Author: admin

ಮಧುಗಿರಿ: ಪೊಲೀಸ್‌ ಠಾಣೆ ಕಟ್ಟಡ ಕಾಮಗಾರಿಗೆ ಬಂದಿದ್ದ ಕಾರ್ಮಿಕ ಅಚಾನಕ್ಕಾಗಿ ಮೃತಪಟ್ಟ ಘಟನೆ ನಡೆದಿದೆ. ತಾಲೂಕಿನ ಕೊಡಿಗೇನಹಳ್ಳಿ ನೂತನ ಪೊಲೀಸ್‌ ಠಾಣೆಯ ಕಟ್ಟಡದ ಕಾಮಗಾರಿಗೆ ಕಳೆದ ನಾಲ್ಕು ದಿನಗಳ ಹಿಂದೆ ಬಂದಿದ್ದ ಕಾರ್ಮಿಕರ ತಂಡದಲ್ಲಿದ್ದ ವಾಲ್ಮೀಕಿ ಸಹನ್‌ ಭಾನುವಾರ ಬೆಳಿಗ್ಗೆ 7 ಗಂಟೆ ಮದ್ಯಪಾನ ಮಾಡಿಕೊಂಡು ಸುತ್ತಾಡುತ್ತಿದ್ದು ಜಪಾನ್‌ ಕಾಂಡಿಮೆಂಟ್ಸ್ ಬಳಿ ಸುಮಾರು 11 ಗಂಟೆಗೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಗುತ್ತಿಗೆದಾರ ಮಾಹಿತಿ ಇಲ್ಲದೆ ಕಟ್ಟಡ ಕೆಲಸಕ್ಕೆ ಕಾರ್ಮಿಕರನ್ನು ಕರೆದುಕೊಂಡಿದ್ದ ಪರಿಣಾಮ ಕಾರ್ಮಿಕನ ವಿಳಾಸ ಹುಡುಕಲು ಕೆಲ ಕಾಲ ಪೊಲೀಸರ ಪರದಾಡಿದರು. ಬಿಹಾರ ಮೂಲದ ಪಲ್ಯ ಜಿಲ್ಲೆಯ ವಾಲ್ಮೀಕಿ ಸಹನ್‌ (35) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಸಿಪಿಐ ಹನುಮಂತರಾಯಪ್ಪ ಎಎಸ್‌ ಐ ರಂಗನಾಥ್‌ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು ಮೃತ ವ್ಯಕ್ತಿಯ ದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…

Read More

ತುಮಕೂರು: ವೊಡೆ ಪ್ರತಿಷ್ಠಾನ ಬೆಂಗಳೂರು ಇವರ ವತಿಯಿಂದ ತುಮಕೂರು ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಏಕಪೋಷಕ ಹಾಗೂ ಅನಾಥ ಅಂಗವಿಕಲ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಉದ್ದೇಶಿಸಿದೆ. ಆಸಕ್ತರು ಪ್ರೊ. ಕೆ. ಚಂದ್ರಣ್ಣ, ಗೌರವ ಕಾರ್ಯದರ್ಶಿಗಳು, ಶುದ್ಧಿ ಪ್ರತಿಷ್ಠಾನ, ಸೌಮ್ಯ ಸದನ, ಶಾರದಾ ದೇವಿ ನಗರ, ತುಮಕೂರು ಈ ವಿಳಾಸದಲ್ಲಿ ಅರ್ಜಿ ಪಡೆದು ಜೂ. 30ರ ಒಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಪ್ರೊ. ಚಂದ್ರಣ್ಣ, 6360002626 ಇವರನ್ನು ಸಂಪರ್ಕಿಸುವುದು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುಮಕೂರು: ಜನವರಿ 26 ಗಣರಾಜ್ಯೋತ್ಸವ ದಿನದಂದು ನಗರದ ಬಿಜಿಎಸ್ ವೃತ್ತದಿಂದ ಎಸ್.ಪಿ. ಕಚೇರಿಯವರೆಗೆ ವಿವಿಧ ದಲಿತಪರ ಸಂಘಟನೆಗಳಿಂದ ಬೃಹತ್ ತಮಟೆ ಚಳುವಳಿಯನ್ನು ಹಮ್ಮಿಕೊಂಡಿದ್ದು ಆ ಕುರಿತು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿಯನ್ನು ಸಹ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ತುಮಕೂರು ನಗರದ ಎಂ.ಜಿ.ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ತುರುವೇಕೆರೆ ತಾಲೂಕು ಕಾಡಲಗೆರೆ ಕಾವಲ್ ಗ್ರಾಮದಲ್ಲಿ ದಲಿತರು ತೆಗೆದುಕೊಂಡಿರುವ ಜಮೀನಿನಲ್ಲಿ ಕಲ್ಲುಕಂಬ ಹೊಡೆದು ಹಾಕಿರುವ ವಿಚಾರವಾಗಿ ಮತ್ತು ಕಲ್ಲುಕಂಬ ಹೊಡೆದು ಹಾಕಿರುವ ರವರ ಮೇಲೆ ಕಾನೂನು ರೀತಿ ಅಟ್ರಾಸಿಟಿ ಕೇಸ್ ದಾಖಲಿಸದೆ ಇರುವ ಬಗ್ಗೆ ವಿವಿಧ ದಲಿತ ಸಂಘಟನೆಗಳು ಎರಡನೇ ಪೂರ್ವಭಾವಿ ಸಭೆಯನ್ನು ಕರೆದು ವಿವರವಾಗಿ ಚರ್ಚಿಸಿ ಈಗಾಗಲೇ ತುರುವೇಕೆರೆ ವೃತ್ತ ನಿರೀಕ್ಷಕರು ವರ್ಗಾವಣೆಗೊಂಡಿದ್ದು ನೂತನ ವೃತ್ತ ನಿರೀಕ್ಷಕರಿಗೆ ಅಧಿಕಾರ ಹಸ್ತಾಂತರ ಮಾಡದೆ ಇರುವುದು ಮತ್ತು ದಲಿತರು ಕೊಟ್ಟಿರುವ ದೂರಿಗೆ ಎಫ್‌ ಐಆರ್ ದಾಖಲಿಸಲು ಶಿಸ್ತು ಕ್ರಮ ಕೈಗೊಳ್ಳಲು ಕುಣಿಗಲ್ ಡಿವೈಎಸ್ಪಿ ರವರಿಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದೂರನ್ನು ವರ್ಗಾವಣೆ ಮಾಡಿದರು ಸಹ…

Read More

ತುಮಕೂರು: ತುಮಕೂರು ರನ್ನರ್ಸ್ ಕ್ಲಬ್ ಟ್ರಸ್ಟ್ ವತಿಯಿಂದ ‘ಸೇ ನೋ ಡ್ರಗ್ಸ್ – ಯಸ್ ಟೂ ಸ್ಪೋರ್ಟ್ಸ್’ ಎಂಬ ಘೋಷವಾಕ್ಯದೊಂದಿಗೆ 2026ನೇ ಫೆಬ್ರವರಿ 01 ರಂದು 5 ಕಿ.ಮೀ., 10 ಕಿ.ಮೀ ಹಾಗೂ 21 ಕಿ.ಮೀ.ಗಳ 2ನೇ ತುಮಕೂರು ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಡಾ.ರವಿ.ಪಿ.ಎಂ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ 2ನೇ ತುಮಕೂರು ಮ್ಯಾರಥಾನ್ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, 2026ರ ಫೆಬ್ರವರಿ 01 ರಂದು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ 2ನೇ ತುಮಕೂರು ಮ್ಯಾರಥಾನ್ ಓಟ ಆಯೋಜಿಸಲಾಗಿದೆ. ಈಗಾಗಲೇ 1800 ಓಟಗಾರರು ತಮ್ಮ ಹೆಸರು ನೋಂದಾಯಿಸಿದ್ದು, ಜನವರಿ 18ಕ್ಕೆ ಹೆಸರು ನೋಂದಾವಣೆಯ ನೀಡಿದ್ದ ಅವಧಿ ಪೂರ್ಣಗೊಂಡಿದೆ. 5, 10 ಮತ್ತು 21 ಕಿಮಿ ಓಟದ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಓಟಗಾರರಿಗೆ ಐವತ್ತು ಸಾವಿರ ರೂಗಳ ಬಹುಮಾನವನ್ನು ಹಂಚಿಕೆ ಮಾಡಲಾಗುವುದು ಎಂದರು. ಉದಯೋನ್ಮುಖ ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ತುಮಕೂರು ಮ್ಯಾರಥಾನ್ ಒಳ್ಳೆಯ ವೇದಿಕೆಯಾಗಿದೆ.…

Read More

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ಶೇ.100 ಸಾಧನೆ: ಇಂದಿನ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಳು ಮತ್ತು ರ್ಯಾಂಕ್‌ ಗಳೇ ಯಶಸ್ಸಿನ ಏಕೈಕ ಮಾನದಂಡಗಳಾಗುತ್ತಿರುವ ಸಂದರ್ಭದಲ್ಲಿ, ವಿದ್ಯಾರ್ಥಿಯ ಸೃಜನಶೀಲತೆ, ಕಲಾತ್ಮಕತೆ ಹಾಗೂ ಮಾನಸಿಕ ಅಭಿವ್ಯಕ್ತಿಗೂ ಸಮಾನ ಮಹತ್ವ ನೀಡಬೇಕಾದ ಅಗತ್ಯ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಗುಬ್ಬಿ ತಾಲ್ಲೂಕಿನ ಮಾವಿನಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಸಾಧಿಸಿರುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯ ಶೇ.100 ಫಲಿತಾಂಶ ಕೇವಲ ಒಂದು ಪರೀಕ್ಷಾ ಸುದ್ದಿಯಲ್ಲ; ಅದು ಶಿಕ್ಷಣದ ದಿಕ್ಕನ್ನು ಮರುಪರಿಶೀಲಿಸಲು ಪ್ರೇರೇಪಿಸುವ ಮಹತ್ವದ ಸಂದೇಶವಾಗಿದೆ. 2025–26ನೇ ಸಾಲಿನ ಲೋಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯಲ್ಲಿ ಭಾಗವಹಿಸಿದ್ದ 12 ವಿದ್ಯಾರ್ಥಿನಿಯರಲ್ಲಿ 9 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಹಾಗೂ 3 ವಿದ್ಯಾರ್ಥಿನಿಯರು ಪ್ರಥಮ ದರ್ಜೆ ಪಡೆದುಕೊಂಡಿರುವುದು, ವಸತಿ ಶಾಲೆಗಳಲ್ಲಿಯೂ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಶಕ್ತಿ ಇದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ. ಸಾಮಾನ್ಯವಾಗಿ ವಸತಿ ಶಾಲೆಗಳ ಬಗ್ಗೆ ಸಮಾಜದಲ್ಲಿ ಇರುವ ಕೆಲ ತಪ್ಪು ಕಲ್ಪನೆಗಳನ್ನು ಈ ಸಾಧನೆ ಸಂಪೂರ್ಣವಾಗಿ ತಳ್ಳಿ ಹಾಕಿದೆ.…

Read More

ಸರಗೂರು:  ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ಸ್ಮರಣೀಯ ದಿನಗಳನ್ನು ಮೆಲುಕು ಹಾಕಲು ಹಿಂದೂ ಹೈಸ್ಕೂಲ್‌ನ 1988–89ರ ಬ್ಯಾಚ್‌ ವಿದ್ಯಾರ್ಥಿಗಳು 36 ವರ್ಷಗಳ ನಂತರ ಜೀವನಕ್ಕೆ ಆದರ್ಶ ಮಾರ್ಗ ತೋರಿಸಿದ ಶಿಕ್ಷಕರನ್ನು ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವ ಅರ್ಪಿಸುತ್ತಿರುವುದು ಶ್ಲಾಘನೀಯವಾಗಿದ್ದು ಎಂದು   ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಪಡುವಲ ವಿರಕ್ತ ಮಠದ ಮಹದೇವಸ್ವಾಮಿಗಳು ಹೇಳಿದರು. 1988–89 ಸಾಲಿನಲ್ಲಿ ಶಿಕ್ಷಣ ಪಡೆದ ಹಳೆ ವಿದ್ಯಾರ್ಥಿಗಳ ಸ್ನೇಹ ಸಂಗಮ ಹಾಗೂ ಗುರುವಂದನ ಕಾರ್ಯಕ್ರಮ ಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ದಂದು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ದಿವ್ಯ ಸಾನಿಧ್ಯ ವಹಿಸಿ  ಉದ್ಘಾಟಿಸಿ ಮಾತನಾಡಿದರು. 1988 ರಲ್ಲಿ 8ನೇ ತರಗತಿ ಸೆರಿ ಎಸ್ ಎಸ್ ಎಲ್ಸಿ ಶಿಕ್ಷಣ ಪಡೆದ ಹಳೆ ವಿದ್ಯಾರ್ಥಿಗಳು ತಾವು ಓದಿದ ಸಾಲಿನಲ್ಲಿ ಸೇರಿ ಅಕ್ಷರ ಕಳಿಸಿದ ಶಿಕ್ಷಕರಿಗೆ ಸನ್ಮಾನಿಸಿ ನೆನೆಪಿನ ಕಾಣಿಕೆ ನೀಡಿದರು. ಹಳೆ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣ, ನೌಕರಿ ಪಡೆದ ಸಂಗತಿಯನ್ನು ಹಂಚಿಕೊಂಡರು. ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ಅವಿನಾಭಾವ…

Read More

ತುಮಕೂರು ಜಿಲ್ಲೆಯ ಹೆಮ್ಮೆಯ ಗುರುತಾಗಿರುವ ಸಿದ್ಧಗಂಗಾ ಮಠದ ಮಹಾಸ್ವಾಮೀಜಿ ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ಕೇವಲ ಒಂದು ಪೀಠದಾಧಿಪತಿಯಾಗಿರಲಿಲ್ಲ; ಅವರು ಸಮಾಜದ ಅಂತಃಕರಣವಾಗಿದ್ದರು. “ನಡೆದಾಡುವ ದೇವರು” ಎಂಬ ನಾಮಧೇಯ ಅವರಿಗೆ ಜನರು ನೀಡಿದ್ದು ಭಕ್ತಿಯಿಂದ ಮಾತ್ರವಲ್ಲ, ಅವರು ಬದುಕಿದ ರೀತಿಯಿಂದ. ಶಿಕ್ಷಣವೇ ಸಾಮಾಜಿಕ ನ್ಯಾಯದ ಬಲವಾದ ಅಸ್ತ್ರ ಎಂಬ ನಂಬಿಕೆಯನ್ನು ಜೀವನಪೂರ್ತಿ ಅನುಸರಿಸಿದವರು ಶಿವಕುಮಾರ ಮಹಾಸ್ವಾಮೀಜಿಗಳು. ಜಾತಿ, ಧರ್ಮ, ಭಾಷೆ, ಪ್ರಾಂತ್ಯ ಎಂಬ ಎಲ್ಲ ಬೇಧಗಳನ್ನು ಮೀರಿ ಅನ್ನದಿಂದ ಅಕ್ಷರವರೆಗೆ ಎಂಬ ಮಹಾಮಂತ್ರವನ್ನು ಕಾರ್ಯರೂಪಕ್ಕೆ ತಂದರು. ಲಕ್ಷಾಂತರ ಬಡ, ಅನಾಥ ಮತ್ತು ಗ್ರಾಮೀಣ ಮಕ್ಕಳಿಗೆ ಸಿದ್ಧಗಂಗಾ ಮಠ ಆಶ್ರಯವಾಯಿತು; ಅಕ್ಷರಾಭ್ಯಾಸದಿಂದ ಜೀವನಾಭ್ಯಾಸದವರೆಗೆ ಅವರ ಕೈ ಹಿಡಿದಿತು. ಐಶ್ವರ್ಯ, ಅಧಿಕಾರ, ಪ್ರಚಾರ—ಇವೆಲ್ಲಕ್ಕೂ ದೂರವಿದ್ದ ಸರಳ ಜೀವನವೇ ಅವರ ಶಕ್ತಿ. ರಾಜಕೀಯ ಒತ್ತಡಗಳ ನಡುವೆಯೂ ಅವರು ಸಮಾಜದ ಹಿತವನ್ನೇ ಮೊದಲಿಗರನ್ನಾಗಿ ನೋಡಿದರು. ಅಧಿಕಾರಸ್ಥರಿಗೆ ಸತ್ಯ ಹೇಳುವ ಧೈರ್ಯ, ಜನಸಾಮಾನ್ಯರ ನೋವಿಗೆ ಸ್ಪಂದಿಸುವ ಸಂವೇದನೆ—ಇವುಗಳ ಸಮನ್ವಯವೇ ಅವರ ವ್ಯಕ್ತಿತ್ವ. ಇಂದಿನ ದಿನಗಳಲ್ಲಿ ಶಿಕ್ಷಣ ವ್ಯಾಪಾರವಾಗುತ್ತಿರುವುದು, ಸೇವೆ…

Read More

ಬೆಂಗಳೂರು: ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಅದ್ಧೂರಿ ಸಮಾರೋಪ ಕಂಡಿದೆ. ಹಲವು ವಾರಗಳ ತೀವ್ರ ಪೈಪೋಟಿ, ಸವಾಲುಗಳು ಮತ್ತು ಮನರಂಜನೆಯ ನಂತರ, ‘ಗಿಲ್ಲಿ ನಟ’ ಈ ಬಾರಿಯ ವಿಜೇತರಾಗಿ ಹೊರಹೊಮ್ಮಿದ್ದಾರೆ. ವಿಜೇತರು: ಅಂತಿಮ ಹಣಾಹಣಿಯಲ್ಲಿ ಗಿಲ್ಲಿ ನಟ ಅವರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಇವರಿಗೆ ಬಿಗ್ ಬಾಸ್ ಟ್ರೋಫಿಯೊಂದಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ಲಭಿಸಿದೆ. ರನ್ನರ್ ಅಪ್: ಪ್ರಬಲ ಸ್ಪರ್ಧಿಯಾಗಿದ್ದ ರಕ್ಷಿತಾ ಶೆಟ್ಟಿ ಅವರು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು. ಟಾಪ್ 6 ಸ್ಪರ್ಧಿಗಳು: ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಕಾವ್ಯ ಶೈವ, ಮ್ಯೂಟೆಂಟ್ ರಘು ಮತ್ತು ಧನುಷ್ ಗೌಡ ಅವರು ಅಂತಿಮ ಹಂತ ತಲುಪಿದ್ದರು. ಅಂತಿಮ ಹಂತದ ಎಲಿಮಿನೇಷನ್ ವಿವರ: ಗ್ರ್ಯಾಂಡ್ ಫಿನಾಲೆಯ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಒಂದೊಂದಾಗಿ ಸ್ಪರ್ಧಿಗಳನ್ನು ಹೊರಹಾಕುತ್ತಾ ಬಂದರು. ಧನುಷ್ ಗೌಡ 6ನೇ ಸ್ಥಾನ ಪಡೆದರೆ, ಮ್ಯೂಟೆಂಟ್ ರಘು 5ನೇ ಸ್ಥಾನಕ್ಕೆ…

Read More

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಜರುಗಲಿರುವ 33ನೇ ವರ್ಷದ ಹೊನಲು ಬೆಳಕಿನ ‘ಕೋಟಿ ಚೆನ್ನಯ’ ಜೋಡುಕೆರೆ ಕಂಬಳದಲ್ಲಿ, ಕೃಷಿ ಮತ್ತು ಸಾಹಿತ್ಯ ಕ್ಷೇತ್ರದ ಅಪ್ರತಿಮ ಸಾಧಕ ಕುಮಾರ್ ಪೆರ್ನಾಜೆ ಅವರನ್ನು ಸನ್ಮಾನಿಸಲು ಆಯ್ಕೆ ಮಾಡಲಾಗಿದೆ. ಕಂಬಳ ಸಮಿತಿಯ ಪರವಾಗಿ ಸಂಚಾಲಕರಾದ ವಸಂತ ಕುಮಾರ್ ರೈ ದುಗ್ಗಲ ಅವರು ಕುಮಾರ್ ಪೆರ್ನಾಜೆ ಅವರಿಗೆ ಅಧಿಕೃತ ಆಮಂತ್ರಣ ಪತ್ರ ನೀಡಿ,  ಜ.24ರಂದು ನಡೆಯುವ ಅದ್ಧೂರಿ ಸಮಾರಂಭಕ್ಕೆ ಗೌರವಪೂರ್ವಕವಾಗಿ ಆಹ್ವಾನಿಸಿದರು. ಈ ಕಾರ್ಯಕ್ರಮವು ನಾಡಿನ ಗಣ್ಯ ಅತಿಥಿಗಳು ಹಾಗೂ ಖ್ಯಾತ ಚಲನಚಿತ್ರ ನಟ-ನಟಿಯರ ಸಮ್ಮುಖದಲ್ಲಿ ಜರುಗಲಿದೆ. ಅಪೂರ್ವ ಸಾಧನೆಗಳ ಸರದಾರ: ಕುಮಾರ್ ಪೆರ್ನಾಜೆ ಅವರು ಕೇವಲ ಕೃಷಿಕರಷ್ಟೇ ಅಲ್ಲದೆ, ಜೇನು ಕೃಷಿ, ಪರಿಸರ ಸಂರಕ್ಷಣೆ ಮತ್ತು ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದವರು. ಅವರ ಸಾಧನೆಗಳ ಮೈಲಿಗಲ್ಲುಗಳು ಹೀಗಿವೆ: ಜೇನು ಕೃಷಿ ಸಂಶೋಧನೆ: ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಇವರು, ಪರಿಸರ ಸ್ನೇಹಿ ‘ಸಿಮೆಂಟ್ ಶೀಟಿನ ಜೇನು ಪೆಟ್ಟಿಗೆ’ಯನ್ನು…

Read More

ತುಮಕೂರು: ಡಾ.ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ 2025–26 ನೇ ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆ (ಲೋಯರ್ ಗ್ರೇಡ್) ಫಲಿತಾಂಶ ಹೊರಡಿಸಲಾಗಿದ್ದು, ಗುಬ್ಬಿ ತಾಲೂಕಿನ  ಮಾವಿನಹಳ್ಳಿ, ಡಾ.ಬಿ. ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿನಿಯರು ಭಾರೀ ಸಾಧನೆ ಮಾಡಿದ್ದಾರೆ ಒಟ್ಟು ಫಲಿತಾಂಶ ಪರೀಕ್ಷೆಗೆ ಹಾಜರಾದವರು: 12 ಡಿಸ್ಟಿಂಕ್ಷನ್ ಪಡೆದವರು: 9 ಪ್ರಥಮ ದರ್ಜೆ ಪಡೆದವರು: 3 ಪೂರ್ಣ ಫಲಿತಾಂಶ: 100% ಸಾಧಕ ವಿದ್ಯಾರ್ಥಿನಿಯರು:  ವಿಶಿಷ್ಟ ಸಾಧನೆ: ಈ ವರ್ಷದ ಡ್ರಾಯಿಂಗ್ ಗ್ರೇಡ್ ಪರೀಕ್ಷೆನಲ್ಲಿ ಶಾಲೆಯ ಸಂದರ್ಶನ ಮತ್ತು ಕಲಾತ್ಮಕ ವಿಷಯಗಳಲ್ಲಿ ವಿದ್ಯಾರ್ಥಿನಿಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಹೆಚ್ಚಿನ ಸಂಖ್ಯೆ ಡಿಸ್ಟಿಂಕ್ಷನ್ ಪಡೆದು ಶಾಲೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.  ಪ್ರಾಂಶುಪಾಲರು ಎಲ್ಲ ವಿದ್ಯಾರ್ಥಿನಿಯರ ಶ್ರಮ ಮತ್ತು ಪರಿಶ್ರಮಕ್ಕೆ ಅಭಿನಂದನೆ ಸಲ್ಲಿಸಿ, ಮುಂದಿನ ವರ್ಷವೂ ಉತ್ತಮ ಸಾಧನೆಗಾಗಿ ಹಾರೈಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…

Read More