Subscribe to Updates
Get the latest creative news from FooBar about art, design and business.
- ನವೆಂಬರ್ 22: ತಲ್ಲಣಿಸದಿರು ಮನವೆ ಕಾರ್ಯಕ್ರಮ
- ವೈ.ಎನ್.ಹೊಸಕೋಟೆಯಲ್ಲಿ ಸಾಂಪ್ರದಾಯಿಕ ಗೋವಿನ ಹಬ್ಬ
- ವಿಜೃಂಭಣೆಯಿಂದ ನೆರವೇರಿದ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ
- ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾಹಿತಿಗಳು ಸರ್ಕಾರದ ಆಶ್ರಯ ಪಡೆಯುವುದನ್ನು ನಿಲ್ಲಿಸಬೇಕು: ಬಂಜಗೆರೆ ಜಯಪ್ರಕಾಶ್
- ದುಪ್ಪಟ್ಟು ಹಣ ಲಾಭ ಗಳಿಸುವ ಆಮಿಷಕ್ಕೆ ಬಲಿಯಾಗಿ 14 ಲಕ್ಷ ರೂ. ಕಳೆದುಕೊಂಡ ಹೊಟೇಲ್ ಸಿಬ್ಬಂದಿ!
- ಎರಡು ಲಾರಿಗಳ ನಡುವೆ ಅಪಘಾತ: ಲಾರಿಯಿಂದ ಚೆಲ್ಲಿದ ಗೋದಿ ಕಂಡವರ ಪಾಲು!
- ಮಧುಗಿರಿ: ಸೊಳ್ಳೆಗಳ ವಿಪರೀತ ಕಾಟಕ್ಕೆ ಬಳಲಿ ಬೆಂಡಾದ ಜನ
Author: admin
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ, ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳು (Electricity distribution companies) ವಿದ್ಯುತ್ ದರ ಪರಿಷ್ಕರಣೆ ಕೋರಿರುವ ಹಿನ್ನೆಲೆಯಲ್ಲಿ ಫೆ. 13 ರಿಂದ ಮಾರ್ಚ್ 1 ರವರೆಗೆ ಸಾರ್ವಜನಿಕ ಅದಾಲತ್ ನಡೆಸಲಿದ್ದು, ಮತ್ತೆ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ. ಫೆ. 13 ರಿಂದ ಮಾರ್ಚ್ 1 ರವರೆಗೆ ಸಾರ್ವಜಿಕ ಅದಾಲತ್ ನಡೆಸಲಿದ್ದು, ಆಕ್ಷೇಪಣೆ, ಸಲಹೆ ಸೂಚನೆಗಳನ್ನು ಪರಿಗಣಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ ತನ್ನ ನಿರ್ಧಾರ ಪ್ರಕಟಿಸಲಿದೆ. ಇನ್ನೂ ಎಸ್ಕಾಮ್ ಗಳು ಪ್ರತಿ ಯುನಿಟ್ ಗೆ 1.50 ರಿಂದ 2 ರೂ. ತನಕ ವಿದ್ಯುತ್ ದರ ಏರಿಕೆ ಕೋರಿ ಈಗಾಗಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಇನ್ನು ಕಳೆದ ವರ್ಷ ಎರಡು ಬಾರಿ ವಿದ್ಯುತ್ ದರ ಏರಿಕೆ ಮಾಡಲಾಗಿತ್ತು. ಕಳೆದ ಏಪ್ರಿಲ್ ನಲ್ಲಿ ಪ್ರತಿ ಯುನಿಟ್ ಗೆ 35 ಪೈಸೆ, ಸೆಪ್ಟೆಂಬರ್ ನಲ್ಲಿ ವಿದ್ಯುತ್ ದರವನ್ನು ಪ್ರತಿ ಯುನಿಟ್ ಗೆ (Unit) 24 ಪೈಸೆಯಿಂದ…
ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ (Share). ಯುವಕ ಮತ್ತು ಯುವತಿಯಿಬ್ಬರು ನಾಯಿಯೊಂದಕ್ಕೆ ಹಿಂಸಿಸುವ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ಓರ್ವ ಯುವಕ ಮತ್ತು ಯುವತಿ ಬೀದಿ ನಾಯಿ ಮರಿಯನ್ನು ಅದರ ಹಿಂಗಾಲುಗಳನ್ನು ಹಿಡಿದು ಆಟಿಕೆಯಂತೆ ಜೋಕಾಲಿ ಮಾಡಿ ಹಿಂಸಿಸುವುದನ್ನು ನೋಡಬಹುದು. ಅಲ್ಲಿಯೇ ಇರುವ ಮಂಗಗಳನ್ನು ಹೆದರಿಸಲು ನಾಯಿ ಮರಿಯನ್ನು ಅವುಗಳತ್ತ ಎಸೆದಂತೆ ಮಾಡುತ್ತಾನೆ. ನಂತರ ಅದನ್ನು ತಲೆಕೆಳಗಾಗಿ ಹಿಡಿಯುತ್ತಾನೆ. ಆನಂತರ ಇಬ್ಬರೂ ಕೇಕೆ ಹಾಕಿ ನಗುವುದನ್ನು ಕಾಣಬಹುದು. ಕೊನೆಗೆ ವಿಚಿತ್ರ ಎಂಬಂತೆ ಯುವತಿ ನಾಯಿಯನ್ನು ಮುದ್ದಿಸುತ್ತಾಳೆ. ಈ ವಿಚಿತ್ರ ವರ್ತನೆ ನೆಟ್ಟಿಗರನ್ನು ಕೆರಳಿಸಿದೆ. ಇಬ್ಬರಿಗೂ ಕಠಿಣ ಶಿಕ್ಷೆ (Punishment) ವಿಧಿಸಬೇಕೆಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಇವರು ಅದೆಷ್ಟು ಕ್ರೂರಿಗಳಾಗಿರಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
SSLC ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ಒಂದು ‘ ಪೂರ್ವ ಸಿದ್ಧತಾ ಪರೀಕ್ಷೆ’ ನಡೆಸಲು ಸಾಧ್ಯವಾಗದಷ್ಟು ಅಸಮರ್ಥವಾಯಿತೇ ಹೊಸದಾಗಿ ರಚನೆಯಾಗಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ..? ಈ ಮೊದಲು ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ರಾಜ್ಯಮಟ್ಟದಲ್ಲಿ ನಡೆಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸಲಾಗುತ್ತಿತ್ತು. ಇದು ಪರೀಕ್ಷಾ ಫಲಿತಾಂಶದ ಮೇಲೆ ಸಾಕಷ್ಟು ಪ್ರಯೋಜನ ಸಹ ಬೀರುತ್ತಿತ್ತು. ಆದರೆ ಈಗ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನೆಪ ಮಾತ್ರಕ್ಕೆ ನಡೆಸಲಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಕಾರಣ, ರಾಜ್ಯಮಟ್ಟದಲ್ಲಿ ವೇಳಾಪಟ್ಟಿ ಪ್ರಕಟಿಸಿ, ಪ್ರಶ್ನೆ ಪತ್ರಿಕೆ ತಯಾರಿಸಿ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ತಾಲ್ಲೂಕು ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಕಾರಿಗೆ (ಬಿಒಒ) ವಹಿಸಿ ಆದೇಶ ಹೊರಡಿಸಿರುವುದು. ಪರೀಕ್ಷೆ ನಡೆಸುವ ಕಾರ್ಯವನ್ನು ತಾಲ್ಲೂಕು ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಕಾರಿಗಳಿಗೇ ವಹಿಸಲಿ, ಕನಿಷ್ಠ ಪಕ್ಷ ರಾಜ್ಯ ಮಟ್ಟದ ಒಂದು ಪ್ರಶ್ನೆ ಪತ್ರಿಕೆಯನ್ನಾದರೂ ಸಿದ್ಧಪಡಿಸಿ ಅದನ್ನೇ BEO ಲಾಗಿನ್ ಗೆ ಕಳುಹಿಸಿ ಗೌಪ್ಯತೆ ಕಾಪಾಡುವ ಮೂಲಕ ಪರೀಕ್ಷಾ…
ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಬ್ಸಿಡಿ ಸಾಲ ನೀಡಲು ಹಣದ ಆಮಿಷವೊಡ್ಡಿದ್ದ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಡಿಕೇರಿ ಕಚೇರಿ ಸಿಬ್ಬಂದಿಗಳಾದ ಚಂದ್ರಶೇಖರ್ ಹಾಗು ಚೆಲುವಾಂಬಾ ಬಂಧಿತ ಅಧಿಕಾರಿಗಳಾಗಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಬ್ಸಿಡಿ ಆಧಾರಿತ ಸಾಲ ಯೋಜನೆಯಡಿ ಮಹಿಳೆಯೋರ್ವರು ಕೋಳಿ ಅಂಗಡಿಗಾಗಿ 2021ರ ಅಕ್ಟೋಬರ್ ನಲ್ಲಿ 3 ಲಕ್ಷ ರೂ. ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಮಹಿಳೆಗೆ ಮೊದಲ ಹಂತದ ಹಣ ಪಾವತಿಯಾಗಿತ್ತು. 2ನೇ ಹಂತದ 1 ಲಕ್ಷ ರೂ. ಹಣ ಬಿಡುಗಡೆಗೆ ಆರೋಪಿಗಳು 10 ಸಾವಿರ ರೂ.ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ವಿಜಯಲಕ್ಷ್ಮೀ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ವಿಜಯಲಕ್ಷ್ಮೀ ಅವರಿಂದ 10 ಸಾವಿರ ರೂ. ಹಣ ಪಡೆಯುತ್ತಿದ್ದ ವೇಳೆ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…
ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ ದ್ವೇಷ ಭಾಷಣದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅವಲೋಕನ ಮಾಡಿದೆ. ದ್ವೇಷದ ಅಪರಾಧಗಳ ವಿರುದ್ಧ ಸರಿಯಾದ ಕ್ರಮದ ಕೊರತೆಯು ಅತ್ಯಂತ ಅಪಾಯಕಾರಿ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠದಿಂದ ಈ ಅಭಿಪ್ರಾಯಗಳು ಬಂದಿವೆ. ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳನ್ನು ನಮ್ಮ ಜೀವನದಿಂದ ಕಿತ್ತೊಗೆಯಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದ್ವೇಷದ ಭಾಷಣದಿಂದ ನಾಗರಿಕರನ್ನು ರಕ್ಷಿಸುವುದು ರಾಜ್ಯಗಳ ಆದ್ಯ ಕರ್ತವ್ಯ ಎಂದು ನ್ಯಾಯಾಲಯ ನೆನಪಿಸಿಕೊಂಡಿದೆ. ಜುಲೈ 4, 2021 ರಂದು ಮುಸ್ಲಿಂ ಎಂಬ ಕಾರಣಕ್ಕೆ ತನಗೆ ಅವಮಾನ ಮಾಡಲಾಗಿದೆ ಎಂದು ಉತ್ತರ ಪ್ರದೇಶದ ಮೂಲದವರೊಬ್ಬರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ಈ ಎಲ್ಲಾ ವಿಷಯಗಳನ್ನು ಸ್ಪಷ್ಟಪಡಿಸಿದೆ. ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವನಿಗೆ ಅವಮಾನ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣವನ್ನು ಏಕೆ ದಾಖಲಿಸುವುದಿಲ್ಲ ಎಂದು ನ್ಯಾಯಾಲಯ…
ಅದಾನಿ ಗ್ರೂಪ್ ವಿವಾದದ ಕುರಿತು ಚರ್ಚೆಗೆ ಕೇಂದ್ರ ಸಿದ್ಧವಾಗಬೇಕು ಎಂದು ರಾಹುಲ್ ಗಾಂಧಿ ಬಯಸಿದ್ದಾರೆ. ಜನರಿಗೆ ಸತ್ಯ ತಿಳಿಸಲು ಎರಡು ವರ್ಷಗಳಿಂದ ಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಅದಾನಿ ಗ್ರೂಪ್‌ನ ಹಿಂದಿನ ಶಕ್ತಿ ಯಾರು ಮತ್ತು ಲಕ್ಷ ಕೋಟಿ ಭ್ರಷ್ಟಾಚಾರದ ಹಿಂದಿನ ಶಕ್ತಿ ಯಾರು ಎಂದು ದೇಶಕ್ಕೆ ತಿಳಿಯಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು. ಅದಾನಿ ವಿಚಾರವನ್ನು ಸಂಸತ್ತಿನಲ್ಲಿ ಚರ್ಚಿಸದಿರಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡಲಿದೆ. ಸರ್ಕಾರಕ್ಕೆ ಬೇಕಾಗಿರುವುದು ಚರ್ಚೆಯಲ್ಲ. ಅದಾನಿ ಹಿಂದೆ ಇರುವ ಶಕ್ತಿ ಯಾರೆಂಬುದು ದೇಶಕ್ಕೆ ಗೊತ್ತಾಗಬೇಕು. ಕೇಂದ್ರ ಸರ್ಕಾರಕ್ಕೆ ಭಯವಾಗಿದ್ದು, ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ: ಭಾರತೀಯ ಜನತಾ ಪಕ್ಷಕ್ಕೆ ಬಹುಮತ ನೀಡಿದ ಬೆಳಗಾವಿ ಜನತೆಗೆ ಪರವಾಗಿ ಧನ್ಯವಾದಗಳು. ನಮ್ಮ ಮೇಲೆ ಬಹಳ ದೊಡ್ಡ ಜವಾಬ್ದಾರಿಯನ್ನು ಬೆಳಗಾವಿ ಜನತೆ ನೀಡಿದ್ದಾರೆ ಅದನ್ನು ನಾವು ಯಶಸ್ವಿಯಾಗಿ ನಿಭಾಯಿಸುತ್ತೇವೆ ಎಂದು ಶಾಸಕ ಅಭಯ ಪಾಟೀಲ್ ಹೇಳಿದರು. ನೂತನವಾಗಿ ಆಯ್ಕೆಯಾದ ಮೇಯರ್ ಹಾಗೂ ಉಪಮೇಯರ್ ಅಭಿನಂದನೆ ಭಾಷಣದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಮೇಯರ್ ಹಾಗೂ ಉಪಮೇಯರ್ ಚುನಾವಣೆಯ ಬಹಿಷ್ಕರಿಸುವುದು ದುರ್ದೈವದ ಸಂಗತಿ. ಮೊದಲ ಬಾರಿಗೆ ಮೇಯರ್ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಗೌರವಿಸಿ ಅವರು ಇದರಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಅವರಿಗೆ ನಮ್ಮ ಜೊತೆ ಸಹಕಾರ ನೀಡುವುದಿಲ್ಲ ಎಂದು ಇದರಿಂದ ಸಂದೇಶ ನಮಗೆ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಿಕ್ಕಮಗಳೂರು: ಮಹಿಳೆಯರ ಹೋರಾಟದ ಬದುಕಿನಲ್ಲಿ ಸಂಘರ್ಷಗಳು ಸಾಮಾನ್ಯ. ಅದರಲ್ಲಿಯೂ ರಾಜಕಾರಣದಲ್ಲಿ ಮಹಿಳೆಯರಿಗೆ ಬಹಳ ಕಷ್ಟ. ನಾವು ಪ್ರತಿಹಂತದಲ್ಲಿಯೂ ಕಷ್ಟಗಳನ್ನು ಎದುರಿಸಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ನಯನ ಮೋಟಮ್ಮ ಆಯೋಜನೆಯ ಆಶಾಕಿರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾವುಕರಾಗಿ ಮಾತನಾಡಿದ ಅವರು ಹೆಣ್ಣು ಹುಟ್ಟಿನಿಂದ ಸಾವಿನವರೆಗೂ ಸಮಸ್ಯೆ, ಕಷ್ಟ, ಸಂಕಷ್ಟದಲ್ಲಿ ಬೆಂದು ಬದುಕಬೇಕಿದೆ ಎಂದು ಹೆಣ್ತನದ ಕುರಿತು ಮಾರ್ಮಿಕವಾಗಿ ಮಾತನಾಡಿದರು. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಇನ್ನು ಮೂರು ತಿಂಗಳುಗಳ ಕಾಲ ಕೆಟ್ಟದ್ದನ್ನು ನೋಡದೇ, ಕೇಳದೆ ಮತ್ತು ಮಾತನಾಡದೆ ಮೌನವಾಗಿದ್ದುಕೊಂಡು ನನ್ನ ಅಭಿವೃದ್ಧಿ ಕಾರ್ಯಗಳ ಮೂಲಕ ಚುನಾವಣೆ ಗೆಲ್ಲಲಿದ್ದೇನೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಂಗಳೂರು ನಗರದ ಶಕ್ತಿನಗರದಲ್ಲಿರೋ ಸಿಟಿ ಆಸ್ಪತ್ರೆಯ ಅಧೀನದಲ್ಲಿರುವ ನರ್ಸಿಂಗ್ ಕಾಲೇಜು ಮತ್ತು ಪ್ಯಾರಾಮೆಡಿಕಲ್ ಕಾಲೇಜ್ ಗೆ ಸೇರಿದ ಹಾಸ್ಟೆಲೊಂದರಲ್ಲಿ ಸೋಮವಾರ ರಾತ್ರಿ ವಿಷಾಹಾರ ಸೇವನೆಯಿಂದ ಅಸ್ವಸ್ಥಗೊಂಡ ನೂರಾರು ವಿದ್ಯಾರ್ಥಿಗಳು ವಿವಿಧ ಆಸ್ಪತ್ರೆಗಳಿಗೆ ದಾಖಲಾದ ಘಟನೆ ನಡೆದಿದೆ. ನಗರದ ಹೊರವಲಯದ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳು ರಾತ್ರಿಯ ಊಟ ಮಾಡಿದ್ದು, ಸ್ವಲ್ಪ ಹೊತ್ತಿನಲ್ಲೇ ಅಸ್ವಸ್ಥಗೊಂಡರು ಎನ್ನಲಾಗಿದೆ. ಸುಮಾರು 137 ವಿದ್ಯಾರ್ಥಿಗಳು ವಿಷಾಹಾರದಿಂದಾಗಿ ಆಸ್ಪತ್ರೆಗೆ ಸೇರಿದ್ದಾರೆ. ತಕ್ಷಣ ವಿದ್ಯಾರ್ಥಿಗಳನ್ನು ವಿವಿಧ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಂಗಳೂರು ನಗರದ ಪೊಲೀಸ್ ಆಯುಕ್ತ ಶಶಿಕುಮಾರ್ ನೇತೃತ್ವದ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೈಕ್ ಗೆ ಇನೋವಾ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಮಾಜಿದ್ ಖಾನ್ (39) ಎಂದು ಗುರುತಿಸಲಾಗಿದೆ. 2 ಕಾರು 2 ಬೈಕ್ ಗಳಿಗೆ ಇನೋವಾ ಕಾರು ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಮಾಜಿದ್ ಖಾನ್ ಆಟೋ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದರು. ಇನ್ನು ರಿಯಾಜ್ ಸೇರಿ ನಾಲ್ವರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಮುಸುರೇಶ್ ಎಂಬುವವರ ಹೆಸರಿನಲ್ಲಿರುವ ಕಾರು ಇನೋವಾ ಕಾರನ್ನ ಹಲಸೂರು ಗೇಟ್ ಪೊಲೀಸರು ವಶಕ್ಕೆ ಪಡೆದಿದ್ದು, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy