Author: admin

ಮೊಬೈಲ್ ಬಳಸಿದ್ದಕ್ಕೆ ಅಮ್ಮ ಗದರಿದರು ಎಂದು ಬಾಲಕನೋರ್ವ ನೇಣಿಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಪದವು ಬಿ ಗ್ರಾಮದ ಕೋಟಿಮುರ ಎಂಬಲ್ಲಿ ನಡೆದಿದೆ. ಜ್ಞಾನೇಶ್(14) ಮೃತಪಟ್ಟ ಬಾಲಕನಾಗಿದ್ದು, ಈತ ಒಂಭತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ. ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪದವು ಬಿ ಗ್ರಾಮದ ಕೋಟಿಮುರದಲ್ಲಿರುವ ಖಾಸಗಿ ಅಪಾರ್ಟ್ಮೆಂಟ್ ನಲ್ಲಿ ಜಗದೀಶ್ ಹಾಗೂ ವಿನಯ ದಂಪತಿ ಮಗನಾದ ಜ್ಞಾನೇಶ್ ತುಂಟನಾಗಿದ್ದ. ಮೊಬೈಲ್ ಬಳಸುವ ವಿಚಾರವಾಗಿ ಮನೆಯಲ್ಲಿ ಈತನಿಗೆ ತಾಯಿ ಸ್ವಲ್ಪ ಗದರಿಸಿದ್ದರು ಎಂಬ ಕಾರಣಕ್ಕೆ ಬೇಸರದಲ್ಲಿದ್ದ. ತಾನು ಸ್ನಾನ ಮಾಡಿ ಬರುವುದಾಗಿ ಹೇಳಿ ರೂಮಿನೊಳಗೆ ಹೋದವನು ಕಿಟಕಿಯ ಮೂಲಕ ರೂಮಿನೊಳಗೆ ಹೋಗಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಹಲವು ಸಮಯಗಳವರೆಗೂ ಮಗ ಬಾರದಿದ್ದಾಗ ಅನುಮಾನಗೊಂಡು ನೋಡಿದ ವೇಳೆ ಪುತ್ರ  ಆತ್ಮಹತ್ಯೆಗೆ ಶರಣಾಗಿರುವ ದೃಶ್ಯ ಕಂಡು ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ಬಿಗ್ ಬಾಸ್ ಸೀಸನ್ 9 ರ ಸ್ಫರ್ಧಿ ಹಾಗೂ ಪುಟ್ಟಗೌರಿ ಧಾರಾವಾಹಿ ಖ್ಯಾತಿಯ ನಟಿ ಮತ್ತು ಮಾಡೆಲ್ ಸಾನ್ಯ ಅಯ್ಯರ್ ಅವರು ಯುವಕನಿಗೆ ಬೈಯ್ಯುವ ವೀಡಿಯೋವೊಂದು ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೋಟಿ-ಚನ್ನಯ್ಯ ಜೋಡುಕೆರೆ ಕಂಬಳಕ್ಕೆ ಸಾನ್ಯ ಅತಿಥಿಯಾಗಿ ಬಂದಿದ್ದರು. ಅದೇ ದಿನ ಮಧ್ಯರಾತ್ರಿ ಸ್ನೇಹಿತರೊಡನೆ ಮತ್ತೆ ಕಂಬಳ ವೀಕ್ಷಣೆಗೆ ಸಾನ್ಯ ಆಗಮಿಸಿದ್ದರು. ಕಂಬಳ ವೀಕ್ಷಣೆ ಮಾಡುವ ವೇಳೆ ಯುವಕನೊಬ್ಬ ಸೆಲ್ಫಿ ತೆಗೆಯುವಾಗ ಸಾನ್ಯ ಮತ್ತು ಸ್ನೇಹಿತೆಯರ ಕೈ ಹಿಡಿದು ಎಳೆದಿರುವ ಆರೋಪ ಮಾಡಲಾಗಿದೆ. ಕೈ ಹಿಡಿದು ಎಳೆದಿದ್ದರಿಂದ ಆಕ್ರೋಶಗೊಂಡ ಸಾನ್ಯ ಅಲ್ಲಿಯೇ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಯುವಕನು ಕೂಡ ಸಾನ್ಯ ಕೆನ್ನೆಗೆ ಬಾರಿಸಿದ್ದಾನೆ. ಇದರ ಬೆನ್ನಲ್ಲೇ ಸ್ಥಳೀಯ ಆಟೋ ಚಾಲಕರು ಯುವಕನಿಗೆ ಧರ್ಮದೇಟು ನೀಡಿದ್ದಾರೆ ಎನ್ನಲಾಗಿದೆ. ಈ ಘಟನೆಯಿಂದ ಬೇಸರಗೊಂಡ ಸಾನ್ಯ ಮತ್ತು ಆಕೆಯ ಸ್ನೇಹಿತರು ಕಂಬಳ ಆಯೋಜಕರನ್ನು ತರಾಟೆ ತೆಗೆದುಕೊಂಡರು. ಒಬ್ಬ ಹೆಣ್ಣುಮಗಳ…

Read More

ಬೆಂಗಳೂರಿನಿಂದ ಹಾಸನಕ್ಕೆ ಪ್ರಯಾಣಿಸಲು ಇರುವ ದೂರ 180 ಕಿ.ಮೀ.  ಆದ್ರೆ, ಕೇವಲ 180 ಕಿ.ಮೀ. ಅಂತದಲ್ಲಿ ನಾಲ್ಕು ಟೋಲ್ ಗೇಟ್ ಗಳು ಕಾರ್ಯಾಚರಿಸುತ್ತಿದ್ದು, ಸಾರ್ವಜನಿಕರನ್ನು ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಬೋವಿ ಸಮಾಜದ ಜಿಲ್ಲಾಧ್ಯಕ್ಷ ಸಂದೀಪ್ ಕುಮಾರ್  ಹಾಗೂ ರೈತ ಮುಖಂಡ ರೇವಣ್ಣ ಜಂಟಿ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಿಂದ ಹಾಸನಕ್ಕೆ ಪ್ರಯಾಣಿಸುವ ವೇಳೆ  ನೆಲಮಂಗಲ ಕುಣಿಗಲ್ ರಸ್ತೆ ಟೋಲ್, ಬೆಳ್ಳೂರು ಕ್ರಾಸ್(ಆದಿಚುಂಚನ ಗಿರಿ) ಟೋಲ್, ಹಿರಿಸಾವೆ ಟೋಲ್, ಶಾಂತಿ ಗ್ರಾಮ ಟೋಲ್ ಗಳಲ್ಲಿ ಸಾರ್ವಜನಿಕರು ಹಣ ಪಾವತಿಸಿ ಪ್ರಯಾಣಿಸಬೇಕಾದ ದುಸ್ಥಿತಿ ಇದೆ. ಬೆಳ್ಳೂರು ಕ್ರಾಸ್ (ಆದಿಚುಂಚನಗಿರಿ ) ಟೋಲ್ ನಿಂದ ಹಿರಿಸಾವೆ ಟೋಲ್ ಸಾಗಲು ಕೇವಲ 17km ಇದೆ. ಆದ್ರೆ 17 ಕಿ.ಮೀ. ಅಂತರದಲ್ಲಿ ಟೋಲ್ ಗೇಟ್ ನಿರ್ಮಿಸಿ ಸಾರ್ವಜನಿಕರಿಂದ ಹಣ ವಸೂಲಿ ದಂಧೆ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 60 ಕಿ.ಮೀ. ಒಳಗಡೆಯ ಟೋಲ್ ಗೇಟ್ ಗಳನ್ನು ತೆರವುಗೊಳಿಸುವ ಬಗ್ಗೆ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಘೋಷಣೆ ಮಾಡಿದ್ದಾರೆ.…

Read More

ಆತ್ಮ ನಿರ್ಭರ ಯೋಜನೆಯಡಿ ರಾಷ್ಟ್ರ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು ಯುವಕರು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ರೈತರ ಅಭಿವೃದ್ದಿಗಾಗಿ ಹಲವು ಯೋಜನೆಗಳನ್ನ ಜಾರಿ ಮಾಡಿದ್ದೇವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ನುಡಿದರು. ಇಂದು ಸಂಸತ್ ​ನಲ್ಲಿ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ಬಜೆಟ್ ಅಧಿವೇಶನ ಉದ್ದೇಶೀಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಿದರು. ಇಡೀ ವಿಶ್ವವೇ ಇಂದು ಭಾರತದತ್ತ ತಿರುಗಿ ನೋಡುತ್ತಿದೆ. ವಿಶ್ವ ದೇಶಗಳು ಭಾರತದಿಂದ ನೆರವು ನಿರೀಕ್ಷಿಸುವ ಹಂತಕ್ಕೆ ಪರಿವರ್ತನೆ ಆಗಿದೆ. ಹಲವು ವಿಷಯಗಳಲ್ಲಿ ಸರ್ಕಾರ ಸಾಧನೆ ಮಾಡಿದೆ. ಜಲಜೀವನ್ ಮಿಷನ್ ಅಡಿ ಕುಡಿಯುವ ನೀರು ಯೋಜನೆ ಜಾರಿ, ಬಡತನ ನಿರ್ಮೂಲನೆಗೆ ಸರ್ಕಾರದಿಂದ ನಿರಂತರ ಕ್ರಮ ಕೈಗೊಂಡಿದೆ. 50 ಕೋಟಿ ಬಡವರಿಗೆ ಉಚಿತ ವಿಮಾ ಯೋಜನೆ, 50 ಕೋಟಿ ಬಡವರಿಗೆ ಆರೋಗ್ಯ ಕಾರ್ಡ್, ರೈತರ ಅಭಿವೃದ್ದಿಗಾಗಿ ಹಲವು ಯೋಜನೆ ಜಾರಿ ಮಾಡಿಲಾಗಿದೆ. ಕಿಸಾನ್ ಸಮ್ಮಾನ್ , ಕಿಸಾನ್ ಕಾರ್ಡ್ ವಿತರಣೆ ಮಾಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಭ್ರಷ್ಟಾಚಾರ ಮಾರಕವಾಗಿದೆ ಭ್ರಷ್ಟಾಚಾರ ನಿರ್ಮೂಲನೆಗೆ…

Read More

ಬೆಂಗಳೂರು: ಮಾನವೀಯತೆಯ ಮೌಲ್ಯವನ್ನು ಎತ್ತಿಹಿಡಿದ ಆಪತ್ಪಾಂಧವ – ನಮ್ಮ ಸಂಸ್ಥೆಯ ಹೆಮ್ಮೆ, ಗೌರವದ ಪ್ರತೀಕ ನಮ್ಮ ಚಾಲಕರಾದ ಶ್ರೀ ಮಂಜುನಾಥ್ ಬಿಲ್ಲೆ. ದಿನಾಂಕ 29.01.2023 ರಂದು ತುಮಕೂರು ವಿಭಾಗದ ಶಿರಾ ಘಟಕದ ಚಾಲಕರಾದ ಶ್ರೀ ಮಂಜುನಾಥ್ ಬಿಲ್ಲೆ ಸಂಖ್ಯೆ 697 ರವರು ತುಮಕೂರು ವಿಭಾಗದಮಾರ್ಗದಲ್ಲಿ ಬಸ್ಸು ಚಾಲನೆ ಮಾಡುತ್ತಿರುವ ಸಮಯದಲ್ಲಿ ಸಮೀಪದ ಹಂದಿ ಕುಂಟೆ ಅಗ್ರಹಾರ ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು , ತಮ್ಮ ಪ್ರಾಣಪಾಯವನ್ನು ಸಹ ಲೆಕ್ಕಿಸದೆ ರಕ್ಷಿಸಿ ಶೌರ್ಯ ಕಾರ್ಯವನ್ನು ಮೆರೆದ ಚಾಲಕನ ಮಾನವೀಯ ಕಾರ್ಯವನ್ನು ಮೆಚ್ಚಿ ಇಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿ ಅನ್ಬುಕುಮಾರ್ ಭಾಆಸೇ, ರವರು, ಸದರಿ ಚಾಲಕರನ್ನು ಇಂದು ಕೆ ಎಸ್ ಆರ್ ಟಿ ಸಿ ಕೇಂದ್ರ ಕಛೇರಿಯಲ್ಲಿ ಅವರ ಕುಟುಂಬದವರ ಸಮ್ಮಖದಲ್ಲಿ ಸನ್ಮಾನಿಸಿ ರೂ. 10,000 ನಗದು ಪುರಸ್ಕಾರ ಮತ್ತು ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಂಜುನಾಥ್ ರವರು ನಡೆದ ಘಟನೆ ಬಗ್ಗೆ ವಿವರಿಸಿದರು. ನಂತರ ಮಾತನಾಡಿದ…

Read More

ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಗವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಡೋಣಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಅವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸುರಕ್ಷತಾ ಇಲಾಖೆ ಮತ್ತು ಉಪ ನಿರ್ದೇಶಕರ ಕಚೇರಿ ಮಧುಗಿರಿ ಶೈಕ್ಷಣಿಕ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಾರ್ಯಾಲಯ ಕೊರಟಗೆರೆ ಸಮೂಹ ಸಂಪನ್ಮೂಲ ಕೇಂದ್ರ ಬೂದುಗವಿ, ಬೂದಗವಿ ಗ್ರಾಮ ಪಂಚಾಯಿತಿ ಇವರ ಸಂಯುಕ್ತಶ್ರಯದಲ್ಲಿ 2022-23 ನೇ ಸಾಲಿನ ಬೂದಗವಿ ಕ್ಲಸ್ಟರ್ ಹಂತದ ಕಲಿಕಾ ಹಬ್ಬವನ್ನು ಇಂದು ಆಯೋಜಿಸಲಾಗಿತ್ತು. ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆಯ ಇ ಸಿ ಓ ಕಾಮರಾಜು ಮತ್ತು ಎಸ್ ಟಿ ಎಂ ಸಿ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಉದ್ಘಾಟಿಸಿದರು. ಶಿಕ್ಷಣ ಇಲಾಖೆಯ ಮಂಜುಳಾ ಈ ವೇಳೆ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣದ ಕೊರತೆ ಹೆಚ್ಚಾಗಿ ಕಾಡುತ್ತಿತ್ತು. ಅಂತಹ ಸಂದರ್ಭದಲ್ಲಿಯೂ ಶಿಕ್ಷಕರು ತುಂಬಾ ಶ್ರಮವಹಿಸಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ಶಿಕ್ಷಣ ನೀಡಿದ್ದಾರೆ.…

Read More

ಕೊರಟಗೆರೆ : ಪಟ್ಟಣದ ಮೂರನೇ ವಾರ್ಡಿನ ಕಾವಲಮ್ಮ ಎನ್ನುವ ವೃದ್ದೆಯನ್ನು ತನ್ನ ಮೊಮ್ಮಗನೇ ಮನೆಯಿಂದ ಹೊರ ಹಾಕಿದ್ದ ದಾರುಣ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ  ಮಧುಗಿರಿ ಉಪ ವಿಭಾಗಾಧಿಕಾರಿಗಳ ಆದೇಶದಂತೆ ಕೊರಟಗೆರೆ ತಹಶೀಲ್ದಾರ್ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಿರಿಯ ನಾಗರಿಕರ ಹಕ್ಕು ಕಾಯ್ದೆ ಅಡಿಯಲ್ಲಿ ಸುಮಾರು 80 ವಯಸ್ಸಿನ ಕಾವಲಮ್ಮ ವೃದ್ದೆಗೆ ತಾನು ವಾಸಿಸುತ್ತಿದ್ದ ಮನೆಯನ್ನು ಹಿಂದಿರುಗಿಸಿ ಕೊಟ್ಟಿರುವ ಘಟನೆ ನಡೆದಿದೆ. ಘಟನೆಯ ಬಗ್ಗೆ ತಹಶೀಲ್ದಾರ್ ನರಸಿಂಹಮೂರ್ತಿ ಮಾತನಾಡಿ, ಉಪವಿಭಾಗಾಧಿಕಾರಿಗಳ ಆದೇಶದಂತೆ ಪಟ್ಟಣದ ಮೂರನೇ ವಾರ್ಡಿನ ಕಾವಲಮ್ಮ ಲೇಟ್ ರಾಮಯ್ಯ ಎನ್ನುವವರನ್ನು ಮಾರುತಿ ಎನ್ನುವವರು ಬಲವಂತದಿಂದ ಮನೆಯಿಂದ ಹೊರ ಹಾಕಿದ್ದ ದೂರಿನ ಅನ್ವಯ ಮೇಲಾಧಿಕಾರಿಗಳ ಆದೇಶದಂತೆ ಸ್ಥಳಕ್ಕೆ ಭೇಟಿ ನೀಡಿ   ವಯೋವೃದ್ದೆಯಾದ ಕಾವಲಮ್ಮನಿಗೆ ಇವರ ಮುಂದಿನ ಜೀವನವನ್ನು ಮನದಲ್ಲಿಟ್ಟುಕೊಂಡು ಕಾವಲಮ್ಮನಿಗೆ ಮನೆಯನ್ನು ಅಧಿಕಾರಿಗಳ ಸಮಕ್ಷಮದಲ್ಲಿ ಹಿಂತಿರುಗಿಸಲಾಯಿತು. ವಯೋವೃದ್ದೆಯಾದ ಕಾವಲಮ್ಮ ಇನ್ನು ಮುಂದೆ ಸಂತೋಷದಿಂದ ತನ್ನ ಮನೆಯಲ್ಲಿ ವಾಸಿಸಬಹುದು ಎಂದು ತಿಳಿಸಿದರು. ತನ್ನ…

Read More

ಶಿವಮೊಗ್ಗ:  ತಮ್ಮ ಹೆಣ ಕೂಡ ಬಿಜೆಪಿ ಪಕ್ಷಕ್ಕೆ ಹೋಗೋದಿಲ್ಲ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ತಿರುಗೇಟು ನೀಡುವ ಭರದಲ್ಲಿ  ಕೆ.ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಕೆ.ಎಸ್ ಈಶ್ವರಪ್ಪ, ‘ಜೀವಂತ ಸಿದ್ದರಾಮಯ್ಯನೇ ನಮಗೆ ಬೇಕಿಲ್ಲ, ಅವರ ಹೆಣ ತೆಗೆದುಕೊಂಡು ಏನು ಮಾಡೋಣ? ನಾಯಿಯೂ ಕೂಡ ಅವರ ಹೆಣ ಮೂಸಿ ನೋಡೋದಿಲ್ಲ ಎಂದು ಹೇಳಿದರು. ಶಾಸಕ ಕೆ ಎಸ್ ಈಶ್ವರಪ್ಪ, ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಯೊಬ್ಬರು ಒಂದು ಪಕ್ಷದ ಅಧ್ಯಕ್ಷರ ಬಗ್ಗೆ ಅಂಥ ಪದಗಳನ್ನು ಬಳಸುವುದು ಆವರ ಘನತೆಗೆ ಶೋಭೆ ನೀಡೋದಿಲ್ಲ. ತಮ್ಮ ಸ್ಥಾನದ ಗೌರವ ಉಳಿಸಿಕೊಳ್ಳುವುದು ಅವರ ಜವಾಬ್ದಾರಿ. ಮತ್ತೆ ಆಪದ ಬಳಕೆ ಮಾಡಿದರೇ ನಾವು ಆ ರೀತಿ ಉತ್ತರಿಸಬೇಕಾಗುತ್ತೆ ಎಂದರು . ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಚಿನ್ನದ ವ್ಯಾಪಾರಿಗಳಿಗೆ ಆದಾಯ ತೆರಿಗೆ ಅಧಿಕಾರಿಗಳು ಶಾಕ್​ ನೀಡಿದ್ದು, ಸುಮಾರು 25ಕ್ಕೂ ಹೆಚ್ಚು ಚಿನ್ನದ ವ್ಯಾಪಾರಿಗಳ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆ ಮಾಡಿ ವ್ಯಾಪಾರ ಮಾಡುತ್ತಿದ್ದ ಆರೋಪದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಜಯನಗರ, ಯಶವಂತಪುರ, ಬಸವನಗುಡಿ, ಚಿಕ್ಕಪೇಟೆ ನಗರದಲ್ಲಿನ ವ್ಯಾಪಾರಿಗಳ ಅಂಗಡಿ ಮೇಲೆ ದಾಳಿ ಮಾಡಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ. ಒಟ್ಟು 300ಕ್ಕೂ ಹೆಚ್ಚು ಅಧಿಕಾರಿಗಳ ತಂಡ ವಿವಿಧ ಪ್ರದೇಶದಲ್ಲಿ ನಡೆದಿರುವ ದಾಳಿಯಲ್ಲಿ ಪಾಳ್ಗೊಂಡಿದೆ. ಚಿನ್ನದ ವ್ಯಾಪಾರ, ತೆರಿಗೆ ಕಟ್ಟಿರುವ ರಶೀದಿ ಸೇರಿದಂತೆ ಇತರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಡಿಜಿಟಲ್ ಗ್ರಂಥಾಲಯಗಳ ಯೋಜನೆಗೆ ದೊರೆತಂತಹ ಪ್ರತಿಕ್ರಿಯೆಯಿಂದ ಪ್ರೇರಣೆಗೊಂಡಿರುವ ಗ್ರಂಥಾಲಯಗಳ ಇಲಾಖೆಯು, ಅಂದಾಜು ರೂ.೪ ಕೋಟಿ ಮೊತ್ತದಲ್ಲಿ ರಾಜ್ಯದಾದ್ಯಂತ ಗ್ರಾಮೀಣ ಪ್ರದೇಶಗಳು ಹಾಗೂ ಕೊಳಗೇರಿ ಪ್ರದೇಶಗಳಲ್ಲಿರುವಂತಹ ೧೭೨ ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯಗಳನ್ನಾಗಿ ಪರಿವರ್ತಿಸಲು ಸಿದ್ಧತೆ ನಡೆಸಿದೆ. ಮೊದಲ ಹಂತದಲ್ಲಿ ರಾಜ್ಯದ ೨೭೨ ಗ್ರಂಥಾಲಯಗಳನ್ನು ಡಿಜಿಟಿಲ್ ಗ್ರಂಥಾಲಯಗಳನ್ನಾಗಿ ಪರಿವರ್ತಿಸಲಾಗಿತ್ತು. ನಂತರ ಎರಡನೇ ಹಂತದಲ್ಲಿ ೧೦೦ ಗ್ರಂಥಾಲಯಗಳು ಪರಿವರ್ತನೆಗೊಂಡಿದ್ದವು. ಈಗ ಮೂರನೇ ಹಂತದಲ್ಲಿ ಇಲಾಖೆಯು ಗ್ರಾಮೀಣ ಪ್ರದೇಶಗಳ ಕಡೆ ಗಮನ ಹರಿಸಿದೆ. ಈ ಯೋಜನೆಯನ್ನು 2020ರಲ್ಲಿ ಜಾರಿಗೊಳಿಸಲಾಯಿತು. ಪ್ರಸ್ತುತ ಅಂದರೆ ೨ ವರ್ಷ, ೧೦ ತಿಂಗಳಲ್ಲಿ ೩.೨೧ ಕೋಟಿ ಚಂದಾದಾರರಿದ್ದು, ೧.೭೩ ಕೋಟಿಯಷ್ಟು ಇ-ಕಂಟೆಂಟ್ (ವಿಷಯವಸ್ತು) ಅನ್ನು ಯಶಸ್ವಿಯಾಗಿ ಸೇರ್ಪಡೆಗೊಳಿಸಲಾಗಿದೆ. “ಕರ್ನಾಟಕಕ್ಕೆ ಆರಂಭದಲ್ಲಿ ನೀಡಿದ್ದಂತಹ ಗುರಿ ಕನಿಷ್ಠ ೧೦ ಲಕ್ಷ ಚಂದಾದಾರರು. ಆದರೆ, ನಮಗೆ ಸಿಕ್ಕಂತಹ ಪ್ರತಿಕ್ರಿಯೆ ಅದ್ವಿತೀಯವಾಗಿತ್ತು, ಎಲ್ಲಾ ದಾಖಲೆಗಳನ್ನೂ ಮುರಿಯಿತು. ಇದು ನಮಗೆ ಇನ್ನೂ ಹೆಚ್ಚಿನ ಸಂಖ್ಯೆಯ ಗ್ರಂಥಾಲಯಗಳನ್ನು ಡಿಜಿಟಲ್‌ ಗೆ ಪರಿವರ್ತಿಸಲು ಪ್ರೇರೇಪಿಸಿದೆ,” ಎಂದು ಗ್ರಂಥಾಲಯಗಳ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್…

Read More