Subscribe to Updates
Get the latest creative news from FooBar about art, design and business.
- ಹನೂರು ಶೂಟೌಟ್ ಪ್ರಕರಣ: ಸಿಬ್ಬಂದಿ ಕಾರ್ಯಾಚರಣೆಯನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡ ಸಚಿವ ರಾಮಲಿಂಗಾರೆಡ್ಡಿ!
- ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದ ಜೆಡಿಎಸ್ ನಾಯಕನ ಬಂಧನ!
- ಚಿತ್ರದುರ್ಗ: ಬಾವಿಯಲ್ಲಿ ನವವಿವಾಹಿತೆ ಶವ ಪತ್ತೆ – ಕೊಲೆ ಆರೋಪ
- ಖರ್ಗೆ ಭಾಷಣ ಮಾಡಿದ್ದ ಸ್ಥಳದಲ್ಲಿ ಶುದ್ಧೀಕರಣ ಹೋಮ: ವಿಧಾನ ಪರಿಷತ್ ನಲ್ಲಿ ಖಂಡನಾ ನಿರ್ಣಯ ಅಂಗೀಕಾರ
- ಆರ್ ಎಸ್ ಎಸ್ ಜಾತಿವಾದ, ಕೋಮುವಾದದ ‘ಸಾವಿರ ತಲೆಯ ವಿಷಪೂರಿತ ಹಾವು’: ಸಚಿವ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ
- ಹನೂರು ಶೂಟೌಟ್ ಪ್ರಕರಣ: ರಾಜ್ಯ ಸರ್ಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ
- ಜೈಲಿನಲ್ಲೇ ಪ್ರಜ್ವಲ್ ರೇವಣ್ಣಗೆ ಡಿಜಿಪಿ ಅಲೋಕ್ ಕುಮಾರ್ ‘ಸ್ಪೆಷಲ್ ಕ್ಲಾಸ್’!
- ಬೆಳಕುಣಿ ಚೌದ್ರಿ ಗ್ರಾಮದಲ್ಲಿ ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ 106ನೇ ಜಯಂತಿ ಆಚರಣೆ
Author: admin
ತುಮಕೂರು: ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವೈಯಕ್ತಿಕ ಫಲಾನುಭವಿ/ ಪಾಲುದಾರಿಕೆ ಸಂಸ್ಥೆ/ ಕಂಪನಿ/ ಜವಳಿ ಸಹಕಾರಿ ಸಂಘ/ ಸಂಸ್ಥೆಗಳು ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಮತ್ತು ಅತಿಸಣ್ಣ ಘಟಕಗಳನ್ನು ಸ್ಥಾಪಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಣ್ಣ ಮತ್ತು ಅತಿಸಣ್ಣ ಘಟಕಗಳನ್ನು ಸ್ಥಾಪಿಸಲು ಈಗಾಗಲೇ ಜಿಲ್ಲಾ ಮಟ್ಟದ ಏಕಗವಾಕ್ಷಿ ಒಪ್ಪಿಗೆ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದ ಹಾಗೂ ಬ್ಯಾಂಕ್/ ಹಣಕಾಸು ಸಂಸ್ಥೆಗಳಿಂದ ಸಾಲ ಮಂಜೂರಾತಿ ಪಡೆದಿರುವ ಅರ್ಹ ಘಟಕಗಳು ಪೂರ್ಣ ಪ್ರಮಾಣದ ದಾಖಲಾತಿಗಳೊಂದಿಗೆ ಪ್ರಸ್ತಾವನೆಯನ್ನು ಜನವರಿ 31ರೊಳಗಾಗಿ ಸಲ್ಲಿಸಬೇಕು. ಯೋಜನೆ ಕುರಿತು ಪೂರ್ಣ ಮಾಹಿತಿಯನ್ನು ಉಪನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ನಾಗನಿಲಯ, ಕಸಬಾ ಮುಖ್ಯರಸ್ತೆ, ಸಿದ್ದಗಂಗಾ ಬಡಾವಣೆ, ತುಮಕೂರು ಅಥವಾ ದೂ.ವಾ.ಸಂ. 0816–2275370ಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…
ತುಮಕೂರು: ಮಧುಗಿರಿಯಿಂದ ಕೊರಟಗೆರೆ ಕಡೆಗೆ ಬರುತ್ತಿದ್ದ ಲಾರಿಯೊಂದು ರಸ್ತೆ ಬದಿ ಕುಳಿತಿದ್ದ ಮೂವರ ಮೇಲೆ ಹರಿದ ಪರಿಣಾಮವಾಗಿ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ತೀವ್ರತರ ಗಾಯಗಳಾಗಿವೆ. ಈ ಘಟನೆ ಕೊರಟಗೆರೆ ತಾಲ್ಲೂಕಿನ ಹೊಮ್ಮದೇವನಹಳ್ಳಿ ಕ್ರಾಸ್ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಹನುಮಂತನಾಯ್ಕ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ಹಿಂದೂ ಸಮಾಜೋತ್ಸವ ಸಮಿತಿ ತುಮಕೂರು ಇವರ ವತಿಯಿಂದ ಜ.18ರ ಭಾನುವಾರ ನಳಂದ ಪ್ರೌಢಶಾಲಾ ಆವರಣ, ರಾಘವೇಂದ್ರ ನಗರ, ತುಮಕೂರು ಇಲ್ಲಿ ಹಿಂದೂ ಸಮಾಜೋತ್ಸವ ನಡೆಯಲಿದೆ. ದಿವ್ಯ ಸಾನ್ನಿಧ್ಯವನ್ನು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಜಪಾನಂದಜೀ ಮಹಾರಾಜ್ ವಹಿಸಲಿದ್ದು, ಅಧ್ಯಕ್ಷತೆಯನ್ನು ಸ್ಪೂರ್ತಿ ಡೆವಲಪರ್ಸ್‌ನ ಎಸ್.ಪಿ. ಸದಾನಂದ ವಹಿಸುವರು. ಮುಖ್ಯ ಭಾಷಣಕಾರರಾಗಿ ಎಂ. ಬಾಲಚಂದ್ರ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಡಾ.ನೀತಾ ಲವ ಆಗಮಿಸುವರು. ಮಧ್ಯಾಹ್ನ 4ಕ್ಕೆ ಭಾರತಮಾತಾ ಹಾಗೂ ಲಲಿತಾ ತ್ರಿಪುರಸುಂದರಿ ಅಷ್ಟೋತ್ತರ ಪೂಜೆ ಬರಲಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ನಗರದ ಕುಂಚ ಶ್ರೀ ಮಹಿಳಾ ಬಳಗದ ವತಿಯಿಂದ ಜ.17ರಂದು ಶನಿವಾರ ಬಟವಾಡಿಯಲ್ಲಿರುವ ಶ್ರೀ ರಂಗ ವಿದ್ಯಾ ಮಂದಿರದ ಆವರಣದಲ್ಲಿ ಸಂಕ್ರಾಂತಿ –ಸುಗ್ಗಿ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕೊರಟಗೆರೆ ತಾಲ್ಲೂಕು ಎಲೆರಾಂಪುರದ ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಹನುಮಂತನಾಥ ಸ್ವಾಮೀಜಿಯವರು ನೆರವೇರಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಬಳಗದ ಅಧ್ಯಕ್ಷರಾದ ಲಲಿತಾ ಮಲ್ಲಪ್ಪನವರು ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀಧರ್ ಅವರು ಮತ್ತು ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರಾದ ದೊಡ್ಡಲಿಂಗಪ್ಪನವರು ಹಾಗೂ ತುಮಕೂರಿನ ರಾಘು ಸ್ಕ್ಯಾನಿಂಗ್ ಸೆಂಟರ್‌ನ ಡಾ. ಚಂದ್ರಕಲಾ ಮತ್ತು ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಭವ್ಯ ರವರು ಆಗಮಿಸುವರು. ಸಮಾಜದ ಎಲ್ಲಾ ಕುಲಬಾಂಧವರು ಕುಟುಂಬ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…
ತುಮಕೂರು/ಚಿಕ್ಕಬಳ್ಳಾಪುರ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಚಿಕ್ಕಬಳ್ಳಾಪುರ ಶಾಖೆ ವತಿಯಿಂದ 6ನೇ ತರಗತಿಗೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ, ಮನೆ ಭೇಟಿ ಮತ್ತು ಹಿನ್ನೆಲೆಯ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುವುದು. 2026-27ನೇ ಸಾಲಿಗೆ ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು ಆರಂಭಿಸಲಾಗಿದೆ. ಜ.8 ರಿಂದ ಮಾರ್ಚ್ 14ರವರೆಗೆ ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ, ಮಾಲೂರು, ಶ್ರೀ ನಿವಾಸಪುರ ಮತ್ತು ಕೋಲಾರದ ಬಿಜಿಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ತುಮಕೂರು ಜಿಲ್ಲೆ ತಿಪಟೂರಿನ ಠಾಗೂರ್ ಶಾಲೆ, ಕುಣಿಗಲ್ ನ ಬಿಜಿಎಸ್ ಶಾಲೆ, ಮಧುಗಿರಿಯ ಚೇತನ ಇಂಗ್ಲಿಷ್ ಶಾಲೆಗಳಲ್ಲಿ ಅರ್ಜಿಗಳನ್ನು ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಮಾ.14 ಕಡೆಯ ದಿನವಾಗಿರುತ್ತದೆ. ಏಪ್ರಿಲ್ 5 ರಂದು ಪ್ರವೇಶ ಪರೀಕ್ಷೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಗಳ ಬಿಜಿಎಸ್ ಸಂಸ್ಥೆಗಳಲ್ಲಿ ಹಾಗೂ ತುಮಕೂರಿನ ಶೆಟ್ಟಿಹಳ್ಳಿ ಮುಖ್ಯ ರಸ್ತೆಯ ನಳಂದ ಶಾಲೆಯಲ್ಲಿ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9611130481 (ತುಮಕೂರು), 9611568306 (ಕುಣಿಗಲ್), 9632352946 (ತಿಪಟೂರು),…
ಈ ಪ್ರಶ್ನೆಯೂ ನನ್ನದೇ, ಉತ್ತರ ಹುಡುಕುವ ಪ್ರಯತ್ನವೂ ನನ್ನದೇ; ನಮ್ಮ ಭೂಮಿ ಎನ್ನುವುದು ಅಸಂಖ್ಯಾತ ಜೀವಿಗಳು ವಾಸ ಮಾಡುತ್ತಿರುವ ಒಂದು ತಾಣ. ಇಲ್ಲಿ ಮನುಷ್ಯನಾಗಿರಲಿ ಅಥವಾ ಯಾವುದೇ ಜೀವಿಯಾಗಿರಲಿ, ಸಹಜವಾಗಿ ಗುಣ ಅಥವಾ ಸ್ವಭಾವ ಎನ್ನುವುದು ಸಮಯ, ಪರಿಸ್ಥಿತಿ ಅಥವಾ ಸಂದರ್ಭಗಳು ಆ ಜೀವಿಗೆ ಕಲಿಸುವ ಪಾಠವಾಗಿರಬಹುದು. ಉದಾಹರಣೆಗೆ ಹಸಿವು ಎಂಬುದು ಯಾವ ಜೀವಿಗೆ ತಾನೆ ಇರುವುದಿಲ್ಲ, ಒಂದು ಮಾಂಸಾಹಾರಿ ಜೀವಿ ಅದಕ್ಕೆ ಹೊಟ್ಟೆ ಹಸಿವಾದಾಗ ಮತ್ತೊಂದು ಸಸ್ಯಾಹಾರಿ ಜೀವಿಯನ್ನು ಮುಲಾಜಿಲ್ಲದೆ ಬೇಟೆಯಾಡಿ ತಿನ್ನುತ್ತದೆ. ಅದಕ್ಕೆ ತನ್ನ ಹಸಿಯುತ್ತಿರುವ ಹೊಟ್ಟೆಯನ್ನು ತುಂಬಿಸುವ ಅಗತ್ಯವಿದೆಯೇ ಹೊರತು, ತಾನು ಬೇಟೆಯಾಡಲಿರುವ ಜೀವಿಯೂ ಕೂಡ ನನ್ನ ಹಾಗೆ ಒಂದು ಜೀವಿ ಅದಕ್ಕೂ ಬದುಕುವ ಹಕ್ಕಿದೆ ಎಂದು ಯೋಚಿಸುವುದೇ ಇಲ್ಲ ಅಥವಾ ಯೋಚಿಸುವಷ್ಟು ಅದರ ಮೆದುಳು ವಿಕಸನ ಹೊಂದಿಲ್ಲ. ಈ ಹೇಳಿಕೆ ಮಾಂಸಾಹಾರ ಜೀವಿಯ ಗುಣ ಅಥವಾ ಸ್ವಭಾವ ಸೂಚಿಸುವುದಿಲ್ಲ, ಬದಲಿಗೆ ಅದರ ಹೊಟ್ಟೆ ಹಸಿಯುವ ಸಮಯದಲ್ಲಿ, ತನ್ನ ಹೊಟ್ಟೆ ತುಂಬಿಸುವ ಸಲುವಾಗಿ ಅಂದರೆ, ತಾನು ಇರುವ…
ಸಂಕ್ರಾಂತಿ ಹಬ್ಬವು ಕರ್ನಾಟಕದ ಜನಜೀವನದೊಂದಿಗೆ ಅವಿಭಾಜ್ಯವಾಗಿ ಬೆಸೆದುಕೊಂಡಿರುವ ಒಂದು ಮಹತ್ವದ ಹಬ್ಬ. ಇದು ಕೇವಲ ಋತುಮಾನಗಳ ಬದಲಾವಣೆಯ ಸೂಚಕವಲ್ಲ, ಬದಲಾಗಿ ಶ್ರಮ, ಸಹನೆ ಮತ್ತು ಪ್ರಕೃತಿಯೊಂದಿಗೆ ಮನುಷ್ಯನ ನಂಟನ್ನು ಪ್ರತಿಬಿಂಬಿಸುವ ಹಬ್ಬವಾಗಿದೆ. ಕೃಷಿ ಪ್ರಧಾನ ರಾಜ್ಯವಾಗಿರುವ ಕರ್ನಾಟಕದಲ್ಲಿ ಸಂಕ್ರಾಂತಿ ರೈತರ ಬದುಕಿನಲ್ಲೊಂದು ಹೊಸ ಆರಂಭದ ಸಂಕೇತವಾಗಿದ್ದು, ಬೆಳೆದ ಬೆಳೆಗಳಿಗೆ ಕೃತಜ್ಞತೆ ಸಲ್ಲಿಸುವ ದಿನವೂ ಹೌದು. ಹಬ್ಬಗಳು ಸಮಾಜದಲ್ಲಿ ಒಗ್ಗಟ್ಟನ್ನು ಬೆಳೆಸುವ ಶಕ್ತಿ ಹೊಂದಿವೆ. ಸಂಕ್ರಾಂತಿ ಹಬ್ಬದಂದು ಜಾತಿ–ಮತ–ಭಾಷೆ ಎನ್ನದೆ ಎಲ್ಲರೂ ಒಂದೇ ಮನೋಭಾವದಲ್ಲಿ ಸಂಭ್ರಮಿಸುವುದು ನಮ್ಮ ಸಂಸ್ಕೃತಿಯ ವೈಶಿಷ್ಟ್ಯ. ಎಳ್ಳು–ಬೆಲ್ಲ ಹಂಚಿಕೊಳ್ಳುವ ಮೂಲಕ ಸೌಹಾರ್ದತೆ, ಸಿಹಿ ಮಾತು ಮತ್ತು ಸಹಬಾಳ್ವೆಯ ಸಂದೇಶವನ್ನು ಈ ಹಬ್ಬ ಸಾರುತ್ತದೆ. ಇಂದಿನ ವೇಗದ ಬದುಕಿನಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ, ಸಂಕ್ರಾಂತಿಯಂತಹ ಹಬ್ಬಗಳು ಸಮಾಜವನ್ನು ಮತ್ತೆ ಮೂಲ ಮೌಲ್ಯಗಳತ್ತ ಕರೆತರುತ್ತವೆ. ಕಾರ್ಮಿಕರು, ರೈತರು, ಉದ್ಯೋಗಿಗಳು ಸೇರಿದಂತೆ ಎಲ್ಲ ವರ್ಗದ ಜನರ ಶ್ರಮವೇ ಸಮಾಜದ ಪ್ರಗತಿಗೆ ಮೂಲವೆಂಬ ಅರಿವು ಈ ಹಬ್ಬದ ಮೂಲಕ ಮತ್ತಷ್ಟು ಗಟ್ಟಿಯಾಗುತ್ತದೆ. ಗೊಲನ…
ಹೊಸ ವರ್ಷ ಆರಂಭದಲ್ಲಿ ಬರುವ ಮೊದಲ ಹಬ್ಬ ಸಂಕ್ರಾಂತಿ. ಮಕರ ಸಂಕ್ರಾಂತಿಯನ್ನು ಉತ್ಸವ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಇದರ ಸಂಭ್ರಮ ಹೆಚ್ಚು ತಮ್ಮದೇ ಆದ ರೀತಿಯಲ್ಲಿ. ಪದ್ಧತಿಯಲ್ಲಿ ನಡೆಯುವ ಹಬ್ಬದ ಸಿದ್ಧತೆಗಳು ಆರಂಭವಾಗುತ್ತದೆ. ಅಕ್ಕ ಪಕ್ಕದ ಮನೆಯ ಹೆಂಗಸರು ಒಬ್ಬರನ್ನೊಬ್ಬರು ಕೇಳುತ್ತಾ… ಹಬ್ಬಕ್ಕೆ ಸಿದ್ಧವಾಗುತ್ತಾರೆ ಎಳ್ಳು ಬೆಲ್ಲಕ್ಕೆ ಬೇಕೆಂದು ಕಡಲೆಕಾಯಿ ಸುಲಿಯೋದು, ಕೊಬ್ಬರಿ ಕಾಯಿ ಸಣ್ಣದಾಗಿ ಹಚ್ಚೋದು ಸಕ್ಕರೆ ಅಚ್ಚುಗಳನ್ನು ಮಾಡುವುದು ಬಿಳಿ ಎಳ್ಳನ್ನು ಹುರಿದು ಅದಕ್ಕೆ ಕಡಲೇ ಬೀಜ ಕೊಬ್ಬರಿ ಸಕ್ಕರೆ ಅಚ್ಚುಗಳನ್ನು ಸೇರಿಸಿ ಪ್ಯಾಕೇಟ್ ಮಾಡುವುದು. ಹಬ್ಬದ ದಿನ ಬೆಳಿಗ್ಗೆ ಎದ್ದು, ಮನೆಯಂಗಳದಲ್ಲಿ ಪೊಂಗಲ್ ಉಕ್ಕುತ್ತಿರುವ ರಂಗೋಲಿ ಮತ್ತು ಕಬ್ಬುಗಳ ಚಿತ್ರಗಳ ರಂಗೋಲಿ ಬಿಡಿಸಿ. ಬಣ್ಣ ಮತ್ತು ಹೂಗಳಿಂದ ರಂಗೋಲಿಗೆ ಅಲಂಕಾರ ಮಾಡುತ್ತಾರೆ. ಮನೆಯ ಹೊಸ್ತಿಲು ಮತ್ತು ದೇವರ ಕೋಣೆಯನ್ನು ಮಾವಿನ ತಳಿರು ತೋರಣಗಳು ಮತ್ತು ಕಬ್ಬು ಹೂವುಗಳಿಂದ ಅಲಂಕರಿಸುತ್ತಾರೆ. ಮನೆಯಲ್ಲಿ ಪೂಜೆ ಪುನಸ್ಕಾರ ಮುಗಿಸಿ ಊಟ ಮಾಡುವ ಹೊತ್ತಿಗೆ ಮಧ್ಯಾಹ್ನ ಆಗುತ್ತದೆ. ಸಂಜೆ ವೇಳೆಗೆ…
ತುಮಕೂರು: ಡಾ.ಜಿ.ಪರಮೇಶ್ವರ ಒಳಾಂಗಣ ಕ್ರೀಡಾ ಸಂಕೀರ್ಣವನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು. ಮೂಲತಃ ಕ್ರೀಡಾಪಟುವಾದ ತಮ್ಮ ಹೆಸರನ್ನು ಇಡುವುದಕ್ಕೆ ವಿರೋಧಿಸಿ ಪ್ರತಿಭಟಿಸಿದ ವಿರೋಧ ಪಕ್ಷದ ಬಿಜೆಪಿ ವಿರುದ್ಧ ವೇದಿಕೆಯಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸಂಕೀರ್ಣ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಅವರು, “ನಾನು ಮೂಲತಃ ಕ್ರೀಡಾಪಟು. ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷನಾಗಿ, ವಿದ್ಯಾರ್ಥಿಯಾಗಿದ್ದಾಗ ಅಥ್ಲೆಟಿಕ್ಸ್‌ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದೇನೆ. ಜಿಲ್ಲೆಯ ಶೈಕ್ಷಣಿಕ ಹಾಗೂ ಕ್ರೀಡೆ ಸೇರಿದಂತೆ ಅಭಿವೃದ್ಧಿಗೆ ನನ್ನ ಕೊಡುಗೆಯಿದೆ.” ಒಳಾಂಗಣ ಕ್ರೀಡಾಂಗಣಕ್ಕೆ ನನ್ನ ಹೆಸರು ಇಡಬೇಕೆಂದು ನಾನು ಯಾರಿಗೂ ಹೇಳಲಿಲ್ಲ. ಜಿಲ್ಲೆಯ ಕ್ರೀಡಾಭಿಮಾನಿಗಳು, ಕ್ರೀಡಾಪಟುಗಳೇ ಆಸಕ್ತಿಯಿಂದ ಈ ಸಂಕೀರ್ಣಕ್ಕೆ ನನ್ನ ಹೆಸರಿಡಬೇಕೆಂದು ಮನವಿ ಸಲ್ಲಿಸಿದ್ದರು. ಅದಕ್ಕೆ ಇಲಾಖೆಯ ಸಮ್ಮತಿಯೊಂದಿಗೆ ನನ್ನ ಹೆಸರಿಟ್ಟಿದ್ದಾರೆ. ಮಹಾತ್ಮ ಗಾಂಧಿ ಹೆಸರನ್ನು ಬದಲಿಸಿ ನನ್ನ ಹೆಸರು ಇಡಲಾಗಿದೆ ಎಂಬ ಬಿಜೆಪಿ ಅವರ ಪ್ರಚಾರ ಅಪ್ಪಟ ಸುಳ್ಳು ಮತ್ತು ಇದು ಕೇವಲ ರಾಜಕೀಯ ಅಪಪ್ರಚಾರ ಎಂದು ಅವರು ಹೇಳಿದರು. ಪರಮೇಶ್ವರ್…
ಶಬರಿಮಲೆ: ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಇಂದು ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ ಗೋಚರಿಸಲಿರುವ ದಿವ್ಯ ‘ಮಕರ ಜ್ಯೋತಿ’ಯನ್ನು ಕಣ್ತುಂಬಿಕೊಳ್ಳಲು ದೇಶದಾದ್ಯಂತದ ಲಕ್ಷಾಂತರ ಭಕ್ತರು ಶಬರಿಮಲೆಯಲ್ಲಿ ಜಮಾಯಿಸಿದ್ದಾರೆ. ಅಯ್ಯಪ್ಪನ ದರ್ಶನಕ್ಕಾಗಿ ಈಗಾಗಲೇ ಶಬರಿಮಲೆ ಭಕ್ತರ ಸಾಗರದಿಂದ ತುಂಬಿ ತುಳುಕುತ್ತಿದ್ದು, ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಘೋಷಣೆಗಳು ಎಲ್ಲೆಡೆ ಮೊಳಗುತ್ತಿವೆ. ಜ್ಯೋತಿ ದರ್ಶನ: ಸಂಜೆ ಪೊನ್ನಂಬಲಮೇಡುವಿನಲ್ಲಿ ಮೂರು ಬಾರಿ ಜ್ಯೋತಿ ರೂಪದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ ನೀಡಲಿದ್ದು, ಈ ಅಪೂರ್ವ ಕ್ಷಣವನ್ನು ವೀಕ್ಷಿಸಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಹೆಚ್ಚುವರಿ ಭದ್ರತೆ: ಭಕ್ತರ ಸಂಖ್ಯೆ ಅಪಾರವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೇರಳ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಭಕ್ತರ ಅನುಕೂಲಕ್ಕಾಗಿ ವಿಶೇಷವಾಗಿ 1,000 ಕೆಎಸ್ ಆರ್ ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದ ಭಕ್ತರ ಆಕ್ರೋಶ: ಭಕ್ತರ ಸಂಭ್ರಮದ ನಡುವೆಯೇ ಕೇರಳ ಪೊಲೀಸರ ನಡೆಗೆ ಕರ್ನಾಟಕದ ಮಾಲಾಧಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಕ್ತರ ಖಾಸಗಿ ವಾಹನಗಳನ್ನು ‘ಎರೆಮಲೆ’ಯಲ್ಲಿಯೇ ತಡೆಹಿಡಿದು, ಅಲ್ಲಿಂದ ಕೇರಳ ಸರ್ಕಾರದ ಬಸ್‌ಗಳಲ್ಲಿ…