Author: admin

ಭಾರತೀಯ ಅಂಚೆ ಇಲಾಖೆಯು ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್, ಬಹು-ಕಾರ್ಯಕ ಸಿಬ್ಬಂದಿ ಇತ್ಯಾದಿಗಳಿಗಾಗಿ ಒಟ್ಟು 98083 ಖಾಲಿ ಹುದ್ದೆಗಳನ್ನು ಪ್ರಕಟಿಸಿದೆ. ನೇಮಕಾತಿಗೆ ಸಂಬಂಧಿಸಿದ ಮಾಹಿತಿಯನ್ನು ಅಂಚೆ ಇಲಾಖೆಯ ಅಧಿಕೃತ ಪೋರ್ಟಲ್‌ನಲ್ಲಿ ಪ್ರಕಟಿಸಲಾಗಿದೆ. ಒಟ್ಟು 98083 ಹುದ್ದೆಗಳ ಪೈಕಿ ಪೋಸ್ಟ್ ಮ್ಯಾನ್ ಹುದ್ದೆಗಳ ಸಂಖ್ಯೆ 59099 ಮತ್ತು ಮೇಲ್ ಗಾರ್ಡ್ 1445. ಬಹುಕಾರ್ಯಕ ಹುದ್ದೆಗಾಗಿ 23 ವೃತ್ತಗಳಲ್ಲಿ 37539 ಹುದ್ದೆಗಳು ಖಾಲಿ ಇವೆ.10 ನೇ,12 ನೇ ತರಗತಿ  ಪಾಸ್ ಆದವರು ಪೋಸ್ಟ್ ಆಫೀಸ್ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸಿನ ಮಿತಿ 18 ರಿಂದ 32 ವರ್ಷಗಳು. indiapost.gov.in ನಲ್ಲಿ ಇಂಡಿಯಾ ಪೋಸ್ಟ್ ಅಧಿಕೃತ ವೆಬ್ ಪೋರ್ಟಲ್ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಒಳಗೊಂಡಂತೆ ವಿವರವಾದ ಮಾಹಿತಿಯನ್ನು ಒದಗಿಸಿದೆ. ಕೇರಳದಲ್ಲಿ 2930 ಪೋಸ್ಟ್‌ಮ್ಯಾನ್‌ ಹುದ್ದೆಗಳು ಖಾಲಿ ಇವೆ. ಕೇರಳದಲ್ಲಿ 74 ಮೇಲ್ ಗಾರ್ಡ್‌ಗಳು ಮತ್ತು 1424 ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಖಾಲಿ ಇವೆ. ಆನ್‌ಲೈನ್ ಅರ್ಜಿ ನಮೂನೆಯನ್ನು…

Read More

ಬೆಳಗಾವಿ ನಗರದ ಕನ್ನಡ ಸಾಹಿತಿ ಭವನದಲ್ಲಿ ಗ್ರಾಮೀಣ ಮಹಿಳೆಯರ ಸ್ವಾವಲಂಬನೆ ಜೀವನಕ್ಕಾಗಿ ಮಾಡಿರುವಂತ ಗೃಹ ಉದ್ಯೋಗಗಳಿಗೆ ಪ್ರೊತ್ಸಾಹ ನೀಡುವ ಉದ್ದೇಶದಿಂದ ಮಹಿಳಾ ಅರ್ಬನ್ ರೂರಲ್ ಡೆವಲಪ್ಮೆಂಟ್ ಸಂಸ್ಥೆ ವತಿಯಿಂದ ಮೂರು ದಿನಗಳ ಕಾಲ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ ವಿವಿಧ ರೀತಿಯ ವಸ್ತುಗಳು, ಖಾದ್ಯಗಳು ಪ್ರದರ್ಶನ ಹಾಗೂ ಮಾರಾಟಕ್ಕಿದ್ದು ಬಹು ಆಕರ್ಷಿತ ಮತ್ತು ಮಣ್ಣಿನಿಂದ ತಯಾರಾದ ವಸ್ತುಗಳು, ಹ್ಯಾಂಡ್ ಬ್ಯಾಗಗಳು, ಸ್ತ್ರೀಯರ ಅಲಂಕಾರಿಕ ವಸ್ತುಗಳು ಸೇರಿದಂತೆ ಸಂಡಿಗೆ, ಹಪ್ಪಳ, ಉಪ್ಪಿನಕಾಯಿ ಜನರ ಮನ ಸೆಳೆಯುತ್ತಿವೆ. ಮತ್ತೊಂದು ವಿಶೇಷವೆಂದರೆ ಶ್ರೀ ಶಕ್ತಿಗಳು ಮತ್ತು ಸ್ವಸಹಾಯ ಸಂಘಗಳ ತಯಾರಿಸಿರುವಂತ ಉತ್ಪನ್ನಗಳಿಗೆ ಜನರನ್ನು ಆಕರ್ಷಿಸುತ್ತಿವೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಉಸಿರಾಟದ ವೈಫಲ್ಯದಿಂದ ಕಾಶ್ಮೀರದಲ್ಲಿ ಮೃತಪಟ್ಟ ಯೋಧ ಕೆ.ಟಿ.ನುಫೈಲ್ ಅವರ ಸಾರ್ವಜನಿಕ ದರ್ಶನ ಆರಂಭವಾಯಿತು. ಮೃತದೇಹವನ್ನು ಮಲಪ್ಪುರಂ ಕುಣಿಯಲ್ಲಿರುವ ಕೊಡುಮಂಕಟ್ಟೆ ಮೈದಾನಕ್ಕೆ ತರಲಾಯಿತು. ಇರಿಪಾಕುಳಂ ಜುಮಾ ಮಸೀದಿಯಲ್ಲಿ ದಫನ ನಡೆಯಲಿದೆ. ಸಾರ್ವಜನಿಕ ವೀಕ್ಷಣೆಯನ್ನು ಅಧಿಕೃತ ಗೌರವಗಳೊಂದಿಗೆ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಅನೇಕ ಸಾಮಾಜಿಕ, ಸಾಂಸ್ಕೃತಿಕ ಗಣ್ಯರು ಭಾಗವಹಿಸಿದ್ದರು. ನಿನ್ನೆ ರಾತ್ರಿ ಮಲಪ್ಪುರಂ ವಿಮಾನ ನಿಲ್ದಾಣದಲ್ಲಿ ಮೃತದೇಹವನ್ನು ಜಿಲ್ಲಾಧಿಕಾರಿ ಬರಮಾಡಿಕೊಂಡರು. ಮದುವೆಯಾದ ಒಂದು ವಾರದ ನಂತರ ನುಫೈಲ್ ದೇಶದಿಂದ ಹಿಂದಿರುಗಿದ್ದ. ಅವರು ಸೇನಾ ಅಂಚೆ ಸೇವೆಯಲ್ಲಿ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದರು. 8 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ನುಫೈಲ್ ಎರಡು ವರ್ಷಗಳಿಂದ ಕಾಶ್ಮೀರದಲ್ಲಿದ್ದರು. ಅವರು ಡಿಸೆಂಬರ್ ಕೊನೆಯಲ್ಲಿ ಮನೆಗೆ ಬಂದರು.ಈ ತಿಂಗಳ 2ರಂದು ಮುಕ್ಕಂ ಕುಳಂಗರ ಮೂಲದವರೊಂದಿಗೆ ವಿವಾಹವಾದ ಬಳಿಕ 22ರಂದು ವಾಪಸಾದ ಅವರು ಕೊಯಮತ್ತೂರಿಗೆ ತೆರಳುವ ನಿರೀಕ್ಷೆಯಲ್ಲಿದ್ದಾಗ ಕೊನೆಯುಸಿರೆಳೆದಿದ್ದಾರೆ. ಗುರುವಾರ ಬೆಳಗ್ಗೆ 10.30ಕ್ಕೆ ಪ್ರೇಯಸಿಗೆ ಕರೆ ಮಾಡಲಾಗಿತ್ತು. ರಾತ್ರಿ 9.30ರ ಸುಮಾರಿಗೆ ಅವರ ಸಾವಿನ ಸುದ್ದಿ ತಿಳಿಯಿತು. ತಂದೆ ಮುಹಮ್ಮದ್ ಕುನ್ಹಾನ್ ಮೊನ್ನೆ ತೀರಿಕೊಂಡರು.…

Read More

ಧಾರ್ಮಿಕ ವ್ಯವಹಾರಗಳ ಸಚಿವಾಲಯದ ಹಜ್ ಮತ್ತು ಉಮ್ರಾ ಇಲಾಖೆಯು ಈ ವರ್ಷದ ಹಜ್ ನಿರ್ವಹಿಸಲು ಕುವೈತ್ ನಿವಾಸಿಗಳು ಮತ್ತು ವಿದೇಶಿಯರಿಗೆ ಆನ್‌ಲೈನ್ ನೋಂದಣಿ ಜನವರಿ 29 ರಿಂದ ಪ್ರಾರಂಭವಾಗಲಿದೆ ಎಂದು ಪ್ರಕಟಿಸಿದೆ. ಅರ್ಜಿಯನ್ನು ಸಚಿವಾಲಯದ ಅಧಿಕೃತ ವೆಬ್‌ಸೈಟ್ (http://hajj-register.awqaf.gov.kw) ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 28. ಈ ಹಿಂದೆ ಹಜ್ ಯಾತ್ರೆ ಮಾಡದವರಿಗೆ ಆದ್ಯತೆ ನೀಡಲಾಗುತ್ತದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮನ್ನಾರ್ಕ್ಕಾಡ್‌ನ ಆವರಣದಲ್ಲಿರುವ ಕೋಳಿಗೂಡಿನಲ್ಲಿ ಹುಲಿ ಸಿಲುಕಿ ಮೃತಪಟ್ಟಿದೆ. ಹುಲಿ ಹಲವು ಗಂಟೆಗಳ ಕಾಲ ಕಬ್ಬಿಣದ ಬಲೆಯಲ್ಲಿ ಸಿಲುಕಿಕೊಂಡಿತ್ತು. ಡಾ. ಅರುಣ್ ಜಕಾರಿಯಾ ನೇತೃತ್ವದ ತಂಡ ವಯನಾಡಿನಿಂದ ಬಂದು ಹುಲಿಗೆ ಮದ್ದು ನೀಡಲು ನಿರ್ಧರಿಸಿತ್ತು. ಇಂದು ನಸುಕಿನ 1 ಗಂಟೆ ಸುಮಾರಿಗೆ ಮನ್ನಾರ್ಕ್ಕಾಡ್‌ನ ಪಾಲಕ್ಕಾಡ್‌ನ ಕುಂಟಿಪಾಡಂನಲ್ಲಿ ಫಿಲಿಪ್ ಅವರ ಮನೆಯ ಕೋಳಿ ಗೂಡಿನಲ್ಲಿ ಬಲೆಗೆ ಸಿಕ್ಕಿಹಾಕಿಕೊಂಡ ಸ್ಥಿತಿಯಲ್ಲಿ ಹುಲಿ ಪತ್ತೆಯಾಗಿದೆ. ಸದ್ದು ಕೇಳಿದ ಫಿಲಿಪ್ ಹುಲಿಯ ದಾಳಿಯಿಂದ ತಲೆಗೆ ಪೆಟ್ಟಾಗಿ ಪಾರಾಗಿದ್ದಾರೆ.  ಬೋನಿಗೆ ಏರಲು ಯತ್ನಿಸುತ್ತಿದ್ದಾಗ ಹುಲಿಯ ಕಾಲು ಬೋನಿನ ಬಲೆಗೆ ಸಿಲುಕಿತು. ಹುಲಿಯ ದೇಹವನ್ನು ಮನ್ನಾರ್ಕ್ಕಾಡ್ ಅರಣ್ಯ ವಲಯದ ಕಚೇರಿಗೆ ಸ್ಥಳಾಂತರಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಹುಲಿ ಸಾವಿಗೆ ಕಾರಣ ತಿಳಿಯಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ: ಜೆಡಿಎಸ್ ಪಂಚರತ್ನ ಯಾತ್ರೆ ಮಾಡುವ ಬದಲು ನವಗ್ರಹ ಯಾತ್ರೆ ಮಾಡಲಿ. ಕರ್ನಾಟಕದಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಸಚಿವ ಪ್ರಹ್ಲಾದ ಜೋಷಿ ಜೆಡಿಎಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು ಬಿಜೆಪಿಯು ದೇಶದ ಅಭಿವೃದ್ಧಿಯಲ್ಲಿ ಸಕಾರಾತ್ಮಕವಾಗಿ ತೊಡಗಿಕೊಂಡಿದ್ದ ಆರ್ಟಿಕಲ್ 370ಯನ್ನು ಕಿತ್ತೆಸೆದಿದ್ದು ಇಂದಿಗೂ ಪ್ರಂಶಂಸನಾರ್ಹ. ಕಿತ್ತೂರ ರಾಣಿ ಚೆನ್ನಮ್ಮ ನಾಡಿನಲ್ಲಿ ಕಾಂಗ್ರೆಸ್ ಬಡವರನ್ನ ನಿರ್ಮೂಲನೆ ಮಾಡಿದ್ದಾರೆ. ಕಾಂಗ್ರೆಸ್  ತಮ್ಮ ಟೈಮ್ ನಲ್ಲಿ ಕರೆಂಟ್ ಉಚಿತ ಕೊಡಲಿಲ್ಲ ಇವಾಗ ಫ್ರೀ ಆಮಿಷ ಒಡ್ಡಿದ್ದಾರೆ. ಸುಳ್ಳು ಹೇಳುವುದರಲ್ಲೇ ಕಾಂಗ್ರೆಸ್ ಜೀವನ ಕಳೆದಿದೆ ಇನ್ನು ಜೆ ಡಿಎಸ್ ಮೇಲೆ ಡೈರೆಕ್ಟ್ ವಾರ್ ಮಾಡಿದ ಅವರು “ಪಂಚ ರತ್ನ ಅಲ್ಲ ನವ ಗ್ರಹ ಯಾತ್ರೆ ಮಾಡಲಿ” ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಬೆಳಗಾವಿಯಿಂದ ಅದ್ದೂರಿ ಚಾಲನೆ ದೊರೆತಿದ್ದು ಚೆನ್ನಮ್ಮನ ಕಿತ್ತೂರಿನಲ್ಲಿ ಅಮಿತ್ ಶಾ ಭಾಷಣ ಮಾಡಿದರು. ದೇವಿ ಯಲ್ಲಮ್ಮ ರವರಿಗೆ ನಮಿಸಿ ಭಾಷಣ ಶುರು ಮಾಡಿದ ಅವರು ಬೊಮ್ಮಾಯಿ ಜನ್ಮ ದಿನದ ಶುಭಾಶಯ ತಿಳಿಸಿದರು. ರಾಣಿ ಚೆನ್ನಮ್ಮ ಮತ್ತು ಸಿದ್ದೇಶ್ವರ್ ಸ್ವಾಮೀಜಿ,ವೀರ ಸಾವರ್ಕರ್,ಆಲೂರ್ ವೆಂಕಟ ರಾವರವನ್ನು ನೆನೆಯುತ್ತ ಮುಂದಿನ 5ವರ್ಷ ಕರ್ನಾಟಕದಲ್ಲಿ ಬಿಜೆಪಿಯೇ ಆಡಳಿತದಲ್ಲಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಮತ್ತು ಕಾಗ್ರೇಸ್ ಮೇಲೆ ಹರಿಹಾಯ್ದಶಾ, ಕರ್ನಾಟಕದ ವಿಕಾಸ್ ಬಿಜೆಪಿ ಯಿಂದ ಮಾತ್ರ ಸಾಧ್ಯ ಕರೆಂಟ್, ಶೌಚಾಲಯ, ಗ್ಯಾಸ್, ಅಯುಷ್ಮಾನ್ ಭಾರತ ನೀಡಿದ್ದೆ ಬಿಜೆಪಿ. 5ಕಿಲೋ ಫ್ರೀ ಅಕ್ಕಿ ನೀಡಿದ್ದೆ ಬಿಜೆಪಿ, 2 ಕೋವಿಡ್  ವ್ಯಾಕ್ಸಿನ್ ಬೂಸ್ಟರ್ ಡೋಸ್  ನೀಡಿದ್ದೆ ಬಿಜೆಪಿ, ರಾಮ್ ನಾಥ್ ಕೊವಿಂದ್ ಮತ್ತು ದ್ರೌಪದಿ ಮುರ್ಮು ಅವರನ್ನು ರಾಷ್ಟ್ರ ಪತಿ ಮಾಡಿದ್ದೆ ಬಿಜೆಪಿ ಎಂದು ಅಭಿವೃದ್ಧಿ ಯೋಜನೆಗಳ ಕುರಿತು ಭಾಷಣ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಬೆಂಗಳೂರಿನ ಭೈರಸಂಧ್ರದಲ್ಲಿ ಸ್ಯಾಂಡಲ್ ವುಡ್ ನ ಹಿರಿಯ ಹಾಸ್ಯ ನಟ ಮನ್ ದೀಪ್  ರಾಯ್ (75) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬೆಂಗಳೂರಿನ ಭೈರಸಂಧ್ರದ ನಿವಾಸದಲ್ಲಿ ಮಧ್ಯರಾತ್ರಿ 1.45 ರ ಸುಮಾರಿಗೆ ಮನ್ ದೀಪ್  ರಾಯ್ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇಂದು ಸಂಜೆ ಮನ್ ದೀಪ್  ರಾಯ್ ಅಂತ್ಯಕ್ರಿಯೆ ನಡೆಯಲಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಮನ್ ದೀಪ್  ರಾಯ್ ಅವರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅನಂತ್ ನಾಗ್ ಹಾಗೂ ಶಂಕರ್ ನಾಗ್ ಜೊತೆ ಸ್ಯಾಂಡಲ್​​ ವುಡ್ ​ಗೆ ಎಂಟ್ರಿ ಕೊಟ್ಟು ಮಿಂಚಿನ ಓಟ, ಏಳು ಸುತ್ತಿನ ಕೋಟೆ, ಆಕಸ್ಮಿಕ, ರೇ, ಬೆಂಕಿಯ ಬಲೆ, ಆಪ್ತ ರಕ್ಷಕ, ಅಮೃತಧಾರೆ, ಕುರಿಗಳು ಸಾರ್ ಕುರಿಗಳು ಸೇರಿದಂತೆ 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುರುವೇಕೆರೆ:  ತಾಲೂಕಿನ ದಂಡಿನ ಶಿವರ,ಹೋಬಳಿಯ ಸಂಪಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ  ಹಂಪಲಾಪುರ ಗ್ರಾಮದಲ್ಲಿ ಬಹಳ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದ ಕಾರಣ, ತುರುವೇಕೆರೆ ಕ್ಷೇತ್ರದ ಶಾಸಕರಾದ ಮಸಾಲ ಜಯರಾಮ್  ರವರು ಗ್ರಾಮಸ್ಥರ ಮನವಿಯ ಮೇರೆಗೆ ವೈಯಕ್ತಿಕವಾಗಿ ತಮ್ಮ ಸ್ವಂತ ಹಣದಲ್ಲಿ ಬೋರ್ವೆಲ್ ಕೊರೆಸಿ ಪಂಪು ಮತ್ತು ಮೋಟರುಗಳನ್ನ ಅಳವಡಿಸಿ ಗ್ರಾಮಸ್ಥರಿಗೆ ನೀರಿನ ವ್ಯವಸ್ಥೆ  ಮಾಡಿದ್ದಾರೆ. ಶಾಸಕರ ಈ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಮಸ್ಥರು ಶಾಸಕರು ಜನ ಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶಾಸಕರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಈ ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಜೆಡಿಎಸ್ ಪಕ್ಷದ ಕಾರ್ಯವೈಖರಿಯಿಂದ ಬೇಸತ್ತು ಭಾರತೀಯ ಜನತಾ ಪಕ್ಷದ ಸಿದ್ಧಾಂತ ಹಾಗೂ ಶಾಸಕರಾದ ಮಸಾಲ ಜಯರಾಮ್ ರವರ ಸರಳತೆ ಹಾಗೂ ಜನಪರ ಅಭಿವೃದ್ಧಿ ಕೆಲಸಗಳ ಮೆಚ್ಚಿ ಅಧಿಕೃತವಾಗಿ ಪಕ್ಷ ಸೇರ್ಪಡೆಯಾದರು. ವರದಿ: ಸುರೇಶ್ ಬಾಬು ಎಂ., ತುರುವೇಕೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ತುಮಕೂರು: ಮಳೆ ನೀರು ಇಂಗುವ ಕಟ್ಟೆಯೊಳಗೆ ಬಿದ್ದಿದ್ದ ನಾಯಿಯನ್ನು ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯದ ಸಿಬ್ಬಂದಿಯ ಮುತುವರ್ಜಿಯಿಂದ ಹಾಗೂ  ಅಗ್ನಿಶಾಮಕ ದಳದ ಸಿಬ್ಬಂದಿಯ ಕಾರ್ಯಾಚರಣೆಯಿಂದ ರಕ್ಷಣೆ ಮಾಡಲಾಗಿದೆ. ಬಿ.ಹೆಚ್.ರಸ್ತೆಯಲ್ಲಿರುವ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಆಟದ ಮೈದಾನದಲ್ಲಿ  ಸುಮಾರು 20/15 ಅಡಿ ಆಳ ಅಗಲವುಳ್ಳ ಮಳೆನೀರು ಇಂಗುವ ಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ನಿನ್ನೆ ರಾತ್ರಿಯಲ್ಲಿ ಆ ಕಟ್ಟೆಯೊಳಗೆ ಎರಡು ನಾಯಿಗಳು ಬಿದ್ದಿದ್ದು, ಕಟ್ಟೆಯಿಂದ ಹೊರ ಬರಲಾಗದೇ ಕಟ್ಟೆಯಲ್ಲೇ ಸಿಲುಕಿಕೊಂಡಿದ್ದವು. ಇಂದು ಬೆಳಗ್ಗೆ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಸಿಬ್ಬಂದಿ ನಾಯಿಗಳನ್ನು ನೋಡಿದ್ದು, ನಾಯಿಗಳನ್ನು ಮೇಲೆತ್ತಲು ಕಾಲೇಜಿನ ಸಿಬ್ಬಂದಿ ಹರಸಾಹದಪಟ್ಟಿದ್ದು, ಆದರೆ ನಾಯಿಗಳನ್ನು ಹೊರ ತೆಗೆಯಲು ಸಾಧ್ಯವಾಗಿಲ್ಲ. ಇದೇ ವೇಳೆ ಕಾಲೇಜಿನ ಸಿಬ್ಬಂದಿ ವರ್ಗದವರಾದ ಮಾಚನಹಳ್ಳಿ ಮುನಿರಾಜು ಅವರಿಗೆ ಈ ವಿಚಾರ ತಿಳಿಸಿದ್ದು, ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಬಳಿಕ  ಸಂಬಂಧ ಪಟ್ಟ ಮಹಾನಗರ ಪಾಲಿಕೆ ಹಾಗೂ ಆ ಭಾಗದ ಸ್ಥಳಿಯ ಕಾರ್ಪೋರೇಟರ್ ರವರಿಗೆ ವಿಷಯ ಮುಟ್ಟಿಸಿದ್ದಾರೆ. ಆದರೆ ಅವರು ಇಲ್ಲದ ನೆಪಗಳನ್ನು ಹೇಳಿ…

Read More