Subscribe to Updates
Get the latest creative news from FooBar about art, design and business.
- ಹನೂರು ಶೂಟೌಟ್ ಪ್ರಕರಣ: ಸಿಬ್ಬಂದಿ ಕಾರ್ಯಾಚರಣೆಯನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡ ಸಚಿವ ರಾಮಲಿಂಗಾರೆಡ್ಡಿ!
- ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದ ಜೆಡಿಎಸ್ ನಾಯಕನ ಬಂಧನ!
- ಚಿತ್ರದುರ್ಗ: ಬಾವಿಯಲ್ಲಿ ನವವಿವಾಹಿತೆ ಶವ ಪತ್ತೆ – ಕೊಲೆ ಆರೋಪ
- ಖರ್ಗೆ ಭಾಷಣ ಮಾಡಿದ್ದ ಸ್ಥಳದಲ್ಲಿ ಶುದ್ಧೀಕರಣ ಹೋಮ: ವಿಧಾನ ಪರಿಷತ್ ನಲ್ಲಿ ಖಂಡನಾ ನಿರ್ಣಯ ಅಂಗೀಕಾರ
- ಆರ್ ಎಸ್ ಎಸ್ ಜಾತಿವಾದ, ಕೋಮುವಾದದ ‘ಸಾವಿರ ತಲೆಯ ವಿಷಪೂರಿತ ಹಾವು’: ಸಚಿವ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ
- ಹನೂರು ಶೂಟೌಟ್ ಪ್ರಕರಣ: ರಾಜ್ಯ ಸರ್ಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ
- ಜೈಲಿನಲ್ಲೇ ಪ್ರಜ್ವಲ್ ರೇವಣ್ಣಗೆ ಡಿಜಿಪಿ ಅಲೋಕ್ ಕುಮಾರ್ ‘ಸ್ಪೆಷಲ್ ಕ್ಲಾಸ್’!
- ಬೆಳಕುಣಿ ಚೌದ್ರಿ ಗ್ರಾಮದಲ್ಲಿ ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ 106ನೇ ಜಯಂತಿ ಆಚರಣೆ
Author: admin
ತುಮಕೂರು: KPS–ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಹೊರಟಿರುವ ಸಿರಾ ತಾಲೂಕಿನ ಜೋಡಿದೇವರಹಳ್ಳಿ ಮತ್ತು ನಾಗೇನಹಳ್ಳಿಯ ಸರ್ಕಾರಿ ಶಾಲೆ ಉಳಿಸಲು ಊರಿನ ವಿದ್ಯಾರ್ಥಿಗಳು ,ಪೋಷಕರು ಎಐಡಿಎಸ್ ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಗ್ರಾಮಸ್ಥರಾದ ಶ್ರೀನಿವಾಸ ಮೂರ್ತಿ ಅವರು ಮಾತನಾಡಿ, ಗ್ರಾಮದಲ್ಲಿ ಇರುವಂತ ಸರ್ಕಾರಿ ಶಾಲೆಗಳನ್ನ ಮುಚ್ಚಿ ವಿಲೀನ ಮಾಡುವಂತ ಕ್ರಮ ಸರಿಯಲ್ಲ. ಹಳ್ಳಿಗಾಡಿನಲ್ಲಿ ಇರುವಂತ ಶಾಲೆಗಳಿಗೆ ಮಕ್ಕಳು ನೇರವಾಗಿ ಹೋಗಿ ಮನೆಗೆ ಬರುತ್ತಾರೆ. ಈ ವ್ಯವಸ್ಥೆಯನ್ನು ಬದಲಾಯಿಸಿ, ಕರ್ನಾಟಕ ಪಬ್ಲಿಕ್ ಶಾಲೆ ಮ್ಯಾಗ್ನೆಟ್ ಹೆಸರಿನಲ್ಲಿ 5 ಕಿ.ಮೀ. ವ್ಯಾಪ್ತಿಯ ಒಳಗಿನ ಶಾಲೆಗಳನ್ನು ಮುಚ್ಚುವುದು ತುಂಬಾ ಖಂಡನೀಯ. ಇದರ ಬದಲು ಕೆಪಿಎಸ್ ಶಾಲೆಯಲ್ಲಿ ಮೂಲಭೂತ ಸೌಕರ್ಯ ಕೊಟ್ಟು ಒಳ್ಳೆಯ ಶಿಕ್ಷಣ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ ಅದನ್ನು ನಮ್ಮ ಶಾಲೆಯಲ್ಲಿ ಕೊಟ್ಟು ಮಕ್ಕಳ ಭವಿಷ್ಯವನ್ನು ರೂಪಿಸಬೇಕೆಂದು ಹೇಳಿದರು. ಪ್ರತಿಭಟನೆಯನ್ನ ಉದ್ದೇಶಿಸಿ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ, ಸರ್ಕಾರ KPS– ಮ್ಯಾಗ್ನೆಟ್ ಹೆಸರಿನಲ್ಲಿ ಗ್ರಾಮ ಪಂಚಾಯಿತಿಗೊಂದು ಸರ್ಕಾರಿ ಶಾಲೆ ಮಾಡುತ್ತೇವೆ ಎಂದು ಹೇಳಿ 40,000 ಕ್ಕಿಂತ ಹೆಚ್ಚು ಸರ್ಕಾರಿ…
ತುಮಕೂರು: ಜಿಲ್ಲಾ ಬಾಲಭವನ ಸಮಿತಿ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ 5–16 ವಯೋಮಾನದ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಮತ್ತು 5–12 ವಯೋಮಾನದ ಮಕ್ಕಳಿಗೆ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಜನವರಿ 22ರಂದು ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ. ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಛಿಸುವ ಮಕ್ಕಳ ಪೋಷಕರು ಜನವರಿ 20ರ ಸಂಜೆ 4 ಗಂಟೆಯೊಳಗೆ ಜಿಲ್ಲಾ ಬಾಲಭವನ ಕಚೇರಿ, ಮಹಾತ್ಮ ಗಾಂಧಿ ರಸ್ತೆ, ತುಮಕೂರು ಇಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಮೊ.ಸಂ. 9901890079ನ್ನು ಸಂಪರ್ಕಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುರುವೇಕೆರೆ: 6.5 ಟಿಎಂಸಿ ನೀರು ಕುಣಿಗಲ್ ಕಡೆ ಹರಿಯುತ್ತಿದೆ, ಈ ನೀರು ಎಲ್ಲಿಗೆ ಹೋಗುತ್ತೆ ಮೊದಲು ರಾಜ್ಯದ ಜನತೆ ಮುಂದೆ ಹೇಳಿ, ಕೇವಲ ಕೃಷ್ಣಪ್ಪ ಸುರೇಶ್ ಗೌಡ ಮಾತ್ರ ಹೋರಾಟ ಮಾಡುತ್ತಿಲ್ಲ ಡಿಕೆಶಿ ಅವರೇ, ಇದು ಈ ಜಿಲ್ಲೆಯ 24 ಲಕ್ಷ ಜನತೆಯ ಹೋರಾಟ, ನಿಮಗೆ ಇದು ತಿಳಿದಿರಲಿ ಎಂದು ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಕುಣಿಗಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕುರಿತು ಡಿ.ಕೆ.ಶಿವಕುಮಾರ್ ರವರು ಪ್ರಸ್ತಾಪಿಸಿ, ಅಂದಾಜು ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ ಕುಣಿಗಲ್ ಕೆರೆಗೆ ಹೇಮಾವತಿ ಕೆನಾಲ್ ಮೂಲಕ ನೀರು ತರಲು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮತ್ತು ಸುರೇಶ್ ಗೌಡ ಇದಕ್ಕೆ ವಿರೋಧಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪತ್ರಿಕಾಗೋಷ್ಠಿಯಲ್ಲಿ ಶಾಸಕರು ಉತ್ತರಿಸಿದರು. ಹೌದು ಸ್ವಾಮಿ ಡಿಕೆಶಿ ಅವರೇ ನಾವು ವಿರೋಧ ಮಾಡುತ್ತೇವೆ ಇದು ನೂರಕ್ಕೆ ನೂರು ಸತ್ಯ ಇದರಲ್ಲಿ ಯಾವುದೇ ರಾಜಕೀಯ ಅಥವಾ ರಾಜಿ…
ಪಾವಗಡ : ಸ್ಥಳೀಯ ಇತಿಹಾಸ ಅಧ್ಯಯನದ ಪೂರ್ಣವಾಗದಿದ್ದರೆ ರಾಷ್ಟ್ರೀಯ ಇತಿಹಾಸ ಕಟ್ಟಲು ಸಾಧ್ಯವಿಲ್ಲ ಎಂದು ಸಂಶೋಧಕರಾದ ಡಾ.ಡಿ.ಎನ್.ಯೋಗೀಶ್ವರಪ್ಪ ತಿಳಿಸಿದರು. ತಾಲ್ಲೂಕಿನ ಅರಸೀಕೆರೆ ಗ್ರಾಮದ ಶತಮಾನ ಸೇವೆ ಪೂರೈಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಹೊ.ಮ.ನಾಗರಾಜು ರವರ ನಿಡುಗಲ್ಲು ಸೀಮೆಯ ಅರಸೀಕೆರೆ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸ್ಥಳೀಯ ಐತಿಹಾಸಿಕ ಅಂಶಗಳು ರಾಷ್ಟ್ರೀಯ ಇತಿಹಾಸಕ್ಕೆ ಪೂರಕವಾಗಿರುತ್ತವೆ. ಸೂಕ್ಷ್ಮ ತರಹದ ಅಧ್ಯಯನಗಳು ಇಂದಿನ ದಿನಮಾನಗಳಲ್ಲಿ ಅವಶ್ಯಕವಾಗಿವೆ. ಸೂಕ್ಷ್ಮ ಅಧ್ಯಯನಗಳಲ್ಲಿ ಸಂಶೋಧಕ ಆಕರಗಳ ಸಮಸ್ಯೆ, ಕತೆ ಕವನ ಇತ್ಯಾದಿ ಮೌಖಿಕ ಸಾಹಿತ್ಯದಿಂದ ಐತಿಹಾಸಿಕ ಅಂಶಗಳನ್ನು ಹೆಕ್ಕಿ ತೆಗೆಯುವ ಸಮಸ್ಯೆಗಳಿಗೆ ಗುರಿಯಾಗುವುದು ಸಹಜ. ಆದಾಗ್ಯೂ ಅವುಗಳನ್ನು ಮೀರಿ ನಿಖರವಾದ ವಿಷಯಗಳನ್ನು ಕಟ್ಟಿಕೊಡುವವರೆ ಸಂಶೋಧಕ ಎಂದರು. ಹೊ.ಮ.ನಾಗರಾಜು ರವರು ಇತಿಹಾಸ ಅಕಾಡೆಮಿಯ ಸದಸ್ಯರಾದ ನಂತರ ದಾಖಲಾಗದ ಐತಿಹಾಸಿಕ ವಿಷಯಗಳನ್ನು ಪ್ರಬಂಧಗಳ ರೂಪದಲ್ಲಿ ಮಂಡನೆ ಮಾಡುತ್ತಿದ್ದು, ನಿಖರವಾದ ಅಂಶಗಳು ಕಂಡುಬರುತ್ತಿವೆ. ಇವರು ನಿಡುಗಲ್ಲು ಸೀಮೆಯ ಅರಸೀಕೆರೆ ಎನ್ನುವ ಪ್ರಸ್ತುತ ಕೃತಿಯಲ್ಲಿ ಸ್ಥಳೀಯ ಇತಿಹಾಸವನ್ನು ಕಟ್ಟಿಕೊಡುವಲ್ಲಿ…
ಪಾವಗಡ: ಪಾವಗಡದಿಂದ ಮಧುಗಿರಿ ಕಡೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವ ವೇಳೆ ಎದುರಿಗೆ ಬಂದ ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸಾವನ್ನಪ್ಪಿ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಪಾವಗಡ ತಾಲೂಕಿನ ರಾಜವಂತಿ ಸಮೀಪದ ರಿಲ್ಯಾಕ್ಸ್ ಬಾರ್ ಸಮೀಪ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಪಾವಗಡ ಪಟ್ಟಣದ ಕನುಮನಕೆರೆಯ ನಾಗಮ್ಮ ಈರದಾಸಪ್ಪ ಎಂಬವರ ಪುತ್ರ 25 ವರ್ಷದ ಅಂಬರೀಶ್ ಎಂದು ಗುರುತಿಸಲಾಗಿದ್ದು , ಗಂಭೀರವಾಗಿ ಗಾಯಗೊಂಡಿರುವ ಭಾಸ್ಕರ್ ನನ್ನ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ರವಾನಿಸಲಾಗಿದೆ. ಇನ್ನು ಪಾವಗಡ ಸಾರ್ವಜನಿಕ ಆಸ್ಪತ್ರೆಯ ಬಳಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವರದಿ: ನಂದೀಶ್ ನಾಯ್ಕ ಪಿ., ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ನಂಜನಗೂಡು: ಭಾರತದ ಅಸ್ತಿತ್ವವಿರುವುದು ಆಧ್ಯಾತ್ಮಿಕತೆಯಲ್ಲಿ. ಆಧ್ಯಾತ್ಮಿಕತೆ ಇಲ್ಲದೆ ಭಾರತವಿಲ್ಲ. ಆದ್ದರಿಂದ ದೇಶದಲ್ಲಿ ಕಾವಿ ಬಟ್ಟೆ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ಕೇಂದ್ರ ಕಾರ್ಮಿಕ ಮತ್ತು ಸಣ್ಣ ಉದ್ದಿಮೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ. ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಭಜನಾ ಮೇಳ ಹಾಗೂ ದೇಶಿ ಆಟಗಳ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಆಧ್ಯಾತ್ಮಿಕತೆಯೇ ಭಾರತದ ಅಡಿಪಾಯ: ನಮ್ಮ ಸಂಸ್ಕೃತಿ, ಧರ್ಮ, ಆಚಾರ ಮತ್ತು ವಿಚಾರಗಳು ನಮ್ಮ ದೇವಾಲಯಗಳಲ್ಲಿವೆ. ದೇಶದಲ್ಲಿ ಶಾಂತಿ ನೆಲೆಸಲು ಆಧ್ಯಾತ್ಮಿಕತೆಯಿಂದ ಮಾತ್ರ ಸಾಧ್ಯ ಎಂದು ಸಚಿವರು ಪ್ರತಿಪಾದಿಸಿದರು. ಮಠಗಳ ಕೊಡುಗೆ: ದೇಶದಲ್ಲಿ ಸಂಸ್ಕಾರ ಬೆಳೆಸುವಲ್ಲಿ ಮಠಮಾನ್ಯಗಳು ದೊಡ್ಡ ಪಾತ್ರ ವಹಿಸುತ್ತಿವೆ. ಪುಸ್ತಕದ ಶಿಕ್ಷಣದ ಜೊತೆಗೆ ಮೌಲ್ಯಯುತ ಶಿಕ್ಷಣವನ್ನು ನೀಡುವ ಮೂಲಕ ಮಠಗಳು ಸಮಾಜವನ್ನು ಮುನ್ನಡೆಸುತ್ತಿವೆ ಎಂದು ಅವರು ಶ್ಲಾಘಿಸಿದರು. ಮುಂದಿನ ಪೀಳಿಗೆಗೆ ಸಂಸ್ಕೃತಿ: ನಮ್ಮ ಪೂರ್ವಜರು ಹಾಕಿಕೊಟ್ಟ…
ನವದೆಹಲಿ: ಅಸ್ಸಾಂ ರಾಜ್ಯದ ಜನತೆ ಬದಲಾವಣೆ ಬಯಸುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಅಲ್ಲಿ ಕಾಂಗ್ರೆಸ್ ಪಕ್ಷ ಖಂಡಿತವಾಗಿ ಅಧಿಕಾರಕ್ಕೆ ಬರಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಅಸ್ಸಾಂ ವಿಧಾನಸಭೆ ಚುನಾವಣೆ ಕುರಿತ ಮಹತ್ವದ ಸಭೆಯ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಬದಲಾವಣೆಯ ಅಲೆ: ಅಸ್ಸಾಂನಲ್ಲಿ ಪ್ರಸ್ತುತ ಕಾಂಗ್ರೆಸ್ ಪರವಾದ ಅಲೆಯಿದೆ. ಅಲ್ಲಿನ ಜನರ ಅಭಿಲಾಷೆಯೂ ಬದಲಾವಣೆಯಾಗಿದ್ದು, ನಾವು ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಚುನಾವಣಾ ಅನುಭವ: ನಮಗೆ ಚುನಾವಣೆಗಳನ್ನು ನಿರ್ವಹಿಸಿದ ದಶಕಗಳ ಅನುಭವವಿದೆ. ಅಸ್ಸಾಂನಲ್ಲಿ ನಮ್ಮ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಸ್ಪಷ್ಟ ಸಂದೇಶ ನೀಡುತ್ತೇವೆ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಪಕ್ಷ ಮುನ್ನಡೆಯಲಿದೆ ಎಂದರು. ಯುವ ನಾಯಕತ್ವ: ಅಸ್ಸಾಂನಲ್ಲಿ ಪಕ್ಷದ ಜವಾಬ್ದಾರಿ ಹೊತ್ತಿರುವವರು ಯುವಕರಾಗಿದ್ದು, ಹಿರಿಯ ನಾಯಕರ ಬೆಂಬಲ ಅವರಿಗಿದೆ. ಒಗ್ಗಟ್ಟಿನಿಂದ ಹೋರಾಡುವುದೇ ನಮ್ಮ ಮುಖ್ಯ ಮಂತ್ರ…
ತುಮಕೂರು: ರಾಜ್ಯದ 2026–27ನೇ ಸಾಲಿನ ಆಯವ್ಯಯ ಮಂಡನೆಗೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿಯ ಬಜೆಟ್ ನಲ್ಲಿ ಹಣಕಾಸು ಹಂಚಿಕೆ ಅತ್ಯಂತ ಕಟ್ಟುನಿಟ್ಟಿನಿಂದ ಕೂಡಿರಲಿದೆ ಎಂಬ ಸುಳಿವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಶುಕ್ರವಾರ ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಏಳು ದಿನಗಳ ರಾಜ್ಯಮಟ್ಟದ ‘ಕರ್ನಾಟಕ ಕ್ರೀಡಾಕೂಟ 2025–26’ ಅನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅನುದಾನಕ್ಕೆ ಮಿತಿ: ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಅವರು, ಜಿಲ್ಲೆಯಲ್ಲಿ ಹಾಕಿ ಕ್ರೀಡಾಂಗಣ ಮತ್ತು ಅಂತರರಾಷ್ಟ್ರೀಯ ಗುಣಮಟ್ಟದ ಈಜುಕೊಳ ನಿರ್ಮಾಣಕ್ಕಾಗಿ 25 ಕೋಟಿ ರೂ. ಅನುದಾನ ನೀಡುವಂತೆ ಸಿಎಂಗೆ ಮನವಿ ಮಾಡಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಅಷ್ಟು ದೊಡ್ಡ ಮೊತ್ತವನ್ನು ನೀಡಲು ಸದ್ಯಕ್ಕೆ ಸಾಧ್ಯವಿಲ್ಲ. ಆದರೆ ಮಂಗಳೂರಿಗೆ ನೀಡಿದ ಮಾದರಿಯಲ್ಲಿ 6 ಕೋಟಿ ರೂ.ಗಳನ್ನು ಮಂಜೂರು ಮಾಡುತ್ತೇನೆ” ಎಂದು ತಿಳಿಸುವ ಮೂಲಕ ಸಂಪನ್ಮೂಲಗಳ ಹಂಚಿಕೆಯಲ್ಲಿ ಇತಿಮಿತಿ ಇರುವುದನ್ನು ಸ್ಪಷ್ಟಪಡಿಸಿದರು. ಕ್ರೀಡಾಪಟುಗಳಿಗೆ ಉತ್ತೇಜನ: ಬಜೆಟ್ ವಿಷಯದ ಜೊತೆಗೆ ಕ್ರೀಡಾಪಟುಗಳಿಗಾಗಿ ಸರ್ಕಾರ ಜಾರಿಗೆ ತಂದಿರುವ ಸೌಲಭ್ಯಗಳ…
ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆ ಗುಂಡಿಗಳ ಸಮಸ್ಯೆ ಮತ್ತೆ ಮುನ್ನೆಲೆಗೆ ಬಂದಿದೆ. ಪಣತ್ತೂರು–ದಿಣ್ಣೆ ರಸ್ತೆಯಲ್ಲಿರುವ ಬೃಹತ್ ಗುಂಡಿಯೊಂದು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಘಟನೆಯ ವಿವರ: ಹೊರ ವರ್ತುಲ ರಸ್ತೆಯ ಬಹುರಾಷ್ಟ್ರೀಯ ಐಟಿ ಕಂಪನಿಯ ಉದ್ಯೋಗಿಯಾದ ಶ್ರೀಧರ್ ಎಂಬುವವರು ಜನವರಿ 12ರ ಸೋಮವಾರ ಸಂಜೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು. ಪಣತ್ತೂರು-ದಿಣ್ಣೆ ರಸ್ತೆಯ ಸಿಡಿಪಿ ರಸ್ತೆ ಬಳಿ ಚಲಿಸುವಾಗ ದೊಡ್ಡ ಗುಂಡಿಯೊಂದಕ್ಕೆ ಸ್ಕೂಟರ್ ಬಿದ್ದಿದೆ. ಇದರಿಂದ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಯ ಮಣ್ಣಿನ ರಾಶಿಗೆ ನುಗ್ಗಿದ್ದು, ಶ್ರೀಧರ್ ಅವರು ರಸ್ತೆಗೆ ಅಪ್ಪಳಿಸಿದ್ದಾರೆ. ಗಂಭೀರ ಗಾಯ: ಅಪಘಾತದ ತೀವ್ರತೆಗೆ ಶ್ರೀಧರ್ ಅವರ ಬಲ ಭುಜದ ಮೇಲ್ಭಾಗದ ಮೂಳೆ ಮುರಿದಿದೆ. ವೈದ್ಯರ ಪ್ರಕಾರ, ಶಸ್ತ್ರಚಿಕಿತ್ಸೆಗಾಗಿ ಕನಿಷ್ಠ 1.25 ರಿಂದ 1.5 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಅವರು ಸಂಪೂರ್ಣ ಗುಣಮುಖರಾಗಲು ಕನಿಷ್ಠ ನಾಲ್ಕು ತಿಂಗಳು ಬೇಕಾಗಬಹುದು. “ಒಂದು ಗುಂಡಿಯಿಂದಾಗಿ ನನ್ನ ಇಡೀ ಕುಟುಂಬ ನಾಲ್ಕು ತಿಂಗಳು ಪರದಾಡುವಂತಾಗಿದೆ” ಎಂದು ಶ್ರೀಧರ್ ಸಾಮಾಜಿಕ ಜಾಲತಾಣದಲ್ಲಿ…
ಜೊಮ್ಯಾಟೋ ಡೆಲಿವರಿ ಏಜೆಂಟ್ ಮತ್ತು ಗ್ರಾಹಕನ ನಡುವಿನ ಕಿತ್ತಾಟದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಏನಿದು ಘಟನೆ? ಅಂಕುರ್ ಠಾಕೂರ್ ಎಂಬ ಜೊಮ್ಯಾಟೋ ಡೆಲಿವರಿ ಬಾಯ್ ರಾತ್ರಿ ಸುಮಾರು 2:30 ಗಂಟೆಗೆ ಆರ್ಡರ್ ಒಂದನ್ನು ತಲುಪಿಸಲು ಹೋಗಿದ್ದರು. ಆ ಸಮಯದಲ್ಲಿ ಗ್ರಾಹಕರಿಗೆ ಕೆಳಗೆ ಬಂದು ಪಾರ್ಸೆಲ್ ಪಡೆದುಕೊಳ್ಳುವಂತೆ ವಿನಂತಿಸಿದ್ದಾರೆ. ಆದರೆ ಗ್ರಾಹಕರು ಕೆಳಗೆ ಬರಲು ನಿರಾಕರಿಸಿ, ಮನೆ ಬಾಗಿಲಿಗೇ ಬಂದು ನೀಡುವಂತೆ ಪಟ್ಟು ಹಿಡಿದಿದ್ದಾರೆ. ಡೆಲಿವರಿ ಬಾಯ್ ವಾದವೇನು? “ರಾತ್ರಿ 2:30 ಆಗಿದೆ, ನಾನು ಗಾಡಿಯನ್ನು ಕೆಳಗೆ ಬಿಟ್ಟು ಮೇಲೆ ಬಂದರೆ ಯಾರಾದರೂ ಬೈಕ್ ಕದಿಯುವ ಭಯವಿದೆ. ಅಷ್ಟೇ ಅಲ್ಲದೆ, ಇಷ್ಟು ಚಳಿಯಲ್ಲಿ ನಾವು ದೂರದ ಹಾದಿ ಕ್ರಮಿಸಿ ಬರುತ್ತೇವೆ, ಗ್ರಾಹಕರು ಸ್ವಲ್ಪ ಸಹಕರಿಸಬೇಕು” ಎಂಬುದು ಅಂಕುರ್ ಅವರ ವಾದವಾಗಿತ್ತು. ಆದರೆ ಗ್ರಾಹಕರು, “ನಾವು ಹಣ ಪಾವತಿಸಿರುವುದು ಮನೆ ಬಾಗಿಲಿಗೆ ತಲುಪಿಸಲು, ಅಲ್ಲಿಗೇ ಬನ್ನಿ ಇಲ್ಲದಿದ್ದರೆ ಆರ್ಡರ್ ಕ್ಯಾನ್ಸಲ್ ಮಾಡಿ” ಎಂದು ಗದರಿಸಿದ್ದಾರೆ ಎನ್ನಲಾಗಿದೆ. ಮುಂದೇನಾಯ್ತು? ಗ್ರಾಹಕರ…