Subscribe to Updates
Get the latest creative news from FooBar about art, design and business.
- ವಿಜೃಂಭಣೆಯಿಂದ ನೆರವೇರಿದ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ
- ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾಹಿತಿಗಳು ಸರ್ಕಾರದ ಆಶ್ರಯ ಪಡೆಯುವುದನ್ನು ನಿಲ್ಲಿಸಬೇಕು: ಬಂಜಗೆರೆ ಜಯಪ್ರಕಾಶ್
- ದುಪ್ಪಟ್ಟು ಹಣ ಲಾಭ ಗಳಿಸುವ ಆಮಿಷಕ್ಕೆ ಬಲಿಯಾಗಿ 14 ಲಕ್ಷ ರೂ. ಕಳೆದುಕೊಂಡ ಹೊಟೇಲ್ ಸಿಬ್ಬಂದಿ!
- ಎರಡು ಲಾರಿಗಳ ನಡುವೆ ಅಪಘಾತ: ಲಾರಿಯಿಂದ ಚೆಲ್ಲಿದ ಗೋದಿ ಕಂಡವರ ಪಾಲು!
- ಮಧುಗಿರಿ: ಸೊಳ್ಳೆಗಳ ವಿಪರೀತ ಕಾಟಕ್ಕೆ ಬಳಲಿ ಬೆಂಡಾದ ಜನ
- ಮಧುಗಿರಿ: ಬಿಜೆಪಿ ಒಬಿಸಿ ಮೋರ್ಚಾ ಸಭೆ
- ಬೀದರ್ | ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ
Author: admin
ತುಮಕೂರು: ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಬಾಲಕಿಯರನ್ನು ಸರ್ಕಾರಿ ಬಸ್ ಚಾಲಕರೊಬ್ಬರು ರಕ್ಷಿಸಿದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ನಡೆದಿದೆ. 18 ವರ್ಷದ ಸುಷ್ಮಾ ಹಾಗೂ 9 ವರ್ಷದ ಮಂಜುಳ ಎಂಬವರು ತಾಯಿಯೊಂದಿಗೆ ಬಟ್ಟೆ ತೊಳೆಯಲು ಹಂದಿಕುಂಟೆ ಅಗ್ರಹಾರ ಕೆರೆ ಬಳಿಗೆ ತೆರಳಿದ್ದ ವೇಳೆ ಸುಷ್ಮಾ ಮತ್ತು ಮಂಜುಳ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಮಕ್ಕಳು ಕೆರೆಗೆ ಬಿದ್ದದ್ದನ್ನು ಕಂಡು ಗಾಬರಿಯಿಂದ ತಾಯಿ ಸಹಾಯಕ್ಕಾಗಿ ಕಿರುಚಿಕೊಂಡಿದ್ದಾರೆ. ಇದೇ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಸರ್ಕಾರಿ ಬಸ್ ಚಾಲಕ ಮಂಜುನಾಥ್ ಅವರು ಬಸ್ ನಿಲ್ಲಿಸಿ, ಕೆರೆಗೆ ಹಾರಿ ಇಬ್ಬರು ಬಾಲಕಿಯರನ್ನೂ ರಕ್ಷಿಸಿದ್ದಾರೆ. ಬಸ್ ಚಾಲಕ ಮಂಜುನಾಥ್ ಅವರ ಮಾನವೀಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮಯಕ್ಕೆ ಸರಿಯಾಗಿ ಅವರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಇಬ್ಬರು ಬಾಲಕಿಯರ ಜೀವ ರಕ್ಷಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ಹೇಳಿದ್ದಾರೆ. ಮಂಜುನಾಥ್ ಅವರು ಚಲಾಯಿಸುತ್ತಿದ್ದ ಬಸ್ ಶಿರಾದಿಂದ ನಾಗಪ್ಪನಹಳ್ಳಿ ಕಡೆಗೆ ಸಾಗುತ್ತಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…
ತುಮಕೂರು: ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಧಾರ್ಮಿಕ ಗುರುಗಳಾದ ಅಲ್ ಹಾಜ್ ಹಫೀಜ್ ಮೊಹಮ್ಮದ್ ಆಜಂ ಶಾ ಖಾದ್ರಿ (ರ) ಇವರ ಸ್ಮರಣಾರ್ಥ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ತುಮಕೂರು ನಗರದ ಚಿಕ್ಕಪಟೆಯ ಅತ್ತಿಮಬ್ಬೆ ವಿದ್ಯಾ ಮಂದಿರ ಹೈಯರ್ ಪ್ರೈಮರಿ ಶಾಲೆಯಲ್ಲಿಆಯೋಜಿಸಲಾಯಿತು. ಜಯ ಕರ್ನಾಟಕ ಜನಪರ ವೇದಿಕೆ ಹಾಗೂ ಟಿ.ಹೆಚ್.ಎಸ್. ಆಸ್ಪತ್ರೆ ಮತ್ತು ನೇತ್ರದೀಪ ಹೈ ಆಸ್ಪತ್ರೆ ಇವರ ಸಹಾಯದಿಂದ ಹಮ್ಮಿಕೊಳ್ಳಲಾದ ಈ ಬೃಹತ್ ಉಚಿತ ಆರೋಗ್ಯ ಶಿಬಿರವನ್ನುದ್ದೇಶಿಸಿ ಮಾತನಾಡಿದ ಜಯ ಕರ್ನಾಟಕ ಜನಪರ ವೇದಿಕೆಯ ಮುಖಂಡರು ಮಾತನಾಡಿ, ಟಿ.ಹೆಚ್.ಎಸ್. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟಿ.ಹೆಚ್.ಎಸ್.ಡಯಾಸ್ಕೋಸ್ಟಿಕ್ ಸೆಂಟರ್ ಮತ್ತು ನೇತ್ರದೀಪ್ ಕಣ್ಣಿನ ಆಸ್ಪತ್ರೆ ಮತ್ತು ವಿವಿಧ ತಜ್ಞ ವೈದ್ಯಕೀಯ ಸೌಲಭ್ಯವಿರುವ ಎಲ್ಲಾ ವರ್ಗದ ಜನರಿಗೆ ಅತ್ಯುತ್ತಮ ಚಿಕಿತ್ಸೆಯನ್ನು ನೀಡುತ್ತಿರುವ ಆಸ್ಪತ್ರೆಯಾಗಿದೆ. ಈ ಸಂಸ್ಥೆಯಿಂದ ಹಲವಾರು ರೋಗಿಗಳು ಇದರ ಸೌಲಭ್ಯ ಪಡೆದಿರುತ್ತಾರೆ, ಆದ್ದರಿಂದ ಶಿಬಿರದ ಪ್ರಯೋಜನ ಪಡೆದು ಶಿಬಿರ ಯಶಸ್ವಿಯಗಲು ಸಹಕರಿಸಬೇಕಾಗಿ ಕೋರುತ್ತೇವೆ ಎಂದರು. ಆರೋಗ್ಯ ಶಿಬಿರದಲ್ಲಿ ಬಿ.ಪಿ, ಬ್ಲಡ್ ಶುಗರ್,…
ಬೆಂಗಳೂರು ನಗರದ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡನೇ ವಿವಾಹದ ನೆಪದಲ್ಲಿ ವೃದ್ಧರೊಬ್ಬರಿಗೆ ವಂಚಿಸಿ 2.30 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಮಹಿಳೆ ಪರಾರಿಯಾಗಿರುವ ಘಟನೆ ನಡೆದಿದೆ. ಕಾಟನ್‌ಪೇಟೆ ಒಟಿಸಿ ರಸ್ತೆಯ ಷಣ್ಮುಗಂ (62) ಎಂಬುವವರು ಮೋಸ ಹೋಗಿದ್ದು, ತಮಿಳುನಾಡು ಮೂಲದ ಮಲ್ಲಿಕಾ ಅಲಿಯಾಸ್ ಮಲ್ಗರ್ (35) ಈ ಕೃತ್ಯವೆಸಗಿ ನಾಪತ್ತೆಯಾಗಿದ್ದಾಳೆ. ಬ್ರೋಕರ್ ಮೂಲಕ ಷಣ್ಮುಗಂ ಅವರನ್ನು ಪರಿಚಯ ಮಾಡಿಕೊಂಡು ಬಳಿಕ ಎರಡನೇ ಮದುವೆ ಮಾಡಿಕೊಂಡು ಆರೋಪಿ ವಂಚಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಮೊದಲ ಪತ್ನಿ ವಿಚ್ಛೇದನ ನೀಡಿದ್ದ ಷಣ್ಮುಗಂ, ತಮ್ಮ 10 ವರ್ಷದ ಮಗನ ಜೊತೆ ನೆಲೆಸಿದ್ದರು. ಮೆಕ್ಯಾನಿಕ್ ಆಗಿ ಜೀವನ ಸಾಗಿಸುತ್ತಿದ್ದ ಅವರು, ಇತ್ತೀಚೆಗೆ ಎರಡನೇ ವಿವಾಹವಾಗಿದ್ದರು. ಇನ್ನು ಆರೋಪಿ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಲ್ನಡಿಗೆಯ ಮೂಲಕ ಪ್ರಾರಂಭಿಸಲಾಗಿದ್ದ ಕಾಂಗ್ರೆಸ್ಸಿನ ಭಾರತ ಜೋಡೋ ಯಾತ್ರೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಶ್ರೀನಗರ ಲಾಲ್ ಚೌಕಿನಲ್ಲಿ ಧ್ವಜಾರೋಹಣದೊಂದಿಗೆ ಮುಕ್ತಾಯಗೊಂಡ ಭಾರತ್ ಜೋಡೋ ಯಾತ್ರೆ 2022ರ ಸೆಪ್ಟೆಂಬರ್ 7ಕ್ಕೆ ಕನ್ಯಾಕುಮಾರಿಯಿಂದ ಆರಂಭಗೊಂಡು 12 ರಾಜ್ಯಗಳಲ್ಲಿ 3560 ಕಿಲೋಮೀಟರ್ಗಳ ಸುದೀರ್ಘ ಕಾಲ್ನಡಿಗೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ಮಾಡಿದ ಭಾರತ್ ಜೋಡೋ ಯಾತ್ರೆ ಬಹು ಚರ್ಚಿತ ವಾಗಿದ್ದ ಯಾತ್ರೆಯಾಗಿತ್ತು. ಈ ಯಾತ್ರೆ ಅನೇಕ ರಾಜಕೀಯ ಆಯಾಮಗಳನ್ನು ಸೃಷ್ಟಿ ಮಾಡುವುದರ ಜೊತೆಗೆ ವಿರೋಧ ಪಕ್ಷಗಳನ್ನು ಒಂದೇ ವೇದಿಕೆಗೆ ಕರೆ ನೀಡುವ ಪ್ರಯತ್ನ ಮಾಡಿದ್ದು ವಿಶೇಷ. ಯಾತ್ರೆ ಸಂಪೂರ್ಣ ಸಫಲವಾಗದೆ ಇರಬಹುದು ಆದರೆ, ರಾಜಕೀಯ ಎಲ್ಲಾ ವಿರೋಧ ಪಕ್ಷಗಳು ಭಾರತ್ ಜೋಡು ಯಾತ್ರೆಗೆ ಪರೋಕ್ಷ ಬೆಂಬಲ ಹಾಗೂ ಶುಭಾಶಯವನ್ನು ಕೋರಿದ್ದು ವಿಶೇಷವಾಗಿತ್ತು. ಕೇಂದ್ರದಲ್ಲಿನ ಭಾರತೀಯ ಜನತಾ ಪಕ್ಷದ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದ್ದು ಬೆಲೆ ಏರಿಕೆ, ನಿರುದ್ಯೋಗ, ರಾಷ್ಟ್ರೀಯ ಭದ್ರತೆ, ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯೇ ಕುರಿತು…
ವಿಜಯನಗರ: ಹಂಪಿ ಪ್ರವಾಸಿ ಸ್ಥಾನಗಳಲ್ಲಿ ಪ್ರಮುಖವಾಗಿದ್ದು ಇದೀಗ ಉದ್ಯಾನವನಗಳ ಅಭಿವೃದ್ಧಿಯಲ್ಲೂ ಮೇಲುಗೈ ಸಾಧಿಸುತ್ತಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರೀಯ ಉದ್ಯಾನವನಕ್ಕೆ ಬಿಹಾರದಿಂದ ಆಫ್ರಿಕಾ ಮೂಲದ ಜಿರಾಫೆ ತರಲಾಗಿದ್ದು, ಸಚಿವ ಆನಂದ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ. ಮೃಗಾಲಯದ ಡಿ.ಸಿ.ಎಫ್ ಕಿರಣ್ ಕುಮಾರ್ ಅವರು ಬಿಹಾರ ಪಟ್ನಾ ಮೃಗಾಲಯದಿಂದ ಜಿರಾಫೆಯನ್ನು ತರುವಲ್ಲಿ ಆರು ತಿಂಗಳಿಂದ ಪ್ರಯತ್ನ ಪಟ್ಟಿದ್ದು. ಇಲ್ಲಿನ ಮೃಗಾಲಯದಲ್ಲಿ ಜಿರಾಫೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನಾಲ್ಕು ದಿನಗಳ ರಸ್ತೆ ಪ್ರಯಾಣದ ಮೂಲಕ ಬಿಹಾರದಿಂದ ಜಿರಾಫೆಯನ್ನು ಕರೆ ತರಲಾಗಿದೆ. 4 ವರ್ಷದ ಈ ಜಿರಾಫೆಗೆ ಮೈಸೂರು ಮೃಗಾಲಯದಿಂದ ಆಗಮಿಸುವ ಮತ್ತೊಂದು ಜಿರಾಫೆ ಜೋಡಿಯಾಗಲಿದೆ ಎಂದು ಅವರು ಮಾಹಿತಿ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಇದೊಂದು ಇಸೋಪನ ನೀತಿ ಕಥೆ ಯೆಂಬ ಪ್ರತೀತಿ ಇದೆ.ದಟ್ಟವಾದ ಕಾಡಿನಲ್ಲಿನ ಸರೋವರದ ಬದಿಯಲ್ಲಿ ಸಾವಿರಾರು ಮೊಲಗಳು ವಾಸವಾಗಿದ್ದವು. ಅವುಗಳಿಗೆ ಅಲ್ಲಿ ಬೇಕಾದಷ್ಟು ಆಹಾರ ಸಿಗುತ್ತಿತ್ತು. ಅವುಗಳ ಪರಿವಾರ ದಿನದಿಂದ ದಿನಕ್ಕೆ ವೃದ್ಧಿಸುತ್ತಲೇ ಇತ್ತು. ಮೊಲಗಳು ಮೊದಲೇ ತುಂಬ ಪುಕ್ಕಲು ಸ್ವಭಾವದ ಪ್ರಾಣಿಗಳು. ಒಂದು ಚೂರು ಸದ್ದಾದರೂ ಹೆದರಿ ಓಡುವಂಥ ಜೀವಿಗಳು. ಒಂದು ಬಾರಿ ಮೊಲಗಳೆಲ್ಲ ಸಭೆ ಸೇರಿದ್ದಾಗ ಹಿರಿಯ ಮೊಲವೊಂದು ಗಂಭೀರವಾಗಿ ಮಾತನಾಡಿತು, ‘ಬಂಧುಗಳೇ, ನಾವೆಲ್ಲ ಈ ಅರಣ್ಯದಲ್ಲಿ ಚೆನ್ನಾಗಿದ್ದೇವೆ ಎಂಬುದು ಒಂದು ಭಾವನೆ. ಆದರೆ, ನಿಜವಾಗಿ ನೋಡಿದರೆ ನಾವು ಇರುವಷ್ಟು ಆತಂಕದಲ್ಲಿ ಬೇರೆ ಯಾವ ಪ್ರಾಣಿಯೂ ಕಾಡಿನಲ್ಲಿ ಇರುವುದು ಸಾಧ್ಯವಿಲ್ಲ. ನಮ್ಮ ಸ್ವಭಾವವೇ ಪುಕ್ಕಲು. ನಾವು ಪಕ್ಕಾ ಸಸ್ಯಾಹಾರಿಗಳು, ಯಾರಿಗೂ ತೊಂದರೆ ಕೊಡುವವರಲ್ಲ. ಆದರೆ, ಎಲ್ಲರೂ ನಮ್ಮ ಮೇಲೆ ಯಾಕೆ ಇಷ್ಟು ದ್ವೇಷ ಸಾಧಿಸುತ್ತಾರೋ ತಿಳಿಯದು. ಮಾಂಸಾಹಾರಿಗಳಾದ ಪ್ರಾಣಿಗಳು ನಮಗೋಸ್ಕರ ಕಾಯುತ್ತಿರುತ್ತವೆ. ಸಿಕ್ಕಸಿಕ್ಕಲ್ಲಿ ನಮ್ಮವರನ್ನು ಹೊಡೆದು ತಿನ್ನುತ್ತವೆ. ಇನ್ನೊಂದೆಡೆಗೆ ಬೇಟೆಗಾರರೂ ನಮ್ಮನ್ನೇ ಹುಡುಕಿಕೊಂಡು ಬರುತ್ತಾರೆ. ಅಲ್ಲಲ್ಲಿ ಬಲೆ ಹಾಕಿ ನಮ್ಮನ್ನು…
ತುರುವೇಕೆರೆ: ತಾಲೂಕಿನ ಮಾಯಸಂದ್ರದ ದೊಡ್ಡ ಕೆರೆಯ ಕುಡಿಯುವ ನೀರಿನ ಶುದ್ಧೀಕರಣದ ಘಟಕದ ಬಳಿ ಅಂಗಾತ ಮಲಗಿರುವ ಸ್ಥಿತಿಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿದೆ. ಮೃತ ಮಹಿಳೆ ದರ್ಶಿನಿ ಕೊಂ. ವಿನಯ್ ಸುಮಾರು 26 ವರ್ಷ ಯಲಹಂಕದ ವಾಸಿ ಎಂದು ಗುರುತಿಸಲಾಗಿದ್ದು, ಈ ಮಹಿಳೆಯ ಸಾವಿನ ಹಿಂದೆ ಅನುಮಾನವಿದ್ದು ಕಾರಣ ತಿಳಿದು ಬಂದಿರುವುದಿಲ್ಲ. ತುರುವೇಕೆರೆ ಪೊಲೀಸ್ ಠಾಣಾ ಸಬ್ ಇನ್ಸ್ ಪೆಕ್ಟರ್ ಹೊನ್ನೇಗೌಡ ರವರ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ನೀರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ತುರುವೇಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವಿನ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯ ಪತಿಯ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಈ ಸಂದರ್ಭದಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ರಾಮಚಂದ್ರಯ್ಯ, ಪೊಲೀಸ್ ಸಿಬ್ಬಂದಿ ಗಿರೀಶ್ ,ಪುನೀತ್, ಮಂಜುನಾಥ್, ಅರುಣ್, ಮೃತರ ಸಂಬಂಧಿಕರು ಸ್ಥಳದಲ್ಲಿದ್ದರು. ವರದಿ: ಸುರೇಶ್ ಬಾಬು ಎಂ., ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ಪಾವಗಡ: ರಾಜಕೀಯ ಪಕ್ಷಗಳು ಸಾಲ ಮನ್ನಾ ಎಂಬ ಮಂತ್ರದ ಪ್ರಣಾಳಿಕೆಗಳನ್ನು ಬಳಸುತ್ತಿರುವುದರಿಂದ ಬ್ಯಾಂಕುಗಳು ಹೆಚ್ಚು ನಷ್ಟ ಅನುಭವಿಸುತ್ತಿವೆ ಎಂದು ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ತಿಳಿಸಿದರು. ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮಳಿಗೆಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬ್ಯಾಂಕುಗಳಲ್ಲಿ ಸಾರ್ವಜನಿಕರು ಪ್ರತಿಯೊಬ್ಬರು ಪಡೆದಂತಹ ಸಾಲ ಕಾಲಕಾಲಕ್ಕೆ ಮರುಪಾವತಿಸಿದರೆ ಯಾವುದೇ ಬ್ಯಾಂಕುಗಳು ನಷ್ಟ ಅನುಭವಿಸಲು ಸಾಧ್ಯವಿಲ್ಲ, ಇಲ್ಲದಿದ್ದರೆ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೂ ಸಹ ಸಂಬಳ ಕೊಡೋದು ಕಷ್ಟಕರವಾಗಿದೆ. ಇತ್ತೀಚೆಗೆ ಸಾರ್ವಜನಿಕರು ಬ್ಯಾಂಕುಗಳು ಠೇವಣಿ ಇಡುವ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ಹೇಳಿದರು. ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಮಾತನಾಡಿ, ಈಗಿರುವ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮಳಿಗೆ ಕಟ್ಟಡ ಬಹಳ ಹಳೆಯದಾಗಿದ್ದು, ಈ ಕಟ್ಟಡವನ್ನು ತೆರವುಗೊಳಿಸಿ ನೂತನವಾಗಿ ವಾಣಿಜ್ಯ ಮಳಿಗೆಗಳು ರೀತಿಯಲ್ಲಿ ಅಡ ನಿರ್ಮಾಣ ಮಾಡಬೇಕು. ರೈತರಿಗೆ ಹೆಚ್ಚಿನ ಬ್ಯಾಂಕಿನಲ್ಲಿ ಆದ್ಯತೆ ನೀಡಿ ಸವಲಂಬನೆ ಜೀವನಕ್ಕೆ ಆದ್ಯತೆ ನೀಡುವ…
ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಶ್ರೀವಾಸವಿ ವಿದ್ಯಾನಿಕೇತನ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ವಿಜೃಂಭಣೆಯಿಂದ ನಡೆಸಲಾಯಿತು. ಈ ವೇಳೆ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು ಹಾಗೂ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ದಾನಿಗಳಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತ್ತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲಾಯಿತು. ಇದೇ ಸಂದರ್ಭದಲ್ಲಿ ವಾಸವಿ ವಿದ್ಯಾನಿಕೇತನ ಆಡಳಿತ, ಶಿಕ್ಷಕರು , ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವರದಿ: ನಂದೀಶ್ ನಾಯ್ಕ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ ಅನ್ನು ಕೇಂದ್ರ ಸರ್ಕಾರ ಮರುನಾಮಕರಣ ಮಾಡಿದೆ. ಹೊಸ ಹೆಸರು ‘ಅಮೃತ್ ಉದ್ಯಾನ್’. ಅಮೃತ್ ಉದ್ಯಾನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಳೆ ಉದ್ಘಾಟಿಸಲಿದ್ದಾರೆ. ಇದು ಜನವರಿ 31 ರಿಂದ ಮಾರ್ಚ್ 26 ರವರೆಗೆ ಎರಡು ತಿಂಗಳ ಕಾಲ ವೀಕ್ಷಣೆ ಮಾಡಲು ಸಾರ್ವಜನಿಕರಿಗೆ ತೆರೆದಿರುತ್ತದೆ.ಸ್ವಾತಂತ್ರ್ಯದ 75 ನೇ ವರ್ಷದ ಸ್ಮರಣಾರ್ಥ ‘ಅಮೃತ ಮಹೋತ್ಸವ’ದ ಥೀಮ್‌ಗೆ ಅನುಗುಣವಾಗಿ, ಕೇಂದ್ರವು ಮೊಘಲ್ ಉದ್ಯಾನವನ್ನು ಅಮೃತ ಉದ್ಯಾನ ಎಂದು ಮರುನಾಮಕರಣ ಮಾಡಿದೆ. ರಾಷ್ಟ್ರಪತಿ ಭವನದಲ್ಲಿರುವ ಅಮೃತ್ ಉದ್ಯಾನವು ಪ್ರವಾಸಿ ಆಕರ್ಷಣೆಯಾಗಿದೆ. ಉದ್ಯಾನವನ್ನು ಸಾಮಾನ್ಯವಾಗಿ ಪ್ರತಿ ವರ್ಷ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ಅಧ್ಯಕ್ಷರ ಅಪರ ಪತ್ರಿಕಾ ಕಾರ್ಯದರ್ಶಿ ನವಿಕಾ ಗುಪ್ತಾ ಮಾತನಾಡಿ, ರೈತರು ಮತ್ತು ವಿಕಲಚೇತನರಂತಹ ವಿಶೇಷ ಗುಂಪುಗಳಿಗೆ ಉದ್ಯಾನವನ್ನು ತೆರೆಯಲು ಸರ್ಕಾರ ಯೋಜಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy