Author: admin

ಹಾಸನದಿಂದ ಜೆಡಿಎಸ್ ಅಭ್ಯರ್ಥಿಗಳಾಗಿ ಭವಾನಿ ರೇವಣ್ಣಗೆ ಟಿಕೆಟ್ ಸಿಗಲಿದೆ ಎಂದು ಹಬ್ಬಿದ್ದ ಊಹಾಪೋಹಗಳಿಗೆ ಹೆಚ್.ಡಿ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ. ಈ ಕುರಿತು ರಾಯಚೂರಿನಲ್ಲಿ ಮಾತನಾಡಿ ಸ್ಪಷ್ಟನೆ ನೀಡಿರುವ ಹೆಚ್.ಡಿ ಕುಮಾರಸ್ವಾಮಿ, ಹಾಸನದಿಂದ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ. ಈಗಾಗಲೇ ನಾಲ್ವರು ಮಹಿಳೆಯರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಸಮರ್ಥ ಅಭ್ಯರ್ಥಿ ಇದ್ದಾಗ ಸ್ಪರ್ಧೆಗೆ ಇಳಿಸಲ್ಲ. ಕುಟುಂಬದವರನ್ನ ಸ್ಪರ್ಧೆಗೆ ಇಳಿಸುವುದಿಲ್ಲ ಈಗಾಗಲೇ ಏನು ಹೇಳಬೇಕೋ ಹೇಳಾಗಿದೆ ನಾಲ್ಕೈದು ಜನ ಹೇಳಿದ ಮಾತ್ರಕ್ಕೆ ನಿರ್ಧಾರ ಆಗಲ್ಲ ಎಂದರು. ಪದೇ ಪದೇ ಈ ಬಗ್ಗೆ ಸಮಜಾಯಿಷಿ ಕೊಡಬೇಕಿಲ್ಲ. ಕೆಲವರಿಗೆ ಪ್ರೀತಿ ವಿಶ್ವಾಸವಿರುತ್ತೆ. ಅಭಿಮಾನದಿಂದಮಾತನಾಡಿರುತ್ತಾರೆ.  ಅಭಿಮಾನದಿಂದ ಮಾತನಾಡಿದ್ದನ್ನ ಅಭಿಪ್ರಾಯ ಎನ್ನಲು ಆಗುವುದಿಲ್ಲ. ಇನ್ನು ಉಳಿದುದ್ದನ್ನ ಪಕ್ಷದ ಚೌಕಟ್ಟಿನಲ್ಲಿ ಕುಳಿತು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನಾವೆಲ್ಲರೂ ನಮ್ಮ ಕೆಲಸಗಳನ್ನು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಮಾಡಿದರೆ ಅದೇ ನಿಜವಾದ ದೇಶ ಸೇವೆ, ಭಾರತ ಬಲಿಷ್ಠವಾಗಿ ಬೆಳೆಯುತ್ತಿದ್ದರೂ, ಚಾರಿತ್ರಿಕವಾಗಿ ಇನ್ನೂ ಶೈಶಾವಸ್ಥೆಯಲ್ಲಿದೆ” ಎಂದು ಕವಿ, ಕಾದಂಬರಿಕಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಆರ್. ಲಕ್ಷ್ಮಣರಾವ್ ಅಭಿಪ್ರಾಯಪಟ್ಟರು. ಜಯನಗರ ನ್ಯಾಷನಲ್ ಕಾಲೇಜಿನಲ್ಲಿ 74ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರೆವೇರಿಸಿ ಅವರು ಮಾತನಾಡಿದರು. ಸದಾ ಸಂವಿಧಾನದ ಹಕ್ಕುಗಳ ಬಗ್ಗೆ ಪ್ರಶ್ನೆ ಮಾಡುತ್ತೇವೆಯೋ ಹೊರತು, ಅದರ ಕರ್ತ್ಯವ್ಯಗಳ ಪಾಲನೆಯನ್ನು ಮಾಡುವುದಿಲ್ಲ. ಇದು ಎಲ್ಲರಿಂದಲೂ ಆಗಬೇಕಾದ ಕೆಲಸ” ಎಂದು ಕಿವಿಮಾತು ಹೇಳಿದರು. ಗಣರಾಜ್ಯೋತ್ಸವದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಕಾಲೇಜಿನ ಎನ್ ಸಿ ಸಿ ವಿದ್ಯಾರ್ಥಿಗಳಿಂದ ಪರೇಡ್ ಮತ್ತು ದೇಶಭಕ್ತಿ ಸಾರುವ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ.ಸಿ.ಕಮಲ, ಉಪ ಪ್ರಾಂಶುಪಾಲರಾದ ಪ್ರೊ.ಹೆಚ್.ಸಿ.ಬೆಲ್ಲದ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸಿ.ಆರ್.ಸಂಪತ್ ಕುಮಾರಿ, ಅಧ್ಯಾಪಕರು ಭಾಗವಹಿಸಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…

Read More

ಕೋವಿಡ್ ವೇಳೆ ಹಗರಣವಾಗಿದೆ. ಈ ಕುರಿತು ತನಿಖೆ ಮಾಡುವ ಬಗ್ಗೆ ಸುಧಾಕರ್ ಮಾತೇ ಆಡುವುದಿಲ್ಲ. ತನಿಖೆಯಾದರೇ ಸುಧಾಕರ್ ಮೇಲಿನ ಆರೋಪ ಬಯಲಾಗುತ್ತದೆ ಎಂದು ವಿಪಕ್ಷ ನಾಯಕ ಸಿದ‍್ಧರಾಮಯ್ಯ ಕಿಡಿಕಾರಿದರು. ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಒಂದಂಕಿ ಲಾಟರಿ ಬಗ್ಗೆ ದೇವೇಗೌಡರು ಪ್ರಸ್ತಾಪ ಮಾಡಿದ್ದರು. ನನ್ನ ಮತ್ತು ಕೆಜೆ ಜಾರ್ಜ್ ವಿರುದ್ಧ ಆರೋಪ ಮಾಡಿದರು. ನನ್ನ ಮೇಲೆ ಆರೋಪ ಮಾಡಿದಾಗ ಏನಾದರೂ ದಾಖಲೆ ಕೊಟ್ಟಿರಲಿಲ್ಲ. ಆದರೂ ಆಗ ನಾನು ಕೂಡಲೇ ಸಿಬಿಐ ತನಿಖೆಗೆ ವಹಿಸಿದ್ದೆ. ಡಿ.ಕೆ ರವಿ, ಡಿವೈಎಸ್ ಪಿ.ಗಣಪತಿ ಪ್ರಕರಣವನ್ನೂ ಸಿಬಿಐಗೆ ವಹಿಸಿದ್ದ. ಶ್ವೇತ್ರ ಪತ್ರ ಅನ್ನೋದು ಒಂದು ಸುಳ್ಳಿನ ಕಂತೆ ಎಂದು ಟೀಕಿಸಿದರು. ಬಿಜೆಪಿಯವರೆಲ್ಲರೂ ಭ್ರಷ್ಟಾಚಾರಿಗಳಾಗಿ ಹೆಸರು ಕೆಡಿಸಿಕೊಂಡಿದ್ದಾರೆ. ಅಮಿತ್ ಶಾ ಜೈಲಿಗೆ ಹೋಗಿ ಬಂದಿದ್ದಾರೆ. ಅವರನ್ನ ಕರೆಸಿಕೊಂಡು ಮತ ಕೇಳಿದ್ರೆ ಆಗುತ್ತಾ. ಅಮಿತ್ ಶಾ ಮೋದಿ ನೂರು ಸಾರಿ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಸಿದ್ಧರಾಮಯ್ಯ ಹೇಳಿದರು. ಇನ್ನು ಭ್ರಷ್ಟಾಚಾರ ಮಾಡಿದ್ದರೇ ನೇಣಿಗೆ ಹಾಕಿ…

Read More

ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಗೋಪಾಲಯ್ಯರನ್ನ ದಿಢೀರ್ ಬದಲಾವಣೆ ಮಾಡಿ ಸಚಿವ ಅಶೋಕ್ ಗೆ ಜವಾಬ್ದಾರಿ ನೀಡಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯದ ವಿವಿ ರಸ್ತೆ, ಸುಭಾಷ್​​ ರಸ್ತೆ ಗೋಡೆ ಮೇಲೆ ‘ಗೋ ಬ್ಯಾಕ್​ ಆರ್​.ಅಶೋಕ್’​ ಮಂಡ್ಯ ಬಿಟ್ಟು ಹೋಗಿ ಅಶೋಕ್ ಎಂಬ ಭಿತ್ತಿಪತ್ರ ಅಂಟಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಇನ್ನು ಉಸ್ತುವಾರಿ ಸಚಿವರಾಗಿ ಆರ್​.ಅಶೋಕ್ ನೇಮಿಸಿದ್ದಕ್ಕೆ ಆರ್​​.ಅಶೋಕ್​ ವಿರುದ್ಧ ಪರೋಕ್ಷವಾಗಿ ಅಸಮಧಾನ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡ ಸಿದ್ದರಾಮಯ್ಯ, ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದರು. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಬೇಕಿರಲಿಲ್ಲ. ಅಶೋಕ್ ವಿರುದ್ಧ ಹೊಂದಾಣಿಕೆ ರಾಜಕಾರಣ ಮಾಡಿದ ಆರೋಪವಿದೆ. ಆದರೆ ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಶಿವಕುಮಾರ್,  ಮೇಷ್ಟ್ರು ಮನೆ ತುಮಕೂರು: ಮಳೆರಾಯನ ಕೃಪೆಯಿಂದ ಅದ್ಹೇಗೋ, ಕೆರೆತುಂಬಿತು, ಆದ್ರೆ, ತುಂಬಿದ ಕೆರೆಯನ್ನ ಇವರು ಹಾಗೆಯೇ ಇರಲು ಬಿಡ್ತಾರಾ? ಖಂಡಿತಾ ಇಲ್ಲ, ಆ ಕೆರೆ ಈಗ ತ್ಯಾಜ್ಯ ಸುರಿಯುವ, ಕಸ ಎಸೆಯುವ ಸ್ಥಳವಾಗಿ ಮಾರ್ಪಟ್ಟಿದೆ. ಹೌದು…! ಇಂತಹದ್ದೊಂದು ಅನಾಗರಿಕ ಕೃತ್ಯ ನಡೆದಿರುವುದು ತುಮಕೂರು ನಗರಕ್ಕೆ ಹೊಂದಿಕೊಂಡಿರುವ ಮರಳೂರು ಗ್ರಾಮಕ್ಕೆ ಸೇರಿದ ಮರಳೂರು ಕೆರೆಯಲ್ಲಿ. ಈ ಬಾರಿ ವರುಣನ ಕೃಪೆಯಿಂದಾಗಿ ಇಡೀ ಜಿಲ್ಲೆಯ ಕೆರೆಗಳು ತುಂಬಿ ಕೋಡಿ ಹರಿದಿತ್ತು. ಜನಪ್ರತಿನಿಧಿಗಳು ತುಂಬಿದ ಕೆರೆಗೆ ಬಾಗಿನ ಅರ್ಪಿಸಿದ್ದರು. ಆದರೆ, ಮಳೆ ನೀರನ್ನು ಉಳಿಸುವ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಜನತೆ ಯೋಚನೆ ಮಾಡದಿರುವುದು ವಿಪರ್ಯಾಸವಾಗಿದೆ. ಮಳೆಗಾಲದಲ್ಲಿ ತುಂಬಿದ್ದ ಮರಳೂರು ಕೆರೆ ಇದೀಗ ಸತ್ತ ಕೋಳಿ, ಪ್ರಾಣಿಗಳ ತ್ಯಾಜ್ಯಗಳನ್ನು ಎಸೆಯಲು ಬಳಕೆಯಾಗುತ್ತಿದೆ. ಕೆರೆಯಲ್ಲಿರುವ ಶುದ್ಧ ನೀರು ಪ್ರತಿ ದಿನ ಸುರಿಯುತ್ತಿರುವ ತ್ಯಾಜ್ಯಗಳಿಂದಾಗಿ ಕಲುಶಿತಗೊಳ್ಳುತ್ತಿದೆ. ಇದರಿಂದಾಗಿ ಕೆರೆಯಲ್ಲಿರುವ ಜಲಚರ ಜೀವಿಗಳು ಸಾಯುತ್ತಿವೆ, ಅಂತರ್ಜಲ ಮಾಲಿನ್ಯವಾಗುತ್ತಿದ್ದು, ಪರಿಸರಕ್ಕೆ ಹಾನಿಯಾಗುತ್ತಿದೆ. ಮರಳೂರು ಗ್ರಾಮದ ಬೋರ್ ವೆಲ್ ಗಳಿಗೆ ಈ ಕೆರೆಯ…

Read More

ತಿರುವನಂತಪುರಂ: ಮದ್ಯ ಸೇವಿಸಿ ಬಂದು ಹೆತ್ತ ತಾಯಿಗೆ ಥಳಿಸುತ್ತಿದ್ದ ಪಾಪಿ ಮಗನನ್ನು  ಕೇರಳದ  ಕೊಟ್ಟಾಯಂ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೊಟ್ಟಾಯಂನ ಮೀನಾಡೋಮ್ ನಲ್ಲಿ ಈ ಘಟನೆ ನಡೆದಿದ್ದು, 48 ವರ್ಷದ ಪುತ್ರ ಕೊಚುಮೊನ್ ಕುಡಿದು ಬಂದು ತಾಯಿಗೆ ಥಳಿಸುತ್ತಿರುವ ದೃಶ್ಯವನ್ನು ಆತನ ಪತ್ನಿಯೇ ವಿಡಿಯೋ ಮಾಡಿದ್ದು,  ಈ ವಿಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಿಗೆ ಸಿಗುತ್ತಿದ್ದಂತೆಯೇ, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಕೊಚುಮೊನ್ ನನ್ನು ಬಂಧಿಸಲು ತೆರಳಿದ ವೇಳೆಯೂ ಆತ ಸ್ಥಳೀಯ ಬಾರ್ ನಲ್ಲಿ ಮದ್ಯ ಸೇವಿಸುತ್ತಿದ್ದ.’ ವಯಸ್ಸಾದ ತಾಯಿಗೆ ಹೊಡೆಯದಂತೆ ನೆರೆಹೊರೆಯವರು ಸಾಕಷ್ಟು ಸಲ ಆತನಿಗೆ ಬುದ್ಧಿ ಹೇಳಿದ್ದರು. ಆದರೆ, ಆತ ಯಾರ ಮಾತುಗಳನ್ನು ಕೇಳುತ್ತಿರಲಿಲ್ಲ, ಅತ್ತೆ ಪ್ರತೀ ದಿನ ಪೆಟ್ಟು ತಿನ್ನುವುದನ್ನು ನೋಡಲಾಗದೇ ಸೊಸೆ, ಈತ ಹಲ್ಲೆ ನಡೆಸುತ್ತಿರುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾಳೆ. ಇದೀಗ ಕೊಚುಮೊನ್ ಜೈಲುಪಾಲಾಗಿದ್ದಾನೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಪಾವಗಡ: 74ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋವನ್ನು ಇಡದೇ ಸರ್ಕಾರದ ಸುತ್ತೋಲೆಯನ್ನು ಉಲ್ಲಂಘಿಸಿರುವ ಘಟನೆ ನಡೆದಿದೆ. ಪುರಸಭೆ ಅಧಿಕಾರಿಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸಿ, ಅಂಬೇಡ್ಕರ್ ಭಾವ ಚಿತ್ರವನ್ನಿಡದೆದೇ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಫೋಟೋವನ್ನು ಮಾತ್ರವೇ ಇಟ್ಟು ಗಣರಾಜ್ಯೋತ್ಸವ ಆಚರಣೆಗೆ ಮುಂದಾಗಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಘಟನೆಯನ್ನು ಖಂಡಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಅಂಬೇಡ್ಕರ್ ಅವರ ಫೋಟೋವನ್ನು ತರಿಸಿ ಇಡಲಾಗಿದೆ. ಇನ್ನೂ ಅಂಬೇಡ್ಕರ್ ಭಾವ ಚಿತ್ರ ಯಾಕೆ ಹಾಕಲಾಗಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳು ಮುಖ್ಯಾಧಿಕಾರಿ ಜಗರೆಡ್ಡಿ ಅವರನ್ನು ಪ್ರಶ್ನಿದಾಗ ಏರು ಧ್ವನಿಯಲ್ಲಿ ಮಾತನಾಡುವ ಮೂಲಕ ಉದ್ಧಟತನ ಮೆರೆದಿದ್ದಾರೆ. ಈ ವೇಳೆ ಪುರಸಭೆಯ ಕೆಲವು ಅಧಿಕಾರಿಗಳು ತರಾಟೆಗೆತ್ತಿಕೊಂಡ ಬಳಿಕ ಅಂಬೇಡ್ಕರ್ ಫೋಟೋ ಇಟ್ಟಿದ್ದಾರೆ. ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಸಂವಿಧಾನ ಶಿಲ್ಪಿಯ ಫೋಟೋ ಇಟ್ಟು ಗೌರವಿಸಲು ಬಹಳ ಕಷ್ಟಕರವಾಗುತ್ತಿದೆ. ಇಂತಹ ಅಧಿಕಾರಿಗಳು ಸರ್ಕಾರಿ ಕೆಲಸದಲ್ಲಿರಲು ಯೋಗ್ಯರೇ ಅನ್ನೋದನ್ನು ಸರ್ಕಾರ ಗಮನಿಸಬೇಕಿದೆ. ಸರ್ಕಾರದ…

Read More

ನವದೆಹಲಿ: ದೇಶದಾದ್ಯಂತ 74ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನವದೆಹಲಿಯಲ್ಲಿ ನಡೆಯುತ್ತಿರುವ ಪರೇಡ್‌ನಲ್ಲಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು. ಈ ಬಾರಿಯ ಕರ್ನಾಟಕದ ಸ್ತಬ್ಧಚಿತ್ರ ನಾರಿಶಕ್ತಿ ಎಲ್ಲರ ಗಮನ ಸೆಳೆದಿದೆ. ರಾಜ್ಯದ 3 ಮಹಿಳಾ ಸಾಧಕರ ಅಸಾಧಾರಣ ಸಾಧನೆಗಳನ್ನು ಸಾಂಕೇತಿಕವಾಗಿ ಅನಾವರಣಗೊಳಿಸಿದೆ.ಸೂಲಗಿತ್ತಿ ನರಸಮ್ಮ – ಸೂಲಗಿತ್ತಿ, ತುಳಸಿ ಗೌಡ ಹಾಲಕ್ಕಿ – ವೃಕ್ಷ ಮಾತೆ ಮತ್ತು ಸಾಲುಮರದ ತಿಮ್ಮಕ್ಕ ಅವರು ಸಮಾಜಕ್ಕೆ ಸಲ್ಲಿಸಿದ ಅವರ ನಿಸ್ವಾರ್ಥ ಕೊಡುಗೆಯಿಂದಾಗಿ ಹೆಸರುವಾಸಿಯಾಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ : ಜಿಲ್ಲೆಯ ಗಣರಾಜ್ಯೋತ್ಸವ ವೇಳೆ ಮಹಾ ಯಡವಟ್ಟಾಗಿದ್ದು, ಶೂ ಧರಿಸಿಯೇ ಧ್ವಜರೋಹಣ ಮಾಡಿದ ಚಿಕ್ಕೋಡಿ ಉಪವಿಭಾಗಧಿಕಾರಿ ನಡೆಗೆ ಸಾರ್ವಜನಿಕರು ಕಿಡಿಕಾರಿದ್ದಾರೆ. ಗಣರಾಜ್ಯೋತ್ಸವದ ಧ್ವಜರೋಹಣ ಕಾರ್ಯಕ್ರಮಕ್ಕೆ ಉಪವಿಭಾಗಧಿಕಾರಿ ಮಾಧವ ಅವರು ಸಮಯ ಮೀರಿ ಬಂದಿದಲ್ಲದೇ , ಶೂ ಧರಿಸಿಯೇ ಧ್ವಜರೋಹಣ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಬಳಿಕ ಮಾಧವ ಅಂಬೇಡ್ಕರ್‌ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡೋದಕ್ಕೆ ಮುಂದಾಗಿದ್ದಾರೆ.ಆಗ ಕಾರ್ಯಕ್ರಮದಲ್ಲಿ ಸೇರಿದ ಸಿಬ್ಬಂದಿಗಳು ತಿಳಿಸಿದ ಬಳಿಕ ಅವರು ಶೂ ಅಲ್ಲೆ ಬಿಚ್ಚಿಟ್ಟಿದ್ದಾರೆ.ಈ ಎಲ್ಲಾ ನಡೆಗೆ ಸಾರ್ವಜನಿಕರು ಸಿಟ್ಟಿಗೆದ್ದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಜೀರ್ಣಕ್ರಿಯೆ ಮತ್ತು ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಲು ನಾವು ಆಹಾರದಿಂದ ಪಡೆಯಬೇಕಾದ ವಸ್ತುಗಳಲ್ಲಿ ಫೈಬರ್ ಒಂದಾಗಿದೆ. ನಾವು ತಿನ್ನದೇ ಇರುವುದೂ ಆಗಾಗ ನಿರ್ಲಕ್ಷಿಸುತ್ತೇವೆ. ಓಟ್ಸ್, ಕಾರ್ನ್, ಸೇಬು, ಎಲೆಕೋಸು, ಮಸೂರ, ಬಾದಾಮಿ,  ಸೊಪ್ಪು, ಆಲೂಗಡ್ಡೆ, ಸಿಹಿ ಆಲೂಗಡ್ಡೆ, ಕ್ಯಾರೆಟ್ ಮತ್ತು ಬೀನ್ಸ್‌ಗಳಿಂದ ನಾವು ಫೈಬರ್ ಅನ್ನು ಪಡೆಯುತ್ತೇವೆ. ನಿಮ್ಮ ಆಹಾರದಲ್ಲಿ ಫೈಬರ್ ಭರಿತ ಆಹಾರಗಳನ್ನು ಸೇರಿಸುವ ಐದು ಪ್ರಯೋಜನಗಳನ್ನು ಪರಿಶೀಲಿಸಿ. ಕರುಳಿನಲ್ಲಿರುವ ಜೀರ್ಣಕಾರಿ ಬ್ಯಾಕ್ಟೀರಿಯಾವನ್ನು ರಕ್ಷಿಸುವಲ್ಲಿ ಫೈಬರ್ ಪ್ರಮುಖ ಪಾತ್ರ ವಹಿಸುತ್ತದೆ. ಕರುಳಿನ ಬ್ಯಾಕ್ಟೀರಿಯಾ ಎಂದು ಕರೆಯಲ್ಪಡುವ ಇವುಗಳನ್ನು ರಕ್ಷಿಸಿ ಮತ್ತು ಸರಿಯಾಗಿ ಕಾರ್ಯನಿರ್ವಹಿಸುವುದರಿಂದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಫೈಬರ್ ಸಮೃದ್ಧವಾಗಿರುವ ಆಹಾರವನ್ನು ತಿನ್ನುವುದು ನಿಮ್ಮ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆಗಾಗ್ಗೆ ಊಟ ಮತ್ತು ತಿಂಡಿಗಳನ್ನು ದೀರ್ಘಕಾಲದವರೆಗೆ ಅನುಭವಿಸುವ ಮೂಲಕ ಸುಲಭವಾಗಿ ಕಡಿಮೆ ಮಾಡಬಹುದು. ಹೆಚ್ಚಿನ ಫೈಬರ್ ಆಹಾರಗಳು ಕ್ಯಾಲೊರಿಗಳಲ್ಲಿ ತುಲನಾತ್ಮಕವಾಗಿ ಕಡಿಮೆ.ಅವು ತುಂಬಾ ಕಡಿಮೆ ಕ್ಯಾಲೋರಿ, ಕಡಿಮೆ ಶಕ್ತಿ-ದಟ್ಟವಾದ ಆಹಾರಗಳಾಗಿದ್ದರೂ ಸಹ, ಅವರು…

Read More