Subscribe to Updates
Get the latest creative news from FooBar about art, design and business.
- ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾಹಿತಿಗಳು ಸರ್ಕಾರದ ಆಶ್ರಯ ಪಡೆಯುವುದನ್ನು ನಿಲ್ಲಿಸಬೇಕು: ಬಂಜಗೆರೆ ಜಯಪ್ರಕಾಶ್
- ದುಪ್ಪಟ್ಟು ಹಣ ಲಾಭ ಗಳಿಸುವ ಆಮಿಷಕ್ಕೆ ಬಲಿಯಾಗಿ 14 ಲಕ್ಷ ರೂ. ಕಳೆದುಕೊಂಡ ಹೊಟೇಲ್ ಸಿಬ್ಬಂದಿ!
- ಎರಡು ಲಾರಿಗಳ ನಡುವೆ ಅಪಘಾತ: ಲಾರಿಯಿಂದ ಚೆಲ್ಲಿದ ಗೋದಿ ಕಂಡವರ ಪಾಲು!
- ಮಧುಗಿರಿ: ಸೊಳ್ಳೆಗಳ ವಿಪರೀತ ಕಾಟಕ್ಕೆ ಬಳಲಿ ಬೆಂಡಾದ ಜನ
- ಮಧುಗಿರಿ: ಬಿಜೆಪಿ ಒಬಿಸಿ ಮೋರ್ಚಾ ಸಭೆ
- ಬೀದರ್ | ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ
- ನ.19ರಂದು ಎಲ್.ಜಿ.ಹಾವನೂರು ಪ್ರತಿಮೆ ಅನಾವರಣ
Author: admin
ತುಮಕೂರು:ಇಂದು ತುಮಕೂರಿನ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಎಂದೇ ಪ್ರಸಿದ್ದರಾದ ಡಾ ಶಿವಕುಮಾರ ಶ್ರೀಗಳ 4ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆದಿದ್ದು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮಾಯ್ಮಿ,ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೇಂದ್ರದ ನಾಯಕರು,ರಾಜ್ಯದ ನಾಯಕರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇಂದು ಬೆಳಗ್ಗೆ ತುಮಕೂರಿಗೆ ಆಗಮಿಸಿದ ಮುಖ್ಯಮಂತ್ರಿಗಳು ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಗಳ ಗದ್ದುಗೆಗೆ ನಮಸ್ಕಾರ ಮಾಡಿರುವುದು ಮನಸ್ಸಿಗೆ ಸಂತೋಷವಾಗಿದೆ. ಅವರ ಆಶೀರ್ವಾದ ಈ ನಾಡಿನ ಜನತೆಯ ಮೇಲೆ ಇರುತ್ತದೆ. ಶಿವಕುಮಾರ ಸ್ವಾಮಿಗಳ ಹುಟ್ಟೂರಲ್ಲಿ ನಿರ್ಮಾಣವಾಗುತ್ತಿರುವ ಪುತ್ಥಳಿ ನಿರ್ಮಾಣ ಕಾರ್ಯ ಸ್ಥಗಿತವಾಗಿರುವುದರ ಬಗ್ಗೆ ತಾವು ಮೊನ್ನೆ ಹೋಗಿ ಪರಿಶೀಲಿಸಿದ್ದು, ಶೀಘ್ರವೇ ಕೆಲಸ ಪುನಾರಂಭವಾಗಲಿದೆ ಎಂದು ಸಿಎಂ ಹೇಳಿದರು. ಫೆಬ್ರವರಿ ತಿಂಗಳಲ್ಲಿ ಸರ್ಕಾರದ ವತಿಯಿಂದ ದಾಸೋಹ ದಿನವನ್ನು ಇಡೀ ರಾಜ್ಯದಲ್ಲಿ ಆಚರಿಸಲಾಗುವುದು.ವಿಶೇಷವಾಗಿ ದೊಡ್ಡ ಪ್ರಮಾಣದಲ್ಲಿ ದಾಸೋಹ ಮಾಡುತ್ತಿರುವ ಮಠಮಾನ್ಯಗಳಲ್ಲಿ ಈ ದಿನವನ್ನು ಆಚರಣೆ ಮಾಡಬೇಕೆಂದು ತೀರ್ಮಾನಿಸಲಾಗುವುದಾಗಿ ಅವರು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…
ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ 2047ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವ ಅಜೆಂಡಾದೊಂದಿಗೆ ‘ಕಿಲ್ಲರ್ ಸ್ಕ್ವಾಡ್’ ಎಂಬ ರಹಸ್ಯ ಗುಂಪುಗಳನ್ನು ರಚಿಸಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಪತ್ತೆ ಮಾಡಿದೆ. ಕರ್ನಾಟಕದಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಚಾರ್ಜ್ ಶೀಟ್ ನಲ್ಲಿ ಈ ವಿಷಯ ಬಹಿರಂಗವಾಗಿದೆ. ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಅವರ ಹತ್ಯೆಯನ್ನು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರಲ್ಲಿ ಭಯವನ್ನು ಹರಡಲು ಮಾಡಲಾಗಿದೆ ಎಂದು ಎನ್ಐಎ ಚಾರ್ಜ್ ಶೀಟ್ ಹೇಳುತ್ತದೆ. ಸಮಾಜದಲ್ಲಿ ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸಲು ಮತ್ತು 2047 ರ ವೇಳೆಗೆ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸಲು ಪಿಎಫ್‌ಐ ತನ್ನ ಕಾರ್ಯಸೂಚಿಯ ಭಾಗವಾಗಿ ಹತ್ಯೆಗಳನ್ನು ನಡೆಸಲು ‘ಸೇವಾ ತಂಡಗಳು’ ಅಥವಾ ‘ಕಿಲ್ಲರ್ ಸ್ಕ್ವಾಡ್’ಗಳನ್ನು ರಚಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ‘ಶತ್ರುಗಳನ್ನು’ ಗುರುತಿಸಲು, ಟ್ರ್ಯಾಕ್ ಮಾಡಲು ಮತ್ತು ಕೊಲ್ಲಲು ಕಿಲ್ಲರ್…
ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ಸೋಮಜಾಳ (54) ಹೃದಯಾಘಾತದಿಂದ ನಿಧನರಾಗಿದ್ದು ಈ ಹಿನ್ನೆಲೆಯಲ್ಲಿ ಇಂದಿನ ಜೆಡಿಎಸ್ ಪಂಚರತ್ನಯಾತ್ರೆ ರದ್ದಾಗಿದೆ. ನಿನ್ನೆ ನಾಗಠಾಣ ಕ್ಷೇತ್ರದ ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಪಕ್ಷದ ಪಂಚರತ್ನ ಕಾರ್ಯಕ್ರಮದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರ ಜೊತೆ ಪಾಲ್ಗೊಂಡು ನಂತರ ಸಾಯಂಕಾಲ ಸಿಂದಗಿ ಪಟ್ಟಣಕ್ಕೆ ತೆರಳಿದ್ದರು. ರಾತ್ರಿ 9 ರ ವೇಳೆ ಅಸ್ವಸ್ಥಗೊಂಡ ಶಿವಾನಂದ ಪಾಟೀಲ್ ಸೋಮಜಾಳ ಅವರನ್ನ ಸಿಂದಗಿ ಪಟ್ಟಣದ ವಾತ್ಸಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ತೀವ್ರ ಹೃದಯಾಘಾತದಿಂದ ಶಿವಾನಂದ ಮೃತಪಟ್ಟಿದ್ದಾರೆ ಎಂದು ವೈದ್ಯರ ಹೇಳಿದ್ದಾರೆ. ಶಿವಾನಂದ ಅವರು ನಿಧನ ಹಿನ್ನೆಲೆ ಇಂದು ಮುದ್ದೇಬಿಹಾಳದಲ್ಲಿ ನಡೆಯಬೇಕಿದ್ದ ಜೆಡಿಎಸ್ ಪಂಚರತ್ನಯಾತ್ರೆಯನ್ನ ನಾಳೆಗೆ ಮುಂದೂಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ನಿರಂತರವಾಗಿ ರಾಜ್ಯಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದು ಇದೀಗ ಮತ್ತೆ ಫೆಬ್ರವರಿ 6 ರಂದು ಆಗಮಿಸಲಿದ್ದಾರೆ. ಕಳೆದ ಎರಡ್ಮೂರು ದಿನಗಳ ಹಿಂದಷ್ಟೆ ಕಲ್ಬುರ್ಗಿ ಯಾದಗಿರಿ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಫೆಬ್ರವರಿ 6 ರಂದು ತುಮಕೂರು ಧಾರವಾಡ ಜಿಲ್ಲೆಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಧಾರವಾಡ ಐಐಟಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ತುಮಕೂರಿನ ಗುಬ್ಬಿ ಬಳಿಯ ಹೆಚ್ ಎಎಲ್ ಹೆಲಿಕಾಪ್ಟರ್ ಘಟಕವನ್ನ ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಲಕ್ಷಾಂತರ ಜನರನ್ನ ಸೇರಿಸಲು ಬಿಜೆಪಿ ಪ್ಲಾನ್ ರೂಪಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸಲು ಚಿನ್ನದ ವ್ಯಾಪಾರಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ಚಿನ್ನದ ಪ್ರತಿಮೆಯನ್ನು ಮಾರಾಟ ಮಾಡಿದ್ದಾರೆ. ಸೂರತ್‌ನ ಉದ್ಯಮಿ ಬಸಂತ್ ಬೋರಾ ಅವರು 156 ಗ್ರಾಂ ತೂಕದ ಚಿನ್ನದ ಪ್ರತಿಮೆಯನ್ನು ರಚಿಸಿದ್ದಾರೆ. ಗುಜರಾತ್‌ನಲ್ಲಿ 156 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಸಂಕೇತವಾಗಿ 156 ಗ್ರಾಂ ತೂಕದ ಚಿನ್ನದ ಪ್ರತಿಮೆಯನ್ನು ಸ್ಥಾಪಿಸಲಾಯಿತು. 19.5 ಪವನ್ ಚಿನ್ನದ ವಿಗ್ರಹಕ್ಕೆ 8,11,200 ರೂ. ಕಾರ್ಮಿಕ ಶುಲ್ಕ ಸೇರಿ 11 ಲಕ್ಷ ರೂಪಾಯಿಗೆ ಚಿನ್ನದ ಮೂರ್ತಿಯನ್ನು ಮಾರಾಟಕ್ಕೆ ಇಡಲಾಗಿದೆ. ಮೂರು ತಿಂಗಳಲ್ಲಿ 15 ಅಕ್ಕಸಾಲಿಗರು ತಯಾರಿಸಿದ ನರೇಂದ್ರ ಮೋದಿ ಅವರ ಪ್ರತಿಮೆ ಡಿಸೆಂಬರ್‌ನಲ್ಲಿಯೇ ಪೂರ್ಣಗೊಂಡಿದೆ. ಆದರೆ ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾದ ಬಳಿಕ ಕೆಲ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿ ವಿಧಾನಸಭೆ ಸ್ಥಾನಗಳ ಸಂಖ್ಯೆಗೆ ವೇಟೇಜ್ ತಂದು ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…
ಬೆಳಗಾವಿ: ಮಹಾಯೋಗಿ ವೇಮನರು ಮಹಾಪುರುಷರು. ಅವರ ವಿಚಾರಧಾರೆಯನ್ನು ಅನುಸರಿಸುತ್ತಿರುವ ರೆಡ್ಡಿ ಸಮುದಾಯವು ಇಡೀ ಸಮಾಜದ ಒಳಿತಿನೊಂದಿಗೆ ತನ್ನ ಒಳಿತು ಕಂಡುಕೊಂಡಿದೆ” ಎಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನರ ಪಾಲಿಕೆಯ ವತಿಯಿಂದ ನಗರದ ರೆಡ್ಡಿ ಭವನದಲ್ಲಿ ಗುರುವಾರ (ಜ.19) ಏರ್ಪಡಿಸಲಾಗಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. “ರೆಡ್ಡಿ ಸಮುದಾಯವರು ಯಾರಿಗೂ ಕೆಟ್ಟದನ್ನು ಬಯಸಿದವರಲ್ಲ ಯಾರಿಗೂ ತೊಂದರೆಯನ್ನು ಕೊಟ್ಟವರಲ್ಲ. ತಮ್ಮ ಕೆಲಸದಿಂದ ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಲೇ ಬಂದಿದ್ದಾರೆ” ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಬಸವರಾಜ ಜಗಜಂಪಿ ಅವರು, ಮಹಾಯೋಗಿ ವೇಮನರು ಶ್ರೇಷ್ಠ ಜ್ಞಾನಿ, ಕವಿ, ಬ್ರಹ್ಮಜ್ಞಾನಿಯಾಗಿದ್ದರು. ಅನಿಷ್ಟ ಸಂಪ್ರದಾಯಗಳ ವಿರುದ್ಧ ಹೋರಾಡಿದಂತಹ ದಿಟ್ಟ ವ್ಯಕ್ತಿಯಾಗಿದ್ದ ಅವರು ತಮ್ಮ ವಿಚಾರ ಮತ್ತು ಚಿಂತನೆಗಳಿಂದ ಸದಾ ನಮ್ಮೊಂದಿಗೆ ಇದ್ದಾರೆ ಎಂದು ಹೇಳಿದರು. ಮಹಾಯೋಗಿ ವೇಮನರು ರಾಜಕುಮಾರನಾಗಿದ್ದರೂ ಕೂಡ ಸಮಾಜಕ್ಕಾಗಿ…
ಬೆಳಗಾವಿ : ವಿದ್ಯುತ್ ಮಗ್ಗ ಹಾಗೂ ಮಗ್ಗಪೂರ್ವ ಘಟಕಗಳ ನೇಕಾರರು ಹಾಗೂ ಕಾರ್ಮಿಕರಿಗೆ ತಲಾ ರೂ.5,000/- ಗಳ ವಾರ್ಷಿಕ ಆರ್ಥಿಕ ನೆರವು ನೀಡುವ ನೇಕಾರ ಸಮ್ಮಾನ(ವಿದ್ಯುತ್ ಮಗ್ಗ) ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ. ಸದರಿ ಯೋಜನೆಯಡಿ ನೆರವು ಪಡೆಯಲು ನೇಕಾರರ ಘಟಕಗಳು ವಿದ್ಯುತ್ ಮಗ್ಗ ಗಣತಿಯಲ್ಲಿ ನೋಂದಾಯಿಸಿಕೊಂಡಿರಬೇಕು. ಸದರಿ ಗಣತಿಯನ್ನು ಎ.ಐ.ಎಮ್.ಎಸ್ ಸಂಸ್ಥೆಯಿಂದ ಕೈಗೊಳ್ಳಲಾಗುತ್ತಿದ್ದು, ಗಣತಿಯಲ್ಲಿ ನೋಂದಾಯಿಸಲು ಬಿಟ್ಟು ಹೋದ ಘಟಕದವರು ಯಾವುದೇ ಮದ್ಯವರ್ತಿಗಳ ಆಸೆ-ಆಮಿಷಕ್ಕೆ ಒಳಗಾಗದೇ, ನೇರವಾಗಿ ಈ ಕಛೇರಿಯನ್ನು ಸಂಪರ್ಕಿಸಲು ತಿಳಿಸಲಾಗಿದೆ. ನೇಕಾರ ಸಮ್ಮಾನ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಯಾವುದೇ ಅರ್ಜಿ ಅಥವಾ ಆನ್‍ಲೈನ್ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಹಾಗೂ ಯಾವುದೇ ಶುಲ್ಕ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಕಛೇರಿ ದೂರವಾಣಿ ಸಂಖ್ಯೆ: 0831-2950674 ಗೆ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ಕಳೆದ ವಾರ ನಮಗೆಲ್ಲ ಸಂಕ್ರಾಂತಿ ಹಬ್ಬ. ನಾಳೆ ನಮಗೆಲ್ಲ ದಾಸೋಹ ಹಬ್ಬ. ನಾಳೆ ದಾಸೋಹ ದಿನ. ಲಿಂಗೈಕ್ಯ ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ನೆನಹಿನಲ್ಲಿ ಎಲ್ಲರೂ ದಾಸೋಹ ದಿನವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸುವಾ. ಅವತ್ತು 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರಿಂದ ಅರಿವು, ಆಚಾರ, ಅನುಭವಗಳ ತ್ರಿವಿಧ ದಾಸೋಹ. 21ನೇ ಶತಮಾನದಲ್ಲಿ ಲಿಂಗೈಕ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರಿಂದ ಸಹಸ್ರ ಸಹಸ್ರ ಮಕ್ಕಳಿಗೆ ಅನ್ನ, ವಸತಿ, ಶಿಕ್ಷಣಗಳ ತ್ರಿವಿಧ ದಾಸೋಹ. ಅವತ್ತು, ಆ ಶತಮಾನದಲ್ಲಿ ಅಣ್ಣ ಬಸವಣ್ಣನವರದು ಅಹೋಸಾಧನೆ. ಈ ಶತಮಾನದಲ್ಲಿ ಪರಮಪೂಜ್ಯ ಡಾ. ಶಿವಕುಮಾರ ಮಹಾಸ್ವಾಮಿಗಳವರದು ಮಹಾಸಾಧನೆ, ಮಹತ್ ಸಾಧನೆ. ಅಣ್ಣ ಬಸವಣ್ಣ ಭಕ್ತಿಭಂಡಾರಿ. ನಮ್ಮ ಶಿವಕುಮಾರ ಮಹಾಸ್ವಾಮಿಗಳು ದಾಸೋಹಭಂಡಾರ. ಅವರು ದಾಸೋಹವೂ ಅಹುದು; ಅವರು ಭಂಡಾರವೂ ಅಹುದು. ಉತ್ತರ ಭಾರತದಲ್ಲಿ “ಭಂಡಾರ, ಭಂಡಾರಾ” ಎಂದರೆ “ಸಾಧುಭೋಜ, ಸಾಧುಭೋಜನ” ಎಂದರ್ಥ. ಸಾಧು, ಸತ್ಪುರುಷ, ಸಂತರಿಗೆ ಸೇವಾರ್ಥ ನೀಡುವ ಭೋಜನಕ್ಕೆ “ಭಂಡಾರಾ” ಎಂದು ಕರೆಯುತ್ತಾರೆ. ಸಿದ್ಧಗಂಗಾ ಮಠದಲ್ಲಿ ಬರೀ…
ಬೆಳಗಾವಿ : ಇಲ್ಲಿನ ವಿದ್ಯಾಗಿರಿಯ ಅಜಮ್ ನಗರದ ಶ್ರವಣ ದೋಷವುಳ್ಳ ಮಕ್ಕಳ ಸರಕಾರಿ ಶಾಲೆಗೆ ಮೂವರು ಅರೆಕಾಲಿಕ ಪದವಿಪೂರ್ವ ಸಹಾಯಕ ಶಿಕ್ಷಕರ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಶ್ರವಣ ದೋಷವುಳ್ಳ ಮಕ್ಕಳಿಗೆ ಪಾಠ ಮಾಡಲು ವಿಶೇಷ ಶಿಕ್ಷಣ ತರಬೇತಿ ಹೊಂದಿದವರಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬೋಧನೆ ಮಾಡಲು ಮಾಸಿಕ ಗೌರವಧನ ಗರಿಷ್ಠ 5,000 ರೂಪಾಯಿ ನೀಡಲಾಗುವುದು. ಆಸಕ್ತರು ಜನವರಿ 25, 2023 ರ ಒಳಗಾಗಿ “ಅಧೀಕ್ಷಕರು, ಕಿವುಡು ಮಕ್ಕಳ ಸರ್ಕಾರಿ ಶಾಲೆ ಅಜಮ ನಗರ ವಿದ್ಯಾಗಿರಿ ಬೆಳಗಾವಿ- 590010” ಇವರಿಗೆ ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 0831-2472250 ಅಥವಾ 7676650942 ಗೆ ಸಂಪರ್ಕಿಸಬಹುದು ಎಂದು ಕಿವುಡು ಮಕ್ಕಳ ಸರ್ಕಾರಿ ಶಾಲೆಯ ಪ್ರಭಾರಿ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ಬೆಳಗಾವಿ : 75ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ ಕುಶಲಕರ್ಮಿಗಳಿಗಾಗಿ ಸಾಲ ಸಹಾಯಧನ (ಸಬ್ಸಿಡಿ) ಯೋಜನೆಯಲ್ಲಿ ಸೌಲಭ್ಯ ಪಡೆಯಲು ಬೆಳಗಾವಿ ಜಿಲ್ಲೆಯ ವಿವಿಧ ವರ್ಗಗಳ ಕುಶಲಕರ್ಮಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ವಾಣಿಜ್ಯ ಬ್ಯಾಂಕ್ ಸಹಕಾರ ಬ್ಯಾಂಕ್ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಪತ್ತಿನ ಸಹಕಾರ ಸಂಘಗಳನ್ನು ಹೊರತುಪಡಿಸಿ) ಗಳಿಂದ ಮಂಜೂರಾದ ರೂ 50 ಸಾವಿರವರೆಗೆ ಸಾಲದ ಮೇಲೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಶೇ 30% ರಷ್ಟು ಗರಿಷ್ಟ 15 ಸಾವಿರದ ವರೆಗೆ ಸಹಾಯಧನ ನೀಡಲಾಗುವುದು. ಕುಶಲಕರ್ಮಿಗಳು ಕನಿಷ್ಠ 18 ವರ್ಷ ತುಂಬಿರಬೇಕು. ಕುಶಲವೃತ್ತಿಗಾಗಿ ಬ್ಯಾಂಕಿನಿಂದ ಪಡೆದ ಸಾಲಕ್ಕೆ ಒಬ್ಬರಿಗೆ ಒಂದು ಬಾರಿ ಮಾತ್ರ ಸಹಾಯಧನ ನೀಡಲಾಗುವುದು. ಕುಶಲಕರ್ಮಿಗಳು ರಾಜ್ಯ ಕುಶಲಕರ್ಮಿ ಅಭಿವೃದ್ಧಿ ನಿಗಮ/ ಅಭಿವೃದ್ಧಿ ಆಯುಕ್ತರು (ಕರಕುಶಲ) ಕಚೇರಿಯಲ್ಲಿ ನೋಂದಣಿ ಆಗಿರಬೇಕು. ಅಥವಾ ಕೈಗಾರಿಕಾ ವಿಸ್ತರಣಾಧಿಕಾರಿಗಳು, ಜಿಲ್ಲಾ ಕೈಗಾರಿಕಾ ಕೇಂದ್ರ ಅಥವಾ ಸಂಬಂಧಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರ ( ಪಿಡಿಓ ) ರವರಿಂದ ಕರಕುಶಲರೆಂದು ದೃಡೀಕರಣ…