Author: admin

ಬೆಂಗಳೂರು: ಮೇ 28 ರಂದು ಉದ್ಘಾಟನೆಗೊಳ್ಳಲಿರುವ ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ ಪ್ರಧಾನಿ ದೇವೇಗೌಡರು ಭಾಗಿಯಾಗಲು ನಿರ್ಧರಿಸಿದ್ದಾರೆ. ಗುರುವಾರ ಜೆಡಿಎಸ್ ಸಭೆಯಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಪಕ್ಷದ ಎಲ್ಲಾ ಶಾಸಕರ ಅಭಿಪ್ರಾಯವನ್ನು ಆಲಿಸಿದ್ದಾರೆ. ಈ ವೇಳೆ ಶಾಸಕರು ಹಾಗೂ ನಾಯಕರು ಕಾರ್ಯಕ್ರಮಕ್ಕೆ ಹೋಗುವಂತೆ ಸಲಹೆ ಕೊಟ್ಟಿದ್ದಾರೆ. ಸಲಹೆಯ ಹಿನ್ನಲೆಯಲ್ಲಿ ಅವರು ನೂತನ ಸಂಸತ್ ಭವನದ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವ ತೀರ್ಮಾನ ಕೈಗೊಂಡಿದ್ದಾರೆ. ದೇವೇಗೌಡರ ಜೊತೆ ಹಾಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಭಾಗಿಯಾಗಲಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮೇ 30ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣದೆರಡು ಕಡೆ ಮಳೆಯಾಗಲಿದ್ದು, ಬಹುತೇಕ ಕಡೆ ಒಣಹವೆ ಮುಂದುವರೆಯಲಿದೆ. ಗರಿಷ್ಠ ಉಷ್ಣಾಂಶವು ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಿರಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಹುಬ್ಬಳ್ಳಿ: PFI, SDPI ಜೊತೆ ಬಜರಂಗದಳ, ಆರ್ಎಸ್ಎಸ್ ಹೋಲಿಸಿ ಅನಗತ್ಯವಾಗಿ ಮೈಮೇಲೆ ಸಮಸ್ಯೆ ಎಳೆದುಕೊಳ್ಳಬೇಡಿ ಎಂದು ಹುಬ್ಬಳ್ಳಿ ಧಾರವಾಡ ಕೇಂದ್ರ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆಗೆ ವಿರುದ್ಧ ಶಾಸಕರು ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ರಾಜ್ಯದ ಜನತೆ ನಿಮಗೆ ಬಹುಮತ ಕೊಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀವು ನೀಡಿರುವ ಗ್ಯಾರಂಟಿ ಬಗ್ಗೆ ಮಾತಾಡಿ. 10 ಕೆಜಿ ಅಥವಾ 15 ಕೆಜಿ ಅಕ್ಕಿ ಕೊಡುತ್ತೀರೋ, ವಿದ್ಯುತ್ ಕೊಡುತ್ತೀರೋ ಹೇಳಿ. ಗ್ಯಾರಂಟಿ ಜಾರಿ ಮಾಡದೆ ವಿಷಯಾಂತರ ಮಾಡಲು ಪ್ರಯತ್ನಿಸಬೇಡಿ. ಬಜರಂಗದಳ ನಿಷೇಧಿಸುತ್ತೇವೆ ಅನ್ನೋದು ಸರಿಯಲ್ಲ. ರಾಜ್ಯದ ಜನ ನಿಮಗೆ ನೀಡಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಸಂಪುಟ ವಿಸ್ತರಣೆ ವೇಳೆ ಲಿಂಗಾಯತರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದುಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಹೇಳಿಕೆ ನೀಡಿದ್ದಾರೆ. ಲಿಂಗಾಯತರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬ ಅನಿಸಿಕೆ ಇದೆ. ಇದನ್ನು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಇಂದು ಎಲ್ಲವೂ ತೀರ್ಮಾನ ಆಗುತ್ತದೆ. ಬೇರೆ ಸಮುದಾಯಗಳು ಬೇಡಿಕೆ ಇಡುವುದರಲ್ಲಿ ಯಾವುದೇ ತಪ್ಪಿಲ್ಲ. ಎಸ್ಟಿ ಸಮುದಾಯ ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿರುವುದು ತಪ್ಪಲ್ಲ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬುಕ್ಕಾಪಟ್ಟಣ ಸರ್ಕಾರಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಬುಕ್ಕ ಪಟ್ಟಣ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಪ್ಲೋರೋಸಿಸ್ ಅರಿವು ಮತ್ತು ತಪಾಸಣಾ ಶಿಬಿರದ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವರಾಮಯ್ಯನವರು, ಆರೋಗ್ಯ ಇಲಾಖೆಯು ಸೂಚಿಸಿದಂತೆ ಪ್ಲೋರೋಸಿಸ್ ರೋಗ ನಿಯಂತ್ರಣಕ್ಕೆ ಅತಿ ಸೂಕ್ತವಾದ ಮಾರ್ಗವಾಗಿದ್ದು ಗ್ರಾಮಸ್ಥರು ಮಳೆ ನೀರು ಕೊಯ್ಲು ಮಾಡಿ ನೀರನ್ನು ಸಂಗ್ರಹಿಸಿ ವರ್ಷವಿಡಿ ಬಳಕೆ ಮಾಡುವುದರಿಂದ ಪ್ಲೋರೋಸಿಸ್ ರೋಗವನ್ನು ಸಂಪೂರ್ಣ ಮುಕ್ತ ಮಾಡುವುದರೊಂದಿಗೆ ಇತರೆ ಮೂಳೆ ರೋಗಗಳನ್ನು ಹತೋಟಿಯಲ್ಲಿ ಇಡಬಹುದಾಗಿರುವುದರಿಂದ ಮಳೆ ಕೊಯ್ಲು ವಿಧಾನವನ್ನು ಅಳವಡಿಸಿಕೊಳ್ಳುವಂತೆ ಅರಿವು ಮೂಡಿಸಿದರು.. ಜಿಲ್ಲಾ ಪ್ಲೋರೋಸಿಸ್ ಕನ್ಸಲ್ಲೆಂಟ್ ಆದ ಚೇತನ್ ರವರು ಪ್ಲೋರೋಸಿಸ್  ರೋಗಲಕ್ಷಣ,ನಿಯಂತ್ರಣ ಮತ್ತು ನಿರ್ವಹಣೆ ಹಾಗೂ ಪುನರ್ವಸತಿ ಕುರಿತು ಗ್ರಾಮಸ್ಥರಿಗೆ ಮಾಹಿತಿ ತಿಳಿಸಿದರು. ಆಡಳಿತ ವೈದ್ಯಧಿಕಾರಿಯಾದ ಡಾ.ಹರ್ಷವರ್ಧನ್ ರವರು ಮಾತನಾಡಿ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ…

Read More

ಕೊರಟಗೆರೆ : ಗುತ್ತಿಗೆ ನೌಕರನ ಸಂಬಳದಿಂದ ಲಂಚ ಪಡೆದು ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ  ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮಾದೇವಿ ಜಿ.ಕೆ.ಅವರನ್ನು ಅಮಾತುಗೊಳಿಸಲಾಗಿದೆ. ಕೊರಟಗೆರೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ  ಸಹಾಯಕ ನಿರ್ದೇಶಕರ ಕಚೇರಿ ಕಂಪ್ಯೂಟರ್ ಆಪರೇಟರ್ ಆಗಿ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಲಾಜಿ ಕೆ.ಎಸ್. ಎಂಬವರಿಗೆ  2–3 ತಿಂಗಳಿಗೊಮ್ಮೆ ಸಂಬಳ ಮಾಡುತ್ತಿದ್ದು, ಇವರಿಗೆ ಸಂಬಳವಾದಾಗ ಸಹಾಯಕ ನಿರ್ದೇಶಕರಾದ ಉಮಾದೇವಿ ಅವರಿಗೆ ಪ್ರತಿ ತಿಂಗಳಿಗೆ 1,500 ರೂಪಾಯಿ ನೀಡಬೇಕಿತ್ತು. ಈ ನಡುವೆ 01-07-2022ರಿಂದ 15-07-2022ರವರೆಗೆ  ಬಾಲಾಜಿ ಕರ್ತವ್ಯಕ್ಕೆ  ಗೈರು ಹಾಜರಾಗಿದ್ದರು. ಈ ಅವಧಿಯ ಪೂರ್ತಿ ಸಂಬಳ ಮಾಡಿದ ಉಮಾದೇವಿ ಅವರು, ಪ್ರತೀ ತಿಂಗಳು ಗೈರು ಹಾಜರಾಗಿದ್ದ 4,500 ರೂಪಾಯಿಗಳನ್ನು ಹಾಗೂ ಜುಲೈ ತಿಂಗಳಲ್ಲಿ ಗೈರು ಹಾಜರಾಗಿದ್ದ ಅವಧಿಯಲ್ಲಿನ 3000 ರೂಪಾಯಿಗಳನ್ನು ಸೇರಿಸಿ 7,500  ರೂಪಾಯಿ ಲಂಚ ನೀಡುವಂತೆ  ಬಾಲಾಜಿಗೆ ಬೇಡಿಕೆ ಇಟ್ಟರು. ಇದರಿಂದಾಗಿ ಉಮಾದೇವಿ ವಿರುದ್ಧ ಬಾಲಾಜಿ ಅವರು…

Read More

ಕಾಫಿನಾಡ ಬಯಲುಸೀಮೆ ಭಾಗದಲ್ಲಿ ಕಳೆದ ರಾತ್ರಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಆಲಿಕಲ್ಲು ಮಳೆಗೆ ಬಯಲುಸೀಮೆ ಜನ ಬೆಚ್ಚಿ ಬಿದ್ದಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಅಗಲೇರಿ ಗ್ರಾಮದಲ್ಲಿ ಆಲಿಕಲ್ಲು ಮಳೆಯಿಂದ ಮೂರು ಮನೆಗಳು ಡ್ಯಾಮೇಜ್ ಆಗಿವೆ. ಮಂಗಳಮ್ಮ, ರತ್ನಮ್ಮ, ರಂಗಣ್ಣ ಅವರ ಮನೆಗಳಿಗೆ ಹಾನಿಯಾಗಿದೆ. ಆಲಿಕಲ್ಲು ಮಳೆಯಿಂದ ಮನೆಯ ಹೆಂಚು, ಸೀಟು ಡ್ಯಾಮೇಜ್ ಆಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.  ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ದಿ ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯಲ್ಲಿ ಹಿಂದುಜಾ ಕುಟುಂಬ ಮತ್ತು ಹಿಂದೂಜಾ ಗ್ರೂಪ್ ಸಹ ಅಧ್ಯಕ್ಷ ಗೋಪಿಚಂದ್ ಹಿಂದುಜಾ ಅಗ್ರಸ್ಥಾನದಲ್ಲಿದ್ದಾರೆ. 108 ವರ್ಷಗಳ ಇತಿಹಾಸ ಮತ್ತು 3,500 ಕೋಟಿ ಆಸ್ತಿ ಹೊಂದಿರುವ ಹಿಂದೂಜಾ ಗ್ರೂಪ್ ಸತತ ಐದನೇ ಬಾರಿಗೆ ಅಗ್ರಸ್ಥಾನಕ್ಕೇರಿದೆ. ಸಂಡೇ ಟೈಮ್ಸ್ UK ಯಲ್ಲಿ ವಾಸಿಸುವ 1000 ಶ್ರೀಮಂತ ವ್ಯಕ್ತಿಗಳು/ಕುಟುಂಬಗಳ ಪಟ್ಟಿಯನ್ನು ಸಂಗ್ರಹಿಸುತ್ತದೆ. ಈ ಪಟ್ಟಿಯಲ್ಲಿ ಬಿಂದುಜಾ ಗ್ರೂಪ್ ಮತ್ತು ಗೋಪಿಚಂದ್ ಹಿಂದುಜಾ ಮೊದಲ ಸ್ಥಾನ ಪಡೆದರು. ಹಿಂದುಜಾ ವಾಹನ, ಹಣಕಾಸು, ಇಂಧನ ಮತ್ತು ಆರೋಗ್ಯದಂತಹ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ. ವ್ಯಾಪಾರದ ಹೊರತಾಗಿ, ಅವರು ಹಿಂದೂಜಾ ಫೌಂಡೇಶನ್ ಮೂಲಕ ಲೋಕೋಪಕಾರಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಸಾಧನೆಯನ್ನು ಶ್ಲಾಘಿಸಿದ ಗೋಪಿಚಂದ್ ಹಿಂದುಜಾ, ಹಿಂದೂಜಾ ಕುಟುಂಬ ಮತ್ತು ಸಂಸ್ಥೆಗಳ ಪ್ರತಿಯೊಬ್ಬ ಸದಸ್ಯರ ಸಾಮೂಹಿಕ ಪ್ರಯತ್ನ, ಅಚಲವಾದ ಸಮರ್ಪಣೆ ಮತ್ತು ಬದ್ಧತೆಗೆ ಈ ಮನ್ನಣೆ ಸಾಕ್ಷಿಯಾಗಿದೆ ಎಂದು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.  ವಾಟ್ಸಾಪ್…

Read More

ಯುಎಇಯ ಖೋರ್ಫಕನ್‌ ನಲ್ಲಿ ಭಾರತೀಯರು ಸೇರಿದಂತೆ ತಂಡವನ್ನು ಹೊತ್ತೊಯ್ಯುತ್ತಿದ್ದ ದೋಣಿಗಳು ಅಪಘಾತಕ್ಕೀಡಾಗಿದೆ. ಖೋರ್ಫಕನ್‌ನ ಶಾರ್ಕ್ ದ್ವೀಪದಲ್ಲಿ ದೋಣಿ ಅಪಘಾತ ಸಂಭವಿಸಿದೆ. ಪ್ರಸನ್ನ ದೋಣಿಗಳು ಅಪಘಾತಕ್ಕೀಡಾಗಿವೆ. ಅಪಘಾತದಲ್ಲಿ ಮಹಿಳೆ ಮತ್ತು ಮಗು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೋಟ್ ಮಗುಚಿದ ಮಾಹಿತಿ ತಿಳಿಯುತ್ತಿದ್ದಂತೆ ಕರಾವಳಿ ರಕ್ಷಣಾ ಪಡೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ದೋಣಿಯಲ್ಲಿದ್ದ ಏಳು ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಯುಎಇ ಕೋಸ್ಟ್ ಗಾರ್ಡ್ ತಿಳಿಸಿದೆ. ಅವರ ಗಾಯಗಳು ಗಂಭೀರವಾಗಿಲ್ಲ ಎಂದು ವರದಿಯಾಗಿದೆ. ಅಪಘಾತದ ಕಾರಣದ ಬಗ್ಗೆ ಹೆಚ್ಚಿನ ವಿವರಗಳನ್ನು ಅಧಿಕಾರಿಗಳು ಬಿಡುಗಡೆ ಮಾಡಿಲ್ಲ. ಕಳೆದ ತಿಂಗಳು ಖೋರ್ಫಕಾನ್‌ನಲ್ಲಿ ದೋಣಿ ಅಪಘಾತದಲ್ಲಿ ಇಬ್ಬರು ಮಲಯಾಳಿಗಳು ಸಾವನ್ನಪ್ಪಿದ್ದರು.ಹಬ್ಬ ಆಚರಿಸಲು ಖೋರ್ಫಕಾನ್‌ಗೆ ತೆರಳುತ್ತಿದ್ದ ದೋಣಿ ಮಗುಚಿ ಈ ಅವಘಡ ಸಂಭವಿಸಿತ್ತು.ಪಂತಾಳಂ ಕೂರಂಪಾಲರ ಮಕ್ಕಳಾದ ಏಳು ವರ್ಷದ ಪ್ರಶಾಂತ್ ಮತ್ತು ಮಂಜುಷಾ ಮತ್ತು ನೀಲೇಶ್ವರಂ ಅನಂತಂಪಲ್ಲ ಮೂಲದ ಅಭಿಲಾಷ್ ವಾಜವಲಪ್ಪಿಲ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅದೇ ಸಮಯದಲ್ಲಿ, ಅಪಘಾತಕ್ಕೆ…

Read More

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿಯವರು ಪಕ್ಷದ ಯುವ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ಹೊಸ ನಾಯಕತ್ವಕ್ಕೆ ಅವಕಾಶ ನೀಡಬೇಕು. ಪಕ್ಷವನ್ನು ಕಟ್ಟುವ ಕಾರ್ಯ ಆಗಬೇಕು. ಸೋಲಿನಿಂದ ನಾನು ಕಂಗೆಟ್ಟಿಲ್ಲ. ಇನ್ನೂ ಮುಂದೆ ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬೆಳೆಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಚುನಾವಣೆಯಲ್ಲಿ ಸೋಲೇ ಅಂತಿಮವಲ್ಲ. ಸೋತಿದ್ದರೂ ಸಹ ಪಕ್ಷದಿಂದ ದೂರ ಉಳಿಯದೇ ಪಕ್ಷವನ್ನು ಬೆಳೆಸಲು ದುಡಿಯುತ್ತೇನೆ. ಪಕ್ಷ ಮರು ನಿರ್ಮಾಣ ಆಗಬೇಕು. ಅದಕ್ಕಾಗಿಯೇ ನಾನು ರಾಜಿನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.  ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More