Author: admin

ತುಮಕೂರು:  ಗೊಲನ ಎಂಟರ್ಪ್ರೈಸಸ್ -– ತುಮಕೂರಿನ ಹೆಸರಾಂತ ಮಾನವ ಸಂಪತ್ತು ಪೂರೈಕೆ ಸಂಸ್ಥೆ, ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಖ್ಯಾತ ಕಂಪನಿಗೆ ಗುತ್ತಿಗೆ ಆಧಾರಿತ ಕೆಲಸಕ್ಕಾಗಿ ಯುವಕರನ್ನು ಆಹ್ವಾನಿಸುತ್ತಿದೆ. ಕೆಲಸದ ಶಿಫ್ಟ್‌ಗಳು: ಶಿಫ್ಟ್ 1: ಬೆಳಗ್ಗೆ 6:00 –- ಮಧ್ಯಾಹ್ನ 2:00 ಶಿಫ್ಟ್ 2: ಮಧ್ಯಾಹ್ನ 2:00 -– ರಾತ್ರಿ 10:00 ಶಿಫ್ಟ್ 3: ರಾತ್ರಿ 10:00 -– ಬೆಳಗ್ಗೆ 6:00 ಜನರಲ್ ಶಿಫ್ಟ್: ಬೆಳಗ್ಗೆ 8:30 -– ಸಂಜೆ 5:00 ಅರ್ಹತೆ: ✔ ಶಿಫ್ಟ್ ಆಧಾರಿತ ಕೆಲಸಕ್ಕೆ ಸಿದ್ಧತೆ ✔ ಅನುಭವ ಅಗತ್ಯವಿಲ್ಲ -– ಹೊಸಬರಿಗೆ ಉತ್ತಮ ಅವಕಾಶ! ಸೌಲಭ್ಯಗಳು: ✅ ಇಎಸ್ಐ (ESI) ✅ ಇಪಿಎಫ್ (EPF) ✅ ವಾರ್ಷಿಕ ಬೋನಸ್ ✅ ಕರ್ನಾಟಕ ಸರ್ಕಾರದ ಕನಿಷ್ಠ ವೇತನದ ಅನುಸಾರ ವೇತನ ಕೆಲಸದ ಸ್ಥಳ: ಅಂತರಸನಹಳ್ಳಿ ಕೈಗಾರಿಕಾ ಪ್ರದೇಶ, ತುಮಕೂರು ವಿವರಗಳಿಗೆ ಸಂಪರ್ಕಿಸಿ: ನಟರಾಜು ಜಿ.ಎಲ್. 📱             97417 17700 ಮಣಿಕಂಠ:  97393 11269 ಇಮೇಲ್:  golanaenterprises2016@gmail.com ವೆಬ್ ಸೈಟ್…

Read More

ತುಮಕೂರು: ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ಟ್ರಸ್ಟ್(ರಿ) ಹನಿ ನಿಧಿ ಪ್ರಕಾಶನ ಹಾಗೂ ಶ್ರೀಗಂಧ ಸಾಹಿತ್ಯ ಸಾಂಸ್ಕೃತಿಕ ಕಲಾ ಬಳಗ ತುಮಕೂರು ರಾಜ್ಯ ಕರ್ನಾಟಕ ಇದರ ಸಹಯೋಗದಲ್ಲಿ  ಕನ್ನಡ ಸಾಹಿತ್ಯ ಸಮ್ಮೇಳನ, ರಾಜ್ಯದ ಮಟ್ಟದ ಕವಿಗೋಷ್ಠಿ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ, ಪುಸ್ತಕ ಬಿಡುಗಡೆ ಹಾಗೂ ಸಾಹಿತ್ಯ ನಿಧಿ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ತುಮಕೂರಿನ  ಕನ್ನಡ ಭವನದಲ್ಲಿ  ಜೂನ್  29ರಂದು ನಡೆಯಲಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸುವವರು ಮತ್ತು ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಹೆಚ್ಚಿನ ಮಾಹಿತಿಗಳಿಗಾಗಿ 7483146697 ಸಂಪರ್ಕಿಸಬಹುದಾಗಿದೆ. ಅರ್ಜಿಸಲ್ಲಿಸಲು 15—06—2025 ಕೊನೆಯ ದಿನಾಂಕವಾಗಿದೆ ಎಂದು  ಸಂಸ್ಥಾಪಕ ಅಧ್ಯಕ್ಷ, ಸಂಪಾದಕ ಹನಿನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಂಜನ್ ಕುಮಾರ್ ಪಿ.ಆರ್., ರಾಜ್ಯಾಧ್ಯಕ್ಷರಾದ ಭರತ್ ಕೆ.ಆರ್., ನಿರ್ದೇಶಕರಾದ ಡಾ.ಮಲ್ಲೇಕಾವು ಮುಕುಂದರಾಜು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ತುಮಕೂರು: ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಕಲ್ಪಿಸಲು ಮರಾಠ ಮತ್ತು ಇದರ ಉಪಜಾತಿಗೆ ಸೇರಿದ ಜನರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಶ್ರೀ ಶಹಾಜಿರಾಜೇ ಸಮೃದ್ಧಿ, ಬೀಜಾವು–ಜಲಭಾಗ್ಯ(ಗಂಗಾಕಲ್ಯಾಣ ನೀರಾವರಿ ಯೋಜನೆ), ಅರಿವು ಶೈಕ್ಷಣಿಕ ಸಾಲ(ಹೊಸತು), ರಾಜಶ್ರೀ ಶಾಹುಮಹಾರಾಜ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ, ಮರಾಠ ಮಿಲ್ಟ್ರಿ ಹೋಟೆಲ್, ಸ್ವಯಂ ಉದ್ಯೋಗ ಸಾಲ( ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ) ಸ್ವಾವಲಂಬಿ ಸಾರಥಿ ಹಾಗೂ ಸ್ವಾತಂತ್ರ ಅಮೃತ ಮಹೋತ್ಸವ ಮುನ್ನಡೆ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಸ್ವಾತಂತ್ರ‍್ಯ ಅಮೃತ ಮುನ್ನಡೆ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಜಾಲತಾಣ https://www.kaushalkar.com  ಹಾಗೂ ಉಳಿದ ಯೋಜನೆಗಳ ಸೌಲಭ್ಯ ಪಡೆಯಲು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in  ಮೂಲಕ ಜುಲೈ 4ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ ಸೈಟ್ https://kmcdc.karnataka.gov.in  ಅಥವಾ ನಿಗಮದ ಸಹಾಯವಾಣಿ 8867537799, 080-29903994 ಅಥವಾ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ದೂ.ವಾ.ಸಂಖ್ಯೆ 0816-2005008ನ್ನು ಸಂಪರ್ಕಿಸಬಹುದಾಗಿದೆ…

Read More

ತಿಪಟೂರು: ಕರ್ನಾಟಕದ  ಪ್ರತಿಷ್ಠಿತ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಒಂದಾದ ತಿಪಟೂರು ಕಲ್ಪತರು ತಾಂತ್ರಿಕ ಮಹಾವಿದ್ಯಾಲಯಕ್ಕೆ  ನ್ಯಾಷನಲ್ ಬೋರ್ಡ್ ಅಫ್ ಅಕ್ರಿಡೇಷನ್  ಕಮಿಟಿ ಮಾನ್ಯತೆ ದೊರೆತ್ತಿದ್ದು, ಕಲ್ಪತರು ತಾಂತ್ರಿಕ ಮಹಾವಿದ್ಯಾಲಯಕ್ಕೆ  ಎಪ್ರಿಲ್ 26 ರಂದು ಭೇಟಿ ನೀಡಿದ  ಎನ್.ಬಿ.ಎ ತಾಂತ್ರಿಕ ಪರಿಣಿತರ ತಂಡ ಭೇಟಿ ಕಾಲೇಜಿನ ವ್ಯವಸ್ಥೆಗಳು, ಮೂಲಸೌಕರ್ಯ, ವಿದ್ಯಾರ್ಥಿಗಳಿಗೆ ಪಠ್ಯಪೂರಕ ಹಾಗೂ ಪಠ್ಯೇತರ ಸೌಕರ್ಯಗಳು, ಪರಿಶೀಲನೆ ನಡೆಸಿದ್ದು, ಕಮಿಟಿಯ ಶಿಫಾರಸಿನಂತೆ 2025ರಿಂದ 2028ರ ಶೈಕ್ಷಣಿಕ ಸಾಲಿನವರೆಗೆ ಮಾನ್ಯತೆ ನೀಡಿ, ಕಲ್ಪತರು ಇಂಜಿನಿಯರಿಂಗ್ ಕಾಲೇಜು ಸೌಕರ್ಯಗಳು ಹಾಗೂ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದೆ. ತಿಪಟೂರು ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾನಿಲಯ ಆಡಳಿತ ಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಲ್ಪತರು ವಿದ್ಯಾಸಂಸ್ಥೆ ಖಜಾಂಚಿ ಶಿವಪ್ರಸಾದ್,  ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ ಕಲ್ಪತರು ನಾಡಿನ ಹೆಮ್ಮೆಯ ಕಾಲೇಜು, ನಮ್ಮ ಕಾಲೇಜು ಗ್ರಾಮೀಣ ಭಾಗದ ಸಾವಿರಾರು ಜನ ವಿದ್ಯಾರ್ಥಿಗಳ ಬಾಳಿನ ಆಶಾಕಿರಣವಾಗಿದ್ದು, ನಮ್ಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳು ದೇಶ ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದು,…

Read More

ಕೊರಟಗೆರೆ: ತಾಲೂಕಿನ ಜೆಟ್ಟಿ ಅಗ್ರಹಾರದ ಕಾವರಗಲ್ ಮೀಸಲು ಅರಣ್ಯ ಪ್ರದೇಶಕ್ಕೆ ಗಣಿ ಮಾಫಿಯಾ ಲಗ್ಗೆಯಿಟ್ಟಿದ್ದು, ಕಲ್ಲು ಕ್ವಾರೆಯ ಬ್ಲಾಸ್ಟಿಂಗ್ ಸದ್ದಿನ ಆರ್ಭಟಕ್ಕೆ ಪ್ರಕೃತಿ ನಡುಗಿದೆ. ಪ್ರಾಣಿಗಳು ಭಯಭೀತಿಯಿಂದ ಊರುಗಳಿಗೆ ನುಗ್ಗುತ್ತಿದೆ ಎನ್ನುವ ಗಂಭೀರ ಆರೋಪಗಳು ಕೇಳಿ ಬಂದಿವೆ. ಕೊರಟಗೆರೆ ತಾಲೂಕು ಜೆಟ್ಟಿ ಅಗ್ರಹಾರದ ಕಾವರಗಲ್ ಮೀಸಲು ಅರಣ್ಯ ಪ್ರದೇಶದಲ್ಲಿ  ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗುಬ್ಬಿ ಮೂಲದ ಚಂದ್ರಶೇಖರ್ (ಗ್ಯಾಸ್ ಬಾಬು) ಎಂಬಾತ ಕಲ್ಲು ಕ್ವಾರೆ ಗುತ್ತಿಗೆ ಪಡೆದುಕೊಂಡಿದ್ದು, ಗಣಿ ಇಲಾಖೆ ಜೆಟ್ಟಿ ಅಗ್ರಹಾರ ಸರ್ವೆ ನಂ.35 ರಲ್ಲಿ 4 ಎಕರೇ 38 ಗುಂಟೆ ಕ್ವಾರೇ ಮಂಜೂರು ಮಾಡಿದೆ. ಭೂಮಿಯಿಂದ ಬರೋಬ್ಬರಿ 2 ಸಾವಿರ ಅಡಿ ಎತ್ತರದ ಕಾವರಗಲ್ ಬೆಟ್ಟದ ಮೇಲೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಭಾರೀ ಸ್ಫೋಟದ ಶಬ್ದಗಳಿಗೆ ಇಲ್ಲಿನ ಗ್ರಾಮಸ್ಥರು, ಮೂಕ ಜೀವಿಗಳು ಬೆಚ್ಚಿ ಬೀಳುತ್ತಿವೆ. ಗಣಿ ನಿಯಮಗಳನ್ನು ಉಲ್ಲಂಘಿಸಿ ಇಲ್ಲಿ ಗಣಿಗಾರಿಕೆ ನಡೆಸಲಾಗುತ್ತಿತ್ತು.  ಕಾವರಗಲ್ ಅರಣ್ಯ ಪ್ರದೇಶದಲ್ಲಿ ಕರಡಿ, ನವಿಲು, ಕಾಡುಕಿರುಬ, ಜಿಂಕೆ, ಮೊಲ ಸೇರಿದಂತೆ…

Read More

ದೇವನಹಳ್ಳಿ: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಗೊಟ್ಟಿಪುರ ಗೇಟ್ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದೆ. ಕೋಲಾರ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುಪತಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಆಂಧ್ರ ಸಾರಿಗೆ ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಈ ಅಪಘಾತ ನಡೆದಿದೆ. ಕೇಶವರೆಡ್ಡಿ (44), ತುಳಸಿ (21), ಪ್ರಣತಿ (4) ಹಾಗೂ 1 ವರ್ಷದ ಮಗು ಸಾವಿಗೀಡಾಗಿದವರು ಎಂದು ಗುರುತಿಸಲಾಗಿದೆ. 16 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಬಸ್ ಓವರ್​​ ಟೇಕ್ ಮಾಡುವಾಗ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಬಸ್ ನಜ್ಜುಗುಜ್ಜಾಗಿದೆ. ಚಾಲಕ ನಿದ್ದೆ ಮಂಪರಿನಲ್ಲಿ ಒವರ್ ಟೇಕ್ ಮಾಡಲು ಹೋಗಿ ದುರಂತ ಸಂಭವಿಸಿರುವುದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ಬೆಂಗಳೂರು: ಜಾತಿ ಗಣತಿಯಲ್ಲಿ ಮರುಸಮೀಕ್ಷೆಯಿಂದ ಗೊಂದಲಗಳು ನಿವಾರಣೆಯಾಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಗುರುವಾರ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಇರುವ ಜಾತಿ ಗಣತಿ ವರದಿಯಲ್ಲಿ ಸಾಕಷ್ಟು ಗೊಂದಲಗಳಿವೆ. ಮರು ಸಮೀಕ್ಷೆಯಿಂದ ಈ ಗೊಂದಲಗಳು ನಿವಾರಣೆಯಾಗುವ ನಿರೀಕ್ಷೆಗಳಿವೆ ಎಂದು ಹೇಳಿದರು. ವರದಿ ಅವೈಜ್ಞಾನಿಕ, ಹಳೆಯ ವರದಿ ಎಂದ ದೂರುಗಳು ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಲವು ಉನ್ನತ ನಾಯಕರು ಮರು ಸಮೀಕ್ಷೆಗೆ ನಿರ್ಧರಿಸಿದ್ದಾರೆ. ನಾವು ನಮ್ಮ ನಾವು ಅಭಿಪ್ರಾಯ ಕೊಟ್ಟಿದ್ದೇವೆ.‌ ಯಾರಿಗೂ ತೊಂದರೆಯಾಗಬಾರದು. ಈಗಿನ ವರದಿ ಕರೆಕ್ಟ್ ಆಗಿದೆ.‌ ಗೊಂದಲ ಇದ್ದರೆ ಪರಿಶೀಲನೆ ಮಾಡಬಹುದು. ಮರು ಸರ್ವೇ ಇಲ್ಲ, ಕರೆಕ್ಷನ್ ಅಷ್ಟೇ. ಯಾವುದನ್ನೇ ಮಾಡಲಿ, ತೊಂದರೆ ಏನಿದೆ. ಎಲ್ಲದಕ್ಕೂ ವಿರೋಧ, ಪರ ಇದ್ದೇ ಇರುತ್ತದೆ ಎಂದು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…

Read More

ಬೆಂಗಳೂರು:  ಗುಜರಾತಿನ ಅಹ್ಮದಾಬಾದ್ ನಗರದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಪ್ರಯಾಣಿಕರು, ವಿಮಾನ ಸಿಬ್ಬಂದಿ ಸೇರಿದಂತೆ 240ಕ್ಕೂ ಅಧಿಕ ಮಂದಿ ಸಾವಿಗೀಡಾದ ಸುದ್ದಿ ಕೇಳಿ ಅತೀವ ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಮೃತರ ಕುಟುಂಬಸ್ಥರಿಗೆ ಮತ್ತು ಬಂಧುಮಿತ್ರರಿಗೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ದುರ್ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಅವರು ಹೇಳಿದ್ದಾರೆ. ತಮ್ಮವರನ್ನು ಕಳೆದುಕೊಂಡ ಜನರ ನೋವು–ಸಂಕಟ ಕಂಡು ಮನಸ್ಸು ಮಮ್ಮಲ ಮರುಗುತ್ತಿದೆ. ಈ ನೋವಿನ ಘಳಿಗೆಯಲ್ಲಿ ಇಡೀ ದೇಶ ಅವರ ಜೊತೆಗಿದೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ಜೊತೆಗೆ ಉನ್ನತ ಮಟ್ಟದ ತನಿಖೆ ನಡೆಸಿ, ಘಟನೆಗೆ ಕಾರಣಗಳನ್ನು ಪತ್ತೆಮಾಡಿ, ಮತ್ತೆಂದೂ ಇಂತಹ ಅವಘಡಗಳು ಸಂಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಆದ್ಯತೆ ಮೇರೆಗೆ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.…

Read More

ತುಮಕೂರು:  ಸಿದ್ದರಾಮಯ್ಯ ಅವರು ಜಾತಿಗಣತಿಯ ಕಾಂತರಾಜ್‌ ವರದಿಯನ್ನು ಜಯಪ್ರಕಾಶ್‌ ಹೆಗ್ಡೆ ವರದಿ ಎಂದು ಹೆಸರು ಇರಿಸಿ ಜಾತಿ ಗಣತಿ ಜಾರಿಗೊಳಿಸಲು ಮುಂದಾದ್ರು, ಸಾಧ್ಯವಾಗಿರಲಿಲ್ಲ. ಇದೀಗ ರಾಜ್ಯದಲ್ಲಿ ಆರ್‌ ಸಿಬಿ  ಅಭಿಮಾನಿಗಳ ಕಾಲ್ತುಳಿತ ಪ್ರಕರಣವನ್ನು ಮುಚ್ಚಿಹಾಕಲು ಜಾತಿಗಣತಿ ವಿಚಾರವನ್ನು ಸಿದ್ದರಾಮಯ್ಯ ಅಡ್ಡ ತಂದಿದ್ದಾರೆ ಎಂದು ಬಿಜೆಪಿ ವಿಧಾನಪರಿಷತ್‌ ಸದಸ್ಯ ರವಿಕುಮಾರ್ ಆರೋಪಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಜಾತಿ ಗಣತಿಗೆ ವಿರೋಧ ಮಾಡುತ್ತಿಲ್ಲ. ಜಾತಿ ಗಣತಿಯನ್ನು ಮಾಡಬೇಕು ಮತ್ತು ಅದನ್ನು ಜಾರಿಗೊಳಿಸಬೇಕು ಎಂದರು. 11 ಜನರ ಸಾವಿಗೆ ಕಾಂಗ್ರೆಸ್‌ ಕಾರಣ ಎಂಬ ಘಟನೆಯನ್ನು ಮುಚ್ಚಿಹಾಕಲು ಜಾತಿ ಗಣತಿ ಜಾರಿ ವಿಚಾರವನ್ನು ಮುನ್ನಲೆಗೆ ತರಲಾಗುತ್ತಿದೆ ಎಂದರು. ಕೇಂದ್ರ ಸರಕಾರ ಕೂಡ ಜಾತಿ ಗಣತಿ ಮಾಡಲಿದೆ. ಆದ್ರೆ ರಾಜ್ಯ ಸರಕಾರ ಹೊಸದಾಗಿ ಜಾತಿಗಣತಿ ಮಾಡುವುದಾಗಿ ಹೇಳುತ್ತಿದೆ. ಅನಗತ್ಯವಾಗಿ ಹಣ ಬಳಸುತ್ತಿರೋದು ಸರಿಯಲ್ಲಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…

Read More

ಧಾರವಾಡ: ಹುಬ್ಬಳ್ಳಿ-ಧಾರವಾಡದಲ್ಲಿ ಕಳೆದ 24 ಗಂಟೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಮಳೆಗೆ ಅಯೋಧ್ಯಾ ನಗರದ ಒಬ್ಬರು ಮತ್ತು ಹುಬ್ಬಳ್ಳಿಯ ನೇಕಾರ ನಗರದ ಮತ್ತೊಬ್ಬರು ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಮತ್ತೊಬ್ಬ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಒಬ್ಬ ವ್ಯಕ್ತಿ ಇನ್ನೂ ನಾಪತ್ತೆಯಾಗಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಧಾರವಾಡ ಜಿಲ್ಲೆಯಾದ್ಯಂತ ಬುಧವಾರ ಸುರಿದ ಧಾರಾಕಾರ ಮಳೆಯ ನಡುವೆ ಈ ಘಟನೆಗಳು ನಡೆದಿವೆ. ಕಾಣೆಯಾದವರ ವಿವರಗಳು ತಕ್ಷಣ ತಿಳಿದುಬಂದಿಲ್ಲ. ಕುಂದಗೋಳ ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿ, ಟ್ರ್ಯಾಕ್ಟರ್ ಬಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಬ್ಯಾಹಟ್ಟಿ ಗ್ರಾಮದಲ್ಲಿ ಎರಡು ಕುರಿಗಳು ಹೊಳೆಯಲ್ಲಿ ಕೊಚ್ಚಿ ಹೋಗಿವೆ. ಸುಮಾರು 45 ಮನೆಗಳು ಹಾನಿಗೊಳಗಾಗಿದ್ದು, ಅವುಗಳಲ್ಲಿ ಕೆಲವು ಸಂಪೂರ್ಣವಾಗಿ ಕುಸಿದಿದ್ದರೆ, ಇನ್ನು ಕೆಲವು ಭಾಗಶಃ ಹಾನಿಗೊಳಗಾಗಿವೆ. ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳ ಹೊಳೆಗಳು ಅಪಾಯದ ಮಟ್ಟಕ್ಕಿಂತ ಮೀರಿ ಹರಿಯುತ್ತಿವೆ. ರಕ್ಷಣಾ ತಂಡಗಳ ಸಕಾಲಿಕ ಹಸ್ತಕ್ಷೇಪದಿಂದ ಈ ಹೊಳೆಗಳ ಬಳಿ ಸಿಲುಕಿಕೊಂಡಿದ್ದ ಕೆಲವು ರೈತರನ್ನು ರಕ್ಷಿಸಲಾಗಿದೆ. ನವಲಗುಂದದಲ್ಲಿ 23 ಮನೆಗಳು ಭಾಗಶಃ ಹಾನಿಗೊಳಗಾಗಿವೆ, ಹುಬ್ಬಳ್ಳಿ ನಗರದಲ್ಲಿ…

Read More