದಂತೆ ಕ್ಷೇತ್ರದ ಜನತೆಯ ನಾಡಿಮಿಡಿತ ಅರಿಯುವ ಕೆಲಸವನ್ನು ಮಾಡುತಿದ್ದೇನೆ ಹಾಗೂ ಕ್ಷೇತ್ರದ ತುಂಬಾ ಪ್ರವಾಸಮಾಡಿ ಜನರ ನಾಡಿಮಿಡಿತ ಅರಿಯುವ ಕೆಲಸ ಮಾಡಿದ್ದೇನೆ ಎಂದು ಅವರು ತಿಳಿಸಿದರು. ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಕುಡಿಯುವ ನೀರಿನ ಸಮಸ್ಯೆ, ರಸ್ತೆ ಮತ್ತು ರೈತರಿಗೆ ನೀಡುವ ತ್ರೀಫೇಸ್ ವಿದ್ಯುತ್ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ನಮ್ಮ ತಾಲ್ಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಹಾಗೂ ಸರ್ಕಾರಿ ಕಚೇರಿಗಳಲ್ಲಿ ತಾಂಡವವಾಡುತ್ತಿರುವ ಲಂಚಕೋರತನವನ್ನು ದಮನ ಮಾಡುವ ನಿಟ್ಟಿನಲ್ಲಿ…

Read More

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಜಮಗುಳಿ ಗ್ರಾಮಸ್ಥರು ಇತ್ತೀಚೆಗೆ ಮತದಾನ ಬಹಿಷ್ಕರಿಸಿದ ಬೆನ್ನಲ್ಲೇ ಇದೀಗ ಮತ್ತೆ ಕೆಲ ಗ್ರಾಮದ ಜನರು ಮತದಾನ ಬಹಿಷ್ಕರಿಸಿದ್ದಾರೆ. ಸಿದ್ದಾಪುರ ತಾಲ್ಲೂಕಿನ ಕಾನೂರು, ಶ್ರೀನಿವಾಸಜಡ್ಡಿ, ಹೊಸಕೊಪ್ಪ ಗ್ರಾಮದ ಜನರು “ರಾಜಕಾರಣಿಗಳಿಗೆ ನಮ್ಮ ಊರಿಗೆ ಪ್ರವೇಶವಿಲ್ಲ” ಎಂದು ನಾಮಫಲಕಗಳನ್ನು ಹಾಕಿದ್ದು, ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹಳ್ಳ ದಾಟಲು ತೂಗು ಸೇತುವೆ ನಿರ್ಮಿಸಿ ಕೊಡಿ ಎಂದು ಹಲವು ವರ್ಷಗಳಿಂದ ಬೇಡಿಕೆ ಇತ್ತು. ಕಳೆದ 10 ವರ್ಷಗಳಿಂದ ಮನವಿ ಮಾಡಿದರೂ ಯಾವೊಬ್ಬ ಜನಪ್ರತಿನಿಧಿಗಳು ಗಮನ ಹರಿಸಿಲ್ಲ. ಇನ್ನೂ ಮಳೆಗಾಲದಲ್ಲಿ ಹಳ್ಳ ತುಂಬಿ ಹರಿದು ಜನರ ಓಡಾಟಕ್ಕೆ ಪರದಾಡುವ ಸ್ಥಿತಿಯಿದೆ. ಆದರೂ ಜನರ ಸಂಕಷ್ಟಕ್ಕೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸಿಲ್ಲ. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ ಜಿಲ್ಲೆಯ ರಾಯಬಾಗ (Raibag) ತಾಲೂಕಿನ ಮೇಖಳಿ ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ಸಿದ್ದಪ್ಪ ರಾಜಂಗಳೆ ಎಂಬಾಕೆ ಕಮಿಷನ್ ಕಿರುಕುಳಕ್ಕೆ ಬೇಸತ್ತು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಗ್ರಾಮದ ಅಭಿವೃದ್ಧಿ ಕೆಲಸಗಳಿಗಾಗಿ ಕಾಮಗಾರಿ ಅನುಮೋದನೆಗೆ ಪಂಚಾಯಿತಿ ಅಧಿಕಾರಿಗಳಿಂದ ಶೇ. 30 ಕಮಿಷನ್ ಬೇಡಿಕೆ ಇದೆ. ಆದರೆ, ಕಮಿಷನ್ ನೀಡಲು ನನ್ನ ಕೈಯಿಂದ ಸಾಧ್ಯವಾಗದೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸುಧಾ ಅವರು ಪತ್ರದಲ್ಲಿ ತಿಳಿಸಿದ್ದಾರೆ. ಪಂಚಾಯತಿಯ 14 ಮತ್ತು 15ನೇ ಹಣಕಾಸು, ಉದ್ಯೋಗ ಖಾತ್ರಿ ಯೋಜನೆ ಅನುದಾನ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುಮೋದನೆಗೆ ಕಮಿಷನ್ ಬೇಡಿಕೆ ಇಡುತ್ತಿದ್ದಾರೆ. ಕ್ರಿಯಾಯೋಜನೆ ಅನುಮೋದನೆಗಾಗಿಯು ಮುಂಚಿತವಾಗಿ ಶೇ. 3 ರಷ್ಟು ಹಣವನ್ನು ನೀಡಬೇಕಿದೆ. ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಮುಗಂಡ ಹಣ ನೀಡಲು ಪಿಡಿಓ ಮಂಜುನಾಥ್ ದಳವಾಯಿ ಅವರು ಕಮಿಷನ್ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಬಸವಣ್ಣ ದೇವಸ್ಥಾನದ ಅರ್ಚಕ ಪ್ರಕಾಶ್ ಕುಂದಗೋಳಮಠ ಎಂಬುವರಿಗೆ ಗ್ರಾಮಸ್ಥರು ಕ್ಷುಲ್ಲಕ ವಿಚಾರಕ್ಕಾಗಿ ದೇವಸ್ಥಾನದಲ್ಲಿ ಪೂಜಾರಿಯನ್ನು ಸ್ಥಳೀಯರೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹುಬ್ಬಳ್ಳಿಯ ಕಂಪ್ಲಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಪೂಜೆಯ ವಿಚಾರವಾಗಿ ಪೂಜಾರಿ ಮತ್ತು ಗ್ರಾಮಸ್ಥರ ನಡುವೆ ಗಲಾಟೆ ನಡೆದಿದೆ. ಅದು ವಿಕೋಪಕ್ಕೆ ಹೋಗಿ ಪೂಜಾರಿಯನ್ನು ಮನಬಂದಂತೆ ಥಳಿಸಿದ್ದಾರೆ. ಪೂಜಾರಪ್ಪ ಪ್ರಕಾಶ್ ಕುಂದಗೋಳಮಠ ತುಂಬಾ ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಅರ್ಚಕನ ನಡವಳಿಕೆಯಲ್ಲಿ ಬದಲಾವಣೆಯಾಗಿದೆ ಎಂದು ಗ್ರಾಮಸ್ಥರು ಹೊಸ ಅರ್ಚಕರ ನೇಮಕಕ್ಕೆ ಚಿಂತನೆ ನಡೆಸಿದ್ದರು. ಆದರೆ ಗ್ರಾಮಸ್ಥರ ಈ ನಿರ್ಧಾರಕ್ಕೆ ಪ್ರಕಾಶ್ ಒಪ್ಪಿಗೆ ನೀಡಿರಲಿಲ್ಲ. ಈ ವಿಚಾರವಾಗಿ ದೇವಸ್ಥಾನ ಆವರಣದಲ್ಲಿ ಗಲಾಟೆ ಆರಂಭವಾಗಿದೆ. ಇನ್ನೂ ಗಲಾಟೆಯಲ್ಲಿ ಅರ್ಚಕ ಪ್ರಕಾಶ್‌ಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಜಗಳ ಬಿಡಿಸಲು ಬಂದ ಅರ್ಚಕನ ಮಗನಿಗೂ ಗ್ರಾಮಸ್ಥರು ಥಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಹಿಳಾ ಪೊಲೀಸ್​ ಕಾನ್ಸ್​​ಟೇಬಲ್  ಗೀತಾ (32) ​ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕೆಎಸ್​ಆರ್​​ಪಿ ವಸತಿಗೃಹದಲ್ಲಿ ನಡೆದಿದೆ. ಗೀತಾ ಅನಾರೋಗ್ಯದ ಕಾರಣ ಮಧ್ಯಾಹ್ನ ಕೆಲಸದಿಂದ ಮನೆಗೆ ಬಂದಿದ್ದರು. ಮನೆಯಲ್ಲಿದ್ದ ಪತಿಯನ್ನು ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಬರಲು ಕಳುಹಿಸಿದ್ದಾರೆ. ಹೀಗೆ ಹೋದ ಪತಿ, ಒಟಿಪಿಗಾಗಿ ಗೀತಾಗೆ ಕರೆ ಮಾಡಿದಾಗ ಆಕೆ ಉತ್ತರಿಸಿಲ್ಲ. ನಂತರ ಮನೆಗೆ ವಾಪಸ್ಸು ಬಂದು ನೋಡಿದಾಗ ಗೀತಾ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಚಾಮರಾಜನಗರ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್, ಮರಳುಗಾಡಿನಲ್ಲಿದ್ದ ನಮಗೆ ತೊರೆ, ಕೆರೆ, ನದಿ ದಾಟಿಸಿ ಈಗ ಸಮುದ್ರದ ಬಳಿ ಕಾಂಗ್ರೆಸ್ ತಂದು ನಿಲ್ಲಿಸಿದೆ ಎಂದು ಹಾಸ್ಯ ನಟ ಸಾಧುಕೋಕಿಲ ಹೇಳಿದರು. ಗುಂಡ್ಲುಪೇಟೆಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಈಗ ನಾವು ದೊಡ್ಡ-ದೊಡ್ಡ ಬಿಲ್ಡಿಂಗ್, ಐಷರಾಮಿ ಜೀವನ, ಫ್ಲೈ ಓವರ್ ನೋಡುತ್ತಿದ್ದೇವೆ, ಆದರೆ ಸ್ವಾತಂತ್ರ್ಯ ಬಂದ ಬಳಿಕ ಇಷ್ಟು ದಿನ ನಮ್ಮನ್ನು ಕರೆತಂದಿದ್ದು ಕಾಂಗ್ರೆಸ್ ಎಂದರು. ಕಾಂಗ್ರೆಸ್ ಗೆ ಮೋಸ ಮಾಡಿದರೇ ತಂದೆತಾಯಿಗೆ ಮೋಸ ಮಾಡಿದಂತೆ, ಕಾಂಗ್ರೆಸ್ ಗೂ ಮತ್ತು ಜನರಿಗೂ ಇರುವ ಸಂಬಂಧ ಕೇವಲ ರಾಜಕೀಯದ್ದಲ್ಲ, ಹೃದಯದ ಸಂಬಂಧ ಎಂದರು. ಕಾಂಗ್ರೆಸ್ ಗೆ ಸಿದ್ದರಾಮಯ್ಯ ಹುಲಿ ಇದ್ದಂತೆ ಡಿ.ಕೆ.ಶಿವಕುಮಾರ್ ಸಿಂಹ ಇದ್ದಂತೆ ಇವರಿಬ್ಬರು ಇದ್ದ ಮೇಲೆ ಬೇರೆಯವರು ಏತಕ್ಕೆ, ಕಾಂಗ್ರೆಸ್ ನವರಿಗೆ ಓಟ್ ಹಾಕಿ ಎಂದು ಬೇಡಬೇಕಾ..?? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಗೆ ಮತ ಹಾಕುವುದು ನಮ್ಮ ಕರ್ತವ್ಯ, ಕಾಂಗ್ರೆಸ್ ಗೆ ಮತ ಹಾಕದಿದ್ದರೇ ತಂದೆ-ತಾಯಿಗೆ ಮೋಸ…

Read More

ರಾಜ್ಯ ಕಾಂಗ್ರೆಸ್ ಪಕ್ಷವು ಮೂರು ಹಂತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಫೆಬ್ರವರಿ 27 ರಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಫೈನಲ್ ಆಗಲಿದೆ ಎನ್ನಲಾಗಿದೆ. ಮೂರು ಹಂತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಯಾವುದೇ ಗೊಂದಲವಿಲ್ಲದ 140-150 ಕ್ಷೇತ್ರಗಳ ಮೊದಲ ಪಟ್ಟಿ, ಗೊಂದಲ ಬಗೆಹರಿಸಿಕೊಂಡ 30-40 ಅಭ್ಯರ್ಥಿಗಳ ಎರಡನೇ ಪಟ್ಟಿ, ಬಹಳಷ್ಟು ಗೊಂದಲ, ಸೋಲುವ ಆತಂಕವಿರುವ ಕ್ಷೇತ್ರಗಳ ಮೂರನೇ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕಾಂಗ್ರೆಸ್ ನವರ ಬೂಟಾಟಿಕೆ ಮಾತು, ಸುಳ್ಳು ಹೇಳುವ ಚಾಳಿಯಿಂದ ಸುಳ್ಳಿನ ಸುಳಿಯಲ್ಲಿ ಸಿಲುಕಿದ್ದಾರೆ. ತಮ್ಮ ಕಾಲದ ಭ್ರಷ್ಟಾಚಾರಗಳನ್ನು. ಜಾತಿಗಳನ್ನು ಒಡೆಯುವ ಕೆಲಸವನ್ನು ಮಾಡಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಭಾಗವಹಿಸಿ ಮಾತನಾಡಿದ ಅವರು, ಭ್ರಷ್ಟ ಕಾಂಗ್ರೆಸ್ ನ್ನು ಶಾಶ್ವತವಾಗಿ ಜನರು ಮನೆಗೆ ಕಳಿಸಲಿದ್ದಾರೆ ಎಂದರು. ಹಾಸನ ಬಹಳ ವರ್ಷಗಳಿಂದ ಒಂದೇ ಪಕ್ಷದ ಹಿಡಿತದಲ್ಲಿದ್ದು, ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. 3 ವರ್ಷಗಳಿಂದ ಭಾಜಪ ಸರ್ಕಾರದ ಆಡಳಿತವನ್ನು ಜನರು ನೋಡಿದ್ದಾರೆ. ಹಲವು ವರ್ಷಗಳ ಸಮಸ್ಯೆಗಳನ್ನು ಕಗ್ಗಂಟಾಗಿಸಿ, ರಾಜ್ಯದ ಪ್ರಗತಿಯನ್ನು ಕುಂಠಿತಗೊಳಿಸಲಾಗಿತ್ತು. ಈ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಮಲ ಅರಳಿಸಬೇಕಿದೆ. ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಲಿರುವ ವಿಶ್ವಾಸ ನಮಗಿದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

9-3-2023: ಕನ್ನಡ, ಅರೇಬಿಕ್ 11-3-2023: ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ 13-3-2023: ಅರ್ಥಶಾಸ್ತ್ರ 14-3-2023: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ 15-3-2023: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ 16-03-2023: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ 17-3-2023: ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್ 18-3-2023: ಭೂಗೋಶಶಾಸ್ತ್ರ, ಜೀವಶಾಸ್ತ್ರ 20-3-2023: ಇತಿಹಾಸ, ಭೌತಶಾಸ್ತ್ರ 21-3-2023: ಹಿಂದಿ 23-3-2023: – ಇಂಗ್ಲೀಷ್ 25-3-2023: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ 27-3-2023: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ 29-03-2023: ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ ಮಾರ್ಚ್ 9 ರಿಂದ ಮಾರ್ಚ್ 29 ರವರೆಗೂ ದ್ವೀತಿಯ ಪಿಯು ಪರೀಕ್ಷೆಗಳು ನಡೆಯಲಿದ್ದು, ಒಟ್ಟು 7,27,387 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್,…

Read More