Author: admin

ತುಮಕೂರು: ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ “3 ದಿನಗಳ ಸಮೂಹ ಚಿತ್ರಕಲಾ ಪ್ರದರ್ಶನವನ್ನು 74ನೇ ಗಣರಾಜ್ಯೋತ್ಸವದ’ ಅಂಗವಾಗಿ ಏರ್ಪಡಿಸಲಾಗಿತ್ತು. ಚಿತ್ರಕಲಾ ಪ್ರದರ್ಶನವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಗಣ್ಯರು ಉದ್ಘಾಟಿಸಿದರು. ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಆರ್.ಲೀಲಾವತಿ,  “ಚಿತ್ರಕಲಾ ಪದವಿ ಶಿಕ್ಷಣವೇ ಸಂಪೂರ್ಣ ಕೌಶಲ್ಯ ಭರಿತವಾಗಿದೆ. ಇಲ್ಲಿನ ಮಕ್ಕಳ ಚಿತ್ರಕಲಾ ಪ್ರತಿಭೆಯು ಇಂದಿನ ಕಲಾ ಪ್ರದರ್ಶನದಲ್ಲಿ ಅನಾವರಣಗೊಂಡಿದೆ. ಈ ಕಾಲೇಜು ನಮ್ಮದೇ ಆಗಿದ್ದು, ನಮ್ಮ ಕಾಲೇಜಿನಲ್ಲಿ ಈ ರೀತಿ ಕಲಾ ಪ್ರದರ್ಶನ ಮಾಡಲು ನಮ್ಮ ಸಹಕಾರ ಬೆಂಬಲವನ್ನು ನೀಡಲು ನಾವು ಸದಾ ಬಯಸುತ್ತೇವೆ.” ಎಂದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯರಾದ ವಿಶ್ವವಿದ್ಯಾನಿಲಯ ಕಲಾ ಕಾಲೇಜು ಪ್ರಾಂಶುಪಾಲರಾದ ಪ್ರೊ.ಬಿ.ಕರಿಯಣ್ಣ ಮಾತನಾಡಿ,  ಇದು ಸಹ ನಮ್ಮ ಕಾಲೇಜು ಎಂದು ನಾನು ಭಾವಿಸಿದ್ದೇನೆ. ನಿಮ್ಮಲ್ಲಿ ನಾನೂ ಒಬ್ಬನಾಗಿರುವೆ. ಚಿತ್ರಕಲಾ ಶಿಕ್ಷಣದ ಉಳಿವಿಗಾಗಿ ಈ ಕಾಲೇಜಿನ ಪ್ರಾಂಶುಪಾಲರು ನಿರಂತರ ಶ್ರಮಿಸುತ್ತಿದ್ದಾರೆ. ಅವರ ಶೈಕ್ಷಣಿಕ…

Read More

ತುರುವೇಕೆರೆ: ತಾಲೂಕು ಆಡಳಿತದ ವತಿಯಿಂದ 74ನೇ ಗಣರಾಜ್ಯೋತ್ಸವವನ್ನೂ ಪಟ್ಟಣದ ಕೆ.ಹಿರಣ್ಣಯ್ಯ ಬಯಲುರಂಗ ಮಂದಿರದ ಆವರಣದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತದ ವತಿಯಿಂದ ವಿವಿಧ ಕ್ಷೇತಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಈ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ವಿಜಯ ಕರ್ನಾಟಕ ಪತ್ರಿಕೆಯ ತಾಲೂಕು ವರದಿಗಾರರಾದ ಕೆ.ಆರ್ .ಸ್ವಾಮಿ ಮಾಯಸಂದ್ರ, ಬೆಂಗಳೂರು ಟೈಮ್ಸ್ ಪತ್ರಿಕೆಯ ಸಂಪಾದಕರು ಮತ್ತು ವರದಿಗಾರರು ಆದ ಟಿ.ವಿ.ವೆಂಕಟರಾಮ್, ಈ ಸಂಜೆ ಪತ್ರಿಕೆಯ ವರದಿಗಾರರಾದ ಮನೋಹರ್, ಜನತಾ 24×7 ನ್ಯೂಸ್ ಚಾನೆಲ್ ನ ತುರುವೇಕೆರೆ ತಾಲೂಕು ವರದಿಗಾರರಾದ ಕೆ.ಎ.ಮಂಜುನಾಥ್ ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಎಂಎಂಎಲ್ ನ ಅಧ್ಯಕ್ಷರಾದ ಮಸಾಲ ಜಯರಾಮ್, ತುರುವೇಕೆರೆ ತಾಲ್ಲೂಕು ದಂಡಾಧಿಕಾರಿ ವೈ.ಎಮ್ .ರೇಣು ಕುಮಾರ್ , ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ನ ತಾಲೂಕು ಅಧ್ಯಕ್ಷ ಡಿ.ಪಿ.ರಾಜು, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನಮ್ ರಾಜು ಮತ್ತಿತರರು ಇದ್ದರು.…

Read More

ಸರಗೂರು: ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ 74ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ತಹಶೀಲ್ದಾರ್ ಚೆಲುವರಾಜು ಅವರು ಧ್ವಜಾರೋಹಣ ನೆರವೇರಿಸಿದರು ಬಳಿಕ ಗಣ್ಯರು ಜ್ಯೋತಿ ಬೆಳಗಿಸಿ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಗಾಂಧೀಜಿ ಫೋಟೋಗೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು. ವಕೀಲ ರವಿಶಂಕರ್ ಮಾತನಾಡಿ, ಭವ್ಯ ಭಾರತದ ಪ್ರಜೆಗಳು ಸಂವಿಧಾನದ ಆಶಯಗಳನ್ನು ಅರ್ಥೈಹಿಸಿಕೊಳ್ಳಬೇಕು. ಸಂವಿಧಾನ ಆಶಯಗಳಂತೆ ನಡೆದುಕೊಂಡರೆ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಯ, ಪ್ರಜ್ಞೆಯನ್ನು ವ್ಯಯ ಮಾಡುತ್ತಿದ್ದೇವೆ ಎಂಬ ಆತಂಕವಿದೆ. ಸಂವಿಧಾನದಡಿಯಲ್ಲಿಯೇ ಕೇಂದ್ರ ಸರಕಾರ ರಾಜ್ಯಗಳ ಮೇಲಿನ ಹಿಡಿತ ಸಾಧಿಸಿ ಆಡಳಿತ ನಡೆಸುತ್ತಿದೆ. ಸಂವಿಧಾನವು ಎಲ್ಲ ಧರ್ಮ, ಜಾತ್ಯತೀತ ರಾಷ್ಟ್ರವನ್ನಾಗಿಸುವುದು ಎಂದು ತಿಳಿಸಿದರು. ತಹಶೀಲ್ದಾರ್ ಚಲುವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಎಲ್ಲರೂ ಅರ್ಥಮಾಡಿಕೊಳ್ಳಲು ಮುಂದಾಗಬೇಕು. ವಿಭಜನೆಯಾದ ದೇಶವನ್ನು ಒಗ್ಗೂಡಿಸಲು ವಿಶ್ವದಲ್ಲೇ ಬಹುದೊಡ್ಡ ಸಂವಿಧಾನ ರಚಿಸಿದ್ದಾರೆ. ಆ ಮೂಲಕ ಆಡಳಿತ ನಡೆಯುತ್ತಿದೆ ಎಂದು ಹೇಳಿದರು. ಪಟ್ಟಣ ಪಂಚಾಯತಿ ಅಧ್ಯಕ್ಷೆ ರಾಧಿಕಾಶ್ರೀನಾಥ್, ಉಪಾಧ್ಯಕ್ಷ ವಿನಯ್,…

Read More

ನನ್ನ ಸಣ್ಣ ಸೇವೆಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿದ್ದಾರೆ. ಪದ್ಮ ವಿಭೂಷಣ ನೀಡಿದ್ದಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಧನ್ಯವಾದ ಹೇಳುತ್ತೇನೆ ಎಂದು ಮಾಜಿ ಸಿಎಂ ಎಸ್.ಎಂ ಕೃಷ್ಣ ಹೇಳಿದರು. ಇಂದು ಸಿಎಂ ಬಸವರಾಜ ಬೊಮ್ಮಾಯಿ ಎಸ್.ಎಂ ಕೃಷ್ಣ ಅವರನ್ನ ಭೇಟಿಯಾದರು. ಈ ವೇಳೆ ಮಾತನಾಡಿದ ಎಸ್.ಎಂ ಕೃಷ್ಣ, ಬಿಸಿಯೂಟ ಯಶಸ್ವಿನಿ ಯೋಜನೆ. ನನ್ನ ಹೃದಯಕ್ಕೆ ಹತ್ತಿರ ಯೋಜನೆ. ಯಶಸ್ವಿನಿ ಯೋಜನೆ ಮತ್ತಷ್ಟು ಸುಧಾರಣೆಗೊಳಿಸಿದ್ದಾರೆ. ಅದಕ್ಕಾಗಿ ಸಿಎಂ ಬೊಮ್ಮಾಯಿಗೆ ಧನ್ಯವಾದ ಹೇಳುತ್ತೇನೆ ಎಂದರು. ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಎಸ್.ಎಂ ಕೃಷ್ಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಎಸ್ ಎಂ ಕೃಷ್ಣ ಸಿಎಂ ಆಗಿದ್ದಾಗ ಹಲವು ಯೋಜನೆ ಜಾರಿ ಮಾಡಿದ್ದಾರೆ. ಸರಳ ಸೃಜನಶೀಲ ರಾಜಕಾರಣಿ ಉತ್ತಮವಾಗಿ ಆಡಳಿತ ನಡೆಸಿದವರು. ಎಸ್ ಎಂ ಕೃಷ್ಣ ಕಾರ್ಯವೈಖರಿ ಗುರುತಿಸಿ ಮೋದಿ ಪದ್ಮವಿಭೂಷಣ ನೀಡಿದ್ದಾರೆ ರಾಜ್ಯದ ಜನತೆ ಪರವಾಗಿ ಅಭಿಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ನಮ್ಮತುಮಕೂರು.ಕಾಂನ…

Read More

ಬೆಂಗಳೂರು: ಯೂಟ್ಯೂಬ್ ನೋಡಿ ನಕಲಿ ನೋಟು ಪ್ರಿಂಟ್ ಮಾಡಿ ವ್ಯವಹಾರ ಮಾಡುತ್ತಿದ್ದವನನ್ನ ನಗರದ ಸುಬ್ರಮಣ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪುಲ್ಲಲರೇವು ರಾಜು ಬಂಧಿತ ಆರೋಪಿ. ನಗರದ ಅನಂತಪುರದಲ್ಲಿ ಮನೆ ಪಡೆದಿದ್ದ ಪುಲ್ಲಲರೇವು ರಾಜು ಆರ್​ಬಿಐ ನೋಟ್ ​ಗೂ ಟಕ್ಕರ್ ಕೊಡುವಂತೆ ರೂಂನಲ್ಲಿ ಒಬ್ಬನೇ ಕುಳಿತು ನಕಲಿ ನೋಟ್ ತಯಾರಿಸುತ್ತಿದ್ದ. ಏಳನೇ ತರಗತಿ ಓದಿದ್ದ ಈತ, ಕೇವಲ ಯೂಟ್ಯೂಬ್ ವಿಡಿಯೋ ನೋಡಿ ನಕಲಿ ನೋಟು ತಯಾರಿ ಮಾಡುವುದನ್ನ ಕಲಿತಿದ್ದನು. ಮನೆಯಲ್ಲಿ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದಾಗಿ ಹೇಳಿಕೊಂಡಿದ್ದ ರಾಜು ಪ್ರತ್ಯೇಕ ಮನೆ ಪಡೆದು ನೋಟ್ ಪ್ರಿಂಟ್ ಕೆಲಸ ಆರಂಭಿಸಿದ್ದಾನೆ. ಅಧಿಕ ಹಣ ಮಾಡುವ ಉದ್ದೇಶದಿಂದ ಯೂಟ್ಯೂಬ್ ವಿಡಿಯೋಗಳನ್ನ ಸತತವಾಗಿ ಆರು ತಿಂಗಳುಗಳ ಕಾಲ ನೋಡಿ, ನಂತರ ಈ ದಂಧೆಗೆ ಬಂದಿದ್ದಾನಂತೆ.ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ನಕಲಿ ನೋಟ್​ ಗಳನ್ನು ಶಿಫ್ಟ್ ಮಾಡಿದ್ದಾನೆ ಎನ್ನಲಾಗಿದೆ. ತಮಿಳುನಾಡು, ಆಂಧ್ರ, ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಒಂದು ಲಕ್ಷ ಅಸಲಿ ನೋಟಿಗೆ ನಾಲ್ಕು ಲಕ್ಷ ನಕಲಿ ನೋಟು…

Read More

ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಯುವಕರು ಶಾಲಾ ಬಾಲಕನಿಗೆ ಥಳಿಸಿದ್ದಾರೆಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್ ಮಾಡಲಾಗುತ್ತಿದ್ದು ಈ ಪ್ರಕರಣ ಸಂಬಂಧ ಈಗಾಗಲೇ ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರನ್ನ ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿರುವ ರಾಜ್ಯಪೊಲೀಸ್ ಇಲಾಖೆ, ತಾವು ಕೇಳಿದ ಹಣವನ್ನು ನೀಡದಿದ್ದಕ್ಕಾಗಿ ಇಬ್ಬರು ಯುವಕರು ಶಾಲಾ ಬಾಲಕನನ್ನು ಥಳಿಸುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ @BlrCityPolice, @kspfactcheck ಮತ್ತು @CPBlr ಹ್ಯಾಂಡಲ್ ಗಳನ್ನು ಇತರ ಹ್ಯಾಂಡಲ್‌ ಗಳೊಂದಿಗೆ ಟ್ಯಾಗ್ ಮಾಡಲಾಗುತ್ತಿದೆ. ಈ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 23.01.2023 ರಂದು ನಡೆದಿದ್ದು, ದಿನಾಂಕ 24.01.2023 ರಂದು ಕಾಟನ್‌ ಪೇಟೆಯ ನ್ಯೂ ಪ್ರೆಸಿಡೆನ್ಸಿ ಶಾಲೆಯ ಪ್ರಾಂಶುಪಾಲರು ನೀಡಿದ ದೂರಿನ ಮೇರೆಗೆ ಎಫ್‌ ಐಆರ್ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇದು…

Read More

ಹಾಸನ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಭವಾನಿ ರೇವಣ್ಣರಿಗೆ ಈಗಾಗಲೇ ಟಿಕೆಟ್ ನೀಡಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಿಕೆಟ್ ಆಫರ್ ನೀಡುವ ಮೂಲಕ ಜೆಡಿಎಸ್ ಗೆ ಟಾಂಗ್ ನೀಡಿದ್ದಾರೆ. ಹಾಸನದಿಂದ ಭವಾನಿ ರೇವಣ್ಣರಿಗೆ ಟಿಕೆಟ್ ನಿರಾಕರಣೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಸಿ.ಟಿ ರವಿ, ನಾನು ಸಹೋದರಿ ಭವಾನಿಯವರ ಹೇಳಿಕೆಯನ್ನ ಗಮನಿಸಿದ್ದೇನೆ . ಹೆಚ್.ಡಿ ಕುಮಾರಸ್ವಾಮಿಯವರ ಹೇಳಿಕೆಯನ್ನೂ ಗಮನಿಸಿದ್ದೇನೆ ನಾನು ಮನೆಯ ಗಲಾಟೆ ಹೆಚ್ಚಿಸುವುದಕ್ಕೆ ಬಯಸುವುದಿಲ್ಲ. ಭವಾನಿಯವರು ಹೊಳೇನರಸೀಪುರದಿಂದ ಅಭ್ಯರ್ಥಿಯಾಗಲಿ. ಹೊಳೇನರಸಿಪುರದಿಂದ ಬಿಜೆಪಿ ಟಿಕೆಟ್ ಕೊಡ್ತೀವಿ. ಭವಾನಿಯವರಿಗಿಂತ ಉತ್ತಮ ಕ್ಯಾಂಡಿಡೇಟ್ ಹೊಳೆನರಸೀಪುರಕ್ಕೆ ಬೇರೊಬ್ಬರಿಲ್ಲ ಎಂದರು. ಜೆಡಿಎಸ್ ನಿಂದ ಟಿಕೆಟ್ ಕೈ ತಪ್ಪಿರುವ ಭವಾನಿಯವರು ಹೊಳೆನರಸೀಪುರದಿಂದ ಅಭ್ಯರ್ಥಿಯಾಗಲಿ. ಬಿಜೆಪಿಗೆ ಬರುವಂತೆ ಸಿಟಿ ರವಿ ಆಫರ್ ಕೊಟ್ಟರು. ಹೊಳೇನರಸಿಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್.ಡಿ ರೇವಣ್ಣ ಸ್ಪರ್ಧಿಸಲಿದ್ದಾರೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಶ್ರದ್ಧೆ,ಶ್ರಮ ಏಕಾಗ್ರತೆಯಿಂದ ಓದಿದರೇ ಪರೀಕ್ಷೆ ಎದುರಿಸುವುದು ಸುಲಭ ಎಂದು ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದರು. ನವದೆಹಲಿಯ ತಾಲ್ ಕಟೋರಾ ಸ್ಟೇಡಿಯಂನಲ್ಲಿ ವಿದ್ಯಾರ್ಥಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿತ್ರದುರ್ಗದ ವಿದ್ಯಾರ್ಥಿ ಮಿಥುನ್ ನಯ್ಕ್ ಭಾಗಿಯಾಗಿದ್ದಾರೆ. ಸಂವಾದದ ವೇಳೆ ಮಾತನಾಡಿದ ಪ್ರಧಾನಿ ಮೋದಿ, ವಿದ್ಯಾರ್ಥಿಗಳ ಮನಸು ಅರಿಯಲು ನನಗೆ ಅವಕಾಶ ಸಿಕ್ಕಿದೆ ವಿದ್ಯಾರ್ಥಿಗಳಿಗೆ ಏಕಾಗ್ರತೆ ಮುಖ್ಯ . ಕ್ರಿಕೆಟ್ ಸ್ಟೇಡಿಯಂನಲ್ಲಿ ಆಟಗಾರರಿಗೆ ಆಟ ಮೇಲೆ ಏಕಾಗ್ರತೆ ಇರುತ್ತದೆ. ಬ್ಯಾಟ್ಸಮನ್ ಗೆ ಬಾಲ್ ಮೇಲೆ ಏಕಾಗ್ರತೆ ಇರುತ್ತದೆ. ಪ್ರೇಕ್ಷಕರು ಕೂಗುತ್ತಿದ್ದರೂ ಆಟಗಾರನಿಗೆ ಬಾಲ್ ಮೇಲೆ ಏಕಾಗ್ರತೆ ಇರುತ್ತದೆ. ಅದೇ ರೀತಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಮೇಲೆ ಏಕಾಗ್ರತೆ ಇರಬೇಕು. ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲಿ ತಾಳ್ಮೆ ಏಕಾಗ್ರತೆ ಕಳೆದುಕೊಳ್ಳಬಾರದು. ಶಿಕ್ಷಣದ ಜೊತೆ ನಿಮ್ಮ ಗುರಿಯೂ ಸ್ಪರ್ಷವಾಗಿರಬೇಕು ಎಂದು ಸಲಹೆ ನೀಡಿದರು. ಸಮಯ ನಿರ್ವಹಣೆ ಒತ್ತಡ ನಿಭಾಯಿಸುವ ಬಗ್ಗೆ ಮಾಹಿತಿಯನ್ನ ಪೋಷಕರು ನೀಡಬೇಕು. ಪರೀಕ್ಷೆಗಳನ್ನ ಎದುರಿಸಲು ಯಾವುದೇ…

Read More

ಗಣರಾಜ್ಯೋತ್ಸವದ ಪೋಸ್ಟರ್‌ನಲ್ಲಿ ಸಾವರ್ಕರ್ ಅವರ ಚಿತ್ರ ಏಕೆ ಕಾಣಿಸಿಕೊಂಡಿದೆ ಎಂದು ಕಾಸರಗೋಡು ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್ ವಿವರಿಸಿದ್ದಾರೆ. ಇದು ವಿನ್ಯಾಸ ದೋಷ. ಫೇಸ್‌ಬುಕ್ ಅನ್ನು ಕಛೇರಿಯ ಉದ್ಯೋಗಿಯೊಬ್ಬರು ನಿರ್ವಹಿಸುತ್ತಾರೆ. ಸಾವರ್ಕರ್ ಅವರ ಫೋಟೋ ಗೊತ್ತಾದ ತಕ್ಷಣ ಪೋಸ್ಟ್ ಹಿಂಪಡೆಯಲಾಗಿದ್ದು ಯಾವುದೇ ವಿವಾದವಿಲ್ಲ ಎಂದು ಪಿ.ಕೆ ಫೈಸಲ್ ಪ್ರತಿಕ್ರಿಯಿಸಿದ್ದಾರೆ. ಡಿಸಿಸಿಯ ಗಣರಾಜ್ಯೋತ್ಸವದ ಶುಭಾಶಯ ಪತ್ರದಲ್ಲಿ ಸಾವರ್ಕರ್ ಕಾಣಿಸಿಕೊಂಡಿದ್ದಾರೆ. ವಿವಾದದ ಬಳಿಕ ಹುದ್ದೆ ಹಿಂಪಡೆದಿದ್ದು, ವಿನ್ಯಾಸದಲ್ಲಿ ಲೋಪವಾಗಿದೆ ಎಂದು ಡಿಸಿಸಿ ಸಮಜಾಯಿಷಿ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಆನಂದ್ ಅಂಬಾನಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಕೆಲವು ದಿನಗಳ ನಂತರ, ದಂಪತಿಗಳು ಗುರುವಾರ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಕೇರಳಕ್ಕೆ ತೆರಳಿದರು. ಹೊಸದಾಗಿ ನಿಶ್ಚಿತಾರ್ಥ ಮಾಡಿಕೊಂಡ ದಂಪತಿಗಳು ಮಧ್ಯಾಹ್ನ 1:30 ರ ಸುಮಾರಿಗೆ ಆಪ್ತ ಸ್ನೇಹಿತರ ಜೊತೆ ದೇವಸ್ಥಾನವನ್ನು ತಲುಪಿದರು. ಹೆಲಿಕಾಪ್ಟರ್ ಮೂಲಕ ಸಮೀಪದ ಶ್ರೀಕೃಷ್ಣ ಕಾಲೇಜು ಮೈದಾನ ತಲುಪಿ ನಂತರ ವಾಹನದ ಮೂಲಕ ದೇವಸ್ಥಾನಕ್ಕೆ ತೆರಳಿದರು.ದೇವಾಲಯದ ಆಡಳಿತ ಮಂಡಳಿಯು ತಂಡಕ್ಕೆ ಭವ್ಯ ಸ್ವಾಗತವನ್ನು ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More