Author: admin

ಗುಬ್ಬಿ: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹರದಗೆರೆ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿದ್ದರೂ, ಅದನ್ನು ಸ್ಥಳಾಂತರಿಸಲು ಅಧಿಕಾರಿಗಳು ಬಾರದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಹಿನ್ನೆಲೆ: ಹರದಗೆರೆ ಗ್ರಾಮದ ಸುತ್ತಮುತ್ತ ಕಳೆದ ಕೆಲವು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮನವಿಯ ಮೇರೆಗೆ ಅರಣ್ಯ ಇಲಾಖೆಯು ಹರದಗೆರೆಯ ಬೋವಿ ಕಾಲೋನಿಯ ಗೋವಿಂದಪ್ಪ ಎಂಬುವವರ ಜಮೀನಿನಲ್ಲಿ ಚಿರತೆ ಸೆರೆಗಾಗಿ ಬೋನು ಅಳವಡಿಸಿತ್ತು. ನಿನ್ನೆ ರಾತ್ರಿ ಈ ಬೋನಿಗೆ ಚಿರತೆಯು ಯಶಸ್ವಿಯಾಗಿ ಲಾಕ್ ಆಗಿದೆ. ಅಧಿಕಾರಿಗಳ ನಡೆಗೆ ಆಕ್ರೋಶ: ಚಿರತೆ ಬೋನಿಗೆ ಬಿದ್ದ ವಿಷಯ ತಿಳಿದರೂ ಗುಬ್ಬಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಚಿರತೆ ಸೆರೆಯಾಗಿ ಒಂದು ದಿನ ಕಳೆದರೂ ಅದನ್ನು ಕಾಡಿಗೆ ಬಿಡುವ ಅಥವಾ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಸಾರ್ವಜನಿಕರು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಅಧಿಕಾರಿಗಳು ಲಭ್ಯವಾಗುತ್ತಿಲ್ಲ. ಸೆರೆಯಾದ ಚಿರತೆಯನ್ನು…

Read More

ನವದೆಹಲಿ:  ಕರ್ಮಚಾರಿ ಭವಿಷ್ಯ ನಿಧಿ ಸಂಘಟನೆ (EPFO) ಡಿಸೆಂಬರ್–2025 ವೇತನ ತಿಂಗಳ ಇಲೆಕ್ಟ್ರಾನಿಕ್ ಚಾಲನ್—ಕಮ್–ರಿಟರ್ನ್ (ECR) ಸಲ್ಲಿಕೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ತಾಂತ್ರಿಕ ಹಾಗೂ ಕಾರ್ಯಾಚರಣಾತ್ಮಕ ಅಡಚಣೆಗಳ ಹಿನ್ನೆಲೆಯಲ್ಲಿ ಉದ್ಯೋಗದಾತರು ಹಾಗೂ ವಿವಿಧ ಹಿತಾಸಕ್ತಿದಾರರಿಂದ ಬಂದ ಮನವಿಗಳನ್ನು ಪರಿಗಣಿಸಿ, ECR ಸಲ್ಲಿಕೆಯ ಅಂತಿಮ ದಿನಾಂಕವನ್ನು ಜನವರಿ 20, 2026ರವರೆಗೆ ಮುಂದೂಡಲಾಗಿದೆ. ಈ ವಿಸ್ತರಣೆಯಿಂದ ಉದ್ಯೋಗದಾತರಿಗೆ ಹೆಚ್ಚುವರಿ ಐದು ದಿನಗಳ ಕಾಲಾವಕಾಶ ದೊರೆಯಲಿದೆ. ವಿಸ್ತರಿತ ಅವಧಿಯೊಳಗೆ ECR ಸಲ್ಲಿಸಿ ಪಾವತಿ ಮಾಡಿದಲ್ಲಿ ಯಾವುದೇ ಬಡ್ಡಿ ಅಥವಾ ದಂಡ ವಿಧಿಸಲಾಗುವುದಿಲ್ಲ ಎಂದು EPFO ಸ್ಪಷ್ಟಪಡಿಸಿದೆ. ಇದು ಉದ್ಯೋಗದಾತರ ಅನುಕೂಲಕ್ಕಾಗಿ ನೀಡಿರುವ ವಿಶೇಷ ಕ್ರಮವಾಗಿದ್ದು, ನಿಯಮಿತವಾಗಿ ರಿಟರ್ನ್ ಸಲ್ಲಿಸಲು ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ. ಕೇಂದ್ರ ಭವಿಷ್ಯ ನಿಧಿ ಆಯುಕ್ತರ (CPFC) ಅನುಮೋದನೆಯೊಂದಿಗೆ ಈ ಆದೇಶವನ್ನು ಹೊರಡಿಸಲಾಗಿದ್ದು, ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಆಯುಕ್ತರು (ಅನುಸರಣೆ) ಪಿ.ಬಿ.ವರ್ಮಾ ಅವರು ಈ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ. EPFO, ಉದ್ಯೋಗದಾತರು ವಿಸ್ತರಿಸಲಾದ ಅವಧಿಯನ್ನು ಸದುಪಯೋಗಪಡಿಸಿಕೊಂಡು ಸಮಯಕ್ಕೆ ಸರಿಯಾಗಿ EPF…

Read More

ಬೀದರ್: ರಾಜ್ಯ ರಾಜಕಾರಣದ ಧೀಮಂತ ನಾಯಕ, ಮಾಜಿ ಸಚಿವ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷರಾಗಿದ್ದ ಡಾ. ಭೀಮಣ್ಣ ಖಂಡ್ರೆ (102) ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಬೀದರ್‌ ನ ತಮ್ಮ ಸ್ವಗೃಹದಲ್ಲಿ ನಿಧನರಾದರು. 1927ರಲ್ಲಿ ಜನಿಸಿದ ಭೀಮಣ್ಣ ಖಂಡ್ರೆ ಅವರು ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಭಾಲ್ಕಿ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಇವರು, ಎಂ. ವೀರಪ್ಪ ಮೊಯಿಲಿ ಅವರ ಸಚಿವ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದ ಇವರು, ಶಿಸ್ತುಬದ್ಧ ಆಡಳಿತಕ್ಕೆ ಹೆಸರಾಗಿದ್ದರು. ಅವರು ಪುತ್ರ, ಪ್ರಸ್ತುತ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೇರಿದಂತೆ ಅಪಾರ ಬಂಧು-ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. “ಶರಣ ಚಿಂತನೆಯ ನೆರಳಿನಂತೆ ಬಾಳಿದ ಧೀಮಂತ ನಾಯಕನ…

Read More

ತುಮಕೂರು: ಜಿಲ್ಲೆಯ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು. ತುಮಕೂರಿನ ಯುವಜನತೆ ಇದರ ಸದುಪಯೋಗ ಪಡೆದು ವಿಶ್ವಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತುಮಕೂರಿನಲ್ಲಿ ಆಯೋಜಿಸಿದ್ದ “ಕರ್ನಾಟಕ ಕ್ರೀಡಾಕೂಟ -2025 – 2026″ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು,  ಕ್ರೀಡೆಯಿಂದ ಜೀವನದಲ್ಲಿ ಶಿಸ್ತು, ಸಂಯಮ, ಸಮಯಪ್ರಜ್ಞೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು, ಇದರ ರೂವಾರಿಯಾಗಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಅಭಿನಂದನೆಗಳು ಎಂದರು. ನಾನು ವಿದ್ಯಾರ್ಥಿದೆಸೆಯಲ್ಲಿ ಕಬಡ್ಡಿ ಪಟುವಾಗಿದ್ದೆ, ಅದರೊಂದಿಗೆ ಫುಟ್ ಬಾಲ್, ಕ್ರಿಕೆಟ್ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದೆ. ಅದರಿಂದ ಈಗಾಗಲೂ ಆಗಾಗ್ಗೆ ಏಕದಿನ ಕ್ರಿಕೆಟ್, ಟಿ.–20 ಕ್ರಿಕೆಟ್ ನೋಡುತ್ತೇನೆ. ಕೆಲಸದೊತ್ತಡದ ನಡುವೆಯೂ ಅಂತರರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ವೀಕ್ಷಿಸುವುದನ್ನು ತಪ್ಪಿಸುವುದಿಲ್ಲ ಎಂದರು. ಕ್ರೀಡೆಯಲ್ಲಿ ಸೋಲು — ಗೆಲುವು ಮುಖ್ಯವಲ್ಲ, ಕ್ರೀಡಾಸ್ಪೂರ್ತಿ ಮುಖ್ಯ. ಪ್ರತಿ ಕ್ರೀಡಾಪಟುವು ಇದನ್ನು ಪಾಲಿಸಬೇಕು. ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದ್ದು, ಕಠಿಣ ಶ್ರಮ ಅತ್ಯಗತ್ಯ. ಪರಿಶ್ರಮದಿಂದ ಗುರಿ ಸಾಧಿಸಲು ಉತ್ತಮ ತರಬೇತಿ…

Read More

ಸರಗೂರು: ಹಳೆ ವೈಷಮ್ಯಕ್ಕೆ ಯುವಕನೊರ್ವನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸರಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೊಳೆಯೂರು ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಗ್ರಾಮದ ರಮೇಶ್ ಆಲಿಯಾಸ್ ಕರಿಯಪ್ಪ(33) ಕೊಲೆಯಾದವ. ಈತನನ್ನು ಸ್ನೇಹಿತ ಅನುರಾಜ್ ಬಿನ್ ಪುಟ್ಟರಾಜು ಎಂಬಾತ ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ಜೋರಾಗಿ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಅನುರಾಜ್‌ ನನ್ನು 24 ಗಂಟೆಯೊಳಗೆ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಸರಗೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ವಿವರ: ಮೊಳೆಯೂರು ಗ್ರಾಮದ ರಮೇಶ್, ಅನುರಾಜ್ ನಡುವೆ ಹಾಗಾಗ್ಗೆ ಹಳೆ ವೈಷಮ್ಯಕ್ಕೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಬುಧವಾರ ತಡರಾತ್ರಿ ಸಮೀಪದ ರಾಗಿ ಜಮೀನಿನಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗೆ ಕಾವಲು ಕಾಯುವ ಸಲುವಾಗಿ ಮರದಲ್ಲಿ ಹಟ್ಟಣೆ ಕಟ್ಟಿಕೊಂಡು ಕಾಯುವಾಗ ರಮೇಶ್ ಎಂಬಾತ ಅನುರಾಜ್‌ ಗೆ ಪೋನ್ ಕರೆ ಮಾಡಿದ್ದು, ಈ ನಡುವೆ ಮತ್ತೆ ಜೋರಾಗಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಅನುರಾಜ್ ಹಟ್ಟಣೆಯಲ್ಲಿ ಮಲಗಿರುವಾಗ ರಮೇಶ್…

Read More

ಕೊರಟಗೆರೆ: ನಾಯಿ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ,  ಚಿರತೆ  ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ. ಪಟ್ಟಣದ 4ನೇ ವಾರ್ಡ್, ಕಾವಲುಬೀಳು ಗ್ರಾಮದ ನಿವಾಸಿ ರಮೇಶ್ ಎಂಬುವರ  ಸಾಕುನಾಯಿ ಮೇಲೆ  ಮಂಗಳವಾರ ರಾತ್ರಿ ದಾಳಿ ನಡೆಸಿತ್ತು, ಇದರಿಂದ ಸಾರ್ವಜನಿಕರು ಭಯಬೀತರಾಗಿದ್ದರು, ತಕ್ಷಣ ಅರಣ್ಯ ಇಲಾಖೆ ಸೂಕ್ತಕ್ರಮವಹಿಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 2 ವರ್ಷದ ಚಿರತೆ ಮರಿ ಬೋನಿಗೆ ಬಿದ್ದು ಘರ್ಜಿಸುತ್ತಿದ್ದು, ಪಟ್ಟಣದ ಜನತೆ ಚಿರತೆ ನೋಡಲು ದೌಡಾಯಿಸಿ ಮುಗಿಬಿದ್ದದ್ದು ಕಂಡು ಬಂದಿತು.  ಹಿರೇಬೆಟ್ಟ ರಕ್ಷಿತ ಅರಣ್ಯ ಪ್ರದೇಶದಲ್ಲಿ ಚಿರತೆಗಳ ಉಪಟಳ ಹೆಚ್ಚುಗುತ್ತಿರುವುದರ ಬಗ್ಗೆ ಗಮನಹರಿಸಿದ ಅರಣ್ಯ ಇಲಾಖೆ ತಕ್ಷಣ ಕ್ರಮವಹಿಸಿರುವುದರಿಂದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ವಿಷಯ ತಿಳಿದ ತಕ್ಷಣ ಡಿಆರ್ ಎಫ್ ಓ ದಿಲೀಪ್ ಸೇರಿದಂತೆ ಸಿಬ್ಬಂದಿಗಳ ಸ್ಥಳಕ್ಕೆ ಬಂದು‌ ಚಿರತೆ ಬೇರೆಡೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ. ವರದಿ: ಮಂಜುಸ್ವಾಮಿ ಎಂ.ಎನ್. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ತುಮಕೂರು: ಜಿಲ್ಲೆಯ ಪ್ರಭಾವಿ ನಾಯಕ ರಾಜಣ್ಣ ಅವರಿಗೆ ಮತ್ತೆ ಮಂತ್ರಿ ಸ್ಥಾನ ಸಿಗುವ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ತುಮಕೂರಿಗೆ ಭೇಟಿ ನೀಡಿದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಎನ್.ರಾಜಣ್ಣ ಅವರ ಮನೆಗೆ ಭೇಟಿ ನೀಡಿದ್ದರು.  ಈ  ವೇಳೆ ರಾಜಣ್ಣ ಅವರ ಬಗ್ಗೆ ಆಡಿದ ಮಾತುಗಳು ಈಗ ಕುತೂಹಲ ಮೂಡಿಸಿವೆ. ರಾಜಣ್ಣ ಅವರಿಗೆ ಸಿಹಿ ಸುದ್ದಿ: ರಾಜಣ್ಣ ಅವರಿಗೆ ಮಂತ್ರಿ ಸ್ಥಾನ ನೀಡುವ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, “ರಾಜಣ್ಣ ಅವರ ಜೊತೆ ಯಾವಾಗಲೂ ಸಿಹಿ ಸುದ್ದಿಯೇ ಇರುತ್ತದೆ” ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಹೈಕಮಾಂಡ್ ಜೊತೆ ಚರ್ಚೆ: ರಾಜಣ್ಣ ಅವರಿಗೆ ತಮ್ಮ ಅವಧಿಯಲ್ಲೇ ಮಂತ್ರಿ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಈ ವಿಚಾರವಾಗಿ ನಾನು ಹೈಕಮಾಂಡ್ ನಾಯಕರ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. ಊಟದ ವೈವಿಧ್ಯತೆ: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಟಿ ಶೈಲಿಯ ಊಟದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ತಮಗೆ ಜ್ವರವಿದ್ದ ಕಾರಣ ಬಾಯಿ ಕೆಟ್ಟಿತ್ತು,…

Read More

ವೈ.ಎನ್.ಹೊಸಕೋಟೆ: ಹಣಕಾಸಿನ ವಿಚಾರದಲ್ಲಿ ಉಂಟಾದ ಕ್ಷುಲ್ಲಕ ಜಗಳದಿಂದ ಮಹಿಳೆಯ ಪ್ರಾಣಕ್ಕೆ ಕುತ್ತು ತಂದ ಘಟನೆ ಹೋಬಳಿಯ ಚಿಕ್ಕಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಹನುಮಕ್ಕ (45) ಎಂಬಾಕೆ ತನ್ನ ಗಂಡ ಕಾಣೆಯಾಗಿದ್ದು, ಅಂದಿನಿಂದ ಚಿಕ್ಕಹಳ್ಳಿಯಲ್ಲಿ ಇಂದ್ರಬೆಟ್ಟ ಗ್ರಾಮದ ಚನ್ನಕೇಶವ (55) ಎಂಬುವರ ಜೊತೆ ವಾಸಿಸುತ್ತಿದ್ದರು. ಬುಧವಾರ ಸಂಜೆ ಇವರಿಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ತಲೆಗೆ ಬಿದ್ದಿರುವ ಕಟ್ಟಿಗೆ ಏಟಿನಿಂದ ಹನುಮಕ್ಕ ಸ್ಥಳದಲ್ಲೇ ಮರಣ ಹೊಂದಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಕೊಲೆ ಆರೋಪಿ ಸೆರೆಗೆ ಕ್ರಮಕೈಗೊಳ್ಳಲಾಗಿದೆ. ನಮ್ಮತುಮಕೂರಿನಕ್ಷಣಕ್ಷಣದಸುದ್ದಿಗಳನ್ನುನಿರಂತರವಾಗಿಪಡೆಯಲುನಿಮ್ಮವಾಟ್ಸಾಪ್ಗ್ರೂಪ್ಗೆ 8123382149 ಸಂಖ್ಯೆಯನ್ನುಸೇರಿಸಿ. ಗ್ರೂಪ್ಗೆಜಾಯಿನ್ಆಗಿ: https://chat.whatsapp.com/ISmeQjik4LbG9KvWhKlbCC

Read More

ಕುಣಿಗಲ್/ಕೆ.ಜಿ.ದೇವಪಟ್ಟಣ: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆ.ಜಿ. ದೇವಪಟ್ಟಣದ (ಹಂಗರಹಳ್ಳಿ) ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರದಲ್ಲಿ ನಾಳೆ (ಜನವರಿ 17) ಅದ್ದೂರಿ ‘ವರ್ಧಂತಿ ಮಹೋತ್ಸವ’ ಜರುಗಲಿದ್ದು, ಕಾರ್ಯಕ್ರಮದ ಅಂಗವಾಗಿ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳ ಆಶೀರ್ವಾದ ಪಡೆಯಲಾಗಿದೆ. ಶೃಂಗೇರಿ ಶ್ರೀಗಳ ಅನುಗ್ರಹ: ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಪ್ರಯುಕ್ತ, ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ ಶ್ರೀ ಬಾಲ ಮಂಜುನಾಥ ಸ್ವಾಮೀಜಿರವರು ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರಿಗೆ ಆಮಂತ್ರಣ ಪತ್ರಿಕೆ ಸಮರ್ಪಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಜಗದ್ಗುರುಗಳು ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರಿಗೆ ಶ್ರೀ ಮಠದ ವತಿಯಿಂದ ಪವಿತ್ರ ವಸ್ತ್ರವನ್ನು ಸಮರ್ಪಣೆ ಮಾಡಿ, ಕಾರ್ಯಕ್ರಮ ಯಶಸ್ವಿಯಾಗಲೆಂದು ಹರಸಿದರು. ಧಾರ್ಮಿಕ ಕಾರ್ಯಕ್ರಮಗಳ ವಿವರ: ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರದಲ್ಲಿ ಜ. 07 ರಿಂದ ಜ. 17 ರವರೆಗೆ ಪ್ರತಿದಿನ…

Read More

ತುಮಕೂರು: ವ್ಯಕ್ತಿಯೊಬ್ಬರನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಶಿರಾ ತಾಲ್ಲೂಕಿನ ಮಾರನಗೆರೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ನಿತಿನ್ ತುಳಸಿರಾಮ್ (40) ಎಂದು ಗುರುತಿಸಲಾಗಿದೆ. ನಿತಿನ್ ತುಳಸಿರಾಮ್ ಅವರ ಪತ್ನಿ ಯಶೋಧ ಅವರ ಮೊದಲ ಗಂಡನ ಮಗ ಹರೀಶ್ ಕೊಲೆಗೈದಿರುವ ಆರೋಪಿ. ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಾಚಿ ಸಾಗರ್‌ ಘಡ್ ಗ್ರಾಮದ ನಿತಿನ್ ಶಿರಾ ತಾಲ್ಲೂಕಿನ ಮಾರನಗೆರೆಯಲ್ಲಿ ಮೂರು ವರ್ಷಗಳಿಂದ ಇದ್ದಿಲು ಸುಡುವ ಕೆಲಸ ಮಾಡಿಕೊಂಡಿದ್ದರು. ನಿತಿನ್ ಯಶೋಧ ಎಂಬುವವರನ್ನು ಎರಡನೇ ಮದುವೆಯಾಗಿದ್ದರು. ಯಶೋಧ ಮೊದಲ ಗಂಡ ರಾಮ್ ವಸಂತ್ ನಾಯ್ಕ ಮೃತಪಟ್ಟ ನಂತರ ಎರಡನೇ ಮದುವೆಯಾಗಿದ್ದು, ಮೊದಲ ಗಂಡನಿಂದ ನರೇಶ್ ಮತ್ತು ಹರೀಶ್ ಎಂಬ ಇಬ್ಬರು ಮಕ್ಕಳಿದ್ದಾರೆ. ರೇಷನ್ ವಿಚಾರವಾಗಿ ಜಗಳ ಪ್ರಾರಂಭವಾಗಿ ಹೊಡೆದಾಟದ ಹಂತಕ್ಕೆ ಹೋಗಿದೆ. ಆಗ ಯಶೋದಳ ಮೊದಲ ಗಂಡನ ಮಗ ಹರೀಶ್ ನಮ್ಮ ತಂದೆ ಸತ್ತ ನಂತರ ತಾಯಿಯನ್ನು ಕರೆದುಕೊಂಡು ಬಂದು ಮದುವೆಯಾಗಿದ್ದಲ್ಲದೆ, ಹೊಡೆಯುತ್ತೀಯಾ ಎಂದು ನಿತಿನ್ ಮೇಲೆ ಜಗಳ ತೆಗೆದು ತಕ್ಷಣ ಕೊಡಲಿಯಿಂದ ಹೊಟ್ಟೆಯ ಭಾಗಕ್ಕೆ…

Read More