Author: admin

ಚೀನಾ ವಿಶ್ವದ ಮೊದಲ ಹೈಡ್ರೋಜನ್ ಅರ್ಬನ್ ರೈಲನ್ನು ಪ್ರಾರಂಭಿಸಿದೆ. ಶಾಂಘೈನಲ್ಲಿ ನಡೆದ ಚೀನಾ ಬ್ರಾಂಡ್ ಡೇ ಕಾರ್ಯಕ್ರಮದಲ್ಲಿ ವಿಶ್ವದ ಮೊದಲ ಜಲಜನಕ ಚಾಲಿತ ನಗರ ರೈಲನ್ನು ಅನಾವರಣಗೊಳಿಸಲಾಯಿತು. ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (CRRC) ನಿರ್ಮಿಸಿದ ಹಸಿರು ಮತ್ತು ಕಡಿಮೆ ಇಂಗಾಲದ ರೈಲು 600 ಕಿಮೀ ವ್ಯಾಪ್ತಿಯೊಂದಿಗೆ 160 ಕಿ.ಮೀ. / ಗಂ ವೇಗದಲ್ಲಿ ಚಲಿಸುತ್ತದೆ. ಡೀಸೆಲ್‌ ಗೆ ಹೋಲಿಸಿದರೆ ಹೈಡ್ರೋಜನ್ ರೈಲು ವರ್ಷಕ್ಕೆ ಹತ್ತು ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಸ್ವಯಂಚಾಲಿತ ವೇಕ್ಅಪ್, ಸ್ವಯಂಚಾಲಿತ ಸ್ಟಾರ್ಟ್-ಸ್ಟಾಪ್, ಡಿಪೋಗೆ ಸ್ವಯಂಚಾಲಿತ ರಿಟರ್ನ್ ಮತ್ತು ಇತರ ಬುದ್ಧಿವಂತ ಚಾಲನಾ ಕಾರ್ಯಗಳಂತಹ ಡಿಜಿಟಲ್ ಮತ್ತು ಬುದ್ಧಿವಂತ ವೈಶಿಷ್ಟ್ಯಗಳನ್ನು ಬಳಸಿಕೊಂಡು ಹೊಸ ನಗರ ರೈಲನ್ನು ಪ್ರಾರಂಭಿಸಲಾಗಿದೆ. ಈ ರೈಲನ್ನು ಸ್ವಾಯತ್ತ ಚಾಲನಾ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದ್ದು ಅದನ್ನು ನಿರ್ವಹಿಸಬಹುದಾಗಿದೆ. ಫಕ್ಸಿಂಗ್ ಬುಲೆಟ್ ರೈಲಿನಿಂದ ಎರವಲು ಪಡೆದ ಕೆಲವು ತಂತ್ರಜ್ಞಾನವನ್ನು ಹೈಡ್ರೋಜನ್ ಚಾಲಿತ ನಗರ ರೈಲಿನಲ್ಲಿ ಬಳಸಲಾಗಿದೆ. ರೈಲಿನಲ್ಲಿ ಸಾವಿರಾರು ಸಂವೇದಕಗಳೊಂದಿಗೆ ಬುದ್ಧಿವಂತ…

Read More

ತುಮಕೂರು: ತಿಪಟೂರು ತಾಲೂಕಿನಲ್ಲಿರುವ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ‌‌‌.ಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಮೊದಲ ಬಾರಿಗೆ ಅವರು ಭೇಟಿ ನೀಡಿದ್ದಾರೆ. ಇದೇ ವೇಳೆ ಕರಿಬಸವ ಶ್ರೀಗಳ ಆಶೀರ್ವಾದವನ್ನು ಡಿಕೆಶಿ ಪಡೆಯಲಿದ್ದಾರೆ. ಬಳಿಕೆ ಕರಿಬಸವ ಶ್ರೀಗಳ ಗದ್ದುಗೆಯಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಪತ್ನಿ ಉಷಾ, ಪುತ್ರ ಆಕಾಶ್, ಪುತ್ರಿ  ಐಶ್ವರ್ಯ, ಅಳಿಯ ಅಮಾರ್ಥ್ಯ ಸಿದ್ದಾರ್ಥ್, ಪುತ್ರಿ ಆಭರಣ ಸೇರಿದಂತೆ ಕುಟುಂಬ ಸಮೇತ ಆಗಮಿಸಿದ್ದಾರೆ.  ಸಂಸಾರ ಸಮೇತ ಮಠಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರನ್ನು ತಿಪಟೂರಿನ ನೂತನ ಶಾಸಕ ಷಡಕ್ಷರಿ ಹಾರ ಹಾಕಿ ಬರಮಾಡಿಕೊಂಡರು. ಮಠದ ಹಿಂಬದಿಯಿಂದಿರುವ ಗವಿಗೆ ತೆರಳಿದ ಡಿಕೆಶಿ ಕುಟುಂಬ.. ಅಲ್ಲಿ ವಿಶೇಷ ಪೂಜೆ ನೆರವೇರಿಸಲಿರುವ ಡಿಕೆಶಿ.. ಕಳೆದ 15ದಿನಗಳ ಹಿಂದೆ ಇದೇ ಗವಿಯಲ್ಲಿ ಪೂಜೆ ಸಲ್ಲಿಸಿದ್ದ ಡಿಕೆಶಿ ಫ್ಯಾಮಿಲಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕದ ಜನತೆಯ ಆಶಯಗಳನ್ನು ಕಾಂಗ್ರೆಸ್ ಈಡೇರಿಸಲಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಜನರ ಆಶಯಗಳನ್ನು ಈಡೇರಿಸಲು ಶುಭ ಹಾರೈಕೆಗಳು. ಬೆಂಬಲಿಸಿದವರಿಗೆ ಧನ್ಯವಾದಗಳು. ಬಿಜೆಪಿ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಹುರುಪಿನಿಂದ ಕರ್ನಾಟಕಕ್ಕೆ ಸೇವೆ ಸಲ್ಲಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪಾಳೆಯ ಮತ್ತು ಕೆಲಸಗಳ ನಡುವೆಯೂ ಕನ್ನಡ ಮತ್ತು ಬೆಂಗಳೂರು ಕರಾವಳಿ ಪ್ರದೇಶ ಹೊರತುಪಡಿಸಿ ಉಳಿದೆಲ್ಲೆಡೆ ಬಿಜೆಪಿ ಕುಸಿದಿದೆ. ಹಿಂದುತ್ವ ಕಾರ್ಡ್ ಆಡಿದರೂ ಪಕ್ಷ ಗೆಲ್ಲಲಾಗಲಿಲ್ಲ. ಮುಖ್ಯಮಂತ್ರಿ ಆಯ್ಕೆಗಾಗಿ ಕಾಂಗ್ರೆಸ್ ಶಾಸಕರ ಸಭೆ ನಡೆಯಲಿದೆ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಾಧ್ಯತೆ ಇದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕರ್ನಾಟಕದಲ್ಲಿ ಭರ್ಜರಿ ಗೆಲುವಿನ ನಂತರ ಕಾಂಗ್ರೆಸ್ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಯಲ್ಲಿ ತೊಡಗಿದೆ. ಇಂದು ಸರ್ಕಾರ ರಚನೆ ಸಂಬಂಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆಯಲಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಒಪ್ಪಿಗೆ ಇದೆ ಎಂಬ ಸಂಕೇತ ಕಾಂಗ್ರೆಸ್ ಪಾಳಯದಿಂದ ಬರುತ್ತಿದೆ. ಉಪಮುಖ್ಯಮಂತ್ರಿ ಸ್ಥಾನ ನೀಡಲು ಸೂತ್ರವಿದ್ದು, ಡಿ.ಕೆ.ಶಿವಕುಮಾರ್ ಕೈ ಹಿಡಿಯದಿರುವ ಸೂಚನೆಗಳಿವೆ. ಡಿ.ಕೆ.ಶಿವಕುಮಾರ್ ಅವರು ಮುಂಚೂಣಿಯಿಂದ ಮುನ್ನಡೆಸಿ ಯಶಸ್ವಿ ವಾಸ್ತುಶಿಲ್ಪಿಯಾಗಿರುವುದರಿಂದ ಅವರನ್ನು ಮುಖ್ಯಮಂತ್ರಿಯಾಗಲಿ ಎಂದು ಪಕ್ಷದಲ್ಲಿ ನಾಯಕರ ಗುಂಪು ಇದೆ. ರಾಜ್ಯದ ಅತ್ಯಂತ ಹಿರಿಯ ನಾಯಕ ಹಾಗೂ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ಅರ್ಹರು. ಜನ ಸಾಮಾನ್ಯರ ಬೆಂಬಲದ ವಿಚಾರದಲ್ಲೂ ಸಿದ್ದರಾಮಯ್ಯ ಒಂದು ಹೆಜ್ಜೆ ಮೇಲಿದ್ದಾರೆ. ರಾಜ್ಯದಲ್ಲಿ ಸಾಧಿಸಿರುವ ಅಮೋಘ ಯಶಸ್ಸಿನ ಛಾಪನ್ನು ಕೆಡಿಸುವ ಕ್ರಮಗಳು ಬೇಡ ಎಂಬುದು ರಾಷ್ಟ್ರೀಯ ನಾಯಕತ್ವದ ನಿರ್ದೇಶನ. ಹಾಗಾಗಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ನಾಯಕತ್ವ ಒಪ್ಪಿಗೆ ಸೂಚಿಸಿದೆ ಎಂಬುದು ಕಾಂಗ್ರೆಸ್ ಪಾಳಯದಿಂದ ಬಂದಿರುವ ಮಾಹಿತಿ. ಇಬ್ಬರಿಗೂ…

Read More

ತುರುವೇಕೆರೆ: ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಶಾಸಕ ಎಂ ಟಿ ಕೃಷ್ಣಪ್ಪ ಗೆಲುವಿನ ನಗೆಬೀರಿದ ಹಿನ್ನೆಲೆಯಲ್ಲಿ ಗಗನದ ಎತ್ತರಕ್ಕೆ ಏರಿದ ಬೆಂಬಲಿಗರು ಮತ್ತು ಕಾರ್ಯಕರ್ತರು ಹರ್ಷೋದ್ಘಾರ ಮಾಡಿದರು. ತುರುವೇಕೆರೆ ಕ್ಷೇತ್ರದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಮಸಾಲಾ ಜಯರಾಮ್ ವಿರುದ್ಧ ಜಯಸಾಧಿಸಿದ ಎಂ.ಟಿ.ಕೃಷ್ಣಪ್ಪ, ತುರುವೇಕೆರೆ ಪಟ್ಟಣದಲ್ಲಿ ಕಾರ್ಯಕರ್ತರ ಜಯಭೇರಿ ಬಾರಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಿಂದ ತುರುವೇಕೆರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕುಣಿಯುತ್ತ ಕುಪ್ಪಳಿಸುತ್ತ ಕಾರ್ಯಕರ್ತರು, ಡಿ.ಜೆ. ಶಬ್ದಕ್ಕೆ ಹೆಜ್ಜೆ ಹಾಕುತ್ತಾ ಸಾಗಿದರು. ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಹಾಗೂ ಕೃಷ್ಣಪ್ಪನವರ ಬೆಂಬಲಿಗರು ಜಮಾವಣೆಗೊಂಡು ಮೆರವಣಿಗೆ ನಡೆಸಿದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪಟ್ಟಣದ ದಬ್ಬೇಘಟ್ಟ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಪಡೆದಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾನೂನು ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಪ್ರವೀಣ್ ಗೌಡ ರವರ ಮುಖಂಡತ್ವದಲ್ಲಿ ಪಟಾಕಿಯನ್ನು ಸಿಡಿಸಿ ಸಿಹಿ ಹಂಚುವ ಮುಖಾಂತರ ಸಂಭ್ರಮಾಚರಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಕೆ ಪಿ ಸಿ ಸಿ ಕಾನೂನು ವಿಭಾಗದ ರಾಜ್ಯ ಉಪಾಧ್ಯಕ್ಷ ಪ್ರವೀಣ್ ಗೌಡ ರವರು ಮಾತನಾಡಿ, ಈ ದಿನ ನಮ್ಮ ರಾಜ್ಯದಲ್ಲಿ ಸಾಮಾನ್ಯ ವರ್ಗದವರು, ದೀನ ದಲಿತರು, ಕಾರ್ಮಿಕರು ರೈತರು ಸಂತಸ ಪಡುವಂತಹ ಸುದಿನವಾಗಿದೆ ಎಂದರು. ಎಲ್ಲರೂ ಈ ದಿನವನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾದಂತಹ ದಿನವಾಗಿದೆ , ನಮ್ಮ ಬಡವರ ಬಂಧು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷರು ಡಿ.ಕೆ.ಶಿವಕುಮಾರ್ ಚಾಣಾಕ್ಷರುಗಳ ನೇತೃತ್ವದಲ್ಲಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತವನ್ನು ಪಡೆದಿದ್ದು , ಸರ್ಕಾರವನ್ನು ರಚಿಸುವ ಸಂದರ್ಭವನ್ನು ನಿರ್ಮಿಸಿದ್ದಾರೆ, ದ್ವೇಷದ ರಾಜಕಾರಣವು ಹೋಗಿ ಪ್ರೀತಿಯ ರಾಜಕಾರಣವು ನಿರ್ಮಾಣವಾಗುವ ಸಮಯ ಒದಗಿ ಬಂದಿದೆ,…

Read More

ತುಮಕೂರು: ಪ್ರಪ್ರಥಮವಾಗಿ ಜಿಲ್ಲೆಯ ಮತದಾರರಿಗೆ ಕೃತಜ್ಙತೆ ಹೇಳೋಕೆ ಬಯಸ್ತೇನೆ. ರಾಜ್ಯದ ಜನರು ಸಹ ಕಾಂಗ್ರೆಸನ್ನ ಅತ್ಯದ್ಬುತವಾಗಿ ಗೆಲ್ಲಿಸಿದ್ದಾರೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಗೆ ಕೃತಜ್ಞತೆ ಅಭಿನಂದನೆ ಸಲ್ಲಿಸುತ್ತೇವೆ.  ನಾವು ನಿರೀಕ್ಷೆ ಮಾಡಿದಂತೆ ಈ ಬಾರಿ ಸರ್ಕಾರ ಮಾಡ್ತೀವಿ ಅಂತ ಹೇಳಿದ್ವಿ ಎಂದು ಹೇಳಿದರು. ಇನ್ನುಮುಂದೆ ನಮ್ಮ ವರಿಷ್ಠರು ಏನ್ ಹೇಳ್ತಾರೆ ಅದಕ್ಕೆ‌ ಬದ್ದರಾಗಿರ್ತೇವೆ. ಜಿಲ್ಲೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ಒಂದು ವಿಶ್ವಾಸವಿತ್ತು. ಏಳು ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ ಎಂದರು. ಹೈಕಮಾಂಡ್ ಯಾವ ರೀತಿಯ ಒಂದು ನಿರ್ಧಾರಕ್ಕೆ ಬರಲಿದೆ ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಧುಗಿರಿ: ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯ 40% ಸರ್ಕಾರದಿಂದ ಬೇಸತ್ತ ರಾಜ್ಯದ ಜನಸಾಮಾನ್ಯರು, ಈ ಬಾರಿಯ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಆಶೀರ್ವಾದಿಸಿದ್ದಾರೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು. ನಾನು ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡು 2013 ರಿಂದ 17ರ ಅವಧಿಯಲ್ಲಿ ಶಾಸಕನಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದು, ಎಲ್ಲರ ಕಣ್ಮುಂದೆ ಇದೆ ಆದರೆ ಕಳೆದ 2018 ರ ಚುನಾವಣೆಯಲ್ಲಿ ದುರಾದೃಷ್ಟಕರ ಕ್ಷೇತ್ರದ ಮಹಿಳೆಯರು ಅರಿಶಿಣ, ಕುಂಕುಮ, ಸೀರೆಯ ಅಮಿಷಕ್ಕೆ ಒಳಪಟ್ಟು ನನಗೆ ಕೈಕೊಟ್ಟ ಸಂದರ್ಭದಲ್ಲಿ ನಾನು ಸೋಲು ಕಂಡೆ, ಆದರೆ  2018ರ ಚುನಾವಣೆಯಲ್ಲಿ ಗೆದ್ದ ಶಾಸಕ ಕ್ಷೇತ್ರದ ಸರ್ವೋತ್ತಮುಖ ಅಭಿವೃದ್ಧಿಪಡಿಸಿಲ್ಲ, ಇದನ್ನು ಮನಗಂಡ ಕ್ಷೇತ್ರದ ಜನಸಾಮಾನ್ಯರು, ಈ ಬಾರಿ 2023ರ ಚುನಾವಣೆಯಲ್ಲಿ ನನಗೆ ಮತ್ತೊಮ್ಮೆ ಆಶೀರ್ವದಿಸಿ ಎದುರಾಳಿ ಯಾದ ಜೆ.ಡಿ.ಎಸ್ ಅಭ್ಯರ್ಥಿ ಎಂ ವಿ ವೀರಭದ್ರಯ್ಯ ವಿರುದ್ಧ 32,859 ಮತಗಳಿಂದ ಲೀಡ್ ಕೊಟ್ಟು ನನ್ನನ್ನು ಜಯಶೀಲರನ್ನಾಗಿ ಮಾಡಿದ್ದಾರೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರ…

Read More

ಜೆಡಿಎಸ್ – ಚಿಕ್ಕನಾಯಕನಹಳ್ಳಿ – ಸುರೇಶ್ ಬಾಬು ( Margin – 10042 Margin) – ತುರುವೇಕೆರೆ – ಎಂ.ಟಿ.ಕೃಷ್ಣಪ್ಪ  (Margin -9923) ಬಿಜೆಪಿ – ತುಮಕೂರು ಸಿಟಿ – ಜಿ.ಬಿ.ಜ್ಯೋತಿ ಗಣೇಶ್ (Margin – 3044) -ತುಮಕೂರು ಗ್ರಾಮಾಂತರ – ಬಿ. ಸುರೇಶ್ ಗೌಡ (Margin – 4594) ಕಾಂಗ್ರೆಸ್ – ತಿಪಟೂರು – ಕೆ.ಷಡಕ್ಷರಿ (Margin – 16585) – ಕುಣಿಗಲ್- ಡಾ.ಹೆಚ್.ಡಿ.ರಂಗನಾಥ್  (Margin – 26573) – ಕೊರಟಗೆರೆ – ಡಾ.ಜಿ.ಪರಮೇಶ್ವರ್  (Margin – 12440) – ಗುಬ್ಬಿ- ಎಸ್.ಆರ್.ಶ್ರೀನಿವಾಸ್  (Vasu) (Margin – 8541) – ಸಿರಾ – ಟಿ.ಬಿ.ಜಯಚಂದ್ರ  (Margin – 26633) – ಪಾವಗಡ – ಹೆಚ್.ವಿ.ವೆಂಕಟೇಶ್ (Margin – 10881) – ಮಧುಗಿರಿ- ಕ್ಯಾತಸಂದ್ರ ಎನ್. ರಾಜಣ್ಣ  (Margin – 32859)

Read More

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ ಗೌಡ ಭರ್ಜರಿ ಗೆಲುವು. ತುಮಕೂರು ನಗರದಲ್ಲಿ ಬಿಜೆಪಿ ಜಯಭೇರಿ. ಸತತ ಎರಡನೇ ಬಾರಿ ಬಿಜೆಪಿಯ ಜ್ಯೋತಿ ಗಣೇಶ್ ಗೆಲುವು. 3500 ಮತಗಳ ಅಂತರದಲ್ಲಿ ಗೆಲುವು. ಕೊರಟಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಪರಮೇಶ್ವರ್ ಗೆಲುವು.  ಜೆಡಿಎಸ್ ಅಭ್ಯರ್ಥಿ ಸುಧಾಕರ್ ಲಾಲ್ ವಿರುದ್ಧ ಗೆಲುವು. ಶಿರಾದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಗೆಲುವು, 7 ನೇ ಬಾರಿ ಗೆದ್ದು ಬೀಗಿದ ಜಯಚಂದ್ರ.  20 ಸಾವಿರ ಮತಗಳ ಅಂತರಿಂದ ಜಯಭೇರಿ. ತುರುವೇಕೆರೆಯಲ್ಲಿ ಜೆಡಿಎಡ್ ಮುನ್ನಡೆ -7718:  ಜೆಡಿಎಸ್ ಎಮ್.ಟಿ.ಕೃಷ್ಣಪ್ಪ-48474‌, ಬಿಜೆಪಿ ಮಸಾಲಾ ಜಯರಾಮ್-40756 ಮಧುಗಿರಿ: 2023ರ ಮಧುಗಿರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ 12ನೇ ಸುತ್ತು ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯಾದ ಕೆ ಎನ್ ರಾಜಣ್ಣ ರವರು ಸುಮಾರು 35,100 ಮತಗಳಿಂದ ಮುಂದಿರುವುದು ಕಾಣಬಹುದು, 40 ರಿಂದ 45 ಸಾವಿರ ಲೀಡ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಕೆ ರಾಜಣ್ಣರವರ ಅಭಿಮಾನಿಗಳು ಸಂಭ್ರಮದಿಂದ ಘೋಷಣೆಗಳನ್ನು…

Read More