Subscribe to Updates
Get the latest creative news from FooBar about art, design and business.
- ಹನೂರು ಶೂಟೌಟ್ ಪ್ರಕರಣ: ಸಿಬ್ಬಂದಿ ಕಾರ್ಯಾಚರಣೆಯನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡ ಸಚಿವ ರಾಮಲಿಂಗಾರೆಡ್ಡಿ!
- ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದ ಜೆಡಿಎಸ್ ನಾಯಕನ ಬಂಧನ!
- ಚಿತ್ರದುರ್ಗ: ಬಾವಿಯಲ್ಲಿ ನವವಿವಾಹಿತೆ ಶವ ಪತ್ತೆ – ಕೊಲೆ ಆರೋಪ
- ಖರ್ಗೆ ಭಾಷಣ ಮಾಡಿದ್ದ ಸ್ಥಳದಲ್ಲಿ ಶುದ್ಧೀಕರಣ ಹೋಮ: ವಿಧಾನ ಪರಿಷತ್ ನಲ್ಲಿ ಖಂಡನಾ ನಿರ್ಣಯ ಅಂಗೀಕಾರ
- ಆರ್ ಎಸ್ ಎಸ್ ಜಾತಿವಾದ, ಕೋಮುವಾದದ ‘ಸಾವಿರ ತಲೆಯ ವಿಷಪೂರಿತ ಹಾವು’: ಸಚಿವ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ
- ಹನೂರು ಶೂಟೌಟ್ ಪ್ರಕರಣ: ರಾಜ್ಯ ಸರ್ಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ
- ಜೈಲಿನಲ್ಲೇ ಪ್ರಜ್ವಲ್ ರೇವಣ್ಣಗೆ ಡಿಜಿಪಿ ಅಲೋಕ್ ಕುಮಾರ್ ‘ಸ್ಪೆಷಲ್ ಕ್ಲಾಸ್’!
- ಬೆಳಕುಣಿ ಚೌದ್ರಿ ಗ್ರಾಮದಲ್ಲಿ ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ 106ನೇ ಜಯಂತಿ ಆಚರಣೆ
Author: admin
ಗದಗ: ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ರಾಜ್ಯ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ಬುಧವಾರ ಗದಗ ಜಿಲ್ಲೆಯಲ್ಲಿ ಕರ್ನಾಟಕ ಮೌಲಾನಾ ಅಜಾದ್ ಪಬ್ಲಿಕ್ ಸ್ಕೂಲ್ (ಇಂಗ್ಲಿಷ್ ಮೀಡಿಯಂ) ನ ನೂತನ ಕಟ್ಟಡ ಉದ್ಘಾಟನೆ ಹಾಗೂ ಗಂಗಿಮಡಿಯಲ್ಲಿ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. 4,500 ಕೋಟಿ ರೂ. ಅನುದಾನ: ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಒಟ್ಟು 4,500 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ. ಈ ಮೊತ್ತದ ಸಿಂಹಪಾಲು ಮಕ್ಕಳ ಶಿಕ್ಷಣ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಬಳಕೆಯಾಗುತ್ತಿದೆ ಎಂದು ಸಚಿವರು ವಿವರಿಸಿದರು. ವಸತಿ ಶಾಲೆಗಳ ವಿಸ್ತರಣೆ: ರಾಜ್ಯಾದ್ಯಂತ ಪ್ರಸ್ತುತ 2.38 ಲಕ್ಷಕ್ಕೂ ಹೆಚ್ಚು ಮಕ್ಕಳು ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿನ ಅವಧಿಯಲ್ಲಿ ಹಲವು ಶಾಲೆಗಳು ಆರಂಭವಾಗಿದ್ದು, ಈಗ ಮತ್ತೆ ಹೊಸದಾಗಿ 100…
ಕೊರಟಗೆರೆ: ರಾಜ್ಯ ಸರ್ಕಾರವು ಡಿಜಿಟಲ್ ಸೇವೆಯಡಿ ಜಾರಿಗೊಳಿಸಿದ ‘ಇ–ಸ್ವತ್ತು’ ಯೋಜನೆ ಕೊರಟಗೆರೆ ತಾಲ್ಲೂಕಿನಲ್ಲಿ ತಾಂತ್ರಿಕ ದೋಷಗಳಿಂದಾಗಿ ಹಳ್ಳ ಹಿಡಿದಿದೆ. ಸಾಫ್ಟ್‌ವೇರ್ ಮತ್ತು ಸರ್ವರ್ ಸಮಸ್ಯೆಗಳಿಂದಾಗಿ ತಾಲ್ಲೂಕಿನಾದ್ಯಂತ ಸುಮಾರು 49,521 ಇ-ಸ್ವತ್ತು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಅರ್ಜಿಗಳ ವಿಲೇವಾರಿ ಕುಂಠಿತ: ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳಲ್ಲಿ ಅಭಿಯಾನ ಆರಂಭವಾದಾಗಿನಿಂದ ಈವರೆಗೆ ಕೇವಲ 234 ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ. ಉಳಿದ ಸಾವಿರಾರು ಅರ್ಜಿಗಳು ತಾಂತ್ರಿಕ ಕಾರಣಗಳಿಂದ ಕಚೇರಿಯಲ್ಲೇ ಉಳಿದುಕೊಂಡಿವೆ. ತಾಂತ್ರಿಕ ದೋಷ: ನಿಯಮದ ಪ್ರಕಾರ 15 ದಿನಗಳಲ್ಲಿ ಮ್ಯುಟೇಶನ್ ಆಗಬೇಕಿದ್ದರೂ, ಸಾಫ್ಟ್‌ವೇರ್‌ನಲ್ಲಿ 30 ದಿನಗಳ ನೋಟಿಸ್ ಅವಧಿ ತೋರಿಸುತ್ತಿದೆ. ಸರಿಯಾದ ದಾಖಲೆ ಸಂಖ್ಯೆ ನೀಡಿದರೂ ‘ತಪ್ಪು’ ಎಂದು ಸಾಫ್ಟ್‌ವೇರ್ ತೋರಿಸುತ್ತಿದೆ. ಮಾಲೀಕರ ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ. 2004ಕ್ಕೂ ಹಿಂದಿನ ಮಾರಾಟದ ದಾಖಲೆಗಳ ದಿನಾಂಕ ನಮೂದಿಸಲು ಸಾಧ್ಯವಾಗುತ್ತಿಲ್ಲ. ಸರ್ವರ್ ಪದೇ ಪದೇ ಲಾಗೌಟ್ ಆಗುವುದು ಮತ್ತು ಜಿಯೋ-ಮ್ಯಾಪಿಂಗ್ ದೋಷಗಳು ಕಾಡುತ್ತಿವೆ. ಜನಸಾಮಾನ್ಯರ ಹೈರಾಣ: ಗ್ರಾಮ ಪಂಚಾಯಿತಿಗಳಿಗೆ ದಿನವಿಡೀ ಅಲೆದಾಡುತ್ತಿರುವ ರೈತರು ಮತ್ತು ಕೂಲಿ ಕಾರ್ಮಿಕರಿಗೆ…
ತುಮಕೂರು: ತಾಲ್ಲೂಕಿನ ಬೆಳಧರ ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಿಸುವಂತೆ ಒತ್ತಾಯಿಸಿ 6 ತಿಂಗಳಿನಿಂದ ಶಾಲೆಗೆ ತೆರಳದೆ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಯನ್ನು ಮತ್ತೆ ಶಾಲೆಗೆ ಕರೆತರುವ ಕಾರ್ಯ ಯಶಸ್ವಿಯಾಗಿದೆ. 4ನೇ ತರಗತಿ ವಿದ್ಯಾರ್ಥಿನಿ ಸಿಮ್ರಾ ಸನೋಬರ್ ಶಾಲೆಯಿಂದ ದೂರ ಉಳಿದು ಪ್ರತಿಭಟನೆ ನಡೆಸುತ್ತಿದ್ದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಹಾಗೂ ಅಧಿಕಾರಿಗಳ ತಂಡ ಸೋಮವಾರ ಬಾಲಕಿ ಮನೆಗೆ ಭೇಟಿ ನೀಡಿ ಅಹವಾಲು ಆಲಿಸಿತು. ‘ನನ್ನ ಶಾಲೆಗೆ ಭದ್ರತೆ ಬೇಕು. ಶಾಲಾ ಮೈದಾನದಲ್ಲಿ ಓಡಾಡುವ ವಾಹನಗಳಿಂದ ಕಿರಿಕಿರಿಯಾಗುತ್ತಿದೆ. ಕಾಂಪೌಂಡ್ ನಿರ್ಮಿಸಬೇಕು’ ಎಂದು ಸಿಮ್ರಾ ಮನವಿ ಮಾಡಿದರು. ‘ಶೀಘ್ರದಲ್ಲಿಯೇ ಕಾಂಪೌಂಡ್ ನಿರ್ಮಿಸಲಾಗುವುದು’ ಎಂದು ನೂರುನ್ನೀಸಾ ಭರವಸೆ ನೀಡಿದರು. ವಿದ್ಯಾರ್ಥಿನಿಯನ್ನು ಅವರ ಜತೆಯಲ್ಲಿಯೇ ಶಾಲೆಗೆ ಕರೆದುಕೊಂಡು ಬಂದರು. ತುಮಕೂರು ತಾಲ್ಲೂಕಿನ ಬೆಳಧರ ಸರ್ಕಾರಿ ಶಾಲೆಗೆ ವಿದ್ಯಾರ್ಥಿನಿಯನ್ನು ಸೋಮವಾರ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಕರೆ ತಂದರು. ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ ಇತರರು ಹಾಜರಿದ್ದರು. ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್,…
ತುಮಕೂರು: ರಾಜ್ಯದಲ್ಲಿ ಕೆಪಿಎಸ್ — ಮ್ಯಾಗ್ನೆಟ್ ಹೆಸರಿನಲ್ಲಿ ಸಿರಾ ತಾಲೂಕಿನ ಸೀಬಿಅಗ್ರಹಾರ ಗ್ರಾಮ ಪಂಚಾಯಿತಿ ಮತ್ತು ಕುಂಟೇಗೌಡನಹಳ್ಳಿಯ ಸರ್ಕಾರಿ ಶಾಲೆ ಉಳಿಸಲು ಊರಿನ ವಿದ್ಯಾರ್ಥಿಗಳು , ಪೋಷಕರು ಎಐಡಿಎಸ್ ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನ ಉದ್ದೇಶಿಸಿ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ, ಊರಿನ ಶಾಲೆ ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರ ಹಂತ ಹಂತವಾಗಿ ಶಿಕ್ಷಣವನ್ನ ಸಂಪೂರ್ಣ ರೈತ ಕಾರ್ಮಿಕರಿಂದ ಕಿತ್ತುಕೊಂಡು ಶ್ರೀಮಂತರ ಸ್ವತ್ತಾಗಿಸುತ್ತಿದೆ. ಈ ಊರಿನ ಎಲ್ಲಾ ಜನರು ಕೂಡ ಸರ್ಕಾರಿ ಶಾಲೆಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್ ಇಂದ 2,500 ಕೋಟಿ ಸಾಲವನ್ನು ತೆಗೆದುಕೊಳ್ಳುವ ಮೂಲಕ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸಂಖ್ಯೆಯನ್ನು ಇಳಿಮುಖಗೊಳಿಸುತ್ತಾ, ಬಡ ಜನಗಳ ಹೊರೆಯನ್ನು ಇನ್ನು ಹೆಚ್ಚು ಮಾಡಲು ಮುಂದಾಗಿದೆ ಎಂದು ಆರೋಪಿಸಿದರು. ಮುಂದುವರೆಯುತ್ತಾ, ಇತ್ತೀಚಿಗೆ ಹೊರಡಿಸಲಾದ ಸರ್ಕಾರದ ಹೊಸ ಆದೇಶವು ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ದೀಪ ಮತ್ತು ಹಣತೆ ಮಾಡಲು, ಅಡಿಕೆ ಕಾಯಿ ಬಿಡಿಸಲು,…
ತೂಕ ಇಳಿಸಿಕೊಳ್ಳುವುದು ಅಂದುಕೊಂಡಷ್ಟು ಸುಲಭದ ಮಾತಲ್ಲ. ಇದಕ್ಕೆ ಶಿಸ್ತು, ತಾಳ್ಮೆ ಮತ್ತು ಕಠಿಣ ಪರಿಶ್ರಮದ ಅಗತ್ಯವಿದೆ. ಫಿಟ್‌ನೆಸ್ ತರಬೇತುದಾರರಾದ ತಾರ್ನ್ ಕೌರ್ ಅವರು ಕೇವಲ 8 ತಿಂಗಳಲ್ಲಿ ಬರೋಬ್ಬರಿ 31 ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ತಮ್ಮ ಈ ಯಶಸ್ವಿ ಪಯಣದಲ್ಲಿ ಅಳವಡಿಸಿಕೊಂಡ 3 ಪ್ರಮುಖ ಬದಲಾವಣೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮನಸ್ಥಿತಿ ತಪ್ಪು: ತಾರ್ನ್ ಕೌರ್ ಅವರ ಪ್ರಕಾರ, ಹೆಚ್ಚಿನವರು ತೂಕ ಇಳಿಸಲು ನಿರ್ಧರಿಸಿದಾಗ ಎಲ್ಲವನ್ನೂ ತಕ್ಷಣವೇ ಅಚ್ಚುಕಟ್ಟಾಗಿ ಮಾಡಲು ಬಯಸುತ್ತಾರೆ. ಆದರೆ, ಸಣ್ಣ ತಪ್ಪಾದ ತಕ್ಷಣ ಅಥವಾ ಡಯಟ್‌ನಲ್ಲಿ ಸ್ವಲ್ಪ ವ್ಯತ್ಯಾಸವಾದ ತಕ್ಷಣ ಹತಾಶರಾಗಿ ಪ್ರಯತ್ನವನ್ನೇ ಕೈಬಿಡುತ್ತಾರೆ. ಈ ಮನಸ್ಥಿತಿ ತಪ್ಪು. ಎಲ್ಲವೂ ಯೋಜನೆಯಂತೆಯೇ ನಡೆಯುವುದಿಲ್ಲ ಎಂಬುದನ್ನು ಒಪ್ಪಿಕೊಂಡು, ಸಣ್ಣಪುಟ್ಟ ತಪ್ಪುಗಳ ನಡುವೆಯೂ ಸತತ ಪ್ರಯತ್ನ ಮುಂದುವರಿಸಬೇಕು. ತಕ್ಷಣದ ಫಲಿತಾಂಶ ನಿರೀಕ್ಷಿಸಬೇಡಿ: ತೂಕ ಇಳಿಸುವುದು ಒಂದು ಮ್ಯಾರಥಾನ್ ಇದ್ದಂತೆ, ಅದು ಓಟದ ಸ್ಪರ್ಧೆಯಲ್ಲ. ಶಾರ್ಟ್‌ಕಟ್ ಮೂಲಕ ಅಥವಾ ಮ್ಯಾಜಿಕ್ ಮಾತ್ರೆಗಳ ಮೂಲಕ…
ಬೆಂಗಳೂರು: 15ನೇ ಹಣಕಾಸು ಆಯೋಗದ ಅನುದಾನಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡಿರುವ ಭ್ರಷ್ಟಾಚಾರದ ಆರೋಪಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ ನನ್ನ ಹೆಸರು ಹೇಳುವುದು ಒಂದು ಆಸರೆಯಾಗಿದೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು, ಬಿಜೆಪಿಯ ಮಾಜಿ ಶಾಸಕರೊಬ್ಬರು ಮಾಡಿರುವ ಆರೋಪಗಳನ್ನು “ತರ್ಕವಿಲ್ಲದ ಮತ್ತು ಸತ್ಯಾಂಶವಿಲ್ಲದ ಮಾತುಗಳು” ಎಂದು ತಳ್ಳಿಹಾಕಿದ್ದಾರೆ. ಖರ್ಗೆ ನೀಡಿದ ಸ್ಪಷ್ಟನೆಗಳೇನು? ಅನುದಾನ ಹಂಚಿಕೆ: 15ನೇ ಹಣಕಾಸು ಆಯೋಗದ ಅನುದಾನವನ್ನು ಶೇ. 90ರಷ್ಟು ಜನಸಂಖ್ಯೆ ಮತ್ತು ಶೇ. 10ರಷ್ಟು ಭೌಗೋಳಿಕ ವಿಸ್ತೀರ್ಣದ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಯಂತೆಯೇ ನಡೆಯುತ್ತಿದೆ. ಗ್ರಾಮ ಪಂಚಾಯತಿಗಳ ಪಾತ್ರ: ಒಟ್ಟು ಅನುದಾನದಲ್ಲಿ ಶೇ. 60ರಷ್ಟು ನಿರ್ಬಂಧಿತ ಮತ್ತು ಶೇ. 40ರಷ್ಟು ಅನಿರ್ಬಂಧಿತ ಅನುದಾನವಿರುತ್ತದೆ. ಗ್ರಾಮ ಪಂಚಾಯತಿಗಳು ಗ್ರಾಮ ಸಭೆಗಳನ್ನು ನಡೆಸಿ, ತಾವೇ ಕ್ರಿಯಾಯೋಜನೆ ಸಿದ್ಧಪಡಿಸಿ…
ಬೆಂಗಳೂರು: ರಾಜ್ಯದ ಹೆಣ್ಣುಮಕ್ಕಳಲ್ಲಿ ಋತುಚಕ್ರದ ನೈರ್ಮಲ್ಯ ಮತ್ತು ಸುಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕ ಆರೋಗ್ಯ ಇಲಾಖೆಯು ಮಹತ್ವದ ಹೆಜ್ಜೆಯನ್ನಿಟ್ಟಿದೆ. 9 ರಿಂದ 12ನೇ ತರಗತಿಯ ವಿದ್ಯಾರ್ಥಿನಿಯರಲ್ಲಿ ಮುಟ್ಟಿನ ಕಪ್ (Menstrual Cup) ಬಳಕೆಯನ್ನು ಉತ್ತೇಜಿಸಲು ಇಲಾಖೆಯು ಈಗ ಶಿಕ್ಷಕಿಯರು ಮತ್ತು ತಾಯಂದಿರಿಗೆ ವಿಶೇಷ ತರಬೇತಿ ನೀಡಲು ಮುಂದಾಗಿದೆ. ಮುಂದಿನ ಎರಡು ತಿಂಗಳಲ್ಲಿ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್‌ಗಳನ್ನು ಪೂರೈಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ವಿದ್ಯಾರ್ಥಿನಿಯರು ಕಪ್ ಬಳಕೆಗೆ ಒಗ್ಗಿಕೊಳ್ಳಲು ಸಮಯ ಬೇಕಾಗುವುದರಿಂದ, ಆರಂಭದಲ್ಲಿ ಕಪ್‌ಗಳ ಜೊತೆಗೆ ಆರು ತಿಂಗಳಿಗೆ ಆಗುವಷ್ಟು ಸ್ಯಾನಿಟರಿ ಪ್ಯಾಡ್‌ಗಳನ್ನು ಸಹ ವಿತರಿಸಲಾಗುತ್ತದೆ. ತರಬೇತಿ: ಮಕ್ಕಳು ಈ ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳಲು ಪೂರಕವಾಗಿ ಶಿಕ್ಷಕಿಯರಿಗೆ ಹಾಗೂ ತಾಯಂದಿರಿಗೆ ಎನ್‌ಜಿಒಗಳ ಸಹಯೋಗದೊಂದಿಗೆ ತರಬೇತಿ ನೀಡಲಾಗುತ್ತಿದೆ. ತಾಯಂದಿರು ಈ ಬಗ್ಗೆ ಅರಿವು ಹೊಂದಿದ್ದರೆ ಮಕ್ಕಳಿಗೆ ಮಾರ್ಗದರ್ಶನ ನೀಡಲು ಸುಲಭವಾಗುತ್ತದೆ ಎಂಬುದು ಇಲಾಖೆಯ ಆಶಯ. ಬಜೆಟ್: ಮುಟ್ಟಿನ ಕಪ್ ಮತ್ತು ಸ್ಯಾನಿಟರಿ ಪ್ಯಾಡ್‌ಗಳ ಖರೀದಿಗಾಗಿ ಸರ್ಕಾರ ಒಟ್ಟು 71…
ಶಿರಾ: ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರು ಈ ನಾಡು ಕಂಡ ಅಪರೂಪದ ಮುಖ್ಯಮಂತ್ರಿಗಳಾಗಿದ್ದು, ಅವರ ಅವಧಿಯಲ್ಲಿ ನಡೆದ ಗ್ರಾಮ ವಾಸ್ತವ್ಯ ಹಾಗೂ ರಾಜ್ಯದ ಅಭಿವೃದ್ಧಿ ಕಾರ್ಯಗಳು ಇಂದಿಗೂ ಹಸಿರಾಗಿಯೇ ಇವೆ. ಇಂತಹ ಸೇವಾ ಭಾವನೆಯ ಕೇಂದ್ರ ಸಚಿವರ ವಿರುದ್ಧ ಬಾಯಿ ಚಪಲ ತೀರಿಸಿಕೊಳ್ಳಲು ಮಾತನಾಡಿರುವ ಡಿ.ಕೆ. ಸುರೇಶ್ ತಮ್ಮ ಅವಾಚ್ಯ ಹೇಳಿಕೆಯನ್ನು ಈ ಕೂಡಲೇ ವಾಪಸ್ ಪಡೆಯಬೇಕು ಎಂದು ಜೆಡಿಎಸ್ ಮುಖಂಡರು ವಾಗ್ದಾಳಿ ನಡೆಸಿದರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧದ ಅವಾಚ್ಯ ಹೇಳಿಕೆಗೆ ಡಿ.ಕೆ. ಸುರೇಶ್ ಕ್ಷಮೆ ಯಾಚಿಸಲೆಂದು ಶಿರಾ ತಾಲೂಕು ಜೆಡಿಎಸ್ ಮುಖಂಡರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ರಾಜ್ಯ ಜೆಡಿಎಸ್ ಕಾರ್ಯಕಾರಿ ಸಮಿತಿ ಸದಸ್ಯ ಆರ್. ಉಗ್ರೇಶ್ ಮಾತನಾಡಿ, ಅಣ್ಣ ತಮ್ಮ ನೀವಿಬ್ಬರೂ ಸೇರಿಕೊಂಡು ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಡಳಿತ ನಡೆಸಲು ಬಿಡುತ್ತಿಲ್ಲ. ಇನ್ನು ನಿಮ್ಮ ಪಕ್ಷದಲ್ಲಿರುವವರನ್ನು ನೀವು ಬಿಡುವವರೇ ಅಲ್ಲ. ಮುಂದೆ ಇಂತಹ ಹೇಳಿಕೆ ನೀಡಿದಲ್ಲಿ ಶಿರಾದಿಂದ…
ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೀಡಲಾಗುವ ಶೂ ಮತ್ತು ಸಾಕ್ಸ್ ವಿತರಣೆಯಲ್ಲಿ ಆಗುವ ವಿಳಂಬವನ್ನು ತಪ್ಪಿಸಲು ರಾಜ್ಯ ಸರ್ಕಾರ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. 2026-27ನೇ ಶೈಕ್ಷಣಿಕ ಸಾಲಿಗಾಗಿ ವಿದ್ಯಾರ್ಥಿಗಳ ಮಾಹಿತಿ (Indent) ಸಂಗ್ರಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚನೆ ನೀಡಿದೆ. ಮಾಹಿತಿ ಸಂಗ್ರಹ: 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ನಿಖರ ಅಂಕಿಅಂಶಗಳನ್ನು ಒದಗಿಸುವಂತೆ ಎಲ್ಲ ಜಿಲ್ಲೆಗಳ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ (DDPI) ಇಲಾಖೆಯು ಅಧಿಕೃತ ಸುತ್ತೋಲೆ ಹೊರಡಿಸಿದೆ. ಶೂ ಬದಲು ಚಪ್ಪಲಿ?: ಈ ಬಾರಿ ಸರ್ಕಾರ ಒಂದು ಮಹತ್ವದ ಬದಲಾವಣೆಗೆ ಚಿಂತನೆ ನಡೆಸಿದೆ. ಕೆಲವು ಜಿಲ್ಲೆಗಳಲ್ಲಿ ಶೂ ಮತ್ತು ಸಾಕ್ಸ್ ಬದಲಿಗೆ ‘ಚಪ್ಪಲಿ’ ವಿತರಿಸುವ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ. ಸ್ಥಳೀಯ ಆಯ್ಕೆಗೆ ಅವಕಾಶ: ಶಾಲೆಯು ಇರುವ ಪ್ರದೇಶದ ಹವಾಮಾನ ಮತ್ತು ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಶೂ ಬೇಕೋ ಅಥವಾ ಚಪ್ಪಲಿ ಬೇಕೋ ಎಂಬುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಶಾಲಾ ಅಭಿವೃದ್ಧಿ…
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ : ಐತಿಹಾಸಿಕ ಇತಿಹಾಸ ಪ್ರಸಿದ್ಧ ಶ್ರೀಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವಕ್ಕೂ ಮೊದಲು ಮಕರ ಸಂಕ್ರಾತಿ ಹಬ್ಬದ ಮಾರನೇ ದಿನದಿಂದ ಆರಂಭಗೊಳ್ಳುವ ರಾಸುಗಳ ಜಾತ್ರೆಗೆ ರಾಜ್ಯದ ಅನೇಕ ಭಾಗದ ರೈತರ ವಿವಿಧ ತಳಿಯ ರಾಸುಗಳು ಆಗಮಿಸುತ್ತಿದ್ದು, ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆಯ ಹಬ್ಬದ ಸಡಗರ ಮನೆ ಮಾಡಿತ್ತು. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿ ರಥ ಸಪ್ತಮಿಯಂದು ನಡೆಯುವ ಕಮನೀಯ ಕ್ಷೇತ್ರ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವ ವಾರವಿದ್ದಂತೆ ಶುರುವಾಗುವ ಈ ರಾಸುಗಳ ಜಾತ್ರೆಗೆ ಈ ಬಾರಿ ವಿವಿಧ ತಳಿಯ ರಾಸುಗಳು ಹೆಚ್ಚಾಗಿ ಆಗಮಿಸುತ್ತಿದ್ದು ರೈತರನ್ನು ಆಕರ್ಷಿಸುತ್ತಿದೆ. ಈ ವರ್ಷದ ರಾಸುಗಳ ಜಾತ್ರೆಯಲ್ಲಿ ರಾಸುಗಳನ್ನ ೫೦ ಸಾವಿರದಿಂದ ೫ ಲಕ್ಷದವರೆಗೆ ರೈತರು ಖರೀದಿಸುತ್ತಿದ್ದು, ಹೊಲ ಉಳುಮೆಗೆ ಯೋಗ್ಯವಾದ ರಾಸುಗಳನ್ನು ಹೆಚ್ಚಿನ ಡಿಮ್ಯಾಂಡ್ ಇದ್ದು, ರಾಜ್ಯದ ಬಳ್ಳಾರಿ, ಹಾವೇರಿ, ಶಿವಮೊಗ್ಗ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಗೌರಿಬಿದನೂರು ಸೇರಿದಂತೆ ಆಂದ್ರ ಪ್ರದೇಶ, ಇತರೆ ರಾಜ್ಯಗಳಿಂದ ರೈತರು ಹೆಚ್ಚಾಗಿ…